Author: Srinivas_Murthy

ಕೋಲಾರ:ಕೋಲಾರ ಜಿಲ್ಲಾ ಪತ್ರಕರತರ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಕೋಲಾರ ಜಿಲ್ಲಾ ಹಿರಿಯ ಪತ್ರಕರ್ತ ಉದಯವಾಣಿ ವರದಿಗಾರರಾದ ಕೆ.ಎಸ್.ಗಣೇಶ್ ಸತತ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿ ಹ್ಯಾಟ್ರಿಕ್ ಸಾಧಿಸಿದ್ದಾರೆ.ಹಿರಿಯ ಪತ್ರಕರ್ತ ಸಹಕಾರಿ ಧುರೀಣ ಅಬ್ಬಣ್ಣಿಶಂಕರ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ.ಕೋಲಾರ ನಗರದ ಅಂತರ ಗಂಗೆ ರಸ್ತೆಯಲ್ಲಿರುವ ಪತ್ರಕರ್ತರ ಭವನದಲ್ಲಿ ನಡೆದ ಚುನಾವಣೆ ಸಭೆಯಲ್ಲಿ ಚುನಾವಣಾಧಿಕಾರಿ ಶಿವಶಂಕರ್ ಭಾಗವಹಿಸಿದ್ದರು. ಕೋಲಾರ ಜಿಲ್ಲಾ ಪತ್ರಕರತರ ವಿವಿದೋದ್ದೇಶ ಸಹಕಾರ ಸಂಘಕ್ಕೆ ಒಟ್ಟು ಹತ್ತೊಂಬತ್ತು ಮಂದಿ ನಿರ್ದೇಶಕರು ಆಯ್ಕೆಯಾಗಿದ್ದು ಕೆ.ಎಸ್.ಗಣೇಶ್,ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್,ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿಗೋವಿಂದಗೌಡ,ಅಬ್ಬಣಿಶಂಕರ್,ಮುರಧರ್,ಮುನಿರಾಜು,ಸದಾನಂದ,ಎ.ಜಿ.ಸುರೇಶ್ ಕುಮಾರ್,ರಾಜೇಂದ್ರಸಿಂಹ, ಎಸ್.ರವಿಕುಮಾರ್,ಪಿ.ಎನ್.ದಾಸ್,ಎಂ.ನಾಗರಾಜಯ್ಯ,ಸಿ.ವಿ.ನಾಗರಾಜ್,ಹೆಚ್.ಎಲ್.ಸುರೇಶ್,ಎಂ.ಸೋಮಶೇಕರ್,ವಿ.ಈಶ್ವರ್,ಎಲ್.ರೂಪೇಶ್,ಎಂ.ಲಕ್ಷ್ಮಿ,ಕೆ.ಗೋಪಿಕಾ ಮಲ್ಲೇಶ್ ಆವಿರೋಧವಾಗಿ ಆಯ್ಕೆಯಾಗಿರುತ್ತಾರೆ.2007 ರಲ್ಲಿ ಅರಂಭವಾದ ಪತ್ರಕರತರ ವಿವಿದೋದ್ದೇಶ ಸಹಕಾರ ಸಂಘದಲ್ಲಿ 300 ಕ್ಕೂ ಹೆಚ್ಚು ಷೇರುದಾರ ಸದಸ್ಯರಿದ್ದಾರೆ

