ಶ್ರೀನಿವಾಸಪುರ:ವಿದ್ಯುತ್ ಬಿಲ್ ವಸೂಲಾತಿಗೆ ಹೋಗಿದ್ದ ಬೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವುದಾಗಿ ಶ್ರೀನಿವಾಸಪುರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಶ್ರೀನಿವಾಸಪುರ ಪಟ್ಟಣದ ಗಫಾರ್ ಖಾನ್ ಮೊಹಲ್ಲಾದ ಮ್ಯಾಂಗೊ ವ್ಯಾಪಾರಿ ಎಲ್.ಆರ್.ಸರ್ದಾರ್ ಎನ್ನುವರ ಮನೆಯ ಕರೆಂಟ್ ಬಿಲ್ ವಿಚಾರದಲ್ಲಿ ಬೆಸ್ಕಾಂ ಸಿಬ್ಬಂದಿ ಹಾಗು ಸರ್ದಾರ್ ನಡುವೆ ಮಾತಿನ ಚಕಮಕಿ ಆಗಿದೆ ಈ ಸಂದರ್ಭದಲ್ಲಿ ಬೆಸ್ಕಾಂ ಸಿಬ್ಬಂದಿಯನ್ನು ಕಾಂಪೋಂಡ್ ನಿಂದ ಹೋರಗೆ ಹೋಗುವಂತೆ ಅವಾಚ್ಯ ಶಬ್ದಗಳಿಂದ ಬೈದಿದ್ದಾಗಿ ಇದಕ್ಕೆ ಬೆಸ್ಕಾಂ ಸಿಬ್ಬಂದಿ ಪ್ರತಿಕ್ರಿಸಿದಾಗ ಸರ್ದಾರ್ ಮಗ ಏಕಾಏಕಿ ಬಂದು ಬೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುತ್ತಾನೆ ಎಂದು ದೂರಲಾಗಿದೆ.ಘಟನೆಯಲ್ಲಿ ವೇಣುಗೋಪಾಲ್ ಎಂಬ ಬೆಸ್ಕಾಂ ಸಿಬ್ಬಂದಿಗೆ ಕಿವಿಗೆ ತೀವ್ರವಾದ ಗಾಯವಾಗಿದ್ದು ಆತನನ್ನು ಹೆಚ್ಚಿನ ಚಿಕಿತ್ಸೆಗೆ ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ.ಘಟನೆ ಕುರಿತಾಗಿ ಶ್ರೀನಿವಾಸಪುರ ಠಾಣೆಯಲ್ಲಿ ದೂರು ಪ್ರತಿ ದೂರು ನೀಡಲಾಗಿದೆ ಪೊಲೀಸರು ಗಲಾಟೆಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುತ್ತಾರೆ. ವರದಿ:ನಂಬಿಹಳ್ಳಿ ಸುರೇಶ
Author: Srinivas_Murthy
ನ್ಯೂಜ್ ಡೆಸ್ಕ್:ಆಂಧ್ರಪ್ರದೇಶ ರಾಜ್ಯದ ರಾಜಕೀಯ ಪಡಸಾಲೆಯಲ್ಲಿ ಹೊಸದೊಂದು ಚರ್ಚೆ ಶುರುವಾಗಿದೆ ಅಲ್ಲಿ ಮತ್ತೊಂದು ಹೊಸ ಪಕ್ಷ ಉದಯವಾಗಲಿದೆ. ಭ್ರಷ್ಟಾಚಾರ ರಹಿತ ಉತ್ತಮ ಆಡಳಿತ ನೀಡುವ ಉದ್ದೇಶದಿಂದ ಹೊಸ ರಾಜಕೀಯ ಪಕ್ಷ ಆರಂಭಿಸುವುದಾಗಿ ಪುಂಗನೂರು ಮೂಲದ ಖ್ಯಾತ ಉದ್ಯಮಿ ರಾಮಚಂದ್ರ ಯಾದವ್ ಘೋಷಿಸಿದ್ದಾರೆ. ಜುಲೈ 23 ರಂದು ಹೊಸ ರಾಜಕೀಯ ಪಕ್ಷವನ್ನು ರಚಿಸುವುದಾಗಿ ಈಗಾಗಲೆ ಘೋಷಿಸಿರುವ ಅವರು ವಿಜಯವಾಡದಲ್ಲಿ ಮಾತನಾಡಿ.