ನೆಲದ ಪಾಲಾದ ತರಕಾರಿ ಬೆಳೆಗಳು ಕೊಯ್ಲು ಹಂತದಲ್ಲಿದ್ದ ಬೆಳೆ ಬೊರ್ ವೆಲ್ ಶೆಡ್ ಗಳು ನೆಲಸಮ ಶ್ರೀನಿವಾಸಪುರ:ಒತ್ತುವರಿಯಾಗಿದೆ ಎನ್ನಲಾದ ಅರಣ್ಯ ಇಲಾಖೆಗೆ ಸೇರಿದ ಜಮೀನು ಒತ್ತುವರಿ ತೆರವು ಗೊಳಿಸುವ ಕಾರ್ಯಚರಣೆ ಶನಿವಾರ ಮದ್ಯರಾತ್ರಿ ಸಹ ಮುಂದುವರೆದಿದ್ದು 200ಕ್ಕೂ ಹೆಚ್ಚು ಎಕರೆ ಅರಣ್ಯ ಭೂಮಿಯ ಒತ್ತುವರಿ ತೆರವು ಮಾಡಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಶ್ರೀನಿವಾಸಪುರ-ಮುಳಬಾಗಿಲು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಕಸಬಾ ವ್ಯಾಪ್ತಿಯ ಕೇತಗಾನಹಳ್ಳಿ,ಚಿಂತಕುಂತೆ,ಹೆಬ್ಬಟ,ಅರಿಕೇರಿ ಅರಣ್ಯ ಪ್ರದೇಶಗಳಲ್ಲಿ ಅರಣ್ಯ ಜಮೀನು ತೆರವು ಕಾರ್ಯಚರಣೆ ಶನಿವಾರ ಮದ್ಯರಾತ್ರಿ ನಿರ್ವಹಿಸಲಾಗಿದೆ. 50ಕ್ಕೂ ಹೆಚ್ಚು ಜೆಸಿಬಿಗಳನ್ನು ಕಾರ್ಯಚರಣೆಯಲ್ಲಿ ಬಳಸಿಕೊಂಡು ಹತ್ತಾರು ವರ್ಷಗಳ ಮಾವು ಹಾಗು ಇನ್ನಿತರೆ ಮರಗಳನ್ನು ನೆಲಸಮ ಮಾಡಲಾಗಿದ್ದು ಈ ಭಾಗದಲ್ಲಿ ಮಾವಿನ ಮರಗಳಿಗಿಂತ ಹೆಚ್ಚಾಗಿ ವ್ಯವಸಾಯ ಭೂಮಿ ಇದ್ದು ಹತ್ತಾರು ಬೊರವೆಲ್ ಗಳು ಶೆಡ್ ಗಳು,ಕೃಷಿಹೊಂಡಗಳು,ನೆಲಸಮ ಮಾಡಲಾಗಿದ್ದರೆ ಕೊಯ್ಲು ಹಂತದಲ್ಲಿದ್ದ ಕೊಸು,ಸೌತೆಕಾಯಿ.ಈರೇಕಾಯಿ ಟಮ್ಯಾಟೊ ಇನ್ನಿತರೆ ತರಕಾರಿ ಬೆಳೆಗಳು ಜೆಸಿಬಿಗಳ ಅರ್ಭಟದಲ್ಲಿ ನಾಶವಾಗಿದೆ.ತೆರವು ಕಾರ್ಯಚರಣೆ ನೇತೃತ್ವ ವಹಿಸಿದ್ದ ಕೋಲಾರ ಜಿಲ್ಲಾ ಅರಣ್ಯಾಧಿಕಾರಿ ಎಡುಕೊಂಡಲು ಮಾತನಾಡಿ ಕಳೆದ…
Author: Srinivas_Murthy
