ಶ್ರೀನಿವಾಸಪುರ:ಮಹಿಳೆಯರಿಗೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯಲ್ಲಿ “ಶಕ್ತಿ” ಯೋಜನೆ ಅಡಿಯಲ್ಲಿ ಉಚಿತ ಪ್ರಯಾಣ ಜಾರಿಗೆ , ತಂದಿರುವುದು ಉತ್ತಮ ಕಾರ್ಯಕ್ರಮವಾಗಿದೆ ಇದನ್ನು ನಾನು ವೈಯುಕ್ತಿಕವಾಗಿ ಸ್ವಾಗತಿಸುತ್ತೇನೆ ಎಂದು ಶಾಸಕ ವೆಂಕಟಶಿವಾರೆಡ್ಡಿಹೇಳಿದರು ಅವರು ಶ್ರೀನಿವಾಸಪುರ ಪಟ್ಟಣದ ಹಳೆ ಸರ್ಕಾರಿ ಬಸ್ ನಿಲ್ದಾಣದಲ್ಲಿ ಕಾಂಗ್ರೆಸ್ ಗ್ಯಾರಂಟಿಯ “ಶಕ್ತಿ” ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಇದೊಂದು ಅದ್ಭುತವಾದ ಕಾರ್ಯಕ್ರಮವಾಗಿದ್ದು ದಿನನಿತ್ಯ ಒಡಾಡುವಂತ ದಿನಕೂಲಿ ಕಾರ್ಮಿಕರು ಇತರೆ ಕಾರ್ಮಿಕರು ಹಾಗು ಸಾಮನ್ಯ ಕುಟುಂಬದ ಮಹಿಳೆಯರಿಗೆ ಅನಕೂಲವಾಗುತ್ತದೆ ಎಂದ ಅವರು ಕರೋನಾ ಸಮಯದಲ್ಲಿ ಆರ್ಥಿಕ ನಿಶ್ಯಕ್ತಿಯಿಂದ ನಿಲ್ಲಿಸಿರುವಂತ ಮಾರ್ಗಗಳಲ್ಲಿ ಮತ್ತೆ ಬಸ್ಸುಗಳನ್ನು ಒಡಿಸುವಂತೆ ರಾಜ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಸೂಚಿಸಿದರು.ಸ್ತ್ರೀ ಶಕ್ತಿ ಸಂಘಗಳ ಸಾಲಮನ್ನಾ ಮಾಡಲು ವಿನಂತಿಹಲವಾರು ಯೋಜನೆಗಳನ್ನು ಜಾರಿಗೆ ತಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಸಾಮಾನ್ಯರ ಸಮಸ್ಯೆಗಳನ್ನು ಅರಿತವರು ಅವರು ದೊಡ್ಡ ಮನಸ್ಸು ಮಾಡಿ ಮಹಿಳಾ ಸ್ತ್ರೀ ಶಕ್ತಿ ಸಂಘಗಳ ಸಾಲಮನ್ನಾ ಯೋಜನೆ ಜಾರಿಗೆ ತರುವ ಮೂಲಕ ಸಾಮಾನ್ಯ ಕುಟುಂಬದ…
Author: Srinivas_Murthy
ಶ್ರೀನಿವಾಸಪುರ: ದೇವಾಲಯಗಳನ್ನು ಭಕ್ತರ ನಂಬಿಕೆಗಳು ಅವರ ಆಶಯದಂತೆ ದಾರಿ ದೀಪಗಳಾಗಿ ಮತ್ತು ಭಾವನೆಗಳ ಅನುಗುಣವಾಗಿ ನಿರ್ಮಾಣ ಮಾಡಲಾಗುತ್ತದೆ ಎಂದು ಕೋಡಿಮಠದ ಶ್ರೀ ಗಳು ಹೇಳಿದರು ಅವರು ಶ್ರೀನಿವಾಸಪುರ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಮುಸ್ಲಿಂ ಕುಟುಂಬ ನೂತನವಾಗಿ ನಿರ್ಮಿಸಿರುವ ಶ್ರೀ ಪ್ರಸನ್ನ ಚೌಡೇಶ್ವರಿ ದೇವಾಲಯದ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡಿದರು.ದೇವಾಲಯ ನಿರ್ಮಾಣ ಮಾಡಿರವಂತ ಶಫಿ ಕುಟುಂಬದ ಕಾರ್ಯ ಸಮಸ್ತ ಮನಕುಲಕ್ಕೆ ಆದರ್ಶವಾಗಿದ್ದು ಸೌರ್ಹಾದತೆಯ ಕೆಲಸ ಎಂದು ಶ್ಲಾಘಿಸಿದರು.ಪ್ರಪಂಚಕ್ಕೆ ಮಳೆಯಿಂದ ಆಪತ್ತು!ಮಳೆಯಿಂದ ಇನ್ನಿಲ್ಲದ ಅನಾಹುತಗಳು ಪ್ರಪಂಚವನ್ನು ಕಾಡುತ್ತದೆ ಒಂದೇರಡು ರಾಷ್ಟ್ರಗಳು ಮಳೆಯ ನೀರಿನಲ್ಲಿ ಮುಳಗಿ ಹೋಗುತ್ತದೆ,ಪ್ರಪಂಚಕ್ಕೆ ಜಾಗತೀಕ ಯುದ್ದದ ಭೀತಿ ಇದೆ ಇದರ ಪರಿಣಾಮ ನಮ್ಮ ರಾಷ್ಟ್ರದ ಮೇಲೂ ಬೀರಲಿದೆ ವೀಪರಿತ ದುಖ ಸಾವು ನೋವುಗಳು ಕಾಣುವಂತಾಗುತ್ತದೆ,ಒಡಿಶಾ ರೈಲು ದುರಂತದಂತೆ ಬೇರೆ ಬೇರೆ ರಿತೀಯ ಅವಘಡಗಳು ಸಂಭವಿಸಲಿದೆ, ಭೂಮಿ ಬಾಯಿ ತೆರೆಯುತ್ತದೆ ಕಂಪನಗಳು ಆಗುತ್ತದೆ ಇದಕ್ಕೆ ಭಗವಂತನ ಪೂಜೆ ಧ್ಯಾನವೆ ಪರಿಹಾರ ಎಂದ ಅವರು ಮತೀಯ ಸಮಸ್ಯೆಯೂ ಇದೆ ಎಂದು ನುಡಿದರು.ದೇವಾಲಯದ ಆವರಣದಲ್ಲಿ ರಾಜಕೀಯ…
ನ್ಯೂಜ್ ಡೆಸ್ಕ್: ರಾಜಸ್ಥಾನ ಕಾಂಗ್ರೆಸ್ ನಲ್ಲಿ ಜೊಡೆತ್ತುಗಳಾಗಿ ಕಾರ್ಯನಿರ್ವಹಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದ ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ಹಾಲಿ ಮುಖ್ಯಮಂತ್ರಿ ಅಶೋಕ ಗೆಲ್ಲೋಟ್ ಹಾಗು ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನಡುವೆ ಅಧಿಕಾರ ಹಂಚಿಕೆ ನಿಲ್ಲದ ಸಮರವಾಗಿತ್ತು ಈಗ ಅದು ತಾರಕಕ್ಕೆ ತಲುಪಿದ್ದು ಮುಖ್ಯಮಂತ್ರಿ ಅಶೋಕ ಗೆಲ್ಲೋಟ್ ಜೊತೆ ತೀವ್ರ ಭಿನ್ನಾಭಿಪ್ರಾಯ ಹೊಂದಿರುವ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಕಾಂಗ್ರೆಸ್ ಸಂಬಂಧ ಕಡಿದುಕೊಂಡಿದ್ದಾರೆ ಈಗ ತಮ್ಮದೇ ಮಾರ್ಗದಲ್ಲಿ ಸಾಗಲು ತಯಾರಿ ನಡೆಸುತ್ತಿರುವ ಪೈಲಟ್ ರಾಜಾಸ್ಥಾನದ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಇರುವಾಗ ಹೊಸ ಪಕ್ಷ ಸ್ಥಾಪಿಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.