Author: Srinivas_Murthy

ನ್ಯೂಜ್ ಡೆಸ್ಕ್:ಹೊಸ ವರ್ಷಾಚರಣೆ ಸಂಭ್ರದಲ್ಲಿ ಪಟಾಕಿ ಸಿಡಿದು ವ್ಯಕ್ತಿಯೊಬ್ಬ ಮೃತಪಟ್ಟಿರುತ್ತಾನೆ ಘಟನೆ ಆಂಧ್ರದ ವಿಶಾಖಪಟ್ಟಣ ಮಹಾನಗರದಲ್ಲಿ ನಡೆದಿದೆ.ಪಟಾಕಿ ಅವಘಡದಲ್ಲಿ ಮೃತಪಟ್ತ ವ್ಯಕ್ತಿಯನ್ನು ಶಿವ(41) ಎಂದು ಗುರುತಿಸಲಾಗಿದ್ದು ಡಿ.31ರ ಮಧ್ಯರಾತ್ರಿಯ ನಂತರ ತನ್ನ ಮನೆಯ ಮಹಡಿ ಮೇಲೆ ಹೊಸ ವರ್ಷ2024ನ್ನು ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಂಡು ಪತ್ನಿ ಧನಲಕ್ಷ್ಮಿ, ಪುತ್ರಿ ಹಾಗೂ ಪುತ್ರ ಮತ್ತು ಕುಟುಂಬ ಸಮೇತ ಪಾಲ್ಗೊಂಡಿದ್ದರು. ಮಧ್ಯರಾತ್ರಿ 12 ಗಂಟೆಯಾಗಿತ್ತು. ಎಲ್ಲರೂ ಕೂಗುತ್ತ ಖುಷಿಯಿಂದ ಕುಣಿದು ಕುಪ್ಪಳಿಸುತ್ತ ಹೊಸ ವರ್ಷವನ್ನು ಸ್ವಾಗತಿಸಿ ಪರಸ್ಪರ ಶುಭಾಶಯ ಹೇಳಿಕೊಂಡು ಖುಷಿಯಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದರು.ಮಕ್ಕಳು, ಹಿರಿಯರು, ಮಹಿಳೆಯರು ಎಲ್ಲರೂ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು ಕೇಕ್ ಕತ್ತರಿಸಿದ ನಂತರ ಗನ್ ಶಾಟ್ ಪಟಾಕಿ ಸಿಡಿಸಲು ಬೆಂಕಿ ಹಚ್ಚಿದ್ದಾರೆ ಆದರೆ ಪಟಾಕಿ ಎಷ್ಟೊತ್ತಿಗೂ ಸಿಡಿಯಲಿಲ್ಲ ಹಾಗಾಗಿ ಅದನ್ನು ನೋಡಲು ಮೃತ ಶಿವ ಅದರ ಹತ್ತಿರ ಹೋಗಿ ಮುಖವಿಟ್ಟು ನೋಡುತ್ತಿದ್ದಾಗ ಪಟಾಕಿ ಏಕಾಏಕಿ ಸಿಡಿದಿದೆ, ಸಿಡಿದ ಪಟಾಕಿ ಕಣ್ಣಲ್ಲಿ ದೂರಿ ತಲೆಗೆ ಬಡಿದು ಶಿವ ಸ್ಥಳದಲ್ಲೆ ಕುಸಿದು ಬಿದ್ದಿರುತ್ತಾನೆ…

