ನ್ಯೂಜ್ ಡೆಸ್ಕ್: ತಿರುಮಲಕ್ಕೆ ಹೋಗುವ ಅಲಿಪಿರಿ ಕಾಲ್ನಡಿಗೆ ಮೆಟ್ಟಿಲು ದಾರಿಯಲ್ಲಿ ಕಾಡು ಪ್ರಾಣಿ ದಾಳಿಗೆ ಸಿಲುಕಿ ಮಗುವೊಂದು ಮೃತಪಟ್ಟಿರುವ ಘಟನೆ ಶುಕ್ರವಾರ ರಾತ್ರಿ ನಡೆದಿರುತ್ತದೆ.ಶುಕ್ರವಾರ ರಾತ್ರಿ ತಡ ಸಂಜೆ 7 ಗಂಟೆ ಸಮಯದಲ್ಲಿ ತಿರುಮಲ ಬೆಟ್ಟವನ್ನು ಕಾಲ್ನಡಿಗೆ ಮೂಲಕ ಹೋಗುತ್ತಿದ್ದ ನೆಲ್ಲೂರಿನ ಕುಟುಂಬದ ಸದಸ್ಯೆ ತನ್ನ ಕುಟುಂಬದೊಂದಿಗೆ ವೆಂಕಟೇಶ್ವರ ಆರು ವರ್ಷದ ಬಾಲಕಿ ಲಕ್ಷಿತಾಳ ಮೇಲೆ ಕಾಡು ಪ್ರಾಣಿ ದಾಳಿ ಮಾಡಿ ಕಾಡಿಗೆ ಎಳೆದೊಯ್ದಿದೆ. ಬೆಳಗ್ಗೆ ಅಲಿಪಿರಿ ನರಸಿಂಹಸ್ವಾಮಿ ದೇವಸ್ಥಾನದ ಬಳಿ ಬಾಲಕಿಯ ಅರ್ಧ ಶವ ಪತ್ತೆಯಾಗಿದ್ದು,ಬಾಲಕೀಯನ್ನು ಕಾಡು ಪ್ರಾಣಿ ಅರ್ದಬಂರ್ದ ತಿಂದಿರ ಬಹುದು ಎಂದು ಶಂಕಿಸಲಾಗಿದೆ.ಈ ಘಟನೆ ಕುರಿತಾಗಿ ಟಿಟಿಡಿ ಇಒ ಧರ್ಮ ರೆಡ್ಡಿ ಪ್ರತಿಕ್ರಿಯಿಸಿದ್ದು ಕಾಡುಪ್ರಾಣಿ ದಾಳಿಗೆ ಬಾಲಕಿ ಸಾವನ್ನಪ್ಪಿರುವುದು ತೀವ್ರ ನೋವಿನ ವಿಚಾರ ಎಂದಿರುತ್ತಾರೆ. ಈ ಹಿಂದೆ ಬಾಲಕನಮೇಲೆ ದಾಳಿ ಮಾಡಿದ್ದ ಚಿರತೆಯನ್ನು ಹಿಡಿದು ಕಾಡಿಗೆ ಬಿಟ್ಟಂತೆ, ಶುಕ್ರವಾರದ ಘಟನೆಡಗೆ ಕಾರಣವಾದ ಚಿರತೆ ಅಥವಾ ಇನ್ಯಾವುದೇ ಕಾಡುಪ್ರಾಣಿ ಆಗಿರಲಿ ಅದನ್ನು ಬಲೆಗೆ ಬೀಳಿಸಿ ಕಾಡಿಗೆ ಅಟ್ಟಲಾಗುವುದು ಎಂದ…
Author: Srinivas_Murthy
ಶ್ರೀನಿವಾಸಪುರ :ಪೆಟ್ರೋಲ್ ಹಾಗು ಡೀಸಲ್ ಬಳಕೆಯಿಂದ ಪ್ರಕೃತಿಯ ಮೇಲೆ ತೀವ್ರ ಪರಿಣಾಮ ಬಿರುತ್ತಿದೆ ಪ್ರಕೃತಿಯನ್ನು ಉಳಸಿಕೊಳ್ಳಲು ಪರ್ಯಾಯ ಇಂದನ ಬಳಕೆಗೆ ವಾಹನ ಬಳಕೆದಾರರು ಮುಂದಾಗಬೇಕಿದೆ ಎಂದು ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು.ಅವರು ಪಟ್ಟಣದ ಚಿಂತಾಮಣಿ ರಸ್ತೆಯ ರಾಜಧಾನಿ ಪೆಟ್ರೋಲ್ ಬಂಕ್ ನಲ್ಲಿ ಸಿಎನ್ಜಿ ಗ್ಯಾಸ್ ವಿತರಣಾ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.ಎಜಿಪಿ ಸಿ.ಎನ್.ಜಿ ಗ್ಯಾಸ್ ಸಂಸ್ಥೆಯ ಪ್ರಾಂತೀಯ ವ್ಯವಸ್ಥಾಪಕ ವೆಂಕಟೇಶ್ ಮಾತನಾಡಿ ಡೀಸೆಲ್, ಪೆಟ್ರೋಲ್ ಗೆ ಪರ್ಯಾಯವಾಗಿ ಸಿ.ಎನ್.ಜಿ ಬಳಕೆ ಹೆಚ್ಚುತ್ತಿದೆ ಎಂದರು ಸಿ.ಎನ್.ಜಿ ಮೀಥೇನ್ನಿಂದ ಕೂಡಿದನೈಸರ್ಗಿಕ ಅನಿಲವಾಗಿದ್ದು ವಿಶೇಷವಾಗಿ ವಾತಾವರಣ ಕಲುಷಿತಗೊಳಿಸದೆ ಪರಿಣಾಮಕಾಯಾಗಿ ಬಳಸಬಹುದಾಗಿದೆ ಎಂದರು.ಕೋಲಾರ ಜಿಲ್ಲೆಯಲ್ಲಿ 6 ಸಿ.ಎನ್.ಜಿ ಕೇಂದ್ರಗಳು ಪ್ರಾರಂಭವಾಗಲಿದ್ದು ಪ್ರಥಮ ಕೇಂದ್ರವಾಗಿ ಶ್ರೀನಿವಾಸಪುರದ ರಾಜಧಾನಿ ಬಂಕ್ ನಲ್ಲಿ ನಮ್ಮ ಎಜಿಪಿ ಸಂಸ್ಥೆಯ ಸಿಎನ್ಜಿ ಗ್ಯಾಸ್ ಬಂಕ್ನ್ನು ತೆರೆಯಲಾಗಿದ್ದು, ಅವಶ್ಯಕತೆ ಇರುವವರಿಗೆಸಿ.ಎನ್.ಜಿ ಗ್ಯಾಸ್ ಕಿಟ್ ಅನ್ನು ಸಬ್ಸಿಡಿ ದರದಲ್ಲಿ ಕೊಡಲಾಗುವುದು . ಗ್ರಾಹಕರು ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ರಿಜನಲ್ ಮುಖ್ಯಸ್ಥ ಕೆಆರ್ ವೆಂಕಟೇಶ್ ಮಾತನಾಡಿ ನಮ್ಮ…
ನ್ಯೂಜ್ ಡೆಸ್ಕ್:ಸದಾಕಾಲ ಮನೆಯಲ್ಲಿ ತಂದೆ-ಮಕ್ಕಳ ನಡುವೆ ಸೌಹಾರ್ದತೆಯ ಕೊರತೆ, ಕೌಟಂಬಿಕ ಕಲಹಗಳು ಆರ್ಥಿಕ ಮುಗ್ಗಟ್ಟು, ಅಪಘಾತಗಳು,ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು, ಮಕ್ಕಳಲ್ಲಿನ ದುರ್ವರ್ತನೆ,ಮಾನಸಿಕ ಖಿನ್ನತೆಗೆ ಒಳಗಾಗುವುದು,ವಿವಾಹ ವಿಳಂಬವಾಗುತ್ತಿರುವುದು, ವೈವಾಹಿಕ ಜೀವನದಲ್ಲಿ ವಿಚ್ಛೇದನ,ದಂಪತಿಗೆ ಮಕ್ಕಳಾಗದಿರುವುದು,ವೃತ್ತಿಯಲ್ಲಿ ಉನ್ನತ ಸ್ಥಾನವನ್ನು ಪಡೆಯಲು ಸಾಧ್ಯವಾಗದೆ ಇರುವುದು,ಯೋಜಿತ ಕಾರ್ಯಗಳನ್ನು ಪುರ್ಣಗೊಳಿಸಲು ಆಗದೆ ಇರುವುದು ಹೀಗೆ ಜೀವನದ ನಾನಾ ಕಾರಣಗಳಿಗೆ ಪಿತೃದೋಷ ಕಾರಣ ಎಂದು ಆಧ್ಯಾತ್ಮಿಕ ಜ್ಯೋತಿಷ್ಯರು ಹೇಳುತ್ತಾರೆ.ಇದಕ್ಕೆ ಪರಿಹಾರ ಪಡೆಯಲು ದೋಷದಿಂದ ಮುಕ್ತರಾಗಲು ಈ ದೇವಸ್ಥಾನದಲ್ಲಿ ಪಿತೃಗಳಿಗೆ ತರ್ಪಣ ಸಲ್ಲಿಸಿದರೆ ಪರಿಹಾರ ಸಿಗುತ್ತದೆ ಎಂಬುದು ನಂಬಿಕೆ ಇಲ್ಲಿ ಶಿವ ಭಗವಾನ ಲಿಂಗರೂಪಿಯಾಗಿ ಸ್ವರ್ಣವಲ್ಲೀ ಸಮೇತನಾಗಿ ಮುಕ್ತೀಶ್ವರನಾಗಿ ದರ್ಶನ ನೀಡುತ್ತಾನೆ ಈ ದೇವಾಲಯ ತಮಿಳುನಾಡಿನ ತಿಲತರ್ಪಣಪುರಿ ಗ್ರಾಮದಲ್ಲಿ ಇದೆ.ಶ್ರೀರಾಮನು ತನ್ನ ತಂದೆಗೆ ತಿಲತರ್ಪಣ ನೀಡಿದ ಸ್ಥಳಹಿಂದೂ ಧರ್ಮಗ್ರಂಥಗಳಲ್ಲಿ ಉಲ್ಲೇಖವಾಗಿರುವಂತೆ ಏಳು ಸ್ಥಳಗಳಲ್ಲಿ ಪಿತೃಗಳಿಗೆ ತರ್ಪಣ ಸಲ್ಲಿಸಲು ಯೋಗ್ಯವೆಂದು ಹೇಳಲಾಗಿದ್ದು ಅವುಗಳಲ್ಲಿ ಕಾಶಿ,ರಾಮೇಶ್ವರ,ಶ್ರೀವಂಚಿಯಮ್, ಗಯಾ, ತ್ರಿವೇಣಿ ಸಂಗಮ ಹಾಗೂ ತಿಲತರ್ಪಣಪುರಿ. ಈ ದೇವಾಲಯವನ್ನು ಕಾಶಿ ರಾಮೇಶ್ವರಕ್ಕೆ ಸಮನಾದ ಪವಿತ್ರ ದೇವಾಲಯ ಎಂಬ ನಂಬಿಕೆ…
ಪಟ್ಟಣದ ಯುವತಿಯೊಂದಿಗೆ ಸ್ನೇಹ ಚಲ್ದಿಗಾನಹಳ್ಳಿ ಕೃಷಿ ಹೊಂಡದಲ್ಲಿ ವಿದ್ಯಾರ್ಥಿ ರಾಕೇಶ್ ಶವ ಹಲ್ಲೆ ಮಾಡಿ ಸಾಯಿಸಿದ್ದಾರೆ ಎಂದು ರಾಕೇಶ್ ಪೋಷಕರ ಆರೋಪ ಶ್ರೀನಿವಾಸಪುರ:ತಾಲೂಕಿನ ಚಲ್ದಿಗಾನಹಳ್ಳಿ ವಿದ್ಯಾರ್ಥಿ ರಾಕೇಶ್ ನ ಕೊಲೆ ಮಾಡಿರುವ ಆರೋಪಿಗಳನ್ನು ಬಂಧಿಸುವಲ್ಲಿ ಪೋಲಿಸರು ತಾರತಮ್ಯ ಮಾಡುತ್ತಿದ್ದಾರೆ ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಅಗ್ರಹಿಸಿ ಪ್ರಗತಿಪರ ಸಂಘಟನೆಗಳ ಸಮನ್ವಯ ಒಕ್ಕೂಟದ ವತಿಯಿಂದ ಮೃತ ಯುವಕನ ಸ್ವಗ್ರಾಮವಾದ ಚಲ್ದಿಗಾನಹಳ್ಳಿ ಗ್ರಾಮದಿಂದ ಪಟ್ಟಣದ ತಾಲೂಕು ಕಚೇರಿ ತನಕ ಕಾಲ್ನಡಿಗೆ ಪ್ರತಿಭಟನೆ ಜಾಥಾವನ್ನು ಸೋಮವಾರ ಆಯೋಜಿಸಲಾಗಿತ್ತು.ಜುಲೈ ತಿಂಗಳಲ್ಲಿ ತಾಲೂಕಿನ ಚಲ್ದಿಗಾನಹಳ್ಳಿಯ ವಿದ್ಯಾರ್ಥಿ ರಾಕೇಶ್ ಪಟ್ಟಣದ ಯುವತಿಯೊರ್ವಳನ್ನು ಚಾಟ್ಸ್ ಸೆಂಟರನಲ್ಲಿ ಮಾತನಾಡಿದ ಎಂಬ ಆರೋಪದ ಹಿನ್ನಲೆಯಲ್ಲಿ ಯುವತಿ ಕುಟುಂಬಸ್ಥರು ರಾಕೇಶ್ ನ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ ಇದನ್ನು ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ಮೃತನ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು ಅದರಂತೆ ಪ್ರಕರಣ ದಾಖಲಿಸಿಕೊಂಡಿದ್ದ ಶ್ರೀನಿವಾಸಪುರ ಪೊಲೀಸರು ಆರೋಪಿಗಳ ಪೈಕಿ ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ…
ನ್ಯೂಜ್ ಡೆಸ್ಕ್:ಕರ್ನಾಟಕದ ರಾಜ್ಯ ರಾಜಕಾರಣದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಹೋಮ ಪೂಜೆ ಹವನ ಮಾಡಿಸುವುದರಲ್ಲಿ ಬಾರಿ ಫೇಮಸ್ಸು ಅದರಲ್ಲೂ ಅವರ ಮಗ ಹೆಚ್.ಡಿ.ರೇವಣ್ಣ ಇನ್ನೂ ಒಂದು ಹೆಜ್ಜೆ ಮುಂದು,ಪೂಜೆ ಹೋಮ ಹವನಗಳ ಮೇಲೆ ಅಪಾರವಾದ ನಂಬಿಕೆ ಇಟ್ಟಿರುವ ಹೆಚ್.ಡಿ.ರೇವಣ್ಣ ಅವರು ತಮ್ಮ ಪತ್ನಿ ಭವಾನಿ ಹಾಗು ಪುತ್ರರಾದ ಸಂಸದ ಪ್ರಜವಲ್,ವಿಧಾನಪರಿಷತ್ ಸದಸ್ಯ ಸೂರಜ್ ಸೇರಿ ನಾಲ್ಕು ಜನ ರಹಸ್ಯವಾಗಿ ಹೈದರಾಬಾದ್ ಪ್ರವಾಸ ಕೈಗೊಂಡು ಅಲ್ಲಿನ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ನೇತೃತ್ವದಲ್ಲಿ ರಾಜ್ಯ ಶ್ಯಾಮಲಾ, ಭಗಲಾಮುಖಿ, ತಾರಾ ಹಾಗೂ ಚಿನ್ನ ಮಸ್ತ ದೇವತೆಗಳ ಹೆಸರಿನಲ್ಲಿ ಹೋಮ ಹವನ ಪೂಜೆ ಸಲ್ಲಿಸಿರುತ್ತಾರೆ, ಹೈದರಾಬಾದ್ ನಲ್ಲಿರುವ ಜ್ಯೋತಿಷಿ ವೇಣು ಸ್ವಾಮಿ ತೆಲಗು ರಾಜ್ಯಗಳ ರಾಜಕಾರಣಿಗಳ ಹಾಗು ಖ್ಯಾತ ಸಿನಿಮಾ ನಟ-ನಟಿಯರ, ಖ್ಯಾತ ಉದ್ಯಮಿಗಳ ಹಾಟ್ ಫೇವರಿಟ್ ಜ್ಯೋತಿಷಿ,ರಾಜ್ಯದ ಪವರ್ ಫುಲ್ ರಾಜಕಾರಣಿ ಡಿ.ಕೆ.ಶಿವಕುಮಾರ್ ಆಪ್ತರು ಆಗಿದ್ದು ಕಳೆದ ರಾಜ್ಯ ವಿಧಾನ ಸಭೆ ಮುಂಚಿತವಾಗಿ ಬೆಂಗಳೂರಿನ ಶಿವಕುಮಾರ್ ಮನೆಯಲ್ಲಿ ವಿಶೇಷ ಹವನ ಪೂಜೆಗಳನ್ನು ಮಾಡಿಸಿದ್ದಾರಂತೆ.ತೆಲಗು…
ಶ್ರೀನಿವಾಸಪುರ:ಶ್ರೀನಿವಾಸಪುರ ತಾಲೂಕು ಮಾಸ್ತೆನಹಳ್ಳಿ ಗ್ರಾಮ ಪಂಚಾಯಿತಿಯ ತೆರ್ನಹಳ್ಳಿ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ DVG ಮಂಜು ತಮ್ಮ ಪ್ರತಿಸ್ಪರ್ದಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ರಾಧಕೃಷ್ಣ ಅವರ ವಿರುದ್ದ 260 ಮತಗಳ ಅಂತರದಿಂದ ಗೆಲವುಸಾದಿಸಿದ್ದಾರೆ.ತೆರ್ನಹಳ್ಳಿ ಪಂಚಾಯಿತಿ ಸದಸ್ಯ ವೀರಬದ್ರೇಗೌಡ ನಿಧನವಾಗಿದ್ದ ಹಿನ್ನಲೆಯಲ್ಲಿ ಅವರ ಪುತ್ರ DVG ಮಂಜು ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ಜೆಡಿಎಸ್ ಅಭ್ಯರ್ಥಿ ಗೆಲವು ಘೋಷಣೆಯಾಗುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ಪಟ್ಟಣದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.ಡಿವಿಜಿ ಮಂಜು ಶ್ರೀನಿವಾಸಪುರ ತಾಲೂಕು ಜೆಡಿಎಸ್ ಪಕ್ಷದ ಯುವ ಮುಖಂಡರಾಗಿ ಕಾರ್ಯನಿರ್ವಹಿಸಿದಲ್ಲದೆ ಮೊನ್ನೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಹಾಲಿ ಶಾಸಕ ವೆಂಕಟಶಿವಾರೆಡ್ಡಿ ಪರವಾಗಿ ಚುರುಕಾಗಿ ಕಾರ್ಯನಿರ್ವಹಿಸಿದ್ದರು.
ಶ್ರೀನಿವಾಸಪುರ:ಅಬಕಾರಿ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ಸುಮಾರು 730 ಗ್ರಾಂ ಒಣಗಿದ ಗಾಂಜಾ ಸೊಪ್ಪನ್ನು ವಶಕ್ಕೆ ಪಡೆದಿರುತ್ತಾರೆ.ಬಂಧಿತರನ್ನು ಸಲ್ಮಾನ್ ಹಾಗೂ ಮೊಹಮ್ಮದ್ ಹುಸೇನ್ ಬಂಧಿತ ಆರೋಪಿಗಳು.ಇವರು ಶ್ರೀನಿವಾಸಪುರದಿಂದ ಮುಳಬಾಗಿಲು ಕಡೆಗೆ ಹೋಗುತ್ತಿದ್ದಾಗ ಖಚಿತಮಾಹಿತಿ ಮೇರೆಗೆ ಅಬಕಾರಿ ಪೋಲಿಸರಿ ದಾಳಿ ನಡೆಸಿ ಬಂಧಿಸಿದ್ದು ಅವರಿಂದ 730 ಗ್ರಾಂ ಗಾಂಜಾ, ಒಂದು ಟಾಟಾ ಏಸ್ ವಾಹನ ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆದುಕೊಂಡು ಆರೋಪಿಗಳ ವಿರುದ್ಧ NDPS ಕಾಯ್ದೆ 1985 ರಡಿ 2 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.ವಶ ಪಡಿಸಿಕೊಂಡಿರುವ TATA ACE ವಾಹನ ಕರ್ನಾಟಕದಲ್ಲಿ ನೊಂದಣಿಯಾಗಿರುವ ವಾಹನವಾಗಿದ್ದು ಆರೋಪಿಗಳು ಸ್ಥಳಿಯರು ಎನ್ನಲಾಗುತ್ತಿದೆಗಾಂಜ ಆಂಧ್ರದಿಂದ ಅಕ್ರಮವಾಗಿ ಕರ್ನಾಟಕದ ಗಡಿ ದಾಟಿ ಬರುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಇವೆ ಇತ್ತಿಚಿಗೆ ಆಂಧ್ರದಿಂದ ಬೆಂಗಳೂರು ಕಡೆಗೆ ಹೋರಟಿದ್ದ ವಾಹನವನ್ನು ಚಿಂತಾಮಣಿ ಪೋಲಿಸರು ಶ್ರೀನಿವಾಸಪುರ-ಚಿಂತಾಮಣಿ ರಸ್ತೆಯ ಮಾಡಿಕೆರೆ ಕ್ರಾಸ್ ಬಳಿ ಪತ್ತೆ ಹಚ್ಚಿದ್ದರು ಅಕ್ರಮ ಸಾಗಾಣಿಕೆ ದಾರರನ್ನು ವಶಕ್ಕೆ ಪಡೆದಿರುತ್ತಾರೆ. ವರದಿ:ನಂಬಿಹಳ್ಳಿಸುರೇಶ್
ಶ್ರೀನಿವಾಸಪುರ:ಕೆಲ ತಿಂಗಳ ಹಿಂದೆ ಮೃತಪಟ್ಟಿದ್ದ ವಲ್ಲಭಾಯಿ ರಸ್ತೆ ನಿವಾಸಿ ಕಲ್ಲಿನಕೋಟೆ ಸುಬ್ರಮಣಿ (41) ಸಾವು ಕೊಲೆ ಎಂದು ದಾಖಲಾಗಿದೆ.ಈ ಬಗ್ಗೆ ಶ್ರೀನಿವಾಸಪುರ ಪೋಲಿಸರು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ.ಶ್ರೀನಿವಾಸಪುರ ಪಟ್ಟಣದ ವಲ್ಲಭಾಯಿ ರಸ್ತೆಯ ನಿವಾಸಿ ಸುಬ್ರಮಣಿ ಅಲಿಯಾಸ್ ಗಾರೆ ಮೇಸ್ತ್ರೀ ಸುಬ್ಬಣ್ಣ ಜೊತೆಗೆ ಹಣಕಾಸಿನ ಬಡ್ಡಿ ವ್ಯವಹಾರ ನಡೆಸುತ್ತ,ಹೆಬ್ಬಟ ಗ್ರಾಮದ ಬಳಿಯ ತನ್ನ ಜಮೀನಿನಲ್ಲಿ ವ್ಯವಸಾಯ ಮಾಡಿಸುತ್ತಿದ್ದ ಈಗ್ಗೆ ಕೆಲ ತಿಂಗಳ ಹಿಂದೆ ಹೆಬ್ಬಟದ ತೋಟದಲ್ಲಿ ಕೆಲಸ ಮಾಡುವಾಗ ಬಂಡೆಗೆ ತಲೆ ತಗುಲಿ ಮೃತಪಟ್ಟಿದ್ದಾನೆ ಎಂದು ಸುಬ್ರಮಣಿ ಪತ್ನಿ ಶೋಭಾ ಹೇಳಿದ್ದು ಅದನ್ನೆ ನಂಬಿದ್ದ ಊರಿನವರು ಮತ್ತು ನಂಟರಿಷ್ಟರು ಸಹಜ ಸಾವು ಇರಬಹುದೆಂದು ಅಂತ್ಯೆಕ್ರಿಯೆ ನಡೆಸಲಾಗಿತ್ತು ನಂತರದಲ್ಲಿ ಸುಬ್ರಮಣಿ ಸಾವಿನ ಬಗ್ಗೆ ಅನುಮಾನದ ಸುದ್ಧಿ ಹರಿದಾಡುತಿತ್ತು ಇದಕ್ಕೆ ಪೂರಕವಾಗಿ ಪೋಲಿಸರಿಗೆ ಅನಾಮಧೇಯ ಪತ್ರವೊಂದು ಶ್ರೀನಿವಾಸಪುರ ಇನ್ಸಪೇಕ್ಟರ್ ಹಾಗು ಠಾಣಾಧಿಕಾರಿಗೆ ಸುಬ್ರಮಣಿ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಬರುತ್ತದೆ ಈ ಬಗ್ಗೆ ಕಾರ್ಯಪವೃತ್ತರಾದ ಪೋಲಿಸರು ಸುಬ್ರಮಣಿ ಸಾವಿನ ಕುರಿತಾಗಿ ಮಾಹಿತಿ…
ಶ್ರೀನಿವಾಸಪುರ:ಯುವಕನೊಬ್ಬ ಅನುಮಾನಸ್ಪದ ರೀತಿಯಲ್ಲಿ ಕೃಷಿಹೊಂಡದಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ತಾಲೂಕಿನ ಚಲ್ದಿಗಾನಹಳ್ಳಿಯಲ್ಲಿ ನಡೆದಿರುತ್ತದೆ.ಕೃಷಿಹೊಂಡದಲ್ಲಿ ಶವವಾಗಿ ಪತ್ತೆಯಾಗಿರುವ ಯುವಕನನ್ನು ಚಲ್ದಿಗಾನಹಳ್ಳಿ ಗ್ರಾಮದ ರಾಕೇಶ್ (17) ಎಂದು ಗುರುತಿಸಲಾಗಿದ್ದುಇತ ಚಿಂತಾಮಣಿ ಕಾಲೇಜಿನಲ್ಲಿ ಡಿಪ್ಲೋಮೋ ಓದುತ್ತಿದ್ದ ಜೊತೆಗೆ ತಮಟೆ ಕಲಾವಿದನಾಗಿ ಖ್ಯಾತನಾಗಿದ್ದ ಎನ್ನುತ್ತಾರೆ ಗ್ರಾಮಸ್ಥರು,ಚಲ್ದಿಗಾನಹಳ್ಳಿಯ ಗ್ರಾಮಕ್ಕೆ ಹೊಂದಿಕೊಂಡಂತ ಟೈಲರ್ ಗೋಪಾಲಕೃಷ್ಣ ಅವರ ಕೃಷಿಹೊಂಡದಲ್ಲಿ ರಾಕೇಶ್ ಶವವಾಗಿ ಪತ್ತೆಯಾಗಿದ್ದು ಸೋಮವಾರ ಪಟ್ಟಣದಲ್ಲಿ ಚಾಟ್ಸ್ ಅಂಗಡಿ ಬಳಿ ಯುವಕರ ಗುಂಪು ರಾಕೇಶ್ ನನ್ನು ಬಲವಂತವಾಗಿ ಕರೆದೊಯಿದು ಹಲ್ಲೆ ನಡೆಸಿ ಅವನ ಬಳಿ ಇದ್ದ ಮೊಬೈಲ್ ಸಹ ಕಿತ್ತುಕೊಂಡು ಪೋಷಕರನ್ನು ಕರೆ ತರುವಂತೆ ಬೆದರಿಸಿ ಕಳಸಿದ್ದಾರೆ ಎನ್ನಲಾಗಿದ್ದು ನಂತರದ ಬೆಳವಣಿಗೆಯಲ್ಲಿ ಮಾರನೆ ದಿನ ಬೆಳಿಗ್ಗೆ ಪೋಲಿಸರಿಗೆ ಅನಾಮಧಯೆಯ ದೂರವಾಣಿ ಕರೆ ಬಂದ ಹಿನ್ನಲೆಯಲ್ಲಿ ಪೋಲಿಸರು ಗುಮಾನಿಯೊಂದಿಗೆ ಚಲ್ದಿಗಾನಹಳ್ಳಿ ಗ್ರಾಮಕ್ಕೆ ಆಗಮಿಸಿ ಕೃಷಿಹೊಂಡದಲ್ಲಿ ಹುಡುಕಾಡಿಸಿದಾಗ ರಾಕೇಶ್ ಶವ ಪತ್ತೆಯಾಗಿದೆ.ಈ ಮೆರೆಗೆ ಶ್ರೀನಿವಾಸಪುರ ಪೋಲಿಸರು ಅನುಮಾನಸ್ಪದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ, ಮೃತ ರಾಕೇಶ್ ಪೋಷಕರು ಸಾವಿನ ಬಗ್ಗೆ ಅನುಮಾನ ಇದ್ದು ತನಿಖೆ ನಡೆಸುವಂತೆ…
ಶ್ರೀನಿವಾಸಪುರ:ಕೋಲಾರ ತೋಟಗಾರಿಕೆ ಮಹಾ ವಿದ್ಯಾಲಯದಲ್ಲಿ ಪದವಿಯಲ್ಲಿ ಅತಿ ಹೆಚ್ಚು ಅಂಕಗಳಿಸಿ ನಾಲ್ಕು ಚಿನ್ನದ ಪದಕ ಪಡೆದ ಶ್ರೀನಿವಾಸಪುರ ಪಟ್ಟಣದ ನಿಶ್ಚಿತಾಳನ್ನು ಶ್ರೀನಿವಾಸಪುರದ ನೇತಾಜಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಕೋಲಾರ ತೋಟಗಾರಿಕೆ ಕಾಲೇಜು ವಿದ್ಯಾರ್ಥಿನಿ ನಿಶ್ಚಿಕಾ ಶ್ರೀನಿವಾಸಪುರ ಪಟ್ಟಣದ ನಾರಾಯಣಸ್ವಾಮಿ-ಮಂಜುಳ ದಂಪತಿಯ ಮಗಳು,ಪದವಿಯಲ್ಲಿ ಹೆಚ್ಚು ಅಂಕ ಗಳಿಸಿ ನಾಲ್ಕು ಚಿನ್ನದ ಪದಕಗಳನ್ನು ಸಾದಿಸಿದ ನಿಶ್ಚಿತಾಳನ್ನು ಅಕೆಯ ಮನೆಯಂಗಳದಿ ನೆತಾಜಿ ಚಾರಿಟೇಬಲ್ ಟ್ರಸ್ಟ್ ಸದಸ್ಯರು ಸನ್ಮಾನಿಸಿ ಗೌರವಿಸಿದ್ದಾರೆ ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟ್ ಸಂಚಾಲಕ ನವಿನ್ ಸಾಮನ್ಯ ಕುಟುಂಬದಿಂದ ಬಂದಿರುವ ನಿಶ್ಚಿತಾಳ ಸಾಧನೆ ತಾಲೂಕಿಗೆ ಹೆಮ್ಮೆ ತರುವಂತ ವಿಚಾರವಾಗಿದ್ದು ಇತರೆ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಬೇಕು ಎಂದರು.ಸನ್ಮಾನ ಸ್ವೀಕರಿಸಿದ ನಿಶ್ಚಿತ ನನ್ನ ಸಾಧನೆಗೆ ನನ್ನ ಪೋಷಕರ ಸಹಕಾರ ಮತ್ತು ಕಾಲೇಜು ಉಪನ್ಯಾಸಕರ ಮಾರ್ಗದರ್ಶನ ಯಶಸ್ವಿಗೆ ಕಾರಣವಾಯಿತು ಎಂದರು. ಕಾರ್ಯಕರಮದಲ್ಲಿ ಪುರಸಭೆ ಸದಸ್ಯ ನಾಗರಾಜ್, ನೇತಾಜಿ ಚಾರಿಟೇಬಲ್ ಕೃಷ್ಣ ಅಧ್ಯಕ್ಷ ನಾಗೇಂದ್ರ ರಾವ್ ಸದಸ್ಯರಾದ ಗಂಗಾಧರ್ ರೆಡ್ಡಿ, ಶ್ರೀನಿವಾಸ್ ರೆಡ್ಡಿ,ಮನು,ಕೊಲಿಮಿ ಮಂಜುನಾಥ್,ಇಂದ್ರಪ್ರಕಾಶರೆಡ್ಡಿ,ಸುನಿಲ್,ಕೃಷ್ಣರೆಡ್ಡಿ ಮುಂತಾದವರು…