ನ್ಯೂಜ್ ಡೆಸ್ಕ್: ಬಹುತೇಕರು ಬಡತನದಿಂದಲೆ ದುಡಿದು ಹಣ ಗಣಗಳಿಸಿರಬಹುದು ಹಣ ಎಲ್ಲರ ಬಳಿ ಇರಬಹುದು ಅನಕೂಲವಂತ ಶ್ರೀಮಂತ ಸಿರಿವಂತ ಎಲ್ಲವೂ ಆಗಿರಬಹುದು ಆದರೆ ನಾನು ಹುಟ್ಟಿದ ನೆಲದ ಋಣ ತೀರಿಸಲು ಇಲ್ಲೊಬ್ಬ ಸಿರಿವಂತ ತಾನು ಹುಟ್ಟಿ ಆಡಿ ಬೆಳೆದ ತನ್ನೂರಿನ ಋಣ ತೀರಿಸಲು ಮುಂದಾಗಿದ್ದಾರೆ.ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ಬೆಟ್ಟಗುಡ್ಡಗಳ ನಡುವೆ ಇರುವ ಪುಟ್ಟ ಗ್ರಾಮ ವೀರಕಪುತ್ರ,ಈ ಗ್ರಾಮದಲ್ಲಿ ಸುತ್ತಲೂ ನಿತ್ಯವೂ ಕಾಡುಪ್ರಾಣಿಗಳ ಓಡಾಟ ಇದೆ ಇಲ್ಲಿನ ಜನ ನಿತ್ಯ ಆತಂಕದಲ್ಲಿ ಕಾಲ ಕಳೆಯುವಂತ ಪರಿಸ್ಥಿತಿ ಇದೆ, ಜೊತೆಗೆ ಹಗಲು ರಾತ್ರಿ ಗ್ರಾಮದ ಸುತ್ತಲೂ ಕಲ್ಲು ಕ್ವಾರಿ ಬ್ಲಾಸ್ಟಿಂಗ್ ನಡೆಯುತ್ತಿರುತ್ತದೆ.ರಾತ್ರಿಯಾಯಿತು ಎಂದರೆ ಇನ್ನಷ್ಟು ಆತಂಕ ಇಲ್ಲಿನ ಜನರಿಗೆ ಇದನ್ನು ಸ್ವತಃ ಅರಿತಿದ್ದ ಇದೇ ಊರ್‍ಇನ ವೀರಕಪುತ್ರಶ್ರೀನಿವಾಸ್ ತನ್ನೂರಿನ ಎಲ್ಲಾ ಬೀದಿಗಳಿಗೆ 15 ಸೋಲಾರ್ ದೀಪಗಳನ್ನು ಅಳವಡಿಸಿದ್ದಾರೆ.ಗ್ರಾಮಕ್ಕೆ ಸೋಲಾರ್ ದೀಪಗಳ ಕೊಟ್ಟು ಧನ್ಯತೆ ಮೆರೆದ ವಿಷ್ಣು ಅಭಿಮಾನಿವೀರಕಪುತ್ರಶ್ರೀನಿವಾಸ್ ಹೆಸರು ಸಿನಿಮಾ ಹಾಗು ಸಾಹಿತ್ಯ ಕ್ಷೇತ್ರದಲ್ಲಿ ಪ್ರವರ್ದಮಾನಕ್ಕೆ ಬರುತ್ತಿರುವ ಹೆಸರು ಇವರ ಸ್ವಗ್ರಾಮ ವೀರಕಪುತ್ರ…
Author: Srinivas_Murthy
ಶ್ರೀನಿವಾಸಪುರ: ಸಾರ್ವಜನಿಕರ ಅನಕೂಲಕ್ಕಾಗಿ ತಹಶೀಲ್ದಾರ್ ಕಛೇರಿಯಲ್ಲಿರುವ ಕೆಲ ಕೌಂಟರುಗಳನ್ನು ಹಳೇಯ ತಾಲೂಕು ಕಚೇರಿ ಆವರಣಕ್ಕೆ ಶೀಫ್ಟ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಆಕ್ರಂಪಾಷ ತಿಳಿಸಿದರು.ಪಟ್ಟಣದ ಪಶುಪಾಲನ ಕಛೇರಿ ಹಾಗು ತಹಶೀಲ್ದಾರ್ ಕಛೇರಿ ಕಟ್ಟಡ ಹಾಗು ಸಿಸಿ ರಸ್ತೆ ಕಾಮಗಾರಿ ವೀಕ್ಷಣೆ ಮಾಡಲು ಶ್ರೀನಿವಾಸಪುರಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ ಮಾತನಾಡಿದರು.