ಶ್ರೀನಿವಾಸಪುರ:ಕರೋನಾ ಸಂಕಷ್ಟದಲ್ಲಿ ಜನತೆ ನರಳುತ್ತಿದ್ದರೆ ಕೇಂದ್ರ ಸರ್ಕಾರ ಜನರಿಗೆ ಮೊಂಬತ್ತಿ ಬೆಳಗಿಸಿ ದೀಪ ಹಚ್ಚಿಡಿ ಎಂದು ಯಾಮಾರಿಸಿದರು ಎಂದು ಮೋದಿ ಸರ್ಕಾರದ ವಿರುದ್ದ ಶಾಸಕ ರಮೇಶ್ ಕುಮಾರ್ ತೀವ್ರ ವಾಗ್ದಾಳಿ ನಡೆಸಿದರು ಅವರು ವಿವಿಧ ಮುಖಂಡರು ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ ಕರೋನಾ ಸಂದರ್ಭದಲ್ಲಿ ಪೋಷಕರನ್ನು ಕಳೆದುಕೊಂಡು ಎಷ್ಟೊ ಮಕ್ಕಳು ಅನಾಥರಾಗಿದ್ದಾರೆ ಮಕ್ಕಳನ್ನು ಕಳೆದುಕೊಂಡ ಎಷ್ಟೊ ಪೋಷಕರು ಬೀದಿಪಾಲಾಗಿದ್ದರೆ ಚಾಮರಾಜನಗದ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಮರ್ಪಕವಾಗಿ ಸರಬರಾಜು ಮಾಡಲಾಗದ ಬಿಜೆಪಿ ಸರ್ಕಾರದ ಹೊಣಗೇಡಿತನದಿಂದ ಮೂವತ್ತಕ್ಕು ಹೆಚ್ಚು ವಗಳು ಪ್ರಾಣಬಿಟ್ಟಿದೆ ಎಂದು ತೀವ್ರ ಧಾಟಿಯಲ್ಲಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಆರೋಪಿಸಿದ ಅವರು ಅದ್ಯಾರೋ ಆರೋಗ್ಯ ಮಂತ್ರಿಯಂತೆ ನನ್ನನ್ನು ಸೋಲಿಸಲು ನೂರು ಬಾರಿ ಶ್ರೀನಿವಾಸಪುರಕ್ಕೆ ಬರ್ತಾನಂತೆ ಈಗ ಒಂದು ಬಾರಿ ಬರಲಿ ನೋಡೋಣ ಎಂದ ಅವರು ಸ್ವಾರ್ಥ ರಾಜಕೀಯಕ್ಕೆ ಚುನಾವಣೆಗೋಸ್ಕರ ಜನರನ್ನು ರೊಚ್ಚಿಗೇಬ್ಬಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.ರಾಮನ ಹೇಸರಿನಲ್ಲಿ ರಾಜಕೀಯ ಮಾಡುವಂತ ಬಿಜೆಪಿಗರೆ ನಿಮ್ಮ ರಾಮ ಯಾರು ತೋಟರಾಮುಡ,ದೊಂಗರಾಮುಡ,ಅಗ್ಗಿರಾಮುಡ ಆಯೋದ್ಯರಾಮನ ಯಾರು…
Author: Srinivas_Murthy
ಬೆಂಗಳೂರು: ಬಹು ನಿರೀಕ್ಷಿತ ನಮ್ಮ ಮೆಟ್ರೋ ನೆಟ್‌ವರ್ಕ್ ಅನ್ನು ಬೆಂಗಳೂರಿನ ಪ್ರತಿಷ್ಠಿತ ಐಟಿ ಕಾರಿಡಾರ್ ವೈಟ್‌ಫೀಲ್ಡ್ ವರಿಗೂ ವಿಸ್ತರಿಸಿರುವ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಉದ್ಘಾಟಿಸಿದರು.