Author: Srinivas_Murthy

ಶ್ರೀನಿವಾಸಪುರ:ದಕ್ಷೀಣ ಭಾರತದ ತಮಿಳುನಾಡು,ಆಂಧ್ರಪ್ರದೇಶ ಮತ್ತು ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 234 ಶ್ರೀನಿವಾಸಪುರ ಪಟ್ಟಣದಲ್ಲಿ ಹಾದು ಹೋಗಿದ್ದು ಮುಳಬಾಗಿಲು ಕಡೆಯಿಂದ ಬರುವಂತ ರಾಷ್ಟ್ರೀಯ ಹೆದ್ದಾರಿ 234 ಚಿಂತಾಮಣಿ ಕಡೆಗೆ ಮುಳಬಾಗಿಲು ವೃತ್ತ, ಸಂತೇಮೈದಾನ ರಸ್ತೆ ರಾಜಾಜಿ ರಸ್ತೆ ಚಿಂತಾಮಣಿ ವೃತ್ತದ ಮೂಲಕ ಚಿಂತಾಮಣಿಗೆ ಹಾದು ಹೋಗುತ್ತದೆ ರಾಷ್ಟ್ರೀಯ ಹೆದ್ದಾರಿ ರಸ್ತೆಯಾದರು ಇಲ್ಲಿ ಸಂತೇ ಮೈದಾನದ ರಸ್ತೆ ಅಗಲೀಕರಣ ಮಾಡದೆ ರಸ್ತೆಗೆ ಹೊಂದಿಕೊಂಡಂತೆ ರಾಜ್ಯ ಸರ್ಕಾರದ ವತಿಯಿಂದ ಇಲ್ಲಿನ ನಿವಾಸಿಗಳಿಗೆ ಸ್ಲಂ ಬೋರ್ಡ್ ವತಿಯಿಂದ ಮನೆಗಳನ್ನು ಕಟ್ಟಿಕೊಡುತ್ತಿದೆ ಮುಂದೆ ರಸ್ತೆ ಅಗಲಿಕರಣ ಆದರೆ ನಿರ್ಮಾಣ ಮಾಡಿರುವಂತ ಮನೆಗಳ ಪರಿಸ್ಥಿತಿ ಏನಾಗುತ್ತದೆ ರಾಷ್ಟ್ರೀಯ ಹೆದ್ದಾರಿಯ ಕನಿಷ್ಠ ಮಾನದಂಡಗಳನ್ನು ಪಾಲಿಸದೆ ಮನೆ ನಿರ್ಮಾಣ ಮಾಡಿರುವುದು ಆಳುವವರಿಗೆ ಕನಿಷ್ಟ ಆಲೋಚನೆ ಇಲ್ಲ ಎಂಬುದು ಸಾಬಿತಾಗಿದೆ, ಇನ್ನೂ ಕೋಲಾರ ನ್ಯೂ ಸರ್ಕಲ್ ನಿಂದ ಚಿಂತಾಮಣಿ ವೃತ್ತದವರಗಿನ ರಾಜಾಜಿ ರಸ್ತೆ ಸಿಂಗಲ್ ವಾಹನ ಒಡಾಡಲು ಕಷ್ಟವಾಗುವಷ್ಟು ರಸ್ತೆ ಇಕ್ಕಾಟ್ಟಾಗಿದೆ ಇಲ್ಲಿ ರಸ್ತೆ ಅಗಲೀಕರಣ ತೀರಾ ಅಗತ್ಯ…