ಸಾರ್ವಜನಿಕರ ಅರ್ಜಿಗಳನ್ನು ತ್ವರಿತ ಗತಿಯಲಿಲ್ಲಿ ವಿಲೆವಾರಿ ಮಾಡಲು ಅನಕೂಲವಾಗುವಂತೆ ಹೆಚ್ಚುವರಿ ಕೌಂಟರುಗಳನ್ನು ಅನಾವರಣಗೊಳಿಸುತ್ತಿರುವುದಾಗಿ ತಹಶೀಲ್ದಾರ್ ಕಛೇರಿ ಆವರಣದಲ್ಲಿ ದ್ವಿಚಕ್ರವಾಹನಗಳು ಹಾಗೂ ಕಾರುಗಳನ್ನು ಅಡ್ಡದಡ್ಡಿಯಾಗಿ ನಿಲ್ಲಿಸಿರುತ್ತಾರೆ ಇದರಿಂದ ಸಾರ್ವಜಕಿರ ಓಡಾಟಕ್ಕೆ ತೊಂದರೆಯಾಗಿದ್ದು ಸರ್ಕಾರಿ ಅಧಿಕಾರಿಗಳ ಸರ್ಕಾರಿ ವಾಹನ ನಿಲ್ಲಿಸಲು ಸ್ಥಳಾವಕಾಶ ಇಲ್ಲದಂತಾಗಿದೆ ದ್ವಿಚಕ್ರವಾಹನಗಳನ್ನು ಶಿಸ್ತಾಗಿ ಸರತಿ ಸಾಲಿನಲ್ಲಿ ನಿಲ್ಲಿಸುಲು , ಅಧಿಕಾರಿಗಳ ಕಾರುಗಳನ್ನು ಹೊರತು ಪಡಿಸಿ ಸಾರ್ವಜನಿಕರ ಕಾರುಗಳನ್ನು ಅವರಣದೊಳಗೆ ನಿಲ್ಲಿಸದಂತೆ ಸೇಕ್ಯೂರಿಟಿ ಗಾರ್‍ಡ್ ಗಳ ಸಹಕಾರ ಪಡೆಯಲು ಪೊಲೀಸ್ ಅಧಿಕಾರಿಗೆ ಸೂಚಿಸಿದರು.ಪಶು ಪಾಲನ ಇಲಾಖೆಗೆ ನೇರ ರಸ್ತೆಗೆ ಮನವಿಪಶು ಪಾಲನ ಇಲಾಖೆ ಕಛೇರಿಗೆ ಬೇಟಿ ನೀಡಿದ ಜಿಲ್ಲಾಧಿಕಾರಿಗೆ ಪಶುಪಾಲನ ಇಲಾಖೆ ವೈದ್ಯರು ಮತ್ತು ಸಿಬ್ಬಂದಿ ಕಛೇರಿಗೆ…
ಶ್ರೀನಿವಾಸಪುರ:ಸರ್ಕಾರಿ ಸೇವೆಯಿಂದ ನಿವೃತ್ತರಾದವರು ನೆಮ್ಮದಿಯ ಹಾಗು ಆರೋಗ್ಯವಂತರಾಗಿ ಜೀವನ ಮಾಡಲು ನಿಯಮಿತ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗಾಸನ ಬಹು ಸಹಕಾರಿಯಾಗುತ್ತದೆ ನಿರಂತರವಾಗಿ ಯೋಗಾಭ್ಯಾಸ ಮಾಡುವ ಮೂಲಕ ಉತ್ತಮ ಆರೋಗ್ಯ ಪಡೆಯುವಂತೆ ಯಲಹಂಕದ ವಿವೇಕಾನಂದ ಯೋಗ ಶಿಕ್ಷಣ ಕೇಂದ್ರದ ಮುಖ್ಯಸ್ಥ ಮಾದಪ್ಪ ಹೇಳಿದರು. ಅವರು ಶ್ರೀನಿವಾಸಪುರದ ಪತಂಜಲಿ ಮುದ್ರಾ ಯೋಗ ಶಿಕ್ಷಣ ಸಮಿತಿ ಸಕ್ರೀಯ ಸದಸ್ಯ ಹಾಗು ಪಶು ವೈದ್ಯಾಧಿಕಾರಿ ಡಾ.ವೆಂಕಟೇಶ್ ತಮ್ಮ ಸರ್ಕಾರಿ ವೃತ್ತಿ ಜೀವನದಲ್ಲಿ ನಿವೃತ್ತರಾದ ಸಂದರ್ಭದಲ್ಲಿ ಡಾ.