ಶ್ರೀನಿವಾಸಪುರ: ಟ್ರಾಫಿಕ್ ಸಮಸ್ಯೆಯಿಂದ ಯುವನೊರ್ವ ಲಾರಿಗೆ ಸಿಲುಕಿ ದಾರುಣವಾಗಿ ಮೃತಪಟ್ಟ ಘಟನೆ ನಡೆದು ಮೂರು ದಿನ ಕಳೆದರು ಶ್ರೀನಿವಾಸಪುರ ಪಟ್ಟಣವನ್ನು ಕಾಡುತ್ತಿರುವ ರಸ್ತೆ ಸಂಚಾರದ ಸಮಸ್ಯೆ(Trafic probalem)ಬಗೆಹರಿಸಲು ತಾಲೂಕು ಆಡಳಿತ ಮುಂದಾಗದಿರುವ ಬಗ್ಗೆ ಸಾರ್ಬಜನಿಕರು ತೀವ್ರ ಅಸಮಧಾನ ವ್ಯಕ್ತಪಡಿಸಿರುತ್ತಾರೆ. ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಬೃಹದಾಕರವಾಗಿದೆ ಜನ ಸಂಚಾರಕ್ಕೆ ಅವಕಾಶ ಇಲ್ಲದಂತೆ ಎಂ.ಜಿ ರಸ್ತೆಯ ಫುಟ್ ಬಾತ್ ಬಹುತೇಕ ಒತ್ತುವರಿಯಾಗಿದ್ದು ಬಸ್ ನಿಲ್ದಾಣದ ವೃತ್ತದಲ್ಲಿ ಫುಟ್ ಬಾತ್ ದಿನ ಬಾಡಿಗೆ ವ್ಯಾಪರಕ್ಕೆ ನಿಗದಿಯಾಗಿದಿಯಂತೆ.ಎಂ.ಜಿ ರಸ್ತೆಯ ಇಂದಿರಾ ಕ್ಯಾಂಟಿನ್-ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಪ್ರದೇಶದಲ್ಲಿ ಫುಟ್ ಬಾತ್ ಕಾರ್ ಸ್ಟಾಂಡ್ ಆಗಿದ್ದರೆ ವಿವೇಕಾನಂದ ವೃತ್ತದಲ್ಲಿ ಬೈಕ್ ಸ್ಟಾಂಡ್ ಆಗಿದೆ, ವಾಸವಿ ಕಲ್ಯಾಣ ಮಂಟಪ ಭಾಗದ ತರಕಾರಿ ಅಂಗಡಿಗಳು ಫುಟ್ ಬಾತ್ ಮೀರಿ ರಸ್ತೆಯನ್ನೆ ಆಕ್ರಮಿಸಿಕೊಂಡಿವೆ,ಮುಳಬಾಗಿಲು ವೃತ್ತದಲ್ಲಿ ತಗಡಿನ ಅಂಗಡಿಗಳದೆ ಕಾರುಬಾರ್,ಸಂತೇ ಮೈದಾನದಲ್ಲಿ ಮನೆಗಳ ನಿರ್ಮಾಣ ಆದ ಹಿನ್ನಲೆಯಲ್ಲಿ ವಾರದ ಸಂತೆ ಏಕಾಏಕಿ ರಾಷ್ಟ್ರೀಯ ಹೆದ್ದಾರಿಯನ್ನ ಆಕ್ರಮಿಸಿಕೊಂಡಿದೆ.ವಿವೇಕಾನಂದ ರಸ್ತೆಯಲ್ಲಿ ಟೀಫನ್ ಹೋಟೆಲ್ ಗಳು ನಡೆಯುವುದೆ ರಸ್ತೆಯಲ್ಲಿ,ಆಜಾದ್…
ಶ್ರೀನಿವಾಸಪುರ: ಟ್ರಾಫಿಕ್ ಸಮಸ್ಯೆಯಿಂದ ಯುವನೊರ್ವ ಟಿಪ್ಪರ್ ಲಾರಿಗೆ ಸಿಲುಕಿ ದಾರುಣವಾಗಿ ಮೃತಪಟ್ಟ ಘಟನೆ ಇಂದು ಸಂಜೆ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆದಿರುತ್ತದೆ.ಲಾರಿಗೆ ಸಿಲುಕಿ ಮೃತ ಪಟ್ಟ ದ್ವಿಚಕ್ರ ವಾಹನ ಸವಾರನನ್ನು ಶ್ರೀನಿವಾಸಪುರ ಪಟ್ಟಣದ ದಿಗವಪಲ್ಲಿ ಚಲಪತಿ@ಥಿಯೆಟರ್ ಚಲಪತಿ ಮಗ ರಕ್ಷಿತ(23) ಎಂದು ಗುರುತಿಸಲಾಗಿದೆ.