ನೂತನ ಪಕ್ಷ ಸ್ಥಾಪನೆ ಪ್ರಕ್ರಿಯೆಯಲ್ಲಿ ರಾಜಕೀಯ ಮಹಾ ತಂತ್ರಗಾರ ಪ್ರಶಾಂತ ಕಿಶೋರ ಅವರ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ ಸಚಿನ್ ಪೈಲಟ್ ಗೆ ನೆರವಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.ರಾಜೇಶ್ ಪೈಲಟ್ ಅವರ ತಂದೆಯ ಪುಣ್ಯತಿಥಿ ಜೂ.11ರಂದು ಪೈಲಟ್ ನೂತನ ಪಕ್ಷ ಘೋಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ ಪಕ್ಷದ ಹೆಸರು “ಪ್ರಗತಿಶೀಲ…
ಪಿ.ಡಿ.ಒ. ಚಲಪತಿ ಕಚೇರಿಗೆ ಬರುವುದಿಲ್ಲ ನರೇಗಾ ಅನುಷ್ಟಾನದಲ್ಲಿ ಪಾರದರ್ಶಕತೆ ಇಲ್ಲ ಗ್ರಾ.ಪಂ.ಮಾಜಿ ಸದಸ್ಯರಿಂದ ನೇರ ಆರೋಪ ಶ್ರೀನಿವಾಸಪುರ:ತಾಲೂಕಿನ ಯಲ್ದೂರು ಹೋಬಳಿಯ ಮುತ್ತಕಪಲ್ಲಿ ಗ್ರಾಮಪಂಚಾಯಿತಿಯಲ್ಲಿ ಎಲ್ಲವೂ ಅಕ್ರಮಗಳೆ ಎಂದುಪೆದ್ದಪಲ್ಲಿ ಈರಪ್ಪ ಮತ್ತು ಎಮ್ಮನೂರುರಾಜಣ್ಣ ಮತ್ತಿತರರು ಆರೋಪಿಸಿದ್ದಾರೆ.ಗ್ರಾಮ ಪಂಚಾಯ್ತಿಯಲ್ಲಿ ನಡೆಯುತ್ತಿರುವ ಅಭಿವೃದ್ದಿ ಕುಂಟಿತವಾಗಿದೆ ಕೆಲಸ ಕಾರ್ಯಗಳು ಸಮರ್ಪಕವಾಗಿ ನಡೆಯದೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(PDO)ಚಲಪತಿ ಅವರ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ಅಸಮದಾನ ವ್ಯಪ್ತಪಡಿಸಿದ್ದಾರೆ, ಕಳೆದ 8-10 ತಿಂಗಳ ಹಿಂದೆ ಪಿ.ಡಿ.ಒ. ಚಲಪತಿ ಅಧಿಕಾರ ಪಡೆದುಕೊಂಡಿದ್ದಾರೆ ಸಮರ್ಪಕವಾಗಿ ಪಂಚಾಯಿತಿ ಕಛೇರಿಗೆ ಬರುವುದಿಲ್ಲ, ಜನರ ಸಮಸ್ಯೆ ಕೇಳಲು ಇಲ್ಲಿ ಅಧಿಕಾರಿಗಳೆ ಇಲ್ಲದಂತಾಗಿದೆ.