Author: Srinivas_Murthy

ಶ್ರೀನಿವಾಸಪುರ: ತಾಲೂಕಿನಲ್ಲಿ ಹೊಸ ರಾಜಕಿಯ ಭಾಷ್ಯ ಬರೆಯಲು ಮುಂದಾಗಿ ಕಳೆದ ಒಂದು ವರ್ಷದಿಂದ ಪಕ್ಷೇತರ ಅಭ್ಯರ್ಥಿಯಂದು ಕ್ಷೇತ್ರದಾದ್ಯಂತ ಸುತ್ತಾಡಿ ಪರಿಚಿತರಾಗಿರುವ ಗುಂಜೂರು ಶ್ರೀನಿವಾಸರೆಡ್ದಿ 2023ರ ವಿಧಾನಸಭಾ ಘೋಷಣೆಯಾದ ಮರು ದಿನವೆ ಬಿಜೆಪಿ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.ಗುಂಜೂರು ಶ್ರೀನಿವಾಸರೆಡ್ದಿ ಅವರ ಆಪ್ತ ವಲಯದ ಮುಖಂಡರು ಹೇಳುವಂತೆ ದಿನಾಂಕ 30/3/23 ಗುರುವಾರ ಶ್ರೀರಾಮನವಮಿಯಂದು ಶ್ರೀನಿವಾಸರೆಡ್ದಿ ಬಿಜೆಪಿಗೆ(BJP) ಸೇರಲಿದ್ದಾರಂತೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವುದಾಗಿ ಹೇಳುತ್ತಾರೆ.ಬೆಂಗಳೂರು ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನಾಥ ಭವನದಲ್ಲಿ ಗುರುವಾರ ಮಧ್ಯಾಹಃ ವಿಧಾನಪರಿಷತ್ ಮುಖ್ಯ ಸಚೇತಕ ವೈ.ಎ.ನಾರಯಣಸ್ವಾಮಿ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ತಮ್ಮ ಅಪಾರ ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.ತಮ್ಮ ಬೆಂಬಲಿಗರನ್ನು ಬೆಂಗಳೂರಿಗೆ ಕರೆದೊಯ್ಯಲು ಗುಂಜೂರು ಶ್ರೀನಿವಾಸರೆಡ್ದಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಬಸ್ಸುಗಳನ್ನು ಮತ್ತು ಟಾಟಾ ಸುಮೊಗಳನ್ನು ಬಾಡಿಗೆಗೆ ನಿಗದಿಪಡೆಸಿರುವುದಾಗಿ ಹೇಳಲಾಗುತ್ತಿದೆ.