Read More

ನೂಜ್ ಡೆಸ್ಕ್:ವಿದ್ಯಾರ್ಥಿನಿಗೆ ಪ್ರೇಮ ಪಾಠ ಮಾಡಿ ಮದುವೆಯಾದ ಮೇಷ್ಟ್ರು ಈ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದಿದೆ.ಪ್ರೇಮಿಯ ಜೊತೆ ಹೋದ ಮಗಳ ನೆನೆದು ಕಣ್ಣೀರುಡುತ್ತಿರುವ ವಿದ್ಯಾರ್ಥಿನಿಯ ಪೋಷಕರು.ಮಕ್ಕಳಿಗೆ ಮನೆಯೆ ಮೊದಲ ಪಾಠಶಾಲೆ ತಾಯಿಯೆ ಮೊದಲ ಗುರು ನಂತರ ಶಾಲೆ ಮೇಷ್ಟ್ರು ಆದರೆ ಇಲ್ಲೊಬ್ಬ ಶಿಕ್ಷಕ ತಾನು ಪಾಠ ಮಾಡುತ್ತಿದ್ದ ವಿದ್ಯಾರ್ಥಿನಿಗೆ ಪ್ರೇಮ ಪಾಠ ಹೇಳಿ ಪ್ರೀತಿಗೆ ಬೀಳಿಸಿಕೊಂಡು ಮದುವೆಯಾಗಿರುವ ಘಟನೆಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದಿದೆ,ಸ್ಥಳೀಯ ಖಾಸಗಿ ಬಿಎಡ್‌ ಕಾಲೇಜು ಉಪನ್ಯಾಸಕ ಬೆಂಕಿಪುರದ ನಿವಾಸಿ ಯಶೋಧ್‌ ಕುಮಾರ್‌ ಹಾಗೂ ಕಾಲೇಜಿನ ಬಿ.ಎಡ್ ವಿಧ್ಯಾರ್ಥಿನಿ ಚಿಕ್ಕಹುಣಸೂರು ಸಜ್ಜೇಗೌಡರ ಪುತ್ರಿ ಪೂರ್ಣಿಮಾ ಮದುವೆ ಮಾಡಿಕೊಂಡಿದ್ದಾರೆ. ನಂತರ ರಕ್ಷಣೆಗಾಗಿ ಪೊಲೀಸರ ಮೊರೆಗೆ ಹೋಗಿದ್ದಾರೆ.ಮಗಳನ್ನು ಶಿಕ್ಷಕಿಯನ್ನು ಮಾಡಬೇಕು ಎಂಬ ಕನಸುಕಂಡ ಬೀದಿ ಬದಿ ಸೊಪ್ಪು ವ್ಯಾಪಾರ ಮಾಡುವ ಸಜ್ಜೇಗೌಡ, ಸಾಲ ಸೋಲ ಮಾಡಿ ಮಗಳು ಪೂರ್ಣಿಮಾಳನ್ನು ನಗರದ ಖಾಸಗಿ ಡಿಎಡ್‌ ಕಾಲೇಜಿಗೆ ಸೇರಿಸಿದ್ದರು ಡಿಎಡ್‌ ಮುಗಿಸಿದ ಪೂರ್ಣಿಮಾ ಮನೆಯಲ್ಲಿದ್ದಳು. ಡಿಎಡ್‌ ವ್ಯಾಸಂಗ ಮಾಡುವಾಗಲೇ ತನಗೆ ಪಾಠ ಮಾಡುತ್ತಿದ್ದ ಮೇಷ್ಟ್ರೀಗೆ…

