Author: Srinivas_Murthy

ಕೋಲಾರ:ಕೋಲಾರ ಜಿಲ್ಲೆಗೆ ಆಗಮಿಸಿದ ಆಂಧ್ರ ಪ್ರದೇಶದ ಪ್ರಭಾವಿ ಸಚಿವ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ಅವರ ಪುತ್ರ ಹಾಗು ಮಾನವ ಸಂಪನ್ಮೂಲ ಸಚಿವ ನಾರಾ ಲೋಕೇಶ್ ಹಾಗು ಆಂಧ್ರ ಆರೋಗ್ಯ ಸಚಿವ ಸತ್ಯಕುಮಾರ್ ಯಾದವ್ ಇಬ್ಬರು ಇಂದು ಕೋಲಾರ ನಗರದ ಆರೋಗ್ಯ ಇಲಾಖೆ ಕಚೇರಿಗೆ ಇಲ್ಲಿಗೆ ಭೇಟಿ ನೀಡಿ ಇಲ್ಲಿನ ಟಾಟಾ ಟ್ರಸ್ಟ್ ವತಿಯಿಂದ ನಿರ್ಮಾಣ ಮಾಡಿರುವ ಡಿಜಿಟಲ್ ನರ್ವ್ ಸೆಂಟರ್ DINP ನಲ್ಲಿ ಕಾರ್ಯನಿರ್ವಹಣೆ ಕುರಿತಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.ನಂತರ ಕೋಲಾರ ತಾಲೂಕು ವೇಮಗಲ್ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ತೆರಳಿ ಅಲ್ಲಿ ಡಿಜಿಟಲ್ ನರ್ವ್ ಸೆಂಟರ್ ಕುರಿತಂತೆ ಅಶಾ ಕಾರ್ಯಕರ್ತರಿಂದ ಪ್ರಾತ್ಯಕ್ಷತೆ ಪಡೆದುಕೊಂಡರು.ಕನ್ನಡದಲ್ಲೆ ಮಾತನಾಡಿದ ಆರೋಗ್ಯ ಸಚಿವಆಂಧ್ರದ ಧರ್ಮಾವರಂ ಶಾಸಕ ಆರೋಗ್ಯ ಸಚಿವ ಸತ್ಯಕುಮಾರ್ ಯಾದವ್ ರವರು ಆಶಾ ಕಾರ್ಯಕರ್ತರನ್ನು ಕನ್ನಡದಲ್ಲೆ ಮಾತನಾಡಿ ಅವರಿಂದ ಕನ್ನಡದಲ್ಲಿ ಮಾಹಿತಿ ಪಡೆದುಕೊಂಡಿದ್ದಲ್ಲದೆ ಆರೋಗ್ಯ ಸೇವೆಗಳ ಕುರಿತಾಗಿ ಆಸ್ಪತ್ರೆ ಬಂದಿದ್ದ ರೋಗಿಗಳಿಂದ ಕನ್ನಡದಲ್ಲಿ ಮಾಹಿತಿ ಪಡೆದುಕೊಂಡಿದ್ದು ವಿಶೇಷವಾಗಿತ್ತು. ನಮ್ಮ ಆರೋಗ್ಯ ಸಚಿವರಿಗೆ ಚನ್ನಾಗಿ ಕನ್ನಡ ಬರುತ್ತದೆ…