ಮೃತ ಯುವಕ ರಕ್ಷಿತ್ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಎಂ.ಬಿ.ಎ ವ್ಯಾಸಂಗ ಮಾಡುತ್ತಿದ್ದು ವರಮಹಾಲಕ್ಷ್ಮಿ ಹಬ್ಬಕ್ಕಾಗಿ ಊರಿಗೆ ಬಂದಿದ್ದು ಬಾಲ್ಯ ಸ್ನೇಹಿತರೊಂದಿಗೆ ಕ್ರಿಕೆಟ್ ಆಡಲು ಮಿಡ್ಲ್ ಸ್ಕೂಲ್ ಆವರಣಕ್ಕೆ ಹೋಗುತ್ತಿರಬೇಕಾದರೆ ಅಪಘಾತ ಆಗಿದೆ ಎನ್ನುತ್ತಾರೆ.ಮಿಡ್ಲ್ ಸ್ಕೂಲ್ ಆವರಣಕ್ಕೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರಬೇಕಾದರೆ ಇಂದಿರಾ ಕ್ಯಾಂಟೀನ್ ಮುಂಭಾಗದಲ್ಲಿ ಯುವಕ ರಕ್ಷಿತ್ ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿ ಸವರಿಕೊಂಡು ಹೋಗಿದೆ ಇನ್ನೊಂದಡೆ ಹಬ್ಬಕ್ಕೆ ತೆಂಗಿನ ಕಾಯಿ ಮಾರುವ ಆಟೋ ನಿಂತಿದ್ದು ಇಕ್ಕಾಟಾದ ಜಾಗದಲ್ಲಿ ದ್ವಿಚಕ್ರ ವಾಹನ ಆಯಾ ತಪ್ಪಿದೆ ಸವಾರ ರಕ್ಷಿತ್ ಅನಾಮತ್ ಲಾರಿ ಚಕ್ರದಡಿ ಬಿದ್ದಿರುತ್ತಾನೆ ಚಲಿಸುತ್ತಿದ್ದ ಲಾರಿ ಚಕ್ರಕ್ಕೆ ಅರ್ದ ದೇಹ ಸಿಲುಕಿದೆ ಟಿಪ್ಪರ್ ಲಾರಿ ಯುವಕನ ಮೆಲೆ ಹತ್ತಿದ್ದು ಕೆಲ…
ಶ್ರೀನಿವಾಸಪುರ:ಭಾರತದ ಚಂದ್ರಯಾನ-3 ಯಶಸ್ವಿಯಾಗಿದೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ದಕ್ಷಿಣ ಭಾಗದಲ್ಲಿ ಯಶಸ್ವಿಯಾಗಿ ಇಳಿದಿದ್ದು ಇದೊಂದು ವಿಶ್ವ ಸಾಧನೆ ಇದನ್ನು ಸಾಧಿಸಿದ ಮೊದಲ ರಾಷ್ಟ್ರ ನಮ್ಮ ದೇಶ ಎಂದು ಹೆಮ್ಮೆ ಆಗುತ್ತದೆ ಇದರ ಸಂಪೂರ್ಣ ಕೀರ್ತಿ ನಮ್ಮ ಹೆಮ್ಮೆಯ ಇಸ್ರೋ ವಿಜ್ನಾನಿಗಳಿಗೆ ಸಲ್ಲಬೇಕು ಅವರ ಸಾಧನೆ ಅನನ್ಯ ಎಂದು ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್ ಹೇಳಿದರು ಅವರು ಚಂದ್ರಯಾನ-3 ಯಶಸ್ವಿಯಾದ ಹಿನ್ನಲೆಯಲ್ಲಿ ರಾಷ್ಟ್ರ ಪ್ರೇಮಿಗಳ ವೇದಿಕೆ ಪಟ್ಟಣದ ಇಂದಿರಾಭವನ್ ವೃತ್ತದಲ್ಲಿ ಆಯೋಜಿಸಿದ್ದ ಸಂಭ್ರದ ವಿಜಯೋತ್ಸವದಲ್ಲಿ ಪಾಲ್ಗೋಂಡು ಮಾತನಾಡಿದರು.