Read More

ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಚಿರತೆ ಸಿಸಿಟಿವಿಯಲ್ಲಿ ಸೆರೆಯಾದ ಚಿರತೆ ಓಡಾಟ ಕ್ಯಾಂಪಸ್ ಪ್ರದೇಶದಲ್ಲಿ ಭಯದ ವಾತಾವರಣ ಇನ್ಫೋಸಿಸ್ ಸಿಬ್ಬಂದಿಗೆ ವರ್ಕ್ ಫ್ರಮ್ ಹೋಮ್ ನ್ಯೂಜ್ ಡೆಸ್ಕ್:ಅರಮನೆ ನಗರಿ ಮಸೂರಿನ ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ಮಂಗಳವಾರ ಚಿರತೆ ಪ್ರತ್ಯಕ್ಷವಾಗಿ ಸಂಚಲನ ಮೂಡಿಸಿದೆ. ಇದರಿಂದಾಗಿ ಡಿ.31 ರಿಂದ ಕಂಪನಿಯು ಉದ್ಯೋಗಿಗಳಿಗೆ work from Home ಮನೆಯಿಂದಲೇ ಕೆಲಸ ಮಾಡುವಂತೆ ಸಂದೇಶ ಕಳುಹಿಸಿದೆ. ಮಂಗಳವಾರ ಬೆಳಗ್ಗೆ ಕ್ಯಾಂಪಸ್ ನಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಚಿರತೆಯ ಚಲನವಲನ ಕ್ಯಾಂಪಸ್ ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಸುರಕ್ಷತೆ ದೃಷ್ಟಿಯಿಂದ ಹೊರಗಿನಿಂದ ಯಾರನ್ನೂ ಕ್ಯಾಂಪಸ್‌ಗೆ ಒಳಗೆ ಪ್ರವೇಶಿಸದಂತೆ ಭದ್ರತಾ ಸಿಬ್ಬಂದಿ ನಿಘಾ ವಹಿಸಿದ್ದು ಕ್ಯಾಂಪಸ್ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.ಅರಣ್ಯ ಸಿಬ್ಬಂದಿ ಕ್ಷೇತ್ರಕ್ಕೆ ಪ್ರವೇಶಿಸಿದ್ದಾರೆ. ಆದರೆ ಇನ್ನೂ ಚಿರತೆ ಪತ್ತೆಯಾಗಿಲ್ಲ ಎಂದು ಕಾರ್ಯಪಡೆ ಅಧಿಕಾರಿಗಳು ತಿಳಿಸಿದ್ದಾರೆ.ಚಿರತೆ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಚರಣೆಮೈಸೂರಿನ ಹೆಬ್ಬಾಳ ಕೈಗಾರಿಕ ಪ್ರದೇಶದಲ್ಲಿನ ಇನ್ಫೋಸಿಸ್ ಆವರಣದಲ್ಲಿ ಮಂಗಳವಾರ ಮುಂಜಾನೆ ಕಾಣಿಸಿಕೊಂಡಿದ್ದ ಚಿರತೆಯನ್ನು ಸೆರೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಬೀದರ್‌ನಲ್ಲಿ…

Read More

ನ್ಯೂಜ್ ಡೆಸ್ಕ್:ಜಗತ್ತನ್ನು ಬೆಚ್ಚಿಬೀಳಿಸಿದ ಕರೋನಾ ಸಾಂಕ್ರಾಮಿಕ ರೋಗದ ಮೊದಲ ಪ್ರಕರಣ 2019ರ ಈ ದಿನದಂದು, ಚೀನಾದ ವುಹಾನ್‌ನಲ್ಲಿ ಪತ್ತೆಯಾಗಿದ್ದು ಜನವರಿ ಮೊದಲ ವಾರದಲ್ಲಿ ಇದನ್ನು ನಾವೆಲ್ ಕೊರೊನಾ ವೈರಸ್ ಎಂದು ಘೋಷಿಸಲಾಯಿತು. ನಂತರ ಮಾರ್ಚ್ 2020 ರ ಹೊತ್ತಿಗೆ ಇದು ಪ್ರಪಂಚದಾದ್ಯಂತ ಅನೇಕ ದೇಶಗಳಿಗೆ ಹರಡಿಕೊಂಡಿತು.ಈ ದಿನವನ್ನು ನೆಟ್ಟಿಗರು ಇಂದಿನ ದಿನವನ್ನು ನೆನಪಿಸಿಕೊಂಡು ಹಳೆಯ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಪುನರಾವರ್ತನೆ ಮಾಡುತ್ತಿದ್ದಾರೆ. ಸಾಂಕ್ರಮಿಕ ರೋಗ ಪ್ರಪಂಚದಾದ್ಯಂತ ಕೊಟ್ಯಾಂತರ ಜೀವಗಳನ್ನು ಬಲಿ ತೆಗೆದುಕೊಂಡಿದೆ ಮತ್ತು ಸಾವಿರಾರು ಜನರನ್ನು ಅನಾಥರನ್ನಾಗಿ ಮಾಡಿದ ಕಹಿ ಘಟನೆ ಸಾರ್ವಜನಿಕ ವಲಯದಲ್ಲಿ ದುರಂತವಾಗಿ ಕಾಡಿತ್ತು.

