ಶ್ರೀನಿವಾಸಪುರ:ಧರ್ಮ-ಕರ್ಮಗಳ ನಿರ್ವಹಣೆ ಹಾಗೂ ಸತ್ಯದ ಮೂಲಕ ಜೀವನ ಕ್ರಮವನ್ನು ತಿಳಿಸಿಕೊಟ್ಟಂತ ಆದರ್ಶವಂತ ಶ್ರೀರಾಮಚಂದ್ರ, ಆತನ ನಾಮಬಲದಿಂದ ವಿಶ್ವದಲ್ಲಿ ಶಾಂತಿ ಸೌಹಾರ್ದತೆ ಏರ್ಪಡುತ್ತದೆ ಭಾರತೀಯ ಕೌಟುಂಬಿಕ ವ್ಯವಸ್ಥೆ ಕುಟುಂಬದಲ್ಲಿ ಪತಿ-ಪತ್ನಿ ಸಾಮರಸ್ಯ ಜೀವನಕ್ಕೆ ರಾಮನಾಮನ ಜಪವೆ ಸಾಕ್ಷಿ ಶ್ರೀ ಸೀತಾರಾಮರ ಆದರ್ಶ ದಾಂಪತ್ಯವೆ ಎಲ್ಲರಿಗೂ ಮಾರ್ಗದರ್ಶನ ಶ್ರೀ ಸೀತಾರಾಮರ ವಿವಾಹದಿಂದ ವಿಶ್ವಶಾಂತಿ ದೊರೆಯುತ್ತದೆ ಎಂಬುದು ಭಾರತದ ಹಿರಿಯರ ನಂಬಿಕೆ ಎಂದು ಯಲ್ದೂರು ಶ್ರೀ ಕೋದಂಡರಾಮ ದೇವಾಸ್ಥಾನದ ಪ್ರಧಾನ ಅರ್ಚಕ ಶೇಷಾದ್ರಿ ತಿಳಿಸಿದರು.ಅವರು ತಾಲೂಕಿನ ಅರಿಕೆರಿ ಗ್ರಾಮದಲ್ಲಿ ನೆಲೆ ನಿಂತಿರುವ ಶ್ರೀ ಕೋದಂಡರಾಮ ದೇವಾಲಯದಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ಏರ್ಪಡಿಸಿದ್ದ ಶ್ರೀಸೀತಾರಾಮಕಲ್ಯಾಣ ನೇರವೇರಿಸಿ ಮಾತನಾಡಿದರು.ಶ್ರೀರಾಮನ ಪರಮಾರ್ಥ ತತ್ವಗಳಾದ ಪಿತೃವಾಖ್ಯ ಪರಿಪಾಲನೆ,ಧರ್ಮಾಚರಣೆ,ಏಕಪತ್ನಿ ವ್ರತಸ್ಥ ಎಂಬ ವಿಶೇಷ ಗುಣಗಳಿಂದ ಜಗವೆ ಇಷ್ಟ ಪಡುವ ಸರ್ವರಿಗೂ ಮಾದರಿಯಾಗಿದ್ದಾನೆ ಶ್ರೀರಾಮ, ಈಶ್ವರನಿಗೂ ಶ್ರೀರಾಮನ ತಾರಕಮಂತ್ರ ಇಷ್ಟವಾಗಿದೆ ಎಂದರೆ ಈ ನಾಮದ ಮಹತ್ವ ಎಷ್ಟು ಎಂಬುದು ತಿಳಿಯುತ್ತದೆ ಎಂದರು. ಶ್ರೀಸೀತಾರಾಮಕಲ್ಯಾಣೊತ್ಸವದ ಅಂಗವಾಗಿ ಖ್ಯಾತ ಭರತನಾಟ್ಯಕಲಾವಿದೆ ನಯನಾರಾಜಣ್ಣ ಅವರಿಂದ ನೃತ್ಯಪ್ರದರ್ಶನ ಏರ್ಪಡಿಸಿದ್ದರು. ಶ್ರೀಸೀತಾರಾಮಕಲ್ಯಾಣೊತ್ಸವ…
Author: Srinivas_Murthy