Read More

ಶ್ರೀನಿವಾಸಪುರ:ಶ್ರೀನಿವಾಸಪುರ ಪಟ್ಟಣದ ಸರೋಜಿನಿರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಮಠವನ್ನು ಸಂಪೂರ್ಣವಾಗಿ ತೆರವುಗೊಳಿಸಿ ಸುಮಾರು 50 ಲಕ್ಷ ವೆಚ್ಚದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠವನ್ನು ನಿರ್ಮಿಸಿ ರಾಯರ ಮೃತ್ತಿಕಾ ಬೃಂದಾವನವನ್ನು ಪುನರ್ ಪ್ರತಿಷ್ಠಾಪಿಸಲಾಗಿದೆ.ವಿದ್ಯತ್ ಕಂಟ್ರಾಕ್ಟರ್ ಬಾಬುರೆಡ್ಡಿ ಉಪಾದ್ಯಾಯ ಪದ್ಮನಾಭ್ ಕುಟುಂಬದವರು ಪ್ರಮುಖದಾನಿಗಳಾಗಿ ನಿರ್ಮಾಣ ಮಾಡಿರುವಂತರಾಯರ ಮಠದಲ್ಲಿ ರಾಯರ ಮೃತ್ತಿಕಾ ಬೃಂದಾವನ,ಶ್ರೀನಿವಾಸ ದೇವರ, ಮುಖ್ಯ ಪ್ರಾಣದೇವರ,ಪುನರ್ ಪ್ರತಿಷ್ಠಾಪನೆ ಮಾಡಲಾಗಿದೆ ಇಲ್ಲಿ ಹಿಂದೆ ಮುಖ್ಯಪ್ರಾಣದೇವರು ಶ್ರೀ ಅಂಜನೇಯ ಸ್ವಾಮಿ ದಕ್ಷಿಣಾಮುಖವಾಗಿ ಸಣ್ಣ ದೇವಾಲಯ ಇದ್ದು ಈಗ್ಗೆ 40-50 ವರ್ಷಗಳ ಹಿಂದೆ ಸುಖತೀರ್ಥಾಚಾರ್ ಕಾಲದಲ್ಲಿ ಅಲ್ಲಿ ನಿತ್ಯ ಪೂಜೆ ಕಾರ್ಯಕ್ರಮಗಳು ನಡೆಯುತಿತ್ತು ದಕ್ಷಿಣಾಮುಖವಾಗಿರುವಂತ ಅಂಜನೇಯನ ಪೂಜೆ ಸಲ್ಲಿಸಿದರೆ ಗ್ರಹ ದೋಷಗಳು ನಿವಾರಣೆಯಾಗುತ್ತದೆ ಎಂಬ ಪ್ರತಿತಿ ಸ್ಥಳೀಯರಲ್ಲಿ ಇತ್ತು ಇತ್ತಿಚಿಗೆ ಸುಖತೀರ್ಥಾಚಾರ್ ಕುಟುಂಬದ ಶ್ರೀನಾಥ್ ಭಕ್ತಾದಿಗಳ ನೆರವಿನಿಂದ ರಾಘವೇಂದ್ರ ರಾಯರ ಮೃತ್ತಿಕಾ ಬೃಂದಾವನವನ್ನು ಪ್ರತಿಷ್ಠಾಪಿಸಿ ಪೂಜಾ ಕಾರ್ಯಗಳನ್ನು ನೇರವೇರಿಸಲಾಗುತಿತ್ತು ಅಲ್ಲಿ ಶ್ರೀ ಅಂಜನೇಯ ಸ್ವಾಮಿ ದಕ್ಷಿಣಾಮುಖವಾಗಿ,ರಾಯರ ಬೃಂದಾವನ ಪೂರ್ವಾಭಿಮುಖವಾಗಿ ಪೂಜಾಕಾರ್ಯಕರಮಗಳನ್ನು ನಡೆಸಲಾಗುತಿತ್ತು ಈ ಬಗ್ಗೆ ವಾಸ್ತು ತಙ್ಞರ ಸೂಚನೆಯಂತೆ…

