ಶ್ರೀನಿವಾಸಪುರ:ಚುನಾವಣೆ ನಿನ್ನೆ ನಡೆದಿದ್ದು ಚುನಾವಣೆ ನಡೆಯುವ ಸಂದರ್ಬದಲ್ಲಿ ಹೈದರಾಲಿ ಮೊಹಲ್ಲಾದ ಉರ್ದು ಶಾಲೆ ಮತಗಟ್ಟೆ 147 ಬಳಿ ಎರಡು ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಕೈ ಕೈ ಮೀಲಾಯಿಸಿದ್ದು ಕಾಂಗ್ರೆಸ್ ಪುರಸಭೆ ಸದಸ್ಯ ಎ.ಟಿ.ಎಸ್. ತಜಮಲ್ ಹಾಗು ಜೆ.ಡಿ.ಎಸ್. ಮುಖಂಡ ಸಾಧಿಕ್ ನಡುವೆ ತೀವ್ರ ಹೊಡೆದಾಟಗಳಾಗಿತ್ತು ಈ ಸಮಯದಲ್ಲಿ ಪೋಲಿಸರು ಲಾಠಿ ಚಾರ್ಜ್ ಮಾಡಿ ಕಾರ್ಯಕರ್ತರನ್ನು ಚದುರಿಸಿದ್ದರು ಆದರೆ ನಿನ್ನೆಯ ಗಲಾಟೆ ಇಂದು ಸಹ ಮುಂದುವರೆದಿದ್ದು ಇಂದು ಗುರುವಾರ ಸಂಜೆ ಉರ್ದು ಸ್ಕೂಲ್ ಬಳಿ ಕುಳತಿದ್ದ ಎ.ಟಿ.ಎಸ್. ತಜಮಲ್ ಅವರನ್ನು ಸಾಧಿಕ್ ಕಡೆಯವರು ಎನ್ನಲಾದ ಯುವಕರು ಹಲ್ಲೆ ನಡೆಸಿ ಚಾಕುವಿನಿಂದ ಇರಿದಿದ್ದಾರೆ ಎಂದು ಆರೋಪಿಸಲಾಗಿದೆ,ಹಲ್ಲೆಗೊಳಗಾದ ವ್ಯಕ್ತಿಯನ್ನು ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿಸ್ಥೆಗಾಗಿ ಕೋಲಾರಕ್ಕೆ ಸಾಗಿಸಲಾಗಿದೆ.ಪಟ್ಟಣದ ಚಿಂತಾಮಣಿ ವೃತ್ತ ಸುತ್ತ ಮುತ್ತ ತ್ವೇಷಮಯ ವಾತಾವರಣ ನಿರ್ಮಾಣವಾಗಿ ಜನ ಅತಂಕ ಗೊಂಡಿದ್ದಾರೆ.ಮುನ್ನೆಚರಿಕೆ ಕ್ರಮವಾಗಿ ಸ್ಥಳದಲ್ಲಿ ರಾಜ್ಯ ಸಶಸ್ತ್ರ ಮೀಸಲು ಪಡೆ ಪೋಲಿಸರನ್ನು ನಿಯೋಜಿಸಿ ಬಿಗಿ ಬದ್ರತೆ ಎರ್ಪಡಿಸಿದೆ,ಘಟನಾ ಸ್ಥಳಕ್ಕೆ ಕೋಲಾರ…
Author: Srinivas_Murthy
ಶ್ರೀನಿವಾಸಪುರ:ಮತದಾನ ಮುಗಿದಂತೆ ಎಕ್ಸಿಟ್ ಪೋಲ್‌ಗಳ ಸಮೀಕ್ಷೆಗಳು ಹೊರಬಿದ್ದಿವೆ.ಚುನಾವಣೆ ಫಲಿತಾಂಶಕ್ಕೆ ಇನ್ನೊಂದೇರಡು ದಿನ ಸಮಯ ಇದೆ, ಈಗೇನಿದ್ದರು ಅಭ್ಯರ್ಥಿ ಗೆಲ್ಲುವ ಬಗ್ಗೆ ಬೆಟ್ಟಿಂಗ್ ಮಾತು ಹೈವೋಲ್ಟೇಜ್ ಕ್ಷೇತ್ರಗಳಾದ ಶ್ರೀನಿವಾಸಪುರ,ಚಿಂತಾಮಣಿ,ಕೋಲಾರದ ಚುನಾವಣೆಗೆ ಬಾಜಿ ಕಟ್ಟುವವರ ಸಂಖ್ಯೆ ಹೆಚ್ಚಾಗಿದೆ.