Read More

ಕೋಲಾರ:ಬಿಳಿ ಬಟ್ಟೆ ಹಾಕಿಕೊಂಡು ಚುನಾವಣೆಗೆ ಹೋಗುವ ಮಾತೆ ಇಲ್ಲ ಎಂದು ಪರೋಕ್ಷವಾಗಿ ಚುನಾವಣಾ ನಿವೃತ್ತಿಯ ಮಾತನ್ನು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಡಿದ್ದಾರೆ.ಅವರು ಭಾನುವಾರ ಕೋಲಾರ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಪಂ ಮಾಜಿ ಅಧ್ಯಕ್ಷ ದಿವಂಗತ ಜನ್ನಘಟ್ಟ ವೆಂಕಟಮುನಿಯಪ್ಪ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತ ಹೇಳಿದರು.ರಮೇಶ್ ಕುಮಾರ್ ಭಾಷಣದ ಉದ್ದಕ್ಕೂ ವಿಷಾದಭರಿತವಾಗಿ ,ಮಾತನಾಡಿದರು ಜೊತೆಗೆ ಇದ್ದು, ಕೆಲಸ ಮಾಡಿ ಎಲ್ಲಾ ಸರಿಯಾಗಿದೆ ಎಂದು ಹೇಳಿದರು ನಂತರ ನಡೆದಿದ್ದೆ ಬೇರೆ ಚುನಾವಣೆ ಸೋಲಿಗೆ ನಾನು ಹೆದರಲಿಲ್ಲ,ಚುನಾವಣೆಯಲ್ಲಿ ಸೋತೆ ನಾಲ್ಕಾಗಿತ್ತು ಈಗ 5 ನೇ ಸೋಲಾಗಿದೆ ಯಾಕೆ ಸೋತೆ ಅಂದ್ರೆ ನಂಬಿಸಿ ದ್ರೋಹ ಎಸಗಿ ಸೋಲಿಸಿದರು. ಊಟಕ್ಕೆ ಕರೆದು ವಿಷ ಇಕ್ಕಿದರು,ಭುಜದ ಮೇಲೆ ಕೈ ಹಾಕಿ ಬೆನ್ನ ಹಿಂದೆ ತಿವಿದವರು,ಜೊತೆಯಲ್ಲೆ ಇದ್ದು ಕಾಲಿಗೆ ಅಡ್ಡ ಇಟ್ಟು ಬೀಳಿಸಿದವರು,ದೇವರಿಗೆ ನಮಸ್ಕಾರ ಮಾಡಲು ಬಗ್ಗಿದಾಗ ಕುತ್ತಿಗೆಗೆ ಕತ್ತಿ ಇಟ್ಟರು,ಎಂದು ಯಾರೊಬ್ಬರ ಹೆಸರು ಪ್ರಸ್ತಾಪಿಸದೆ ತಮ್ಮ ಸೋಲಿಗೆ ಕಾರಣರಾದವರು ಮಾಡಿದ ತಂತ್ರಗಳ ಬಗ್ಗೆ ತಮ್ಮದೆ ಶೈಲಿಯಲ್ಲಿ ವಿಡಂಬನಾತ್ಮಕವಾಗಿ ಹೇಳಿದರು.…