Read More

ಶ್ರೀನಿವಾಸಪುರ:ಪ್ರಿಯಕರನ ಜೊತೆ ಸುತ್ತಾಡಲು ಸುಣ್ಣಕಲ್ಲು ಅರಣ್ಯ ಪ್ರದೇಶಕ್ಕೆ ಬಂದಿದ್ದ ಆಂಧ್ರದ ಯುವತಿ ಅನುಮಾಸ್ಪದ ರೀತಿಯಲ್ಲಿ ನೇಣು ಬೀಗಿದ ಸ್ಥಿತಿಯಲ್ಲಿ ಮೃತ ಪಟ್ಟಿರುವ ಘಟನೆ ಇಂದು ಶುಕ್ರವಾರ ಸಂಜೆ ನಡೆದಿದೆ.ಅನುಮಾನಸ್ಪದವಾಗಿ ಮೃತ ಪಟ್ಟ ಯುವತಿಯನ್ನು ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆ ಪೀಲೇರು ಪಟ್ಟಣದ ಹರ್ಷಿತ(20) ಎಂದು ಗುರುತಿಸಲಾಗಿದೆ.ಆಂಧ್ರದ ಪೀಲೇರು ಪಟ್ಟಣದ ನಿವಾಸಿಯಾದ ಹರ್ಷಿತ ಹಾಗು ಅಕೆಯ ಪ್ರಿಯಕರ ಕಲಿಕಿರಿಯ ವಾಡೆವಾಂಡ್ಲಪಲ್ಲೆಯ ಹೇಮಂತ್ ಇಬ್ಬರು ಸಂಬಂದಿಗಳು ಹಾಗೆ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ವಿಷಯ ಇಬ್ಬರ ಮನೆಯಲ್ಲಿ ಗೊತ್ತಾಗಿ ಇಬ್ಬರನ್ನು ಕೂರಿಸಿ ಮದುವೆ ಮಾಡುವ ಆಲೋಚನೆ ಮಾಡಿ ಇಬ್ಬರ ಒಪ್ಪಿಗೆ ಮೇರೆಗೆ ನಿಶ್ಚಿತಾರ್ಥ ಮಾಡಿರುತ್ತಾರೆ.ಹರ್ಷಿತ ಮದನಪಲ್ಲಿ ನಗರದಲ್ಲಿ ಹಾಸ್ಟಲ್ ನಲ್ಲಿ ಇದ್ದುಕೊಂಡು ಪದವಿ ವ್ಯಾಸಾಂಗ ಮಾಡುತ್ತಿದ್ದು ಹೇಮಂತ್ ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುತ್ತಾನೆ ಇವರು ಮೊದಲಿನಿಂದಲೂ ವಿಕೇಂಡ್ ನಲ್ಲಿ ಬೆಂಗಳೂರು-ಕಡಪಾ ಹೆದ್ದಾರಿಯಲ್ಲಿ ಶ್ರೀನಿವಾಸಪುರ ತಾಲೂಕಿನ ಸುಣ್ಣಕಲ್ಲು ಅರಣ್ಯ ಪ್ರದೇಶದಲ್ಲಿ ಸುತ್ತಾಡುವುದು ಸಾಮನ್ಯವಾಗಿತ್ತಂತೆ ಅದರಂತೆ ಇಂದು ಸಹ ಇಬ್ಬರು ಸುಣ್ಣಕಲ್ಲು ಅರಣ್ಯ ಪ್ರದೇಶಕ್ಕೆ ದ್ವಿಚಕ್ರ ವಾಹನದಲ್ಲಿ ಬಂದು ಸುತ್ತಾಡಿದ್ದಾರೆ…