ವೆಂಕಟೇಶ್ ದಂಪತಿಯನ್ನು ಶ್ರೀನಿವಾಸಪುರದ ಶ್ರೀ ಪತಂಜಲಿ ಮುದ್ರಾ ಯೋಗ ಶಿಕ್ಷಣ ಸಮಿತಿ ವತಿಯಿಂದ ಗೌರವಿಸಿದರು.ಶ್ರೀ ಪತಂಜಲಿ ಮುದ್ರಾ ಯೋಗ ಶಿಕ್ಷಣ ಸಮಿತಿ ಶಿಕ್ಷಕ ವೆಂಕಟೇಶ್ ಬಾಬು ಮಾತನಾಡಿ ಡಾ.ವೆಂಕಟೇಶ್ ರವರು ಪಶು ವೈದ್ಯಾಧಿಕಾರಿಗಳಾಗಿ ತಮ್ಮ ಸೇವಾ ಅವಧಿಯಲ್ಲಿ ಉತ್ತಮವಾಗಿ ಸೇವೆಯನ್ನು ಸಮಾಜ ಮೆಚ್ಚುವ ರಿತಿಯಲ್ಲಿ ನಿರ್ವಹಿಸಿದ್ದಾರೆ ಅವರು ಕೆಲಸ ಮಾಡಿದ ಗ್ರಾಮೀಣ ಭಾಗದಲ್ಲಿ ಜನರು ಅವರ ಸೇವೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ ಜನ ಮೆಚ್ಚಿದರೆ ಭಗವಂತ ಮೆಚ್ಚಿದಂತೆ ಅವರು ನಿವೃತ್ತಿ ಜೀವನ…
ಪ್ರಧಾನಿಯಾದ ನಂತರ ನಾಲ್ಕನೆ ಬಾರಿಗೆ ತಿರುಮಲಕ್ಕೆ ಸಂಪ್ರದಾಯಿಕ ಉಡುಗೆಯಲ್ಲಿ ಶ್ರೀನಿವಾಸನ ದರ್ಶನ ತಿರುಮಲದಿಂದ ತೆಲಂಗಾಣ ಚುನಾವಣೆ ಪ್ರಚಾರಕ್ಕೆ ನ್ಯೂಜ್ ಡೆಸ್ಕ್: ಪ್ರಧಾನಿ ನರೇಂದ್ರ ಮೋದಿಯವರು ತಿರುಮಲ ಶ್ರೀನಿವಾಸನ ದರ್ಶನ ಪಡೆದರು.ಶ್ರೀನಿವಾಸನ ದರ್ಶನಕ್ಕೆ ದೇವಸ್ಥಾನಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಸ್ವಾಗತ ಕೋರಿದರು.ಮೋದಿಯವರು ಭಾನುವಾರ ಸಂಜೆ ತಿರುಮಲಕ್ಕೆ ಭೇಟಿ ನೀಡಿಡಲು ತಿರುಪತಿಗೆ ಆಗಮಿಸಿದರು ಅವರನ್ನು ಆಂಧ್ರದ ರಾಜ್ಯಪಾಲ ನಜೀರ್ ಅಹ್ಮದ್ ಮತ್ತು ಸಿಎಂ ಜಗನ್ ಸ್ವಾಗತಿಸಿದರು,ಬಳಿಕ ಅವರು ತಿರುಮಲ ತಲುಪಿದರು ಅಲ್ಲಿ ಇವೊ ಧರ್ಮಾರೆಡ್ಡಿ ಸ್ವಾಗತಿಸಿದರು.ಕಾರ್ತಿಕ ಪೌರ್ಣಮಿ ನಿಮಿತ್ತ ಇಂದು ಬೆಳಗ್ಗೆ ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕ ಶ್ರೀವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲು ಮೋದಿ ಪಂಚೆ ಮತ್ತು ಶಲ್ಯ ಧರಿಸಿ ಸಾಂಪ್ರದಾಯಿಕ ಉಡುಗೆಯಲ್ಲಿ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.ದೇವಸ್ಥಾನದಲ್ಲಿ ಪ್ರಧಾನಿ ಮೋದಿ ಕೆಲಕಾಲ ಇದ್ದರು ಬಳಿಕ ರಂಗನಾಯಕುಲ ಮಂಟಪದಲ್ಲಿ ಪ್ರಧಾನಿ ಮೋದಿ ಅವರಿಗೆ ಪುರೋಹಿತರಿಂದ ವೇದಾಶೀರ್ವಾದ ಮಾಡಲಾಯಿತು ಈ ಸಂದರ್ಭದಲ್ಲಿ ಟಿಟಿಡಿ ಇಒ ಧರ್ಮಾ ರೆಡ್ಡಿ ಅವರು…
