Author: Srinivas_Murthy

ಶ್ರೀನಿವಾಸಪುರ:ಇದ್ದಕಿದ್ದಂತೆ ತಾಲೂಕು ಆಡಳಿತ ನಿದ್ದೆಯಿಂದ ಎಚ್ಚೆತ್ತುಕೊಂಡ ಹಿನ್ನಲೆಯಲ್ಲಿ ಪೊಲೀಸರು ಫುಲ್ ಅಲರ್ಟ್ ಆಗಿ ಎಂ.ಜಿ.ರಸ್ತೆಯಲ್ಲಿ ಫುಟ್ ಬಾತ್ ಮೇಲೆ ಅಕ್ರಮವಾಗಿ ನಡೆಸುತ್ತಿದ್ದ ಅವರೆಕಾಯಿ ಮಂಡಿಗಳನ್ನು ತೆರವುಗೊಳಿಸಿದ್ದೆ ಅಲ್ಲದೆ ಬಾಲಕೀಯರ ಕಾಲೇಜು ಆವರಣದಲ್ಲಿ ಅಕ್ರಮವಾಗಿ ನಿಲ್ಲಿಸಿದ್ದ ಖಾಸಗಿ ವಾಹನಗಳಿಗೆ ದಂಡ ವಿಧಿಸಿದ ಘಟನೆ ನಡೆಯಿತು.ಗುರುವಾರ ರೈತ ಸಂಘಟನೆ ವತಿಯಿಂದ ನಡೆದ ಪ್ರತಿಭಟನೆ ನಂತರ ಎಚ್ಛೆತ್ತ ತಾಲೂಕು ಆಡಳಿತ ಪುರಸಭೆ ಅಧಿಕಾರಿಗಳಿಗೆ ಎಂ ಜಿ ರಸ್ತೆಯಲ್ಲಿ ನಡೆಯುತ್ತಿರುವ ಅವರೇಕಾಯಿ ವ್ಯಾಪಾರ ತೆರವುಗೊಳಿಸುವಂತೆ ಸೂಚಿಸಿದ ಪರಿಣಾಮ ಪೋಲಿಸರ ಸಹಕಾರದೊಂದಿಂಗೆ ಫೀಲ್ಡಿಗಿಳಿದ ಪುರಸಭೆ ಸಿಬ್ಬಂದಿ ಅವರೇಕಾಯಿ ಮಂಡಿ ವ್ಯಾಪಾರಸ್ಥರಿಗೆ ತೆರವು ಗೋಳಿಸುವಂತೆ ಬಿಸಿ ಮುಟ್ಟಿಸಿದರು.ಶ್ರೀನಿವಾಸಪುರದಲ್ಲಿ ವಿಶಾಲವಾದ APMC ಮಾರುಕಟ್ಟೆ ಇದ್ದರೂ ಅವರೇಕಾಯಿ ಮಂಡಿ ವ್ಯಾಪಾರಸ್ಥರು ಧಿಮಾಕಿನಿಂದ ಎಂ.ಜಿ.ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಉಂಟುಮಾಡುತ್ತ ಅಕ್ರಮವಾಗಿ ವ್ಯಾಪಾರ ನಡೆಸುತ್ತಿದ್ದಾರೆ ಎಂದು ರೈತ ಸಂಘದ ಬಂಗವಾದಿನಾಗರಾಜಗೌಡ ಆರೋಪಿಸಿ ಪ್ರತಿಭಟನೆ ನಡೆಸಿದ್ದರಿಂದ, ಇಂದು ಪೋಲಿಸರು ಮತ್ತು ಪುರಸಭೆ ಸಿಬ್ಬಂದಿ ಅವರೇಕಾಯಿ ವ್ಯಾಪಾರ ತೆರವುಗೊಳಿಸಲು ಅವರೆಕಾಯಿ ಮೂಟೆಗಳನ್ನು ಪುರಸಭೆ ಟ್ರಾಕ್ಟರ್ ಗೆ ತುಂಬಿಸಲು ಮುಂದಾದಾಗ…