Read More

ಟೆಕ್ ನೂಜ್:ಹಳೆಯ ಆಂಡ್ರಾಯ್ಡ್​ ಫೋನ್ ಬಳಕೆದಾರರಾಗಿದ್ದರೆ ಜನವರಿಯಿಂದ WhatsApp ಕೆಲಸ ಮಡುವುದಿಲ್ಲ ಎಂಬ ಸುದ್ಧಿ ಹೊರಬಂದಿದೆ ಮುಂಬರುವ ವರ್ಷದಿಂದ ಕೆಲವು ಆಂಡ್ರಾಯ್ಡ್ ಹ್ಯಾಂಡ್‌ಸೆಟ್‌ಗಳಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುವುದಾಗಿ ವಾಟ್ಸಾಪ್​ ಘೋಷಿಸಿದೆ.ಜನವರಿ 1, 2025 ರಿಂದ ಕಿಟ್‌ಕ್ಯಾಟ್ ಚಾಲನೆಯಲ್ಲಿರುವ ಆಂಡ್ರಾಯ್ಡ್​ ಫೋನ್‌ಗಳಲ್ಲಿ ವಾಟ್ಸಾಪ್​ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಈ ಫೋನ್‌ಗಳು ದಶಕದ ಹಳೆಯ ಆಪರೇಟಿಂಗ್ ಸಿಸ್ಟಂ ಅನ್ನು ಚಾಲನೆ ಮಾಡುತ್ತಿವೆ ಮತ್ತು ಯಾವುದೇ ಹೊಸ ಅಪ್​ಡೇಟ್​ಗಳು ಬರುವುದಿಲ್ಲ.ಸರಳ ಭಾಷೆಯಲ್ಲಿ ಹೇಳುವುದಾದರೆ ನಿಮ್ಮ ಬಳಿ 9 ರಿಂದ 10 ವರ್ಷಗಳ ಹಿಂದೆ ಬಿಡುಗಡೆಯಾದ ಆಂಡ್ರಾಯ್ಡ್​ ಫೋನ್ ಇದ್ದರೆ, ಅದರಲ್ಲಿ ವಾಟ್ಸಾಪ್​ ಅಪ್ಲಿಕೇಶನ್ ಕಾರ್ಯನಿರ್ವಹಿಸುವುದಿಲ್ಲ. ನೀವು ವಾಟ್ಸಾಪ್​ ಬಳಸುವುದನ್ನು ಮುಂದುವರಿಸಲು ಬಯಸಿದರೆ ಇತ್ತೀಚಿನ ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಹೊಸ ಫೋನ್‌ಗೆ ಅಪ್‌ಗ್ರೇಡ್ ಮಾಡಬೇಕಾಗುತ್ತದೆ. ಆ್ಯಪ್‌ನ ಸುರಕ್ಷತೆ ಮತ್ತು ಕಾರ್ಯನಿರ್ವಹಣೆಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ವಾಟ್ಸಾಪ್​ ಹೇಳಿದೆ.ಹಳೆಯ ಆಪರೇಟಿಂಗ್ ಸಿಸ್ಟಮ್ ಪ್ಲಾಟ್‌ಫಾರ್ಮ್‌ನ ಸುರಕ್ಷತೆಯನ್ನು ಖಾತ್ರಿಪಡಿಸದ ಕಾರಣ ಹಳೆಯ ಆಪರೇಟಿಂಗ್ ಸಿಸ್ಟಮ್‌ಗಳಿಗೆ ವಾಟ್ಸಾಪ್​ ತನ್ನ ಸಪೋರ್ಟ್​ ನಿಲ್ಲಿಸಲಿದೆ. ಹಳೆಯ…