ಜಿ7 ಶೃಂಗಸಭೆಯಲ್ಲಿ ವಿಶ್ವನಾಯಕರ ಜೊತೆ ಪ್ರಧಾನಿ ಮೋದಿ ಮಾತುಕತೆ ಜನ ಸಂದಣಿ ನಿಭಾಯಿಸುವುದರಲ್ಲಿ ಪ್ರಧಾನಿ ಮೋದಿಗೆ ಪ್ರಥಮ ಸ್ಥಾನ ಬೈಡೆನ್ ನಮೋ ನಾಯಕತ್ವ ಶ್ಲಾಘಿಸಿದ ಆಸ್ಟ್ರೇಲಿಯಾ ಪ್ರಧಾನಿ ನ್ಯೂಜ್ ಡೆಸ್ಕ್:ಪ್ರಪಂಚದ ರಾಜಕೀಯ ನಾಯಕರಲ್ಲಿ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪಪುವಾ ನ್ಯೂಗಿನಿಯಾ ದೇಶದ ಪ್ರಧಾನಿ ಜೇಮ್ಸ್ ಮರಾಪೆ ಅವರು ಸಾಂಪ್ರದಾಯಿಕವಾಗಿ ಸ್ವಾಗತಿಸಿದ್ದು ಅಲ್ಲದೆ ಮೋದಿಯವರ ಕಾಲಿಗೆ ನಮಸ್ಕರಿಸಿ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.ಇದೊಂದು ಅಪರೂಪದ ಸ್ವಾಗತ ಎಂದು ಜಾಗತಿಕ ಮಟ್ಟದಲ್ಲಿ ಖ್ಯಾತಿಯಾಗಿದೆ.ಪಪುವಾ ನ್ಯೂಗಿನಿಯಾ ದೇಶದ ಪ್ರಧಾನಿ ಜೇಮ್ಸ್ ಮರಾಪೆ ಹಾಗು ಮೋದಿ ಅಪ್ಪುಗೆ ಮೂಲಕ ಪರಸ್ಪರ ಶುಭಾಶಯ ಕೋರಿದರು. ಬಳಿಕ ಪ್ರಧಾನಿ ಮೋದಿಯನ್ನು ಪಪುವಾ ನ್ಯೂಗಿನಿಯಾ ಅಧಿಕಾರಿಗಳಿಗೆ ಪರಿಚಯಿಸಲಾಯಿತು.ಭಾರತೀಯ ಡಯಾಸ್ಪೊರಾ ಸದಸ್ಯರು ಅವರನ್ನು ಬಹಳ ಉತ್ಸಾಹದಿಂದ ಸ್ವಾಗತಿಸಿದರು. ಪ್ರಧಾನಿ ಮೋದಿ ಅವರು ನಗುತ್ತಾ, ಕೈ ಬೀಸುವ ಮೂಲಕ, ಅವರೊಂದಿಗೆ ಸೆಲ್ಫಿಗೆ ಪೋಸ್ ನೀಡಿದರು.ಪಪುವಾ ನ್ಯೂಗಿನಿಯಾದಲ್ಲಿ ತಮಗೆ ಸಿಕ್ಕ ಭವ್ಯ ಸ್ವಾಗತಕ್ಕೆ ಟ್ವೀಟ್‌ನಲ್ಲಿ ಕೃತಜ್ಞತೆ ಸಲ್ಲಿಸಿರುವ ಪ್ರಧಾನಿ ಮೋದಿ,…
ಶ್ರೀನಿವಾಸಪುರ: ಬಿರುಗಾಳಿ ಸಮೇತದ ಮಳೆಯ ಆರ್ಭಟಕ್ಕೆ ಶ್ರೀನಿವಾಸಪುರ ಭಾಗದ ಜೀವನಾಡಿ ಮಾವಿನಕಾಯಿಗಳು ನೆಲದ ಪಾಲಾಗಿದೆ ಸುಮಾರು ಒಂದು ಗಂಟೆಯ ಕಾಲ ಬೀಸಿದಂತ ಬಿರುಗಾಳಿಗೆ ಬಾರಿಗಾತ್ರದ ಮರಗಳು ನೆಲಕ್ಕೂರಳಿದೆ.ಭಾನುವಾರ ಸಂಜೆ ಬಿರುಸಾದ ರಕ್ಕಸ ಗಾಳಿ ಮಳೆಯಿಂದ ಇಲ್ಲಿನ ರೈತಾಪಿ ಜನರ ವಾರ್ಷಿಕ ಜೀವನಾಡಿ ಬೆಳೆಯಾದ ಮಾವು ಸಂಪೂರ್ಣವಾಗಿ ನೆಲಕಚ್ಚಿದೆ ಗಂಟೆಗೆ ಅಂದಾಜು 30-40 ಕೀ.ಮಿ ವೇಗದಲ್ಲಿ ಬೀಸಿದಂತ ಗಾಳಿಯ ರಭಸಕ್ಕೆ ವಿಶೇಷವಾಗಿ ರೋಣೂರು ಹೋಬಳಿ ಕಸಬಾ ಹಾಗು ಯಲ್ದೂರು ಹೋಬಳಿಯ ಭಾಗದಲ್ಲಿ ಹೆಚ್ಚು ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.