ನ್ಯೂಜ್ ಡೆಸ್ಕ್: ಕರ್ನಾಟಕ ರಾಜ್ಯ ಸೇರಿದಂತೆ ದೇಶಾದ್ಯಂತ ಹೊಸ ಸೋಂಕಿನ ಆರ್ಭಟ ಆರಂಬವಾಗಿದೆ. ಕೋವಿಡ್ ಯುಗ ಮುಕ್ತಾಯವಾಯ್ತು ಎಂದು ನಿಟ್ಟುಸಿರುಬಿಡುವ ಹೊತ್ತಿನಲ್ಲಿ H3N2 ಇನ್ಫ್ಲುಯೆಂಜಾ ಹಾವಳಿ ಶುರುವಾಗಿದೆ. ಕಳೆದ ಒಂದು ತಿಂಗಳಿಂದ ದೇಶಾದ್ಯಂತ ಸಾವಿರಾರು H3N2 ಪ್ರಕರಣಗಳು ವರದಿಯಾಗಿವೆ. ಕರ್ನಾಟಕದಲ್ಲೂ ಸುಮಾರು 26 ಪ್ರಕರಣಗಳು ದಾಖಲಾಗಿವೆ. ಹಾಗಾದ್ರೆ ಏನಿದು H3N2? ಎನ್ನುವ ಪ್ರಶ್ನೆ ಜನರನ್ನು ಕಾಡುತ್ತಿದೆ ಈ ಹಿಂದೆ ದೇಶಾದ್ಯಂತ ಕಾಡಿದ್ದ H1N1 ವೈರಾಣುವಿನ ರೀತಿಯಲ್ಲೇ ರೂಪಾಂತರಿ ಸೋಂಕು ಆಗಿರಬಹುದಾ? ಈ ಕುರಿತ ಸಮಗ್ರ ವಿವರ ಇಲ್ಲಿದೆ.ಏನಿದು H3N2 ಸೋಂಕು?ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಹೇಳುವಂತೆ ಜ್ವರಕ್ಕೆ ಕಾರಣವಾಗುವಂತ ವೈರಾಣು.ಈ ವೈರಾಣುವಿನ ಒಂದು ಉಪ ರೂಪಾಂತರಿ ಅಪಾಯಕಾರಿಯಾಗಿದ್ದು, ರೋಗಿಯು ಆಸ್ಪತ್ರೆಗೆ ದಾಖಲಾಗಬೇಕಾದ ಪರಿಸ್ಥಿತಿ ನಿರ್ಮಾಣ ಆಗುತ್ತೆ.ಐಸಿಎಂಆರ್ ಪ್ರಕಾರ ಆಸ್ಪತ್ರೆಗೆ ದಾಖಲಾಗುವ ಪ್ರತಿ ನೂರು H3N2 ರೋಗಿಗಳ ಪೈಕಿ ಶೇ. 92 ಮಂದಿಗೆ ಜ್ವರ ಇರುತ್ತೆ. ಶೇ. 86ರಷ್ಟು ಮಂದಿಗೆ ಕಫದ ಸಮಸ್ಯೆ ಬರುತತದೆ ಶೇ. 27ರಷ್ಟು ಮಂದಿಗೆ ಉಸಿರಾಟದ ಸಮಸ್ಯೆ…
Author: Srinivas_Murthy
ನ್ಯೂಜ್ ಡೆಸ್ಕ್: ಬೆಂಗಳುರು ನಗರದ ಕೆಆರ್ಪುರಂ ನಿಂದ ವೈಟ್ಫೀಲ್ಡ್ ಮಧ್ಯೆ ಸಂಚರಿಸಲಿರುವ ನಮ್ಮ ಮೆಟ್ರೋ ಸುರಕ್ಷಿತವಾಗಿ ಸಂಚರಿಸಲು ಯೋಗ್ಯವಾಗಿದೆ ಎಂದು ಸಿಎಂಆರ್ಎಸ್ ಧೃಡಿಕರಿಸಿದೆ ಎಂದು ಬಿಎಂಆರ್ಸಿಎಲ್ ಹೇಳಿಕೆ ನೀಡಿದೆ.