Read More

ಶ್ರೀನಿವಾಸಪುರ: ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಕಳೆದ ನಲವತ್ತು-ಐವತ್ತು ವರ್ಷಗಳಿಂದ ರೈತರು ಉಳಿಮೆ ಮಾಡಿಕೊಂಡಿದ್ದ ಭೂಮಿಯನ್ನು ರಾಜ್ಯ ಅರಣ್ಯ ಇಲಾಖೆ ಅಧಿಕಾರಿಗಳು ಒತ್ತುವರಿ ತೆರವು ಕಾರ್ಯಚರಣೆಯ ನೆಪದಲ್ಲಿ ನೂರಾರು ಎಕರೆಯಷ್ಟು ರೈತರ ಜಮೀನುಗಳನ್ನು ಏಕಾ ಏಕಿ ತೆರವು ಮಾಡಿರುವುದಲ್ಲದೆ ರೈತರ ವಿರುದ್ದ ದೌರ್ಜನ್ಯವಾಗಿ ವರ್ತಿಸಿ ರೈತರು ಬೆಳೆದಿರುವಂತ ಬೆಳೆಯನ್ನು ನಾಶ ಮಾಡಿದ್ದಾರೆ ಎಂದು ಸಂಸದ ಮುನಿಸ್ವಾಮಿ ನೇತೃತ್ವದ ನಿಯೋಗ ದೆಹಲಿಗೆ ತೆರಳಿ ಕೇಂದ್ರ ಸರ್ಕಾರದ ಅರಣ್ಯ ಖಾತೆ ಸಚಿವ ಭೂಪೆಂದರ್ ಯಾದವ್ ಅವರನ್ನು ಭೇಟಿ ಮಾಡಿ ತಿಳಿಸಿದ್ದಾರೆ. ಕೋಲಾರ ಜಿಲ್ಲೆ ಶ್ರೀನಿವಾಸಪುರದಲ್ಲಿ ನಡೆದಿರುವಂತ ಅರಣ್ಯ ಒತ್ತುವರಿ ತೆರವು ಕಾರ್ಯಚರಣೆಯ ಕುರಿತಾಗಿ ಸಂಪೂರ್ಣ ಮಾಹಿತಿಯನ್ನು ಕೇಂದ್ರ ಸರ್ಕಾರದ ಅರಣ್ಯ ಖಾತೆ ಸಚಿವ ವಿವರಿಸಿದ ಸಂಸದ ಮುನಿಸ್ವಾಮಿ ನಷ್ಟಕ್ಕೆ ಒಳಗಾಗಿರುವಂತ ರೈತರಿಗೆ ನ್ಯಾಯ ಒದಗಿಸಿಕೊಡಬೇಕು,ರೈತರ ಯಾವುದೇ ಜಮೀನುಗಳನ್ನು ತೆರವು ಗೊಳಿಸ ಬಾರದೆಂದು ಮನವಿ ಪತ್ರ ಸಲ್ಲಿಸಿದ್ದಾರೆ.ಕೇಂದ್ರ ಅರಣ್ಯ ಸಚಿವರ ಭೇಟಿಮಾಡಿದ ಸಂಸದ ಮುನಿಸ್ವಾಮಿ ನೇತೃತ್ವದ ನಿಯೋಗದಲ್ಲಿ ವಿಧಾನಪರಿಷತ್ ಸದಸ್ಯ ಇಂಚರಗೋವಿಂದರಾಜ್,ಬಿ.ಜೆ.ಪಿ ಕೋಲಾರ ಜಿಲ್ಲಾದ್ಯಕ್ಷ ಡಾ.ವೇಣುಗೋಪಾಲ್,ಮುಖಂಡ ಬಂಗಾರಪೇಟೆಚಂದ್ರಾರೆಡ್ದಿ, ಮುಳಬಾಗಿಲು…

Read More

ಮುಳಬಾಗಿಲು:ಕುರುಡುಮಲೆ ಮುಳಬಾಗಿಲಿನಲ್ಲಿರುವ ಪವಿತ್ರ ಪುಣ್ಯಕ್ಷೇತ್ರವಾಗಿದ್ದು,ಐತಿಹಾಸಿಕ ಮಹತ್ವ ಹೊಂದಿರುವ ದೇವಾಯದಲ್ಲಿ ಏಕಶಿಲಾ ಸಾಲಿಗ್ರಾಮ ಗಣೇಶ ನಲೆಸಿದ್ದು ಈ ಬೃಹತ್ ಗಣಪತಿಯ ದರ್ಶನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ಪ್ರತಿತಿ ಇದೆ.ಇಲ್ಲಿನ ಗಣೇಶನಿಗೆ ಪ್ರತಿ ಶುಕ್ಲ ಪಕ್ಷದ ಚತುರ್ಥಿಯಂದು ಅಂದರೆ ಗಣೇಶ ಹಬ್ಬದ ಮಾರನೆ ದಿನದಂದು ಅತ್ಯಂತ ವಿಜೃಂಬಣೆಯಿಂದ ವಾರ್ಷಿಕ ಬ್ರಹ್ಮ ರಥೋತ್ಸವ ನಡೆಯುತ್ತದೆ ಅದರಂತೆ ಈ ವರ್ಷವೂ ಅತ್ಯಂತ ಸಡಗರ ಸಂಭ್ರಮದಿಂದ ಕುರುಡುಮಲೆ ಗಣಪತಿಗೆ ಬ್ರಹ್ಮ ರಥೋತ್ಸವ ನಡೆಯಿತು.ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮಿಗಣಪತಿ ರಥೋತ್ಸವಕ್ಕೂ ಮುಂಚಿತವಾಗಿ ದೇವಾಲಯದಲ್ಲಿ ಬೃಹತ್ ಏಕಶಿಲಾ ಸಾಲಿಗ್ರಾಮ ವಿನಾಯಕಮೂರ್ತಿಗೆ ವಿಶೇಷ ಅಲಂಕಾರ ಪೂಜಾ ಹಾಗು ಹೋಮ ಕಾರ್ಯಕ್ರಮಗಳು ನಡೆಯಿತು,ಅಲಂಕೃತಗೊಂಡ ಬೃಹತ್ ಏಕಶಿಲಾ ಸಾಲಿಗ್ರಾಮ ವಿನಾಯಕಮೂರ್ತಿಯನ್ನು ವೀಕ್ಷಿಸಲು ಎರಡು ಕಣ್ಣುಗಳು ಸಾಲದು! ನಂತರದಲ್ಲಿ ಸಹಸ್ರಾರು ಭಕ್ತಾಧಿಗಳ ಸಮ್ಮುಖದಲ್ಲಿ ಉತ್ಸವ ಮೂರ್ತಿಗಳನ್ನು ಬೃಹತ್ ರಥದಲ್ಲಿ ಪ್ರತಿಷ್ಠಾಪಿಸಿ ಭಕ್ತಾಧಿಗಳ ಜಯಘೋಷಗಳ ನಡುವೆ ರಥೋತ್ಸವವನ್ನು ಎಳೆಯಲಾಯಿತು ಈ ಸಂದರ್ಭದಲ್ಲಿ ಹರಕೆ ಹೊತ್ತ ಭಕ್ತಾದಿಗಳು ರಥಕ್ಕೆ ಹಣ್ಣುಕಾಯಿ ನೀಡಿದರೆ ಇನ್ನು ಕೆಲ ಭಕ್ತರು ರಥಕ್ಕೆ ಉತ್ತತ್ತಿ,…