ಮಾವು ಬೆಳೆಯ ಜೊತೆಗೆ ತೋಟಗಾರಿಕೆ ಬೆಳೆಗಳಾದ ಟಮ್ಯಾಟೊ ಸೇರಿದಂತೆ ಇತರೆ ಬೆಳೆಗಳು ಹಾಳಾಗಿದೆ.ಶೇಡ್ ಮನೆಗಳ ತಗಡಿನ ರೇಖುಗಳು ಗಾಳಿಯ ಆರ್ಭಟಕ್ಕೆ ಹಾರಿಹೋಗಿದೆ.ಇದ-ಬದ್ದ ಬೆಳೆಯೂ ಹೋಯಿತುಕಳೆದ ಎರಡು ಮೂರು ತಿಂಗಳ ಹಿಂದೆ ಬಿದ್ದಂತ ಆಲಿಕಲ್ಲು ಮಳೆಯಿಂದ ಶೇ%60 ರಷ್ಟು ಮಾವು ಬೆಳೆ ಹೂ ಹಾಗು ಪಿಂದೆ ಹಂತದಲ್ಲಿಯೇ ಹಾಳಾಗಿತ್ತು ಇದ್ದ 30-40 ಭಾಗದಷ್ಟು ಬೆಳೆ ಇನ್ನೇನು ಹತ್ತು ಹದಿನೈದು ದಿನಗಳಲ್ಲಿ ಕೊಯ್ಲು ಮಾಡಬೇಕಿದ್ದ ಮಾವು ಬೆಳೆ…
ನ್ಯೂಜ್ ಡೆಸ್ಕ್: ದೇಶಾದ್ಯಂತ ₹2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. 2023 ಸೆಪ್ಟೆಂಬರ್ 30 ರೊಳಗೆ ಅವುಗಳನ್ನು ವಿನಿಮಯ ಮಾಡಿಕೊಳ್ಳುವಂತೆ ಎಲ್ಲರಿಗೂ ತಿಳಿಸಿದೆ. ದೇಶದ ಜನರು ಮತ್ತೇ ನೋಟ್ ಬ್ಯಾನ್ ಆಯ್ತಾ ಅಂತ ತಲೆಕಡಿಸಿಕೊಂಡಿದ್ದಾರೆ.₹2000 ನೋಟು ಹಿಂಪಡೆಯುವ ಕುರಿತಾದ ಜನಸಾಮಾನ್ಯರು ತಮ್ಮ ಬಳಿ ಇರುವಂತ ರೂ.₹2000 ನೋಟುಗಳನ್ನು ಏನು ಮಾಡಬೇಕು..? ಹೇಗೆ ಬದಲಾಯಿಸಿಕೊಳ್ಳಬೇಕು,ಎಷ್ಟು ನೋಟು ಬದಲಾಯಿಸಕೊಳ್ಳಬಹುದು, ಎಷ್ಟು ಠೇವಣಿ ಇಡಬಹುದು ಹೀಗೆ ₹2000 ನೋಟಿನ ಸುತ್ತ ಹತ್ತು ಹಲವು ರೀತಿಯ ಆತಂಕದ ಪ್ರಶ್ನೆಗಳು ಜನರನ್ನು ಕಾಡುತ್ತಿದೆ ಇವೆಲ್ಲ ಸಂದೇಹಗಳಿಗೆ ಉತ್ತರ ಇಲ್ಲಿದೆ.ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ₹2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ನಿರ್ಧರಿಸಿದ ಬೆನ್ನಲ್ಲೆ ಎಲ್ಲರೂ ನೋಟ್ ಬ್ಯಾನ್ ಅಂತ ತಲೆಕಡಿಸಿಕೊಂಡಿದ್ದಾರೆ. ಇದು ನೋಟ್ ಬ್ಯಾನ್ ಅಲ್ಲ ನಿಗದಿತ ಸಮಯದವರೆಗೂ ₹2,000 ರೂ. ನೋಟುಗಳು ಕಾನೂನುಬದ್ಧವಾಗಿ ಮುಂದುವರಿಯುತ್ತವೆ ಅಂತ ಆರ್‌ಬಿಐ ಸ್ಪಷ್ಟಪಡಿಸಿದೆ ಜೊತೆಗೆ ಸೆಪ್ಟೆಂಬರ್ 30ರ ಒಳಗೆ ಎಲ್ಲರೂ ತಮ್ಮ ಬಳಿ ಇರುವಂತ…
