ಶ್ರೀನಿವಾಸಪುರ: ಚುನಾವಣೆ ಪ್ರಕಟನೆಯಾಗುವ ಎಲ್ಲಾ ಸೂಚನೆಗಳು ಕಂಡುಬರುತ್ತಿದೆ ಚುನಾವಣೆ ಘೋಷಣೆಯಾಗುವುದಕ್ಕೂ ಮುಂಚಿತವಾಗಿ ಪಟ್ಟಣ ಸೇರಿದಂತೆ ತಾಲೂಕಿನ ಲಕ್ಷ್ಮೀಸಾಗರ,ಯಲ್ದೂರು,ಮುತ್ತಕಪಲ್ಲಿ,ಸೋಮಯಾಜಲಹಳ್ಳಿ, ಲಕ್ಷ್ಮೀಪುರ,ರಾಯಲ್ಪಾಡು,ಗೌವಪಲ್ಲಿಯ ಬೀದಿಗಳಲ್ಲಿ ಪ್ಯಾರ ಮೀಲಟರಿ ಪಡೆಗಳು(RAF) ರ್‍ಯಾಪಿಡ್ ಆಕ್ಷನ್ ಫೋರ್ಸ್ ತುಕಡಿಗಳ ಪರೇಡ್ ನಡೆಸಿದ್ದು ಸಾಮನ್ಯ ಮತದಾರ ತನ್ನ ಹಕ್ಕನ್ನು ಮುಕ್ತವಾಗಿ ಚಲಾಯಿಸಲು ಧೈರ್ಯ ತುಂಬಿದಂತಿತ್ತು.ಏನಿದು ರ್‍ಯಾಪಿಡ್ ಆಕ್ಷನ್ ಫೋರ್ಸ್ ಎಂಬು ಜನಸಾಮಾನ್ಯರ ಪ್ರಶ್ನೆ, ಅಂದರೆ ಕ್ಷಿಪ್ರ ಕಾರ್ಯಪಡೆ ಗಲಭೆಗಳು ಕೋಮುಘರ್ಷಣೆಗಳು ಸೇರಿದಂತೆ ದೊಡ್ದಮಟ್ಟದ ದೊಂಬಿಯಂತ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ವಿಶೇಷ ತರಬೇತಿ ಹೊಂದಿರುವಂತ ಅರೆಸೇನಾ ಘಟಕ ಇದಾಗಿರುತ್ತದೆ, ಇದರ ಕೇಂದ್ರ ಕಚೇರಿ ಹೊಸದೆಹಲಿಯಲ್ಲಿದ್ದು ಶ್ರೀನಿವಾಸಪುರಕ್ಕೆ ಬಂದಿದ್ದ ತುಕಡಿ ಹೈದರಾಬಾದ್ ನಿಂದ ಬಂದಿರುವುದಾಗಿದೆ ಎಂದು ಹೇಳಲಾಗಿದೆ.2023ರ ವಿಧಾನಸಭಾ ಚುನಾವಣೆಯ ದಿನಾಂಕ ಪ್ರಕಟಣೆಗೆ ದಿನಗಳು ಹತ್ತಿರ ಇರುವುಗಾಲೆ ಶ್ರೀನಿವಾಸಪುರ ಪೋಲಿಸರು ಸಂಪೂರ್ಣವಾಗಿ ಸರ್ವ ರಿತಿಯಲ್ಲಿ ಸಜ್ಜುಗೊಳ್ಳುತ್ತಿದ್ದಾರೆ, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತದಾನ ಕೇಂದ್ರಗಳ ಬಗ್ಗೆ ನೀಘಾ ವಹಿಸುವುದು ಅಂತರಾಜ್ಯ ಚಕ್ ಪೋಸ್ಟ್ ನಿರ್ಮಾಣ ಸಲುವಾಗಿ ರಾಯಲ್ಪಾಡು ವ್ಯಾಪ್ತಿಯಲ್ಲಿ ಕಡಪಾ-ಬೆಂಗಳೂರು ಹೆದ್ದಾರಿ,ಪುಲಗೂರುಕೋಟೆ ಬಳಿ ಚಂಬಕೂರು…
Author: Srinivas_Murthy