Read More

ಶ್ರೀನಿವಾಸಪುರ: ಚುನಾವಣೆ ಹತ್ತಿರ ಇರುವಾಗ ಎಂ.ಜಿ. ರಸ್ತೆಯಲ್ಲಿ ಕೆ.ಸಿ. ವ್ಯಾಲಿ ಪೈಪ್ ಲೈನ್‌ ಕಾಮಗಾರಿಯನ್ನು ತರಾತುರಿಯಲ್ಲಿ ಮಾಡುತ್ತಿರುವುದು ನೋಡಿದರೆ ಇದೊಂದು ಚುನಾವಣೆ ಗಿಮಿಕ್ ಗಾಗಿ ಕೆಲಸ ಮಾಡಲಾಗುತ್ತಿದೆ ಎಂದು ಶಾಸಕ ರಮೇಶ್‌ಕುಮಾರ್ ವಿರುದ್ದ ಜೆ.ಡಿ.ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವಿ. ಶಿವಾರೆಡ್ಡಿ ಆರೋಪಸಿದರು.ಅವರು ಜೆ.ಡಿ.ಎಸ್ ಕಛೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಪಟ್ಟಣದ ರಸ್ತೆಗಳನೆಲ್ಲ ಅಗೆದು ಹಾಳು ಮಾಡಿದ್ದಾರೆ ಆತುರ ಆತುರವಾಗಿ ಮಾಡುತ್ತಿರುವ ಕಾಮಗಾರಿಯಿಂದ ಪಟ್ಟಣದಲ್ಲಿ ಸಂಚಾರಿ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿ ಹೋಗಿದೆ.ಕನಿಷ್ಠ ಸಾರ್ವಜನಿಕರು ಒಡಾಡಲು ಸಾದ್ಯವಾಗದ ಪರಿಸ್ಥಿತಿ ನಿರ್ಮಿಸಿದ್ದಿರ,ಎಂ.ಜಿ. ರಸ್ತೆಯಲ್ಲಿ ಕೆ.ಸಿ. ವ್ಯಾಲಿ ಪೈಪ್ ಲೈನ್‌ ಕಾಮಗಾರಿ ಮಾಡುವ ಅವಶ್ಯಕತೆ ಏನಿತ್ತು ಪರ್ಯಾಯ ಮಾರ್ಗವಾಗಿ ಪಟ್ಟಣದ ಹೊರವಲಯದಲ್ಲಿ ಪೈಪ್ ಲೈನ್ ಕಾಮಗಾರಿ ಮಾಡಬಹುದಾಗಿತ್ತಲ್ವಾ ಶಾಸಕರೆ ಚುನಾವಣಾ ಗಿಮಿಕ್ ಗಾಗಿ ಪ್ರತಿಷ್ಟೆಗೆ ಬಿದ್ದು ಪಟ್ಟಣದಲ್ಲಿ ಪೈಪ್ ಲೈನ್ ಕಾಮಗಾರಿ ಮಾಡುವ ಮೂಲಕ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದಾರೆ ಎಂದು ದೂರಿದರು.ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಿ. ರಾಜಣ್ಣ ಮಾತನಾಡಿ, ಶಾಸಕ ರಮೇಶ್‌ಕುಮಾರ್‌ ಅವಧಿಯಲ್ಲಿ ತಾಲ್ಲೂಕಿನ ಅಭಿವೃದ್ದಿ…

Read More

ಶ್ರೀನಿವಾಸಪುರ:ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ತಮ್ಮ ಪಕ್ಷಗಳನ್ನು ತೋರೆದು ಗುಂಜೂರುಶ್ರೀನಿವಾಸರೆಡ್ಡಿ ಬಣಕ್ಕೆ ಸೇರ್ಪಡೆಯಾಗಿದ್ದಾರೆ.ತಾಲೂಕಿನ ಕಸಬಾ ಹೋಬಳಿ ಜೆ.ತಿಮ್ಮಸಂದ್ರ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರಾದ ಸುರೇಶ್,ನಾಗರಾಜು,ಚೌಡರೆಡ್ಡಿ,ನಾರಯಣಸ್ವಾಮಿ,ಶ್ರೀನಿವಾಸ್,ಇ.ಕೆ.ವೆಂಕಟರೆಡ್ಡಿ,ವೆಂಕಟೇಶ್ ಸೇರಿದಂತೆ ಹಲವರು ಗುಂಜೂರುಶ್ರೀನಿವಾಸರೆಡ್ಡಿ ಬಣಕ್ಕೆ ಸೇರ್ಪಡೆಯಾಗಿರುತ್ತಾರೆ.ಈ ಸಂದರ್ಬದಲ್ಲಿ ಮಾತನಾಡಿದ ಗುಂಜೂರುಶ್ರೀನಿವಾಸರೆಡ್ಡಿ ತಾಲೂಕಿನ ಅಭಿವೃದ್ಧಿಯನ್ನು ನಿರ್ಲಕ್ಷಿಸಿರುವಂತ ಇಲ್ಲಿನ ಅಧಿಕಾರರೂಡ ರಾಜಕೀಯ ಮುಖಂಡರ ನಡವಳಿಕೆಗೆ ಬೆಸೆತ್ತ ಜನ ತಮ್ಮ ಬಣಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಯಾರೆ ತಮ್ಮ ಬಣಕ್ಕೆ ಸೇರ್ಪಡೆಯಾದರು ಅವರನ್ನು ಅತ್ಯಂತ ಗೌರವದಿಂದ ನಡೆಸಿಕೊಳ್ಳುತ್ತೇವೆ ಎಂದರು.ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರವನ್ನು ಮಾದರಿ ಅಭಿವೃದ್ಧಿ ಕ್ಷೇತ್ರವನ್ನಾಗಿ ಮಾಡುವ ಗುರಿ ಹೊಂದಿರುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಗುಂಜೂರುಶ್ರೀನಿವಾಸರೆಡ್ಡಿ ಬಣದ ಮುಖಂಡರಾದ ಪೆದ್ದರೆಡ್ಡಿರಾಜೇಂದ್ರಪ್ರಸಾದ್,ಪಾಳ್ಯಂಲಕ್ಷ್ಮಣರೆಡ್ಡಿ,ರಾಜಶೇಖರೆಡ್ದಿ,ಅಹಿಂದ ಮುಖಂಡ ಶ್ರೀರಾಮ್, ಗೌವನಪಲ್ಲಿಶೇಖರ್ ಮುಂತಾದವರು ಇದ್ದರು.

