ತಾತನೊಂದಿಗೆ ಅಟವಾಡುತಿದ್ದ ಮಗು ಅಪಹರಣ ವ್ಯಾಟ್ಸಾಪ್ ಗ್ರೂಪಗಳಿಂದ ಅಪಹರಣಕಾರರ ಜಾಡು ಪತ್ತೆ ಸೋಮಯಾಜಲಹಳ್ಳಿಯಲ್ಲಿ ಸಿಕ್ಕಿಬಿದ್ದ ಅಪಹರಣಕಾರರು ಶ್ರೀನಿವಾಸಪುರ:ಆಗಷ್ಟೆ ಶಾಲೆಯಿಂದ ಬಂದು ಮನೆಯ ಮುಂದಿನ ಅಂಗಳದಲ್ಲಿ ತಾತನೊಂದಿಗೆ ಆಟವಾಡುತ್ತಿದ್ದ ಮಗುವನ್ನು ಇಬ್ಬರು ಆಗುಂತಕರು ಅಪಹರಣ ಮಾಡಿದ ಕೆಲವೆ ಗಂಟೆಗಳ ಅವಧಿಯಲ್ಲಿ ಸಾರ್ವಜನಿಕರು ಅಪಹರಣಕಾರರನ್ನು ಹಿಡಿದು ಮಗವನ್ನು ಕಾಪಾಡಿದ ಘಟನೆ ಇಂದು ತಡ ಸಂಜೆ ಶ್ರೀನಿವಾಸಪುರದ ಸೋಮಯಾಜಲಹಳ್ಳಿ ಗ್ರಾಮದಲ್ಲಿ ನಡೆದಿದೆ.ಕೋಲಾರ-ಚಿಂತಾಮಣಿ ರಸ್ತೆಯಲ್ಲಿನ ಪವರ್ ಗ್ರೀಡ್ ಬಳಿ ಇರುವ ಅರಹಳ್ಳಿ ಗ್ರಾಮದಲ್ಲಿ ಗೋಪಾಲಕೃಷ್ಣ ಎಂಬುವರು ತಮ್ಮ ಆರು ವರ್ಷದ ಮೊಮ್ಮಗ ಯಶ್ವಿತ್ ಗೌಡನನ್ನು ಆಟವಾಡಿಸಿಕೊಂಡಿದ್ದರು ಇದ್ದಕ್ಕಿದ್ದಂತೆ ಇಬ್ಬರು ಹೆಲ್ಮೇಟ್ ಧಾರಿ ಆಗುಂತಕರು ಬುಲೆಟ್ ವಾಹದಲ್ಲಿ ಬಂದವರೆ ಅಟವಾಡಿತ್ತಿದ್ದ ಮಗುವನ್ನು ಏಕಾಏಕಿ ಅಪಹರಿಸಿಕೊಂಡು ಹೋಗುತ್ತಾರೆ, ಗೋಪಾಲಕೃಷ್ಣ ತಕ್ಷ್ಣಣ ಕಿರಾಚಿಡಿದಾಗ ಸುತ್ತಮುತ್ತಲಿನರು ಎಚ್ಚೆತ್ತುಕೊಂಡು ಅಪಹರಣಕಾರರ ಬುಲೆಟ್ ವಾಹನ ಸಂಖ್ಯೆ ದಾಖಲಿಸಿಕೊಂಡು ತಮಗೆ ತಿಳಿದವರ ವ್ಯಾಟ್ಸಾಪ್ ಗಳಿಗೆ ಮಗು ಅಪಹರಣ ವಿಚಾರ ಹಂಚಿಕೊಳ್ಳುತ್ತಾರೆ,ಮಗು ಅಪಹರಣ ವಿಚಾರ ಶುಕ್ರವಾರ ಸಂಜೆ ಗಾಳಿಗಿಂತ ವೇಗವಾಗಿ ಬೆಳಕಿನ ಶರವೇಗದಲ್ಲಿ ಕಾಡ್ಗಿಚ್ಚಿನಂತೆ ವ್ಯಾಟ್ಸಾಪ್ ಗ್ರೂಪುಗಳ ಮೂಲಕ…
Author: Srinivas_Murthy
ನಂಬಿಹಳ್ಳಿ ಗ್ರಾಮದಲ್ಲಿ ಹತ್ಯೆ ಘಟನೆ ನಡೆದಿದ್ದು ಮೃತ ರಾಧ ಆರೋಪಿ ನಾಗೇಶನ ಮೊದಲ ಪತ್ನಿ ಅಡ್ಡ ಬಂದ ಪತ್ನಿ ಅಕ್ಕ ಹಾಗೂ ಭಾವನಿಗೂ ಗಾಯ ಆರೋಪಿ ಮೇಲೆ ಹಲ್ಲೆಗೆ ಉದ್ರಿಕ್ತ ಗ್ರಾಮಸ್ಥರ ಯತ್ನ ಶ್ರೀನಿವಾಸಪುರ:ವ್ಯಕ್ತಿಯೊಬ್ಬ ತನ್ನ ಮೊದಲ ಪತ್ನಿಯ ತಲೆಗೆ ಮಚ್ಚಿನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುತ್ತಾನೆ ಅಡ್ಡ ಬಂದ ಪತ್ನಿಯ ತಂದೆಯನ್ನು ಮಾರಾಣಾಂತಿಕವಾಗಿ ಗಾಯಗೊಳಿಸಿದ್ದು ಆತ ಸಾವು ಬದುಕಿನ ನಡುವೆ ಸೇಣಸಾಡುತ್ತಿದ್ದಾರೆ.