ಶ್ರೀನಿವಾಸಪುರ:ದೇವೇಗೌಡ ಸೇರಿದಂತೆ ಮುಖ್ಯಮಂತ್ರಿಗಳಾಗಿದ್ದ ಘಟಾನು ಘಟಿ ರಾಜಕಾರಣಿಗಳನ್ನು ಸೋಲಿಸಿ ಮನೆಗೆ ಕಳಿಸಿರುವಂತ ಕರ್ನಾಟಕದಲ್ಲಿ ಶ್ರೀನಿವಾಸಪುರದ ಘಟಾನುಘಟಿ ರಾಜಕಾರಣಿಗಳನ್ನು ಸೋಲಿಸುವು ದೊಡ್ದಮಾತಲ್ಲ ಇಲ್ಲಿನ ಜನತೆ ಮನಸ್ಸು ಮಾಡಬೇಕು ಅಷ್ಟೆ ಎಂದು ಕಂದಾಯ ಸಂಚಿವ ಆರ್.ಅಶೋಕ್ ಹೇಳಿದರು ಅವರು ಇಂದು ಶ್ರೀನಿವಾಸಪುರದಲ್ಲಿ ಆಯೋಜಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿ ನಾಲ್ಕು ತಲಮಾರಿಗಾಗುವಷ್ಟು ಆಸ್ತಿ ಮಾಡಿಕೊಂಡ ಬಗ್ಗೆ ರಮೇಶ್ ಕುಮಾರ್ ಅವರೆ ಒಪ್ಪಿಕೊಂಡಾಗಿದೆ, ಕ್ಷೇತ್ರದಲ್ಲಿ ಯಾವುದೆ ಅಭಿವೃದ್ಧಿ ಅಗಿಲ್ಲ ರಸ್ತೆ ಸೇರಿದಂತೆ ಇತರೆ ಮೂಲ ಭೂತ ಸೌಕರ್ಯಗಳನ್ನು ಒದಗಿಸಿಲ್ಲ ಎಂದು ಆರೋಪಿಸಿದ ಅವರು ಕಳೆದ ಐವತ್ತು ವರ್ಷಗಳಿಂದ ಅವರನ್ನು ಬಿಟ್ಟು ಇವರು ಇವರನ್ನು ಬಿಟ್ಟು ಅವರು ಎಂಬಂತೆ ಎಂಕ-ಸೀನಾ ಆಟನಡೆಯುತ್ತಿದೆ ಎಂದು ಸ್ಥಳೀಯ ರಾಜಕಾರಣಕ್ಕೆ ನೇರವಾಗಿ ಲಗ್ಗೆ ಇಟ್ಟು ಮಾತನಾಡಿದರು.ರಾಜ್ಯ ರಾಜಕಾರಣದಲ್ಲಿ ಅಧಿಕಾರದ್ದ ಕಾಂಗ್ರೆಸ್ ಅಭಿವೃದ್ಧಿಗೆ ಒತ್ತುಕೊಡದೆ ಈಗ ಗ್ಯಾರಂಟಿ ಕಾರ್ಡ್ ಕೊಟ್ಟು ಮತಯಾಚಿಸಲು ಹೋರಟಿದೆ ಎಂದು ವ್ಯಂಗ್ಯವಾಡಿದರು.ಜನತೆಗೆ ಟೋಪಿ ಹಾಕುವುದರಲ್ಲಿ ಕಾಂಗ್ರೆಸ್ಸಿಗರು ಎತ್ತಿದ ಕೈ ಅವರು ಐದು ವರ್ಷಗಳ ಕಾಲ ಅಧಿಕಾರದಲ್ಲಿ ಇದ್ದರು…
ಶ್ರೀನಿವಾಸಪುರ:ಶ್ರೀನಿವಾಸಪುರ ಕೇಂದ್ರವಾಗಿ ವಿಭಜಿತ ಕೋಲಾರ ಜಿಲ್ಲೆಯಲ್ಲಿ ಈ ಬಾರಿ ಮಾವು ಬೆಳೆಗಾರರು ಬಂಪರ್ ಹೂ ಬಿಟ್ಟಿದೆ ಒಳ್ಳೆಯ ಇಳುವರಿ ಬರುತ್ತದೆ ಉತ್ತಮ ಆದಾಯ ಕೈ ಸೇರುತ್ತದೆ ಎನ್ನುವ ನೀರಿಕ್ಷೆಯಲ್ಲಿ ಇದ್ದರು. ಆದರೆ ಮಾವು ಬೆಳೆಗಾರರ ನಿರೀಕ್ಷೆಯೆಲ್ಲ ಹುಸಿಯಾಗಿದ್ದು, ಹವಾಮಾನ ವೈಪರಿತ್ಯದಿಂದ ಸಮೃದ್ದಿಯಾಗಿ ಮರದ ತುಂಬ ಬಿಟ್ಟಿದ್ದ ಹೂ ಕಟ್ಟಿ,ಪೀಚಾಗಬೇಕಿದ್ದು ಕಾಯಿ ಹಳದಿ ಬಣ್ಣಕ್ಕೆ ತಿರುಗಿ ಬಿಸಿಲಿನ ತಾಪಕ್ಕೆ ಉದುರಿ ಹೋಗುತ್ತ ಮರಗಳು ಖಾಲಿಯಾಗುತ್ತಿದೆ ಇದು ಮಾವು ಬೆಳೆಗಾರರನ್ನ ಆತಂಕಕ್ಕೆ ಈಡುಮಾಡಿದೆ.ಮೂರು ಹಂತಗಳಲ್ಲಿ ಬಿಟ್ಟಂತ ಹೂವಿನಿಂದ ನಷ್ಟ!