Read More

ಶ್ರೀನಿವಾಸಪುರ:ಚಾಲಕನ ನಿಯಂತ್ರಣ ತಪ್ಪಿದ ಸ್ಲೀಪರ್ ಕೋಚ್ ಖಾಸಗಿ ಬಸ್ ಪಕ್ಕದ ಹಳ್ಳಕ್ಕೆ ಉರಳಿ ಬಿದ್ದು ಒಬ್ಬರು ಮೃತ ಪಟ್ಟಿರುವ ಘಟನೆ ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ಬಳಿ ನಡೆದಿದೆ.ಮೃತ ವ್ಯಕ್ತಿಯನ್ನು ಆಂಧ್ರದ ಪ್ರಕಾಶಂ ಜಿಲ್ಲೆಯ ಪುನಗೋಡು ಗ್ರಾಮದ ಅನಿಲ್ (22) ಎಂದು ಗುರತಿಸಲಾಗಿದೆ. ಖಾಸಗಿ ಬಸ್ ಶ್ರೀ ಶ್ರೀನಿವಾಸ ಬಸ್ ಟ್ರಾವಲ್ಸ್ ಬೆಂಗಳೂರಿನಿಂದ ಆಂಧ್ರದ ಒಂಗೋಲ್ ನಗರಕ್ಕೆ ಮದನಪಲ್ಲಿ ಮಾರ್ಗವಾಗಿ ಹೋಗಲು ರಾಯಲ್ಪಾಡು ಬಳಿ ಚಲಿಸುತ್ತಿದ್ದಾಗ ಭಾನುವಾರ ಮದ್ಯರಾತ್ರಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಾಯಲ್ಪಾಡು ತಿರುವಿನಲ್ಲಿ ಹಳ್ಳಕ್ಕೆ ಉರಳಿ ಬಿದ್ದಿದೆ ಬಸ್ಸಿನಲ್ಲಿದ್ದ ಸುಮಾರು 17 ಮಂದಿ ಪ್ರಯಾಣಿಕರಲ್ಲಿ ಮೃತ ಯುವಕನ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೆ ಮೃತ ಪಟ್ಟಿರುವುದಾಗಿ ಹೇಳಲಾಗಿದೆ.ಅಪರಿಚಿತ ವಾಹನ ಡಿಕ್ಕಿ ವ್ಯಕ್ತಿ ದೇಹ ಚಿದ್ರಚಿದ್ರಬೆಂಗಳೂರು-ಮದನಪಲ್ಲಿ ಹೆದ್ದಾರಿಯಲ್ಲಿ ಬೆಳಗಿನ ಸಮಯದಲ್ಲಿ ವಾಕಿಂಗ್ ಮಾಡಿಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಅಪರಿಚಿತ ವಾಹನ ಗುದ್ದಿಕೊಂಡು ಹೋಗಿದೆ ವಾಹನ ಡಿಕ್ಕಿಯಾದ ರಭಸಕ್ಕೆ ವ್ಯಕ್ತಿ ದೇಹ ಚಿದ್ರಚಿದ್ರವಾಗಿದ್ದು ಇದೊಂದು ಭಿಕರ ಅಂಪಘಾತ ಎನ್ನುತ್ತಾರೆ ಸ್ಥಳೀಯರು ಈ ಅಪಘಾತ…