ಭಾರತೀಯ ಜನತಾ ಪಕ್ಷದ ಕೋಲಾರ ಜಿಲ್ಲಾ ರೈತ ಮೊರ್ಚಾ ಅಧ್ಯಕ್ಷ ಚಿರುವನಹಳ್ಳಿಲಕ್ಷ್ಮಣಗೌಡ ಮಾತನಾಡಿ ಚಂದ್ರಯಾನ-3 ವಿಕ್ರಮ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯುವ ಮೂಲಕ ಇಸ್ರೋ ವಿಜ್ನಾನಿಗಳ ಐತಿಹಾಸಿಕ, ಸಾಧನೆಯನ್ನು ಇಡೀ ವಿಶ್ವವೇ ಭಾರತದೆಡೆಗೆ ತಿರುಗಿ ನೋಡುವಂತೆ ಮಾಡಿದೆ, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ವಿಶ್ವಗುರುವನ್ನಾಗಿಸಿದೆ ಎಂದರು.ರಾಷ್ಟ್ರಧ್ವಜಗಳೊಂದಿಗೆ ಭಾರತ ಮಾತಾ ಕೀ ಜೈ ಘೋಷಣೆಯೊಂದಿಗೆ ಜನತೆ ಹಾಗು ಕಾರ್ಯಕರ್ತರು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಸಪ್ತಗಿರಿ…
ಶ್ರೀನಿವಾಸಪುರ:ಶ್ರೀನಿವಾಸಪುರ ಪಟ್ಟಣದ ಚಿಂತಾಮಣಿ ವೃತ್ತದಲ್ಲಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿಗೆ ಸೇರಿದ ಎ ಟಿ ಎಂ ನಲ್ಲಿ ಕಳ್ಳತನವಾಗಿದೆ.ಮಂಗಳವಾರ ಮದ್ಯರಾತ್ರಿ ನಡೆದಿರುವ ಕೃತ್ಯದಲ್ಲಿ ಎಟಿಎಂ ಸಿ ಸಿ ಕ್ಯಾಮೆರಾ ಗಳಿಗೆ ಕಪ್ಪು ಬಣ್ಣ ಬಳಿದು ನಂತರ ಗ್ಯಾಸ್ ಕಟರಗಳಿಂದ ಎ.ಟಿ.ಎಂ ಯಂತ್ರದ ಬಾಗಿಲುಗಳನ್ನು ಕತ್ತರಿಸಿ ಹಣ ಕಳ್ಳತನ ಮಾಡಿರುತ್ತಾರೆ.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸೇರಿದ ಎಟಿಎಂ ನಲ್ಲಿ ಸುಮಾರು ಸುಮಾರು 11 ಲಕ್ಷಕ್ಕೂ ಅಧಿಕ ಹಣವನ್ನು ಕಳ್ಳರು ತಗೆದುಕೊಂಡು ಹೋಗಿದ್ದಾರೆ.