Read More

ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ 17 ಚುನಾವಣೆಗಳಲ್ಲಿ 15 ಬಾರಿ ಕಾಂಗ್ರೆಸ್ ಗೆಲವು ಸ್ವಪಕ್ಷೀಯರ ವಿರೋಧ 2 ಬಾರಿ ಕಾಂಗ್ರೆಸ್ ಸೋಲು ಎರಡು ಬಾರಿ ಜನತಾ ಪರಿವಾದ ಅಭ್ಯರ್ಥಿಗಳ ಗೆಲವು ನ್ಯೂಜ್ ಡೆಸ್ಕ್:ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದೆ, ಚುನಾವಣೆಯ ಅಧಿಸೂಚನೆ ಮಾರ್ಚ್ ಮೊದಲ ವಾರದಲ್ಲಿ ಪ್ರಕಟವಾಗುವ ಸಾಧ್ಯತೆಯಿದ್ದು, ಜಿಲ್ಲಾಡಳಿತ ಈ ಸಂಬಂಧ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಇತ್ತ ರಾಜಕೀಯ ಪಕ್ಷಗಳಲ್ಲಿ ರಾಜಕೀಯ ಚೆಕ್ಕಾಚಾರಗಳು ಶುರುವಾಗಿದ್ದು ನಿಧಾನವಾಗಿ ಚುನಾವಣೆ ಕಾವು ಏರುತ್ತಿದೆ ಜೆಡಿಎಸ್,ನೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಸೀಟು ಹಂಚಿಕೆ ವಿಚಾರದಲ್ಲಿ ಸಂಕ್ರಾಂತಿ ನಂತರ ಎನ್ನಲಾಗುತ್ತಿದೆ,ಇನ್ನು ಇಂಡಿಯಾ ಮೈತ್ರಿ ಕೂಟದ ಅಂಗ ಪಕ್ಷವಾಗಿರುವ ಕಾಂಗ್ರೆಸ್‌ಗೆ, ಕರ್ನಾಟಕದ ಮಟ್ಟಿಗೆ ಸೀಟು ಹಂಚಿಕೆ ತಲೆ ಬಿಸಿ ಇಲ್ಲ ಎನ್ನಬಹುದು. ಕರ್ನಾಟಕದಲ್ಲಿ ಇಂಡಿಯಾ ಮೈತ್ರಿ ಕೂಟದ ಕಾಂಗ್ರೆಸ್ ಬಿಟ್ಟರೆ ಯಾವುದೆ ಇತರೆ ಪಕ್ಷಗಳು ಪ್ರಬಲವಾಗಿಲ್ಲ. ಹಾಗಾಗಿ, ಕೋಲಾರ ಮೀಸಲು ಲೋಕಸಭಾ ಕ್ಷೇತ್ರ ಸೇರಿದಂತೆ ಕರ್ನಾಟಕದಾದ್ಯಂತ ಎಲ್ಲಾ 28 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧೆಮಾಡುವುದು ಖಚಿತ ಎನ್ನುವ ಮಾತಿದೆ. ಕಾಂಗ್ರೆಸ್…

Read More

ಶ್ರೀನಿವಾಸಪುರ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗೆ(ನರೇಗಾ) 2024 ನೇ ಸಾಲಿನ ಕ್ರಿಯಾ ಯೋಜನೆಯ ರೂಪಿಸುವ ಸಂಭಂದ ಕರೆಯಲಾಗಿದ್ದ ಗ್ರಾಮ ಸಭೆ ರಾಜಕೀಯ ಪ್ರತಿಷ್ಠೆಗೆ ಬಲಿಯಾಗಿದೆ.ಸಭೆಯಲ್ಲಿ ಚುನಾಯಿತ ಸದಸ್ಯರು ತೋಳೇರಿಸಿ ವಾಗ್ವಾದ ನಡೆಸಿ ತಳ್ಳಾಟ ಕೂಗಾಟ ನಡೆಸಿದ ಪರಿಣಾಮ ಗ್ರಾಮ ಸಭೆ ಮಹತ್ವ ಕಳೆದುಹೊಯಿತು.ಶ್ರೀನಿವಾಸಪುರ ತಾಲೂಕಿನ ಚಲ್ದಿಗಾನಹಳ್ಳಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ಗ್ರಾಮಸಭೆಯಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಿಂದ ಆಗಮಿಸಿದ್ದಂತಹ ಸಾರ್ವಜನಿಕರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ನಡುವಿನ ಕಿತ್ತಾಟ ಏರು ಮಾತುಗಳು ಅಕ್ಷರಶಃ ತರಕಾರಿ ಮಾರುಕಟ್ಟೆಯಂತಾಯಿತು,ಪರಸ್ಪರ ಆರೋಪ ಪ್ರತ್ಯಾರೋಗಳಿಗೆ ಸೀಮಿತವಾದ ಅಲ್ಲಿದ್ದವರು ಪರಸ್ಪರ ತೋಳೇರಿಸಿಕೊಳ್ಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು ಅಭಿವೃದ್ಧಿ ಮರೆತ ಜನಪ್ರತಿನಿಧಿಗಳು ವೈಯುಕ್ತಿಕ ಜಿದ್ಧಿಗೆ ಬಿದ್ದವರಂತೆ ಮಾತಿನ ಚಕಮಕಿ ನಡೆಸುತ್ತ ಹೈ ಒಲ್ಟೇಜ್ ಮಾತುಗಳನ್ನಾಡುತ್ತ, ಸಿನಿಮಾ ಶೈಲಿಯಲ್ಲಿ ಕೈ ಸನ್ನೆಗಳ ಮೂಲಕ ಎಚ್ಚರಿಕೆ ನೀಡುತ್ತ ಹಿಂದೆ ಅಧಿಕಾರವಧಿಯಲ್ಲಿ ನದೆದಿದೆ ಎನ್ನಲಾದ ಅಕ್ರಮಗಳ ಪಟ್ಟಿಮಾಡುತ್ತ ಜೆಡಿಎಸ್ ಸದಸ್ಯರಾದ ಗಿರಿಯಪ್ಪ ಮತ್ತು ವೆಂಕಟ್ರಾಮರೆಡ್ಡಿ ಅಧ್ಯಕ್ಷ…