ಐಪಿಎಲ್ ಬೆಟ್ಟಿಂಗ್ ಮೀರಿಸುವ ರೀತಿ ಲಕ್ಷ ಲಕ್ಷಗಳಲ್ಲಿ ಯಾವ ಪಕ್ಷ ಗೆಲ್ಲುತ್ತೆ ಎಂಬ ಬಗ್ಗೆ ಬೆಟ್ಟಿಂಗ್ ಕಟ್ಟಲಾಗುತ್ತಿದೆ.ವಿಶೇಷವಾಗಿ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಕುಮಾರ್(ಸ್ವಾಮಿ) ಹಾಗೂ ಜೆಡಿಎಸ್ ಅಭ್ಯರ್ಥಿ ವೆಂಕಟಶಿವಾರೆಡ್ಡಿ(ರೆಡ್ಡಿ) ಪರವಾಗಿ ಬೆಟ್ಟಿಂಗ್ ಹೆಚ್ಚಾಗಿ ನಡೆಯುತ್ತಿದೆ.ಕಳೆದ ಇಪ್ಪತ್ತು-ಇಪ್ಪತೈದು ದಿನಗಳಿಂದ ಸ್ನೇಹತ್ವ ಬಂಧುತ್ವ ಬದಿಗಿಟ್ಟು ಆಜನ್ಮ ವೈರಿಗಳಂತೆ ಚುನಾವಣೆ ನಡೆಸಿದಂತ ರಾಜಕೀಯ ಪಕ್ಷಗಳ ಕಾರ್ಯಕರ್ತರು ಈಗ ಒಂದಾಗಿದ್ದಾರೆ,ಸಿಗರೇಟಿನ ಧಮ್ ಏಳೆಯುತ್ತ ಕಾಫಿ ಕುಡಿಯುತ್ತ ಅದು ಹಾಗಲ್ಲ ನಿಮ್ಮದು ವರ್ಕೌಟ್ ಆಗಿಲ್ಲ ನೀವು ಫೈಲೂರು ಆದ ಜಾಗದಲ್ಲಿ ನಾವು ವರ್ಕೌಟ್ ಮಾಡಿ ಮತ ಗಳಿಸಿದ್ದೀವಿ ಆ ಬೂತ್ ನಲ್ಲಿ ನಮ್ಮ ಅಭ್ಯರ್ಥಿ ಗೆಲ್ತಾರೆ ಇಲ್ಲ ನೊ ಚಾನ್ಸ್ ನಮ್ಮವರೆ ಗೆಲ್ತಾರೆ ಎಂದು ಚಾಲೆಂಜಿಂಗ್ ಮಾತುಗಳು ಆಡುತ್ತಿದ್ದಾರೆ, ಹಾಗದ್ರೆ…
ಶ್ರೀನಿವಾಸಪುರ:ಚುನಾವಣಾ ಫಲಿತಾಂಶಕ್ಕೂ ಮುನ್ನವೆ ಕಾಂಗ್ರೇಸ್ – ಜೆಡಿಎಸ್ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡುವ ಸಂದರ್ಬದಲ್ಲಿ ಮಾತಿನ ಚಕಮಕಿ ನಡೆದು ಕೈ ಕೈ ಮೀಲಾಯಿಸಿಕೊಂಡು ಘರ್ಷಣೆಗೆ ಮುಂದಾದ ಹಿನ್ನಲೆಯಲ್ಲಿ ಪೋಲಿಸರು ಲಾಠಿಚಾರ್ಜ್ ಮಾಡಿ ರಾಜಕೀಯ ಕಾರ್ಯಕರ್ತರನ್ನು ಚದುರಿಸಿರುವ ಘಟನೆ ಇಂದು ಪಟ್ಟಣದಲ್ಲಿ ಎರಡು ಬಾರಿ ನಡೆದಿದೆ.