ಚಿಂತಾಮಣಿ ವೃತ್ತ ಪಟ್ಟಣದ ಮಧ್ಯಬಾಗದಲ್ಲಿದ್ದು ತಡರಾತ್ರಿ ಕಳೆದರು ಜನ ಸಂಚಾರ ಇರುತ್ತದೆ ಎ ಟಿ ಎಂ ಕಟ್ಟಡಕ್ಕೆ ಹೊಂದಿಕೊಂಡಂತೆ ಮನೆಗಳು ಇವೆ,ಜೊತೆಗೆ ಈ ವೃತ್ತದಲ್ಲಿ ಪೋಲಿಸ್ ಇಲಾಖೆ ವತಿಯಿಂದ ದೊಡ್ಡ ಗಾತ್ರದ ಸಿಸಿ ಕ್ಯಾಮರಾ ಅಳವಡಿಸಲಾಗಿದೆ ಆದರೂ ಎಟಿಎಂ ಕಳ್ಳತನವಾಗಿರುವ ಬಗ್ಗೆ ಸ್ಥಳೀಯರು ಆಶ್ಚರ್ಯ ವ್ಯಕ್ತಪಡಿಸಿರುತ್ತಾರೆ.ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ಕಳೆದ ಎರಡು-ಮೂರು ತಿಂಗಳ ಹಿಂದೆ ಚಿಂತಾಮಣಿ ನಗರದಲ್ಲೂ ಇದೆ ರೀತಿ ಒಂದೆ ರಾತ್ರಿಯಲ್ಲಿ ಎರಡು ಕಡೆ ಎಟಿಂ…
ಶ್ರೀನಿವಾಸಪುರದ ರಕ್ಷಿತಾರಣ್ಯ ಹೊಗಳಗೆರೆ ರಸ್ತೆಯಲ್ಲಿರುವ ಅರಣ್ಯ ಭೂಮಿ ಮದ್ಯರಾತ್ರಿಯಲ್ಲೆ ಅಬ್ಬರಿಸಿದ ಜೆಸಿಬಿಗಳು ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ಶ್ರೀನಿವಾಸಪುರ:ಅರಣ್ಯ ಇಲಾಖೆ ಜಮೀನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಸುಮಾರು 120 ಎಕರೆ ಅರಣ್ಯ ಭೂಮಿಯ ಒತ್ತುವರಿ ಮಾಡಿಕೊಂಡಿರುವ ಜಮೀನು ತೆರವು ಕಾರ್ಯ ಚರಣೆಯನ್ನು ಕೋಲಾರ ಜಿಲ್ಲಾ ಅರಣ್ಯಾಧಿಕಾರಿ ಎಡುಕೊಂಡಲು ನೇತೃತ್ವದಲ್ಲಿ ಮಂಗಳವಾರ ಮದ್ಯರಾತ್ರಿಯಿಂದಲೆ ತೆರವು ಗೊಳಿಸಲಾಗಿದೆ ಸುಮಾರು 25ಕ್ಕೂ ಹೆಚ್ಚು ಜೆಸಿಬಿಗಳು,ಬುಲ್ಡೋಜರಗಳು, ಕಾರ್ಯಚರಣೆಯಲ್ಲಿ ಉಪಯೋಗಿಸಲಾಗಿದ್ದು ಹತ್ತಾರು ವರ್ಷಗಳ ಮಾವಿನ ಮರಗಳು,ನೆರಳೆ ಸೇರಿದಂತೆ ವಿವಿಧ ಜಾತಿಯ ಹಣ್ಣುಗಳ ಮರಗಳು ಮತ್ತು ಬೊರವೆಲ್ ಶೆಡ್ ಗಳು,ಕೃಷಿಹೊಂಡಗಳು,ನೆಲಸಮ ವಾದರೆ ಇನ್ನು ಕೆಲವು ಭಾಗದಲ್ಲಿ ಬೆಳೆದಿದ್ದ ತರಕಾರಿ ಬೆಳೆಗಳು ಜೆಸಿಬಿಗಳ,ಬುಲ್ಡೋಜರ್ ವಾಹನಗಳ ಚಕ್ರಗಳ ಕೆಳಗೆ ನಲಗಿ ಹೋದವು.ಶ್ರೀನಿವಾಸಪುರ ತಾಲೂಕಿನ ಹೊಗಳಗೆರೆ ರಸ್ತೆಯಲ್ಲಿರುವಂತ ಅರಣ್ಯ ಭೂಮಿ ಒತ್ತುವರಿಯಾಗಿದ್ದ ಬಗ್ಗೆ ದೂರುಗಳು ಬಂದ ಹಿನ್ನಲೆಯಲ್ಲಿ ಕೋಲಾರ ಜಿಲ್ಲಾ ಅರಣ್ಯ ಇಲಾಖೆ ಡಿಎಫ್ಓ ಏಡುಕೊಂಡಲ ನೇತೃತ್ವದಲ್ಲಿ ಶ್ರೀನಿವಾಸಪುರ ರೇಂಜ್ ಫಾರೆಸ್ಟರ್ ಮಹೇಶ್,ಮುಳಬಾಗಿಲು ರೇಂಜ್ ಫಾರೆಸ್ಟರ್ ಜ್ಯೋತಿ ಸೇರಿದಂತೆ 150 ಕ್ಕೂ ಹೆಚ್ಚು…