ಡಿಸೆಂಬರ್ ನಲ್ಲಿ ಬಿಟ್ಟ ಮಾವಿನ ಹೂ ಇಷ್ಟೊತ್ತಿಗಾಗಲೆ ಕಾಯಿಯಾಗ ಬೇಕಿತ್ತು ಆದರೆ ಹವಮಾನ ವೈಪರಿತ್ಯದಿಂದ ಮೂರು ಹಂತಗಳಲ್ಲಿ ಮಾವಿನ ಮರಗಳಲ್ಲಿ ಹೂವು ಬಿಟ್ಟ ಪರಿಣಾಮ ಸಮೃದ್ದಿಯಾಗಿ ಬಂದಿದ್ದ ಹೂ ಕಾಯಿ ಕಚ್ಚಿಲ್ಲ.ಹಿಂದಿನ ಹೂ ಕಾಯಿಯಾಗಲು ಹೊಸದಾಗಿ ಬಂದಂತ ಹೂ ಬಿಡುತ್ತಿಲ್ಲ,ಡಿಸೆಂಬರ್ ನಲ್ಲಿ ಬಂದಿರುವ ಹೂ ಒಂದಷ್ಟು ಹೂ ಕಾಯಿ ಕಚ್ಚಿದೆ ಸ್ವಲ್ಪ ತಡವಾದ ಹೂ ಕಾಯಿಕಚ್ಚಲು ಜನವರಿಯಲ್ಲಿ ಬಂದ ಹೂ ಅಡ್ಡಗಾಲಾದರೆ ಅದೆ ಮರದಲ್ಲಿ ಜನವರಿಯಲ್ಲಿ…
ಶ್ರೀನಿವಾಸಪುರ: ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಗುಂಜೂರುಶ್ರೀನಿವಾಸರೆಡ್ಡಿ ಆಯೋಜಿಸಿದ್ದ ಲೋಕ ಕಲ್ಯಾಣಾರ್ಥ ಶ್ರೀ ಶ್ರೀನಿವಾಸ ತಿರು ಕಲ್ಯಾಣೋತ್ಸವ ಅಂಗರಂಗ ವೈಭೋಗದಿಂದ ಜರುಗಿತು, ತಿರುಮಲ-ತಿರುಪತಿ ದೇವಾಲದಿಂದ ತಂದಿದ್ದ ಭೂದೇವಿ-ಶ್ರೀ ದೇವಿ ಸಮೇತ ಶ್ರೀನಿವಾಸನ ಉತ್ಸವ ಮೂರ್ತಿಗಳನ್ನು ದೇವಾಲಯಂದಂತೆ ನಿರ್ಮಾಣ ಮಾಡಿದ್ದ ಸೆಟ್ ನಲ್ಲಿ ಪ್ರತಿಷ್ಟಾಪಿಸಿ ಕಲ್ಯಾಣೋತ್ಸವ ಕಾರ್ಯಕ್ರಮ ನಡೆಸಲಾಯಿತು.ಭಾನುವಾರ ಸಂಜೆ 4 ಗಂಟೆಗೆ ಪ್ರಾರಂಭವಾದ ಕಲ್ಯಾಣೋತ್ಸವ ಇಳಿಸಂಜೆ ಗೋಧೂಳಿ ಲಗ್ನದಲ್ಲಿ ಅದ್ದೂರಿಯಾಗಿ ನಡೆಯಿತು ತಿರುಮಲ-ತಿರುಪತಿ ದೇವಾಲದ ಅರ್ಚಕಸ್ವಾಮಿಗಳಾದ ಶೇಷಾದ್ರಿ ಮತ್ತು ವೃಂದದ ಆಗಮಿಕರ ವೇದ-ಮಂತ್ರ ಘೋಷಗಳೊಂದಿಗೆ, ಮಂಗಳ ವಾದ್ಯಗಳ ನಡುವೆ ಅಚ್ಚುಕಟ್ಟಾಗಿ ನೇರವೇರಿಸಿದರು.ಕಲ್ಯಾಣೋತ್ಸವಕ್ಕೆ ಆಗಮಿಸಿದ್ದ ಎಲ್ಲರಿಗೂ ತಿರುಪತಿ ಲಾಡು ನೀಡಲಾಯಿತು, ಹಳ್ಳಿಗಳಿಂದ ರುವ ಜನರಿಗೆ ಬಂದು ಹೋಗಲು ಉಚಿತ ಬಸ್ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು.ಗುಂಜೂರುಶ್ರೀನಿವಾಸರೆಡ್ಡಿ ದಂಪತಿ ಹಾಗು ಕುಟುಂಬದ ಸದಸ್ಯರು,ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಪೆದ್ದರೆಡ್ಡಿರಾಜೇಂದ್ರಪ್ರಸಾದ್ ದಂಪತಿ,ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರಾಜಶೇಖರೆಡ್ಡಿ,ಒಬೇಪಲ್ಲಿ ಮಂಜುನಾಥರೆಡ್ಡಿ,ಮಾವು ಮಂಡಳಿ ಮಾಜಿ ಅಧ್ಯಕ್ಷ ಎಲ್.ಗೋಪಾಲಕೃಷ್ಣ,ಕೋಟಬಲ್ಲಪಲ್ಲಿ ಸತ್ಯನಾರಯಣಶೆಟ್ಟಿ,ಯುವ ಮುಖಂಡ ಶ್ರೀರಾಮ್,ಶಿವಾಚಾರ್ಯ ನಗರ್ತ ಸಂಘದ ಮುಖಂಡ ಕಪಾಲಿಶಿವಕುಮಾರ್ ಹಾಗು ಮಹಿಳಾ…
ಶ್ರೀನಿವಾಸಪುರ:ಜೆಡಿಎಸ್ ಪಕ್ಷದ ನಾಯಕತ್ವ ನಂಬಿ ಬರುವಂತ ಅಲ್ಪಸಂಖ್ಯಾತರನ್ನು ಅವರ ಗೌರವಕ್ಕೆ ಧಕ್ಕೆ ಬಾರದಂತೆ ಪಕ್ಷದಲ್ಲಿ ನಡೆಸಿಕೊಳ್ಳಲಾಗುತ್ತದೆ ಎಂದು ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು ಅವರು ಇಂದು ಶ್ರೀನಿವಾಸಪುರ ಪಟ್ಟಣದ ಜಾಕೀರ್ ಹುಸೇನ್ ಮೊಹಲ್ಲಾದಲ್ಲಿ ತಾಲೂಕು ಜೆಡಿಎಸ್ ಪಕ್ಷ ಆಯೋಜಿಸಿದ್ದ ಕೆಲ ಅಲ್ಪಸಂಖ್ಯಾತ ಕಾಂಗ್ರೆಸ್ ಪಕ್ಷದ ಮುಖಂಡರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ ಸಂದರ್ಭದಲ್ಲಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು.ಅಲ್ಪಸಂಖ್ಯಾತರ ರಕ್ಷಣೆ ವಿಚಾರದಲ್ಲಿ ಜೆಡಿಎಸ್ ಬದ್ದವಾಗಿದೆ ಸ್ಥಳೀಯವಾಗಿ ಅಲ್ಪಸಂಖ್ಯಾತರ ರಕ್ಷ್ಣಣೆ ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಸಾದ್ಯ ಎಂದರು ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಅಭಿವೃದ್ಧಿ ವಿಚಾರವಾಗಿ ಯಾವುದೆ ರೀತಿಯ ತಾರತಮ್ಯ ಮಾಡಿಲ್ಲ ಎಲ್ಲಾ ಸಮುದಾಯಗಳವರನ್ನು ಧರ್ಮಗಳವರನ್ನು ಸಮಾನ ಗೌರವದಿಂದ ಕಾಣುವುದೊಂದಿಗೆ ಸರ್ಕಾರದ ಕಾರ್ಯಕ್ರಮಗಳು ಅವರಿಗೆ ತಲಪುವ ರೀತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿರುವುದಾಗಿ ಹೇಳಿದರು.ಸ್ಥಳೀಯವಾಗಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರವಾಗಿ ಈ ವಾರ್ಡನಲ್ಲಿ ಬೊರ್ ವೆಲ್ ಕೊರೆಸುವುದಾಗಿ ಭರವಸೆ ನೀಡಿದರು.ಕೋಲಾರದ ಅಂಜುಮನ್ ಸಂಸ್ಥೆ ಮುಖಂಡ ಜಮೀರ್ ಅಹ್ಮದ್ ಮಾತನಾಡಿ ರಾಜ್ಯದಲ್ಲಿ ವಿವಾದತ್ಮಕ ವಿಚಾರಗಳಲ್ಲಿ ಅಸಯಕರಾದ…