ಜಾಲತಾಣಗಳ ಮೂಲಕ ಪೊಲಿಟಿಕಲ್ ಸ್ಟಾರ್ ತೆಲಂಗಾಣ ಕೊಲ್ಲಾಪುರ್ ವಿಧಾನಸಭೆ ಕ್ಷೇತ್ರ ಘಟಾನುಘಟಿ ನಾಯಕರ ವಿರುದ್ದ ಸ್ಪರ್ದೆ ನ್ಯೂಜ್ ಡೆಸ್ಕ್:ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆಯ ಬಿಸಿ ದಿನದಿಂದ ದಿನಕ್ಕೆ ಏರುತ್ತಿದೆ ಇದರ ನಡುವೆ ಕೊಲ್ಲಾಪುರ್ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ದಿಸಿರುವ ಕರ್‍ನೆಶಿರೀಶ@ ಬರ್ರೆಲಕ್ಕ ಎಂಬ ನಿರುದ್ಯೂಗ ಯುವತಿ ಹೆಸರು ಹಾಟ್ ಟಾಪಿಕ್ ಆಗಿದೆ,ಯುವ ಸಮುದಾಯ ಅಕೆಗೆ ದೊಡ್ದ ಸಂಖ್ಯೆಯಲ್ಲಿ ಬೆಂಬಲ ವ್ಯಕ್ತಪಡಿಸುತ್ತಿದೆ.ತೆಲಂಗಾಣದ ಚುನಾವಣೆ ಕಣದಲ್ಲಿ ಕೊಲ್ಲಾಪುರ್ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ದಿಸಿರುವ ಸಾಮಾನ್ಯ ಕೃಷಿ ಕುಟುಂಬದ ಯುವತಿ ಕರ್‍ನೆಶಿರೀಶ@ ಬರ್ರೆಲಕ್ಕ ಹೆಸರು ಈಗ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ.ತೆಲಂಗಾಣದಲ್ಲಿ ಈಗ ಎಲ್ಲೆಡೆ ಬರೆಲಕ್ಕನ ಹೆಸರು ಹೆಚ್ಚಾಗಿ ಕೇಳಿಬರುತ್ತಿದೆ. ಬಡ ಕುಟುಂಬದಿಂದ ಬಂದಿರುವ 25 ವರ್ಷದ ಬರೆಲಕ್ಕ ಅಲಿಯಾಸ್ ಸಿರಿಶಾ ಚುನಾವಣಾ ಸ್ಟಾರ್ ಆಗಿದ್ದಾರೆ. ಆಕೆ ಸಾಮಾಜಿಕ ಜಾಲತಾಣಗಳ ಮೂಲಕ ಬಹಳ ಫೇಮಸ್ ಆಗಿದ್ದು ಎಷ್ಟೇ ಡಿಗ್ರಿ ಓದಿದರೂ ಕೆಲಸ ಸಿಗದ ಕಾರಣ ಎಮ್ಮೆ(ಬರ್ರೆಲು) ಕಾಯುತ್ತ ಮನೆಯಲ್ಲಿ ಅಡುಗೆ ಮಾಡಿಕೊಂಡು ಬದುಕುತ್ತಿದ್ದೇನೆ…