ಪ್ರಧಾನಿ ನರೇಂದ್ರ ಮೋದಿ ವೈಟ್‌ಫೀಲ್ಡ್- ಕೆಆರ್ ಪುರಂ ಮೆಟ್ರೋ ಮಾರ್ಗವನ್ನು ಉದ್ಘಾಟನೆ ಮಾಡಿದ್ದಾರೆ. ಸುಮಾರು 13.71 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ಇದಾಗಿದ್ದು ಇದರಿಂದ ಐಟಿಬಿಟಿ ನೌಕರರಿಗೆ ಹೆಚ್ಚಿನ ಖುಷಿಯಾಗಿದೆ.ಮೆಟ್ರೋ ಉದ್ಘಾಟನೆ ಬಳಿಕ ನರೇಂದ್ರ ಮೋದಿಯವರು ಅದೇ ಮೆಟ್ರೋದಲ್ಲಿ ಪ್ರಯಾಣಿಸಿದರು. ಮೋದಿ ಜೊತೆ ರಾಜ್ಯಪಾಲ ಗೆಹ್ಲೋಟ್, ಸಿಎಂ ಬೊಮ್ಮಾಯಿ ಸಂಸದ ಪಿ.ಸಿ.ಮೋಹನ್ ಸಹ ಪ್ರಯಾಣಿಸಿದರು.ಪ್ರಯಾಣ ಸಂದರ್ಭದಲ್ಲಿ ಮೋದಿಯವರು ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದರು.ಮೆಟ್ರೋದಲ್ಲಿ ಸಂಚಾರ ನಡೆಸಿದ ಮೋದಿ ಅವರು ಮೆಟ್ರೋ ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿದರು. 13.71 ಕಿಲೋ ಮೀಟರ್ ಉದ್ದದ ನೇರಳೆ ಬಣ್ಣದ ಈ ಮಾರ್ಗದಲ್ಲಿ ಒಟ್ಟು 12 ಸ್ಟೇಷನ್‌ಗಳು ಬರಲಿವೆ. ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದರಿಂದ ಕೆ.ಆರ್.ಪುರ, ವೈಟ್ ಫೀಲ್ಡ್ ಭಾಗದಲ್ಲಿ ಆಗ್ತಿದ್ದ ಸಂಚಾರ ದಟ್ಟಣೆ ಸ್ವಲ್ಪಮಟ್ಟಿಗೆ ನಿವಾರಣೆಯಾಗಲಿದೆ . ವೈಟ್ಫೀಲ್ಡ್ನಲ್ಲಿ…
ಶ್ರೀನಿವಾಸಪುರ: ಕೆರೆಗಳಿಗೆ ನೀರು ತುಂಬಲು ರೂಪಿಸಿರುವ ಕೆ.ಸಿ.ವ್ಯಾಲಿ ಯೋಜನೆಯ ಪೈಪ್ ಲೈನ್ ಕಾಮಗಾರಿ ಶ್ರೀನಿವಾಸಪುರ ಪಟ್ಟಣದಲ್ಲಿ ಕಳೆದ ಎರಡು ತಿಂಗಳಿನಿಂದ ನಡೆಯುತ್ತಿದ್ದು ಈ ಸಂಬಂದ ಹಳೆಯ ಕೆ.ಎಸ್.ಅರ್.ಟಿ.ಸಿ ಬಸ್ ನಿಲ್ದಾಣದಿಂದ ತಾಲೂಕು ಕಛೆರಿ ಮುಂಬಾಗದ ರಸ್ತೆಯಲ್ಲಿ ಹಾದು ಹೋಗುವಂತೆ ಕಾಮಗಾರಿ ಅರಂಭವಾಗಿದ್ದು ಹಿಂದಿನ ದಿನ ರಾತ್ರಿ ರಸ್ತೆ ಅಗೆದು ಮಣ್ಣು ಎತ್ತಿ ಪೈಪ್ ಲೈನ್ ಅಳವಡಿಸಿ ಮಣ್ಣು ಸಹ ತುಂಬಿದ್ದಾರೆ, ಕಾಮಗಾರಿ ಮುಗಿದು ಗ್ಯಾಪ್ ನೀಡದೆ ಅದೇ ರಸ್ತೆಯಲ್ಲಿ ಎಂದಿನಂತೆ ವಾಹನ ಸಂಚರಿಸಲು ಅನವು ಮಾಡಿಕೊಟ್ಟ ಹಿನ್ನಲೆಯಲ್ಲಿ ಇಂದು ಮಧ್ಯಾನಃ ಇಟ್ಟಿಗೆ ಲೊಡ್ ಹೊತ್ತು ಬಂದ ಬಾರಿಗಾತ್ರದ ಲಾರಿ ಇಂದಿರಾ ಕ್ಯಾಂಟಿನ್ ಮುಂಬಾಗದಲ್ಲಿ ಕಚ್ಚಾ ಮಣ್ಣಲ್ಲಿ ಕುಸದಿದೆ ಲಾರಿಯ ಹಿಂದಿನ ಚಕ್ರಗಳು ಮಣ್ಣಲ್ಲಿ ಹೂತು ಹೋಗಿ ಇಟ್ಟಿಗೆ ಲೋಡ್ ಸಮೇತ ಲಾರಿ ಅರ್ದ ಭಾಗ ಪಕ್ಕದ ರಸ್ತೆ ವಿಭಜಕದ ಮೇಲೆ ಉರಳಿದೆ ಇದರಿಂದ ಹಿಂದೆ ಬರುತ್ತಿದ್ದ ವಾಹನಗಳು ಸರಣಿ ಅಪಘಾತಕ್ಕೆ ಒಳಗಾಗಿದ್ದು ಯಾವುದೆ ಪ್ರಾಣಪಯ ಆಗಿಲ್ಲ ಆದರೆ ಕಚ್ಚಾ ಮಣ್ಣು ತುಂಬಿದ…
ಶ್ರೀನಿವಾಸಪುರ:ನೂತನ ಸಂವತ್ಸರದ ಯುಗಾದಿ ಹೊಸವರ್ಷದ ಅಂಗವಾಗಿ ಪಟ್ಟಣದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ಸಮೇತ ಊರ ದೇವರುಗಳ ಜನಜಾತ್ರೆ ಉತ್ಸವ ಅದ್ದೂರಿಯಾಗಿ ನಡೆಸಲಾಯಿತು. ಇದರ ಅಂಗವಾಗಿ ಎರಡನೇ ವರ್ಷದ ಹೂವಿನ ಕರಗ ಮಹೋತ್ಸವ ಸಹ ಆಯೋಜಿಸಲಾಗಿತ್ತು. ಪಟ್ಟಣದ ಗ್ರಾಮದೇವತೆ ಶ್ರೀ ಚೌಡೇಶ್ವರಿ,ಶ್ರೀ ಲಕ್ಷ್ಮೀನೃಸಿಂಹ, ಶ್ರೀ ಉಗ್ರ ನೃಸಿಂಹ, ಶ್ರೀ ನಗರೇಶ್ವರ,ಶ್ರೀ ವಾಸವಿ ಕನ್ಯಾಕಾ ಪರಮೇಶ್ವರಿ,ಶ್ರೀ ತಿರುಮಲರಾಯ,ಶ್ರೀ ಗಂಗಮ್ಮ,ಗಟ್ಟಹಳ್ಳಿ ಶ್ರೀ ನಡೀರಮ್ಮ,ಗುಂಡಮನತ್ತ ಶ್ರೀ ಅಷ್ಟಮೂರ್ತಮ್ಮ, ಶ್ರೀ ರೇಣುಕಾಎಲ್ಲಮ್ಮ, ಶ್ರೀಪೀಲೇಕಮ್ಮ,ಶ್ರೀ ಸಪ್ತಮಾತೃಕೇಯರ ದೇವರುಗಳ ಹೂವಿನಿಂದ ಅಲಂಕೃತಗೊಂಡ ವಿವಿಧ ವಿನ್ಯಾಸಗಳ ಆಕರ್ಷಕ ಪಲ್ಲಕ್ಕಿ ರಥಗಳಲ್ಲಿ ದೇವರುಗಳನ್ನು ಕೂರಿಸಿ ಪ್ರಾರಂಬವಾದ ಶೋಭಾ ಯಾತ್ರೆ ಯುಗಾದಿಯ ಸಂಜೆಯಿಂದ ಪಟ್ಟಣದಾದ್ಯಂತ ಸಂಚರಿಸಿ ಮಾರನೆ ದಿನ ಬೆಳಗಿನ ಜಾವದವರಿಗೂ ನಡೆಯಿತು.ಪ್ರತಿ ಮನೆಯಿಂದಲೂ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ದೇವರಿಗೆ ಹೂವು ಕಾಯಿ ಕೊಟ್ಟು ಪೂಜೆ ಮಾಡಿಸಿದರು ಮುತೈದೆಯರು ಚೌಡೇಶ್ವರಿ ದೇವಿಗೆ ಅರಿಷಿಣ, ಕುಂಕುಮ, ಬಳೆ,ಸಿರೆ ಕುಪುಸ ಇಟ್ಟು ಮಡಿಲಕ್ಕಿ ಕಟ್ಟಿ ಆರತಿ ಬೆಳಗಿದರು.ಹತ್ತಾರು ದೇವರ ಪಲ್ಲಕ್ಕಿಗಳು ಜಗಮಗಿಸುವ…