Read More

ಶ್ರೀನಿವಾಸಪುರ ತಾಲೂಕಿನಲ್ಲಿ ಮೀಟರ್​ ಬಡ್ಡಿ ದಂಧೆ ಹೆಚ್ಚಾಗಿದ್ದು ಮಹುಳೆಯೊಬ್ಬಳು ಮೀಟರ್​ ಬಡ್ಡಿ ದಂಧೆ ಕೋರರ ಕಾಟಕ್ಕೆ ಬೆಚ್ಚಿಬಿದ್ದು ಭೀತಿಯಿಂದ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.ಕೈಸಾಲಕ್ಕೆ ಬಡ್ಡಿ ಕಟ್ಟಲಾಗದೇ ಆತ್ಮಹತ್ಯೆಗೆ ಯತ್ನಿಸಿದ್ದು ಅಸ್ವಸ್ಥಗೊಂಡ ಮಹಿಳೆಯನ್ನು ಅಕೆ ಮಗಳು ಸಕಾಲದಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೀಟರ್ ಬಡ್ಡಿ ದಂಧೆಕೋರರಿಗೆ ಯಾವುದೆ ಕಾನೂನಿನ ಚೌಕಟ್ಟು ಇಲ್ಲದೆ ಅವ್ಯಾಹುತವಾಗಿ ದಂಧೆ ನಡೆಸಲಾಗುತ್ತಿದೆ ಇದರ ಪರಿಣಾಮ ಸಣ್ಣ-ಪುಟ್ಟ ಸಾಲ ಪಡೆದಂತವರು ಬಡ್ಡಿ ದಂಧೆ ಕೋರರ ಕಾಟಕ್ಕೆ ಊರುಗಳನ್ನೆ ತೊರೆಯುತ್ತಿದ್ದಾರೆ. ಶ್ರೀನಿವಾಸಪುರ:ಮೀಟರ್ ಬಡ್ಡಿದಂಧೆಕೋರರ ಕಾಟದಿಂದ ಬೆಚ್ಚಿದ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಯತ್ನ ಮಾಡಿರುವ ಘಟನೆ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆದಿದೆ.ಮಗಳ ಮದುವೆ,ವಿದ್ಯಾಭ್ಯಾಸ ಹಾಗೂ ಕುಟುಂಬದ ಅವಶ್ಯಕ್ಕಾಗಿ ಸಾಲ ಮಾಡಿದ್ದ ಮಹಿಳೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಪಡೆದಿದ್ದ ಸಾಲ ತೀರಿಸಲಾಗದೆ ಮೀಟರ್ ಬಡ್ಡಿದಂಧೆಕೋರರ ಕಾಟದಿಂದ ಬೇಸತ್ತು ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ಗ್ರಾಮದ ಮಹಿಳೆ ಕೋಮಲಾದೇವಿ ಮಹಿಳೆ ಮೀಟರ್‌ ಬಡ್ಡಿ ಚಕ್ರವೂಹ್ಯಕ್ಕೆ ಸಿಲುಕಿ ಬೆಚ್ಚಿದ ಆಕೆ ಮೀಟರ್ ದಂದೆ ಕೊರರ ಹೆಸರನ್ನು ಪತ್ರದಲ್ಲಿ ಬರೆದಿಟ್ಟು…

Read More

ಕೋಲಾರ: ಕೋಲಾರದ ಅಂತರಗಂಗೆ ಬೆಟ್ಟದಲ್ಲಿ ಶುಕ್ರವಾರ ರಾತ್ರಿ ಆಯೋಜಿಸಿದ್ದ ಶಿವ ಲಕ್ಷ ದೀಪೋತ್ಸವ ಮತ್ತು ತೆಪ್ಪೋತ್ಸವಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೋಂಡು ಪುನೀತರಾದರು. ಶ್ರೀವಿಶಾಲಾಕ್ಷಿ ಸಮೇತ ಶ್ರೀ ಕಾಶಿ ವಿಶ್ವೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆದಂತ ಶಿವ ಲಕ್ಷ ದೀಪೋತ್ಸವವನ್ನು ಹಾಗು ಒಂದು ಸಾವಿರಕ್ಕೂ ಹೆಚ್ಚು ಕೆಜಿ ಎಣ್ಣೆಯನ್ನು ಭಕ್ತರು ಹಣತೆಗಳಿಗೆ ಸುರಿದು ದೀಪ ಬೆಳಗಿಸಿ ಬೆಟ್ಟದ ದಾರಿಯುದ್ದಕ್ಕೂ ಬೆಳಕಿನ ಹಣತೆಗಳ ಸಾಲು ಚುಮುಚುಮು ಚಳಿಯಲ್ಲಿ ಭಕ್ತರ ಮನ ಸೇಳೆದು ಮುದ ನೀಡಿತು.ಬಸವನ ಬಾಯಿಂದ ಸದಾ ನೀರು ಹರಿಯುವ ಅಂತರಂಗೆಯ ಕಲ್ಯಾಣಿಯಲ್ಲಿ ತೆಪ್ಪೋತ್ಸವವನ್ನು ವೀಕ್ಷಿಸಿದ ಸಹಸ್ರಾರು ಭಕ್ತರು ಭಕ್ತಪರವಶರಾದರು ಇದೆ ಸಂದರ್ಭದಲ್ಲಿ ಬೆಟ್ಟದ ತಪ್ಪಲಲ್ಲಿನ ಜಲಕಂಠೇಶ್ವನಿಗೆ ಪಂಚಾಮೃತ ಅಭಿಷೇಕ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಶಿವ ಲಕ್ಷ ದೀಪೋತ್ಸವ ಹಾಗು ತೆಪ್ಪೋತ್ಸವ ಸಂದರ್ಬದಲ್ಲಿ ಏರ್ಪಡಿಸಿದ್ದ ನಾದಸ್ವರ ಮತ್ತು ಸ್ಯಾಕ್ಯೋಫೋನ್ ವಾದನದ ಗಮನ ಸೆಳೆಯಿತು. ಭಕ್ತರ ಭಜನೆ,ಹಾಡುಗಾರಿಕೆಯೂ ಜನಮನ ಸೆಳೆಯುವಲ್ಲಿ ಯಶಸ್ವಿಯಾಯಿತು.ಅರ್ಚಕರಾದ ಮಂಜುನಾಥ ದೀಕ್ಷಿತ್, ಚಂದ್ರಶೇಖರ್ ದೀಕ್ಷಿತ್, ಕಾಶಿವಿಶ್ವೇಶ್ವರ ದೀಕ್ಷಿತ್ ಪೂಜಾ ಕಾರ್ಯಕ್ರಮ ನಿರ್ವಹಿಸಿದರು.ಕಿಲಾರಿಪೇಟೆ…