Read More

ಬೆಂಗಳೂರು:ಪತ್ರಕರ್ತರು ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಾರೆ ಅವರು ವೃತ್ತಿಯಲ್ಲಿ ಸಕ್ರೀಯರಾಗಬೇಕಾದರೆ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡುರಾವ್ ಹೇಳಿದರು.ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಮತ್ತು ಬಿಬಿಎಂಪಿ ಸಹಯೋಗದೊಂದಿಗೆ ಪತ್ರಕರ್ತರಿಗೆ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪತ್ರಕರ್ತರು ಸಮಾಜ ಮತ್ತು ಸರ್ಕಾರದ ನಡುವಿನ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದು ಅವರು ಶಿಸ್ತಿನ ಜೀವನವನ್ನು ಪಾಲಿಸಬೇಕಾಗುತ್ತದೆ. ಹಾಗಾಗಿ ನಿರಂತರ ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಗತ್ಯ ಎಂದರು.ಆರೋಗ್ಯದ ವಿಚಾರದಲ್ಲಿ ಯಾರು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು. ಆಗಿಂದಾಗ್ಗೆ ಆರೋಗ್ಯದ ಕುರಿತಾದ ತಪಾಸಣೆ ಮಾಡಿಸಿಕೊಂಡು ಜಾಗ್ರತೆ ವಹಿಸಿದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ಕೆಯುಡಬ್ಲ್ಯೂಜೆ ಪತ್ರಕರ್ತರ ಬಗ್ಗೆ ಕಾಳಜಿ ವಹಿಸಿ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಕೆಯುಡಬ್ಲ್ಯೂಜೆ ಸದಸ್ಯರ ಕಾಳಜಿಯೂ ಸಹ ಪತ್ರಕರ್ತರ ಸಂಘಕ್ಕೆ ಮುಖ್ಯವಾಗಿ ಇರುವುದರಿಂದ ಸಂಘವು…

Read More

ಶ್ರೀನಿವಾಸಪುರ:ಜಮೀನು ವಿವಾದಕ್ಕೆ ಸಂಬಂದಿಸಿದಂತೆ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ದಾರುಣ ಘಟನೆ ತಾಲೂಕಿನ ರೋಣೂರು ಹೋಬಳಿ ನಿಲಟೂರು ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿರುತ್ತದೆ.ಮೃತ ಯುವಕನನ್ನು ನಿಲಟೂರು ಗ್ರಾಮದ ಪ್ರಸಾದ್(30) ಎಂದು ಗುರುತಿಸಲಾಗಿದೆ.ನಿಲಟೂರು ಗ್ರಾಮ ವ್ಯಾಪ್ತಿಯ ರೋಣೂರು ರಸ್ತೆಯಲ್ಲಿರುವ ಸುಮಾರು ಐದು ಎಕರೆ ಮಾವಿನ ತೋಪಿನ ವಿಚಾರದಲ್ಲಿ ಮೃತ ಯುವಕ ಪ್ರಸಾದ್ ತಂದೆ ಈರನ್ನಗಾರಿ ಶ್ರೀರಾಮರೆಡ್ಡಿ ಮತ್ತು ಆರೋಪಿ ಎನ್ನಲಾದ ಕಿರಣ್ ಕುಟುಂಬಗಳ ನಡುವಿನ ವಿವಾದ ಕೋರ್ಟ್ ಮೇಟ್ಟಿಲೇರಿತ್ತು ನ್ಯಾಯಾಲಯದ ಹೋರಾಟದಲ್ಲಿ ಕಿರಣ್ ಪರ ತೀರ್ಪು ಬಂದ ಹಿನ್ನಲೆಯಲ್ಲಿ ಜಮೀನು ವಿಚಾರವಾಗಿ ಎರಡು ಕುಟುಂಬಗಳ ನಡುವೆ ವೈಷಮ್ಯ ಇದ್ದು ಎರಡು ಮೂರು ದಿನಗಳ ಹಿಂದೆ ಜಮೀನಿನಲ್ಲಿರುವ ಮಾವಿನ ಕಾಯಿ ಕೊಯ್ಲು ವಿಚಾರಕ್ಕೆ ಎರಡು ಕುಟುಂಬಗಳು ಪೋಲಿಸ್ ಠಾಣೆ ಮೆಟ್ಟಿಲೇರಿದ್ದವು,ಇಂದು ಬೆಳ್ಳಂ ಬೆಳಿಗ್ಗೆ ಎರಡು ಕುಟುಂಬದವರು ಮತ್ತೆ ಗಲಾಟೆಗೆ ಬಿದ್ದು ದೊಣ್ಣೆಗಳನ್ನು ಹಿಡಿದು ಕಲ್ಲುಗಳಿಂದ ದಾಳಿಮಾಡಿಕೊಂಡು ಹೊಡೆದಾಡಿಕೊಂಡಿದ್ದಾರೆ ಈ ಸಂದರ್ಭದಲ್ಲಿ ಮೃತ ಪ್ರಸಾದ್ ಕುಟುಂಬದ ಸದಸ್ಯರು ಕಿರಣ್ ನನ್ನು ಅಟ್ಟಾಡಿಸಿಕೊಂಡು ಹೋಗಿದ್ದು ಈ…