Read More

ನ್ಯೂಜ್ ಡೆಸ್ಕ್:ಅಯೋಧ್ಯೆಯ ರಾಮಮಂದಿರ ಲೋಕಾರ್ಪಣೆಗೆ ದಿನಗಣನೆ ಪ್ರಾರಂಭವಾಗಿದ್ದು ದೇಶಾದ್ಯಂತ ಜನತೆ ರಾಮ ನಾಮ ಜಪ ಮಾಡುತ್ತಿದ್ದಾರೆ ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ರಾಮಲಲ್ಲಾ ಅಂದ್ರೆ ಬಾಲರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಗೆ ಭರದ ಸಿದ್ಧತೆಗಳು ಶರವೇಗದಲ್ಲಿ ಸಾಗುತ್ತಿದೆ,ಶತ-ಶತ ವರ್ಷಗಳ ನಂತರ ಬಾಲ ರಾಮ ಮತ್ತೊಮ್ಮೆ ಅಯೋಧ್ಯೆಯಲ್ಲಿ ಪಟ್ಟಾಭಿಷಿಕ್ತನಾಗುವ ಸಮಯ ಹತ್ತಿರ ಬಂದಿದೆ.ಜನವರಿ 22 ರಂದು ರಾಮಮಂದಿರದ ಪ್ರಾಣ ಪ್ರತಿಷ್ಠೆ ನೆರವೇರಲಿದೆ.ಬಾಲರಾಮನ ಕೆತ್ತನೆಗೆ ಬಳಸಿದ ಕಲ್ಲನ್ನು ಮೈಸೂರು ಸಮೀಪದಲ್ಲಿ ಸಿಕ್ಕಿದ ಕೃಷ್ಣ ಶಿಲೆ ಎಂಬುದಾದರೆ ಅದು ಬಾಲ ಶ್ರೀರಾಮನಮೂರ್ತಿ ಕೆತ್ತನೆಗೆ ಬಳಸಲು ಅರ್ಹವಾಗಿದೆ ಎಂದು ಕೋಲಾರದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಕ್ಸ್(NIRM) ಸಂಸ್ಥೆಯ ತಜ್ಞರು ದೃಡಿಕರಿಸಿದ್ದಾರಂತೆ.ಈ ಸಂಸ್ಥೆಯ ನೊಂದಾಯಿತ ಕಚೇರಿ ಹಾಗು ಪರಿಕ್ಷಾ ಕೇಂದ್ರ ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಚಾಂಪಿಯನ್ ರಿಫ್ ನ ದೊಡ್ಡವಲಗಮಾಧಿ ಪ್ರದೇಶದಲ್ಲಿದೆ.ಇದು ಭಾರತ ಸರ್ಕಾರದ ಗಣಿ ಸಚಿವಾಲಯದ ಅಡಿಯಲ್ಲಿ ಇರುವ ಸ್ವಾಯತ್ತ ಸಂಶೋಧನಾ ಸಂಸ್ಥೆಯಾಗಿದೆ.ಕರ್ನಾಟಕದ ಕಲ್ಲುಗಳನ್ನು ಬಳಸಿ ಮೈಸೂರಿನ ಶಿಲ್ಪಿ ಅರುಣ್ ವಿಗ್ರಹ ಕೆತ್ತನೆ ಮಾಡಿದ್ದಾರೆ ಅನ್ನುವುದು ಇನ್ನೂಂದು…

