ಶ್ರೀನಿವಾಸಪುರ: ಶ್ರೀನಿವಾಸಪುರದಲ್ಲಿ ರೈತ ಸಂಘ ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಅಡ್ಡಿಪಡಿಸಿದ ಸಂದರ್ಭದಲ್ಲಿ ನಡೆದಂತ ತಳ್ಳಾಟ ನೂಕಾಟ ಸಮಯದಲ್ಲಿ ಆದ ಘಟನೆ ಕುರಿತಾಗಿ ತಹಶೀಲ್ದಾರ್ ಸುಧೀಂದ್ರ ಪ್ರತಿಕ್ರಿಯೆ ನೀಡಿದ್ದು ಕಚೇರಿ ಕೆಲಸದ ವೇಳೆ ಕೆಲವರು ಅರೆಬೆತ್ತಲೆ ಪ್ರತಿಭಟನೆ ಮಾಡುತ್ತ ಕಚೇರಿಗೆ ಬರುವಂತವರಿಗೆ ಅಡ್ಡಿಪಡಿಸುತ್ತ ಸ್ಥಳದಲ್ಲಿ ಅನಗತ್ಯ ಸಮಸ್ಯೆ ಸೃಷ್ಟಿಸುತ್ತಿದ್ದರು ಹಾಗೆ ಪ್ರತಿಭಟನೆ ಈ ಜಾಗ ಸೂಕ್ತ ಅಲ್ಲ ಜೊತೆಗೆ ಪ್ರತಿಭಟನೆ ಮಾಡುವವರು ಯಾವುದೆ ಅನುಮತಿ ಪಡೆದಿಲ್ಲ ಅವರಿಂದ ಇಲ್ಲಿ ಎರಡು ಗುಂಪುಗಳ ನಡುವೆ ತಳ್ಳಾಟ ನೂಕಾಟ ನಡೆಯಿತು ಇದಕ್ಕೆ ಅವಕಾಶ ಮಾಡಿಕೊಟ್ಟಿದ್ದು ಬಗ್ಗೆ ಬೇಸರ ವ್ಯಕ್ತಪಡಿಸಿ ವಿರೋಧಿಸಿದೆ ಇದರಲ್ಲಿ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ಸ್ಪಷ್ಟಿಕರಿಸಿದ್ದಾರೆ. ರೈತರಿಗೊಂದು ನ್ಯಾಯ, ಶ್ರೀಮಂತರಿಗೆ ಒಂದು ನ್ಯಾಯಾನ ಎಂದು ಸಾರ್ವಜನಿಕರು ತಹಸೀಲ್ದಾರ್ ಅವರನ್ನು ಪ್ರಶ್ನಿಸಿದ್ದಾರೆ. ಪ್ರತಿಭಟನೆಗೆ ಕುಳಿತ ರೈತರನ್ನು ಬೆದರಿಸಿರುವ ತಹಶೀಲ್ದಾರ್ ಸುಧೀಂದ್ರ ಪ್ರತಿಭಟನೆ ಸ್ಥಳದಲ್ಲಿ ಸಮಸ್ಯೆಯನ್ನು ಅರಿತು ಕಾನೂನು ಸುವ್ಯವಸ್ಥೆಯನ್ನು ಹತೋಟಿಗೆ ತರಬೇಕಿದ್ದ ತಹಶಿಲ್ದಾರರೇ ಕಾನೂನು ಕೈಗೆ ತೆಗೆದುಕೊಂಡು ರೈತ ಮುಖಂಡರ…
Author: Srinivas_Murthy
ನ್ಯೂಜ್ ಡೆಸ್ಕ್:ಸಾಮಾಜಿಕ ಜಾಲ ತಾಣದ ರೀಲ್ಸ್ ಹುಚ್ಚು ಯಾರನ್ನು ಬಿಟ್ಟಿಲ್ಲ ಈ ಹುಚ್ಚು ಬಹುತೇಕರನ್ನು ಆವರಿಸಿಕೊಂಡು ಬಿಟ್ಟಿದೆ. ಸಮಾಜದಲ್ಲಿ ಫೇಮಸ್ ಆಗಲು ಮಾರ್ಗ ಕಂಡುಕೊಂಡಿರುವ ಯುವ ಸಮುಧಾಯ ರೀಲ್ಸ್ (video) ಹುಚ್ಚಿಗೆ ಬಿದ್ದಿದೆ ಅದು ದೇವಸ್ಥಾನ ಇರಲಿ ಕಾಡಿರಲಿ ನದಿ ದಂಡೆಗಳಿರಲಿ ಜಲಪಾತಗಳಿರಲಿ ಅಪಾಯಕಾರಿ ಘಟ್ಟಗಳಲ್ಲಿ ರೀಲ್ಸ್ ಹುಚ್ಚರ ಸಂಖ್ಯೆ ಹೆಚ್ಚುತ್ತಿದೆ ಇದಕ್ಕೆ ಕಾಂಪಿಟೇಷನ್ ಕೂಡ ಜಾಸ್ತಿಯಾಗುತ್ತಿದೆ.