Read More

ಶ್ರೀನಿವಾಸಪುರ:ಲಾರಿ ರಿವರ್ಸ್ ಹಾಕುವಾಗ ಲಾರಿ ವ್ಯಕ್ತಿಯೊಬ್ಬನ ಮೇಲೆ ಹರಿದು ಆ ವ್ಯಕ್ತಿ ಮೃತಪಟ್ಟಿರುವ ಘಟನೆ ಶ್ರೀನಿವಾಸಪುರ-ಚಿಂತಾಮಣಿ ರಸ್ತೆಯ ಮಾವಿನ ಮಂಡಿಗಳ ಬಳಿ ನಡೆದಿರುತ್ತದೆ ಮೃತ ವ್ಯಕ್ತಿಯನ್ನು ಬಿಹಾರ ಮೂಲದ ಕಾರ್ಮಿಕ ದಿಲೀಪ್ (21) ಎಂದು ಗುರುತಿಸಲಾಗಿದೆ.ಶ್ರೀನಿವಾಸಪುರ-ಚಿಂತಾಮಣಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾವಿನಕಾಯಿ ಲೊಡ್ ಸಾಗಿಸಲು ಬಂದಿದ್ದ ಈಚರ್ ಲಾರಿ ರಿವರ್ಸ್ ಹಾಕುವಾಗ ಕಾರ್ಮಿಕನಿಗೆ ಲಾರಿ ಡಿಕ್ಕಿ ಹೊಡೆದಿದೆ ವ್ಯಕ್ತಿ ನೆಲಕ್ಕೆ ಬಿದಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಸಾವನಪ್ಪಿರುತ್ತಾನೆ.ಘಟನಾ ಸ್ಥಳಕ್ಕೆ ಶ್ರೀನಿವಾಸಪುರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಶ್ರೀನಿವಾಸಪುರದಿಂದ ಮಾವಿನಕಾಯಿ ಲೊಡ್ ಸಾಗಿಸಲು ಬರುವಂತ ಬಾರಿ ಗಾತ್ರದ ಲಾರಿಗಳು ಶ್ರೀನಿವಾಸಪುರ-ಚಿಂತಾಮಣಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಲುಗಟ್ಟಲೆ ನಿಂತಿರುತ್ತದೆ ಈ ಲಾರಿಗಳು ಹಿಂದೆ ಮುಂದೆ ಚಲಿಸುವಾಗ ಸೂಚನೆ ಕೊಡುವರು ಯಾರು ಇರುವುದಿಲ್ಲ ಹಿಂದೆ ಚಲಿಸುವ ಸಂದರ್ಭಗಳಲ್ಲಿ ಹಲವಾರು ಬಾರಿ ಹಿಂದೆ ಬರುತ್ತಿರುವ ದ್ವಿಚಕ್ರ ವಾಹನ ಸವಾರರಿಗೆ ಪಾದಚಾರಿಗಳಿಗೆ ಡಿಕ್ಕಿ ಹೊಡೆದಿರುವಂತ ಘಟನೆ ಸಾಕಷ್ಟು ನಡೆದಿವೆ. ಪೋಲಿಸರ ನಿರ್ಲಕ್ಷ್ಯ ಸ್ಥಳೀಯ ಆಡಳಿತದ ಬೇಜಾವಾಬ್ದಾರಿ!ಶ್ರೀನಿವಾಸಪುರ-ಚಿಂತಾಮಣಿ ರಾಷ್ಟ್ರೀಯ ಹೆದ್ದಾರಿ 234 ರಲ್ಲಿ…