ಶ್ರೀನಿವಾಸಪುರ ಪಟ್ಟಣದ ಹೈದರಾಲಿ ಮೊಹಲ್ಲಾ ಉರ್ದು ಶಾಲೆಯ ಮತಗಟ್ಟೆ ಸಂಖ್ಯೆ 147 ಬಳಿ ಸಂಜೆ ಮತದಾನ ಸಮಯ ಮುಗಿಯುವುದಕ್ಕೂ ಮುಂಚಿತವಾಗಿ ಎರಡು ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಗಲಾಟೆ ನಡೆಯಿತು ಪೋಲಿಸರು ಲಾಠಿ ಬೀಸಿ ಕಾರ್ಯಕರ್ತರನ್ನು ಚದುರಿದ್ದರು ಈ ಸಂದರ್ಭದಲ್ಲಿ ಪುರಸಭೆ ಸದಸ್ಯರೊಬ್ಬರ ಮೇಲೆ ವಿರೋಧಿ ಕಾರ್ಯಕರ್ತರು ತೀವ್ರವಾಗಿ ಹಲ್ಲೆ ನಡೆಸಿದ್ದು ಇದರ ಬೀಸಿ ಆರುವ ಮುನ್ನವೆ ಮತದಾನ ಸಮಯ ಮುಗಿಯುತ್ತಿದ್ದಂತೆ ಮತಗಟ್ಟೆ ಸಮೀಪವೆ ಯಾರಿಗೆ ಯಾರು ಕಡಿಮೆ ಇಲ್ಲದಂತೆ ಜೆಡಿಎಸ್ ಮತ್ತು ಕಾಂಗ್ರೇಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ತಮ್ಮ ರಾಜಕೀಯ ನಾಯಕರ ಪರವಾಗಿ ಪೈಪೊಟಿಗೆ ಬಿದ್ದು ನಿನಾದಗಳನ್ನು ಕೂಗುತ್ತ ರಸ್ತೆಯಲ್ಲಿ ಸಂಭ್ರಮಾಚರಣೆ ಮಾಡುತ್ತ…
ಶ್ರೀನಿವಾಸಪುರ:ಶ್ರೀನಿವಾಸಪುರ ಜೆಡಿಎಸ್ ಅಭ್ಯರ್ಥಿ ಮಾಜಿ ಶಾಸಕ ವೆಂಕಟಶಿವಾರೆಡ್ಡಿ ತಮ್ಮ ಸ್ವಗ್ರಾಮ ಶ್ರೀನಿವಾಸಪುರ ತಾಲ್ಲೂಕಿನ ಗುಡಿಸವಾರಿಪಲ್ಲಿ ಗ್ರಾಮದಲ್ಲಿ ಮತ ಚಲಾವಣೆ ಮಾಡಿ ಫಸ್ಟ್ ರಿಯಾಕ್ಷನ್ ನೀಡಿದ್ದು ಕ್ಷೇತ್ರದಲ್ಲಿ ಉತ್ತಮ ವಾತವರಣ ಇದೆ ಜನತಾ ಜನಾರ್ದನ ಆಶಿರ್ವಾದ ಮಾಡುತ್ತಾನೆ ಎಂಬ ಭರವಸೆ ಇದೆ ಎಂದ ಅವರು ಕೋಲಾರ ಜಿಲ್ಲೆಯಲ್ಲಿ ನಾಲ್ಕು ಸ್ಥಾನಗಳು ಜೆಡಿಎಸ್ ಅಭ್ಯರ್ಥಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಶ್ರೀನಿವಾಸಪುರ:ತಾಲೂಕಿನ ಪಾತಮುತ್ತಕಪಲ್ಲಿ ಮತಗಟ್ಟೆ ಸಂಖ್ಯೆ 163 ರಲ್ಲಿ ಹಾಗು ತಾಡಿಗೊಳ್ ಗ್ರಾಮದಲ್ಲಿ ಇವಿಎಂ ಮಿಷನ್ ಕಾರ್ಯನಿರ್ವಹಿಸದೆ ಕೈ ಕೊಟ್ಟ ಹಿನ್ನಲೆಯಲ್ಲಿ 10 ಗಂಟೆಗೆ ತಡವಾಗಿ ಮತದಾನ ಪ್ರಾರಂಭವಾಗಿದೆ ಇವಿಎಂ ಮಿಷನ್ ರಿಪೇರಿ ತಂತ್ರಙ್ಞರು ಬರುತ್ತಾರೆ ಎಂದು ಮುಂಜಾನೆ 7 ಗಂಟೆಯಿಂದಲು ಮತಗಟ್ಟೆ ಅಧಿಕಾರಿಗಳು ಚುನಾವಣೆ ಪ್ರಕ್ರಿಯೆ ಪ್ರಾರಂಬಿಸದೆ ಕಾಯುತ್ತಿದ್ದರು.
ಶ್ರೀನಿವಾಸಪುರ: ಮೇ 10 ಬುಧವಾರ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆ ನಡೆಸಲು ಸಿಬ್ಬಂದಿ ವರ್ಗ ಮತಗಟ್ಟೆಗಳತ್ತ ತೆರಳಿದ್ದಾರೆ. ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ 289 ಮತಗಟ್ಟೆಗಳಿದ್ದು ಪ್ರತಿ ಮತಗಟ್ಟೆಯಲ್ಲಿ ಒರ್ವ ಡಿ ಗ್ರೂಪ್ ಸಿಬ್ಬಂದಿ ಸೇರಿದಂತೆ ಐದು ಮಂದಿ ಸಿಬ್ಬಂದಿ ಇರುತ್ತಾರೆ ಪ್ರತಿ ಮತಗಟ್ಟೆಗೂ ಒರ್ವ ಪೋಲಿಸ್ ಸಿಬ್ಬಂದಿ ಇರುತ್ತಾರೆ. 289 ಮತಗಟ್ಟೆಗಳ ಪೈಕಿ ಸುಮಾರು 78 ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಪರಿಗಣಿಸಲಾಗಿದ್ದು ಇದರಲ್ಲಿ ಸುಮಾರು 9 ಮತಗಟ್ಟೆಗಳನ್ನು ಅದರ ಹಿಂದಿನ ಚುನಾವಣೆ ಸಂದರ್ಭಗಳಲ್ಲಿ ನಡೆದಿರುವಂತ ಘಟಾನಾವಳಿಗಳ ಆಧಾರದಲ್ಲಿ ವಿಶೇಷ ಮತಗಟ್ಟೆಗಳು ಎಂದು ಗುರುತಿಸಲಾಗಿದೆ.ಇಂತಹ ಮತಗಟ್ಟೆಯಲ್ಲಿ ಕೇಂದ್ರ ಬದ್ರತಾ ದಳದ ಸಿಬ್ಬಂದಿಗಳನ್ನು ವಿಶೇಷವಾಗಿ ನೇಮಿಸಲಾಗಿರುತ್ತದೆ.ಜನ ಮನ್ನಣೆಗಾಗಿ ವಿಶೇಷ ಮತಗಟ್ಟೆಗಳುಮತದಾರರನ್ನು ಆರ್ಷಿಸಲು ಚುನಾವಣೆ ಆಯೋಗ ನೀಡಿರುವ ಸೂಚನೆಯಂತೆ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಿದೆ ಇದರಲ್ಲಿ ಸಖಿ ಮತಗಟ್ಟೆ ಮಹಿಳಾ ಮತದಾರರನ್ನು ಆಕರ್ಷಿಸಲು ರೂಪಿಸಲಾಗಿದೆ ಪಟ್ಟಣದ ಸರೋಜಿನಿ ರಸ್ತೆ ಹಾಗು ಮೊಹಲ್ಲಾ ಆಸ್ಪತ್ರೆ ಮತಗಟ್ಟೆ ಸೇರಿದಂತೆ ತಾಲೂಕಿನಾದ್ಯಂತ ಐದು ಮತಗಟ್ಟೆಗಳನ್ನು ಸಖಿ ಮತಗಟ್ಟೆ ಎಂದು ಪರಿಗಣಿಸಲಾಗಿದೆ.ಮಾವಿನ ಮಡಿಲು…