ಕೆಆರ್ಪುರಂ ಮತ್ತು ವೈಟ್ಫೀಲ್ಡ್ ನಡುವಿನ ರಸ್ತೆ ಮಾರ್ಗದ ಓಡಾಟ ಸದಾ ಟ್ರಾಫಿಕ್ ಬಿಝಿಯಾಗಿರುತ್ತದೆ. ಒಮ್ಮೆ ಈ ಮಾರ್ಗದಲ್ಲಿ ಹೋದವರು ಮತ್ತೆ ಆ ಮಾರ್ಗದಲ್ಲಿ ವಾಪಸ್ಸು ಬರಲು ಸಾಕಪ್ಪ ಸಾಕು ಎನ್ನುತ್ತಾರೆ ವಿಶೇಷವಾಗಿ ಕೋಲಾರ-ಚಿಂತಾಮಣಿ ಭಾಗದ ಜನರು ಕೊಂಚ ಹೆಚ್ಚು ಒಡಾಡುವ ಈ ಮಾರ್ಗದಲ್ಲಿ ಮೆಟ್ರೋ ರೈಲು ಒಡಾಡಲು ಎಲ್ಲವೂ ಸಿದ್ದಮಾಡಿಕೊಳ್ಳಲಾಗಿದೆ ಜನರ ಒಡಾಟ ಪ್ರಾರಂಭವಾಗ ಬೇಕು ಅಷ್ಟೆ.ಈ ಮೆಟ್ರೋ ಲೈನ್ ಸುರಕ್ಷಿತವಾಗಿ ಸಂಚರಿಸಲು ಯೋಗ್ಯವಾಗಿದೆ ಎಂದು ಮೆಟ್ರೋ ರೈಲ್ ಸೇಫ್ಟಿ ಸಂಸ್ಥೆ (CMRS) ಧೃಡಪಡಿಸಿದೆ ಎಂದು ಬೆಂಗಳೂರು ಮೆಟ್ರೋ ರೇಲ್ ಕಾರ್ಪೋರೇಶನ್ (BMRCL) ಹೇಳಿದೆ. ರೈಲು ಸಂಚಾರಕ್ಕೆ ಚಾಲನೆ ನೀಡಲು ದಿನಾಂಕ ನಿಗದಿಯಾಗಬೇಕು ಅಷ್ಟೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.ಈ ಬಗ್ಗೆ ಸಿಎಂಆರ್ಎಸ್ ಅಭಯ ಕುಮಾರ್ ರೈ ಅವರು ಮಾಹಿತಿ ನೀಡಿ ಕೆಆರ್ ಪುರಂ-ವೈಟ್ಫೀಲ್ಡ್…
ನ್ಯೂಜ್ ಡೆಸ್ಕ್:ಮದುವೆ ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖ ಘಟ್ಟವಾಗಿರುತ್ತದೆ, ಅಂತಹ ಅದ್ಭುತಕ್ಕೆ ಸಾಕ್ಷಿಕರಿಸಲು ಮದುವೆ ಸಮಾರಂಭಕ್ಕೆ ಬಂಧುಗಳನ್ನು,ಆತ್ಮೀಯರನ್ನು,ಸ್ನೇಹಿತರು ಹೀಗೆ ಯಾರೆನೆಲ್ಲ ಕರೆಯಲು ಅವಕಾಶ ಇರುತ್ತದೋ ಅವರನ್ನು ಕರೆಯುವುದು ಸಾಮನ್ಯಇನ್ನು ಮದುವೆಯ ಆಮಂತ್ರಣ ನೀಡಲು ಬೈಕ್ ಕಾರ್ ಬಸ್ಸು ಊರಲ್ಲಾದರೆ ನಡೆದಾಡಿಕೊಂಡು ಹೋಗುವುದು ಸಾಮನ್ಯ ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಸಹೋದರನ ಮದುವೆ ಆಮಂತ್ರಣ ನೀಡಲು ಹೆಲಿಕಾಪ್ಟರ್ ಬಳಸಿಕೊಂಡ ಕಥೆಯಿದು.