Read More

ಬೆಂಗಳೂರು:ಪತ್ನಿಯ ಕಾಟಕ್ಕೆ ಬೆಸೆತ್ತು ಪೋಲಿಸ್ ಹೆಡ್ ಕಾನ್ಸ್ಟೇಬಲ್ ಒಬ್ಬರು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಬೈಯಪ್ಪನಹಳ್ಳಿಯ ಹುಸಗೂರು ರೈಲ್ವೇ ಗೇಟ್ ಹತ್ತಿರ ನಡೆದಿದೆ.ಆತ್ಮಹತ್ಯೆ ಮಾಡಿಕೊಂಡ ಪೋಲಿಸ್ ಹೆಡ್ ಕಾನ್ಸ್ಟೇಬಲ್ ನನ್ನು ತಿಪ್ಪಣ್ಣ ಗುರುತಿಸಲಾಗಿದ್ದು ಇವರು ಬೆಂಗಳೂರು ನಗರದ ಹುಳಿಮಾವು ಠಾಣೆಯ ಹೆಡ್ ಕಾನ್ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದರು.ಜೀವ ಬೆದರಿಕೆ ಇತ್ತು ಡೆತ್ ನೋಟ್ ನಲ್ಲಿ ಪ್ರಸ್ತಾಪ!ಮೂರು ವರ್ಷಗಳ ಹಿಂದೆ ತಿಪ್ಪಣ್ಣ ಅವರು ಮದುವೆಯಾಗಿದ್ದು ಒಂದು ವರ್ಷದ ವರೆಗೆ ಎಲ್ಲವೂ ಚೆನ್ನಾಗಿತ್ತು. ಆದರೆ ಒಂದು ವರ್ಷದ ಬಳಿಕ ಸಂಸಾರದಲ್ಲಿ ವೈಮನಸ್ಸು ಮನೆ ಮಾಡಿತ್ತು ಪತ್ನಿ ಮತ್ತು ಆಕೆಯ ತಂದೆ ಯಮುನಪ್ಪ ಇಬ್ಬರು ಸೇರಿ ಮಾನಸಿಕವಾಗಿ ಹಿಂಸೆ ನೀಡುತ್ತ ಹಿಯ್ಯಾಳಿಸಿ ಅಶ್ಲೀಲವಾಗಿ ಬೈದು ಕಿರುಕುಳ ಕೊಡುತ್ತಿದ್ದರು ಜೊತೆಗೆ ಮಾವ ಯಮನಪ್ಪನಿಂದ ಜೀವ ಬೆದರಿಕೆ ಹಾಕಿರುವ ಬಗ್ಗೆ ಡೆತ್ ನೋಟ್ ಪ್ರಸ್ತಾಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ರೈಲ್ವೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.ಪತ್ನಿ ಟಾರ್ಚರಗೆ ಸಾಫ್ಟವೇರ್ ಉದ್ಯೋಗಿ ಅತ್ಮಹತ್ಯೆಇತ್ತೀಚಿಗೆ ಬೆಂಗಳೂರಿನಲ್ಲಿ ಪತ್ನಿಯ ಕಾಟಕ್ಕೆ…