ಶ್ರೀನಿವಾಸಪುರ: ಶ್ರೀ ಭೈರವೇಶ್ವರ ಶಾಲೆ ವಿಧಾರ್ಥಿನಿ ಧರಣಿಕ.ಜಿ 622,ಎಸ್.ಎಫ್.ಎಸ್.ಶಾಲೆಯ ಎಸ್.ಚೈತನ್ಯ622, ಹಾಗು ಎಸ್.ಎಫ್.ಎಸ್.ಶಾಲೆಯ ಮತ್ತೊಬ್ಬ ವಿಧಾರ್ಥಿನಿ ಎಂ.ಮಿನುವರ್ಷ್ ಸಹ 622 ಅಂಕ ಗಳಿಸಿ ತಾಲೂಕಿನ ಪ್ರಥಮ ಸ್ಥಾನವನ್ನು ಮೂವರು ವಿಧ್ಯಾರ್ಥಿಗಳು ಹಂಚಿಕೊಂಡಿದ್ದಾರೆ.ಕೋಲಾರ ಜಿಲ್ಲೆ ಎಸ್.ಎಸ್.ಎಲ್.ಸಿ ಫಲಾತಾಂಶದಲ್ಲಿ ಕೋಲಾರ ಜಿಲ್ಲೆ 6 ಸ್ಥಾನ ಪಡೆದಿದ್ದರೆ ಜಿಲ್ಲಾ ಪಟ್ಟದಲ್ಲಿ ಶ್ರೀನಿವಾಸಪುರ ಪ್ರಥಮ ಸ್ಥಾನ ಪಡೆದಿದೆ.ತಾಲೂಕಿನಲ್ಲಿರುವ ಒಟ್ಟು 66 ಶಾಲೆಗಳಿದ್ದು ಇವುಗಳಲ್ಲಿ 26 ಸರ್ಕಾರಿ ಶಾಲೆಗಳು, 5 ವಸತಿ ಶಾಲೆಗಳು,7 ಅನುಧಾನಿತ ಶಾಲೆಗಳು, 28 ಖಾಸಗಿ ಶಾಲೆಗಳು ಇವುಗಳಲ್ಲಿ ಒಟ್ಟು 2583 ವಿಧ್ಯಾರ್ಥಿಗಳು ಪರಿಕ್ಷೆಗೆ ಹಾಜರಾಗಿದ್ದು 2495 ಉತ್ತೀರ್ಣರಾಗಿ ಶೇ96.5 ಫಲಿತಾಂಶ ಸಾಧಿಸಿದ್ದಾರೆ. ತಾಲೂಕು ಪಟ್ಟದ ಫಲಿತಾಂಶದಲ್ಲಿ 38 ಸರ್ಕಾರಿ ಶಾಲೆಗಳ ಪೈಕಿ 11 ಶಾಲೆಗಳ ವಿಧಾರ್ಥಿಗಳು ಹಾಗು 28 ಖಾಸಗಿ ಶಾಲೆಗಳ ಪೈಕಿ 17 ಶಾಲೆಗಳ ವಿಧ್ಯಾರ್ಥಿಗಳು ಶೇ%100 ಫಲಿತಾಂಶ ಸಾಧಿಸಿದ್ದಾರೆ.ಶೇ%೧೦೦ ಫಲಿತಾಂಶ ಸಾಧಿಸಿರುವಂತ 14 ಸರ್ಕಾರಿ ಶಾಲೆಗಳು ಕೂರಿಗೆಪಲ್ಲಿ, ಲಕ್ಷ್ಮೀಪುರ, ಮುತ್ತಕಪಲ್ಲಿ, ರೋಣುರು, ಭ್ಯರಗಾನಹಳ್ಳಿ, ಪಾತಪಲ್ಲಿ,ಆದರ್ಶ ವಿದ್ಯಾಲಯ ಕಲ್ಲೂರು,ಇಮರಕುಂಟೆ,ಮೌಲಾನ ಆಜಾದ್ ಶಾಲೆ, ಹಾಗು…
ಶ್ರೀನಿವಾಸಪುರ:ಕೇಂದ್ರದ ಮಾಜಿ ಸಚಿವೆ ದಿವಂಗತ ಎನ್.ಟಿ.ಆರ್ ಪುತ್ರಿ, ನಟ ಬಾಲಕೃಷ್ಣ ಅವರ ಸಹೋದರಿ ದಗ್ಗುಪಾಟಿಪುರಂದರೇಶ್ವರಿ ಇಂದು ತಾಲೂಕಿನ ಗೌವನಪಲ್ಲಿಯಲ್ಲಿ ಬಿಜೆಪಿ ಪರ ರೋಡ್ ಶೋ ನಡೆಸಿ ಮತಯಾಚಿಸಿದರು.