Read More

ಶ್ರೀನಿವಾಸಪುರ:ಯೋಗ ವಿಙ್ಞಾನ ಭಾರತದ ಮೂಲಪರಂಪರೆ ಇದನ್ನು ದೇವಾನುದೇವತೆಗಳಿಂದ ಅನುಗ್ರಹ ಪಡೆದ ಋಷಿ ಮುನಿಗಳು ವಿಶ್ವಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದು ಯೋಗ ಶಿಕ್ಷಕ ವೆಂಕಟೇಶ್ ಬಾಬು ಹೇಳಿದರು ಅವರು ಇಂದು ವಿಶ್ವ ಯೋಗ ದಿನಾಚರಣೆ ಅಂಗವಾಗಿ ಶ್ರೀ ಪತಂಜಲಿ ಮುದ್ರಾ ಯೋಗ ಶಿಕ್ಷಣ ಸಮಿತಿ ವತಿಯಿಂದ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮೂಹಿಕ ಯೋಗಭ್ಯಾಸ ಉದ್ಘಾಟಿಸಿ ಮಾತನಾಡಿದರು.ಇಂದು ಇಡಿ ವಿಶ್ವದಲ್ಲಿ ಜನತೆ ಭಾರತ ಯೋಗಾಭ್ಯಸವನ್ನು ಅರಿಯಲು ಮುಂದಾಗಿ ತಮ್ಮ ಜೀವನದಲ್ಲಿ ಆಳವಡಿಸಿಕೊಂಡು ಉತ್ತಮ ಆರೋಗ್ಯ ಪಡೆಯಲು ಮುಂದಾಗಿದೆ ಎಂದರು.ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿದ್ದ ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ ಮಾತನಾಡಿ ವಿಶ್ವದ ಹಲವಾರು ದೇಶಗಳು ಭಾರತದ ನೇತೃತ್ವದಲ್ಲಿ ಒಂದೇ ಕುಟುಂಬದಂತೆ ಇಂದು ಯೋಗ ದಿನಾಚರಣೆ ಆಚರಣೆ ಮಾಡುತ್ತಿರುವುದು ಭಾರತೀಯರಾದ ನಮ್ಮೆಲ್ಲರಿಗೂ ಖುಷಿ ವಿಚಾರ, ನಾವೇಲ್ಲರು ಉತ್ತಮ ಆರೋಗ್ಯಕ್ಕಾಗಿ ನಿತ್ಯ ಯೋಗ ಮಾಡಿ 20 ವರ್ಷಗಳ ಹಿಂದಿನ ಆಹಾರ ಕ್ರಮ ಅನುಸರಿಸಿ,ವಿದೇಶಿ ಆಹಾರ ಪದ್ದತಿ ತಿರಸ್ಕರಿಸಿ ಬದುಕು ಹಸನಾಗಿಸಿಕೊಳ್ಳೊಣ,ನಮ್ಮ ಸುಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸುವ ಮೂಲಕ ಪರಿಸರದ ಸ್ವಾಸ್ಥವನ್ನು…