ಶ್ರೀನಿವಾಸಪುರ:ತಾಲೂಕಿನ ರಾಯಲ್ಪಾಡು ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ರಾಯಲ್ಪಾಡು ಗ್ರಾಮದ ಊರಾಚಗಿನ ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು ಸುಮಾರು 4-5 ದಿನಗಳ ಹಿಂದೆ ಮೃತಪಟ್ಟಿರಬಹುದು ಎಂದು ಪೋಲಿಸರು ಶಂಕೆ ವ್ಯಕ್ತಪಡಿಸಿದ್ದಾರೆ.ರಾಯಲ್ಪಾಡು ಗ್ರಾಮದ ಹೊರವಲಯದ ಬಾವಿಯಲ್ಲಿ ಶವ ತೆಲುತ್ತಿರುವ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ರಾಯಲ್ಪಾಡು ಪೊಲೀಸರು ಮೃತ ದೇಹ ಹೊರತಗೆಸಿದ್ದು ಅಂದಾಜು 40 ವರ್ಷದ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ,ನೀಲಿ ಬಣ್ಣದ ಶರ್ಟ್ ಹಾಗೂ ಬೆಲ್ಟ್ ಚಪ್ಪಲಿಗಳು ಬಾವಿಯ ದಡದಲ್ಲಿಯೆ ಇದ್ದು ಇದು ಆತ್ಮಹತ್ಯೆ ಇರಬಹುದ ಎನ್ನಲಾಗಿದೆ,ಶವದ ಗುರುತು ಪಡೆಯಲು ಯಾವುದೆ ಪುರಾವೆ ಇಲ್ಲ ಎನ್ನುತ್ತಾರೆ ಪೋಲಿಸರು ಶವವನ್ನು ಕೋಲಾರ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದ್ದು,ರಾಯಲ್ಪಾಡು ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಯಾವುದೆ ವ್ಯಕ್ತಿ ನಾಪತ್ತೆ ಪ್ರಕರಣ ಇಲ್ಲವಾಗಿದ್ದು ಇತರೆ ತಾಲೂಕು ಅಥಾವ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವ್ಯಕ್ತಿ ನಾಪತ್ತೆ ಸಂಭಂದಿತ ಪ್ರಕರಣ ಇದ್ದರೆ ಮಾಹಿತಿ ಪಡೆಯಬಹುದಾಗಿದೆ ಎನ್ನುತ್ತಾರೆ ಪ್ರಕರಣ ದಾಖಲಿಸಿಕೊಂಡಿರುವ ರಾಯಲ್ಪಾಡು ಪೊಲೀಸರು.