ಜುಲೈ 23ರಂದು ಗುಂಟೂರು-ವಿಜಯವಾಡ ನಡುವಿನ ನಾಗಾರ್ಜುನ ವಿಶ್ವವಿದ್ಯಾಲಯದ ಎದುರು ಮೈದಾನದಲ್ಲಿ ದೊಡ್ದ ಮಟ್ಟದಲ್ಲಿ ನಡೆಯುವ ಸಮಾವೇಶದಲ್ಲಿ ‘ಪ್ರಜಾ ಸಿಂಹಗರ್ಜನ ಪಕ್ಷ’ ಕ್ಕೆ ಚಾಲನೆ ನೀಡಲಾಗುವುದು ಎಂದಿರುತ್ತಾರೆ. ಆಂಧ್ರ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ವೈಸಿಪಿ ಸರಕಾರ ವಿರುದ್ದ ಹೋರಾಟ ನಡೆಸಲು ಆಂಧ್ರಕ್ಕೆ ವಿಶೇಷ ಸ್ಥಾನಮಾನ ತರುವ ನಿಟ್ಟಿನಲ್ಲಿ ಮತ್ತು ಎಸ್ಸಿ, ಎಸ್ಟಿ, ಬಿಸಿ, ಅಲ್ಪಸಂಖ್ಯಾತರನ್ನು ಮತಬ್ಯಾಂಕ್ ರಾಜಕಾರಣಕ್ಕೆ ಬಳಕೆ ಮಾಡಿಕೊಂಡು ಅವರ ವಿರುದ್ದವೆ ದಬ್ಬಾಳಿಕೆ ಮಾಡಿ ವ್ಯವಸ್ಥಿತವಾಗಿ ತುಳಿಯಲಾಗುತ್ತಿದ್ದು ಅದನ್ನು ತಡೆಯಲು ಹಾಗು ಆಂಧ್ರದಲ್ಲಿನ ಫ್ಯಾಕ್ಷನ್ ಮುಖಂಡರು ನಡೆಸುತ್ತಿರುವ ಅಧಿಕಾರವನ್ನು ತಡೆಯಲು ರಾಜಕೀಯ ಬದಲಾವಣೆಗಾಗಿ…
ಶ್ರೀನಿವಾಸಪುರ:ಅತಿವೇಗದದಿಂದ ತೆರಳುತ್ತಿದ್ದ ಮಹಿಂದ್ರಾ ಎಸ್.ಯು.ವಿ ಕಾರು ಡಿಕ್ಕಿ ಹೋಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಮೃತಪಟ್ಟಿರುವ ಧಾರುಣ ಘಟನೆ ತಾಲ್ಲೂಕಿನ ಗೌವನಪಲ್ಲಿ ಪೋಲಿಸ್ ಠಾಣೆ ವ್ಯಾಪ್ತಿಯ ಕಡಪಾ-ಬೆಂಗಳೂರು ಹೆದ್ದಾರಿಯಲ್ಲಿ ತಾಡಿಗೋಳ್ ಕ್ರಾಸ್ ಬಳಿ ಇಂದು ನಡೆದಿದೆ.ಅಪಘಾತದಲ್ಲಿ ಮೃತಪಟ್ಟಿರುವ ಬೈಕ್ ಸವಾರರನ್ನು ತಾಡಿಗೋಳ್ ಗ್ರಾಮದ ಶಂಕರಪ್ಪ(38) ಹಾಗು ಮ್ಯಾಕಲಗಡ್ಡ ಗ್ರಾಮದ ಮುನಿಶಾಮಿ(40) ಎಂದು ಗುರುತಿಸಲಾಗಿದೆ.