ಅದಕ್ಕಾಗಿಯೇ ಕೆಲವರು ವಿಭಿನ್ನ ರೀತಿಯಲ್ಲಿ ರೀಲ್ಸ್ ಮಾಡುವ ತವಕದಲ್ಲಿ ಇದ್ದು ಈ ಕಾರಣಕ್ಕೆ ಎಷ್ಟೋ ಮಂದಿ ಅಪಾಯಕಾರಿ ಎನ್ನುವ ರೀಲ್ಸ್ ಮಾಡಿ ಜೀವ ಕಳೆದುಕೊಂಡವರಿದ್ದಾರೆ, ಕೈ-ಕಾಲು ಮುರಿದುಕೊಂಡು ನರಳುತ್ತಿರುವರು ಇದ್ದಾರೆ. ಇಂಥವರ ಬಗ್ಗೆ ಪ್ರತಿನಿತ್ಯ ಸುದ್ದಿಯಾಗುತ್ತಲೇ ಇರುತ್ತದೆ. ಭಕ್ತಿಯಿಂದ ತುಂಬಿರಬೇಕಾದ ಈ ಪವಿತ್ರ ಜಾಗವಾದ ತಿರುಮಲ ಬೆಟ್ಟದ ತಪ್ಪಲಿನಲ್ಲಿ ಪುಷ್ಪ 2 ಚಿತ್ರದ ಶ್ರೀಲೀಲಾ ನೃತ್ಯ ಮಾಡಿರುವ ಕಿಸ್ಸಿಕ್ ಐಟಂ ಸಾಂಗಿಗೆ ಹುಡುಗಿಯೊಬ್ಬಳು ಡ್ಯಾನ್ಸ್ ಮಾಡಿರುವ ರೀಲ್ಸ್ ತನ್ನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪೋಸ್ಟ್ ಮಾಡಿದು ಈಗ ವೈರಲ್ ಆಗಿದೆ ನೆಟ್ಟಿಗರು ಈ ಬಗ್ಗೆ ಕಣ್ಣು…
ನ್ಯೂಜ್ ಡೆಸ್ಕ್:ಬದುಕಿನ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡು ಕಷ್ಟಪಟ್ಟು ಓದುತ್ತಿದ್ದ ಇಂಟರ್ ಹುಡುಗಿ ಯುವಕನೊಬ್ಬನ ಪ್ರೇಮವನ್ನು ಒಪ್ಪಿಕೊಳ್ಳಲಿಲ್ಲ ಎಂದು ಯುವಕ ವಿದ್ಯಾರ್ಥಿನಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಪೈಶಾಚಿಕ ಘಟನೆ ಆಂಧ್ರದ ನಂದ್ಯಾಲ ಜಿಲ್ಲೆಯ ನಂದಿಕೋಟ್ಕೂರಿನ ಬೈರೆಡ್ಡಿ ನಗರದಲ್ಲಿ ದುಷ್ಕೃತ್ಯ ನಡೆದಿದೆ.ಪ್ರೇಮ ವ್ಯಸನಿ ಎಸಗಿರುವ ದೌರ್ಜನ್ಯಕ್ಕೆ ಇಂಟರ್ ವಿದ್ಯಾರ್ಥಿನಿ ಲಹರಿ (17)ಸ್ಥಳದಲ್ಲೆ ಸುಟ್ಟು ಹೋಗಿ ಸಾವನ್ನಪ್ಪಿದ್ದಾಳೆ. ನಂತರ ಯುವಕನು ಸಹ ಪೇಟ್ರೊಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದು ಅವನು ತೀವ್ರ ಸುಟ್ಟ ಗಾಯಗಳಿಂದ ಬದುಕುಳಿದಿದ್ದಾನೆ ಆತನ ಪರಿಸ್ಥಿತಿ ಗಂಭೀರವಾಗಿದೆ.ತಂದೆ ಇಲ್ಲದ ನತದೃಷ್ಟೆತಂದೆ ತೀರಿಕೊಂಡ ಬಳಿಕ ಅಜ್ಜಿ ಮನೆಯಲ್ಲಿದ್ದುಕೊಂಡು ವ್ಯಾಸಂಗ ಮಾಡುತ್ತಿದ್ದ ನತದೃಷ್ಟೆ ಲಹರಿಯನ್ನು ಆರೋಪಿ ರಾಘವೇಂದ್ರ ಕೆಲ ದಿನಗಳಿಂದ ಪ್ರೀತಿಸುವಂತೆ ಕಾಡಿಸುತ್ತ ಕಿರುಕುಳ ನೀಡುತ್ತಿದ್ದ ಎಂದು ವರದಿಯಾಗಿದೆ.