ದಾರುಣ ಘಟನೆ ತಾಲೂಕಿನ ನಂಬಿಹಳ್ಳಿ ಗ್ರಾಮದಲ್ಲಿ ಹಾಡು ಹಗಲೆ ನಡೆದಿದ್ದು ಮೃತ ಮಹಿಳೆಯನ್ನು ನಂಬಿಹಳ್ಳಿ ಗ್ರಾಮದ ರಾಧ(45) ಎಂದು ಮತ್ತು ತೀವ್ರವಾಗಿ ಗಾಯಗೊಂಡಂತ ಮೃತಳ ತಂದೆಯನ್ನು ಮುನಿಯಪ್ಪ ಎಂದು ಗುರುತಿಸಲಾಗಿದೆ.ಹತ್ಯೆ ಆರೋಪಿ ಮೃತಳ ಮಾಜಿ ಗಂಡನಾಗಿದ್ದು ಶ್ರೀನಿವಾಸಪುರ ಪಟ್ಟಣದ ಕಟ್ಟೆ ಕೆಳಗಿನಪಾಳ್ಯದಲ್ಲಿ ಮಾಂಸದಂಗಡಿ ಇಟ್ಟುಕೊಂಡು ಎರಡನೇ ಪತ್ನಿಯೊಂದಿಗೆ ವಾಸವಾಗಿದ್ದಾನೆ.ಕಟುಕ ನಾಗೇಶ್ ಹಾಗು ಮೃತಳಾದ ರಾಧರ ನಡುವೆ ವೈಮನಸ್ಯ ಉಂಟಾಗಿ ಹಲವಾರು ವರ್ಷಗಳಿಂದ ಪ್ರತ್ಯಕವಾಗಿ ಇರುತ್ತಾರೆ ರಾಧ ತನ್ನ ತಂದೆ ಮುನಿಯಪ್ಪ ಹಾಗು ಎಸ್.ಎಸ್.ಎಲ್.ಸಿ ಒದುತ್ತಿರುವ ಮಗನೊಂದಿಗೆ ನಂಬಿಹಳ್ಳಿ ಗ್ರಾಮದಲ್ಲಿ…
ಶ್ರೀನಿವಾಸಪುರ: ಅರಣ್ಯ ಒತ್ತುವರಿ ವಿಚಾರ ದಿನಕ್ಕೊಂದು ತಿರುವು ಪಡೆಯುತ್ತಿದೆ ತೆರವು ವಿರೋಧಿಸಿ ಸಂಸದ ಮುನಿಸ್ವಾಮಿ ಪ್ರಚೋದನೆ ಮಾತುಗಳ ನಂತರ ನರೆದಿದ್ದ ಜನತೆ ಆವೇಶಭರಿತರಾಗಿ ವರ್ತಿಸಿದ ಪರಿಣಾಮ ತೆರವು ಕಾರ್ಯದಲ್ಲಿದ್ದ ಅರಣ್ಯ ಇಲಾಖೆ ಜೆಸಿಬಿಗಳ ಮೇಲೆ ಶನಿವಾರ ಕಲ್ಲು ತೂರಾಟ ನಡೆಯಿತು. ನಂತರದಲ್ಲಿ ಸ್ಥಳದಲ್ಲಿ ಪ್ರಕ್ಷುಬ್ದತೆ ಉಂಟಾಗಿ ಪೋಲಿಸರು ಮದ್ಯ ಪ್ರವೇಶಿಸಿ ಕಾರ್ಯಚರಣೆ ನಡೆಸಿ ಪರಿಸ್ಥಿತಿ ಶಾಂತಗೊಳಿಸಿದ್ದರು. ಶನಿವಾರ ಸಂಜೆ ಅರಣ್ಯ ಇಲಾಖೆ ಹಾಗು ಜೆಸಿಬಿ ಮಾಲಿಕರು ಚಾಲಕರು ನೀಡಿದ ದೂರಿನನ್ವಯ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿಯಲ್ಲಿ ಹಲವರು ಪೋಲಿಸರ ಅಥಿತಿಗಳಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಆವೇಶದಿಂದ ವರ್ತಿಸಿದ ಜನ ಬಚಾವಾಗಿದ್ದರೆ, ತಮಾಷೆ ನೊಡಲು ಬಂದಂತವರು ಪೋಲಿಸರ ವಶದಲ್ಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.