Read More

ಶ್ರೀನಿವಾಸಪುರ:ತಾಲೂಕಿನಲ್ಲಿ ಅರಣ್ಯ ಇಲಾಖೆ ನಡೆಸಿರುವ ಒತ್ತುವರಿ ತೆರವು ಕಾರ್ಯಾಚರಣೆ ಪ್ರದೇಶಗಳಲ್ಲಿ ಕೋಲಾರ ಜಿಲ್ಲಾ ರೈತ ಸಂಘಟನೆಗಳ ಮುಖಂಡರಾದ ಸೂರ್ಯನಾರಾಯಣ, ಗಣೇಶ ಗೌಡ, ಅಬ್ಬಿಣಿ ಶಿವಪ್ಪ, ಕೂಟೇರಿ ನಾಗರಾಜ್, ವಕೀಲರಾದ ಸತೀಶ್,ಪಾತಕೋಟೆ ನವೀನ್, ಬಗರ್ ಹುಕುಂ ಸಾಗುವಳಿ ಹೋರಾಟ ಸಮಿತಿ ಮುಖಂಡರಾದ ಸೈಯದ್ ಫಾರೂಖ್,ಯಳಗಪ್ಪ, ಶಿವರಾಜ್ ಕುಮಾರ್, ವೆಂಕಟೇಶ್,ಮುಳಬಾಗಿಲು ಗಣೇಶ, ಬೇತಮಂಗಲ ನಾರಾಯಣಸ್ವಾಮಿ, ಕೋಲಾರ ವೆಂಕಟ್ರಾಮಪ್ಪ, ಮುಂತಾದವರು ಬೇಟಿ ನೀಡಿ ರೈತರು ಬೆಳೆದಿರುವಂತ ಬೆಳೆ ನಾಶವಾಗಿದ್ದ ಪಾಳ್ಯ, ಕೇತಗಾನಹಳ್ಳಿ, ಚಿಂತಕುಂಟೆ, ಶ್ರೀನಿವಾಸಪುರ ಗ್ರಾಮೀಣ, ದೊಡಮಲದೊಡ್ಡಿ, ನಾರಮಾಕಲಹಳ್ಳಿ, ಉಪ್ಪರಪಲ್ಲಿ, ಮೊಲ್ಲಂಪಲ್ಲಿ ಗ್ರಾಮಗಳ ರೈತರೊಂದಿಗೆ ಬೆಳೆ ಮತ್ತು ಭೂಮಿ ಸ್ಥಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲಾಧ್ಯಕ್ಷ ಪಿ.ಆರ್.ಸೂರಿ ಮಾತನಾಡಿ ತಾಲೂಕಿನಲ್ಲಿ ರೈತರಿಗೆ ಆಗಿರುವ ಆನ್ಯಾಯವನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ವಸ್ತು ಸ್ಥಿತಿ ಅಧ್ಯಯನಕ್ಕಾಗಿ ಜಿಲ್ಲೆಯ ಎಲ್ಲಾ ರೈತ ಸಂಘಟನೆಗಳ ಮುಖಂಡರೊಂದಿಗೆ ಇಲ್ಲಿಗೆ ಆಗಮಿಸಿದ್ದು,ಯಾವುದೆ ರೈತರು ಭೂಗಳ್ಳರಲ್ಲ,ನೂರಾರು ಎಕರೆ ಭೂಮಿ ಕಬಳಿಸಿಲ್ಲ ಬದುಕಲು ಸರ್ಕಾರದಿಂದ ಮಂಜೂರಾಗಿರುವ 2-3 ಎಕರೆ ಜಮೀನಿನಲ್ಲಿ…