Read More

ಸಿನಿ ಡೆಸ್ಕ್:ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಬಂಧನದ ಎಪಿಸೋಡ್ ನಲ್ಲಿ ಬಹು ದೊಡ್ಡ ಟ್ವಿಸ್ಟ್ ಸಿಕ್ಕಿದೆ ಒಂದಡೆ ನಾಂಪಲ್ಲಿ ನ್ಯಾಯಾಲಯ 14 ದಿನಗಳ ಬಂಧನವನ್ನು ಘೋಷಿಸಿತ್ತು ಆದರೆ ಅವರಿಗೆ ಹೈಕೋರ್ಟ್ ನಲ್ಲಿ ಮಧ್ಯಂತರ ಜಾಮೀನು ಸಿಕ್ಕಿದೆ.ಪುಷ್ಪ 2 ಸಿನಿಮಾದ ಪ್ರಥಮ ಪ್ರದರ್ಶನದ ವೇಳೆ ಸಂಧ್ಯಾ ಥಿಯೇಟರ್ ರೇವತಿ ಎಂಬ ಮಹಿಳೆ ಸಾವಿಗಿಡಾಗಿದ್ದು ಇದಕ್ಕೆ ಸಂಬಂದಿಸಿದಂತೆ ಅಲ್ಲು ಅರ್ಜುನ್ ಸೇರಿದಂತೆ ಸಿನಿಮಾ ತಂಡದ ವಿರುದ್ಧ ಪೊಲೀಸರು ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದರು ಅದರಂತೆ ಶುಕ್ರವಾರ ಚಿಕ್ಕಡಪಲ್ಲಿ ಪೊಲೀಸರು ಅಲ್ಲು ಅರ್ಜುನ್‌ನನ್ನು ಬಂಧಿಸಿದ್ದು ಮೊದಲು ಬನ್ನಿಯನ್ನು ಚಿಕ್ಕಡ್ ಪಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ದರು.. ಪೊಲೀಸರು ಆತನ ಹೇಳಿಕೆಯನ್ನು ದಾಖಲಿಸಿಕೊಂಡು ಅಲ್ಲಿಂದ ಗಾಂಧಿ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಿ ಬಳಿಕ ನಾಂಪಲ್ಲಿ ಕೋರ್ಟಿನಲ್ಲಿ ಹಾಜರುಪಡಿಸಿದ್ದು ಅಲ್ಲಿ ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ ನ್ಯಾಯಾಲಯ ಅಲ್ಲು ಅರ್ಜುನ್‌ಗೆ 14 ದಿನಗಳ ಕಾಲ ರಿಮಾಂಡ್ ನೀಡಿತ್ತು ಅದರಂತೆ ಪೊಲೀಸರು ಆತನನ್ನು ಚಂಚಲ್ ಗುಡಾ ಜೈಲಿಗೆ…