Read More

ಶ್ರೀನಿವಾಸಪುರ:ಕರೋನಾ ಸಂಕಷ್ಟದಲ್ಲಿ ಜನತೆ ನರಳುತ್ತಿದ್ದರೆ ಕೇಂದ್ರ ಸರ್ಕಾರ ಜನರಿಗೆ ಮೊಂಬತ್ತಿ ಬೆಳಗಿಸಿ ದೀಪ ಹಚ್ಚಿಡಿ ಎಂದು ಯಾಮಾರಿಸಿದರು ಎಂದು ಮೋದಿ ಸರ್ಕಾರದ ವಿರುದ್ದ ಶಾಸಕ ರಮೇಶ್ ಕುಮಾರ್ ತೀವ್ರ ವಾಗ್ದಾಳಿ ನಡೆಸಿದರು ಅವರು ವಿವಿಧ ಮುಖಂಡರು ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ ಕರೋನಾ ಸಂದರ್ಭದಲ್ಲಿ ಪೋಷಕರನ್ನು ಕಳೆದುಕೊಂಡು ಎಷ್ಟೊ ಮಕ್ಕಳು ಅನಾಥರಾಗಿದ್ದಾರೆ ಮಕ್ಕಳನ್ನು ಕಳೆದುಕೊಂಡ ಎಷ್ಟೊ ಪೋಷಕರು ಬೀದಿಪಾಲಾಗಿದ್ದರೆ ಚಾಮರಾಜನಗದ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಮರ್ಪಕವಾಗಿ ಸರಬರಾಜು ಮಾಡಲಾಗದ ಬಿಜೆಪಿ ಸರ್ಕಾರದ ಹೊಣಗೇಡಿತನದಿಂದ ಮೂವತ್ತಕ್ಕು ಹೆಚ್ಚು ವಗಳು ಪ್ರಾಣಬಿಟ್ಟಿದೆ ಎಂದು ತೀವ್ರ ಧಾಟಿಯಲ್ಲಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಆರೋಪಿಸಿದ ಅವರು ಅದ್ಯಾರೋ ಆರೋಗ್ಯ ಮಂತ್ರಿಯಂತೆ ನನ್ನನ್ನು ಸೋಲಿಸಲು ನೂರು ಬಾರಿ ಶ್ರೀನಿವಾಸಪುರಕ್ಕೆ ಬರ್ತಾನಂತೆ ಈಗ ಒಂದು ಬಾರಿ ಬರಲಿ ನೋಡೋಣ ಎಂದ ಅವರು ಸ್ವಾರ್ಥ ರಾಜಕೀಯಕ್ಕೆ ಚುನಾವಣೆಗೋಸ್ಕರ ಜನರನ್ನು ರೊಚ್ಚಿಗೇಬ್ಬಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.ರಾಮನ ಹೇಸರಿನಲ್ಲಿ ರಾಜಕೀಯ ಮಾಡುವಂತ ಬಿಜೆಪಿಗರೆ ನಿಮ್ಮ ರಾಮ ಯಾರು ತೋಟರಾಮುಡ,ದೊಂಗರಾಮುಡ,ಅಗ್ಗಿರಾಮುಡ ಆಯೋದ್ಯರಾಮನ ಯಾರು…