Read More

ಚಿತ್ತೂರು: ರಸ್ತೆ ಅಪಘಾತದಲ್ಲಿ ಮೂರು ಆನೆಗೆಳು ಜೀವ ಕಳೆದುಕೊಂಡಿರುವ ದಾರುಣ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ . ತಿರುಪತಿ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಲಮನೇರು ಬಳಿಯ ಜಗಮರ್ಲ ಅರಣ್ಯ ಪ್ರದೇಶದಲ್ಲಿ ನಡೆದಿದೆ.ಪಲಮನೇರು ಬಳಿ ಇರುವ ಕೌಂಡಿನ್ಯ ಅಭಯಾರಣ್ಯದ ಮದ್ಯವೆ ತಿರುಪತಿ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಿದ್ದು ಈ ರಸ್ತೆಯಲ್ಲಿ ಆನೆಗಳು ರಸ್ತೆ ದಾಟುವುದು ಸಾಮಾನ್ಯ, ಮೂರ್ನಾಲ್ಕು ದಿನಗಳ ಹಿಂದೆ ಮದ್ಯರಾತ್ರಿ ವೆಳೆ ಆನೆಗಳ ದಂಡು ರಸ್ತೆಯ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ರಸ್ತೆ ದಾಟುತ್ತಿರುವಾಗ ಪಲಮನೇರು ಕಡೆಯಿಂದ ಚೆನ್ನೈ ಕಡೆಗೆ ಹೋರಟಿದ್ದ ಮಾವಿನಕಾಯಿ ತುಂಬಿದ್ದ ಇಚರ್ ಲಾರಿ ವೇಗವಾಗಿ ಹೊಗಿತಿದ್ದು ವಾಹನ ಚಾಲಕನಿಗೆ ರಸ್ತೆ ದಾಟುತ್ತಿರುವ ಆನೆಗಳ ಹಿಂಡು ಕಾಣದಾಗಿ ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು ಈ ಅಪಘಾತದಲ್ಲಿ ಮೂರು ಆನೆಗಳು ಸ್ಥಳದಲ್ಲೆ ಸಾವನ್ನಪ್ಪಿವೆ ಅಪಘಾತದ ರಭಸಕ್ಕೆ ಆನೆಯೊಂದು ರಸ್ತೆ ಬದಿಯ ಹಳದಲ್ಲಿ ಬಿದಿದ್ದರೆ,ರಸ್ತೆ ಸುರಕ್ಷತೆಗೆ ಅಳವಡಿಸಿದ್ದ ಕ್ರ್ಯಾಶ್ ಬ್ಯಾರಿಯರ್‌ಗೆ ಡಿಕ್ಕಿ ಹೊಡೆದು ಮತ್ತೆರಡು ಆನೆಗಳು ಸಾವನ್ನಪ್ಪಿವೆ. ಈ ಅಪಘಾತದಲ್ಲಿ ಮಾವಿನಕಾಯಿ ಲಾರಿ ಸಂಪೂರ್ಣ…