Read More

ಹೈದರಾಬಾದ್ ಸಂಧ್ಯಾ ಥಿಯೇಟರ್ ನಲ್ಲಿ ಏರ್ಪಡಿಸಿದ್ದ ಪುಷ್ಪ 2 ಸಿನಿಮಾ ಬೆನಿಫಿಟ್ ಶೊನಲ್ಲಿ ಜನ ಸಂದಣಿ ಹೆಚ್ಚಾಗಿ ನಡೆದಂತ ತಳ್ಳಾಟದದಲ್ಲಿ ಒರ್ವ ಮಹಿಳೆ ಕಾಲ್ತುಳಿತಕ್ಕೆ ಒಳಗಾಗಿ ಮೃತ ಪಟ್ಟಿದ್ದು ಇದಕ್ಕೆ ಸಂಬಂದಿಸಿದಂತೆ ಪೊಲೀಸರು ಥಿಯೇಟರ್ ಮಾಲೀಕ ಸೇರಿದಂತೆ ಮೂವರನ್ನು ಈಗಾಗಲೆ ಬಂಧಿಸಿದ್ದಾರೆ ಅದೆ ವಿಚಾರದಲ್ಲಿ ಈಗ ಅಲ್ಲು ಅರ್ಜುನನ್ನು ಬಂಧಿಸಲಾಗಿದೆ ಅವರಿಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಸಿನಿ ಡೆಸ್ಕ್:ತೆಲಗು ಚಿತ್ರರಂಗದ ಪ್ರಖ್ಯಾತ ಸಿನಿಮಾ ನಟ ಐಕಾನ್ ಸ್ಟಾರ್ ಅಲ್ಲು ಅರ್ಜುನ್@ಬನ್ನಿ ಅವರನ್ನು ತೆಲಂಗಾಣದ ಚಿಕ್ಕಡಪಲ್ಲಿ ಪೋಲಿಸರು ಬಂಧಿಸಿದ್ದಾರೆ. ಈ ತಿಂಗಳ 4 ರಂದು ಪುಷ್ಪ 2 ಸಿನಿಮಾ ಬೆನಿಫಿಟ್ ಶೊ ಕಾರ್ಯಕ್ರಮ ಹೈದರಾಬಾದನ್ ಸಂಧ್ಯಾ ಥಿಯೇಟರ್ ನಲ್ಲಿ ಆಯೋಜಿಸಿದ್ದು ಅಲ್ಲಿ ನಡೆದ ತಳ್ಳಾಟ ನೂಕಾಟದಲ್ಲಿ ಒರ್ವ ಮಹಿಳೆ ಮೃತ ಪಟ್ಟ ಘಟನೆಗೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಅವರ ಮೇಲೆ ಕೊಲೆಗೆ ಸಮಾನವಲ್ಲದ ನರಹತ್ಯೆ ಹಾಗೂ ಸ್ವಯಂಪ್ರೇರಣೆಯಿಂದ ಇನ್ನೊಬ್ಬರಿಗೆ ಹಾನಿ ಉಂಟುಮಾಡಿದ ಆರೋಪವನ್ನು ಅಲ್ಲು ಅರ್ಜುನ್‌ ವಿರುದ್ಧ…