Read More

ಶ್ರೀನಿವಾಸಪುರ:ಶ್ರೀನಿವಾಸಪುರ ತಾಲ್ಲೂಕಿನ ಅದಿಜಾಂಭವ ಚಾರಿಟಬಲ್ ಟ್ರಸ್ಟ್ (ರಿ) ಹಾಗೂ ಅದಿಜಾಂಭವ ಸೇವಾ ಸಮಿತಿಯ ನೂತನ ಪದಾಧಿಕಾರಿಗಳು ಅವಿರೋಧವಾಗಿ ಅಯ್ಕೆಯಾಗಿರುತ್ತಾರೆ.ಈ ಹಿಂದೆ ಟ್ರಸ್ಟ್ ಅಧ್ಯಕ್ಷರಾಗಿದ್ದ ಎನ್.ಶ್ರೀನಿವಾಸಪ್ಪ ತಮ್ಮ ವೈಯುಕ್ತಿ ಕಾರಣಕ್ಕೆ ರಾಜಿನಾಮೆ ನೀಡಿದ್ದ ಹಿನ್ನಲೆಯಲ್ಲಿ ನೂತನ ಅಧ್ಯಕ್ಷರನ್ನಾಗಿ ಪುರಸಭೆ ಮಾಜಿ ಅಧ್ಯಕ್ಷ ಸಿ.ಮುನಿಯಪ್ಪ ಅವರನ್ನು ಮತ್ತು ಪ್ರದಾನ ಕಾರ್ಯದರ್ಶಿಯಾಗಿ ನಾಗದೇನಹಳ್ಳಿ ವೆಂಕಟರವಣಪ್ಪ ಅವರುಗಳು ಅಯ್ಕೆಯಾಗಿರುತ್ತಾರೆ. ನೂತನ ಅಧ್ಯಕ್ಷರ ಅಪೇಕ್ಷೆಯಂತೆ ಇತರೆ ಪದಾಧಿಕಾರಿಗಳಾಗಿ ಈ ಕೆಳಕಂಡವರನ್ನು ಆಯ್ಕೆಮಾಡಲಾಗಿದೆ.ಗೌವಾದ್ಯಕ್ಷರಾಗಿ ದಿಂಬಾಲದ ನಿವೃತ್ತ ಮುಖ್ಯಶಿಕ್ಷಕ ರಾಮಪ್ಪ,ಕಾರ್ಯಾದ್ಯಕ್ಷರಾಗಿ ಹೂವಳ್ಳಿ ಕೃಷ್ಣಪ್ಪ,ಖಜಾಂಚಿಯಾಗಿ ವೆಂಕಟೇಶ್ ಸಲಹಾ ಸಮಿತಿಯ ಸದಸ್ಯರಾಗಿ ದೊಡಮಲದೊಡ್ಡಿ ಶ್ರೀನಿವಾಸಪ್ಪ ಉಪಾಧ್ಯಕ್ಷರಾಗಿ ಮರಸನಪಲ್ಲಿ ಕೆ.ವೆಂಕಟರವಣಪ್ಪ ಕೊತ್ತಪೇಟ ಕೆ.ಅರ್.ನರಸಿಂಹಯ್ಯ,ಮಂಚಿನೀಳ್ಳುಕೋಟೆ ಶಿವಣ್ಣ ಅಲವಾಟ ಲಕ್ಷ್ಮಣ,ಚಲ್ದಿಗಾನಹಳ್ಳಿ ಸೀತಪ್ಪ,ಕಾರ್ಯದರ್ಶಿಗಳಾಗಿ ಲಕ್ಷ್ಕೀಪುರ ಕೃಷ್ಣಪ್ಪ,ಚಾಂಪಲ್ಲಿ ಪಾಪನ್ನ ಮೊಗಿಲಹಳ್ಳಿ. ಶಿವಪ್ಪ ಗೌನಿಪಲ್ಲಿ ಮಾಜಿ ಗ್ರಾಮ ಪಂಚಾಯತಿ ಸದಸ್ಯ ರಮೇಶ,ಅಡವಿಚಂಬಕೂರು ಗಂಗುಲಪ್ಪ,ಕಂಬಾಲಪಲ್ಲಿ ನರಸಿಂಹಪ್ಪ,ಜಂಟಿ ಕಾರ್ಯದರ್ಶಿಯಾಗಿ ಎನ್.ಮಂಜುನಾಥ್ ಸಹಕಾರ್ಯದರ್ಶಿಯಾಗಿ ನಾರಾಯಣಪುರ ವೆಂಕಟೇಶ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಬಿ.ವಿ.ರೆಡ್ಡಪ್ಪ,ಟಿ.ನಾರಾಯಣಸ್ವಾಮಿ ಇಲದೋಣಿ ಕದಿರೆಪ್ಪ ಜೊನ್ನಪಲ್ಲಿ ಸತ್ಯನಾರಾಯಣ,ನಟರಾಜ,ಅರಮಾಕಲಹಳ್ಳಿ ನವೀನ್, ಎಂ.ಸಿ.ನಾರಾಯಣಸ್ವಾಮಿ,ನಂಬಿಹಳ್ಳಿ ನರಸಿಂಹಪ್ಪ( ಸಂತೆ ಮೈದಾನ) ರವರುಗಳನ್ನು ಅಯ್ಕೆ…