Read More

ಬೆಂಗಳೂರು: ಬಹು ನಿರೀಕ್ಷಿತ ನಮ್ಮ ಮೆಟ್ರೋ ನೆಟ್‌ವರ್ಕ್ ಅನ್ನು ಬೆಂಗಳೂರಿನ ಪ್ರತಿಷ್ಠಿತ ಐಟಿ ಕಾರಿಡಾರ್ ವೈಟ್‌ಫೀಲ್ಡ್‌ ವರಿಗೂ ವಿಸ್ತರಿಸಿರುವ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಉದ್ಘಾಟಿಸಿದರು.ಪ್ರಧಾನಿ ನರೇಂದ್ರ ಮೋದಿ ವೈಟ್‌ಫೀಲ್ಡ್‌- ಕೆಆರ್‌ ಪುರಂ ಮೆಟ್ರೋ ಮಾರ್ಗವನ್ನು ಉದ್ಘಾಟನೆ ಮಾಡಿದ್ದಾರೆ. ಸುಮಾರು 13.71 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ಇದಾಗಿದ್ದು ಇದರಿಂದ ಐಟಿಬಿಟಿ ನೌಕರರಿಗೆ ಹೆಚ್ಚಿನ ಖುಷಿಯಾಗಿದೆ.ಮೆಟ್ರೋ ಉದ್ಘಾಟನೆ ಬಳಿಕ ನರೇಂದ್ರ ಮೋದಿಯವರು ಅದೇ ಮೆಟ್ರೋದಲ್ಲಿ ಪ್ರಯಾಣಿಸಿದರು. ಮೋದಿ ಜೊತೆ ರಾಜ್ಯಪಾಲ ಗೆಹ್ಲೋಟ್, ಸಿಎಂ ಬೊಮ್ಮಾಯಿ ಸಂಸದ ಪಿ.ಸಿ.ಮೋಹನ್ ಸಹ ಪ್ರಯಾಣಿಸಿದರು.ಪ್ರಯಾಣ ಸಂದರ್ಭದಲ್ಲಿ ಮೋದಿಯವರು ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದರು.ಮೆಟ್ರೋದಲ್ಲಿ ಸಂಚಾರ ನಡೆಸಿದ ಮೋದಿ ಅವರು ಮೆಟ್ರೋ ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿದರು. 13.71 ಕಿಲೋ ಮೀಟರ್‌ ಉದ್ದದ ನೇರಳೆ ಬಣ್ಣದ ಈ ಮಾರ್ಗದಲ್ಲಿ ಒಟ್ಟು 12 ಸ್ಟೇಷನ್‌ಗಳು ಬರಲಿವೆ. ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದರಿಂದ ಕೆ.ಆರ್‌.ಪುರ, ವೈಟ್‌ ಫೀಲ್ಡ್‌ ಭಾಗದಲ್ಲಿ ಆಗ್ತಿದ್ದ ಸಂಚಾರ ದಟ್ಟಣೆ ಸ್ವಲ್ಪಮಟ್ಟಿಗೆ ನಿವಾರಣೆಯಾಗಲಿದೆ . ವೈಟ್​​ಫೀಲ್ಡ್​​ನಲ್ಲಿ…