ಕಳೆದ ನಲವತೈದು ವರ್ಷಗಳಿಂದ ತೀರಾ ಹಿಂದುಳಿದ ಪ್ರದೇಶವಾಗಿದೆ ಇದನ್ನು ಹೋಗಾಲಾಡಿಸಲು ಇಲ್ಲಿ ಬದಲಾವಣೆ ಆಗಬೇಕಿದೆ ಈ ಬಾರಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಹೇಳಿದ ಅವರು ನಿಮ್ಮ ಮತ ಬಿಜೆಪಿಗೆ ಹಾಕಿದರೆ ಕರ್ನಾಟಕದ ಅಭಿವೃದ್ಧಿಯೊಂದಿಗೆ ನಿಮ್ಮ ಪ್ರಾಂತ್ಯದ ಅಭಿವೃದ್ಧಿಯಾಗಲಿದೆ ಎಂದ ಅವರು ಇಲ್ಲಿನ ಪ್ರಭಾವಿ ವ್ಯಕ್ತಿಯೊಬ್ಬರು ಸ್ಪೀಕರ್ ಆಗಿದ್ದರು ಅವರ ಪ್ರಭಾವ ಸರ್ಕಾರದ ಮೇಲೆ ಎಷ್ಟಿರುತ್ತದೆ ಎಂದರೆ ಎಲ್ಲರೀಗೂ ತಿಳಿದ ವಿಚಾರವೆ ಆದರೂ ಪ್ರಭಾವಿ ವ್ಯಕ್ತಿ ರಮೇಶ್ ಕುಮಾರ್ ಅಭಿವೃದ್ದಿಗೆ ಮುಂದಾಗಿಲ್ಲ ಎಂದು ದೂರಿದರು.ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದು ಡಬಲ್ ಇಂಜಿನ್ ಸರ್ಕಾರದ ಮೂಲಕ ಕರ್ನಾಟಕ ಅಭಿವೃದ್ದಿ ಕಾಣಬೇಕಿದೆ ಎಂದು ಪುರಂದರೇಶ್ವರಿ ಹೇಳಿದರು.ವಿಧಾನಪರಿಷತ್ ಮುಖ್ಯಸಚೇತಕ ವೈ.ಎ.ನಾರಯಣಸ್ವಾಮಿ ಮಾತನಾಡಿ ಬಿಜೆಪಿಯನ್ನು ಬೆಂಬಲಿಸಿ ಕರ್ನಾಟಕವನ್ನು ಅಭಿವೃದ್ಧಿ ಪತದತ್ತ ಕೊಂಡೋಯ್ಯೊಣ ಎಂದರು.ರೋಡ್ ಶೋ ಕಾರ್ಯಕ್ರಮದಲ್ಲಿ ಅಭ್ಯರ್ಥಿ ಗುಂಜೂರುಶ್ರೀನಿವಾಸರೆಡ್ಡಿ,ತಾಲೂಕು…
ಶ್ರೀನಿವಾಸಪುರ:ಸ್ಥಳೀಯವಾಗಿ ನಮ್ಮನ್ನು ಗುರುತಿಸಿ ಸಮಸ್ಯೆಗಳಿಗೆ ಸ್ಪಂದಿಸುವಂತ ವ್ಯಕ್ತಿಯನ್ನು ಬೆಂಬಲಿಸುವ ಉದ್ದೇಶದಿಂದ ಈ ಚುನಾವಣೆಯಲ್ಲಿ ನಮ್ಮ ತಂಡ ವೆಂಕಟಶಿವಾರೆಡ್ಡಿ ಅವರನ್ನು ಬೆಂಬಲಿಸುತ್ತಿದೆ ಎಂದು ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂಡಳಿ ಸಂಚಾಲಕ ಡಾ.