ಮಾಜಿ ಸ್ಪೀಕರ್ ರಮೇಶಕುಮಾರ್ ಜಮೀನು ವಿವಾದ ಕಂದಾಯ ಹಾಗು ಅರಣ್ಯ ಇಲಾಖೆ ಜಂಟಿ ಸರ್ವೆಗೆ ಅಗ್ರಹಿಸಿ ರೈತ ಸಂಘದ ಪ್ರತಿಭಟನೆ ಕಾಂಗ್ರೆಸ್ ಕಾರ್ಯಕರ್ತರ ವಿರೋಧ ಇಬ್ಬರ ನಡುವೆ ತಳ್ಳಾಟ ನೂಕಾಟ ಪೋಲಿಸರ ಮದ್ಯಪ್ರವೇಶ. ಶ್ರೀನಿವಾಸಪುರ: ಮಾಜಿ ಸ್ಪೀಕರ್ ರಮೇಶಕುಮಾರ್ ಸೇರಿದಂತೆ ಬಲಾಢ್ಯರು ಸಾವಿರಾರು ಎಕರೆ ಅರಣ್ಯ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಒತ್ತುವರಿ ಮಾಡಿಕೊಂಡಿರುವ ಜಮೀನುಗಳಿಗೆ ಸಂಬಂದಿಸಿದಂತೆ ಜಂಟಿ ಸರ್ವೆ ನಡೆಸಬೇಕು ಎಂದು ಅಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ರೈತ ಮುಖಂಡ ನಾರಾಯಣಗೌಡ ನೇತೃತ್ವದಲ್ಲಿ ರೈತ ಸಂಘದ ಕಾರ್ಯಕರ್ತರು ಇಂದು ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಬಾಗದಲ್ಲಿ ಬೆತ್ತಲೆ ಪ್ರತಿಭಟನೆ ನಡೆಸಲು ಕುಳತಿದ್ದರು ಇದನ್ನು ಕಾಂಗ್ರೆಸ್ ಕಾರ್ಯಕರ್ತರು ಪ್ರತಿರೋಧ ವ್ಯಕ್ತಪಡಿಸಿದ ಸಂದರ್ಭದಲ್ಲಿ ಸ್ಥಳದಲ್ಲಿ ಕೆಲ ಕಾಲ ಬಿಗುವಿನ ವಾತವರಣ ನಿರ್ಮಾಣವಾಗಿದ್ದು ಪೋಲಿಸರು ಮದ್ಯಪ್ರವೇಶಿಸಿ ಎರಡು ಕಡೆ ಕಾರ್ಯಕರ್ತರನ್ನು ಚದುರಿಸಿದರು ಜಂಟಿ ಸರ್ವೆಗೆ ಅಗ್ರಹಿಸಿ ಸಮಯ ನಿಗದಿ ಮಾಡಿದ್ದ ರೈತ ಸಂಘರೈತ ಮುಖಂಡ ನಾರಯಣಗೌಡ ಹೇಳುವಂತೆ…
ಶ್ರೀನಿವಾಸಪುರ:ತಾಲ್ಲೂಕಿನ ದಲಿತ ಸಂಘಟನೆ ಮುಖಂಡ ರೋಜರಪಲ್ಲಿ ಡಾ.ವೆಂಕಟರವಣಪ್ಪ(56) ನಿಧನರಾಗಿದ್ದಾರೆ.ವಿದ್ಯಾರ್ಥಿ ದಶೆಯಿಂದಲೆ ದಲಿತ ಚಳುವಳಿ ನೇತರನಾಗಿ ಚಿಂತಕರಾಗಿ ಹೋರಾಟಗಳ ಮುಂಚೂಣಿಯಲ್ಲಿರುತ್ತಿದ್ದ ವೆಂಕಟರವಣಪ್ಪ ಅನಾರೋಗ್ಯದಿಂದ ನಿಧನರಾಗಿದ್ದಾರೆ.ಹಸನ್ಮೂಖಿಯಾಗಿ ಸಮಾಜದ ಎಲ್ಲಾ ಸಮುದಾಯಗಳೊಂದಿಗೂ ಸಹ ಬಾಳ್ವೆಯಿಂದ ಬೆರೆಯುತ್ತಿದ್ದ ಅವರು ರೋಜರಪಲ್ಲಿ ವೆಂಕಟರವಣಪ್ಪ ಎಂದೆ ಖ್ಯಾತರಾಗಿದ್ದರು ಇತ್ತಿಚಿಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಹೆಚ್.