Read More

ನ್ಯೂಜ್ ಡೆಸ್ಕ್: ಇಡಿ ವಿಶ್ವ ಅಯೋಧ್ಯೆ ರಾಮಂದಿರ ಉದ್ಘಾಟನೆಗೆ ಎದರು ನೊಡುತ್ತಿದೆ ಅದಕ್ಕೂ ಮುಂಚಿತವಾಗಿ ಅಯೋಧ್ಯೆಯಲ್ಲಿ ಮೂಲ ಭೂತ ಸೌಕರ್ಯಗಳ ಅಭಿವೃದ್ಧಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್‌ 30 ರಂದು ಶನಿವಾರ ಅಯೋಧ್ಯೆಗೆ ಭೇಟಿ ನೀಡಿ ಅಯೋಧ್ಯೆ ನಗರದ ವಾಲ್ಮೀಕಿ ಮಹರ್ಷಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ, ವಂದೇ ಭಾರತ್ ಹಾಗು ಅಮೃತ ಭಾರತ ರೈಲುಗಳಿಗೆ ಚಾಲನೆ ನೀಡಿದ್ದಾರೆ ರಸ್ತೆಗಳ ಅಗಲೀಕರಣ,ಸೇರಿದಂತೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಮೋದಿ ಉದ್ಘಾಟಿದ್ದಾರೆ ಇದರ ಮಧ್ಯೆ ನರೇಂದ್ರ ಮೋದಿ ಅವರು ಮೀರಾ ಮಾಂಝಿ ಎಂಬ ಸಾಮನ್ಯ ಮಹಿಳೆಯೊಬ್ಬರ ಮನೆಗೆ ದಿಢೀರ್‌ ಭೇಟಿ ನೀಡಿ ಅವರ ಮನೆಯ ಸದಸ್ಯರೊಂದಿಗೆ ಚಹಾ ಕೂಡ ಸವಿದಿರುತ್ತಾರೆ.ಯಾರು ಮೀರಾ ಮಾಂಝಿ?ಮೀರಾ ಮಾಂಝಿ ಅಯೋಧ್ಯೆ ನಗರದ ಸಾಮನ್ಯ ಕುಟುಂಬದ ಗೃಹಿಣಿ ಅಕೆ ಅಯೋಧ್ಯೆಯಲ್ಲಿ ಪತಿ, ಅತ್ತೆ-ಮಾವ ಹಾಗೂ ಮಕ್ಕಳ ಜತೆ ವಾಸಿಸುತ್ತಿದ್ದಾರೆ. ಇವರು ಬಡತನ ರೇಖೆಗಿಂತ ಕೆಳಗಿರುವವರಿಗೆ BPL ಕಾರ್ಡು ನವರಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಉಜ್ವಲ ಯೋಜನೆಯ…