Read More

ಶ್ರೀನಿವಾಸಪುರ:ಗ್ರಾಮದೇವತೆ ಶ್ರೀಚೌಡೇಶ್ವರಿ ದೇವರಿಗೆ ಜೇಷ್ಠಮಾಸದ ಅಮಾವಸ್ಯೆ ಪೂಜೆಯನ್ನು ಸತ್ಸಂಗ ಬಳಗದ ಗುರುಗಳಾದ ಸತ್ಯಮೂರ್ತಿ ನೇತೃತ್ವದಲ್ಲಿ ಏರ್ಪಡಿಸಲಾಗಿತ್ತು.ಈ ಸಂದರ್ಭದಲ್ಲಿ ಸತ್ಯಮೂರ್ತಿಯವರು ಮಾತನಾಡಿ ಜೇಷ್ಠಮಾಸ ಅಂತ್ಯ ಹಾಗು ಆಷಾಡ ಮಾಸದ ಆರಂಭದಲ್ಲಿ ಶಕ್ತಿದೇವತೆಗೆ ಅನಾವರಣ ಪೂಜೆ ಮಾಡಲಾಗುತ್ತದೆ ಇದೊಂದು ವೈಶಿಷ್ಟಪೂರ್ಣವಾದ ಲೋಕಕಲ್ಯಾಣಾರ್ಥವಾಗಿ ಮಾಡುವಂತ ಪೂಜೆಯಾಗಿದ್ದು ಗ್ರಾಮದ ಸುಹಾಸಿನಿಯರಿಂದ ಗ್ರಾಮದೇವತೆ ಶ್ರೀ ಚೌಡೇಶ್ವರಿ ದೇವಿಯನ್ನು ಶ್ರೀಚಕ್ರ ಪೂಜೆಯಲ್ಲಿ ಒಂಬತ್ತು ಆವರಣಗಳಲ್ಲಿ ನವ ದುರ್ಗೆಯರನ್ನು ಅಹ್ವಾನಿಸಿ ಪೂಜಿಸಲಾಗುತ್ತದೆ ಒಂಬತ್ತು ಬಾರಿ ಅಭಿಷೇಕ ಒಂಬತ್ತು ಬಾರಿ ಆರತಿ ಮತ್ತು ನವಗ್ರಹಗಳಿಗೆ ಪೂಜಾ ಕಾರ್ಯಕ್ರಮ ನಡೆಸಲಾಗುತ್ತದೆ ಮತ್ತು ಅಲಂಕಾರ ಮಾಡಿ ಲೋಕದಲ್ಲಿನ ಸಮಸ್ಯೆಗಳು ದೂರವಾಗಿ ಜನತೆ ಸುಖ ಶಾಂತಿಃ ನೆಮ್ಮದಿಯ ಜೀವನ ಮಾಡಲು ನೇರವಾಗುವಂತೆ ದೇವರನ್ನು ಕೋರಲಾಗುತ್ತದೆ ಎಂದರು.ಸೋಮವಾರದಿಂದ ಶಂಕರ ಮಠದಲ್ಲಿ ವಾರಾಹಿ ನವರಾತ್ರಿ ಉತ್ಸವಗಳು ಒಂಬತ್ತು ದಿನಗಳಕಾಲ ನಡೆಯಲಿದ್ದು ಪ್ರತಿದಿನ ಸಂಜೆ ಪೂಜಾಕಾರ್ಯಕ್ರಮ ಹಾಗು ಪ್ರವಚನ ಕಾರ್ಯಕ್ರಮ ಇರುತ್ತದೆ ಎಂದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯೆ ಶಾಂತಮ್ಮ, ಸತ್ಸಂಗ ಬಳಗದ ಸಂಚಾಲಕಿ ಮಂಗಳಾ,ಎಸ್.ಎಸ್.ವಿ.ಎಸ್.ಟ್ರಸ್ಟ್ ಮುಖ್ಯಸ್ಥರಾದ ವನಜಾಕ್ಷಮ್ಮ,ಧನಲಕ್ಷ್ಮೀ,ಮಾಲಿನಿ, ಮುನಿಯಮ್ಮ, ಚಂದ್ರೇಗೌಡ,ಪ್ರಧಾನ…