ಡಿ ಪೊರೈಸಿ ಡಾಕ್ಟರೇಟ್ ಗಳಿಸಿದ್ದರು.ಕಂಬನಿ ಮೀಡಿದ ಗಣ್ಯರುರೋಜರಪಲ್ಲಿ ವೆಂಕಟರವಣಪ್ಪ ನಿಧನಕ್ಕೆ ತಾಲೂಕಿನ ದಲಿತ ಸಂಘಟನೆಗಳ ಮುಖಂಡರಾದ ಚಲ್ದಿಗಾನಹಳ್ಳಿ ಮುನಿವೆಂಕಟಪ್ಪ,ಬಂಡಾರಹಳ್ಲಿ ಮುನಿಯಪ್ಪ,ನಾಗದೇನಹಳ್ಳಿಶ್ರೀನಿವಾಸ್,ಗಾಂಡ್ಲಹಳ್ಲಿ ಚಲಪತಿ,ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೇಕಲ ನಾರಯಣಸ್ವಾಮಿ,ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ.ಮಂಜು,ಮಾತ ಸಂಸ್ಥೆ ನಾರಯಣಸ್ವಾಮಿ,ಉಪ್ಪರಪಲ್ಲಿತಿಮ್ಮಯ್ಯ,ದೇವೆಂದ್ರ,ಕಲ್ಲೂರುವೆಂಕಟೇಶ್,ನರಸಿಂಹಯ್ಯ ಹೆಬ್ಬಟ ಆನಂದ್,ಸೇರಿದಂತೆ ಹಲವಾರು ಜನ ಕಂಬನಿ ಮೀಡಿದಿದ್ದಾರೆ.
ಸಿನಿಮಾ ಡೆಸ್ಕ್:ಅಲ್ಲು ಅರ್ಜುನ್ ವಿಲಕ್ಷಣ ಅಭಿನಯ ವಿಚಿತ್ರ ವೇಷ ಭೂಷಣದ ಪುಷ್ಪಾ-2 ಸಿನಿಮಾ ದಕ್ಷಿಣ ಭಾರತದಲ್ಲಿಯೇ ಅಲ್ಲ ಉತ್ತರ ಭಾರತದ ಬಾಲಿವುಡ್ ನಲ್ಲೂ ಬರ್ಜರಿಯಾಗಿ ಆರ್ಭಟಿಸಿದೆ 3 ದಿನಗಳಲ್ಲಿ ₹205 ಕೋಟಿ ಕಲೆಕ್ಷನ್ ಬಾಚಿಕೊಂಡಿದೆ. ಅಲ್ಲಿನ ಸಿನಿಮಾ ಪಂಡಿತರ ಲೆಕ್ಕಾಚಾರವನ್ನು ಬುಡಮೇಲು ಮಾಡಿದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಾಲಿವುಡ್ ಹಳೆಯ ಎಲ್ಲಾ ಲೆಕ್ಕಾಚಾರಗಳನ್ನು ಹಿಂದಿಕ್ಕಿರುವ ಸಿನಿಮಾ ಎಂದು ಟ್ರೇಡ್ ಮೂಲಗಳು ಬಹಿರಂಗಪಡಿಸಿವೆ. ಜವಾನ್ (₹ 180 ಕೋಟಿ), ಅನಿಮಲ್ (₹ 176 ಕೋಟಿ) ಮತ್ತು ಪಠಾಣ್ (₹ 161 ಕೋಟಿ) ಚಿತ್ರಗಳನ್ನು ಹಿಂದಕ್ಕಿರುವ ಅಲ್ಲು ಅರ್ಜುನ್ ಅಭಿನಯದ ಪುಷ್ಪ-2 ತನ್ನ ಮೊದಲ 3 ದಿನದ ಕಲೆಕ್ಷನ್ ಗಳಲ್ಲಿ ₹ 70 ಕೋಟಿ ಗಡಿ ದಾಟಿದ ಮೊದಲ ಹಿಂದಿ ಚಿತ್ರವಾಗಿದೆ ಗುರುವಾರ ₹ 72 ಕೋಟಿ, ಶುಕ್ರವಾರ ₹ 59 ಕೋಟಿ ಮತ್ತು ಶನಿವಾರ ₹ 74 ಕೋಟಿ ಕಲೆಕ್ಷನ್ ಮಾಡಿದ್ದು ಭಾನುವಾರದ ಕಲೆಕ್ಷನ್ ಲೆಕ್ಕ ಬಿಡುಗಡೆಯಾಗಬೇಕಿದೆ.