ಶ್ರೀನಿವಾಸಪುರ:ಶ್ರೀನಿವಾಸಪುರ ತಾಲೂಕಿನ ದೊಡ್ಡ ಮತ್ತು ಪ್ರತಿಷ್ಠಿತ ಪಂಚಾಯಿತಿಯಾಗಿ ಹಾಗು ವಾಣಿಜ್ಯ ಕೇಂದ್ರವಾಗಿ ಖ್ಯಾತಿ ಪಡೆದಿರುವ ಗೌವನಪಲ್ಲಿ ಯನ್ನು ಪಟ್ಟಣಪಂಚಾಯಿತಿಯನ್ನಾಗಿಸುವಂತೆ ಒತ್ತಾಯ ಈಗ ಮತ್ತೆ ಮುನ್ನೆಲೆಗೆ ಬಂದಿದೆ ಹಲವಾರು ವರ್ಷಗಳಿಂದ ಗೌವನಪಲ್ಲಿ ಹಾಗು ಯಲ್ದೂರು ಎರಡು ಗ್ರಾಮಗಳನ್ನು ಪಟ್ಟಣ ಪಂಚಾಯನ್ನಾಗಿಸುವಂತೆ ಒತ್ತಾಯಿಸುವಂತ ಕಾರ್ಯ ಹಲವಾರು ವರ್ಷಗಳಿಂದ ಕೇಳಿ ಬಂದಿತ್ತಾದರು ಸ್ಥಳೀಯವಾಗಿ ರಾಜಕೀಯ ಬದ್ದತೆ ಇಲ್ಲದ ಕಾರಣ ನೆನೆಗುದಿಗೆ ಬಿದ್ದಿತ್ತು ರಾಯಲ್ಪಾಡು ಹೋಬಳಿಯ ಗೌವನಪಲ್ಲಿ ಗ್ರಾಮ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ ದಿನದಿನಕ್ಕೆ ದೊಡ್ಡ ಊರಾಗುತ್ತ ಅಕ್ಕಪಕ್ಕದ ಗ್ರಾಮಗಳನ್ನು ಸೇರಿಸಿಕೊಂಡು ಊರು ಬೆಳೆಯುತ್ತಿದೆ ಜೊತೆಗೆ ಭೂ ಲೇವಾದೇವಿ ವ್ಯವಾಹರ ಯಾವುದೆ ಪಟ್ಟಣ ನಗರ ಪ್ರದೇಶಗಳಿಗೂ ಕಡಿಮೆ ಇಲ್ಲದಂತೆ ಬೆಳೆದು ನಿಂತಿದೆ ಗ್ರಾಮದ ಸುತ್ತಲೂ ಮನೆ ನೀವೇಶನಗಳ ಲೇಔಟ್ ಗಳದೆ ಕಾರುಬಾರು ಇಲ್ಲಿನ ರಿಯಲ್ ಎಸ್ಟೇಟ್ ವ್ಯಾಪರವೂ ಜೋರು, ಊರ ತುಂಬಾ ವ್ಯಾಪಾರ ವ್ಯವಹಾರ ವಾಣಿಜ್ಯ ಚಟುವಟಿಕೆಗಳು ಮಂಗಳವಾರದ ಸಂತೆ ಗಡಿಯಾಚಗಿನ ಆಂಧ್ರಪ್ರದೇಶದಲ್ಲೂ ಖ್ಯಾತಿ ಪಡೆದಿದೆ ಇಲ್ಲಿನ ಸಿನಿಮಾ ಮಂದಿರದ ಕಲೆಕ್ಷನ್ ಯಾವ ಪಟ್ಟಣದ ಸಿನಿಮಾ ಮಂದಿರಕ್ಕೂ…
ದಕ್ಷಿಣ ಒಡಿಶಾದ ಕೊರಾಪುಟ್ ಜಿಲ್ಲೆಯಲ್ಲಿದೆ ರಾಮಯಣ ಕಾಲದ ಗುಹಾಂತರ ದೇವಾಲಯ ದಟ್ಟಕಾಡಿನಲ್ಲಿ ಸುಣ್ಣದ ಗುಹೆಯಲ್ಲಿ ಬೃಹದ್ ಲಿಂಗ ನ್ಯೂಜ್ ಡೆಸ್ಕ್:ಹಲವಾರು ವರ್ಷಗಳಿಂದ ವಾಸಿಯಾಗದ ಕಾಯಿಲೆಗಳಿಂದ ಬಳಲುತ್ತಿರುವ ಜನರು ಇಲ್ಲಿನ ದೇವರನ್ನು ಪೂಜಿಸುಸುತ್ತಾರೆ ಮತ್ತು ಗುಹೆಯಲ್ಲಿ ಶಿವಲಿಂಗದ ಸಮೀಪ ಗುಣಮುಖರಾಗುವ ಭರವಸೆಯಲ್ಲಿ ತಿಂಗಳುಗಟ್ಟಲೆ ಉಳಿದುಕೊಂಡು ಗುಣಮುಖರಾಗಿ ವಾಪಸ್ಸು ತೆರಳುತ್ತಾರೆ ವೈದ್ಯಕೀಯ ಲೋಕದ ಅನೇಕ ಕಾಯಿಲೆಗಳನ್ನು ಗುಣಮುಖವಾಗಿಸುವಂತಹ ಭರವಸೆ ಇರುವ ದೇವಾಲಯ ಶ್ರೀ ಗುಪ್ತೇಶ್ವರ ಗುಹಾಂತರ ದೇವಾಲಯ, ದಕ್ಷಿಣ ಒರಿಸ್ಸಾದಲ್ಲಿರುವ ಕೊರಾಪುಟ್ ಬಳಿ ಇದೆ. ಪ್ರಾಕೃತಿಕ ಸೌಂದರ್ಯಗಳ ರಾಶಿ ಸುಂದರವಾದ ಹಚ್ಚ ಹಸಿರು ಬೆಟ್ಟಸಾಲುಗಳ ನಡುವೆ ಹಲವಾರು ಗುಹೆಗಳಿವೆ ಇದರಲ್ಲಿ ಖನಿಜ ಸಂಪತ್ತು ಇರುವ ಸುಣ್ಣದಕಲ್ಲಿನ ಬೆಟ್ಟದಲ್ಲಿ ರಮಣೀಯ ಅರಣ್ಯದ ಕಾನನದ ನಡುವೆ ಕೊಲಾಬ್ ನದಿಯ ಬಳಿ ಸ್ವಯಂಭೂ ನೆಲೆ ನಿಂತಿರುವ ಶಿವಲಿಂಗವನ್ನು ಗುಪ್ತೇಶ್ವರ ಎಂದು ಪೂಜಿಸುತ್ತಾರೆ. ಕಾಳಿದಾಸನ ಮೆಘದೂತ ಮಹಾಕಾವ್ಯದಲ್ಲೂ ಗುಹಾಂತರ ಗುಪ್ತೇಶ್ವರ ಕುರಿತಾಗಿ ಉಲ್ಲಿಖಿಸಲಾಗಿದೆ ಎನ್ನುತ್ತಾರೆ.ಭಗವಾನ್ ಶಿವನ ಅವತಾರವಾದ ಗುಪ್ತೇಶ್ವರ ಸದಾ ನೀರು ತೊಟ್ಟಿಕ್ಕುವ ಗುಹೆಯಲ್ಲಿ ಬೃಹದಕಾರವಾದ ಶಿವಲಿಂಗದ ರೂಪದಲ್ಲಿ ದರ್ಶನ…
ಪೂರ್ಣಗೊಳ್ಳದ ಜಲಜೀವನ್ ಮೀಷನ್ ಕಾಮಗಾರಿ ಗುತ್ತಿಗೆ ದಾರರ ನಿರ್ಲಕ್ಷ್ಯ ಅಧಿಕಾರಿಗಳ ಬೇಜವಾಬ್ದಾರಿ ಕೆಲ ಹಳ್ಳಿಗಳಲ್ಲಿ ರಸ್ತೆ ಆಗೆದು ಜನರ ಒಡಾಟಕ್ಕೆ ತೊಂದರೆ ಶ್ರೀನಿವಾಸಪುರ:ಗ್ರಾಮೀಣ ಜನರ ಮನೆಮನೆಗೂ ನೀರು ಕೊಡುವಂತ ಜಲಜೀವನ್ ಮಿಷನ್ ಯೋಜನೆ ರಾಜ್ಯ ಹಾಗು ಕೇಂದ್ರ ಸರ್ಕಾರಗಳ ಮಹತ್ತರ ಕಾರ್ಯಕ್ರಮ,ಆದರೆ ಕೆಲವೊಂದು ಹಳ್ಳಿಗಳಲ್ಲಿ ಕಾಮಗಾರಿ ಪೂರ್ಣ ಆಗದೆ ಗ್ರಾಮಗಳಲ್ಲಿ ಜನತೆ ಇಲ್ಲದ ತೊಂದರೆ ಅನುಭವಿಸುತ್ತಿದ್ದಾರೆ ಈ ಬಗ್ಗೆ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರನ ನಿಧಾನಗತಿಗೆ ಆಕ್ರೋಶ ವ್ಯಕ್ತಪಡಿಸಿತ್ತಾರೆ. ಭಾರತ ಸರ್ಕಾರ ಹಾಗು ರಾಜ್ಯ ಸರ್ಕಾರದ ಸಹಬಾಗಿತ್ವದಲ್ಲಿ ಅನುಷ್ಟಾನವಾಗುತ್ತಿರುವ ಜಲಜೀವನ್ ಮಿಷನ್ ಯೋಜನೆಯಲ್ಲಿ ಮನೆ-ಮನೆಗೆ ಕೊಳಾಯಿ ಮೂಲಕ ನೀರು ಸರಬರಾಜು ಮಾಡುವಂತ ಅದ್ಭುತವಾದ ಕಾರ್ಯಕ್ರಮವಾಗಿದೆ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತಗೆದುಕೊಂಡು ನಿಲಿ ನಕ್ಷೆ ತಯಾರಿಸಿ ಜನರ ಒಪ್ಪಿಗೆ ಮೇರೆಗೆ ಕಾಮಗಾರಿಯನ್ನು