ಮುತ್ತಕಪಲ್ಲಿ ಪಂಚಾಯಿತಿಯಲ್ಲಿ ಸ್ವಚ್ಚತೆ ಮರಿಚಿಕೆಯಾಗಿದೆಮುತ್ತಕಪಲ್ಲಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸ್ವಚ್ಚತೆ ಮರಿಚಿಕೆಯಾಗಿದೆ ಬಹುತೇಕ ಗ್ರಾಮಗಳಲ್ಲಿ ಚರಂಡಿಗಳಲ್ಲಿ ಕಸ ತುಂಬಿದ ಪರಿಣಾಮ ಗಬ್ಬು ವಾಸನೆಯಿಂದ ಜನ ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ ಕನಿಷ್ಠ ಬ್ಲೀಚಿಂಗ್ ಪೌಡರ್ ಸಿಂಪಡಿಸುವ ಕಾರ್ಯ ಆಗಿಲ್ಲ,ಸ್ವಚ್ಚ ಭಾರತ್ ಮಿಷಿನ್ ಯೋಜನೆಯಡಿ ಕಸ ವಿಭಜಿಸುವ ಬುಟ್ಟಿಗಳ ವಿತರಣೆ ಇದುವರಿಗೂ ಆಗದಿರುವುದು ದುರಂತ ಎನ್ನುತ್ತಾರೆ…
ಬೆಂಗಳೂರು:ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಸೇವೆಸಲ್ಲಿದ್ದ ಬಿ. ವೀರಪ್ಪನವರು ನಿವೃತ್ತರಾದ ಹಿನ್ನಲೆಯಲ್ಲಿ ಅವರನ್ನು ಬುಧವಾರ ಸಂಜೆ ಅವರನ್ನು ಬೆಂಗಳೂರು ವಕೀಲರ ಸಂಘ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಆತ್ಮೀಯತೆಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.ನ್ಯಾಯಮೂರ್ತಿ ಬಿ.ವೀರಪ್ಪ ಅವರಿಗೆ ಮೈಸೂರು ಪೇಟ ತೊಡಿಸಿ, ಕಂಚಿನ ವೆಂಕಟೇಶ್ವರ ಮೂರ್ತಿ ನೀಡಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸನ್ಮಾನಿಸಿದರು. ಸಮಾರಂಭದಲ್ಲಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಲೆ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ಹಾಗು ಅಪಾರ ಸಂಖ್ಯೆಯಲ್ಲಿ ವಕೀಲರು ಪಾಲ್ಗೋಂಡಿದ್ದರು.ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ ಮನುಷ್ಯನಿಗೆ ಉನ್ನತ ಅವಕಾಶಗಳು ಸಿಕ್ಕಾಗ ಆತ್ಮಸಾಕ್ಷಿಗೆ ತಕ್ಕಂತೆ ಕಾರ್ಯನಿರ್ವಹಿಸಿದಾಗ ಮಾತ್ರ ಬದುಕು ಸಾರ್ಥಕ ಆಗುತ್ತದೆ ಅದೆ ರಿತಿಯಲ್ಲಿ ಉತ್ತಮ ನ್ಯಾಯದಾನದ ಮೂಲಕ ನ್ಯಾಯಮೂರ್ತಿ ಬಿ.ವೀರಪ್ಪ ಅವರು ತಮ್ಮ ಬದುಕು ಮತ್ತು ವೃತ್ತಿಯನ್ನು ಸಾರ್ಥಕಗೊಳಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಬಿ.ವೀರಪ್ಪ ಅವರು ಮುಖ್ಯ ನ್ಯಾಯಮೂರ್ತಿ ಆಗುವಾಗಲೂ ನಾನೆ ಮುಖ್ಯಮಂತ್ರಿ ಆಗಿದ್ದೆ.…