ಶ್ರೀನಿವಾಸಪುರ:ಡಾ.ಬಾಬಾಸಾಹೇಬ್ ಅಂಬೇಡ್ಕರ್ ದಮನಿತರ ಶೋಷಿತ ವರ್ಗಗಳಿಗೆ ಧ್ವನಿಯಾಗಿ ಸ್ವಾಭಿಮಾನ ಬದುಕಿಗೆ ದಾರಿ ತೋರಿಸಿದ ಧೀಮಂತ ನಾಯಕ ಎಂದು ಜೆಡಿಎಸ್ ಪಕ್ಷದ ಪ್ರಮುಖ ಮುಖಂಡರಾದ ಗಾಯಿತ್ರಿಮುತ್ತಪ್ಪ ಹೇಳಿದರು ಅವರು ಇಂದು ಅಂಬೇಡ್ಕರ್ ಮಹಾಪರಿನಿರ್ವಾಣ ದಿವಸದ ಅಂಗವಾಗಿ ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಬಾಗದ ಡಾ.ಅಂಬೇಡ್ಕರ್ ಪುತ್ಥಲಿಗೆ ಮಾಲಾರ್ಪಣೆ ಮಾಡಿ ಮಾತನಾಡಿರು,ಬಾಬಾ ಸಾಹೇಬರು ಪ್ರಪಂಚವೇ ಗೌರವಿಸಿ ಮೆಚ್ಚುವಂತಹ ಸಂವಿಧಾನವನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಿದ್ದಾರೆ. ಸರ್ವರಿಗೂ ಸಮಬಾಳು ನೀಡುವ ಕಲ್ಪನೆಯೊಂದಿಗೆ ಸಂವಿಧಾನ ರಚಿಸಿದ ಅಂಬೇಡ್ಕರ್ ಆಶಯ ಈಡೇರಿಸಲು ಪ್ರತಿಯೊಬ್ಬರು ಸಂಕಲ್ಪ ಮಾಡಬೇಕು ಎಂದರು.ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಪೂಲುಶಿವಾರೆಡ್ದಿ, ಗೋರವಿಮಾಕಲಹಳ್ಳಿ ಶ್ರೀನಿವಾಸ್ ಹೋಳೂರುಸಂತೋಷ್,ನಾರಯಣಪುರ ವೆಂಕಟೇಶ್,ಕನಿಗಾನಹಳ್ಳಿ ವೆಂಕಟೇಶ್ ಮುಂತಾದವರು ಇದ್ದರು.