Read More

ಶ್ರೀನಿವಾಸಪುರ:ಶ್ರೀನಿವಾಸಪುರ ಪಟ್ಟಣದಲ್ಲಿ ಗಣೇಶೋತ್ಸವ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ,ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಭವ್ಯ ಮಂಟಪಗಳನ್ನು ನಿರ್ಮಿಸಿ ತಳಿರು-ತೋರಣ, ಕೇಸರಿ ವಸ್ತ್ರ ಸೇರಿದಂತೆ ವಿವಿಧ ಪುಷ್ಪಗಳಿಂದ ಸಿಂಗರಿಸಿ ಅದರೊಳಗೆ ಗಣಪತಿಗಳನ್ನು ಕೂರಿಸಿರುವ ಆ ಭಾಗದ ಯುವಕರು ಗಣಪತಿ ಮೂರ್ತಿಯನ್ನು ವೈಭವವಾಗಿ ಸಾರ್ವತ್ರಿಕವಾಗಿ ಪೂಜಿಸುವ ಮೂಲಕ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ಭಾವೈಕ್ಯತೆಯಿಂದ ಗಣೇಶೋತ್ಸವ ಆಚರಿಸಿ ಭಕ್ತಿಭಾವ ಮೆರೆದಿದ್ದಾರೆ.ವೆಂಕಟೇಶ್ವರ ಬಡಾವಣೆಯ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ 26 ವರ್ಷದ ವಾರ್ಷಿಕೊತ್ಸವದ ಅಂಗವಾಗಿ ಗಣೇಶ ಬಾಲಗೋಪಾಲನೊಂದಿಗೆ ಕುಳಿತ ಭಂಗಿಯ ಬೃಹದಾಕಾರದ ಗಣೇಶನನ್ನು ಕೂರಿಸಿ ಸಂಭ್ರಮದ ಗಣೇಶೋತ್ಸವ ಆಚರಿಸಿದರು. ಪಟ್ಟಣದಲ್ಲಿ ಹಲವಾರು ವರ್ಷಗಳಿಂದ ಪಟ್ಟಣದಲ್ಲಿ ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿರುವ ರಾಮಕೃಷ್ಣಾ ಬಡಾವಣೆಯ ವಿನಾಯಕ ಗೆಳೆಯರ ಬಳಗದವರು ಚೈತ್ರ ಮಿಲ್ ಮುಂಬಾಗದಲ್ಲಿ ನಿರ್ಮಿಸಿರುವ ಪೆಂಡಾಲನಲ್ಲಿ ಮೂಷಿಕವಾಹನ ಗಣಪತಿ ಮೂರ್ತಿಯನ್ನು ಪ್ರತಿಷ್ಟಾಪಿಸಿ ಭಕ್ತಿ ಭಾವದಿಂದ ಪೂಜಿಸಿರುತ್ತಾರೆ. ವಿಜಯಲಕ್ಷ್ಮಿ ರಸ್ತೆಯಲ್ಲಿ ಭಜರಂಗಿ ಯೂತ್ಸ್ ಯುವಕರು ಅತ್ಯಂತ ಸಂಭ್ರಮದಿಂದ ಈ ವರ್ಷ ಗಣೇಶೋತ್ಸವ ಆಚರಣೆ ಮಾಡಿದ್ದು ಮೂರು ದೊಡ್ಡಗಾತ್ರದ ಗಣೇಶ ಮೂರ್ತಿಗಳನ್ನು ಸ್ಥಾಪಿಸಿದ್ದಾರೆ ಮೂಲಗಣಪತಿ…