ಚಿಂತಾಮಣಿ:ಅವಿಭಜಿತ ಕೋಲಾರ ಜಿಲ್ಲೆಯ ಪ್ರಖ್ಯಾತ ವಾಣಿಜ್ಯ ನಗರಿ ಚಿಂತಾಮಣಿಗೆ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಮೊದಲ ಹಂತದಲ್ಲಿಯೇ ಚೌಕಾಸಿ ಇಲ್ಲದೆ ಮಂತ್ರಿ ಭಾಗ್ಯ ಸಿಕ್ಕಿದೆ ಸುಮಾರು ಮೂರು ದಶಕದ ನಂತರ ಚಿಂತಾಮಣಿ ಶಾಸಕ ಡಾ.ಎಂ.ಸಿ.ಸುಧಾಕರ್ ಮೊದಲ ಬಾರಿಗೆ ಮಂತ್ರಿಯಾಗಿದ್ದಾರೆ.ಮಾಳಪಲ್ಲಿ ಕುಟುಂಬದ ಕುಡಿಗೆ ಒಲಿದ ಮಂತ್ರಿ ಭಾಗ್ಯಮಾಳಪಲ್ಲಿ ಕುಟುಂಬ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಕುಟುಂಬ ಎಂದೇ ಖ್ಯಾತಿ ಪಡೆದಿದೆ ಅಂತಹ ಮಾಳಪಲ್ಲಿ ಕುಟುಂಬದ ಮೂರನೆ ತಲೆಮಾರಿನ ರಾಜಕಾರಣಿ ಚಿಂತಾಮಣಿ ಶಾಸಕ ಡಾ.ಎಂ.ಸಿ.ಸುಧಾಕರ್. ವೃತ್ತಿಯಲ್ಲಿ ದಂತ ವೈದ್ಯ ಇವರ ಸಹೋದರ ಡಾ.ಬಾಲಾಜಿ ಸಹ ವೃತ್ತಿಯಲ್ಲಿ ವೈದ್ಯರೆ ಅವರು ಹೈದರಾಬಾದ್ ನಲ್ಲಿ ವೈದ್ಯ ವೃತ್ತಿಯಲ್ಲಿ ನೆಲೆ ನಿಂತಿದ್ದಾರೆ.ಸಿದ್ದರಾಮಯ್ಯ ಸಂಪುಟದಲ್ಲಿ ಡಾ.ಎಂ.ಸಿ.ಸುಧಾಕರ್ ಮಂತ್ರಿ ಪದವಿ ಒಲಿದಿದೆ,ಐದು ಚುನಾವಣೆಗಳನ್ನು ಎದುರಿಸಿರುವ ಡಾ.ಎಂ.ಸಿ.ಸುಧಾಕರ್ 2004 ಹಾಗು 2008 ಶಾಸಕರಾಗಿದ್ದರು ನಂತರದಲ್ಲಿ ಸತತವಾಗಿ ಎರಡು ಚುನಾವಣೆಗಳಲ್ಲಿ ಸೋಲುಕಂಡರು ನಿರಂತರವಾಗಿ ಕ್ಷೇತ್ರದ ಜನರ ಹಾಗು ಕಾರ್ಯಕರ್ತರ ಸಂಪರ್ಕದಲ್ಲಿದ್ದ ಪರಿಣಾಮ 2023 ಚುನಾವಣೆಯ ಭರ್ಜರಿ ಗೆಲವು ಸಾಧಿಸಿದ್ದಾರೆಡಾ.ಎಂ.ಸಿ.ಸುಧಾಕರ್ ಅವರ ತಾತ ಅಂಜನೇಯರೆಡ್ಡಿ 1951…
ನ್ಯೂಜ್ ಡೆಸ್ಕ್:ಆಂಧ್ರದ ಮಾಜಿ ಮುಖ್ಯಮಂತ್ರಿ ದಿವಂಗತ ರಾಜಶೇಖರೆಡ್ದಿ ಪುತ್ರಿ ತೆಲಂಗಾಣದ ವೈ.ಎಸ್.ಆರ್ ಪಾರ್ಟಿ ಮುಖ್ಯಸ್ಥೆ ವೈಎಸ್ ಶರ್ಮಿಳಾ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ,ಇದೊಂದು ಸೌಹಾರ್ದತೆಯ ಭೇಟಿ ಎನ್ನಲಾಗುತ್ತಿದೆ ಆದರೂ ತೆಲಂಗಾಣ ರಾಜಕೀಯ ವಲಯದಲ್ಲಿ ದೊಡ್ಡ ಬಿರುಗಾಳಿಯೆ ಎದ್ದಿದೆಯಂತೆ.ತೆಲಂಗಾಣ ವೈ.ಎಸ್.