Read More

ಬೆಂಗಳೂರು:ಸುಳ್ಳು ಜಾತಿ ಪ್ರಮಾಣ ಪತ್ರ ಪ್ರಕರಣ ರದ್ದುಕೋರಿ ಕೋಲಾರ ಶಾಸಕ ಕೊತ್ತೂರು ಮಂಜುನಾಥ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್,ಎಫ್ಐಆರ್ ರದ್ದುಪಡಿಸಲು ನಿರಾಕರಿಸಿದೆ. ಅಲ್ಲದೇ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಕೆ ಪ್ರಕರಣವನ್ನು ತನಿಖೆ ಮಾಡಲು ಆದೇಶಿಸಿದೆ. ಇದರಿಂದ ಕೋಲಾರ ಕ್ಷೇತ್ರದ ಶಾಸಕ ಕೊತ್ತೂರು ಮಂಜುನಾಥ್‌ ಅವರಿಗೆ ಸಂಕಷ್ಟ ಎದುರಾಗಿದೆ.ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಕೆ ಪ್ರಕರಣ ಸಂಬಂಧ 2018ರಲ್ಲಿ ಫೋರ್ಜರಿ, ವಂಚನೆ, ಅಟ್ರಾಸಿಟಿ ಕಾಯ್ದೆಯಡಿ ಮುಳಬಾಗಿಲು ನಗರ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿ,ಹೈಕೋರ್ಟ್, ಮಂಜುನಾಥ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿತ್ತು.ಈ ಪ್ರಕರಣವನ್ನು ರದ್ದುಕೋರಿ ಶಾಸಕ ಕೊತ್ತೂರು ಮಂಜುನಾಥ್‌ ಅವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, ಇಂದು (ಡಿಸೆಂಬರ್ 12) ವಿಚಾರಣೆ ನಡೆಸಿದ ಹೈಕೋರ್ಟ್, ಎಫ್ಐಆರ್ ರದ್ದುಪಡಿಸಲು ನಿರಾಕರಿಸಿ ಅರ್ಜಿಯನ್ನು ತಿರಸ್ಕರಿಸಿದಲ್ಲದೇ ಪ್ರಕರಣದ ತನಿಖೆಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸೂಚಿಸಿದೆ.ಪ್ರಕರಣದ ಹಿನ್ನೆಲೆಪ್ರಕರಣದ ವಿವರ:ಪರಿಶಿಷ್ಟ ಜಾತಿಗಳ ಪಟ್ಟಿಗೆ ಬರುವ ಬುಡುಗ ಜಂಗಮ ಜಾತಿಗೆ ಸೇರಿದವರೆಂದು ಘೋಷಿಸಿಕೊಂಡು ಜಿ.ಮಂಜುನಾಥ್ ಅವರು 2013ರಲ್ಲಿ ಮುಳಬಾಗಿಲು ಮೀಸಲು ಕ್ಷೇತ್ರದಿಂದ ಸ್ವತಂತ್ರ…

Read More

ಶ್ರೀನಿವಾಸಪುರ:ಎಲ್ಲ ಧರ್ಮ,ಮತಗಳಲ್ಲಿ ಸಾಮರಸ್ಯ ತರಲು ಭಗವದ್ಗೀತೆಯಿಂದ ಮಾತ್ರ ಸಾಧ್ಯ ಎಲ್ಲ ರೀತಿಯ ಸಮಸ್ಯೆಗಳಿಗೆ ಭಗವದ್ಗೀತೆಯಲ್ಲಿ ಪರಿಹಾರ ಸಿಗುತ್ತದೆ ಎಂದು ಸತ್ಸಂಗ ಬಳಗದ ಸಂಚಾಲಕ ಸತ್ಯಮೂರ್ತಿ ಹೇಳಿದರು.ಅವರು ಪಟ್ಟಣದ ಶಂಕರಮಠದಲ್ಲಿ ದಿನಾಂಕ 5-12-24 – ಗುರುವಾರ ದಿಂದ 11 – 12 – 24 – ಬುಧವಾರದವರೆಗೆ ಏಳು ದಿನಗಳ ಕಾಲ ನಡೆದಂತ ಭಗವದ್ಗೀತಾ ಸಪ್ತಾಹದ ಕಾರ್ಯಕ್ರಮದಲ್ಲಿ ಮಾತನಾಡಿದರುಪ್ರಾಚೀನ ಸಾಹಿತ್ಯಗಳು ಜ್ಞಾನಭಂಡಾರಗಳಾಗಿವೆ. ಅದರಲ್ಲೂ ಭಗವದ್ಗೀತೆ ಪ್ರತಿಯೊಬ್ಬರ ಮನಸ್ಸಿಗೆ ಮುದವನ್ನೂ ಹಾಗು ಬುದ್ಧಿಗೆ ಸಂಸ್ಕಾರವನ್ನೂ ನೀಡಲಿದೆ ಮಾನವನ ಮತ್ತು ಸಮಾಜದ ಉನ್ನತಿಗೆ ಸಹಕಾರಿಯಾಗಲಿದೆ. ಯುವ ಸಮುದಾಯಕ್ಕೆ ಭಗವದ್ಗೀತೆಯ ಅರ್ಥ ತಿಳಿಯುವ ಆಸಕ್ತಿ ಇದೆ. ಹಾಗಾಗಿ ಭಗವದ್ಗೀತಾ ಅಭಿಯಾನದಲ್ಲಿ ಉಪನ್ಯಾಸಕ್ಕೆ ಮಹತ್ವ ನೀಡಬೇಕು ಯುವ ಜತೆಗೆ ಒತ್ತಡದ ಬದುಕಿನಿಂದ ಹೊರಬರಲು ಭಗವದ್ಗೀತೆಯನ್ನು ಸಾರಂಶ ಸಮೇತ ತಿಳಿಸುವಂತ ಕೆಲಸ ಆಗಬೇಕು ಇದರಿಂದ ಭವಿಷ್ಯದಲ್ಲಿ ಸದೃಢ ಭಾರತ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದರು. ಸತ್ಸಂಗ ಬಳಗದ ಸಂಚಾಲಕರಾದ ಮಂಗಳಾ ಸತ್ಯಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ಸತ್ಸಂಗ ಬಳಗದ ಸದಸ್ಯರು ಸಾಮೂಹಿಕವಾಗಿ…