ರಾಜ್ಯ ಬಿಜೆಪಿ ಮುಖಂಡರು ಬರ್ತಾರೆ ಎಂಬ ರಾಜಕೀಯ ಹೈಡ್ರಾಮತೆರವು ವಿರೋಧ ಕಾರ್ಯಕ್ರಮದ ಬೆಳವಣಿಗೆಯ ನಂತರ ನಡೆದಂತ ರಾತ್ರಿ ಕಾರ್ಯಚರಣೆಯಲ್ಲಿ ಹಲವರ ಬಂಧನಕ್ಕೆ ಕಾರಣವಾಗಿ ಇದನ್ನು ವಿರೋಧಿ ಅರಣ್ಯ ಸಂತ್ರಸ್ತರನ್ನು ಸಂತೈಸಲು ರಾಜ್ಯ ಬಿಜೆಪಿ ಮುಖಂಡರಾದ ಮಾಜಿ ಕಂದಾಯ ಮಂತ್ರಿ…
ಶ್ರೀನಿವಾಸಪುರ:ಅರಣ್ಯ ಒತ್ತುವರಿ ವಿಚಾರವಾಗಿ ಶನಿವಾರ ಸಂಸದ ಮುನಿಸ್ವಾಮಿ ಪ್ರಚೋದನೆ ಮಾತುಗಳ ಪರಿಣಾಮ ಶನಿವಾರ ರಾತ್ರಿ ಹಲವರ ಬಂಧನಕ್ಕೆ ಕಾರಣವಾದರೆ,ಇನ್ನೊಂದಡೆ ರಾಜ್ಯ ಬಿಜೆಪಿ ಮುಖಂಡರು ಶ್ರೀನಿವಾಸಪುರಕ್ಕೆ ಆಗಮಿಸುತ್ತಾರೆ ಎಂಬೆಲ್ಲಾ ಉಹಾಪೋಹಗಳಿಂದ ಇಂದು ಭಾನುವಾರ ಇಡಿ ದಿನ ರಾಜಕೀಯ ಹೈಡ್ರಾಮಕ್ಕೆ ಕಾರಣವಾಯಿತು. ತಾಲೂಕಿನಲ್ಲಿ ಕಳೆದ ಹದಿನೈದು ದಿನಗಳಿಂದ ನಡೆಯುತ್ತಿರುವ ಅರಣ್ಯ ಭೂಮಿ ಒತ್ತುವರಿ ವಿಚಾರವಾಗಿ ಸಂಸದ ಮುನಿಸ್ವಾಮಿ ಧೀಡಿರ್ ಶನಿವಾರ ಶ್ರೀನಿವಾಸಪುರಕ್ಕೆ ಆಗಮಿಸಿ ಒತ್ತುವರಿ ತೆರವು ದಾರರ ಪರವಾಗಿ ಮಾತನಾಡಿದಲ್ಲದೆ ಸಾರ್ವಜನಿಕವಾಗಿ ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಚರಣೆ ವಿರುದ್ದ ಪ್ರಚೋದಾತ್ಮಕ ಭಾಷಣ ಮಾಡಿ ಜನರು ರೊಚ್ಚಿಗೆದ್ದು ತೆರವು ಕಾರ್ಯದಲ್ಲಿದ್ದ ಅರಣ್ಯ ಇಲಾಖೆ ಜೆಸಿಬಿಗಳ ಮೇಲೆ ಕಲ್ಲೂ ತೂರಾಟ ನಡೆಸಿದ್ದು ಸ್ಥಳದಲ್ಲಿ ಪ್ರಕ್ಷುಬ್ದ ಪರಿಸ್ಥಿತಿ ನಿರ್ಮಾಣವಾಗಿ ಪೋಲಿಸರು ಆಗಮಿಸಿ ಪರಿಸ್ಥಿತಿ ತಹಬಂದಿಗೆ ತಂದಿದ್ದರು, ಇದರ ಅಧಾರದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಶ್ರೀನಿವಾಸಪುರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಜೆಸಿಬಿಗಳ ಮೇಲೆ ಕಲ್ಲು ತೂರಾಟ ನಡೆಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿಯಲ್ಲಿ ಶನಿವಾರ ತಡ ರಾತ್ರಿ ಹಲವರನ್ನು…