ಶ್ರೀನಿವಾಸಪುರ:ದೇವರಾಜ್ ಅರಸ್ ರಾಜ್ಯ ಕಂಡಂತ ಶ್ರೇಷ್ಠ ಸಮಾಜ ಸುಧಾರಕ ಹಾಗೆ ಅವರು ಮುಖ್ಯಮಂತ್ರಿಯಾಗಿ ಹಲವಾರು ಕಾನೂನುಗಳನ್ನು ತಂದು ಹಿಂದುಳಿದ ಸಮಾಜಗಳಿಗೆ ಶಕ್ತಿ ತುಂಬಿದರು ಎಂದು ತಹಶೀಲ್ದಾರ್ ಶೀರಿನ್ ತಾಜ್ ಹೇಳಿದರು ಅವರು ಇಂದು ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ್ ಅರಸ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ದೇವರಾಜ್ ಅರಸ್ ಕೇವಲ ರಾಜಕಾರಣಿ, ಮುಖ್ಯಮಂತ್ರಿ ಅಷ್ಟೆ ಆಗಿರದೆ,ಸಾಮಾಜಿಕ ಬದಲಾವಣೆಯ ಹರಿಕಾರರಾಗಿ,ತತ್ವಜ್ಞಾನಿಯಾಗಿ,ಸಮಾಜದ ಚಿಂತಕರಾಗಿದ್ದರು ಎಂದರು.ತಾಲೂಕು ಹಿಂದುಳಿದ ಸಮಾಜಗಳ ಒಕ್ಕೂಟದ ಅಧ್ಯಕ್ಷ ವೇಣುಗೋಪಾಲ್ ಮಾತನಾಡಿ ದೇವರಾಜ್ ಅರಸ್ ಹೆಸರೇ ಹೇಳುವಂತೆ ಧಿಮಂತಿಕೆ ಇರುವ ಆಡಳಿತಗಾರರಾಗಿ ಕರ್ನಾಟಕ ರಾಜ್ಯದಲ್ಲಿ ಮೌನ ಸಾಮಾಜಿಕ ಕ್ರಾಂತಿ ಪ್ರತಿಪಾದಕರಾಗಿಜನಸಾಮನ್ಯರ,ತುಳಿತಕ್ಕೊಳಗಾದವರ ಧ್ವನಿಯಾಗಿ ಅಂತಹವರ ಪರವಾಗಿ ನಿಂತು ಕರ್ನಾಟಕದ 8 ನೇ ಮುಖ್ಯಮಂತ್ರಿಯಾಗಿ ಎರಡು ಅವಧಿಗೆ ಸುದೀರ್ಘಕಾಲ ಕ್ರಾಂತಿಕಾರಿ ಮುಖ್ಯಮಂತ್ರಿಯಾಗಿ ಧಿಮಂತ ಆಡಳಿತಗಾರರಾಗಿ ಹಲವಾರು ಜನಪಯೋಗಿ ಸುಧಾರಣೆಗಳನ್ನು ತಂದ ಅವರು ಸ್ವತಃ ಭೂಮಾಲಿಕರಾಗಿ ತಮ್ಮ ಆಡಳಿತಾವಧಿಯಲ್ಲಿ ಭೂಸುಧಾರಣೆ ಕಾಯ್ದೆ ತಂದವರು,ಕರ್ನಾಟಕ ಋಣಮುಕ್ತ ಕಾಯ್ದೆ…
ನ್ಯೂಜ್ ಡೆಸ್ಕ್: ಬಿಹಾರ ರಾಜ್ಯದ ಅರಾರಿಯಾ ಜಿಲ್ಲೆಯಲ್ಲಿ ಒರ್ವ ಪತ್ರಕರ್ತನನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಮೃತ ಪತ್ರಕರ್ತನನ್ನು ವಿಮಲ್ ಕುಮಾರ್ ಯಾದವ್ (35) ಎಂದು ಗುರುತಿಸಲಾಗಿದ್ದು ದೈನಿಕ್ ಜಾಗರಣ ದಿನಪತ್ರಿಕೆಯ ಕ್ರೈಂ ವರದಿಗಾರನಾಗಿ ಕೆಲಸ ಮಾಡುತ್ತಿದ್ದ ಎಂದು ಪೋಲಿಸರು ತಿಳಿಸಿರುತ್ತಾರೆ.ಶುಕ್ರವಾರ ಮುಂಜಾನೆ 4.30 ಸಮಯದಲ್ಲಿ ರಾಣಿಗಂಜ್‌ನಲ್ಲಿರುವ ವಿಮಲ್ ಕುಮಾರ್ ಯಾದವ್ ಅವರ ಮನೆ ಬಾಗಿಲು ಬಡೆಯುವ ದುಷ್ಕರ್ಮಿಗಳು ಬಾಗಿಲು ತಗೆದ ವಿಮಲ್ ಕುಮಾರ್ ನ ಎದೆಗೆ ಗುಂಡು ಹಾರಿಸಿದ್ದಾರೆ. ಇದರಿಂದ ಕುಸಿದು ಬಿದ್ದ ವಿಮಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಮಲ್ ಅವರ ಸಹೋದರನನ್ನು ಈ ಹಿಂದೆಯೂ ಕೊಲೆ ಮಾಡಲಾಗಿದ್ದು, ಘಟನೆಗೆ ವಿಮಲ್ ಪ್ರತ್ಯಕ್ಷದರ್ಶಿಯಾಗಿದ್ದ ಎಂದು ಅರಾರಿಯಾ ಎಸ್ಪಿ ಅಶೋಕ್ ಕುಮಾರ್ ಸಿಂಗ್ ಹೇಳಿದ್ದಾರೆ. ಈ ಪ್ರಕರಣದ ಆರೋಪಿಗಳು ವಿಮಲ್‌ನನ್ನೂ ಹತ್ಯೆ ಮಾಡಿರಬಹುದು ಎಂದು ಶಂಕಿಸಿದ್ದಾರೆ.
ನ್ಯೂಜ್ ಡೆಸ್ಕ್:ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ಆಪರೇಷನ್ ಹಸ್ತದ ಬಗ್ಗೆ ಹಾಟ್ ಟಾಪಿಕ್ ಶುರುವಾಗಿದೆ, ಆಪರೇಷನ್ ಹಸ್ತ ನಡೆಯುತ್ತದೆ ಎಂದು ಸುದ್ದಿ ಸುಂಟರಗಾಳಿಯ ಅಲೆಗಳಂತೆ ಊಹಾಪೋಹಗಳಾಗಿ ಹರಿದಾಡುತ್ತಿವೆ.ಇದಕ್ಕೆ ಪುರಾವೆ ಎನ್ನುವಂತೆ ನೆಲಮಂಗಲ ಕಾಂಗ್ರೆಸ್ ಶಾಸಕ ಎನ್.ಶ್ರೀನಿವಾಸಯ್ಯ, ಬಿಜೆಪಿ ಶಾಸಕ ಸೋಮಶೇಖರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರಂತೆ ಇದಕ್ಕೆ ಬಿಜೆಪಿ ಶಾಸಕರಾದ ಎಸ್ಟಿ ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆಗೆ ಚಿಂತನೆ ನಡೆಸಿದ್ದಾರಂತೆ ಎಂಬ ಸುದ್ದಿ ರಾಜ್ಯ ರಾಜಕೀಯ ಪಡಸಾಲೆಯಲ್ಲಿ ತಿರುಗಾಡುತ್ತಿದೆ. ಇದರ ನಡುವೆ ಮೊಸ್ಟ್ ಪವರ್ ಫುಲ್ ಕಾಂಗ್ರೆಸ್ ಲಿಡರ್ ದಿ.ಸಿ.ಎಂ ಡಿಕೆ ಶಿವಕುಮಾರ್ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದೆಂದು ಹೇಳುವ ಮೂಲಕ ಆಪರೇಷನ್ ಹಸ್ತ ನಡೆಯುತ್ತದೆ ಎಂಬ ಕ್ಲೂ ಬಿಟ್ಟುಕೊಟ್ಟಿದ್ದಾರೆ.ಬಾಂಬೆ ಬಾಯ್ಸ್ ಘರ್‌ವಾಪ್ಸಿ ವಿಚಾರದಲ್ಲಿ ಕಾಂಗ್ರೆಸ್ ಆಸಕ್ತಿ ವಹಿಸಿದೆ ಎನ್ನುವ ಮಾತು ಕೇಳಿಬರುತ್ತಿದೆ ಮೊನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಿ.ಜೆ.ಪಿ ಶಾಸಕ ಎಸ್.ಟಿ ಸೋಮಶೇಖರ್ ಸರ್ಕಾರಿ ಕಾರ್ಯಕ್ರಮದ ಬಹಿರಂಗ ಸಭೆಯಲ್ಲಿ ಹೊಗಳಿದ್ದೆ ಘರ್‌ವಾಪ್ಸಿ ಸುಳಿವು ಎನ್ನಲಾಗಿತ್ತು…