Read More

ಶ್ರೀನಿವಾಸಪುರ: ಕೆರೆಗಳಿಗೆ ನೀರು ತುಂಬಲು ರೂಪಿಸಿರುವ ಕೆ.ಸಿ.ವ್ಯಾಲಿ ಯೋಜನೆಯ ಪೈಪ್ ಲೈನ್ ಕಾಮಗಾರಿ ಶ್ರೀನಿವಾಸಪುರ ಪಟ್ಟಣದಲ್ಲಿ ಕಳೆದ ಎರಡು ತಿಂಗಳಿನಿಂದ ನಡೆಯುತ್ತಿದ್ದು ಈ ಸಂಬಂದ ಹಳೆಯ ಕೆ.ಎಸ್.ಅರ್.ಟಿ.ಸಿ ಬಸ್ ನಿಲ್ದಾಣದಿಂದ ತಾಲೂಕು ಕಛೆರಿ ಮುಂಬಾಗದ ರಸ್ತೆಯಲ್ಲಿ ಹಾದು ಹೋಗುವಂತೆ ಕಾಮಗಾರಿ ಅರಂಭವಾಗಿದ್ದು ಹಿಂದಿನ ದಿನ ರಾತ್ರಿ ರಸ್ತೆ ಅಗೆದು ಮಣ್ಣು ಎತ್ತಿ ಪೈಪ್ ಲೈನ್ ಅಳವಡಿಸಿ ಮಣ್ಣು ಸಹ ತುಂಬಿದ್ದಾರೆ, ಕಾಮಗಾರಿ ಮುಗಿದು ಗ್ಯಾಪ್ ನೀಡದೆ ಅದೇ ರಸ್ತೆಯಲ್ಲಿ ಎಂದಿನಂತೆ ವಾಹನ ಸಂಚರಿಸಲು ಅನವು ಮಾಡಿಕೊಟ್ಟ ಹಿನ್ನಲೆಯಲ್ಲಿ ಇಂದು ಮಧ್ಯಾನಃ ಇಟ್ಟಿಗೆ ಲೊಡ್ ಹೊತ್ತು ಬಂದ ಬಾರಿಗಾತ್ರದ ಲಾರಿ ಇಂದಿರಾ ಕ್ಯಾಂಟಿನ್ ಮುಂಬಾಗದಲ್ಲಿ ಕಚ್ಚಾ ಮಣ್ಣಲ್ಲಿ ಕುಸದಿದೆ ಲಾರಿಯ ಹಿಂದಿನ ಚಕ್ರಗಳು ಮಣ್ಣಲ್ಲಿ ಹೂತು ಹೋಗಿ ಇಟ್ಟಿಗೆ ಲೋಡ್ ಸಮೇತ ಲಾರಿ ಅರ್ದ ಭಾಗ ಪಕ್ಕದ ರಸ್ತೆ ವಿಭಜಕದ ಮೇಲೆ ಉರಳಿದೆ ಇದರಿಂದ ಹಿಂದೆ ಬರುತ್ತಿದ್ದ ವಾಹನಗಳು ಸರಣಿ ಅಪಘಾತಕ್ಕೆ ಒಳಗಾಗಿದ್ದು ಯಾವುದೆ ಪ್ರಾಣಪಯ ಆಗಿಲ್ಲ ಆದರೆ ಕಚ್ಚಾ ಮಣ್ಣು ತುಂಬಿದ…