ಶ್ರೀನಿವಾಸಪುರ:ರೈತರು ಬೆಳೆದಂತ ತರಕಾರಿ ಬೆಳೆಯನ್ನು ಕೊಯ್ಲು ಮಾಡಲು ಬಿಡದೆ ಅರಣ್ಯ ಇಲಾಖೆ ತೆರವು ಮಾಡುತ್ತಿರುವುದು ಅನ್ಯಾಯ ಅಕ್ರಮ ಎಂದು ಸಂಸದ ಮುನಿಸ್ವಾಮಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅವರು ಇಂದು ತಾಲೂಕಿನಲ್ಲಿ ಅರಣ್ಯ ಒತ್ತುವರಿ ತೆರವು ಗೊಳಿಸಿರುವ ಪ್ರದೇಶಗಳಿಗೆ ತೆರಳಿ ಅಲ್ಲಿನ ರೈತರನ್ನು ಭೇಟಿ ಮಾಡಿದ ನಂತರ ಅರಣ್ಯ ಇಲಾಖೆಯ ಕ್ರಮದ ವಿರುದ್ಧ ವಾಗ್ದಾಳಿ ನಡೆಸಿದ ಅವರು ತೋಟಗಾರಿಕೆ ಬೆಳೆಗಳನ್ನು ನಾಶಮಾಡಿರುವುದಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿದರು.ಮುಖ್ಯಮಂತ್ರಿಗಳು ಸ್ವತಃ ರೈತನ ಮಗನಾಗಿದ್ದಾರೆ, ಕೃಷಿ ಸಚಿವ ಕೃಷ್ಣಬೈರೇಗೌಡ ಜಿಲ್ಲೆಯವರೆ ಆಗಿದ್ದರು ಇಲ್ಲಿನ ರೈತಾಪಿ ಜನರ ಸಮಸ್ಯೆ ನೋವು ಆಲಿಸುತ್ತಿಲ್ಲ ಎಂದು ದೂರಿದರು.ಸಣ್ಣ-ಪುಟ್ಟ ರೈತರಿಗೆ ಕಂದಾಯ ಇಲಾಖೆಯಿಂದ ಭೂಮಿ ಮಂಜೂರಾಗಿರುವ ಬಗ್ಗೆ ದಾಖಲೆಗಳು ಇವೆ ಅದರ ಅಧಾರದಲ್ಲಿ ರೈತರು ಮಾವು,ತರಕಾರಿ ಬೆಳೆಗಳನ್ನು ಬೆಳೆಯುತ್ತ ಜೀವನ ಮಾಡುತ್ತಿದ್ದಾರೆ ಅಂತಹವರ ಜಮೀನುಗಳನ್ನು ಬೀಡದ ಅರಣ್ಯ ಇಲಾಖೆ ಅಧಿಕಾರಿಗಳು ತೆರವು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜೆಸಿಬಿಗಳ ಮೇಲೆ ಕಲ್ಲುತೂರಾಟಅರಣ್ಯ ಇಲಾಖೆ ಅರಣ್ಯ ಭೂಮಿ ಅಕ್ರಮವಾಗಿ ಒತ್ತುವರಿಯಾಗಿದೆ…