ಆಂಧ್ರದ ಮದನಪಲ್ಲಿಯಿಂದ ಬೆಂಗಳೂರಿಗೆ ಹೊರಟಿದ್ದ ಮಹಿಂದ್ರಾ ಹೈಬ್ರಿಡ್ ಕಾರು ತಾಡಿಗೊಳ್ ಕ್ರಾಸ್ ಬಳಿ ಜಲ್ಲಿ ಟಿಪ್ಪರ್ ಲಾರಿಯನ್ನು ಹಿಂದಿಕ್ಕುವ ಭರದಲ್ಲಿ ಬೈಕ್ ಸವಾರರಿಗೆ ಡಿಕ್ಕಿ ಹೊಡೆದಿದ್ದು ಡಿಕ್ಕಿ ಹೊಡೆದ ರಭಸಕ್ಕೆ ಅತಿಯಾದ ವೇಗದಲ್ಲಿ ಸಾಗುತ್ತಿದ್ದ ಕಾರು ರಸ್ತೆ ಪಕ್ಕದ ಟಮ್ಯಾಟೋ ತೋಟಕ್ಕೆ ನುಗ್ಗಿದೆ.ಬೈಕನಲ್ಲಿದ್ದ ಇಬ್ಬರು ಸ್ಥಳದಲ್ಲಿಯೆ ಸಾವನಪ್ಪಿರುತ್ತಾರೆ.ಈ ಬಗ್ಗೆ ಗೌವನಪಲ್ಲಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆಂಧ್ರ ರಾಜಕಾರಣಿ ಕಾರು!ಅತಿವೇಗದ ಚಾಲನೆಯಿಂದ ಇಬ್ಬರು ಗ್ರಾಮಸ್ಥರ ಸಾವಿಗೆ ಕಾರಣವಾದ ಮಹಿಂದ್ರಾ XUV ಕಾರು ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ರಾಯಚೂಟಿಯ ಆಡಳಿತ ರೂಡ ರಾಜಕಾರಣಿಯದು ಎನ್ನಲಾಗುತ್ತಿದೆ ಕಾರು ಬೆಂಗಳೂರಿಗೆ ತೆರಳುತ್ತಿದ್ದು ಕಾರಿನ ಮುಂಬಾಗದ…
ಪ್ರಪಂಚ ಪ್ರಸಿದ್ಧ ಶ್ರೀನಿವಾಸಪುರ ಮಾವಿಗೆ ಕಳೆದ ನಾಲ್ಕೈದು ವರ್ಷಗಳಿಂದ ಸಂಕಷ್ಟ ಹೈರಾಣವಾಗಿರುವ ಮಾವು ಬೆಳೆಗಾರರು ಶ್ರೀನಿವಾಸಪುರ:ಶ್ರೀನಿವಾಸಪುರ ತಾಲೂಕು ಕೇಂದ್ರಿಕೃತವಾಗಿ ವಿಭಜಿತ ಕೋಲಾರ ಜಿಲ್ಲೆಯಲ್ಲಿ ಕಂಪು ಸೂಸಬೇಕಾದ ಮಾವಿನಕಾಯಿಗೆ ತಟ್ಟಿರುವ ಶಾಪವಾದರು ಏನು ಎಂದು ಮಾವು ಬೆಳೆಗಾರರು ಅಸಯಕರಾಗಿ ಕೇಳುತ್ತಿದ್ದಾರೆ. ತತ್ವಙ್ಞಾನಿ ವಿರಭ್ರಮ್ಮೇಂದ್ರಯ್ಯನವರ ನಾನ್ನೂಡಿಯಂತೆ “ಎಂಡಿನ ಕರವು ಪಂಡಿನ ಕರವು” (ಒಣಗಿದರು ಬರ-ಬೆಳೆದರು ಬರ) ಎಂಬಂತಾಗಿದೆ ಮಾವಿನ ಬೆಳೆಗಾರರ ಪರಿಸ್ಥಿತಿ ಕಳೆದ 5-6 ವರ್ಷದಿಂದ.