Read More

ಶ್ರೀನಿವಾಸಪುರ:ನೂತನ ಸಂವತ್ಸರದ ಯುಗಾದಿ ಹೊಸವರ್ಷದ ಅಂಗವಾಗಿ ಪಟ್ಟಣದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ಸಮೇತ ಊರ ದೇವರುಗಳ ಜನಜಾತ್ರೆ ಉತ್ಸವ ಅದ್ದೂರಿಯಾಗಿ ನಡೆಸಲಾಯಿತು. ಇದರ ಅಂಗವಾಗಿ ಎರಡನೇ ವರ್ಷದ ಹೂವಿನ ಕರಗ ಮಹೋತ್ಸವ ಸಹ ಆಯೋಜಿಸಲಾಗಿತ್ತು. ಪಟ್ಟಣದ ಗ್ರಾಮದೇವತೆ ಶ್ರೀ ಚೌಡೇಶ್ವರಿ,ಶ್ರೀ ಲಕ್ಷ್ಮೀನೃಸಿಂಹ, ಶ್ರೀ ಉಗ್ರ ನೃಸಿಂಹ, ಶ್ರೀ ನಗರೇಶ್ವರ,ಶ್ರೀ ವಾಸವಿ ಕನ್ಯಾಕಾ ಪರಮೇಶ್ವರಿ,ಶ್ರೀ ತಿರುಮಲರಾಯ,ಶ್ರೀ ಗಂಗಮ್ಮ,ಗಟ್ಟಹಳ್ಳಿ ಶ್ರೀ ನಡೀರಮ್ಮ,ಗುಂಡಮನತ್ತ ಶ್ರೀ ಅಷ್ಟಮೂರ್ತಮ್ಮ, ಶ್ರೀ ರೇಣುಕಾಎಲ್ಲಮ್ಮ, ಶ್ರೀಪೀಲೇಕಮ್ಮ,ಶ್ರೀ ಸಪ್ತಮಾತೃಕೇಯರ ದೇವರುಗಳ ಹೂವಿನಿಂದ ಅಲಂಕೃತಗೊಂಡ ವಿವಿಧ ವಿನ್ಯಾಸಗಳ ಆಕರ್ಷಕ ಪಲ್ಲಕ್ಕಿ ರಥಗಳಲ್ಲಿ ದೇವರುಗಳನ್ನು ಕೂರಿಸಿ ಪ್ರಾರಂಬವಾದ ಶೋಭಾ ಯಾತ್ರೆ ಯುಗಾದಿಯ ಸಂಜೆಯಿಂದ ಪಟ್ಟಣದಾದ್ಯಂತ ಸಂಚರಿಸಿ ಮಾರನೆ ದಿನ ಬೆಳಗಿನ ಜಾವದವರಿಗೂ ನಡೆಯಿತು.ಪ್ರತಿ ಮನೆಯಿಂದಲೂ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ದೇವರಿಗೆ ಹೂವು ಕಾಯಿ ಕೊಟ್ಟು ಪೂಜೆ ಮಾಡಿಸಿದರು ಮುತೈದೆಯರು ಚೌಡೇಶ್ವರಿ ದೇವಿಗೆ ಅರಿಷಿಣ, ಕುಂಕುಮ, ಬಳೆ,ಸಿರೆ ಕುಪುಸ ಇಟ್ಟು ಮಡಿಲಕ್ಕಿ ಕಟ್ಟಿ ಆರತಿ ಬೆಳಗಿದರು.ಹತ್ತಾರು ದೇವರ ಪಲ್ಲಕ್ಕಿಗಳು ಜಗಮಗಿಸುವ…

Read More

ಶ್ರೀನಿವಾಸಪುರ: ಈ ತಿಂಗಳ ಮೂರನೇ ಶನಿವಾರ ಮಾರ್ಚ್ 18 ರಂದು ನಡೆಯಬೇಕಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ತಾಲೂಕಿನ ಯಲ್ದೂರು ಹೋಬಳಿ ಕೊಳತೂರು ಗ್ರಾಮದಲ್ಲಿ 20 ರಂದು ಸೋಮವಾರ ನಡೆಸಲಾಯಿತು.ತಾಲ್ಲೂಕು ಆಡಳಿತ ತಾಲೂಕು ಕಂದಾಯ ಇಲಾಖೆ ತಾಲ್ಲೂಕು ಪಂಚಾಯತಿ ಸಹಯೋಗದೊಂದಿಗೆ ತಾಲೂಕಿನ ವಿವಿಧ ಇಲಾಖೆಗಳೊಂದಿಗೆ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಮುಂಬರುವ ವಿಧಾನಸಭೆ ಚುನಾವಣಾ ತುರ್ತು ಕೆಲಸಗಳ ನಿಮಿತ್ತ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ವೆಂಕಟರಾಜು ಆದೇಶದ ಮೇರೆಗೆ ಮಾರ್ಚ್ 18 ರಂದು ರದ್ದು ಮಾಡಿ ಸೋಮವಾರ ನಡೆಸಲಾಯಿತು.ಈ ಸಂದರ್ಭದಲ್ಲಿ ಇದೊಂದು ಅಭೂತಪೂರ್ವ ಕಾರ್ಯಕ್ರಮವಾಗಿದ್ದು ಇಂದು ಕೊಳತೂರು ಗ್ರಾಮದಲ್ಲಿ ಕಾರ್ಯಕ್ರಮ ನಡೆಯುತ್ತಿದೆ ಈ ಭಾಗದ ಜನತೆ ಇದರ ಸದುಪಯೋಗ ಪಡಿಸಿಕೊಂಡು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆ ಹರಿಸಿಕೊಳ್ಳಿ ಎಂದು ತಹಶೀಲ್ದಾರ್ ಶೀರಿನ ತಾಜ್ ಹೇಳಿದರು.ತಾಲೂಕು ಪಂಚಾಯಿತಿ ಇವೊ ಕೃಷ್ಣಪ್ಪ ಮಾತನಾಡಿ ಇದೊಂದು ಅಭೂತ ಪೂರ್ವಕಾರ್ಯಕ್ರಮವಾಗಿದ್ದು ಗ್ರಾಮೀಣ ಜನರ ಮನೆಬಾಗಿಲ ಬಳಿಗೆ ಆಡಳಿತ ತಂದಿರುವ ಕಾರ್ಯಕ್ರಮವಾಗಿದೆ ಇದರಿಂದ ಹಲವಾರು ಜನರಿಗೆ ಅನಕೂಲ ಆಗಿದೆ ಎಂದ…