ಆರ್ ಪಾರ್ಟಿ ಮುಖ್ಯಸ್ಥೆ ಶರ್ಮಿಳಾ ಅವಿಭಜಿತ ಆಂಧ್ರಪ್ರದೇಶ ಮುಖ್ಯಮಂತ್ರಿ ರಾಜಶೇಖರರೆಡ್ಡಿ ಅವರ ಪುತ್ರಿ ಅವರ ಅಕಾಲಿಕ ನಿಧನದ ನಂತರ ತಮ್ಮ ಸಹೋದರ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿರುವ ಜಗನ್ಮೋಹನ್ ರೆಡ್ಡಿ ಅವರ ರಾಜಕೀಯ ಬೆನ್ನುಲುಬಾಗಿ ಕಳೆದ ಹತ್ತು ವರ್ಷಗಳಿಂದ ನಿಂತಿದ್ದು ಅಲ್ಲದೆ ಆಂಧ್ರದಲ್ಲಿ 2009 ರಲ್ಲಿ ನಡೆದಂತ ಚುನಾವಣೆಯಲ್ಲಿ ತಮ್ಮ ಸಹೋದರ ಗೆಲುವಿಗೆ ಸಂಪೂರ್ಣವಾಗಿ ತೊಡಗಿಸಿಕೊಂಡು ಯಶಸ್ಸು ಸಾಧಿಸಿದ್ದರು ನಂತರದಲ್ಲಿ ನಡೆದಂತ ವ್ಯತ್ಯಾಸಗಳಲ್ಲಿ ಸಹೋದರ ಆಂಧ್ರ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿಯಿಂದ ದೂರ ಸರಿದ ಶರ್ಮಿಳಾ ಕಳೆದ ಒಂದು ವರ್ಷದಿಂದ ತೆಲಾಂಗಾಣದಲ್ಲಿ ತಮ್ಮ ತಂದೆ ರಾಜಶೇಖರರೆಡ್ಡಿ ಹೆಸರು ಬಳಿಸಿಕೊಂಡು ತೆಲಂಗಾಣ ವೈ.ಎಸ್.ಆರ್ ತೆಲಂಗಾಣ ಪಾರ್ಟಿ ಎಂದು…
ನ್ಯೂಜ್ ಡೆಸ್ಕ್:ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ಸರ್ಕಾರದ ನೂತನ ಸಚಿವರಾಗಿ ಇಂದು 24 ಮಂದಿಗೆ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ನೂತನ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರತಿಜ್ಞಾ ವಿಧಿ ಬೋಧಿಸಿದರು.ಪ್ರಮಾಣ ವಚನ ಸ್ವೀಕರಿಸಿದ ಸಿದ್ದರಾಮಯ್ಯ ಬಣದ ಭೈರತಿ ಸುರೇಶ್,ಕೆ.ವೆಂಕಟೇಶ್, ಕೃಷ್ಣ ಬೈರೇಗೌಡ, ಡಾ.ಎಚ್.ಸಿ ಮಹದೇವಪ್ಪ,ಶಿವರಾಜ ತಂಗಡಗಿ, ನಾಗೇಂದ್ರ,ಕೆ.ಎನ್. ರಾಜಣ್ಣ, ಮಂಕಾಳ ವೈದ್ಯಗೆ,ದೊರೆತರೆಡಿಸಿಎಂ ಡಿ.ಕೆ. ಶಿವಕುಮಾರ್ ಬಣದ ಲಕ್ಷ್ಮಿ ಹೆಬ್ಬಾಳ್ಕರ್, ಶಿವಾನಂದ ಪಾಟೀಲ್, ಚಲುವರಾಯಸ್ವಾಮಿ, ಡಾ.ಎಂ.ಸಿ ಸುಧಾಕರ್, ಪಿ.ನರೇಂದ್ರಸ್ವಾಮಿ,ಎಚ್.ಕೆ. ಪಾಟೀಲ್,ಮಧು ಬಂಗಾರಪ್ಪ,ಡಿ.ಸುಧಾಕರ್, ಭೋಸರಾಜು ಅವರಿಗೆ ಸಚಿವ ಸ್ಥಾನ ದೊರೆತಿದೆಪ್ರಮಾಣ ವಚನ ಸ್ವೀಕರಿಸಿದ ಮೊದಲಿಗರಾಗಿ ಹೆಚ್.ಕೆ.