ಮೊದಲೆಲ್ಲ ಕಾಲ್ನಡಿಗೆ ಬಂಡಿ, ಅಥಾವ ಸೈಕಲ್ ನಲ್ಲಿ ಹೋಗುತ್ತಿದ್ದರು ಬದಲಾದ ಕಾಲಘಟ್ಟದಲ್ಲಿ,ಸಂಬಂಧಿಕರಿಗೆ ಪತ್ರಿಕೆಗಳನ್ನು ತಲುಪಿಸಲು ಬಸ್ಸು, ಸ್ವಂತ ದ್ವಿಚಕ್ರ ವಾಹನ ಕಾರು,ಬಾಡಿಗೆ ಕಾರು, ವಿವಿಧ ಸಾರಿಗೆ ಬಳಸಿಕೊಂಡು ಇನ್ನೂ ದೂರ ಇರುವಂತವರಿಗೆ ವಾಟ್ಸಾಪ್ ಮೂಲಕ ಕೊರಿಯರ್,ಅಂಚೆ ಮೂಲಕ ಮದುವೆ ಕಾರ್ಡ್ ಗಳನ್ನು ಕಳುಹಿಸುವುದು ಸಾಮನ್ಯ ಸಂಗತಿಯಾಗಿದೆ. ಆದರೆ ಹೈದರಾಬಾದ್ ಉದ್ಯಮಿಯೊಬ್ಬ ವಿನೂತನವಾಗಿ ಆಲೋಚಿಸುವ ಮೂಲಕ ಹೀಗೂ ಮದುವೆ ಆಮಂತ್ರಣದ ಪತ್ರಿಕೆ ನೀಡಬಹುದು ಎಂದು ಹೊಸ ಟ್ರೆಂಡ್ ಹುಟ್ಟುಹಾಕಿದ್ದಾನೆ. ತನ್ನ ಸಹೋದರನ ಮದುವೆ ಪತ್ರಿಕೆಗಳನ್ನು ಹಂಚಲು ಹೆಲಿಕಾಪ್ಟರ್ ಬುಕ್ ಮಾಡಿ ಅದರಲ್ಲಿ ತೆರಳಿ ಬಂಧು ಮಿತ್ರರಿಗೆ…
ಶ್ರೀನಿವಾಸಪುರ:ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತಮಟೆ ಕಲಾವಿದ ನಾಡೋಜ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಅವರನ್ನು ಸೋಮವಾರ ಪಟ್ಟಣದಲ್ಲಿ ಅದ್ದೂರಿಯಾಗಿ ಸನ್ಮಾನಿಸಲು ಸಮಾನ ಮನಸ್ಕರ ಸಾಂಸ್ಕೃತಿಕ ವೇದಿಕೆ ಸಜ್ಜಾಗಿದೆ ಸೋಮವಾರ ತಾಲೂಕು ಕಛೇರಿಯ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಿರುವುದಾಗಿ ದಲಿತ ಮುಖಂಡರು ತಿಳಿಸಿದರು.ಪಿಎಲ್ಡಿ ಬ್ಯಾಂಕ್ ಸಭಾಂಗಣದಲ್ಲಿ ಸಮಾನ ಮನಸ್ಕರ ಸಾಂಸ್ಕೃತಿಕ ವೇದಿಕೆ ವತಿಯಿಂದ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ. ಶ್ರೀನಿವಾಸನ್ ಮಾತನಾಡಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಅವರನ್ನು ಕೇಂದ್ರ ಸರ್ಕಾರ ಗುರುತಿಸಿ ಪ್ರಶಸ್ತಿ ನೀಡಿರುವುದಕ್ಕೆ ಹೆಮ್ಮೆಯ ವಿಚಾರವಾಗಿದ್ದು ತಮ್ಮ ಬಾಲ್ಯದಿಂದಲೇ ತಮಟೆ ವಾದ್ಯ ಅಭ್ಯಾಸ ಮಾಡುತ್ತ ವಿಶೇಷ ಕೌಶಲ್ಯವನ್ನು ಪಡೆದು ನಮ್ಮ ರಾಜ್ಯ ದೇಶ ಅಲ್ಲದೆ ವಿದೇಶಗಳಿಗೆ ತೆರಳಿ ತಮಟೆ ವಾದ್ಯದ ಸದ್ದನ್ನು ಕೇಳಿಸಿದ್ದಾರೆ ಇಂತಹ ಮಹಾನ್ ಕಲಾವಿದ ತಾಲೂಕಿನ ಅಳಿಯರಾಗಿದ್ದು ಅವರನ್ನು ತಾಲ್ಲೂಕಿಗೆ ಕರೆತಂದು ಅಭಿನಂದನೆ ಸಲ್ಲಿಸಿ ಅದ್ದೂರಿಯಾಗಿ ಗೌರವಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ತಾಲೂಕಿನ ಕಲಾವಿದರು,ಕವಿಗಳು,ಪ್ರಗತಿಪರ ಚಿಂತಕರು,ಸಾಹಿತಿಗಳು,ವಿದ್ಯಾರ್ಥಿಗಳು,ಶಿಕ್ಷಕರು, ಕಲಾಭಿಮಾನಿಗಳು, ಕನ್ನಡಪರ , ರೈತಪರ ಸಂಘಟನೆಗಳು, ಅಲ್ಪಸಂಖ್ಯಾತ ಹಾಗೂ ದಲಿತ…
ಶ್ರೀನಿವಾಸಪುರ:ಸಣ್ಣ ಪುಟ್ಟ ರೈತರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ ಎಂದುಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ರೈತರು ಇಂದು ಶ್ರೀನಿವಾಸಪುರದ ಅರಣ್ಯ ಇಲಾಖೆಯ ಕಚೇರಿ ಮುಂದೆ ಧರಣಿ ನಡೆಸಿ ಪ್ರತಿಭಟಿಸಿದರು. ಐವತ್ತು ಅರವತ್ತು ವರ್ಷಗಳ ಹಿಂದೆ ಖರೀದಿ ಮಾಡಿ ಸಾಗುವಳಿ ಮಾಡುತ್ತಿರುವ ಸಣ್ಣ ಪುಟ್ಟ ರೈತರ ಜಮೀನುಗಳನ್ನು ಪದೇ ಪದೇ ಸೆಟಲೈಟ್ ಸರ್ವೆ ನೆಪದಲ್ಲಿ ಗುರುತು ಹಾಕಿ ಅರ್ದ ಎಕರೆ ಮೂಕ್ಕಾಲು ಎಕರೆ ಬಿಡಬೇಕು ಎಂದು ತೊಂದರೆ ನೀಡುತ್ತಿದ್ದಾರೆ ಆರೋಪಿಸಿದರು.ದಶಕಗಳ ಹಿಂದೆಯೆ ಅರಣ್ಯ ಇಲಾಖೆ ತಮ್ಮ ಅರಣ್ಯ ಭೂಮಿಯನ್ನು ಗಡಿ ಗುರುತು ಮಾಡಿ ಕಲ್ಲು ನೆಟ್ಟಿದ್ದರು ಈಗ ಮತ್ತೆ ಹೊಸದಾಗಿ ಸೆಟಲೈಟ್ ಸರ್ವೆ ಹೆಸರಿನಲ್ಲಿ ಕಿರುಕಿಳ ನೀಡುತ್ತಿದ್ದಾರೆ ಎಂದು ದೂರಿದ ರೈತರು ಇತ್ತಿಚಿಗೆ ಕಾಡು ಪ್ರಾಣಿಗಳಿಂದ ಆಗುತ್ತಿರುವ ಉಳಪಟಗಳಿಂದ ರೈತರು ನಷ್ಟಕ್ಕೆ ಒಳಗಾಗಿರುವ ಬಗ್ಗೆ ಅರಣ್ಯ ಇಲಾಖೆಯವರು ಬೇಜವಾಬ್ದಾರಿತನ ತೊರುತ್ತಿದ್ದಾರೆ ಎಂದರು.ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯರೈತ ಸಂಘದ ಪ್ರತಿಭಟನೆ ಮಾಹಿತಿ ಇದ್ದರು ಅರಣ್ಯ ಇಲಾಖೆ…