ಗ್ಯಾರೆಂಟಿಗಳಿಗೆ ಆದೇಶ ಹೊರಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ ಸಿದ್ದರಾಮಯ್ಯ ಗ್ಯಾರೆಂಟಿಗಳಿಗೆ ಹಣ ಹೊಂದಿಸಲು ಪಂಚ ಸೂತ್ರಗಳಿಗೆ ಸಿದ್ದರಾಮಯ್ಯ ತಯಾರಿ ಎಷ್ಟೇ ಖರ್ಚು ಆದರೂ ಗ್ಯಾರೆಂಟಿಗಳನ್ನು ಜಾರಿ ಮಾಡುತ್ತೇವೆ ಎಂದ ಸಿಎಂ ನ್ಯೂಜ್ ಡೆಸ್ಕ್: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮದಲ್ಲಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಶನಿವಾರ ಪ್ರಮಾಣವಚನ ಸ್ವೀಕರಿಸಿದರು.ಅವರೊಂದಿಗೆ ಎಂಟು ಮಂದಿ ಪ್ರಭಾವಿ ಕಾಂಗ್ರೆಸ್ ಶಾಸಕರು ಸಹ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಪ್ರಥಮ ಎನ್ನುವಂತೆ ಪ್ರಭಾವಿ ಕಾಂಗ್ರೆಸ್ ಶಾಸಕರಾದ ಡಾ.ಪರಮೇಶ್ವರ್, ಕೋಲಾರದ ಮಾಜಿ ಸಂಸದ ಹಾಗು ಕೇಂದ್ರದ ಮಾಚಿವ ಸಚಿವ ಕೆ.ಹೆಚ್.ಮುನಿಯಪ್ಪ,ಲಿಂಗಾಯಿತ ಸಮಾಜದ ಪ್ರಭಾವಿ ಮುಖಂಡ ಎಂ.ಬಿ ಪಾಟೀಲ್ ಸೇರಿದಂತೆ ಒಟ್ಟು ಎಂಟು ಮಂದಿ ಪ್ರಮಾಣ ವಚನ ಸ್ವೀಕಾರಮಾಡಿದರು.ಡಾ.ಪರಮೇಶ್ವರ್ ಅವರು ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಕ್ರೀಶ್ಚಿಯನ್ ಸಮುದಾಯದ ಕೆ.ಜೆ.ಜಾರ್ಜ್ ಮತ್ತು ಲಿಂಗಾಯಿತ ಸಮಾಜದ ಎಂಬಿ ಪಾಟೀಲ್ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಉಳಿದಂತೆ ಸತೀಶ್ ಜಾರಕಿಹೊಳಿ ಬುದ್ದ…