Read More

ಶ್ರೀನಿವಾಸಪುರ:ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆಯನ್ನು ಶ್ರೀನಿವಾಸಪುರ ತಾಲೂಕಿನ ಗ್ರಾಮಗ್ರಾಮಗಳಲ್ಲಿ ಕುಂಭ ಕಳಸದೊಂದಿಗೆ ಭಕ್ತಿಯಿಂದ ಸ್ವಾಗತಿಸಿ ಅದ್ದೂರಿಯಾಗಿ ಬರ ಮಾಡಿಕೊಳ್ಳಲಾಯಿತು.ಶ್ರೀನಿವಾಸಪುರದ ಶ್ರೀವರದ ಬಾಲಾಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ ತಗೆದುಕೊಂಡು ಹೋಗಿದ್ದ ಅಯೋಧ್ಯ ಶ್ರೀ ರಾಮ ಜನ್ಮಭೂಮಿಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆಯನ್ನು ರಾಯಲ್ಪಾಡು ಹೋಬಳಿ ಕೇಂದ್ರದಲ್ಲಿ ಪೂಜೆ ಸಲ್ಲಿಸಿ ನಂತರ ಹೋಬಳಿ ವ್ಯಾಪ್ತಿಯ ಗ್ರಾಮಗಳಿಗೆ ತಗೆದುಕೊಂಡು ಹೋಗಿದ್ದರು.ಜನವರಿ 22 ರಂದು ಅಯೋಧ್ಯೆಯಲ್ಲಿ ಮಂದಿರದ ಉದ್ಘಾಟನೆಯಾಗಲಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಪ್ರತಿ ಗ್ರಾಮಕ್ಕೂ ಅಯೋಧ್ಯೆಯ ಮಂತ್ರಾಕ್ಷತೆಯನ್ನು ತಲುಪಿಸಿ ಪ್ರತಿಯೊಬ್ಬ ಹಿಂದೂವು ಅಯೋಧ್ಯ ರಾಮಮಂದಿರದ ಉದ್ಘಾಟನೆಯ ಸಂಕಲ್ಪದ ಶಕ್ತಿಗಾಗಿ ಹಮ್ಮಿಕೊಂಡಿದ್ದು ತಾಲ್ಲೂಕಿನ ಪ್ರತಿ ಪಂಚಾಯ್ತಿ ವ್ಯಾಪ್ತಿಗಳಲ್ಲಿ ಬರುವ ಪ್ರತಿ ಗ್ರಾಮದ ಮನೆಗಳಿಗೂ ಮಂತ್ರಾಕ್ಷತೆಯನ್ನು ತಲುಪಿಸುಲಾಗುತ್ತದೆ ಎಂದು ರಾಷ್ಟ್ರೀಯ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬೌದ್ಧಿಕ ಪ್ರಮುಖ ರಾಮಾಂಜನೇಯ ತಿಳಿಸಿದರು.ಶ್ರೀ ರಾಮ ಜನ್ಮಭೂಮಿ ಅಯೋಧ್ಯೆಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆಯನ್ನು ರಾಯಲ್ಪಾಡು ಹೋಬಳಿಯ ಆಂಧ್ರದ ಗಡಿಯಂಚಿನ ಗ್ರಾಮಗಳಾದ ಮುದಿಮಡಗು,ಕೂರಿಗೇಪಲ್ಲಿ,ಯರ್ರಂವಾರಿಪಲ್ಲಿ,ಅಡ್ಡಗಲ್,ಭೈರಗಾನಪಲ್ಲಿ,ಕೋಡಿಪಲ್ಲಿ ಮರಸನಪಲ್ಲಿ ಸೇರಿದಂತೆ ಪ್ರಮುಖ ಪಂಚಾಯಿತಿ ಕೇಂದ್ರವಾದ ಗೌವನಪಲ್ಲಿಯಲ್ಲಿ…