ಪ್ರಪಂಚ ಪ್ರಸಿದ್ದ ಮಾವಿನ ನಗರಿ ಶ್ರೀನಿವಾಸಪುರ ತಾಲೂಕಿನಲ್ಲಿ ಕಣ್ಣು ಹಾಯಿಸಿದಷ್ಟು ಮಾವಿನ ಮರಗಳು ಕಾಣ ಸಿಗುತ್ತದೆ ಅದರಲ್ಲೂ ಮಾವು ಹೂ ಬಿಟ್ಟಾಗ ಮಾವಿನ ಮರಗಳ ಮದ್ಯೆ ಎಳೆ ಬಿಸಿಲ ನಡುವೆ ಮಾವಿನ ಹೂವಿನ ಪ್ರಕೃತಿಯ ಸೌಂದರ್ಯ ನೋಡಲು ಚಂದ. ಇಂತ ಸೌಂದರ್ಯದ ನಡುವೆ ಬರುವಂತ ಮಾವು ದೇಶ ವಿದೇಶಗಳಲ್ಲಿ ಪ್ರಸಿದ್ಧಿಯನ್ನು ಪಡೆದಿದೆ.ಇಲ್ಲಿನ ಮಾವು ತಳಿಗಳಾದ ಬಾದಾಮಿ,ರಾಜಗೀರಾ, ಬೇನಿಷಾ, ನೀಲಂ, ತೋತಾಪುರಿ, ಸೇಂದೂರಾ/ರಸಪೂರಿ ಇನ್ನು ಹಲವಾರು ತಳಿಯ ಮಾವಿನ ಹಣ್ಣುಗಳಿಗೆ ವಿದೇಶಗಳಿಗೆ ರಫ್ತಾಗುತ್ತದೆ ಇದರಿಂದಾಗಿಯೇ ಮಾವಿನ ಬೆಳೆ ಇಲ್ಲಿನ ಜನರ…
ಲಕ್ಷಾಂತರ ಖರ್ಚು ಮಾಡಿ ಕಲ್ಲಿನಮನೆ ಕಟ್ಟಿಸಿದ್ದ ಸುಬ್ರಮಣಿ ಸಾವಿನ ಹಿಂದೆ ಆನೈತಿಕ ಸಂಬಂದ ಸಂಬಂದಿಯೊಂದಿಗೆ ಕೂಡಿ ಮುಗಿಸಲಾಯಿತ. ಶ್ರೀನಿವಾಸಪುರ:ಎರಡು ತಿಂಗಳ ಹಿಂದೆ ಸಾವನ್ನಪ್ಪಿದ್ದ ವ್ಯಕ್ತಿ ಸಾವು ಸಹಜ ಸಾವಲ್ಲ ಅದು ಕೊಲೆ ಎಂದು ಅನಾಮದೇಯ ಪತ್ರ ಬಂದ ನಂತರ ಕೊಲೆ ರಹಸ್ಯ ಬಲಯಾಗಿದೆ.ಕೊಲೆಯಾದ ದುರ್ದದೈವಿ ವಲ್ಲಭಾಯಿ ರಸ್ತೆ ನಿವಾಸಿ ಕಲ್ಲಿನಕೋಟೆ ಸುಬ್ರಮಣಿ (41) ಎಂದು ಗುರುತಿಸಲಾಗಿದೆ.ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮೃತ ವ್ಯಕ್ತಿಯ ಸಂಬಂದಿ ಶ್ರೀನಿವಾಸಪುರ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ.ಶ್ರೀನಿವಾಸಪುರ ಪಟ್ಟಣದ ವಲ್ಲಭಾಯಿ ರಸ್ತೆಯ ನಿವಾಸಿ ಸುಬ್ರಮಣಿ ಅಲಿಯಾಸ್ ಗಾರೆ ಮೇಸ್ತ್ರೀ ಸುಬ್ಬಣ್ಣ ಜೊತೆಗೆ ಹಣಕಾಸಿನ ಬಡ್ಡಿ ವ್ಯವಹಾರ ನಡೆಸುತ್ತ,ಹೆಬ್ಬಟ ಗ್ರಾಮದ ಬಳಿಯ ತನ್ನ ಜಮೀನಿನಲ್ಲಿ ವ್ಯವಸಾಯ ಮಾಡಿಸುತ್ತಿದ್ದ ಈಗ್ಗೆ ಎರಡು ತಿಂಗಳ ಹಿಂದೆ ಹೆಬ್ಬಟದ ತೋಟದಲ್ಲಿ ಕೆಲಸ ಮಾಡುವಾಗ ಬಂಡೆಗೆ ತಲೆ ತಗುಲಿ ಮೃತಪಟ್ಟಿದ್ದಾನೆ ಎಂದು ಸುಬ್ರಮಣಿ ಪತ್ನಿ ಶೋಭಾ ಹೇಳಿದ್ದ ಹಿನ್ನಲೆಯಲ್ಲಿ ಊರಿನವರು ಮತ್ತು ನಂಟರಿಷ್ಟರು ಸಹಜ ಸಾವು ಇರಬಹುದೆಂದು ಅಂತ್ಯೆಕ್ರಿಯೆ ನಡೆಸಲು ಸಹಕಾರ ನೀಡಿದ್ದರು.ಅದರೆ ಊರಿನಲ್ಲಿ…