ರಮಾನಂದ್ ಹೇಳಿದರು ಅವರು ತಮ್ಮ ತಂಡದ ಸದಸ್ಯರೊಂದಿಗೆ ವೆಂಕಟಶಿವಾರೆಡ್ಡಿಯವರನ್ನು ಭೇಟಿಯಾಗಿ ಬೆಂಬಲ ಸೂಚಿಸಿ ಮಾತನಾಡಿದರು.ನಮಗೆ ವೈಯುಕ್ತಿಕವಾಗಿ ಯಾವುದೆ ಲಾಭದ ಅಪೇಕ್ಷೆಗಳು ಇಲ್ಲ ನಮ್ಮ ತಂಡ ಸಮಾಜದಲ್ಲಿ ಸಾಂಸೃತಿಕವಾಗಿ ಸೇವೆ ಸಲ್ಲಿಸುತ್ತಿದ್ದು ಇದನ್ನು ಗುರುತಿಸಿರುವ ವೆಂಕಟಶಿವಾರೆಡ್ಡಿಯವರನ್ನು ಬೆಂಬಲಿಸುತ್ತಿದ್ದೆವೆ ಎಂದರು.ಈ ಸಂದರ್ಭದಲ್ಲಿ ಮುಖಂಡರಾದ ಗಾಯಿತ್ರಿ ಮುತ್ತಪ್ಪ,ಅನ್ನಪೂರ್ಣೇಶ್ವರಿ ಭಜನಾ ಮಂಡಳಿಯ ಗಿತಾರಾಜ್, ಚಂದ್ರಕಲಾ,ಇಂದ್ರಪ್ರಕಾಶ್ ಮುಂತಾದವರು ಇದ್ದರು.
ಶ್ರೀನಿವಾಸಪುರ: ವಿಧಾನಸಭೆ ಚುನಾವಣೆ ಕಾವು ದಿನೆ ದಿನೆ ಏರುತ್ತಿದ್ದು ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪಟ್ಟಣದ ಮಾರುತಿ ನಗರದಲ್ಲಿ ಮನೆ ಮನೆ ಪ್ರಚಾರ ಕೈಗೊಂಡಿದ್ದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ಪಟ್ಟಣದ ಅಭಿವೃದ್ಧಿಗೆ ನನ್ನದೆ ಆದಂತ ಕನಸಿದೆ ಅದರ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಮತ್ತೊಂದು ಅವಕಾಶ ಕಲ್ಪಿಸುವಂತೆ ಹೇಳಿದರು.ಅವರು ಮಾರುತಿ ನಗರ ಪ್ರವೇಶ ಮಾಡುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು ಪುರಸಭೆ ಮಾಜಿ ಅಧ್ಯಕ್ಷರಾದ ಸೂರ್ಯನಾರಯಣ,ಪ್ರಕಾಶ್, ಮಾಜಿ ಉಪಾಧ್ಯಕ್ಷ ಸತ್ಯನಾರಯಣ,ಮಾಜಿ ಸದಸ್ಯ ಕೆ.ವಿ.ಮಂಜುನಾಥ್, ಹಾಲಿ ಸದಸ್ಯರಾದ ನಾಗೇಶ್,ಸಂಜಯ್ ಸಿಂಗ್, ಮುನಿರಾಜು.ಮುಖಂಡರಾದ ವೆಂಕಟೇಶ್ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಮುಂತಾದವರು ಇದ್ದರು.