Read More

ಶ್ರೀನಿವಾಸಪುರ: ಶ್ರೀನಿವಾಸಪುರ ತಾಲೂಕು ಯಾವುದೆ ರಿತೀಯಲ್ಲಿ ಅಭಿವೃದ್ಧಿ ಮಾಡಿಲ್ಲ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಆರೋಪಿಸಿದರು.ಅವರು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿ ಇಂದ್ರಾಣಿರೆಡ್ದಿ ಪರ ಮತ ಯಾಚನೆ ಹಾಗೂ ದೇಣಿಗೆ ಸಂಗ್ರಹ ಕಾರ್ಯಕ್ರಮ ನಡೆಸಿ ಮಾತನಾಡಿದರು. ಇಲ್ಲಿ ಇಬ್ಬರು ವ್ಯಕ್ತಿಗಳು ತಮ್ಮ ಅನಕೂಲಕ್ಕೆ ತಕ್ಕಂತೆ ರಾಜಕಾರಣ ಮಾಡಿಕೊಂಡು ಬರುತ್ತಿದ್ದಾರೆ ಯುವಕರಿಗೆ ಉದ್ಯೋಗ ಅವಕಾಶ ಕಲ್ಪಿಸುವ ಯಾವುದೆ ವಾತವರಣ ಇಲ್ಲ ಎಂದು ದೂರಿದರು.ಇಲ್ಲಿನ ಪ್ರಭಾವಿ ಶಾಸಕರು ಎರಡು ಬಾರಿ ಸ್ಪೀಕರ್ ಆಗಿದ್ದರು ಮಂತ್ರಿ ಸಹ ಆಗಿದ್ದರು ಮೇಧಾವಿಯಂತೆ ಭಾಷಣ ಮಾಡುವುದರಲ್ಲಿ ಭಾರಿ ಫೇಮಸ್ಸು ಆದರೆ ತಮ್ಮ ಅನಕೂಲಕ್ಕೆ ತಕ್ಕಂತೆ ಆಡಳಿತ ನಡೆಸಿದ್ದಾರೆ ಎಂದರು.ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದಾದ್ಯಂತ ಸರ್ಕಾರಿ ಅಧಿಕಾರಿಗಳು ಲಂಚ ಮತ್ತು ಭ್ರಷ್ಟಾಚಾರ ನಡೆಸುವುದನ್ನು ತಡೆಯುತ್ತೇವೆ ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್ ಕಾಲೇಜು ತಾಲೂಕಿಗೊಂದು ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ, ಪ್ರತಿ ತಾಲೂಕಿನಲ್ಲೂ ಸೋಲಾರ್ ಪಾರ್ಕ್ ಮಾಡಿ ಸ್ಥಳೀಯವಾಗಿ ವಿದ್ಯತ್ ಉತ್ಪಾದನೆ ಮಾಡುತ್ತೇವೆ ಜನ ಸಾಮನ್ಯರು ಬದುಕಲು…

Read More