ಕೋಲಾರ ಪತ್ರಕರ್ತರ ಸಂಘದ ಸದಸ್ಯಕ್ಕೆ ಆಪತ್ಕಾಲದ ನಿಧಿ ಕೊಡಿಸಿ ಮಾನವೀಯತೆ ಮೆರೆದ ಮುಖ್ಯಮಂತ್ರಿ ಮಾಧ್ಯಮ ಸಲೆಹೆಗಾರ ಪ್ರಭಾಕರ್ ಕೋಲಾರ:ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಕರ್ತರ ಸದಸ್ಯರಿಗೆ ಆಪತ್ಕಾಲದ ವೇಳೆ ನೆರವು ನೀಡಲು ಸ್ಥಾಪಿಸಿರುವ ಪತ್ರಕರ್ತರ ಕಲ್ಯಾಣನಿಧಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು 25 ಲಕ್ಷ ಗಳನ್ನು ಮಂಜೂರು ಮಾಡಿದ್ದಾರೆ.ಕೋಲಾರದಲ್ಲಿ ಜುಲೈ 1 ರಂದು ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರಿಗೆ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಪತ್ಕಾಲದ ನಿಧಿಗೆ ಆರ್ಥಿಕ ನೆರವು ಕೋರಿ ಮನವಿ ಸಲ್ಲಿಸಿತ್ತು. ಅದರಂತೆ ಕೆ.ವಿ.ಪ್ರಭಾಕರ್ ಅವರು ಜುಲೈ 3 ರಂದು ಸೋಮವಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಲ್ಯಾಣನಿಧಿಗೆ 25 ಲಕ್ಷ ರೂಗಳನ್ನು ಮಂಜೂರು ಮಾಡಿಸಿದ್ದಾರೆ. 25 ಲಕ್ಷ ರೂಗಳನ್ನು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಲ್ಯಾಣ ನಿಧಿಗೆ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ವಾರ್ತಾ…