Read More

ಸಿನಿಮಾ ಡೆಸ್ಕ್:ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಬಿಡುಗಡೆ ಆಗಿದೆ. ಅಭಿಮಾನಿಗಳು ಈ ಚಿತ್ರವನ್ನ ಗ್ರ್ಯಾಂಡ್ ಆಗಿ ಬರಮಾಡಿಕೊಂಡಿದ್ದಾರೆ. ‘ರಾಬರ್ಟ್​’ ಬಳಿಕ ನಿರ್ದೇಶಕ ತರುಣ್ ಸುಧೀರ್ ಮತ್ತು ದರ್ಶನ್ ಕಾಂಬಿನೇಷನ್‌ನಲ್ಲಿ ಮೂಡಿಬಂದ ಸಿನಿಮಾ ಎಂಬ ಕಾರಣಕ್ಕೆ “ಡಿ”ಫ್ಯಾನ್ಸ್ ಅತಿ ಹೆಚ್ಚು ನಿರೀಕ್ಷೆ ಇಟ್ಟು ಕೊಂಡಿದ್ದರು ಅದನ್ನು ಹುಸಿಗೊಳಿಸದೆ ಕಾಟೇರಾ ಸಿನಿಮಾ ಮೂಡಿ ಬಂದಿದ್ದು ದರ್ಶನ್ ಚಿತ್ರಪ್ರಯಣದಲ್ಲಿ ಮೈಲಿಗಲ್ಲು ಆಗುವಂತ ಸಿನಿಮಾ ಆಗಿದಲ್ಲದೆ, ಇದೊಂದು ರೈತ ಕ್ರಾಂತಿಯ ಕಹಳೆ ಆಗಿದ್ದು, ಸಾಮಾಜಿಕ ಸಮಸ್ಯೆ ಜಾತಿ ಪೀಡಗಿನ ಮೆಲೆ ಬೆಳಕು ಚಲ್ಲುವಂತ ಸಿನಿಮಾ ಅನ್ನಬಹುದಾಗಿದೆ.ಮನರಂಜನೆಯೇ ಸಿನಿಮಾದ ಮೂಲ ಉದ್ದೇಶವಾದರು ಕುಲುಮೆಯಲ್ಲಿ ಕೆಲಸ ಮಾಡುವ ಯುವಕನ ಪಾತ್ರದಲ್ಲಿ ಮಾಸ್ ಇಂಟ್ರಡಕ್ಷನ್ ನೀಡಿರುವ ದರ್ಶನ್,ಉಳ್ಳವರು ಮತ್ತು ಇಲ್ಲದವರ ನಡುವಿನ ಸಂಘರ್ಷವನ್ನು ಕಾಟೇರ ಕಥಾ ರೂಪಕೊಟ್ಟಿದ್ದು ಈ ಮೂಲಕ ಸಂದೇಶವನ್ನು ಚಿತ್ರ ನೀಡುತ್ತದೆ.ಕಾಟೇರದ ಹೀರೋ ರೈತರಿಗಾಗಿ, ಪ್ರೀತಿಸಿದವಳಿಗಾಗಿ, ಕುಟುಂಬದವರಿಗಾಗಿ, ಊರಿನ ಜನರಿಗಾಗಿ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟಕ್ಕೆ ನಿಂತ ವೀರನ ಕಥೆಯನ್ನು ಜಡೇಶ್ ಬರೆದಿದ್ದು ಅದಕ್ಕೆ ಮೂರು ಗಂಟೆ…

Read More

ಚಿಂತಾಮಣಿ:ಲಜ್ಜೆಗೆಟ್ಟ ಟೀಚರಮ್ಮನ ಅಸಹ್ಯಕರ ಫೋಟೋ ಸೇಷನ್ ಗೆ ಶೈಕ್ಷಣಿಕ ವ್ಯವಸ್ಥೆಯ ಗುರು-ಶಿಷ್ಯರ ನಡುವಿನ ಗೌರಹ್ವಾನಿತ ಬಾಂಧವ್ಯಕ್ಕೆ ಕಳಂಕ ತಂದಿದ್ದರೆ,ಬಾಲಕನೊರ್ವನ ಭವಿಷ್ಯತ್ತಿಗೆ ಮಾರಕವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.ಇಂತಹ ಘಟನೆಗೆ ಕಾರಣವಾಗಿರುವುದು ಚಿಂತಾಮಣಿ ತಾಲೂಕಿನ ಮುರುಗಮಲೆ ಸರ್ಕಾರಿ ಶಾಲೆಯ ಪ್ರಭಾರೆ ಮುಖ್ಯ ಶಿಕ್ಷಕಿಯ ಲಜ್ಜಗೆಟ್ಟ ವರ್ತನೆ. ಶಾಲಾ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಪ್ರವಾಸಕ್ಕೆ ಕರೆದೊಯಿಲಾಗಿತ್ತು ಈ ಸಮಯದಲ್ಲಿ ಶಾಲೆಯ ಪ್ರಭಾರೆ ಮುಖ್ಯ ಶಿಕ್ಷಕಿ ಲಜ್ಜೆಗೆಟ್ಟ ಟೀಚರಮ್ಮ ಪುಷ್ಪಲತ ಫೋಟೋ ತೆವಲಿಗೆ ಶಾಲೆಯ ಹತ್ತನೆ ತರಗತಿ ವಿದ್ಯಾರ್ಥಿ ಅಪ್ರಾಪ್ತ ಬಾಲಕನೊಂದಿಗೆ ಹಚ್ಚ ಹಸಿರಿನ ಗಿಡ ಮರಗಳ ನಡುವೆ ಸಿನಿಮಾ ಹಿರೋ-ಹಿರೋಯಿನ್ ಸ್ಟೈಲ್ ನಲ್ಲಿ ಅಸಭ್ಯಕರವಾದ ಭಂಗಿಗಳಲ್ಲಿ ನಿಂತು ಪೋಟೋ ಶೂಟ್ ಅನ್ನು ಇನ್ನೊಬ್ಬ ವಿದ್ಯಾರ್ಥಿ ಕೈಯಲ್ಲಿ ಮಾಡಿಸಿಕೊಂಡು ಅವುಗಳನ್ನು ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುತ್ತಾರೆ.ಟೀಚರಮ್ಮ ಬಾಲಕನೊಂದಿಗೆ ನಿಂತಿರುವ ಅಸಹ್ಯಕರ ಪೋಟೋಗಳು ವಿವಿಧ ಸಾಮಾಜಿಕ ಜಾಲತಾಗಣಲ್ಲಿ ವೈರಲ್ ಆಗಿದೆ.ಟೀಚರಮ್ಮನ ವರ್ತನೆಗೆ ಸಾರ್ವಜನಿಕರ ಆಕ್ರೋಶವಿದ್ಯಾರ್ಥಿ ಮತ್ತು ಶಿಕ್ಷಕತನದ ನಡುವಿನ ಗೌರಹ್ವಾನಿತ ಬಾಂಧವ್ಯಕ್ಕೆ ಕಳಂಕ ತಂದಿರುವ ಶಿಕ್ಷಕಿಯ ವಿರುದ್ದ ಕ್ರಮ ಜರುಗಿಸುವಂತೆ ಸಾರ್ವಜನಿಕರು…