ಶ್ರೀನಿವಾಸಪುರ:ಎಸ್.ಸಿ. ಎಸ್.ಟಿ. ಹಿಂದುಳಿದ ಸಮಾಜಗಳ ಬಡಜನತೆಗೆ ಸರ್ಕಾರಿ ಸೌಲಭ್ಯಗಳನ್ನು ತಲುಪಿಸುವಲ್ಲಿ ವಿಳಂಬ, ವಂಚನೆ ಮಾಡುವುದು ಗಮನಕ್ಕೆ ಬಂದರೆ ಅಂತಹ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತೇನೆ ಎಂದು ಶಾಸಕ ವೆಂಕಟಶಿವಾರೆಡ್ಡಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಅವರು ಹೊಗಳಗೆರೆ ತೋಟಗಾರಿಕೆ ಫಾರಂನಲ್ಲಿ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ಮಾತನಾಡಿ, ಕ್ಷೇತ್ರದಲ್ಲಿ ಕಳೆದ 10 ವರ್ಷಗಳಿಂದ ಎಸ್.ಸಿ.ಎಸ್.ಟಿ, ಹಿಂದುಳಿದ ಅಲ್ಪ ಸಂಖ್ಯಾತರ ಸಮುದಾಯಗಳಿಗೆ ಅನ್ಯಾಯ ಆಗಿದೆ ಅವರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಮುಂದೆ ಇಂತಹ ಕೃತ್ಯಗಳಿಗೆ ಅಧಿಕಾರಿಗಳು ಅವಕಾಶ ಕೊಡದೆ ಸರ್ಕಾರದಿಂದ ಬರುವಂತ ಅನುಧಾನಗಳನ್ನು ಪಕ್ಷಾತೀತವಾಗಿ ಅರ್ಹ ಬಡವರಿಗೆ ಹಂಚಿಕೆ ಮಾಡಬೇಕು, ಇದಕ್ಕೆ ನೀವು ಸಹಕರಿಸಬೇಕು, ವಿಳಂಬ ನಿರ್ಲಕ್ಷ್ಯ ಮಾಡುವುದನ್ನು ನಾನು ಸಹಿಸಲಾರೆ ಎಲ್ಲವನ್ನು ಗಮನಿಸುತ್ತೇನೆ ಎಂದ ಅವರು ನನಗೆ ಅಭಿವೃದ್ದಿಯೇ ಮುಖ್ಯ ಜನ ಕಲ್ಯಾಣವೆ ಮೊದಲ ಆದ್ಯತೆ ಎಂದರು.ಅನೇಕ ವರ್ಷಗಳಿಂದ ಬಡವರು, ಗೋಮಾಳ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದಾರೆ, ಇತ್ತೀಚೆಗೆ ಸಾವಿರಾರು ಎಕರೆ ಜಮೀನಿನ ದಾಖಲೆಗಳು ಅರಣ್ಯ…
ಶ್ರೀನಿವಾಸಪುರ:ಸಾಮಜಿಕ ನ್ಯಾಯದ ಅನುಷ್ಟಾನಕ್ಕಾಗಿ ಕ್ಷೇತ್ರದಲ್ಲಿರುವ ಹಿಂದುಳಿದ ಅಲ್ಪಸಂಖ್ಯಾತ ಹಾಗು ಶೋಷಿತ ಸಮುದಾಯಗಳ ಅಭಿವೃದ್ಧಿಯನ್ನು ಕಳೆದ ಹತ್ತು ವರ್ಷಗಳಿಂದ ನಿರ್ಲಕ್ಷಿಸಲಾಗಿದೆ ಜಮೀನುಗಳ ವಿಚಾರದಲ್ಲಿ ಎಲ್ಲಾ ವರ್ಗದ ಜನರಿಗೂ ಅನ್ಯಾಯವಾಗಿದೆ,ಸೂರು ರಹಿತ ಜನರಿಗೆ ಪ್ರಾಮಾಣಿಕವಾಗಿ ನ್ಯಾಯ ಸಿಕ್ಕಿಲ್ಲ ವಿಶೇಷವಾಗಿ ಪರಿಶಿಷ್ಟ ಜಾತಿ ಜನಾಂಗದ ಬಂಧುಗಳಿಗೆ ಸಿಗಬೇಕಾದ ಸರ್ಕಾರಿ ಸೌಲತ್ತುಗಳು ಸಿಗದೆ ತೀವ್ರವಾದ ಅನ್ಯಾಯವಾಗಿದೆಇವರ ಅಭಿವೃದ್ಧಿಗಾಗಿ ವಿಶೇಷ ಆಸಕ್ತಿ ವಹಿಸಿ ಪ್ರಾಮಾಣಿಕವಾಗಿ ಶ್ರಮಿಸುತ್ತೆನೆ ಇದಕ್ಕೆ ಎಲ್ಲ ವರ್ಗದ ಜನರ ಸಹಕಾರ ಬಯಸುತ್ತೇನೆ ಎಂದು ನೂತನವಾಗಿ ಆಯ್ಕೆಯಾಗಿರುವ ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು. ಅವರು ಬುಧವಾರ ಶ್ರೀನಿವಾಸಪುರದಲ್ಲಿ ರೋಡ್ ಶೋ ನಡೆಸಿ ಸಾರ್ವಜನಿಕರಿಗೆ ಕೃತಙ್ಞತೆ ಸಲ್ಲಿಸಿ ಮಾತನಾಡಿದರು.ಕ್ಷೇತ್ರದಲ್ಲಿ ಬಡಜನರ ಅಭಿವೃದ್ಧಿಗೆ ಮಾಡಬೇಕಾದ ಕೆಲಸಗಳು ಸಾಕಷ್ಟು ಇದೆ ಸರ್ಕಾರದ ಸೌಲತ್ತುಗಳನ್ನು ಪ್ರಾಮಾಣಿಕವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಜರೂರಾಗಿ ಆಗಬೇಕಿದೆ ಅದಕ್ಕೆ ಆದ್ಯತೆ ಕೊಡಬೇಕು ಅಧಿಕಾರಿಗಳ ಸಹಕಾರ ಪಡೆದು ಈ ತಕ್ಷಣದಿಂದಲೆ ಕೆಲಸ ಮಾಡುತ್ತೇನೆ.ಶ್ರೀನಿವಾಸಪುರ ಪಟ್ಟಣದ ರಸ್ತೆಗಳು ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಲ್ಲೂ ಆಗಿರುವಂತ ಅನ್ಯಾಯಗಳನ್ನು ಸರಿಮಾಡಬೇಕಿದೆ ಅಧಿಕಾರಿಗಳ ಬೇಜವಬ್ದಾರಿ ಎಸಗಿರುವ…
ನ್ಯೂಜ್ ಡೆಸ್ಕ್:ಬಿಜೆಪಿ ಸೋತಿದ್ದಕ್ಕೆ ನೂರಾರು ಕಾರಣಗಳು ಸಾಮಾಜಿಕ ಜಾಲತಾಣಗಳಲ್ಲಿ ಪುಂಖಾನು ಪುಂಖವಾಗಿ ಬರೆಯಲಾಗುತ್ತಿದೆ ಅದೆ ಹಳೆಯ ಕಥೆಗಳು ಕಾರಣಗಳು,ಯಡಿಯೂರಪ್ಪನವರನ್ನ ಕೈ ಬಿಟ್ಟದ್ದು,ಲಿಂಗಾಯಿತರನ್ನು ಸೈಡ್ ಲೈನ್ ಮಾಡಿದ್ದು ಹೊಸ ಮುಖಗಳಿಗೆ ಮಣೆ ಹಾಕಿದ್ದು ನಿಷ್ಟಾವಂತರಿಗೆ ನ್ಯಾಯ ಒದಗಿಸದೆ ಇದ್ದದ್ದು ಇತ್ಯಾದಿ ಇತ್ಯಾದಿಗಳು ಆದರೆ ಇದ್ಯಾವುದು ಅಲ್ಲ ಈ ಚುನಾವಣೆಯಲ್ಲಿ ನಡದದ್ದೆ ಬೆರೆ ಇದ್ಯಾವುದು ಮತದಾರನ ಗಮನಕ್ಕೆ ಬರಲೆ ಬಿಜೆಪಿ-ಜೆಡಿಎಸ್ ಯಾವುದನ್ನೂ ಸಿರಿಯಸ್ ಆಗಿ ಪರಿಗಣಿಸಲೆ ಇಲ್ಲ.