ಶ್ರೀನಿವಾಸಪುರ: ಈ ತಿಂಗಳ ಮೂರನೇ ಶನಿವಾರ ಮಾರ್ಚ್ 18 ರಂದು ನಡೆಯಬೇಕಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ತಾಲೂಕಿನ ಯಲ್ದೂರು ಹೋಬಳಿ ಕೊಳತೂರು ಗ್ರಾಮದಲ್ಲಿ 20 ರಂದು ಸೋಮವಾರ ನಡೆಸಲಾಯಿತು.ತಾಲ್ಲೂಕು ಆಡಳಿತ ತಾಲೂಕು ಕಂದಾಯ ಇಲಾಖೆ ತಾಲ್ಲೂಕು ಪಂಚಾಯತಿ ಸಹಯೋಗದೊಂದಿಗೆ ತಾಲೂಕಿನ ವಿವಿಧ ಇಲಾಖೆಗಳೊಂದಿಗೆ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಮುಂಬರುವ ವಿಧಾನಸಭೆ ಚುನಾವಣಾ ತುರ್ತು ಕೆಲಸಗಳ ನಿಮಿತ್ತ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ವೆಂಕಟರಾಜು ಆದೇಶದ ಮೇರೆಗೆ ಮಾರ್ಚ್ 18 ರಂದು ರದ್ದು ಮಾಡಿ ಸೋಮವಾರ ನಡೆಸಲಾಯಿತು.ಈ ಸಂದರ್ಭದಲ್ಲಿ ಇದೊಂದು ಅಭೂತಪೂರ್ವ ಕಾರ್ಯಕ್ರಮವಾಗಿದ್ದು ಇಂದು ಕೊಳತೂರು ಗ್ರಾಮದಲ್ಲಿ ಕಾರ್ಯಕ್ರಮ ನಡೆಯುತ್ತಿದೆ ಈ ಭಾಗದ ಜನತೆ ಇದರ ಸದುಪಯೋಗ ಪಡಿಸಿಕೊಂಡು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆ ಹರಿಸಿಕೊಳ್ಳಿ ಎಂದು ತಹಶೀಲ್ದಾರ್ ಶೀರಿನ ತಾಜ್ ಹೇಳಿದರು.ತಾಲೂಕು ಪಂಚಾಯಿತಿ ಇವೊ ಕೃಷ್ಣಪ್ಪ ಮಾತನಾಡಿ ಇದೊಂದು ಅಭೂತ ಪೂರ್ವಕಾರ್ಯಕ್ರಮವಾಗಿದ್ದು ಗ್ರಾಮೀಣ ಜನರ ಮನೆಬಾಗಿಲ ಬಳಿಗೆ ಆಡಳಿತ ತಂದಿರುವ ಕಾರ್ಯಕ್ರಮವಾಗಿದೆ ಇದರಿಂದ ಹಲವಾರು ಜನರಿಗೆ ಅನಕೂಲ ಆಗಿದೆ ಎಂದ…