Read More

ನ್ಯೂಜ್ ಡೆಸ್ಕ್:ಕರ್ನಾಟಕ ಉಪ ಮುಖ್ಯಮಂತ್ರಿ ಪೊಲಿಟಿಕಲ್ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಇಂದುಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆಂಧ್ರದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾಗಿದ್ದರೆ ಅದು ಅಷ್ಟೆಕ್ಕೆ ಮುಗಿದಿಲ್ಲ ಶಿವಕುಮಾರ್ ಅವರು ಚಂದ್ರಬಾಬು ಅವರ ಕೈ ಹಿಡಿದು ಒಂದಷ್ಟು ದೂರ ಕರೆದುಕೊಂಡು ಹೋಗಿ ರಹಸ್ಯವಾಗಿ ಮಾತನಾಡಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.ಬೆಂಗಳೂರಿನ ತೆಲಗುದೆಶಂ ಯುವ ಕಾರ್ಯಕರ್ತರು ರಚಸಿಕೊಂಡಿರುವ ಬೆಂಗಳೂರು ಟಿಡಿಪಿ ಫೋರಂ ವತಿಯಿಂದ ಮಾರುತ್ ಹಳ್ಳಿಯಲ್ಲಿ ಸಭೆಯನ್ನು ಆಯೋಜಿಸಿದ್ದರು ಈ ಸಭೆಯಲ್ಲಿ ಚಂದ್ರಬಾಬುನಾಯ್ಡು ಭಾಗವಹಿಸಿದ್ದರು ಸಭೆ ನಂತರ ಚಂದ್ರಬಾಬು ತಮ್ಮ ವಿಧಾನಸಭಾ ಕ್ಷೇತ್ರವಾದ ಕುಪ್ಪಂ ಟಿಡಿಪಿ ಮುಖ್ಯಸ್ಥ ತ್ರಿಲೋಕ್ ಅಪಘಾತಕ್ಕೀಡಾಗಿ ಸದ್ಯ ಬೆಂಗಳೂರಿನ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದು ಅವರನ್ನು ಭೇಟಿಯಾಗಿ ಆರೋಗ್ಯ ಸ್ಥಿತಿ ಕುರಿತು ವಿಚಾರಿಸಿದ ಚಂದ್ರಬಾಬು ಅಲ್ಲಿಂದ ಕುಪ್ಪಂಗೆ ತೆರಳಲು ಬೆಂಗಳೂರು ಎಚ್.ಎ.ಎಲ್ ವಿಮಾನ ನಿಲ್ದಾಣ ಹೋಗಿದ್ದ ಸಂದರ್ಭದಲ್ಲಿ ಅಲ್ಲಿಗೆ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷದ ಆವಿರ್ಭಾವ ಸಭೆಯಲ್ಲಿ ಭಾಗವಹಿಸಲು ನಾಗ್ಪುರಕ್ಕೆ ತೆರಳಲು ಆಗಮಿಸಿದ್ದು, ಈ ಸಂದರ್ಭದಲ್ಲಿ ಇಬ್ಬರು…

Read More