ಶ್ರೀನಿವಾಸಪುರ: ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಜನರ ಶ್ರೇಯಸ್ಸು ಕೋರಿ ಸಕಾಲದಲ್ಲಿ ಮಳೆ-ಬೆಳೆಯಾಗಿ ಜನತೆ ಸುಭಿಕ್ಷತೆಯಿಂದ ಇರಬೇಕು ಎಂಬ ಸದುದ್ದೇಶದಿಂದ ಪಟ್ಟಣದ ಹೊರವಲಯದ ಕನಕ ಮಂದಿರದ ಪಕ್ಕದಲ್ಲಿ ಲೋಕಕಲ್ಯಾಣಾರ್ಥ ಶ್ರೀ ಶ್ರೀನಿವಾಸ ತಿರು ಕಲ್ಯಾಣ ಮಹೋತ್ಸವದ ಆಯೋಜಿಸಲಾಗಿದೆ ಎಂದು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಗುಂಜೂರುಶ್ರೀನಿವಾಸರೆಡ್ಡಿ ಹೇಳಿದರು ಅವರು ಎರಡು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಇಂದು ಎರಡನೆಯ ದಿನ ಭಾನುವಾರ ಸಂಜೆ ಆಯೋಜಿಸಿರುವ ಶ್ರೀ ಶ್ರೀನಿವಾಸ ತಿರು ಕಲ್ಯಾಣ ಅಂಗವಾಗಿ ಮುಂಜಾನೆಯಿಂದ ಪ್ರಾರಂಬವಾಗಿರುವ ದೇವಾತಾ ಆರಾಧನ ಕಾರ್ಯಕ್ರಮಗಳಲ್ಲಿ ಭಾಗವಿಸಿ ಮಾತನಾಡಿದರು.ಬೆಳೆಗ್ಗೆ 6 ಗಂಟೆಯಿಂದ ಗಣಪತಿ ಪೂಜೆ ನವಗ್ರಹ ಆರಾಧನೆ ಮಧ್ಯಾನಃ ದಶ ಸಹಸ್ರ ಧನ್ವಂತ್ರಿ ಮಹಾಯಾಗ ಮತ್ತು ಶತ ಸಹಸ್ರ ಸುದರ್ಶನ ಮಹಾಯಾಗ ಕಾರ್ಯಕ್ರಮದಲ್ಲಿ ಭಾಗವಿಸಿದ್ದ ಅವರು ಸುಮಾರು 1 ಗಂಟೆಗೆ ನಡೆದ ಪೂರ್ಣಾವಧಿಯಲ್ಲಿ ಪಾಲ್ಗೋಂಡಿದ್ದರು.ಸಂಜೆ ಸುಮಾರು 4.30 ಗಂಟೆಗೆ ಪ್ರಾರಂಭವಾಗುವ ಶ್ರೀ ಶ್ರೀನಿವಾಸ ತಿರು ಕಲ್ಯಾಣ ಮಹೋತ್ಸವ 7.00 ಗಂಟೆಯವರಿಗೆ ನಡೆಯಲಿದೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಲ್ಯಾಣ ಮಹೋತ್ಸವದಲ್ಲಿ…