ಶ್ರೀನಿವಾಸಪುರ: ಶ್ರೀನಿವಾಸಪುರ ತಾಲೂಕು ಯಾವುದೆ ರಿತೀಯಲ್ಲಿ ಅಭಿವೃದ್ಧಿ ಮಾಡಿಲ್ಲ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಆರೋಪಿಸಿದರು.ಅವರು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿ ಇಂದ್ರಾಣಿರೆಡ್ದಿ ಪರ ಮತ ಯಾಚನೆ ಹಾಗೂ ದೇಣಿಗೆ ಸಂಗ್ರಹ ಕಾರ್ಯಕ್ರಮ ನಡೆಸಿ ಮಾತನಾಡಿದರು. ಇಲ್ಲಿ ಇಬ್ಬರು ವ್ಯಕ್ತಿಗಳು ತಮ್ಮ ಅನಕೂಲಕ್ಕೆ ತಕ್ಕಂತೆ ರಾಜಕಾರಣ ಮಾಡಿಕೊಂಡು ಬರುತ್ತಿದ್ದಾರೆ ಯುವಕರಿಗೆ ಉದ್ಯೋಗ ಅವಕಾಶ ಕಲ್ಪಿಸುವ ಯಾವುದೆ ವಾತವರಣ ಇಲ್ಲ ಎಂದು ದೂರಿದರು.ಇಲ್ಲಿನ ಪ್ರಭಾವಿ ಶಾಸಕರು ಎರಡು ಬಾರಿ ಸ್ಪೀಕರ್ ಆಗಿದ್ದರು ಮಂತ್ರಿ ಸಹ ಆಗಿದ್ದರು ಮೇಧಾವಿಯಂತೆ ಭಾಷಣ ಮಾಡುವುದರಲ್ಲಿ ಭಾರಿ ಫೇಮಸ್ಸು ಆದರೆ ತಮ್ಮ ಅನಕೂಲಕ್ಕೆ ತಕ್ಕಂತೆ ಆಡಳಿತ ನಡೆಸಿದ್ದಾರೆ ಎಂದರು.ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದಾದ್ಯಂತ ಸರ್ಕಾರಿ ಅಧಿಕಾರಿಗಳು ಲಂಚ ಮತ್ತು ಭ್ರಷ್ಟಾಚಾರ ನಡೆಸುವುದನ್ನು ತಡೆಯುತ್ತೇವೆ ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್ ಕಾಲೇಜು ತಾಲೂಕಿಗೊಂದು ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ, ಪ್ರತಿ ತಾಲೂಕಿನಲ್ಲೂ ಸೋಲಾರ್ ಪಾರ್ಕ್ ಮಾಡಿ ಸ್ಥಳೀಯವಾಗಿ ವಿದ್ಯತ್ ಉತ್ಪಾದನೆ ಮಾಡುತ್ತೇವೆ ಜನ ಸಾಮನ್ಯರು ಬದುಕಲು…
ಶ್ರೀನಿವಾಸಪುರ:ಪುರಸಭೆ ಮುಖ್ಯಾಧಿಕಾರಿಗಳ ವಿರುದ್ಧ ಪುರಸಭೆ ಅಧ್ಯಕ್ಷರು ಮತ್ತು ದಲಿತ ಸಂಘಟನೆಗಳು ಪುರಸಭೆ ಕಛೆರಿ ಮುಂಬಾಗದಲ್ಲಿ ಶಾಮಿಯಾನ ಹಾಕಿ ಅನಿರ್ದಿಷ್ಟಾವಧಿ ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.ಪುರಸಭೆ ಮುಖ್ಯಾಧಿಕಾರಿಗಳು ಅಧ್ಯಕ್ಷೆ ಲಲಿತಾಶ್ರೀನಿವಾಸ್ ಅವರಿಗೆ ಅಧಿಕಾರ ನಡೆಸಲು ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿ ಕಳೆದ ಎರಡು ದಿನಗಳಿಂದ ಆಹೋರಾತ್ರಿ ಧರಣಿ ನಡೆಸಲಾಗುತ್ತಿದ್ದೆ.ಶ್ರೀನಿವಾಸಪುರ ಪಟ್ಟಣದ ವಾರ್ಡುಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇರುವ ಬಗ್ಗೆ ಮಾಹಿತಿ ನೀಡಿದರೂ ಸ್ಪಂದಿಸುತ್ತಿಲ್ಲ ಕಚೇರಿ ಕಾರ್ಯನಿರ್ವಹಣೆ ಕುರಿತಾಗಿ ಯಾವುದೆ ರೀತಿಯಲ್ಲೂ ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ ಸಹಕಾರ ನೀಡುತ್ತಿಲ್ಲ ಎಂದು ಆರೋಪಮಾಡುತ್ತಾರೆ ಅವರ ವಿರುದ್ಧ ಹಲವು ಬಾರಿ ಮೇಲಾಧಿಕಾರಿಗಳಿಗೆ ದೂರು ನೀಡಿದರು ಯಾವುದೆ ಪ್ರಯೋಜನವಿಲ್ಲ,ಎಂದ ಅಧ್ಯಕ್ಷೆ ಲಲಿತಾ ಶ್ರೀನಿವಾಸ್ ಮುಖ್ಯಾಧಿಕಾರಿ ಪುರಸಭೆಯಲ್ಲಿ ಅಕ್ರಮವಾಗಿ ಆಡಳಿತ ನಡೆಸುತ್ತಿದ್ದು ಅವರ ವಿರುದ್ದ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು ಅವರನ್ನು ಈ ಕೂಡಲೆ ಅಮಾನತುಮಾಡುವಂತೆ ಅಗ್ರಹಿಸಿರುತ್ತಾರೆ.ಪುರಸಭೆ ಅಧ್ಯಕ್ಷೆ ಲಲಿತಾ ಶ್ರೀನಿವಾಸ್ ಅವರ ಧರಣಿ ಪ್ರತಿಭಟನೆಯನ್ನು ಬೆಂಬಲಿಸಿ ಪ್ರಗತಿ ಪರ ಹಾಗು ದಲಿತ ಸಂಘಟನೆಗಳು ಬೆಂಬಲ ಸೂಚಿಸಿ ಧರಣಿಯಲ್ಲಿ…
ಶ್ರೀನಿವಾಸಪುರ: ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಅಬ್ಬರಿಸುತ್ತ ಸುರಿಯುತ್ತಿರುವ ಮಳೆಗೆ ತಾಲೂಕಿನ ಜನತೆ ತತ್ತರಿಸಿ ಹೋಗಿದ್ದಾರೆ ವಿಶೇಷವಾಗಿ ರೈತಾಪಿ ಜನರಂತೂ ನಲುಗಿ ಹೋಗಿದ್ದಾರೆ.ತಾಲೂಕಿನ ಯಲ್ದೂರು ಹೋಬಳಿಯ ಮುತ್ತಕಪಲ್ಲಿ ಲಕ್ಷ್ಮೀಸಾಗರ ಭಾಗದಲ್ಲಿ ಸುರಿದ ಆಲಿಕಲ್ಲು ಮಳೆಗೆ ಮಾವುಬೆಳೆ ನಷ್ಟಕ್ಕೆ ಒಳಗಾಗಿದೆ. ಇತರೆ ಭಾಗದಲ್ಲಿ ಮಾವಿನ ಬೆಳೆಗೆ ಯಾವರಿತಿಯಲ್ಲಿ ಮಳೆಯ ಕಾಟ ಇರುತ್ತದೋ ಏನಾಗುತ್ತದೋ ಎಂಬ ಆತಂಕದಲ್ಲಿ ಮಾವುಬೆಳೆಗಾರರು ಇದ್ದಾರೆ, ಅಲಿಕಲ್ಲು ಸಮೇತ ಬಿರುಗಾಳಿ ಮಳೆಗೆ ಟಮ್ಯಾಟೋ ಸೇರಿದಂತೆ ಪಪ್ಪಾಯ,ಕ್ಯಾಪ್ಸಿಕಂ,ಬೀನ್ಸ್, ಆಲೂಗಡ್ಡೆ ಸೇರಿದಂತೆ ವಿವಿಧ ತೋಟಗಾರಿಗೆ ಬೆಳೆಗಳು ನೂರಾರು ಎಕರೆ ಪ್ರದೇಶದಲ್ಲಿ ಸಂಪೂರ್ಣವಾಗಿ ನಲೆಕಚ್ಚಿದೆ.