ಕೋಲಾರ:ಬಾಂಗ್ಲಾದೇಶದಲ್ಲಿ ಹಿಂದೂ ಧರ್ಮಗುರು ಚಿನ್ಮಯ ಕೃಷ್ಣ ಪ್ರಭುದಾಸ್ ಅವರ ಪರ ಕಾನೂನು ಪ್ರಕರಣದಲ್ಲಿ ವಾದ ಮಂಡಿಸಿದ್ದಕ್ಕಾಗಿ ವಕೀಲ ರಮೇನ್ ರಾಯ್ ವಿರುದ್ಧ ದಾಳಿ ನಡೆದಿರುವುದು ಖಂಡನೀಯ ಎಂದು ಕೋಲಾರದಲ್ಲಿ ವಕೀಲರ ಸಂಘದಿಂದ ಪ್ರತಿಭಟನೆ ನಡೆಸಲಾಗಿದೆ.ಸಂಘದ ಮುನೇಗೌಡ ನೇತೃತ್ವದಲ್ಲಿ ಸಭೆ ನಡೆಸಿದ ವಕೀಲರು ಬಾಂಗ್ಲಾದೇಶದಲ್ಲಿ ನ್ಯಾಯವಾದಿಗಳ ಮೇಲೆ ಹಲ್ಲೆ ನಡೆಸಿ ಅಲ್ಪಸಂಖ್ಯಾತ ಹಿಂದುಗಳ ಮೇಲೆ ದೌರ್ಜನ್ಯ ನಡೆಸುತ್ತಿರುವ ಕೃತ್ಯ ಖಂಡನೀಯ ಅವರಿಗೆ ರಕ್ಷಣೆ ನೀಡಬೇಕೆಂದು ಅಗ್ರಹಿಸಿ ವಕೀಲರು ಭಾರತ ರಾಷ್ಟ್ರಪತಿಗಳಿಗೆ ಜಿಲ್ಲಾಡಳಿತದ ಮೂಲಕ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಹಿರಿಯ ವಕೀಲ ಶಂಕರಪ್ಪ,ಮಾಗೇರಿನಾರಯಣಸ್ವಾಮಿ, ಕೆ.ನಟರಾಜಬಾಬು,ಶ್ರಧರ್,ಜಯರಾಮ್, ವಕೀಲರ ಸಂಘದದ ಪ್ರಧಾನ ಕಾರ್ಯದರ್ಶಿಬೈರಾರೆಡ್ದಿ, ಉಪಾಧ್ಯಕ್ಷ ರವೀಂದ್ರ ಮುಂತಾದವರು ಇದ್ದರು.
ನ್ಯೂಜ್ ಡೆಸ್ಕ್:ಕನ್ನಡದ ಡಿವೈನ್ ಸ್ಟಾರ್ ಕಾಂತಾರ ಸಿನಿಮಾ ಖ್ಯಾತಿಯ ರಿಷಬ್ ಶೆಟ್ಟಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ ‘ದಿ ಪ್ರೈಡ್ ಆಫ್ ಭಾರತ್. “ಛತ್ರಪತಿ ಶಿವಾಜಿ ಮಹಾರಾಜ್” ಚಿತ್ರದ ವಿಶೇಷ ಪೋಸ್ಟರ್ ಬಿಡುಗಡೆಯಾಗಿದೆ. ಸಂದೀಪ್ ಸಿಂಗ್ ನಿರ್ದೇಶನದ ಈ ಚಿತ್ರ ಶಿವಾಜಿ ಮಹಾರಾಜ್ ಜೀವನಾಧಾರಿತ ಚಿತ್ರವಾಗಲಿದೆ ಎಂದು ಚಿತ್ರ ನಿರ್ಮಾಪಕರು ಹೇಳಿದ್ದಾರೆ. ಈ ಚಿತ್ರವು 2027 ಜನವರಿ 21 ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ಮದ್ಯೆ ರಿಷಬ್ ಶೆಟ್ಟಿ ಸದ್ಯ ‘ಕಾಂತಾರ-2’ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.
ಶ್ರೀನಿವಾಸಪುರ:ಇನೊವಾ ಕಾರು ಹಾಗೂ TVS ಮೊಪೈಡ್ ನಡುವೆ ಅಪಘಾತವಾಗಿ ಮೊಪೈಡ್ ಸವಾರ ಮೃತ ಪಟ್ಟಿರುವ ಘಟನೆ ಶ್ರೀನಿವಾಸಪುರ-ನಂಬಿಹಳ್ಳಿ ರಸ್ತೆಯಲ್ಲಿ ನಡೆದಿರುತ್ತದೆ.ಶ್ರೀನಿವಾಸಪುರ ತಾಲ್ಲೂಕಿನ ನಂಬಿಹಳ್ಳಿ ರಸ್ತೆಯಲ್ಲಿ ನಡೆದಿರುವ ರಸ್ತೆ ಅಪಘಾತದಲ್ಲಿ ಮೃತ ವ್ಯಕ್ತಿಯನ್ನು ಆರಮಾಕಲಹಳ್ಳಿ ಗ್ರಾಮದ ರೈತ ವೆಂಕಟೇಶಪ್ಪ(65) ಎಂದು ಗುರತಿಸಲಾಗಿದೆ.ಶ್ರೀನಿವಾಸಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.