ಮಾಲೂರು: ದಿ ಪ್ರೊಫೇಷನಲ್ ಕೊರಿಯರ್ ಸಂಸ್ಥೆ ಕೊರಿಯರ್ ಕ್ಷೇತ್ರದಲ್ಲಿ ಮೂರು ದಶಕಗಳಿಗೂ ಹೆಚ್ಚುಕಾಲದಿಂದ ತನ್ನದೆ ಆದ ಸ್ವಂತ ನೆಟ್ ವರ್ಕ್ ಮೂಲಕ ವೈಶಿಷ್ಠ ಪೂರ್ಣವಾಗಿ ಸೇವೆ ಸಲ್ಲಿಸುತ್ತ ಇಡಿ ವಿಶ್ವದ ಮೂಲೆ ಮೂಲೆಯನ್ನು ತಲುಪಿದೆ ಎಂದು ಪ್ರೊಫೇಷನಲ್ ಕೊರಿಯರ್ ಸಂಸ್ಥೆಯ ಮಾಹಿತಿ ತಂತ್ರಙ್ಞಾನದ ನಿರ್ದೇಶಕ ವಿ.ಶ್ರೀನಾಥ್ ಹೇಳಿದರು ಅವರು ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ದಿ ಪ್ರೊಫೇಷನಲ್ ಕೊರಿಯರ್ ನೂತನ ಕಚೇರಿ ಪ್ರಾರಂಭಿಸಿ ಮಾತನಾಡಿದರು.ಪ್ರೊಫೇಷನಲ್ ಕೊರಿಯರ್ ಸಂಸ್ಥೆ ಕಾಲದ ಅಣತಿಯಂತೆ ಇನ್ನು ಹೆಚ್ಚು ಸೇವೆಗಳನ್ನು ಸರಳ ರಿತಿಯಲ್ಲಿ ಗ್ರಾಹಕರಿಗೆ ನೀಡಲು ಅಗತ್ಯ ತಂತ್ರಙ್ಞಾನ ಬಳಸಿಕೊಂಡು ಮನುಷ್ಯ ತಗೆದುಕೊಂಡು ಹೋಗಿ ವಿತರಣೆ ಮಾಡುವಂತ ಸಾಂಪ್ರದಾಯಿಕ ಕೊರಿಯರ್ ವ್ಯವಸ್ಥೆಗೆ ಅಂತರ್ಜಾಲದ ತಾಂತ್ರಿಕತೆ ಜೊಡಿಸಲಾಗಿದ್ದು ಇದು ವಿದ್ಯುನ್ಮಾನ ಸಂಪರ್ಕ ವ್ಯವಸ್ಥೆಯಾಗಿ ಗ್ರಾಹಕ ಮತ್ತು ಪ್ರೊಫೇಷನಲ್ ಕೊರಿಯರ್ ಸಂಸ್ಥೆ ನಡುವಿನ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುತ್ತಿದೆ.ಗ್ರಾಹಕ ಪ್ರೊಫೇಷನಲ್ ಕೊರಿಯರ್ ಸಂಸ್ಥೆಯಲ್ಲಿ ಕೊರಿಯರ್ ಬುಕ್ ಮಾಡಿದರೆ ಅದು ಎಲ್ಲಿ ಹೊಗುತ್ತದೆ ಸೇರಬೇಕಾದಂತ ಸ್ಥಳಕ್ಕೆ ಯಾವತ್ತು ತಲಪುತ್ತದೆ ಎಂಬುದನ್ನು ಪ್ರೊಫೇಷನಲ್…
ಶ್ರೀನಿವಾಸಪುರ:ಸ್ತ್ರೀಯರ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಸಾಧನೆಗಳನ್ನು ಹಾಗು ಸಮಾಜಕ್ಕೆ ಅವರು ನೀಡಿರುವ ಇತರೆ ಸಾಧಕ ಕೊಡುಗೆಗಳನ್ನು ಸಂಭ್ರಮಿಸುವ ದಿನವೆ ಅಂತರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೋಲಾರ ಜಿಲ್ಲಾ ಸಂಯೋಜಕರಾದ ಮಂಜುಳಾ ಭೀಮರಾವ್ ಹೇಳಿದರು ಅವರು ಶ್ರೀನಿವಾಸಪುರ ಪಟ್ಟಣದ ತ್ಯಾಗರಾಜ ಬಡಾವಣೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದರು.ಹೆಣ್ಣುಮಕ್ಕಳಲ್ಲಿ ಅಗಾಧವಾದ ಶಕ್ತಿ ಸಾಧಿಸಬೇಕು ಎಂಬ ಚಲ ಇದೆ ಹಾಗೆ ಮಾತೃವಾತ್ಸಲ್ಯ ಸಮರ್ಪಣಾ ಮನೋಭಾವ ಇರುವ ಮಹಿಳೆ ಬಹುಮುಖಿಯಾಗಿ ಸಾಧಿಸಲು ನಿಂತರೆ ಯಾವುದೆ ತಾರತಮ್ಯ ಅಡ್ಡಿಯಾಗದು ಎಂದರು.ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಯ ಪ್ರಸೂತಿ ತಜ್ಞ ವೈದ್ಯೆ ಗೌಸಿಯಾಭಾನು ಮಾತನಾಡಿ ವಿದ್ಯಾರ್ಥಿನಿಯರು ವಿದ್ಯಾರ್ಥಿ ದೆಸೆಯಲ್ಲಿ ವೈಙ್ಞಾನಿಕವಾಗಿ ಸಮಾಜದ ವ್ಯವಸ್ಥೆಯ ಬಗ್ಗೆ ಅರಿಬೇಕಿದೆ ದಿನವು ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರನ್ನು ಅಸಮಾನ್ಯ ಸಾಧನೆ ಮಾಡುತ್ತಿದ್ದು ತಮ್ಮ ತಮ್ಮ ಕ್ಷೇತ್ರಗಳಲ್ಲಿ ದೊಡ್ಡ ಸಾಧನೆ ಮಾಡಲು ಶ್ರಮಿಸುತ್ತಿದ್ದಾಳೆ ಎಂದರು.ಮಹಿಳಾ ಸಾಧಕಿಯರ ಆದರ್ಶವನ್ನು ತಗೆದುಕೊಂಡು ವಿದ್ಯಾರ್ಥಿನಿಯರು…
ನ್ಯೂಜ್ ಡೆಸ್ಕ್(ಕ್ರೈಂ ಟೀಂ):ಶ್ರೀನಿವಾಸಪುರ ಪಟ್ಟಣದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಮಹಿಳೆ ಶ್ರೀನಿವಾಸಪುರ-ಕೋಲಾರ ರಸ್ತೆಯಲ್ಲಿನ ಮುದುವಾಡಿ ಬಳಿಯ ನಾಯಕರಹಳ್ಳಿ-ತೊಂಡಾಲದ ಖಾಸಗಿ ಜಮೀನಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಶವವಾಗಿ ಇಂದು ಪತ್ತೆಯಾಗಿದೆ.ಸುಟ್ಟು ಕರಕಲರಾಗಿರುವ ಮಹಿಳೆಯನ್ನು ಶೊಭಾ(30)ಎಂದು ಗುರುತಿಸಲಾಗಿ ಆಕೆ ಮುಳಬಾಗಿಲು ತಾಲೂಕಿನವರಾಗಿದ್ದು ಆಂಧ್ರದ ವ್ಯಕ್ತಿಗೆ ಮದುವೆ ಮಾಡಿಕೊಟ್ಟಿದ್ದು ನಂತರದಲ್ಲಿ ವಿವಾದವಾಗಿ ಆಕೆ ಮಕ್ಕಳೊಂದಿಗೆ ಶ್ರೀನಿವಾಸಪುರದ ವೆಂಕಟೇಶ್ವರ ಬಡಾವಣೆಯಲ್ಲಿ ವಾಸಿಸುತ್ತಿದ್ದರು ಜೀವನ ಪೋಷಣೆಗೆ ಪಟ್ಟಣದ ಪೊಸ್ಟ್ ಆಫಿಸ್ ಬಳಿ ಲಕ್ಷ್ಮೀ ಹರ್ಬಲ್ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದರು ಎನ್ನುತ್ತಾರೆ,ಈಕೆಯ ಸಾವಿನ ಹಿಂದೆ ಹಲವಾರು ಅನುಮಾನಗಳು ವ್ಯಕ್ತವಾಗಿದ್ದು ಮೃತ ಮಹಿಳೆ ಬಳಸುತ್ತಿದ್ದರು ಎನ್ನಲಾದ ಮೊಬೈಲ್ ಹಾಗು ದ್ವಿಚಕ್ರವಾಹನ ಶ್ರೀನಿವಾಸಪುರ ಪಟ್ಟಣಕ್ಕೆ ಹೊಂದಿಕೊಂಡಿರುವ ಅವಲಕುಪ್ಪ ಗ್ರಾಮದ ಹೊಲದಲ್ಲಿ ಪತ್ತೆಯಾಗಿರುವ ಹಿನ್ನಲೆಯಲ್ಲಿ ಮಹಿಳೆಯನ್ನು ಅವಲಕುಪ್ಪದ ಬಳಿ ಹತ್ಯೆ ಮಾಡಿ ತೊಂಡಾಲದ ಬಳಿಯ ಜಮೀನಿಗೆ ಸಾಗಿಸಿ ಸುಟ್ಟುಹಾಕಿರಬಹುದು ಎಂಬ ಶಂಕೆ ವ್ಯಕ್ತಪಡಿಸಲಾಗಿದೆ, ಇದರ ಅದಾರದಂತೆ ಪ್ರಕರಣವನ್ನು ಶ್ರೀನಿವಾಸಪುರ ಪೋಲಿಸ್ ಠಾಣೆಯಲ್ಲಿ ದಾಖಲು ಮಾಡಲಾಗಿದ್ದು ಈ ಸಂಬಂದ ಅನುಮಾನಸ್ಪದ ಮೇಲೆ ಶ್ರೀನಿವಾಸಪುರ ತಾಲೂಕಿನ ಚಿರುವನಹಳ್ಳಿಯ ರಮೇಶ್…
ನ್ಯೂಜ್ ಡೆಸ್ಕ್: ಕನ್ನಡದ ಡಾ.ರಾಜ್ ಅಣ್ಣಾವ್ರ ಮೊಮ್ಮಗ,ರಾಘವೇಂದ್ರ ರಾಜ್‌ಕುಮಾರ್ ಅವರ ಕಿರಿಯ ಪುತ್ರ ಯುವ ರಾಜ್‌ಕುಮಾರ್ ನಟನೆಯ ಮೊದಲ ಸಿನಿಮಾ ‘ಯುವ’ ಬಗ್ಗೆ ಸಿನಿಪ್ರೇಮಿಗಳಿಗೆ ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಯುವ ಸಿನಿಮಾದ ಟೈಟಲ್ ಟೀಸರ್ ಬಿಡುಗಡೆಯಾಗಿ ಸಿಕ್ಕಾಪಟ್ತೆ ವೈರಲ್ ಆಗಿದೆ,ಇದರಲ್ಲಿ ಯುವ ರಾಜ್‌ಕುಮಾರ್ ಅವರ ಮಾಸ್ ಲುಕ್‌ಗೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಮೊದಲು ‘ಯುವ’ ಚಿತ್ರಕ್ಕೆ ತಮಿಳು, ಮಲಯಾಳಂನ ಖ್ಯಾತ ನಟಿಯರು ನಾಯಕಿಯಾಗಲಿದ್ದಾರೆ ಎನ್ನಲಾಗುತ್ತಿತ್ತು. ಮಾತುಗಳು ಕೇಳಿಬರುತಿತ್ತು ಈ ಎಲ್ಲಾ ಸುದ್ದಿಗಳಿಗೆ ಬ್ರೇಕ್ ಹಾಕಲಾಗಿದೆ ಚಿತ್ರಕ್ಕೆ ಅಚ್ಚ ಕನ್ನಡತಿ, ‘ಕಾಂತಾರ’ ಚಲುವೆ ಸಪ್ತಮಿ ಗೌಡ, ನಾಯಕಿಯಾಗಿ ಆಯ್ಕೆಯಾಗಿದ್ದಾರೆ.ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನ ಸಿನಿಮಾಕಾಂತಾರ ಸಿನಿಮಾದಲ್ಲಿ…..ಮುದ್ದಾದ ಮಾಯಾಂಗಿಮೌನದ ಸಾರಂಗಿಮೋಹಕ ಮದರಂಗಿಕನ್ನ ಹಾಕಿದೆ ಮುಂಗುರುಳ ಸೋಕಿ…. ಎಂದು ಯುವಕರ ಹೃದಯ ಗೆದ್ದಿದ ಸಿಂಗಾರ ಸಿರಿ ಅಂಗಾಲಿನಲೆ ಬಂಗಾರ ಅಗೆದ ಮಾಯೆಸಪ್ತಮಿ ಗೌಡ,ನಾಯಕಿಯಾಗಿರುವ ಬಗ್ಗೆ ಅಧಿಕೃತ ಆಯ್ಕೆಯನ್ನು ಚಿತ್ರತಂಡ ಸೋಮವಾರ ಅನೌನ್ಸ್ ಮಾಡಿದೆ. ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶ ಮಾಡಿರುವ ನಟಿ…