ಎರಡು ದಿನಗಳಿಂದ ಮಿಂಚು-ಗುಡುಗಿನಿಂದ ಕೂಡಿದ ಮಳೆ ಜನರನ್ನು ಭಯಬಿತರಾಗುವಂತೆ ಮಾಡಿದೆ,ಅಬ್ಬರಿಸುತ್ತಿರುವ ಮಳೆಯ ಆರ್ಭಟದೊಂದಿಗೆ ಬಿರುಬಿರಸಾದ ಗಾಳಿ ಹಾಗು ಆಲಿಕಲ್ಲು ಗೌವನಪಲ್ಲಿ ಲಕ್ಷ್ಮೀಪುರ ಭಾಗದಲ್ಲಿ ಭಾನುವಾರ ಬಿದ್ದಂತ ಬಾರಿಗಾತ್ರದ ಆಲಿಕಲ್ಲಿಗೆ ಜನ ತತ್ತರಿಸಿಹೋಗಿದ್ದಾರೆ.ಶನಿವಾರ ಮಧ್ಯಾನಃ ಸಖೆಯಿಂದ ನಲುಕಿದ ಜನ ಮದ್ಯರಾತ್ರಿ ಸುರಿದ ಆರ್ಭಟದ ಮಳೆಗೆ ತತ್ತರಿಸಿ ಹೋದರು, ಅಬ್ಬರಿಸುತ್ತ ಬಾರಿಶಬ್ದದ ಗುಡುಗು,ಕಿಟಕಿ ಗಾಜುಗಳನ್ನು ಬೇದಿಸಿ ಬಂದಂತ ಮಿಂಚಿನ ಪ್ರಖರದ ಬೆಳಕಿಗೆ ಜನ…
ಶ್ರೀನಿವಾಸಪುರ:ಶುಕ್ರವಾರ ಮುಂಜಾನೆ ನಸುಕಿನಲ್ಲಿ ಲಕ್ಷ್ಮೀಪುರ ಬಳಿ ನಡೆದ ರಸ್ತೆ ಅಪಘಾತಕ್ಕೆ ಮದನಪಲ್ಲಿಯ ದಂಪತಿ ಬಲಿಯಾಗಿದ್ದಾರೆ ಮೃತ ದಂಪತಿಯನ್ನು ಆಂಧ್ರಪ್ರದೇಶದ ಮದನಪಲ್ಲಿ ನಗರದ ಕೋಟೆ ಬೀದಿಯ ನಿವಾಸಿಗಳಾಗಿದ್ದ ಶಫಿ (55) ಶಮಾ (50) ಎಂದು ಗುರುತಿಸಲಾಗಿದೆ ವೃತ್ತಿಯಲ್ಲಿ ಸಿವಿಲ್ ಇಂಜನಿಯರ್ ಆಗಿದ್ದ ಶಫಿ ಸಾಫ್ಟ್ ವೇರ್ ಇಂಜನಿಯರ್ ಆಗಿದ್ದ ತಮ್ಮ ಹಿರಿಯ ಪುತ್ರಿಯನ್ನು ದೇವನಹಳ್ಲಿ ಕೇಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಸ್ಟ್ರೇಲಿಯಾ ವಿಮಾನ ಹತ್ತಿಸಿ ನಸುಕಿನ ಜಾವದಲ್ಲಿ ಮದನಪಲ್ಲಿಗೆ ತಮ್ಮ ಸ್ವಂತ ಟಯೋಟ ಇಟಿಯಾಸ್ ಕಾರಿನಲ್ಲಿ ಹಿಂತಿರುಗುತ್ತಿದ್ದಾಗ ಲಕ್ಷ್ಮೀಪುರ ಕ್ರಾಸ್ ಆದ ನಂತರ ಮುಂದಿನ ತಿರುವಿನಲ್ಲಿ 20ರಿಂದ 25 ಅಡಿಗಳ ಹಳ್ಳಕ್ಕೆ ಬಿದ್ದ ಪರಿಣಾಮ ವಾಹನ ಚಲಾಯಿಸುತ್ತಿದ್ದ ಶಫಿ ಮತ್ತು ಅವರ ಪತ್ನಿ ಸ್ಥಳದಲ್ಲಿಯೇ ಸಾವನಪ್ಪಿರುತ್ತಾರೆ.ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕ್ರೇನ್ ಸಹಾಯದೊಂದಿಗೆ ಕಾರು ಮೇಲತ್ತಲಾಗಿ ಮೃತ ದೇಹಗಳನ್ನು ಕಾರಿನಿಂದ ಹೊರತಗೆದು ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ನಡೆಸಿ ಕುಟುಂಬಸ್ಥರ ವಶಕ್ಕೆ ನೀಡಲಾಗಿದೆ.ಮಗನ ಸಾವು ಇಲ್ಲೇ ಆಗಿತ್ತು!ಅಪಘಾತದಲ್ಲಿ ಮೃತ ಪಟ್ಟಿರುವ…