Read More

ಮುಳಬಾಗಿಲು:ಕಾಂಗ್ರೆಸ್ ಪ್ರಜಾಯಾತ್ರೆ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ನಮ್ಮ ಪಕ್ಷಕ್ಕೆ ಮತ ನೀಡಿ ಅಧಿಕಾರಕ್ಕೆ ಬಂದರೆ ಸಹಕಾರ ಬ್ಯಾಂಕ್‌ಗಳಲ್ಲಿ ಪಡೆದಿರುವ ಸ್ತ್ರೀಶಕ್ತಿ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದಾರೆ ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ನಮ್ಮ ಮತ ಪಡೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಲ ಮನ್ನಾ ಮಾಡಲಿ ಇಲದಿದ್ದರೆ ಮಹಿಳೆಯರಿಗೆ ದ್ರೋಹ ಮಾಡಿದಂತೆ ಎಂದು ಸಾಲ ವಸೂಲಿಗೆ ಹೋದ ಸಿಬ್ಬಂದಿಯನ್ನ ಹಗ್ಗದಿಂದ ಕಟ್ಟಿಹಾಕಲು ಮಹಿಳೆಯರು ಮುಂದಾದ ಘಟನೆ ಮುಳಬಾಗಿಲು ತಾಲ್ಲೂಕು ಬೈರಕೂರು ಗ್ರಾಮದಲ್ಲಿ ನಡೆದಿದೆ.ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳ ಬಳಿ ಸಾಲ ವಸೂಲಿಗೆ ತೆರಳಿದ್ದ ಡಿಸಿಸಿ ಬ್ಯಾಂಕ್ ಸಿಬ್ಬಂದಿಯನ್ನು ಮಹಿಳೆಯರು ತರಾಟೆಗೆ ತಗೆದುಕೊಂಡು ಸಿದ್ದರಾಮಯ್ಯ ಸಾಲ ಮನ್ನಾ ಮಾಡ್ತಾರೆ ಎಂದು ಹೇಳಿಕೆ ನೀಡಿರುವಂತ ಪೇಪರ್ ಕಟ್ಟಿಂಗ್ ತೋರಿಸಿದ ಮಹಿಳೆಯರು ಬ್ಯಾಂಕ್ ಸಿಬ್ಬಂದಿಯನ್ನು ಹಗ್ಗದಿಂದ ಕಟ್ಟಿಹಾಕಲು ಮುಂದಾಗಿದ್ದಾರೆ ಇದಕ್ಕೆ ಊರಿನ ಕೆಲ ಪುರಷರು ವಿರೋಧ ವ್ಯಕ್ತಪಡಿಸಿ ಮಹಿಳೆಯರಿಂದ ಬ್ಯಾಂಕ್ ಸಿಬ್ಬಂದಿಯನ್ನು ಬಿಡಿಸಿರುತ್ತಾರೆ. ಇದಕ್ಕೆ ಮಹಿಳೆಯರು ಗ್ರಾಮದ ಪುರಷರ ಮೇಲೆ ತಿರುಗಿ ಬಿದಿದ್ದಾರೆ ಚುನಾವಣೆಯಲ್ಲಿ ಹೇಳಿದಂತೆ…

Read More

ಚಿಂತಾಮಣಿ:ಚಿಂತಾಮಣಿ ನಗರದ ಅಭಿವೃದ್ಧಿ ದೃಷ್ಟಿಯಿಂದ ನಗರದ ಹೊರವಲಯದಲ್ಲಿ ಮಾಡಿಕೆರೆ ಕ್ರಾಸ್ ನಿಂದ ಚಿನ್ನಸಂದ್ರದವರಿಗೂ ನಾಲ್ಕುಪಥದ ಬೈಪಾಸ್ ರಸ್ತೆ ನಿರ್ಮಾಣ ಆಗಲಿದೆ ಚಿನ್ನಸಂದ್ರ ಕೇಂದ್ರಿಕೃತವಾಗಿ ಜಂಕ್ಷನ್ ನಿರ್ಮಾಣ ಆಗಲಿದ್ದು ಶಿಡ್ಲಘಟ್ಟ ರಸ್ತೆಯಲ್ಲಿ ಬಹುಷಃ ತಿನಕಲ್ಲು ಬಳಿವರಿಗೂ ಬೈ ಪಾಸ್ ರಸ್ತೆ ಆಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತವಾರಿ ಸಚಿವ ಡಾ.ಎಂ.ಸಿ.ಸುಧಾಕ‌ರ್ ಅವರು ಹೇಳಿದರು ಅವರು ಚಿಂತಾಮಣಿ ನಗರದ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿ ಬೈಪಾಸ್ ರಸ್ತೆ ನಿರ್ಮಾಣ ಸಂಬಂದ ಎಲ್ಲಾ ಹಂತಗಳ ಕಾರ್ಯಗಳು ಪೂರ್ಣಗೊಂಡಿದೆ ಚಿಂತಾಮಣಿ ನಗರದಲ್ಲಿ ಹಾದುಹೋಗಿರುವ 234 ರಾಷ್ಟ್ರೀಯ ಹೆದ್ದಾರಿ ಸದ್ಯದಲ್ಲಿ ನಾಲ್ಕುಪಥ ರಸ್ತೆಯಾಗಲಿದೆ, ಗೌರಿಬಿದನೂರು ನಿಂದ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ವರಿಗೂ ನಾಲ್ಕು ಪಥ ರಸ್ತೆ ಕಾಮಗಾರಿ ಪ್ರಾರಂಭ ಆಗಲಿದೆ, ಮಾಡಿಕೆರಿ ಕ್ರಾಸ್ ನಿಂದ ಮುಳಬಾಗಿಲು ವರಿಗೂ ನಾಲ್ಕುಪಥದ ರಸ್ತೆ ನಿರ್ಮಾಣ ಆಗುತ್ತದೆ,ಹೊಸಕೊಟೆಯವರಗೆ ಹೆದ್ದಾರಿಯಲ್ಲಿನ ಈಗಿನ ವಾಹನ ದಟ್ಟಣೆಯಿಂದ ಆರುಪಥ ರಸ್ತೆಯ ಅಗತ್ಯ ಇದೆ…