ಶ್ರೀನಿವಾಸಪುರ:ಶ್ರೀನಿವಾಸಪುರ ತಾಲೂಕು ಕೇಂದ್ರಿಕೃತವಾಗಿ ವಿಭಜಿತ ಕೋಲಾರ ಜಿಲ್ಲೆಯಲ್ಲಿ ಮಾವಿನ ಕಂಪು ಸೂಸುತ್ತಿದೆ.ಮೈತುಂಬ ಹೂ ತುಂಬಿಕೊಂಡಿದ್ದು ಮಾವಿನ ಮರಗಳು ಪ್ರಾಕೃತಿಕವಾಗಿ ಸುಂದರವಾಗಿ ಕಾಣ ಸಿಗುತ್ತಿದೆ ಇದು ಮಾವು ಬೆಳೆದ ರೈತರ ಮನದಲ್ಲೂ ಸಂತಸ ತುಂಬಿದ್ದು ಭರ್ಜರಿ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ.ಶ್ರೀನಿವಾಸಪುರ ಎಂದರೆ ಮಾವಿನ ಮಡಿಲು ಎಂದೇ ಖ್ಯಾತಿ, ಇಲ್ಲಿ ಬೆಳೆಯುವ ಮಾವು ದೇಶ ವಿದೇಶಗಳಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿ ಬೆಳೆಯುವಂತ ಬಾದಾಮಿ,ರಾಜಗೀರಾ, ಬೇನಿಷಾ, ನೀಲಂ, ತೋತಾಪುರಿ, ಸೇಂದೂರಾ/ರಸಪೂರಿ ಇನ್ನು ಹಲವು ತಳಿಯ ಮಾವಿನ ಹಣ್ಣುಗಳು ದೇಶದಾಚೆ ವಿದೇಶಗಳಿಗೆ ರಫ್ತಾಗುತ್ತಿದೆ ಈ ಭಾಗದ ಜನರ ಜೀವನಾಡಿಯಾಗಿರುವ ಮಾವು ರೈತರ ಬದುಕು ಹಸನಾಗಿಸಿತ್ತು.ಭರ್ಜರಿ ಹೂ ಬಿಟ್ಟ ಮಾಮರಕೆಲವೊಂದು ಮರಗಳಲ್ಲಿ ಎಲೆಗಳೇ ಕಾಣದ ರೀತಿಯಲ್ಲಿ ಹೂ ಬಿಟ್ಟಿರುವ ಕಾರಣ ಮಾವು ಬೆಳೆಗಾರರ ನಿರೀಕ್ಷೆ ಹೆಚ್ಚಾಗಿದೆ. ಕಳೆದ ವರ್ಷ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಬಿದ್ದ ಮಳೆಯಿಂದ ಭೂಮಿ ತಂಪಾಗಿದೆ ಮಾವಿನ ಮರಗಳು ಫಲವತ್ತತೆ ಕಂಡಿರುವ ಹಿನ್ನಲೆಯಲ್ಲಿ ಮಾವಿನ ಮರ ಸೊಂಪಾಗಿ ಮೈತುಂಬ ಹೂ ಮುಡಿದು ನಿಂತಿವೆ. ವರ್ಷಕ್ಕೆ ಒಂದೇ…
ನ್ಯೂಜ್ ಡೆಸ್ಕ್:ಪುರುಷ ಧೋರಣೆಯ ಪ್ರಪಂಚದಲ್ಲಿ ನ್ಯಾಯವಾದಿಯೊಬ್ಬ ಜೀವನ ಸಂಗಾತಿಯನ್ನು ಹೊರಗಿನ ಪ್ರಪಂಚದಿಂದ ದೂರವಾಗಿ ಹೊರಗೆ ಕಳಿಸದೆ 14 ವರ್ಷ ಕಾಲ ಗೃಹ ಬಂಧನದಲ್ಲಿ ಇರಿಸುವ ಮೂಲಕ ನರಕಯಾತನೆ ತೊರಿಸಿರುವ ಘಟನೆ ಆಂಧ್ರಪ್ರದೇಶದಲ್ಲಿ ಬೆಳಕಿಗೆ ಬಂದಿದೆ.!14 ವರ್ಷ ದಾಂಪತ್ಯದಲ್ಲಿ ಗೃಹಣಿ ಸುಪ್ರಿಯಾಗೆ ಗಂಡನ ಮನೆ ಬಿಟ್ಟು ಬೇರೊಂದು ಪ್ರಪಂಚವೇ ಅರಿಯದ ಪರಿಸ್ಥಿತಿ ಕಥೆ ಕೇಳಿದವರು ಬೆಚ್ಚಿ ಬೀಳುವಂತಾಗಿದೆ.