ಶ್ರೀನಿವಾಸಪುರ: ಚುನಾವಣೆ ಪ್ರಕಟನೆಯಾಗುವ ಎಲ್ಲಾ ಸೂಚನೆಗಳು ಕಂಡುಬರುತ್ತಿದೆ ಚುನಾವಣೆ ಘೋಷಣೆಯಾಗುವುದಕ್ಕೂ ಮುಂಚಿತವಾಗಿ ಪಟ್ಟಣ ಸೇರಿದಂತೆ ತಾಲೂಕಿನ ಲಕ್ಷ್ಮೀಸಾಗರ,ಯಲ್ದೂರು,ಮುತ್ತಕಪಲ್ಲಿ,ಸೋಮಯಾಜಲಹಳ್ಳಿ, ಲಕ್ಷ್ಮೀಪುರ,ರಾಯಲ್ಪಾಡು,ಗೌವಪಲ್ಲಿಯ ಬೀದಿಗಳಲ್ಲಿ ಪ್ಯಾರ ಮೀಲಟರಿ ಪಡೆಗಳು(RAF) ರ್‍ಯಾಪಿಡ್ ಆಕ್ಷನ್ ಫೋರ್ಸ್ ತುಕಡಿಗಳ ಪರೇಡ್ ನಡೆಸಿದ್ದು ಸಾಮನ್ಯ ಮತದಾರ ತನ್ನ ಹಕ್ಕನ್ನು ಮುಕ್ತವಾಗಿ ಚಲಾಯಿಸಲು ಧೈರ್ಯ ತುಂಬಿದಂತಿತ್ತು.ಏನಿದು ರ್‍ಯಾಪಿಡ್ ಆಕ್ಷನ್ ಫೋರ್ಸ್ ಎಂಬು ಜನಸಾಮಾನ್ಯರ ಪ್ರಶ್ನೆ, ಅಂದರೆ ಕ್ಷಿಪ್ರ ಕಾರ್ಯಪಡೆ ಗಲಭೆಗಳು ಕೋಮುಘರ್ಷಣೆಗಳು ಸೇರಿದಂತೆ ದೊಡ್ದಮಟ್ಟದ ದೊಂಬಿಯಂತ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ವಿಶೇಷ ತರಬೇತಿ ಹೊಂದಿರುವಂತ ಅರೆಸೇನಾ ಘಟಕ ಇದಾಗಿರುತ್ತದೆ, ಇದರ ಕೇಂದ್ರ ಕಚೇರಿ ಹೊಸದೆಹಲಿಯಲ್ಲಿದ್ದು ಶ್ರೀನಿವಾಸಪುರಕ್ಕೆ ಬಂದಿದ್ದ ತುಕಡಿ ಹೈದರಾಬಾದ್ ನಿಂದ ಬಂದಿರುವುದಾಗಿದೆ ಎಂದು ಹೇಳಲಾಗಿದೆ.2023ರ ವಿಧಾನಸಭಾ ಚುನಾವಣೆಯ ದಿನಾಂಕ ಪ್ರಕಟಣೆಗೆ ದಿನಗಳು ಹತ್ತಿರ ಇರುವುಗಾಲೆ ಶ್ರೀನಿವಾಸಪುರ ಪೋಲಿಸರು ಸಂಪೂರ್ಣವಾಗಿ ಸರ್ವ ರಿತಿಯಲ್ಲಿ ಸಜ್ಜುಗೊಳ್ಳುತ್ತಿದ್ದಾರೆ, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತದಾನ ಕೇಂದ್ರಗಳ ಬಗ್ಗೆ ನೀಘಾ ವಹಿಸುವುದು ಅಂತರಾಜ್ಯ ಚಕ್ ಪೋಸ್ಟ್ ನಿರ್ಮಾಣ ಸಲುವಾಗಿ ರಾಯಲ್ಪಾಡು ವ್ಯಾಪ್ತಿಯಲ್ಲಿ ಕಡಪಾ-ಬೆಂಗಳೂರು ಹೆದ್ದಾರಿ,ಪುಲಗೂರುಕೋಟೆ ಬಳಿ ಚಂಬಕೂರು…