ನ್ಯೂಜ್ ಡೆಸ್ಕ್:ಅಪಯಾಕಾರಿ ವಿಷದ ಹಾವನ್ನು ಹಿಡಿದ ವ್ಯಕ್ತಿ ಅದರೊಂದಿಗೆ ಹುಚ್ಚಾಟ ಆಡಿದ ಪರಿಣಾಮ ಹಾವು ವ್ಯಕ್ತಿಯನ್ನು ರೋಷದಿಂದ ನಾಲ್ಕೈದು ಬಾರಿ ಕಚ್ಚಿದೆ ಆದರೂ ಹಾವು ಕಚ್ಚಿದ ವ್ಯಕ್ತಿ ಪವಾಡ ಸದೃಶ ಬದುಕುಳಿದಿರುವ ಘಟನೆ ಕರ್ನಾಟಕದ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹಿರೇಕೊಪ್ಪ ಗ್ರಾಮದಲ್ಲಿ ನಡೆದಿದ್ದು ಹಾವಿನಿಂದ ಕಚ್ಚಿಸಿಕೊಂಡೂ ಬದುಕುಳಿದ ವ್ಯಕ್ತಿಯನ್ನು ಸಿದ್ದಪ್ಪ ಎಂದು ಗುರುತಿಸಲಾಗಿದೆ.ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಮನೆ ಬಳಿ ಹಾವು ಕಾಣಿಸಿಕೊಂಡಿದೆ.ತಕ್ಷಣವೇ ಸ್ಥಳಕ್ಕೆ ಬಂದ ಸಿದ್ದಪ್ಪ ಬಂದಿದ್ದಾನೆ ಮದ್ಯ ಕುಡಿದು ಫೂಲ್ ಟೈಟಾಗಿದ್ದ ಸಿದ್ದಪ್ಪ ವೀರಾವೇಷದಿಂದ ಬರಿಗೈಯಲ್ಲಿಯೇ ಹಾವು ಹಿಡಿದಿದ್ದಾನೆ. ಗ್ರಾಮಸ್ಥರು ಎಷ್ಟೇ ಹೇಳಿದರೂ ಕೇಳದ ಸಿದ್ದಪ್ಪ, ನನ್ನ ಕೈಮೇಲೆ ಗರುಡರೇಖೆ ಇದೆ, ನನಗೇನೂ ಆಗಲ್ಲ ಎಂದು ಅದರೊಂದಿಗೆ ಆಟ ಆಡಿದ್ದಾನೆ.ಇದರಿಂದಾಗಿ ಆಕ್ರೋಶಗೊಂಡ ಹಾವು ಸಿದ್ದಪ್ಪನನ್ನು ನಾಲ್ಕು ಬಾರಿ ಕಚ್ಚಿದೆ. ಇದರಿಂದ ಗಾಬರಿಗೊಂಡ ಸ್ಥಳೀಯರು ತಕ್ಷಣವೇ ಸಿದ್ದಪ್ಪನನ್ನು ನರಗುಂದ ಸರಕಾರಿ ಆಸ್ಪತ್ರೆಗೆ ದಾಖಲಿದ್ದಾರೆ ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ.ಇವೆಲ್ಲಾ ಬೆಳವಣಿಗೆ ನಡುವೆ…
ಶ್ರೀನಿವಾಸಪುರ:ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮಣ್ಣಿನ ಗುಡ್ಡೆಗೆ ಡಿಕ್ಕಿ ಹೋಡೆದ ಕಾರಿಗೆ ಬೆಂಕಿ ತಗುಲಿ ಕಾರು ಸಂಪೂರ್ಣವಾಗಿ ಸುಟ್ಟು ಹೋಗಿರುವ ಘಟನೆ ಶ್ರೀನಿವಾಸಪುರ ತಾಲ್ಲೂಕಿನ ಮದನಪಲ್ಲಿ-ಬೆಂಗಳೂರು ಹೆದ್ದಾರಿಯಲ್ಲಿ ರಾಯಲ್ಪಾಡು ಸಮೀಪ ನಡೆದಿದೆ.ಬೆಂಕಿ ಅವಘಡಲ್ಲಿ ಕಾರಿನಲ್ಲಿದ್ದ ಒಂದೇ ಕುಟುಂಬದ 4 ಸದಸ್ಯರು ಪ್ರಾಣಪಾಯದಿಂದ ಪಾರಾಗಿದ್ದಾರೆ.