ನ್ಯೂಜ್ ಡೆಸ್ಕ್:ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗು ತೆಲಗು ದೇಶಂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎನ್.ಚಂದ್ರಬಾಬು ನಾಯ್ಡು ಅವರನ್ನು ಆಂಧ್ರ ಪ್ರದೇಶ ಸಿಐಡಿ ಪೊಲೀಸರು ಶನಿವಾರ ಬೆಳ್ಳಂ ಬೆಳಗ್ಗೆ ಬಂಧಿಸಿದ್ದಾರೆ.ರಾಯಲಸೀಮಾ ಪ್ರಾಂತ್ಯದಲ್ಲಿ ರಾಜಕೀಯ ಸಭೆ ನಡೆಸುತ್ತಿದ್ದ ಚಂದ್ರಬಾಬು ನಾಯ್ಡು ಶುಕ್ರವಾರ ರಾತ್ರಿ ನಂದ್ಯಾಲ ಪಟ್ಟಣದ ಆರ್ಕೆ ಫಂಕ್ಷನ್ ಹಾಲ್ನಲ್ಲಿ ತಂಗಿದ್ದು ಅವರು ಪ್ರತ್ಯಕ ಕ್ಯಾರ್ ವಾನ್ ವಾಹನದಲ್ಲಿ ನಿದ್ರೆಮಾಡುತಿದ್ದ ಸಂದರ್ಭದಲ್ಲಿ ಶನಿವಾರ ಮುಂಜಾನೆ ಸುಮಾರು 3 ಗಂಟೆ ಹೊತ್ತಿಗೆ ನಂದ್ಯಾಲ್ ರೇಂಜ್ ಡಿಐಜಿ ರಘುರಾಮಿ ರೆಡ್ಡಿ ಮತ್ತು ಅಪರಾಧ ತನಿಖಾ ದಳ (ಸಿಐಡಿ) ನೇತೃತ್ವದ ಪೊಲೀಸರ ತಂಡ ನಾಯ್ಡು ಅವರನ್ನು ವಶಕ್ಕೆ ಪಡೆದಿರುತ್ತಾರೆ.ಆಂಧ್ರಪ್ರದೇಶ ಸರ್ಕಾರ ಆರೋಪಿಸಿರುವಂತೆ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿದ್ದಾಗ ಆಂಧ್ರಪ್ರದೇಶ ಸ್ಕಿಲ್ ಡೆವಲಪ್ಮೆಂಟ್ ಯೋಜನೆಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡದಿದೆ ಎಂದು ಆರೋಪಿಸಲಾಗಿದೆ.ಟಿ.ಡಿ.ಪಿ ಕಾರ್ಯಕರ್ತರ ತೀವ್ರ ವಿರೋಧಚಂದ್ರಬಾಬು ಆರೆಸ್ಟ್ ವಿಚಾರ ಹೊರ ಬಿಳುತ್ತಿದ್ದಂತೆ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ ಟಿಡಿಪಿ ಕಾರ್ಯಕರ್ತರು ಪೊಲೀಸರಿಗೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು. ಬೆಳಿಗ್ಗೆ 5.30 ರವರೆಗೆ…
ಶ್ರೀನಿವಾಸಪುರ:ಶ್ರೀನಿವಾಸಪುರ ತಾಲೂಕಿನಲ್ಲಿ ನಿರುದ್ಯೊಗ ಸಮಸ್ಯೆ ನಿವಾರಣೆಗೆ ಪಟ್ಟಣಕ್ಕೆ ಹೊಂದಿಕೊಂಡಂತೆ ಕೈಗಾರಿಕ ಪ್ರದೇಶ ನಿರ್ಮಾಣ ಮಾಡಲು ಯೋಜನೆ ಸಿದ್ದಪಡಿಸುತ್ತಿರುವುದಾಗಿ ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು ಅವರು ಇಂದು ಪಟ್ಟಣದ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕಾಮಗಾರಿ ವಿಕ್ಷಿಸಿ ಮಾತನಾಡಿದ ಅವರು ತಾಲೂಕಿಗೆ ಕೈಗಾರಿಕೆಗಳು ಬಂದರೆ ಇಲ್ಲಿನ ನಿರುದ್ಯೊಗಿ ಯುವಕರ ಸಮಸ್ಯೆ ಬಗೆಹರೆಯಲು ಸಹಕಾರಿಯಾಗುತ್ತದೆ ಎಂದರು.