Read More

ಶ್ರೀನಿವಾಸಪುರ:ರೈತನೊರ್ವ ದ್ವಿಚಕ್ರ ವಾಹದಲ್ಲಿಟ್ಟಿದ್ದ ಹಣವನ್ನು ಕಳ್ಳರು ಎಗರಿಸಿರುವ ಘಟನೆ ಪಟ್ಟಣದ ವೇಣು ಶಾಲೆ ವೃತ್ತದಲ್ಲಿ ನಡೆದಿರುತ್ತದೆ.ತಾಲ್ಲೂಕಿನ ಚಿರುವನಹಳ್ಳಿ ಗ್ರಾಮದ ಕೃಷ್ಣಾರೆಡ್ಡಿ ಎಂಬ ರೈತ ಕೆನರಾ ಬ್ಯಾಂಕ್ ನಿಂದ ಹಣ ಡ್ರಾ ಮಾಡಿಕೊಂಡಿದ್ದು ಹಣವನ್ನು ಬೈಕ್ ಮುಂಬಾಗದ ಟ್ಯಾಂಕ್ ಮೇಲಿನ ಬ್ಯಾಗ್ ನಲ್ಲಿ ಇರಿಸಿಕೊಂಡು ಊರಿಗೆ ಹೋಗಬೇಕಾದರೆ ವೇಣು ಶಾಲೆಯ ಬಳಿಯಿರುವ ಸಾಯಿ ಬೇಕರಿ ಬಳಿ ದ್ವಿಚಕ್ರ ವಾಹನ ನಿಲ್ಲಿಸಿ ಮನೆಗೆ ತಿಂಡಿ ತರಲು ಬೇಕರಿ ಹೋಗಿ ಬರುವಷ್ಟರಲ್ಲಿ ದ್ವಿಚಕ್ರ ವಾಹನದ ಟ್ಯಾಂಕ್ ಮೇಲಿನ ಬ್ಯಾಗ್ ನಲ್ಲಿದ್ದ ಹಣವನ್ನು ಕಳವು ಮಾಡಿಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ ಹಣದ ಜೊತೆಗೆ ಚೆಕ್ ಬುಕ್ ಹಾಗೂ ಪಾಸ್ ಪುಸ್ತಕವನ್ನು ಸಹ ಕಳ್ಳರು ಕದ್ದೊಯಿದಿರುತ್ತಾರೆ.ಹೊಸ ಕಾರು ಖರೀದಿಸಲು ಕೃಷ್ಣಾರೆಡ್ಡಿ ಮಕ್ಕಳು ಬೆಂಗಳೂರಿನಿಂದ ತಮ್ಮ ತಂದೆ ಖಾತೆಗೆ ಹಣ ಜಮಾ ಮಾಡಿದ್ದರು ಎನ್ನಲಾಗಿದೆ. ಈ ಬಗ್ಗೆ ಶ್ರೀನಿವಾಸಪುರ ಪೋಲಿಸ್ ಠಾಣೆಯಲ್ಲಿ ದೂರುದಾಖಲಾಗಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಕೃತ್ಯವನ್ನು ವೃತ್ತಿಪರ ಕಳ್ಳರು ಎಸಗಿರುವುದಾಗಿ .ಪೋಲಿಸರು ಶಂಕಿಸಿರುತ್ತಾರೆ.ಇಬ್ಬರು…

Read More