ಪ್ರಾರಂಭಿಸಬೇಕಾಗಿದೆ ಆದೆರೆ ಇದ್ಯಾವುದನ್ನು ಪರಿಗಣಿಸದ ಗುತ್ತಿಗೆ ದಾರರು ತಮ್ಮ ಇಷ್ಟಾನುಸಾರ ಕಾಮಗಾರಿ ಮಾಡುತ್ತ ರಸ್ತೆಗಳನ್ನು ಆಗೆದು ಹಳ್ಳಿಗಳಲ್ಲಿ ಕಾಮಗಾರಿ ಪೂರ್ಣವಾಗಿಲ್ಲ ಇದರ ಪರಿಣಾಮ ಗ್ರಾಮದ ಜನತೆ ಒಡಾಡಲು ಸಮರ್ಪಕವಾದ ರಸ್ತೆ ಇಲ್ಲದೆ ಇಕ್ಕಟ್ಟಿನಲ್ಲಿದ್ದಾರೆ.ಶ್ರೀನಿವಾಸಪುರ…
ಶ್ರೀನಿವಾಸಪುರ:ಶ್ರೀನಿವಾಸಪುರ ತಾಲೂಕು ಯಲ್ದೂರಿನ ಹೊಸಹಳ್ಳಿಯ ಡಾ.ಹೆಚ್.ಎನ್. ಜಗನ್ನಾಥ ರೆಡ್ಡಿ ಅವರನ್ನು ರಾಷ್ಟ್ರೀಯ ಮಟ್ಟದ ಸೂರತ್ಕಲ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಡಳಿತ ಮಂಡಳಿಯ ಸದಸ್ಯರನ್ನಾಗಿ ಕರ್ನಾಟಕ ಸರ್ಕಾರ ನೇಮಕ ಮಾಡಿದೆ.ಸೂರತ್ಕಲ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಯಾವುದಿದು?ಮಂಗಳೂರು ಬಳಿ ಇರುವ ಸೂರತ್ಕಲ್ ನಲ್ಲಿ ಇರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(NITK) ರಾಷ್ಟ್ರೀಯ ಮಟ್ಟದಲ್ಲಿ ಪ್ರತಿಷ್ಠಿತ ತಾಂತ್ರಿಕ ವಿದ್ಯಾಸಂಸ್ಥೆಯಾಗಿದ್ದು.ಮೊದಲಿಗೆ ಕರ್ನಾಟಕ ಪ್ರಾದೇಶಿಕ ಎಂಜಿನಿಯರಿಂಗ್ ಕಾಲೇಜು ಎನ್ನಲಾಗುತ್ತಿದ್ದ ಸಂಸ್ಥೆಯನ್ನು 1960 ರಲ್ಲಿ ಸುರತ್ಕಲ್ ನಲ್ಲಿ ಶ್ರೀನಿವಾಸ ಮಲ್ಯ, ಎಂಬ ವಿದ್ಯಾ ದಾರ್ಶನಿಕ ಪ್ರಮುಖ ಜವಾಬ್ದಾರಿ ಹೊತ್ತು ಸ್ಥಾಪಿಸಿದ್ದರು ಅಗ ಕೇವಲ ಸಿವಿಲ್,ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್ ಮೂರು ಇಂಜಿನಿಯರಿಂಗ್ ಕಾರ್ಯಕ್ರಮಗಳೊಂದಿಗೆ ಆರಂಭವಾದ ಕಾಲೇಜು ನಂತರದಲ್ಲಿ KREC ಸಹಯೋಗದೊಂದಿಗೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಾಗಿ ಬೃಹದಾಕಾರವಾಗಿ ಬೆಳೆದುನಿಂತಿದ್ದು ದೇಶದಲ್ಲಿಯೇ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಅಭೂತಪೂರ್ವ ದಾಖಲೆಗಳನ್ನು ನಿರ್ಮಿಸಿರುವ ಸಂಸ್ಥೆ ಈಗ ಬಿ.ಟೆಕ್ ಹತ್ತು ಕಾರ್ಯಕ್ರಮಗಳು ಎಂ.ಬಿ.ಎ,ಎಂ.ಸಿ.ಎ,ಎಂ.ಎಸ್.ಸಿ ಹಾಗು ಎಂ.ಟೆಕ್ ಸೇರಿದಂತೆ ಸ್ನಾತಕೋತ್ತರ ಪದವಿಯ 31 ಕಾರ್ಯಕ್ರಮಗಳು.ಮತ್ತು ಹದಿನಾಲ್ಕು ವಿಭಾಗಗಳಲ್ಲಿ…