ಆಕೆಯನ್ನು ವಿವಾಹವಾಗಿರುವ ಶ್ಯಾಡಿಸ್ಟ ಗಂಡ ಆಂಧ್ರಪ್ರದೇಶದ ವಿಜಯನಗರದ ಗೋದಾವರಿ ಮಧುಸೂದನ್ ಎಂದು ಗುರುತಿಸಲಾಗಿದೆ.ಆಂಧ್ರದ ಪುಟ್ಟಪುರ್ತಿ ಮೂಲದ ಸಾಯಿ ಸುಪ್ರಿಯಾ ಎಂಬಾಕೆಯನ್ನು ಗೋದಾವರಿ ಮಧುಸೂದನ್ ಎಂಬ ವಕೀಲ 2008 ರಲ್ಲಿ ವಿವಾಹವಾಗಿದ್ದು ಅವರಿಗೆ ಇಬ್ಬರು ಮಕ್ಕಳಿದ್ದಾರೆ.ಮಧುಸೂದನ್ ಅವರ ತಾಯಿ ಗೋದಾವರಿ ಉಮಾಮಹೇಶ್ವರಿ ಮತ್ತು ಕಿರಿಯ ಸಹೋದರ ದುರ್ಗಾಪ್ರಸಾದ್ ಅವರೊಂದಿಗೆ ವಾಸಿಸುತ್ತಿದ್ದು,ಮದುವೆಯಾಗಿ ಮೂರು ವರ್ಷಗಳ ಚನ್ನಾಗಿಯೇ ಇದ್ದ ಮಧುಸೂದನ್-ಸುಪ್ರಿಯಾ ದಂಪತಿ ನಂತರದಲ್ಲಿ ಅತ್ತೆ ಮನೆಯವರ ಮಾನಸೀಕ ಕಿರುಕುಳ ನಿಂದನೆಯ ಮಾತುಗಳಿಂದ ಸುಪ್ರಿಯಾರವರನ್ನು ಮನೆಯಿಂದ ಹೊರಗೆ ಕಳುಹಿಸದೆ ಆಕೆಗೆ ಭಾಹ್ಯ ಪ್ರಪಂಚದ ಸಂಪರ್ಕವನ್ನು ಕಡಿತ ಗೊಳಿಸಿ ಮನೆಗೆ ಸೀಮಿತವಾಗಿಸಿದ ಮಧುಸೂದನ್…
ನ್ಯೂಜ್ ಡೆಸ್ಕ್: ಶೃಂಗಾರ ಮತ್ತು ವಯ್ಯಾರದ ನೃತ್ಯನಟಿ ತನ್ನ ಮಾದಕ ನೃತ್ಯಸೌಂದರ್ಯದಿಂದ 80-90 ರ ದಶಕದಲ್ಲಿ ಯುವಜನತೆಯ ನಿದ್ದೆಗೆಡಿಸಿದ್ದ ಹಿರಿಯ ನಟಿ ಜಯಮಾಲಿನಿ ತನ್ನ ಮಗನ ಮದುವೆ ಮಾಡಿದ್ದಾರೆ.ದಕ್ಷಿಣ ಭಾರತದ ಚಲನ ಚಿತ್ರ ರಂಗವನ್ನು ತಮ್ಮ ಶೃಂಗಾರ ಹಾಗು ವಯ್ಯಾರದ ನೃತ್ಯದಿಂದ 80-90 ರ ಕಾಲದ ಸ್ಟಾರ್ ಬಹುತೇಕ ಹೀರೋಗಳೊಂದಿಗೆ ಐಟಂ ಸಾಂಗ್ ಗಳಲ್ಲಿ ಹೆಜ್ಜೆ ಹಾಕಿದ ಅವರು 500 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು,ಅಭಿಮಾನಿಗಳ ಮೇಲೆ ಅವರ ಪ್ರಭಾವ ಯಾವ ರಿತಿ ಇತ್ತು ಎಂದರೆ ಜಯಮಾಲಿನಿ ಅಥಾವ ಅವರ ಹಿರಿಯ ಸಹೋದರಿ ಜ್ಯೋತಿಲಕ್ಷ್ಮಿ ಶೃಂಗಾರ ನೃತ್ಯ ಇದ್ದರೆ ಸಾಕು ಸಿನಿಮಾ ಬ್ಲಾಕ್ ಬಾಸ್ಟರ್ ಹಿಟ್ ಆಗುತಿತ್ತು.ತೆಲಗು ಚಿತ್ರರಂಗದ ದಿವಂಗತ ಎನ್.ಟಿ.ಆರ್ ನಟನೆಯ ಗಜದೊಂಗ ಸಿನಿಮಾದ “ನಿ ಇಲ್ಲು ಬಂಗಾರಮ್ ಕಾನಿ ಹಾಡು”, ವೇಟಗಾಡು ಸಿನಿಮಾದ “ಪುಟ್ಟಿಟ್ಟೋಂಳ್ಳೂ ತರಮೇಸಾರು” ಹಾಡು, ಸೂಪರ್ ಸ್ಟಾರ್ ಕೃಷ್ಣ ಜೊತೆ ನಟಿಸಿದ ಸೂಪರ್ ಹಿಟ್ ಶೃಂಗಾರ ಗೀತೆಗಳು ಕನ್ನಡ ಸಾಹಸಸಿಂಹ ಡಾ.ವಿಷ್ಣುವರ್ಧನ್ ಜೊತೆಗಿನ ವಯ್ಯಾರದ ಹಾಡುಗಳು…
ಬೆಂಗಳೂರು: ವೀಸಾ ಅವಧಿ ಮುಗಿದಿರುವ 600ಕ್ಕೂ ಹೆಚ್ಚು ವಿದೇಶಿ ಪ್ರಜೆಗಳು ಬೆಂಗಳೂರಿನಲ್ಲಿ ಇರುವ ಬಗ್ಗೆ ಗುಪ್ತಚರ ಗುರುತಿಸಿದೆ.ಅವರೆಲ್ಲರನ್ನೂ ಅವರವರ ದೇಶಗಳಿಗೆ ಕಳುಹಿಸಲು ಗೃಹ ಇಲಾಖೆ ಕಾರ್ಯೋನ್ಮುಖವಾಗಿದೆ. ಉತ್ತರ ಪ್ರದೇಶದ ಯುವಕನೊಂದಿಗೆ ಪಾಕಿಸ್ತಾನಿ ಯುವತಿ ವಿವಾಹವಾದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದ ನಂತರ ನಗರದ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದ್ದು ಪಾಕಿಸ್ತಾನಿ ಯುವತಿಯನ್ನು ಅವರ ದೇಶಕ್ಕೆ ಕಳುಹಿಸಿದ ರೀತಿಯಲ್ಲಿಯೇ,ನಗರದಲ್ಲಿ ಸರಗಳ್ಳತನ ಇನ್ನಿತರೆ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ಆಫ್ರಿಕಾ ದೇಶಗಳ ಜನರನ್ನು ವಾಪಸ್ ಕಳುಹಿಸುವ ಪ್ರಯತ್ನ ನಡೆದಿದೆ ಎಂದು ನಗರ ಪೊಲೀಸರು ಬಹಿರಂಗಪಡಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಬೆಂಗಳೂರಿನಲ್ಲಿ ಅಕ್ರಮವಾಗಿ ಇದ್ದ 400 ಕ್ಕೂ ಹೆಚ್ಚು ವಿದೇಶಿಯರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ, ಅವರಲ್ಲಿ ಕೆಲವರು ನ್ಯಾಯಾಂಗ ಬಂಧನದಲ್ಲಿದ್ದಾರೆ ಮತ್ತು ಇತರರು ಜಾಮೀನಿನ ಮೇಲೆ ಇದ್ದಾರೆ.ಇದರಲ್ಲಿ 34 ಜನರನ್ನು ಅವರ ದೇಶಗಳಿಗೆ ವಾಪಸ್ ಕಳುಹಿಸಲಾಗಿದೆ..ಪೊಲೀಸ್ ಮೂಲಗಳ ಪ್ರಕಾರ, ಆಫ್ರಿಕಾ,ನೈಜೀರಿಯಾ ಮತ್ತು ಬಾಂಗ್ಲಾದೇಶದ ಜನರು ಇದ್ದಾರೆ. ಇನ್ನೂ 50 ಜನರನ್ನು ಬಂಧಿಸಿ ಬೆಂಗಳೂರಿನ ಹೊರವಲಯದ ನೆಲಮಂಗಲ ಸೊಂಡೆಕೊಪ್ಪದ ಡಿಟೆನ್ಷನ್…