ಪಾಟೀಲ್(ಕಾನೂನು ಮತ್ತು ಸಂಸದೀಯ),ಆರಂಭಗೊಂಡು ಬೆಂಗಳೂರು ಬ್ಯಾಟರಾಯನಪುರದ ಕೃಷ್ಣ ಭೈರೇಗೌಡ,ನಾಗಮಂಗಲದ ಎನ್. ಚಲುವರಾಯಸ್ವಾಮಿ, ಪಿರಿಯಾಪಟ್ಟಣದ ಕೆ.ವೆಂಕಟೇಶ್, ಟಿ.ನರಸಿಪುರದ ಡಾ.ಹೆಚ್.ಸಿ.ಮಹದೇವಪ್ಪ, ಈಶ್ವರ ಖಂಡ್ರೆ, ಮಧುಗಿರಿಯ ಕೆ.ಎನ್.ರಾಜಣ್ಣ, ಬೆಂಗಳೂರು ಗಾಂಧಿನಗರದ ದಿನೇಶ್ ಗುಂಡೂರಾವ್,ಶರಣಬಸಪ್ಪ ದರ್ಶನಾಪುರ್,ಶಿವಾನಂದ ಪಾಟೀಲ್, ಆರ್.ಬಿ.ತಿಮ್ಮಾಪುರ, ದಾವಣಗೆರೆಯ ಎಸ್.ಎಸ್.ಮಲ್ಲಿಕಾರ್ಜುನ, ಶಿವರಾಜ ತಂಗಡಗಿ, ಡಾ.ಶರಣ ಪ್ರಕಾಶ್ ರುದ್ರಪ್ಪ ಪಾಟೀಲ್, ಭಟ್ಕಳದ ಮಂಕಾಳು ವೈದ್ಯ, ಸಂತೋಷ್ ಲಾಡ್, ಎನ್…
ಕೋಲಾರ:ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಹುದ್ದೆಯನ್ನು ರಾಜ್ಯದ ಪತ್ರಿಕೋದ್ಯಮ ಮತ್ತು ಪತ್ರಕರ್ತರ ಒಳಿತಿಗಾಗಿ ಶ್ರಮಿಸುವ ಅವಕಾಶ ಎಂದು ಭಾವಿಸಿ ಕಾರ್ಯನಿರ್ವಹಿಸುವುದಾಗಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ನುಡಿದರು.ಬೆಂಗಳೂರಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು, ಪತ್ರಕರ್ತರು ಯಾವುದೇ ಸಂದರ್ಭದಲ್ಲಿ ವೃತ್ತಿಯ ಮೌಲ್ಯಗಳಿಗೆ ಕಳಂಕ ಬಾರದಂತೆ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದರು.ಮುಖ್ಯಮಂತ್ರಿಗಳಿಗೆ ರಾಜಕೀಯ ಸಲಹೆಗಾರ ಸೇರಿದಂತೆ ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿಯಾಗುವ ಅವಕಾಶ ಇದ್ದರೂ ಯಾವುದೆ ಅಧಿಕಾರದ ಆಸೆಗೆ ಒಳಪಡದೆ ತಮಗೆ ವೃತಿ ಬದುಕಿನ ಆಸರೆಯಾಗಿ ಇದುವರಿಗೂ ಸಾಕಿ, ಸಲುಹಿದ ಪತ್ರಿಕೋದ್ಯಮದ ವೃತ್ತಿಗೆ ಸಂಬಂಧಿಸಿದ ಅವಕಾಶವನ್ನು ಬಳಸಿಕೊಳ್ಳಬೇಕು ಎಂಬ ಸದುದ್ದೇಶದಿಂದ ಮಾಧ್ಯಮ ಸಲಹೆಗಾರ ಜವಾಬ್ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದಾಗಿ ಹೇಳಿದ ಅವರು ಪತ್ರಿಕೋದ್ಯಮದ ಜೀವನದ ಸಂದರ್ಭದಲ್ಲಿ ನನ್ನ ಬೆಳವಣಿಗೆಗೆ ಕಾರಣರಾದ ಕೋಲಾರದ ಹಿರಿಯ ಪತ್ರಕರ್ತರಾದ ದಿವಂಗತ ಬಿ.