Read More

ಸಿಎಂ ಸಿದ್ದರಾಮಯ್ಯರೊಂದಿಗೆ ಮಾತನಾಡಿದ್ದು ಸಂಕ್ರಾಂತಿ ಹಬ್ಬದ ನಂತರ ಸಮಸ್ಯೆ ಬಗೆಹರಿಯಲಿದೆ ಎಂದ ಸಚಿವ ರಾಮಲಿಂಗಾರೆಡ್ಡಿ. ಬೆಂಗಳೂರು:ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಿಎಂ ಗೃಹ ಕಚೇರಿ ಕಾವೇರಿಯಲ್ಲಿ ಸಿದ್ದರಾಮಯ್ಯರೊಂದಿಗೆ ಮಾತುಕತೆ ಹಿನ್ನೆಲೆಯಲ್ಲಿ ಸಾರಿಗೆ ನೌಕರರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಡಿಸೆಂಬರ್ 31 ರಂದು ಕರೆ ನೀಡಿದ್ದ ಮುಷ್ಕರವನ್ನು ಹಿಂಪಡೆಯಲು ನಿರ್ಧರಿಸಿವೆ. ಸಭೆಯಲ್ಲಿ ಸಾರಿಗೆ ಇಲಾಖೆ 4 ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಭಾಗಿಯಾಗಿದ್ದು ಈ ಸಂದರ್ಭದಲ್ಲಿ ಸಾರಿಗೆ ಸಿಬ್ಬಂದಿ ಬೇಡಿಕೆ ಕುರಿತಾಗಿ ಸಿಎಂ ಅವರಿಗೆ ಮನವರಿಕೆ ಮಾಡಲಾಗಿವುದಾಗಿ ತಿಳಿಸಿದ್ದು ಸಂಕ್ರಾಂತಿ ನಂತರ ಜಂಟಿ ಕ್ರಿಯಾ ಸಮಿತಿಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖುದ್ಧು ಸಭೆ ನಡೆಸಲಿದ್ದಾರಂತೆ ಈ ಕಾರಣಕ್ಕಾಗಿ ರಾಜ್ಯ ರಸ್ತೆ ಸಾರಿಗೆ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದ್ದ ಮುಷ್ಕರ ವಾಪಸ್ ಪಡೆದು ಡಿಸೆಂಬರ್ 31 ರಂದು ಸಾರಿಗೆ ಸಂಸ್ಥೆ ಬಸ್ ಗಳು ಎಂದಿನಂತೆ ಕಾರ್ಯಾಚರಣೆ ನಡೆಸಲಿವೆ ಎಂದಿರುತ್ತಾರೆ.

Read More

ಮದನಪಲ್ಲಿ:ಅಯ್ಯಪ್ಪ ಮಾಲಾಧಾರಿ ಭಕ್ತನ ಮೇಲೆ ಕುಲ್ಲಕ್ಷಕಾರಣಕ್ಕೆ ಹಲ್ಲೆ ನಡೆಸಿರುವ ಘಟನೆ ದೊಡ್ಡ ರಾದ್ದಾಂತಕ್ಕೆ ಕಾರಣವಾಗಿರುವುದು ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆ ಮದನಪಲ್ಲಿ ನಗರದಲ್ಲಿ ಬುಧವಾರ ಸಂಜೆ ನಡೆದಿರುತ್ತದೆ.ವೆಂಕಟೇಶ್‌ ಎಂಬ ಅಯ್ಯಪ್ಪ ಮಾಲಾಧಾರಿ ಯುವಕ ಬೈಕನಲ್ಲಿ ತನ್ನ ತಾಯಿಯನ್ನು ಕರೆದುಕೊಂಡು ಆರ್‌ಟಿಸಿ ಬಸ್‌ ನಿಲ್ದಾಣದ ಮಾರ್ಗವಾಗಿ ಹೋಗುತ್ತಿರುವಾಗ ಮತ್ತೊಬ್ಬ ಬೈಕ ಸವಾರ ಜೋರಾಗಿ ಬಂದಿದ್ದು ಬೈಕ್ ಗೆ ಟಚ್ ಆಗಿದೆ ಇದಕ್ಕೆ ಅಯಪ್ಪ ಮಾಲಾಧಾರಿ ವೆಂಕಟೇಶ್‌ ವಿರೋಧಿಸಿದಾಗ ಇಬ್ಬರು ಬೈಕ್ ಸವಾರರ ನಡುವೆ ಮಾತಿನ ಚಕಮಕಿಗೆ ನಡೆದಿದೆ ಜೋರಾಗಿ ಬಂದ ಬೈಕ್‌ ಸವಾರ ಜಿಯಾವುಲ್‌ ಹಕ್‌ ಎಂಬ ವ್ಯಕ್ತಿ ಅಯ್ಯಪ್ಪ ಮಾಲಾಧಾರಿಯ ಅಂಗಿ ಹರಿದು ದುರ್ಬಾಷೆಗಳಿಂದ ಬೈದು ಹಲ್ಲೆ ನಡೆಸಿರುವುದಾಗಿ ವೆಂಕಟೇಶ್ ತಾಯಿ ಕಲಾವತಿ ಆರೋಪಿಸಿದ್ದಾರೆ. ಅಯ್ಯಪ್ಪ ಮಾಲಾಧಾರಿ ವೆಂಕಟೇಶ್ ಮೇಲಿನ ಹಲ್ಲೆ ವಿಚಾರ ಮದನಪಲ್ಲಿ ನಗರದಾದ್ಯಂತ ಕಾಡ್ಗಿಚ್ಚಿನಂತೆ ಹರಡಿದೆ ಕ್ಷಣಾರ್ಧಾದಲ್ಲಿ ಅಯ್ಯಪ್ಪ ಮಾಲಾಧಾರಿಗಳು ದೊಡ್ಡ ಸಂಖ್ಯೆಯಲ್ಲಿ ಜಮಾವಣೆ ಗೊಂಡು ದಾಳಿ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಮದನಪಲ್ಲಿ ಪೋಲಿಸ್ ಠಾಣೆ ಮುಂದೆ ಪ್ರತಿಭಟಿಸಿದ್ದಾರೆ.ಇದಕ್ಕೆ…