ಬಿಜೆಪಿ ಪಕ್ಷದ ಮೂಲ ಬ್ರಾಂಡ್ ಆದ ಬ್ರಾಹ್ಮಣ ಮತಗಳು ಅತಿ ಹೆಚ್ಚು ಇದ್ದ ಕಡೆ ಕೂಡ ಬಿಜೆಪಿ ಸೋತಿದೆ ಎಂದರೆ ಅದಕ್ಕೆ ಕಾರಣ ಸ್ಥಳೀಯ ವಿಷಯಗಳಿಗೆ ಮಹತ್ವ ನೀಡದೆ ಎಲ್ಲಕ್ಕೂ ಮೋದಿಯೇ ಮದ್ದು ಎಂದದ್ದುಕಾಂಗ್ರೆಸ್ ಗ್ಯಾರಂಟಿಯನ್ನು ಗಟ್ಟಿಯಾಗಿ ಘೋಷಣೆ ಮಾಡಿತು, ಅದನ್ನ ಯಶಸ್ವಿಯಾಗಿ ಮನೆಮನೆಗೆ ತಲುಪಿಸಿತು. ಅದು ಜನರಿಗೆ ಇನ್ನಿಲ್ಲದಷ್ಟು ಇಷ್ಟವಾಗಿ ಹೋಯ್ತು. ಇದೆಲ್ಲ ಬಿಟ್ಟಿ ಭಾಗ್ಯ ಎಂದು ಕಾಂಗ್ರೆಸ್ ಜರೆದಿದ್ದ ಬಿಜೆಪಿಗೆ ಇದು ಅರ್ಥವಾಗುವುದರಲ್ಲಿ ಸಮಯ ಮೀರಿ ಹೋಗಿತ್ತು.ಬಿಜೆಪಿ ಟಾಪ್ ಲೀಡರ್ ಗಳಿಗೆ ವಿಷಯ ಅರ್ಥವಾಗಿ…
ಶ್ರೀನಿವಾಸಪುರ:ಶ್ರೀನಿವಾಸಪುರದ ಜನತಾದಳದ ಅಭ್ಯರ್ಥಿ ಜಿ.ಕೆ.ವೆಂಕಟಶಿವಾರೆಡ್ಡಿ ಗೆದ್ದು ವಿಜಯ ಪತಾಕೆ ಹಾರಸಿದ್ದಾರೆ ತಮ್ಮ ಸಮೀಪದ ಪ್ರತಿಸ್ಪರ್ದಿ ಹಾಲಿ ಶಾಸಕ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಹ್ಯಾಟ್ರಿಕ್ ಗೆಲವಿಗೆ ಬ್ರೆಕ್ ಹಾಕಿ ಸುಮಾರು ಹತ್ತು ಸಾವಿರ ಮತಗಳ ಅಂತರದಿಂದ ಸೋಲಿಸಿದ್ದಾರೆ.ಕೋಲಾರ ಜಿಲ್ಲೆಯ ವ್ಯಕ್ತಿಗತ ರಾಜಕೀಯಕ್ಕೆ ಹೆಸರಾದ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಇಲ್ಲಿನ ಸಾಂಪ್ರದಾಯಿಕ ಎದುರಾಳಿಗಳಾದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗು ವೆಂಕಟಶಿವಾರೆಡ್ದಿ ಹತ್ತನೆ ಬಾರಿ ಎದುರಾಳಿಗಳಾಗಿ ಸ್ಪರ್ದಿಸಿ ಜಿದ್ದಾ ಜಿದ್ದಿಯಾಗಿ ನಡೆಸಿದ ಹೋರಾಟದಲ್ಲಿ ವೆಂಕಟಶಿವಾರೆಡ್ಡಿ ಭರ್ಜರಿ ಗೆಲವು ಸಾಧಿಸಿದ್ದಾರೆ.ನೀರಿಕ್ಷಿಸಿದಂತೆ ಈ ಕ್ಷೇತ್ರದಲ್ಲಿ ಯಾವುದೆ ಪಕ್ಷದ ಅಭ್ಯರ್ಥಿಗಳು ಸ್ಪರ್ದಿಸಿದ್ದರು ಚುನಾವಣೆ ನಡೆದಿರುವುದು ರಮೇಶ್ ಕುಮಾರ್ ಹಾಗು ವೆಂಕಟಶಿವಾರೆಡ್ದಿ ನಡುವೆ ಇಲ್ಲಿ ಇತರೆ ಪಕ್ಷಗಳ ಅಭ್ಯರ್ಥಿಗಳು ನಗಣ್ಯ.ಅಭ್ಯರ್ಥಿಗಳು ಪಡೆದ ಮತಗಳ ವಿವರ ಹೀಗಿದೆ ಗೆದ್ದ ಜನತಾದಳದ ಅಭ್ಯರ್ಥಿ ಜಿ.ಕೆ.ವೆಂಕಟಶಿವಾರೆಡ್ಡಿ 94496 ಮತಗಳನ್ನು ಪಡೆದರೆ ಸೋತ ಕಾಂಗ್ರೆಸ್ ಅಭ್ಯರ್ಥಿ ಕೆ.ಆರ್.ರಮೇಶ್ ಕುಮಾರ್ 84123 ಮತಗಳನ್ನು ಪಡೆದಿರುತ್ತಾರೆ, ಇಬ್ಬರ ನಡುವಿನ ಗೆಲುವಿನ ಅಂತರ 10373 ಮತಗಳು ಇನ್ನುಳಿದಂತೆ…
ಶ್ರೀನಿವಾಸಪುರ:ಚುನಾವಣೆ ದಿನ ಹಾಗು ಮಾರನೆ ದಿನ ಗುರುವಾರ ಶ್ರೀನಿವಾಸಪುರ ಪಟ್ಟಣದಲ್ಲಿ ಗಲಭೆಗಳಿಗೆ ಕಾರಣವಾಗಿ ವ್ಯಕ್ತಿಯೊರ್ವನಿಗೆ ಇರಿದ ಆರೋಪದಲ್ಲಿ ಶ್ರೀನಿವಾಸಪುರ ಠಾಣೆಯಲ್ಲಿ ಪಟ್ಟಣದ ಇಂದಿರಾನಗರ ಹಾಗು ಹೈದರಾಲಿ ಮೊಹ್ಹಲ್ಲಾದ ನಿವಾಸಿಗಳಾದ ಐವರ ವಿರುದ್ದ ಪ್ರಕರಣ ದಾಖಲಾಗಿದ್ದು ಇದರಲ್ಲಿ ಆರೀಫ್ ಹಾಗು ನಾಸೀರ್ ಎನ್ನುವ ಇಬ್ಬರನ್ನು ಶ್ರೀನಿವಾಸಪುರ ಪೋಲಿಸರು ಬಂಧಿಸಿ ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆಈ ಸಂಬಂದ ಪೋಲಿಸರು ಫುಲ್ ಹೈ ಆಲರ್ಟ್ ಆಗಿದ್ದು ಚಿಂತಾಮಣಿ ವೃತ್ತ, ಮೊಹ್ಹಲ್ಲಾಗಳಲ್ಲಿ ಜನ ಜಾಗೃತಿ ಸಭೆ ನಡೆಸಿರುವ ಪೋಲಿಸರು ಚುನಾವಣೆ ಫಲಿತಾಂಶ ಹೊರ ಬಿದ್ದ ನಂತರ ರಾಜಕೀಯ ಪಕ್ಷಗಳ ಕಾರ್ಯಕರ್ತರು ಯಾವುದೆ ಕಾರಣಕ್ಕೂ ಪಟಾಕಿ ಹೊಡೆಯುವುದು ವಿಜಯೋತ್ಸವ ಮೆರೆವಣಿಗೆ ಮಾಡುವುದನ್ನು ನಿಷೇಧಿಸಲಾಗಿದ್ದು ಇಂತಹ ಕಾರ್ಯಗಳಲ್ಲಿ ಯಾರು ತೊಡಗಿಸಿಕೊಳ್ಳಬಾರದು ಎಂದು ಸೂಚನೆ ನೀಡಿರುತ್ತಾರೆ.ರಾಜ್ಯ ಸಶಸ್ತ್ರ ಮೀಸಲು ಪಡೆ ಬಂದೋಬಸ್ತ್ ಅನ್ನು ನಿಯೋಜಿಸಿ ಬಿಗಿ ಬದ್ರತೆ ಮುಂದುವರೆಸಿದ್ದಾರೆ.ಸಮುದಾಯದ ಮುಖಂಡರ ಜೊತೆಗೆ ಶಾಂತಿ ಸಭೆ ನಡೆಸಿ ಮಾತನಾಡಿದ ಪೋಲಿಸ್ ಇನ್ಸಪೇಕ್ಟರ್ ನಾರಯಣಸ್ವಾಮಿ ಯಾರು ಪ್ರೇರೆಪಿತ ಮಾತುಗಳಿಗೆ ಮರುಳಾಗಬಾರದು ಯಾವುದೆ ಕಾರಣಕ್ಕೂ ಕಾನೂನು ಕೈಗೆ…