ವಿ.ನರಸಿಂಹಮೂರ್ತಿ, ಎಂ.ಮಲ್ಲೇಶ್ ಹಾಗೂ ಬಿ.ಎನ್.ಗುರುಪ್ರಸಾದ್, ಹಿರಿಯ ಪತ್ರಕರ್ತರಾದ ಕೆ.ಪ್ರಹ್ಲಾದರಾವ್, ಬಿ.ವಿ.ಗೋಪಿನಾಥ್, ಎಂ.ವಾಸುದೇವಹೊಳ್ಳ ಅವರುಗಳನ್ನು ಪ್ರಭಾಕರ್ ಇದೇ ವೇಳೆ ಸ್ಮರಿಸಿದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ…
ಶ್ರೀನಿವಾಸಪುರ: ಬೆಂಗಳೂರು ಕಳಾಸಿಪಾಳ್ಯಂ ನಿಂದ ಹೊರಟು ಹೆಚ್ ಕ್ರಾಸ್ ಮದನಪಲ್ಲಿ ಮಾರ್ಗವಾಗಿ ತಿರುಪತಿಗೆ ಹೊರಟಿದ್ದ ಖಾಸಗಿ ಬಸ್ಸೊಂದು ಬೆಂಗಳೂರು-ಕಡಪಾ ಹೆದ್ದಾರಿಯಲ್ಲಿ ರಸ್ತೆ ಬದಿಯ ಹಳ್ಳಕ್ಕೆ ಬಿದ್ದು ಅಪಘಾತವಾಗಿದೆ,ಬಸ್ಸಿನಲ್ಲಿದ್ದ ಬಹುತೇಕ ಪ್ರಯಾಣಿಕರು ಗಾಯಗಳಾಗಿದ್ದು ಅವರಲ್ಲಿ ಕೆಲವರು ತೀವ್ರವಾಗಿ ಗಾಯಗೊಂಡಿದ್ದಾರೆ.ಗುರುವಾರ ಬೆಳೆಗ್ಗೆ 10 ಗಂಟೆಗೆ ರಾಯಲ್ಪಾಡು ಗೆಟ್ ನಿಂದ ಹಾದು ಹೊದ ಭಾರತಿ ಬಸ್ ಸರ್ವಿಸ್ ಆಂಧ್ರಪ್ರದೇಶದ ಮದನಪಲ್ಲಿ ವ್ಯಾಪ್ತಿಯ ಬಾರ್ಲಪಲ್ಲಿ ಬಳಿ ತಿರುವಿನಲ್ಲಿ ರಸ್ತೆ ಬದಿಯ ಹಳ್ಳಕ್ಕೆ ಉರುಳಿ ಬಿದ್ದಿದೆ ಕೂಡಲೇ ಸ್ಥಳೀಯರ ಸಹಾಯದೊಂದಿಗೆ ಬಸ್ಸಿನ ಹಿಂಬದಿ ಗಾಜು ಒಡೆದು ಗಾಯಾಳುಗಳನ್ನು ಹೊರತಗೆದು ಮದನಪಲ್ಲಿಯ ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ ಅಪಘಾತದಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗೊಂಡಿದ್ದು 10ಕ್ಕೂ ಹೆಚ್ಚು ಪ್ರಯಾಣಿಕರನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆಯೆಂದು ಹೇಳಲಾಗಿದೆ. ಬಸ್ ನಲ್ಲಿದ್ದ ಬಹುತೇಕ ಪ್ರಯಾಣಿಕರು ಬೆಂಗಳೂರಿನವರಾಗಿದ್ದು ತಿರುಪತಿ ಹಾಗೂ ಮದನಪಲ್ಲಿಗೆ ಹೊಗುತ್ತಿದ್ದರು ಎನ್ನಲಾಗಿದೆ ಅಪಘಾತ ಸ್ಥಳಕ್ಕೆ ಮದನಪಲ್ಲಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಮದನಪಲ್ಲಿ ಆಸ್ಪತ್ರೆಗಳಲ್ಲಿ ಚಿಕಿಸ್ಥೆ ಪಡೆಯುತ್ತಿರುವ ಬಸ್…