ಶ್ರೀನಿವಾಸಪುರ:ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಒಂದಾದ ಪೋಸ್ಟಾಫಿಸ್ ರಸ್ತೆ@ಜೆ.ಸಿ.ರಸ್ತೆ ಕಾಮಗಾರಿ ಕಳೆದ 7-9 ತಿಂಗಳಿನಿಂದ ಪೂರ್ಣಗೊಳಿಸದೆ ನಿರ್ಲಕ್ಷಿಸಿರುವ ಪರಿಣಾಮ ರಸ್ತೆಯಲ್ಲಿ ಧೂಳು ಏಳುತ್ತಿದೆ.ಹದಗೆಟ್ಟ ರಸ್ತೆಯಲ್ಲಿ ಒಡಾಡಲು ಕಷ್ಟವಾಗುತ್ತಿದ್ದು ಈ ತಕ್ಷಣ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಅಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ನೇತೃತ್ವದಲ್ಲಿ ಆಟೋಚಾಲಕರು,ಅಂಗಡಿ ಮಾಲಿಕರು ಇಂದಿರಾಭವನ್ ವ್ರ್‍ಯ್ತ್ತದಲ್ಲಿ ರಸ್ತೆತಡೆ ಮಾಡಿ ಧರಣಿ ನಡೆಸಿ ಪ್ರತಿಭಟಿಸಿದರು.ಈ ಸಂದರ್ಭದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಸುಬ್ರಮಣಿ ಮಾತನಾಡಿ ರಸ್ತೆ ಮಾಡುತ್ತೇವೆ ಎಂದು ಡಾಂಬರನ್ನು ಕಿತ್ತುಹಾಕಿ ಈಗ್ಗೆ ಏಳೆಂಟು ತಿಂಗಳಾಗಿದೆ ಇದುವರಿಗೂ ಕಾಮಗಾರಿ ಮಾಡಲು ಯಾವುದೆ ಇಲಾಖೆ ಅಧಿಕಾರಿಗಳು ಮುಂದಾಗಿಲ್ಲ,ಜೆಲ್ಲಿ ಹೊರಬಂದಿರುವ ಮಣ್ಣಿನ ರಸ್ತೆಯಲ್ಲಿ ಜನರು ಓಡಾಡಲು ಸಾಧ್ಯವಾಗುತ್ತಿಲ್ಲ ಹಾಳಾದ ರಸ್ತೆಯಲ್ಲಿ ವಾಹನಗಳು ಓಡಾಡಿದರೆ ಮನುಷ್ಯ ಕಾಣದಷ್ಟು ದಟ್ಟವಾದ ಮಣ್ಣಿನ ಧೂಳು ಏಳುತ್ತದೆ ಇದರಿಂದಾಗಿ ಇಲ್ಲಿನ ಅಂಗಡಿ ಮಾಲಿಕರ ಬಾಯಿ ಮೂಗಿಗೆ ಧೂಳು ಸೇರಿ ಕಫಾ ದಂತ ಅಲರ್ಜಿಕ್ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಆರೋಪಿಸಿದರು. ರಸ್ತೆ ವಿಚಾರದಲ್ಲಿ ಅಧಿಕಾರಿಗಳು ಹಾಗು ಗುತ್ತಿಗೆದಾರರು ವಿಳಂಬ ಧೊರಣೆ…