Read More

ನ್ಯೂಜ್ ಡೆಸ್ಕ್:ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಗೌರವಾರ್ಥ ರಾಜ್ಯ ಸರ್ಕಾರದಿಂದ ಸರ್ಕಾರಿ ರಜೆ ಘೋಷಿಸಲಾಗಿದೆ ಇದರಂತೆ ಕೆ ಎಸ್ ಆರ್ ಟಿ ನಿಗಮಗಳ ಅಧಿಕಾರಿ ಮತ್ತು ಕಚೇರಿ ಸಿಬ್ಬಂದಿಗಳಿಗೂ ಬುಧವಾರ ಸರ್ಕಾರಿ ರಜೆ ಘೋಷಿಸಿ ಆದೇಶಿಸಲಾಗಿದೆ.ಈ ಕುರಿತಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದು, ಎಸ್ ಎಂ ಕೃಷ್ಣ ಅವರ ನಿಧನದ ಪ್ರಯುಕ್ತ ದಿವಂಗತರ ಗೌರವಾರ್ಥವಾಗಿ ರಾಜ್ಯಾಧ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಮತ್ತು ಶಾಲಾ ಕಾಲೇಜುಗಳಿಗೆ ದಿನಾಂಕ 11-12-2024ರಂದು ಸಾರ್ವಜನಿಕ ರಜೆಯನ್ನು ಸರ್ಕಾರ ಘೋಷಿಸಲಾಗಿದ್ದುಕೆ ಎಸ್ ಆರ್ ಟಿ ಸಿ ನಿಗಮದ ಕೇಂದ್ರ ಕಚೇರಿ, ವಿಭಾಗೀಯ ಕಚೇರಿಗಳು, ತರಬೇತಿ ಕೇಂದ್ರಗಳಿಗೆ ಅನ್ವಯಿಸುವಂತೆ ದಿನಾಂಕ 11-12-2024ರಂದು KSRTC ರಜೆ ಘೋಷಿಸಲು ಸೂಕ್ತಾಧಿಕಾರಿಗಳು ಅನುಮೋದಿಸಿರುತ್ತಾರೆ. ಅದರಂತೆ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.ಇನ್ನೂ ಕೆ ಎಸ್ ಆರ್ ಟಿ ಸಿ ಯ ನಂತರ ಇತರೆ ಸಾರಿಗೆ ನಿಗಮಗಳು ತಮ್ಮ ನಿಗಮದ ಅಧಿಕಾರಿ ಮತ್ತು ಕಚೇರಿ ಸಿಬ್ಬಂದಿಗಳಿಗೆ ನಾಳೆ ರಜೆಯನ್ನು…

Read More