Read More

ನ್ಯೂಜ್ ಡೆಸ್ಕ್: ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿಕೆ ಶಿವಕುಮಾರ್ ತುಮಕೂರು ಜಿಲ್ಲೆಯಲ್ಲಿ ನಡೆಸಲು ಮುಂದಾಗಿರುವ ಆಪರೇಷನ್ ಹಸ್ತಕ್ಕೆ ತುಮಕೂರು ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ಮುಖಂಡರು ಅಸಮಧಾನ ವ್ಯಕ್ತಪಡಿಸಿದ್ದಾರೆ.ಡಿಕೆ ಶಿವಕುಮಾರ್ ಬೆಂಗಳೂರು ನಗರದ ಯಶವಂತಪುರ ಮತ್ತು ಪದ್ಮನಾಭನಗರ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಸಿದ ಮೊದಲ ಹಂತದ ಆಪರೇಷನ್ ಹಸ್ತ ಯಶಸ್ವಿಯಾದ ಹಿನ್ನಲೆಯಲ್ಲಿ ಇದೀಗ ತುಮಕೂರು ಜಿಲ್ಲೆಯಲ್ಲಿ ಎರಡನೆ ಹಂತದ ಆಪರೇಷನ್​ ಹಸ್ತ ನಡೆಸಲು ಮುಂದಾಗಿರುವ ಶಿವಕುಮಾರ್ ನಡೆಗೆ ತುಮಕೂರು ಪ್ರಭಾವಿ ಸಚಿವ ಕೆ.ಎನ್.ರಾಜಣ್ಣ ಮತ್ತು ಕಾಂಗ್ರೆಸ್ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ ಅಸಮಾಧಾನ ಹೊರ ಹಾಕಿದ್ದಾರೆ. ಡಿಕೆ ಶಿವಕುಮಾರ್ ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್ ಹಾಗು ಬಿಜೆಪಿಯ ತಲಾ ಒಬ್ಬರು ಮಾಜಿ ಶಾಸಕರನ್ನು ಕಾಂಗ್ರೆಸ್ ಗೆ ಕರೆತರುವ ಪ್ರಯತ್ನದಲ್ಲಿದ್ದು ಇಬ್ಬರ ಕಾಂಗ್ರೆಸ್ ಸೇರ್ಪಡಗೆ ಸಚಿವ ಕೆಎನ್ ರಾಜಣ್ಣ ಮತ್ತು ಟಿಬಿ ಜಯಚಂದ್ರ ಅಸಮಾಧಾನಗೊಂಡಿರುವ ಬಗ್ಗೆ ಕೇಳಿ ಬರುತ್ತಿದೆ. ತುಮಕೂರು ಜಿಲ್ಲೆಯ ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಡಿಕೆ ಶಿವಕುಮಾರ್ ಆಪರೇಷನ್​​ ಹಸ್ತಕ್ಕೆ ಮುಂದಾಗಿರೋದಕ್ಕೆ ಅಸಮಾಧಾನ…

Read More

ಶ್ರೀನಿವಾಸಪುರ: ರೈತರು ಬೆಳೆದಂತ ಫಸಲು ಕೊಯ್ಲು ಮಾಡಲು ಅವಕಾಶ ನೀಡದೆ ರೈತರನ್ನು ವಿಶ್ವಾಸಕ್ಕೂ ತಗೆದುಕೊಳ್ಳದೆ ಜೆಸಿಬಿಗಳ ಮೂಲಕ ರಾತ್ರೋರಾತ್ರಿ ಬೆಳೆ ನಾಶ ಪಡಿಸುವ ಅವಶ್ಯಕತೆ ಏನಿತ್ತು ಹೀಗೆ ನಡೆದುಕೊಳ್ಳಲು ಅರಣ್ಯ ಇಲಾಖೆಗೆ ಆದೇಶ ಕೊಟ್ಟವರು ಯಾರು?ಅರಣ್ಯ ಇಲಾಖೆ ವರ್ತನೆ ಖಂಡನೀಯ ಎಂದು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.ಅವರು ಶನಿವಾರ ಸಂಜೆ ತಾಲೂಕಿನ ಕೇತಗಾನಹಳ್ಳಿ ಗ್ರಾಮದ ಬಳಿ ಇತ್ತಿಚಿಗೆ ಅರಣ್ಯ ಇಲಾಖೆ ತೆರವು ಮಾಡಲಾದ ಪ್ರದೇಶಗಳಲ್ಲಿ ಸಂಚರಿಸಿ ರೈತರ ಅಹವಾಲು ಸ್ವೀಕರಿಸಿ ಮಾತನಾಡಿದರು. ಅಧಿಕಾರದಲ್ಲಿ ಯಾರೆ ಇರಲಿ ರೈತರ ಹಿತ ಕಾಪಾಡುವುದು ಮೊದಲ ಕರ್ತವ್ಯ ಸಮಸ್ಯೆಗಳು ಬಂದಾಗ ರೈತರೊಂದಿಗೆ ಮಾತುಕತೆ ನಡೆಸಬೇಕಿತ್ತು ಇದನ್ನು ಬಿಟ್ಟು ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದು ಸರಿಯಲ್ಲ, ಈ ನಿಟ್ಟಿನಲ್ಲಿ ಸರ್ಕಾರವು ಬೆಳೆ ನಷ್ಟ ಪರಿಹಾರವನ್ನು ಕೊಡಬೇಕು. ರೈತರ ಹಾಗು ಸಂಸದರ ಮೇಲೆ ಕೇಸು ದಾಖಲಿಸಿರುವುದನ್ನ ಹಿಂಪಡೆಯಬೇಕು. ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ರಾಜ್ಯ ಕಾಂಗ್ರೇಸ್ ಸರ್ಕಾರದ ವಿರುದ್ಧ ಉಗ್ರವಾದ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.ದರಖಾಸ್ತು…

Read More

ಶ್ರೀನಿವಾಸಪುರ:ಯಾರು ಆತಂಕ ಪಡಬೇಡಿ, ನಿಮ್ಮನ್ನು ಯಾರು ಏನು ಮಾಡುವುದಿಲ್ಲ ನೀವು ಧೈರ್ಯದಿಂದ ಇರಿ ನಿಮ್ಮೊಂದಿಗೆ ನಾನು ಇರುತ್ತೇನೆ ಎಂದು ಶಾಸಕ ವೆಂಕಟಶಿವಾರೆಡ್ಡಿ ತಾಲೂಕಿನ ನಂಬಿಹಳ್ಳಿ ಗ್ರಾಮಸ್ಥರಿಗೆ ಧೈರ್ಯ ತುಂಬಿದರು ಅವರು ಶನಿವಾರ ನಂಬಿಹಳ್ಳಿ ಗ್ರಾಮಕ್ಕೆ ತೆರಳಿ ಗ್ರಾಮಸ್ಥರೊಂದಿಗೆ ಮಾತನಾಡಿ ಯಾರು ಆತಂಕ ಪಡುವುದು ಬೇಡ ಗ್ರಾಮದಲ್ಲಿ ದುರದೃಷ್ಟಕರ ಘಟನೆ ನಡೆಯಬಾರದು ನಡೆದುಹೋಗಿದೆ ಇದು ಅತ್ಯಂತ ನೋವಿನ ವಿಚಾರ,ಘಟನೆ ನಡೆದಾಗ ಜನತೆ ಭಾವೋದ್ವೇಗಕ್ಕೆ ಒಳಗಾದ ವಿಚಾರದಲ್ಲಿ ಗ್ರಾಮಸ್ಥರ ಮೇಲೆ ಪೋಲಿಸ್ ಪ್ರಕರಣ ದಾಖಲಾಗಿರುವ ಕುರಿತಾಗಿ ಮಾತನಾಡಿದ ಅವರು ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳ ಜೊತೆ ನಾನು ಮಾತನಾಡುತ್ತೇನೆ ಯಾರು ಭಯಪಡಬೇಡಿ ಗ್ರಾಮದಲ್ಲಿ ಶಾಂತಿ ಸೌಹಾರ್ದತೆಯಿಂದ ಗಣೇಶ ಹಬ್ಬ ಆಚರಿಸಿಕೊಳ್ಳುವಂತೆ ಹೇಳಿದರು.ಮೃತ ಮಹಿಳೆ ಕುಟುಂಬಸ್ಥರನ್ನು ಭೇಟಿ ಮಾಡಿದ ಶಾಸಕ ಅವರ ಕುಟುಂಬ ಸದಸ್ಯರನ್ನು ಮಾತನಾಡಿ ಘಟನೆ ನಡೆದಿರುವುದು ವಿಷಾಧಕರ ನನಗೆ ವೈಯುಕ್ತಿಕವಾಗಿ ನೋವಾಗಿದೆ ತಾವು ಧೈರ್ಯದಿಂದ ಇರುವಂತೆ ತಿಳಿಸಿದರು. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಕೊಡಿಸುವ ಭರವಸೆ ನೀಡಿದರು.ಪೋಲಿಸ್ ಕೇಸಿಗೆ ಹೆದರಿ ಊರು ಬಿಟ್ಟ ಜನರುನಂಬಿಹಳ್ಳಿ…

Read More

ತಾತನೊಂದಿಗೆ ಅಟವಾಡುತಿದ್ದ ಮಗು ಅಪಹರಣ ವ್ಯಾಟ್ಸಾಪ್ ಗ್ರೂಪಗಳಿಂದ ಅಪಹರಣಕಾರರ ಜಾಡು ಪತ್ತೆ ಸೋಮಯಾಜಲಹಳ್ಳಿಯಲ್ಲಿ ಸಿಕ್ಕಿಬಿದ್ದ ಅಪಹರಣಕಾರರು ಶ್ರೀನಿವಾಸಪುರ:ಆಗಷ್ಟೆ ಶಾಲೆಯಿಂದ ಬಂದು ಮನೆಯ ಮುಂದಿನ ಅಂಗಳದಲ್ಲಿ ತಾತನೊಂದಿಗೆ ಆಟವಾಡುತ್ತಿದ್ದ ಮಗುವನ್ನು ಇಬ್ಬರು ಆಗುಂತಕರು ಅಪಹರಣ ಮಾಡಿದ ಕೆಲವೆ ಗಂಟೆಗಳ ಅವಧಿಯಲ್ಲಿ ಸಾರ್ವಜನಿಕರು ಅಪಹರಣಕಾರರನ್ನು ಹಿಡಿದು ಮಗವನ್ನು ಕಾಪಾಡಿದ ಘಟನೆ ಇಂದು ತಡ ಸಂಜೆ ಶ್ರೀನಿವಾಸಪುರದ ಸೋಮಯಾಜಲಹಳ್ಳಿ ಗ್ರಾಮದಲ್ಲಿ ನಡೆದಿದೆ.ಕೋಲಾರ-ಚಿಂತಾಮಣಿ ರಸ್ತೆಯಲ್ಲಿನ ಪವರ್ ಗ್ರೀಡ್ ಬಳಿ ಇರುವ ಅರಹಳ್ಳಿ ಗ್ರಾಮದಲ್ಲಿ ಗೋಪಾಲಕೃಷ್ಣ ಎಂಬುವರು ತಮ್ಮ ಆರು ವರ್ಷದ ಮೊಮ್ಮಗ ಯಶ್ವಿತ್ ಗೌಡನನ್ನು ಆಟವಾಡಿಸಿಕೊಂಡಿದ್ದರು ಇದ್ದಕ್ಕಿದ್ದಂತೆ ಇಬ್ಬರು ಹೆಲ್ಮೇಟ್ ಧಾರಿ ಆಗುಂತಕರು ಬುಲೆಟ್ ವಾಹದಲ್ಲಿ ಬಂದವರೆ ಅಟವಾಡಿತ್ತಿದ್ದ ಮಗುವನ್ನು ಏಕಾಏಕಿ ಅಪಹರಿಸಿಕೊಂಡು ಹೋಗುತ್ತಾರೆ, ಗೋಪಾಲಕೃಷ್ಣ ತಕ್ಷ್ಣಣ ಕಿರಾಚಿಡಿದಾಗ ಸುತ್ತಮುತ್ತಲಿನರು ಎಚ್ಚೆತ್ತುಕೊಂಡು ಅಪಹರಣಕಾರರ ಬುಲೆಟ್ ವಾಹನ ಸಂಖ್ಯೆ ದಾಖಲಿಸಿಕೊಂಡು ತಮಗೆ ತಿಳಿದವರ ವ್ಯಾಟ್ಸಾಪ್ ಗಳಿಗೆ ಮಗು ಅಪಹರಣ ವಿಚಾರ ಹಂಚಿಕೊಳ್ಳುತ್ತಾರೆ,ಮಗು ಅಪಹರಣ ವಿಚಾರ ಶುಕ್ರವಾರ ಸಂಜೆ ಗಾಳಿಗಿಂತ ವೇಗವಾಗಿ ಬೆಳಕಿನ ಶರವೇಗದಲ್ಲಿ ಕಾಡ್ಗಿಚ್ಚಿನಂತೆ ವ್ಯಾಟ್ಸಾಪ್ ಗ್ರೂಪುಗಳ ಮೂಲಕ…

Read More