Read More

ಚಿಂತಾಮಣಿ ನಗರದ ವಾಣಿಜ್ಯೋದ್ಯಮಿ ನಾಗಹರ್ಷ ಅವರ ಪತ್ನಿ ರಶ್ಮಿಹರ್ಷ ಅವರು ರಾಷ್ಟ್ರಮಟ್ಟದ ಅತ್ಯಂತ ಜನಪ್ರಿಯ ವೈಶ್ಯ ಲೈಮ್‌ಲೈಟ್ ಪ್ರಶಸ್ತಿ(Most Popular Vysya Women (MPVW) – 2024)ಯನ್ನು ಪಡೆದಿರುತ್ತಾರೆ. ಚಿಂತಾಮಣಿ:ರಾಷ್ಟ್ರಮಟ್ಟದ ಮೋಸ್ಟ್ ಪಾಪ್ಯೂಲರ್ ವೈಶ್ಯ ಲೈಮ್‌ಲೈಟ್ ಪ್ರಶಸ್ತಿಯನ್ನು ಚಿಂತಾಮಣಿ ನಗರದ ರಶ್ಮಿಹರ್ಷ ಅವರು ಪಡೆದಿರುತ್ತಾರೆ.ಹೈದರಾಬಾದ್ ಮೂಲದ ಪ್ರಖ್ಯಾತ ಮಾನೆಪಲ್ಲಿ ಆಭರಣ ಮಳಿಗೆ ಹಾಗು ವಾರಹಿ ಸಿಲ್ಕ್ ಸಂಸ್ಥೆ ಪ್ರಸ್ತುತ ಪಡಿಸುವ ಪ್ರಶಸ್ತಿಯಾಗಿದ್ದು ಆರ್ಯ ವೈಶ್ಯ ಸಮಾಜದ ಮಹಿಳಾ ಸಾಧಕರಿಗೆ ಪ್ರತಿ ವರ್ಷ ಪ್ರಶಸ್ತಿಯನ್ನು ಪ್ರಧಾನ ಮಾಡುತ್ತಾರೆ. ಅದರಂತೆ 2024 ರಲ್ಲಿ ನಡೆದ ಸ್ಪರ್ಧೆಯಲ್ಲಿ ಚಿಂತಾಮಣಿಯ ರಶ್ಮಿಹರ್ಷರವರು ಅತ್ಯಂತ ಜನಪ್ರಿಯ ವೈಶ್ಯ ಮಹಿಳೆ ಎಂದು ಆಯ್ಕೆಯಾಗಿದ್ದು ಅವರು ಮೊಸ್ಟ್ ಪಾಪ್ಯೂಲರ್ ವೈಶ್ಯ ಸ್ಪರ್ದೆಯಲ್ಲಿ ಭಾಗವಹಿಸಿ ಹತ್ತು ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದು ಎರಡನೆ ರನ್ನರ್ ಅಪ್ ಪ್ರಶಸ್ತಿಯ ಗರಿ ದಕ್ಕಿಸಿಕೊಂಡಿದ್ದಾರೆ. ಸೋಮವಾರ ಸಂಜೆ ಹೈದರಾಬಾದ್ ಮಹಾನಗರದ ನೊವಾಟೆಲ್ ಹೋಟೆಲ್ ನಲ್ಲಿ ನಡೆದ ವರ್ಣ ರಂಜಿತ ಕಾರ್ಯಕ್ರಮದಲ್ಲಿ ರನ್ನರ್ ಅಪ್ ಕೀರಿಟ ತೋಡಿಸಿದ್ದು ನಂತರ…