ಅಂಧ್ರಪ್ರದೇಶದ ಕಡಪದ ಕುಟುಂಬವೊಂದು ಕರ್ನಾಟಕ ನೊಂದಣಿ ಹೊಂದಿರುವ ಕಾರಿನಲ್ಲಿ ಬೆಂಗಳೂರಿಗೆ ತೆರಳುತ್ತಿತ್ತು ಮದನಪಲ್ಲಿ-ಬೆಂಗಳೂರು ಹೆದ್ದಾರಿಯಲ್ಲಿ ರಾಯಲ್ಪಾಡು ಸಮೀಪ ಬರುತ್ತಿದ್ದಂತೆ ತಿರುವಿನಲ್ಲಿ ಕಾರಿನ ಬ್ರೇಕ್ ವಿಫಲವಾಗಿ ಚಾಲಕನ ನಿಯಂತ್ರಣ ತಪ್ಪಿದೆ ರಸ್ತೆ ಬದಿಯಲ್ಲಿನ ಮಣ್ಣಿನ ಗುಡ್ಡೆಗೆ ಡಿಕ್ಕಿ ಹೋಡದಿದ್ದು ಕಾರಿನ ಇಂಜಿನ್ ನಲ್ಲಿ ಬೆಂಕಿಹೊತ್ತಿಕೊಂಡಿದೆ ತಕ್ಷಣ ಕಾರಿನಲಿದ್ದ ಕುಟುಂಬಸ್ಥರು ಕಾರಿನಿಂದ ಇಳಿದು ಪ್ರಾಣಗಳನ್ನು ಉಳಿಸಿಕೊಂಡಿದ್ದಾರೆ.ಕಾರು ಸಿಎನ್ಜಿ-ಪೆಟ್ರೋಲ್ ಆದ ಕಾರಣ ಬೆಂಕಿ ನಂದಿಸಲು ಸಾರ್ವಜನಿಕರು ಹಿಂದೇಟು ಹಾಕಿದ ಹಾಕಿದ ಕಾರಣ ಬೆಂಕಿ ಸಿ.ಎನ್.ಜಿ ಟ್ಯಾಂಕಿಗೆ ಬೆಂಕಿ ತಗುಲಿದರೆ ದೊಡ್ಡ ಮಟ್ಟದ ಅನಾಹುತ ಆಗಬಹುದು ಎಂದು ಮುನ್ನೆಚ್ಚರಿಕೆ ಕ್ರಮವಾಗಿ 30 ನಿಮಿಷಕ್ಕೂ ಹೆಚ್ಚು ಕಾಲ ರಸ್ತೆ ಸಂಪರ್ಕವನ್ನು ರಾಯಲ್ಪಾಡು ಪೊಲೀಸರು ಬಂದ್…
ತಿರುಮಲ ನಡಿಗೆದಾರಿಯಲ್ಲಿ ಅನಿರೀಕ್ಷಿತ ಘಟನೆ ಚಿರತೆ ದಾಳಿ ಮಾಡಿ ಬಾಲಕನನ್ನು ಹೊತ್ತೊಯ್ದಿದ ಘಟನೆ ಯಾವುದೆ ಪ್ರಾಣಪಾಯ ಇಲ್ಲದೆ ಪಾರಾದ ಬಾಲಕ . ನ್ಯೂಜ್ ಡೆಸ್ಕ್:ಚಿರತೆ ದಾಳಿಗೆ ಮಗು ಸಿಲುಕಿ ಪವಾಡಸದೃಶ ರೀತಿಯಲ್ಲಿ ಪಾರಾಗಿರುವ ಘಟನೆ ತಿರುಮಲ ಮೆಟ್ಟಿಲು ದಾರಿಯಲ್ಲಿ ನಡದಿದೆ. ಮೂರ್ನಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿದ್ದು ಐದು ವರ್ಷದ ಬಾಲಕನ ಮೇಲೆ ಚಿರತೆ ದಾಳಿ ಮಾಡಿ ಮಗುವಿನ ಪೋಷಕರ ಮುಂದೆ ನೊಡು ನೊಡುತ್ತಿದ್ದಂತೆ ಮಗುವನ್ನು ಬಾಯಲ್ಲಿ ಕಚ್ಚಿಕೊಂಡು ಹೋಗಿದೆ ಈ ಸಂದರ್ಭದಲ್ಲಿ ಮಗವಿನ ಪೋಷಕರು ನೆರದಿದ್ದ ಭಕ್ತರ ಕಿರುಚಾಟ ಕಂಡ ಬಂದೋಬಸ್ತು ಡ್ಯೂಟಿಯಲ್ಲಿದ್ದ ಪೊಲೀಸರು ಚಿರತೆ ಹೋದ ದಿಕ್ಕಿನಲ್ಲಿ ಧೈರ್ಯವಾಗಿ ದೊಡ್ಡದಾಗಿ ಅರಚುತ್ತ ಚಿರತೆಯನ್ನು ಬೆನ್ನಟ್ಟಿದ್ದಾರೆ ಇದರಿಂದ ಗಲಿಬಿಲಿ ಗೊಂಡ ಚಿರತೆ ಬಾಲಕನನ್ನು ಬಿಟ್ಟು ಕಾಡಿನೊಳಗೆ ಓಡಿ ಹೋಗಿದೆ ರಕ್ತದ ಮಡುವಿನಲ್ಲಿದ್ದ ಬಾಲಕನನ್ನು ತಿರುಮಲ-ತಿರುಪತಿ ದೇವಸ್ಥಾನದ ಪದ್ಮಾವತಿ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಬಾಲಕ ಕೌಶಿಕ್ ಗೆ ಯಾವುದೇ ಪ್ರಾಣಾಪಯ ಆಗಿಲ್ಲ ಎಂದು ಟಿಟಿಡಿ ಇಒ ಧರ್ಮ ರೆಡ್ಡಿ…
ಕೋಲಾರ: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಲ್ಯಾಂಡ್ ಆರ್ಮಿ ಇಲಾಖೆಯಲ್ಲಿ AE ಆಗಿ ಕಾರ್ಯನಿರ್ವಹಿಸುತ್ತಿರುವ ಕೋದಂಡರಾಮಯ್ಯ ಅವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ. ಕೋದಂಡರಾಮಯ್ಯ ಅವರು ವಾಸಿಸುವ ಕೋಲಾರ ನಗರದ ಕುವೆಂಪು ನಗರದಲ್ಲಿರುವ ಪೂಜ ನಿಲಯದ ಮನೆ ಮೇಲೆ ಹಾಗು ಅವರ ಸ್ವಗ್ರಾಮವಾದ ಶ್ರೀನಿವಾಸಪುರ ತಾಲೂಕು ಯಲ್ದೂರು ಹೋಬಳಿಯ ಲಕ್ಷ್ಮಿಸಾಗರದ ಮನೆ, ಅವರು ಕಾರ್ಯನಿರ್ವಹಿಸುತ್ತಿರುವ ತುಮಕೂರಿನ ಕಚೇರಿ ಮೇಲೆ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿರುತ್ತಾರೆ.ಲೋಕಾಯುಕ್ತ SP ಉಮೇಶ್ ನೇತೃತ್ವದಲ್ಲಿ ನಡೆದಂತ ದಾಳಿಯಲ್ಲಿ ಲೋಕಾಯುಕ್ತದ 10ಕ್ಕೂ ಹೆಚ್ಚು ಜನ ಅಧಿಕಾರಿಗಳ ತಂಡದಿಂದ ದಾಳಿವೇಳೆ ಪರಿಶೀಲನೆ ನಡೆಸಿದ್ದಾರೆತುಮಕೂರಿನ ಲ್ಯಾಂಡ್ ಆರ್ಮಿ ಯಲ್ಲಿ AE ಆಗಿರುವ ಕೋದಂಡರಾಮಯ್ಯ ಅವರು ಶ್ರೀನಿವಾಸಪುರ ತಾಲೂಕು ಯಲ್ದೂರು ಹೋಬಳಿ ಲಕ್ಷ್ಮೀಸಾಗರದವರಾಗಿದ್ದು ಲ್ಯಾಂಡ್ ಆರ್ಮಿ ಇಲಾಖೆ ಕೋಲಾರದಲ್ಲಿ ಕಾರ್ಯನಿರ್ವಹಿಸಿದ್ದಾರೆ ಈಗ ತುಮಕೂರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.