ತಾಲೂಕಿನ ಮುಳಬಾಗಿಲು ರಸ್ತೆ ಅಥಾವ ಪುಂಗನೂರು ರಸ್ತೆಯಲ್ಲಿ ಜಮೀನು ಗುರುತಿಸಿ ಕೈಗಾರಿಕಾ ಪ್ರದೇಶ ನಿರ್ಮಾಣ ಮಾಡುವ ಕುರಿತಾಗಿ ಕೈಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ರೂಪು ರೇಷೆ ಸಿದ್ದಪಡಿಸುವುದಾಗಿ, ಮಾವು ಟಮ್ಯಾಟೊ ಸೇರಿದಂತೆ ತೋಟಗಾರಿಕೆ ಬೆಳೆಗಳ ಸಂಸ್ಕರಣ ಘಟಕಗಳು ಮತ್ತು ಕೃಷಿ ಆಧಾರಿತ ಕೈಗಾರಿಕೆಗಳ ನಿರ್ಮಾಣ ಸ್ಥಾಪನೆಗೆ ಆದ್ಯತೆ ನೀಡಲಾಗುವುದು ಎಂದರು.ಒಳಾಂಗಣ ಶೆಟಲ್ ಕೊರ್ಟ್ ನಿರ್ಮಾಣಕ್ರೀಡಾಂಗಣಕ್ಕೆ ಹೊಂದಿಕೊಂಡಂತೆ ಒಳಾಂಗಣ ಶೆಟಲ್ ಕೊರ್ಟ್ ನಿರ್ಮಾಣಕ್ಕೆ ಸಂಸದ ಮುನಿಶಾಮಿ ತಮ್ಮ ನಿಧಿಯಿಂದ ಹಣ ನೀಡಲಿದ್ದು ಇದಕ್ಕೆ ಸಂಬಂದಿಸಿದಂತೆ ಜಮೀನು ನೀಡುವುದಾಗಿ ತಿಳಿಸಿದ ಶಾಸಕ ವೆಂಕಟಶಿವಾರೆಡ್ಡಿ ಪಟ್ಟಣದ ಜನರ ಕ್ರೀಡಾಚಟುವಟಿಕೆಗಾಗಿ ಅತ್ಯಾಧುನಿಕವಾಗಿ ಕ್ರೀಡಾಂಗಣ ಸರ್ವರೀತಿಯಲ್ಲೂ ನವೀಕರಣವಾಗುತ್ತಿದೆ ಹಾಗೆ ಸುಸಜ್ಜಿತ…
ಶ್ರೀನಿವಾಸಪುರ: ಶ್ರೀನಿವಾಸಪುರ ತಾಲೂಕಿನಲ್ಲಿ 45 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ಬೆಳೆಯಲಾಗುತ್ತಿದೆ ಇದು ಹೆಮ್ಮೆಯ ವಿಚಾರ ಆದರೆ ಮಾವು ಬೆಳೆಗೆ ಸರಿಯಾದ ಬೆಲೆ ಸಿಗದೆ ಮಾವು ಬೆಳೆಗಾರರು ಸಂಕಷ್ಟದಲ್ಲಿ ಇರುವುದು ನೋವಿನ ವಿಚಾರ ಮಾವು ಬೆಳೆಗಾರ ಬದುಕು ಹಸನಾಗಬೇಕಾದರೆ ಇಲ್ಲಿಗೆ ಮಾವು ಸಂಸ್ಕರಣ ಘಟಕದ ಅಗತ್ಯ ಇದೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಅನ್ನ ದಾಸೋಹಿ, ಶಿಕ್ಷಣ ಸಂತ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಹೇಳಿದರು ಅವರು ಶನಿವಾರ ಶ್ರೀನಿವಾಸಪುರ ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಆಯೋಜಿಸಿದ್ದ ಶ್ರೀ ಕೆಂಪೇಗೌಡರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಾವು ಸಂಸ್ಕರಣ ಘಟಕ ಎಲ್ಲಾ ಸಮುದಾಯಗಳ ರೈತರ ಕೂಗಾಗಿದೆ ಇದಕ್ಕೆ ಸಂಬಂದ ಪಟ್ಟಂತೆ ಕುಮಾಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಇಲ್ಲಿಗೆ ಮಾವು ಸಂಸ್ಕರಣ ಘಟಕದ ಸ್ಥಾಪನೆಗೆ ಅನುಮೋದನೆ ನೀಡಿದ್ದರು ಅಂದು ಈ ಬಗ್ಗೆ ಜವಾಬ್ದಾರಿ ತಗೆದುಕೊಳ್ಳಲು ಯಾರು ಮುಂದಾಗಲಿಲ್ಲ ಅದು ರಾಮನಗರಕ್ಕೆ ಹೋಯಿತು,ಇಲ್ಲಿ ಮಾವು ಸಂಸ್ಕರಣ ಘಟಕ ನಿರ್ಮಾಣ ಕುರಿತಾಗಿ ಶಾಸಕ ವೆಂಕಟಶಿವಾರೆಡ್ಡಿರವರು ಜವಾಬ್ದಾರಿ ಹೊತ್ತು…
ಬೆಂಗಳೂರು:ಇಂದು ಶ್ರೀನಿವಾಸಪುರಕ್ಕೆ ಆಗಮಿಸಬೇಕಾಗಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಗ್ಯದಲ್ಲಿ ದೀಡೀರ್ ಏರುಪೇರಾದ ಕಾರಣ ಅವರನ್ನು ಬುಧವಾರ ಮುಂಜಾನೆ ಬೆಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು.ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಇಂದು ಬುಧವಾರ ಶ್ರೀನಿವಾಸಪುರಕ್ಕೆ ಆಗಮಿಸಿ ರೈತರ ಜಮೀನುಗಳಿಗೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತು,ಹಲವು ವರ್ಷಗಳಿಂದ ರೈತರು ಹಾಗೂ ಅರಣ್ಯ ಇಲಾಖೆ ನಡುವೆ ನ್ಯಾಯಾಲಯದಲ್ಲಿ ಭೂ ವಿವಾದವಿದ್ದು,ಶ್ರೀನಿವಾಸಪುರ ತಾಲೂಕಿನ ಹೊಗಳಗೆರೆ, ಚಿಂತಕುಂಟ, ಕೇತಗಾನಹಳ್ಳಿ ಬಳಿ ಕಳೆದ ಮೂರು ದಿನಗಳಲ್ಲಿ ಸುಮಾರು 560 ಎಕರೆ ಒತ್ತುವರಿ ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯ ನಡೆದಿದೆ. ತೆರವು ಕಾರ್ಯಾಚರಣೆ ವೇಳೆ ಕೋಳಿ ಫಾರಂಗಳು, ಮಾವಿನ ಮರಗಳು, ಎಲೆಕೋಸು, ಕ್ಯಾಪ್ಸಿಕಂ ಹಾಗೂ ಇತರೆ ಬೆಳೆಗಳು, ಪಂಪ್ ಸೆಟ್, ಬೋರ್ ವೆಲ್ ಎಲ್ಲವನ್ನೂ ತೆರವು ಮಾಡಿ ನಾಶಪಡಿಸಿದ ಆರೋಪ ಕೇಳಿಬಂದಿತ್ತು ಅದರಂತೆ ನಷ್ಟಕ್ಕೆ ಒಳಗಾಗಿರುವ ರೈತರ ಬೆಳೆಗಳು ಪರಶೀಲನೆ ನಡೆಸಿ ರೈತರೊಂದಿಗೆ ಸಂವಾದ ನಡೆಸಲು ಹೆಚ್ಡಿಕೆ ಆಗಮಿಸಲಿದ್ದರು. ಆದರೆ ಏಕಾಏಕಿ ಅವರ ಆರೋಗ್ಯದಲ್ಲಿ ಏರುಪೇರಾಗಿ ಅವರನ್ನು ಆಸ್ಪತ್ರೆಗೆ…
ನ್ಯೂಜ್ ಡೆಸ್ಕ್:ಭಾರತೀಯ ಚಿತ್ರರಂಗದ ಅಭಿವೃದ್ಧಿಯಲ್ಲಿ ಎನ್.ಟಿ.ರಾಮರಾವ್ ಪಾತ್ರ ಅತ್ಯಂತ ಮಹತ್ವದ್ದು ಅವರು ಕೃಷ್ಣ ಮತ್ತು ರಾಮನಂತಹ ಪಾತ್ರಗಳಲ್ಲಿ ನಟಿಸುವ ಮೂಲಕ ಜನರು ಅವರಲ್ಲಿ ದೇವರ ರೂಪಗಳನ್ನು ಆ ಪಾತ್ರಗಳ ಪ್ರಭಾವ ಇಂದಿಗೂ ಜನಮಾನದಲ್ಲಿ ಅಳಿಸಲಾಗದ ಛಾಪು ಮೂಡಿಸಿದೆ ಎಂದು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು ಅವರು ತೆಲಗು ಸಿನಿಮಾ ರಂಗದ ಮೇರು ನಟ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ನಂದಮೂರಿ ತಾರಕ ರಾಮಾರಾವ್(NTR) ಅವರ ನೂರನೆ ವರ್ಷದ ಸವಿನೆನಪಿಗಾಗಿ ಕೇಂದ್ರ ಸರ್ಕಾರ ಹೊರತಂದಿರುವ ನೂರು ರೂಪಾಯಿ ಮೌಲ್ಯದ ನಾಣ್ಯವನ್ನು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ನಾಣ್ಯವನ್ನು ಬಿಡುಗಡೆ ಮಾಡಿ ಮಾತನಾಡಿದರು. ಎನ್ಟಿಆರ್ ಅವರ ನಟಸಿರುವ ‘ಮನುಷ್ಯುಲಂತ ಒಕ್ಕಟೆ’ ಚಿತ್ರದ ಮೂಲಕ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಕುರುತಂತೆ ಸಂದೇಶವನ್ನು ಸಮಾಜದಲ್ಲಿ ಹರಡಿದರು,ರಾಜಕೀಯ ರಂಗದಲ್ಲೂ ಎನ್.ಟಿ.ಆರ್ ತಮ್ಮ ವೈಶಿಷ್ಟತೆಯನ್ನು ಮೆರೆದು ಬಡವರು,ಶೋಷಿತರ ಪರವಾಗಿ ಸಾಮಾಜಿಕ ನ್ಯಾಯದಡಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ, ಎನ್ಟಿಆರ್ ಅವರ ಶತಮಾನೋತ್ಸವ ವರ್ಷದಲ್ಲಿ ನಾಣ್ಯವನ್ನು ತಂದಿದ್ದಕ್ಕಾಗಿ ಹಣಕಾಸು ಸಚಿವಾಲಯದ ಕಾರ್ಯವನ್ನು…