Read More

ನ್ಯೂಜ್ ಡೆಸ್ಕ್: ಜಮ್ಮು ಕಾಶ್ಮೀರದಲ್ಲಿ ಮಂಗಳವಾರ ಸಂಜೆ ಕಣಿವೆ ಪ್ರದೇಶವಾದ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ವಾಹನ ಪ್ರಪಾತದ ಕಂದಕಕ್ಕೆ ಉರುಳಿಬಿದ್ದು ಐವರು ಯೋಧರು ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿತ್ತು.ಈ ಅಪಘಾತದಲ್ಲಿ ಐವರು ಯೋಧರು ಹುತಾತ್ಮರಾಗಿದ್ದು 12 ಜನ ಸೈನಿಕರಿಗೆ ಗಂಭೀರ ಗಾಯಗಳಾಗಿವೆ. ಇದರಲ್ಲಿ ಕೆಲ ಯೋಧರ ಸ್ಥಿತಿ ಚಿಂತಾಜನಕವಾಗಿದ್ದು,ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಹುತಾತ್ಮರಾದ ಐದು ಜನ ಯೋಧರಲ್ಲಿ ಮೂರು ಜನ ಯೋಧರು ಕರ್ನಾಟಕದವರಾಗಿದ್ದು ಬೆಳಗಾವಿಯ ಸಾಂಬ್ರಾ ಗ್ರಾಮದ ಯೋಧ ಸುಬೇದಾರ್ ದಯಾನಂದ ತಿರಕಣ್ಣವರ (45), ಕುಂದಾಪುರ ಬಳಿಯ ಕೋಟೇಶ್ವರದ ಬಿಜಾಡಿಯ ಅನೂಪ್ (33), ಬಾಗಲಕೋಟೆ ಮಹಾಲಿಂಗಪುರದ(25) ವರ್ಷದ ಮಹೇಶ್ ಮಾರಿಗೊಂಡ ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿದೆ.ಮೂರು ವರ್ಷದ ಹಿಂದೆ ಮದುವೆಯಾಗಿದ್ದ ಯೋಧಬಾಗಲಕೋಟೆ ಜಿಲ್ಲೆ ಬಕವಿಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ನಿವಾಸಿ ಮಹೇಶ್ ನಾಗಪ್ಪ ಮಾರಿಗೊಂಡ ಅವರಿಗೆ 25 ವರ್ಷ ವಯಸ್ಸಾಗಿದ್ದು 6 ವರ್ಷಗಳಿಂದ 11ನೇ ಮರಾಠಾ ರೆಜಿಮೆಂಟ್​​ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮದುವೆಯಾಗಿ ಮೂರು ವರ್ಷ ಆಗಿದ್ದು ಲಕ್ಷ್ಮಿ ಎಂಬ ಯುವತಿಯನ್ನ ಕೈಹಿಡಿದ್ದರು. ಗುರುವಾರ ಮೃತ…

Read More