ಶ್ರೀನಿವಾಸಪುರ: ಸಾಹಿತ್ಯದಿಂದ ಸಮಾಜದಲ್ಲಿ ಸೌಹಾರ್ದತೆ ಮಾನವೀಯತೆ ಬೆಳೆಯಲು ಸಹಕಾರಿಯಾಗಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗೋಪಾಲಗೌಡ ಹೇಳಿದರು.ಅವರು ಸುಗಟೂರಿನ ಧರ್ಮೇಶ್ ಗೆಳೆಯರ ಬಳಗದ ವತಿಯಿಂದ ಸಾಹಿತಿ ಪನಸಮಾಕನಹಳ್ಳಿ ಚೌಡರೆಡ್ದಿಯವರಿಗೆ ಏರ್ಪಡಿಸಿದ್ದ ಧರ್ಮೇಶ್ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.ಸಾಹಿತಿ ತನ್ನ ಬದುಕು ಮತ್ತು ಬರಹದ ನಡುವೆ ಸಮನ್ವಯತೆ ಸಾಧಿಸಬೇಕು. ಸಾಹಿತ್ಯದಲ್ಲಿ ಬರೆದುಕೊಂಡಂತೆ ಜೀವನ ಮಾಡಿದಾಗ ಸಾಮಾಜಿಕ ಮನ್ನಣೆ ದೊರೆಯುತ್ತದೆ. ಅಂತಹ ಮೆಲ್ಪಂಕ್ತಿ ಹಾಕಿಕೊಂಡು ಸಾಹಿತಿ ಪನಸಮಾಕನಹಳ್ಳಿ ಚೌಡರೆಡ್ಡಿ ಸಾಗುತ್ತಿದ್ದಾರೆ.ಅವರ ಬರಹಗಳು ಸಮಾಜ ಮುಖಿಯಾಗಿ ಜೀವನೋತ್ಸಾಹ ಉಂಟುಮಾಡುತ್ತವೆ. ಅವರ ಕೃತಿಗಳಲ್ಲಿ ಮಾನವೀಯ ಮೌಲ್ಯಗಳು ಪರಿಸರ ಪ್ರೇಮ ಪ್ರಧಾನ ಅಂಶವಾಗಿ ಕಂಡುಬರುತ್ತದೆ ಎಂದರು.ಅವರ ನಾಲ್ಕು ದಶಕಗಳ ಸಾಹಿತ್ಯ,ಶಿಕ್ಷಣ ಹಾಗೂ ಪತ್ರಿಕಾ ಕ್ಷೇತ್ರದ ಸೇವೆಯನ್ನು ಗುರುತಿಸಿ ಇಂದು ಪ್ರಶಸ್ತಿ ನೀಡಲಾಗಿದೆ.ಇದೊಂದು ಬಹುದೊಡ್ದ ಸಾಧನೆಯಾಗಿದೆ ಮತ್ತು ಅರ್ಹ ವ್ಯಕ್ತಿತ್ವಕ್ಕೆ ಸಂದ ಗೌರವವಾಗಿದೆ. ಗೆಳೆಯರ ಬಳಗದ ಪ್ರಥಮ ಪ್ರಶಸ್ತಿ ತಾಲ್ಲೂಕಿಗೆ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.ವೆಂಕಟೇಶ್ವರ ಗ್ರಾಮೀಣ ಆರೋಗ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಗು…