Author: Srinivas_Murthy

ಶ್ರೀನಿವಾಸಪುರ:ಶ್ರೀನಿವಾಸಪುರ ತಾಲೂಕಿನಲ್ಲಿ ದಶಕಗಳಿಂದ ನಡೆದು ಬರುತ್ತಿರುವ ಜಿಡ್ಡು ಗಟ್ಟಿರುವ ರಾಜಕಾರಣಕ್ಕೆ ತಿಲಾಂಜಲಿ ಹೇಳಿ ಹೊಸ ರಾಜಕೀಯ ಶಕ್ತಿಗೆ ಅವಕಾಶ ಮಾಡಿಕೊಡಿ ಎಂದು ಗುಂಜೂರುಶ್ರೀನಿವಾಸರೆಡ್ದಿ ಹೇಳಿದರು ಅವರು ಶ್ರೀನಿವಾಸಪುರ ಕ್ಷೇತ್ರದಲ್ಲಿ ಚುನಾವಣಾ ತಯಾರಿ ಮಾಡಿಕೊಳ್ಳುತ್ತ ಕ್ಷೇತ್ರಾದ್ಯಂತ ಚುರುಕಾಗಿ ಒಡಾಡುತ್ತ ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೆಸ್ ಪಕ್ಷದ ಕಾರ್ಯಕರ್ತರುಗಳನ್ನು ತಮ್ಮ ಬಣಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತ ಸಂಚರಿಸುತ್ತ ಮಾತನಾಡಿದ ಅವರು ದಶಕಗಳಿಂದ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವರು ಇಲ್ಲಿನ ಜನರಿಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳನ್ನು ಕೊಡಿಸದೆ ಇರುವುದು ದುರಂತ ಎಂದರು.ಕ್ಷೇತ್ರದ ಯುವ ಸಮೂಹ ಜೀವನದ ಅವಕಾಶಕ್ಕಾಗಿ ನೂರಾರು ಮೈಲಿ ದೂರದ ಹೊರ ಊರುಗಳಿಗೆ ಅಲೆಯಬೇಕಾದಂತ ಪರಿಸ್ಥಿತಿ ಏರ್ಪಟ್ಟಿದೆ ಇದಕ್ಕೆಲ್ಲ ಅಂತ್ಯ ಹಾಡಬೇಕಿದ್ದು ಕ್ಷೇತ್ರದಲ್ಲಿ ಉದ್ಯೋಗ ಸೃಷ್ಠಿಸುವ ಕಾರ್ಖಾನೆಗಳ ಸ್ಥಾಪನೆಯಾಗಬೇಕು ಇದಕ್ಕೆ ಮೂಲಭೂತ ವ್ಯವಸ್ಥೆಗಳನ್ನು ಸಜ್ಜುಗೊಳಿಸಬೇಕಾಗಿದೆ ಎಂದ ಅವರು ನಮಗೆ ಅವಕಾಶ ನೀಡಿದರೆ ಪ್ರಾಮಾಣಿಕವಾಗಿ ಪ್ರಯತ್ನಿಸಿತ್ತೇನೆ ಎಂದರು.ರಾಜಕೀಯ ಶಕ್ತಿಯನ್ನು ಬಲಗೊಳಿಸಿಕೊಳ್ಳುತ್ತಿದ್ದಾರೆ.ತಾಲ್ಲೂಕಿನ ವಿವಿಧ ಕಾರ್ಯಕ್ರಮಗಳಲ್ಲಿ ಪ್ರತ್ಯಕ್ಷವಾಗಿ,ಪರೊಕ್ಷವಾಗಿ ಪಾಲ್ಗೋಳುತ್ತ ಕ್ಷೇತ್ರ ಸಂಚಾರದಲ್ಲಿರುವ ಗುಂಜೂರುಶ್ರೀನಿವಾಸರೆಡ್ದಿ ಹೋಳೂರು ಹೋಬಳಿ ಮಾರ್ಜೇನಹಳ್ಳಿ ಪಂಚಾಯತಿ ಬೆಸ್ತೇನಹಳ್ಳಿ ಗ್ರಾಮದ ಮುಖಂಡರಾದ ವೆಂಟಸ್ವಾಮಿ, ಸುರೇಶ,…

Read More

ನ್ಯೂಜ್ ಡೆಸ್ಕ್: ಶ್ರೀನಿವಾಸಪುರದಂತ ಸಾರಿಗೆ ವ್ಯವಸ್ಥೆಯಲ್ಲಿ ನಿರ್ಲ್ಯಕ್ಷಿತ ಹಿಂದುಳಿದ ತಾಲೂಕಿಗೆ ಬೆಂಗಳೂರಿನಿಂದ ಬರಲು ಹೋಗಲು ಇದ್ದ ಎರಡು-ಮೂರು ಖಾಸಗಿ ಸಾರಿಗೆ ಬಸ್ಸುಗಳು ಬರುತ್ತಿದ್ದದೆ ಅದು ಕಲಾಸಿಪಾಳ್ಯ ಬಸ್ ನಿಲ್ದಾಣದಿಂದ ಇಂತಹ ಕಲಾಸಿಪಾಳ್ಯ ಬಸ್ ನಿಲ್ದಾಣ ಅಭಿವೃದ್ಧಿ ಹಲವು ದಶಕಗಳಿಂದ ನನೆಗುದಿಗೆ ಬಿದ್ದಿತ್ತು,ಕಲಾಸಿಪಾಳ್ಯ ಬಸ್ ನಿಲ್ದಾಣಕ್ಕೆ ಹೋಗಲು ಜನಸಾಮನ್ಯರು ಹೆದರುತ್ತಿದ್ದರು ಬಸ್ ಮಾಲಿಕರನ್ನು ಬೆದರಿಸಿ ಅಲ್ಲಿನ ಬಸ್ ಏಜೆಂಟರು ತಾವೆ ಮಾಲಿಕರಂತೆ ಬಸ್ ಟಿಕೆಟ್ ಬುಕಿಂಗ್ ಮಾಡುತ್ತ ಸಾರ್ವಜನಿಕರೊಂದಿಗೆ ಒರಟಾಗಿ ವರ್ತನೆಮಾಡುತ್ತಿದ್ದರು ಜೊತೆಗೆ ಕನಿಷ್ಠ ಮೂಲಭೂತ ಸೌಕರ್ಯಗಳು ಇಲ್ಲ ಸ್ವಚ್ಚತೆ ಅನ್ನುವುದು ಕಾಣಸಿಗುತ್ತಿರಲಿಲ್ಲ ಮಳೆ ಬಂದರೆ ಕೆರೆಯಂತಾಗುವ ಸ್ಥಳದಲ್ಲಿ ಮನುಷ್ಯನ ಎಲ್ಲವೂ ಅಲ್ಲೆ ನಡೆಯುತಿತ್ತು ಅಲ್ಲಿನ ಕೊಳಕು ಪ್ರದೇಶದಲ್ಲಿಯೇ ಮುಗು ಮುಚ್ಚಿ ಒಡಾಟವನ್ನು ಅಷ್ಟ ಕಷ್ಟಗಳ ಅಸಹ್ಯ ದೌರ್ಜನ್ಯಗಳ ನಡು ನಡುವೆಯೇ ಜನತೆ ಸಾರ್ವಜನಿಕ ಸಾರಿಗೆಗೆ ಆಶ್ರಯಿಸಿದ್ದ ಖಾಸಗಿ ಬಸ್ಸಿಗಾಗಿ ಅನಿಭವಿಸುತ್ತಿದ್ದರು.ಶ್ರೀನಿವಾಸಪುರದಂತ ಊರುಗಳಿಗೆ ಈಗಲೆ ಬಾರದಂತ ರಾಜ್ಯ ಸರ್ಕಾರಿ ಸಾರಿಗೆ ಅಗ ಇಲ್ಲವೆ ಇರಲಿಲ್ಲ ಕಾರಣದಿಂದ ಪರ್ಯಾಯ ವ್ಯವಸ್ಥೆ ಇಲ್ಲದೆ ಕಲಾಸಿಪಾಳ್ಯದ ಬಸ್…

Read More

ನ್ಯೂಜ್ ಡೆಸ್ಕ್:ಸಂವೇದನಾಶೀಲ ಚಿಂತಕ ಹಾಗು ಹಿರಿಯ ಪತ್ರಕರ್ತ ಡಿ ಉಮಾಪತಿ ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ನೀಡುವ ‘ಡಾ. ಬಿ.ಆರ್ ಅಂಬೇಡ್ಕರ್ ದತ್ತಿ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.ವ್ಯವಸ್ಥೆಯಲ್ಲಿ ಸಾಮಾಜಿಕ,ರಾಜಕೀಯ ಮತ್ತು ಸಾಂಸ್ಕೃತಿಕ ವಲಯಗಳು ಅದೆಷ್ಟೇ ಕಲುಷಿತಗೊಂಡಿದ್ದು ಅವುಗಳ ನಡುವೆಯೇ ಇದ್ದು ಅವುಗಳನ್ನು ಮಾನವೀಯಗೊಳಿಸುವ,ನ್ಯಾಯಬದ್ಧಗೊಳಿಸುವ ಹಾಗೂ ಆ ದಿಕ್ಕಿನಲ್ಲಿ ಜನಸಮುದಾಯಗಳನ್ನು ವೈಚಾರಿಕವಾಗಿ ಜಾಗೃತ ಗೊಳಿಸುವತ್ತ ಚಳವಳಿ ಮಾದರಿಯಲ್ಲಿ ಬರೆಯುವುದು, ಬದುಕುವುದು ನೈಜ ಪತ್ರಕರ್ತನ ಗುಣಲಕ್ಷಣಗಳಾಗುತ್ತವೆ” ಎಂದು ಪತ್ರಕರ್ತರ ಸಂಘ ಹೇಳಿದೆ.ಪ್ರಶಸ್ತಿ ಮತ್ತು ಫಲಕ ಒಳಗೊಂಡಿರುವ ಪ್ರಶಸ್ತಿಯನ್ನು ಬಾಗಲಕೋಟೆ ಪತ್ರಕರ್ತ ಸುಭಾಷ್ ಹೊದ್ಲೂರು ಅವರು ಅಂಬೇಡ್ಕರ್ ಹೆಸರಿನಲ್ಲಿ ವಾರ್ಷಿಕ ಪ್ರಶಸ್ತಿಗೆ ದತ್ತಿನಿಧಿ ಸ್ಥಾಪಿಸಿದ್ದು 2021-22 ಸಾಲಿನಿಂದ ನೀಡಲಾಗುತ್ತಿದೆ ಎಂದು ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದತಗಡೂರು ತಿಳಿಸಿದ್ದಾರೆ.”ಭಾರತದ ಪತ್ರಿಕೋದ್ಯಮಕ್ಕೆ ಮತ್ತು ಪತ್ರಕರ್ತನಿಗೆ ಮೌಲಿಕ ಮಾದರಿಯೊಂದನ್ನು ಕಟ್ಟಿಕೊಟ್ಟ ಶ್ರೇಷ್ಠ ಪತ್ರಕರ್ತ ಬಾಬಾಸಾಹೇಬ್ ಅಂಬೇಡ್ಕರ್. ಅವರ ಹೆಸರಿನಲ್ಲಿ ಸಾಮಾಜಿಕ ಕಳಕಳಿ, ಮಾನವೀಯ ವರದಿ ಮತ್ತು ವಿಶ್ಲೇಷಣಾ ಬರಹಗಳೊಂದಿಗೆ ಪತ್ರಿಕೋದ್ಯಮದಲ್ಲಿ ಛಾಪು ಮೂಡಿಸಿರುವವರಿಗೆ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿಯ…

Read More

ಶ್ರೀನಿವಾಸಪುರ:ಕಳೆದ ಹತ್ತು ವರ್ಷಗಳಿಂದ ತಾಲೂಕಿನಲ್ಲಿ ಯಾವುದೆ ಅಭಿವೃದ್ಧಿಯಾಗಿಲ್ಲ ಜನ ಬೆಸೆತ್ತು ಹೋಗಿದ್ದಾರೆ ಎಂದು ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು,ಅವರು ತಾಲೂಕಿನ ಕಸಬಾ ಹೋಬಳಿಯ ಆಲವಟ್ಟ,ಕಿರುವಾರ,ಆಲಂಬಗಿರಿ,ಪಾತಪಲ್ಲಿ,ಕಠಾರ ಮುದ್ದಲಹಳ್ಳಿ, ಕಲ್ಲೂರು, ಹಾಗೂ ಜೆ.ವಿ.ಕಾಲೋನಿ ಸೇರಿದಂತೆ ವಿವಿದ ಗ್ರಾಮಗಳಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಜೆ.ಡಿ.ಎಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡಿದರು.ನಮ್ಮ ಪಕ್ಷದ ಮೇಲೆ ಅಭಿಮಾನ ಇಟ್ಟು ಬರುವಂತ ಕಾರ್ಯಕರ್ತರನ್ನು ಗೌರವದಿಂದ ನಡೆಸಿಕೊಳ್ಳುತ್ತೇನೆ ಯಾರು ಯಾವುದೇ ಕಾರಣಕ್ಕೂ ಯಾರಿಗೂ ಹೆದರುವ ಅವಶ್ಯಕತೆ ಇಲ್ಲ ನಿಮ್ಮ ಪರವಾಗಿ ರಕ್ಷಣೆ ನೀಡಲು ನಾನು ಇದ್ದೇನೆ ಎಂದು ಭರವಸೆ ನೀಡಿದರು, ನೀವು ನಿಮ್ಮ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ತಂದು ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯನ್ನಾಗಿಸುವಲ್ಲಿ ಶ್ರಮಿಸೋಣ ಎಂದರು. ರಾಜ್ಯದ ಹಿಂದುಳಿದ ದಲಿತರ ಮತ್ತು ಅಲ್ಪ ಸಂಖ್ಯಾತರ ರಕ್ಷಣೆಗೆ ಜೆಡಿಎಸ್ ಅಧಿಕಾರಕ್ಕೆ ಬರಬೇಕು ರೈತರ ಹಿತಕಾಪಾಡಲು ಕುಮಾರಸ್ವಾಮಿಯನ್ನು ಗೆಲ್ಲಿಸಬೇಕು ಎಂದರು.ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿನಾರಯಣಸ್ವಾಮಿ ಮಾತನಾಡಿ ರಾಜ್ಯದ ಹಿತಕ್ಕಾಗಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು ಶ್ರೀನಿವಾಸಪುರದ…

Read More

ಶ್ರೀನಿವಾಸಪುರ:ರಾಷ್ಟ್ರೀಯ ಮಟ್ಟದ ಮಾಸ್ಟರ್ ಗೇಮ್ಸ್ ವಾಲಿಬಾಲ್ ಪಂದ್ಯಾವಳಿಯಲ್ಲಿ ವಿಜೇತರಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಆಡಲು ಆಯ್ಕೆಯಾಗಿರುವ ತಂಡದಲ್ಲಿ ಶ್ರೀನಿವಾಸಪುರ ತಾಲೂಕಿನ ಯುವಕರು ಪ್ರತಿನಿಧಿಸಿದ್ದು ಆ ಯುವಕರಿಂದ ತಾಲೂಕಿಗೆ ಗೌರವ ಹೆಮ್ಮೆ ತರುವಂತ ವಿಚಾರವಾಗಿದೆ ಎಂದು ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು ತಾಲೂಕಿನ ಯುವಕರು ಪ್ರತಿನಿಧಿಸಿದ್ದ ವಾಲಿಬಾಲ್ ತಂಡ ಉತ್ತರ ಪ್ರದೇಶದ ವಾರಣಾಸಿಯಲ್ಲಿ 5 ನೇಯ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಯಲ್ಲಿ ವಿಜೇತರಾಗಿದ್ದು ಅದರಲ್ಲಿ ಅಟಗಾರರಾಗಿದ್ದ ಶ್ರೀನಿವಾಸಪುರ ತಾಲೂಕಿನ ಕಸಬಾ ಹೋಬಳಿಯ ಗುಮ್ಮರೆಡ್ಡಿಪುರದ ಶ್ರೀನಾಥ್ ಮತ್ತು ಲಕ್ಷ್ಮಣ್ ರೆಡ್ಡಿ ರವರನ್ನು ಅಭಿನಂದಿಸಿ ಮಾತನಾಡಿದರು.ಕ್ರೀಡಾಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಆರೋಗ್ಯಕ್ಕೂ ಒಳ್ಳೆಯದು ಜೊತೆಗೆ ಅದನ್ನೆ ಸಾಧನೆಯಂದು ಮಾಡಲು ಹೊರಟರೆ ವಿಶ್ವ ಚಾಂಪಿಯನ್ ಆಗಬಹುದಾಗಿದೆ ಎಂದು ಯುವಕರ ಸಾಧನೆಯನ್ನು ಕೊಂಡಾಡಿದರು.ವಾರಣಾಸಿಯಲ್ಲಿ ವಿಜೇತರಾದ ಕ್ರೀಡಾಪಟುಗಳು ಮುಂದಿನ ಏಪ್ರಿಲ್ ನಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಾಸ್ಟರ್ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾರತ ದೇಶದ ಪ್ರತಿನಿಧಿಗಳಾಗಿ ಆಡುತ್ತಿರುವ ತಂಡದಲ್ಲಿ ನಮ್ಮೂರಿನ ಕ್ರೀಡಾಪಟುಗಳು ಇರುವುದು ತಾಲೂಕಿಗೆ ಅತ್ಯಂತ ಗೌರವದ ವಿಚಾರ ಎಂದರು.ಈ ಸಂದರ್ಭದಲ್ಲಿ ಜೆ.ಡಿ.ಎಸ್.ಯುವ ಮುಖಂಡರಾದ…

Read More

ಶ್ರೀನಿವಾಸಪುರ:ಪಟ್ಟಣದ ಹೊರವಲಯದ ಹೋದಲಿ ಪಂಚಾಯಿತಿ ವ್ಯಾಪ್ತಿಯ ಹೊಗಳಗೆರೆ ರಸ್ತೆಯಲ್ಲಿನ ಗುಡ್ಡದ ಮೇಲಿನ ಗವಿಗಟ್ಟು ಶ್ರೀ ಕಾಲಭೈರವೇಶ್ವರ ದೇವಾಲಯದ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆದ ಪೂಜಾ ಕಾರ್ಯಕ್ರಮದ ಅಂಗವಾಗಿ ಶ್ರೀಪಂಚಶಿರ(ಐದು ತಲೆ)ನಾಗಮ್ಮ ದೇವಿ ಪ್ರತಿಷ್ಠಾಪನೆ ಮತ್ತು ಧ್ವಜಾರೋಹಣ ಕಾರ್ಯಕ್ರಮ ಶನಿವಾರ ನೇರವೇರಿತು ಇಂದು ಭಾನುವಾರ ಘಟ್ಟುಶ್ರೀ ಗಂಗಮ್ಮ ದೇವಿ,ಶ್ರೀ ಕಾಲಭೈರವೇಶ್ವರ,ಶ್ರೀ ಚಂದ್ರಮೌಳೇಶ್ವರ.ಶ್ರೀಪಾತಾಳೇಶ್ವರ ಹಾಗು ಶ್ರೀ ಅಭಯಾಂಜನೇಯ ಸೇರಿದಂತೆ ಐದು ದೇವರುಗಳ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನೆಡೆಯಿತು ದೇವಾಲಯ ಸ್ಥಾಪಕ ಅಧ್ಯಕ್ಷ ಗಾರೆಮೇಸ್ತ್ರೀ ದೊಡ್ಡನಾಗಣ್ಣ ಮತ್ತು ಸಂಚಾಲಕ ಪುರ್ನಹಳ್ಳಿ ಬುಲೇಟ್ ವೆಂಕಟರೆಡ್ದಿ ನೇತೃತ್ವದಲ್ಲಿ ಭಕ್ತಾದಿಗಳ ನೆರವಿನಿಂದ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು ವಿವದಡೆಯಿಂದ ಯಲ್ದೂರು,ಹೊದಲಿ,ಸೋಮಯಾಜಲಹಳ್ಳಿ ಆವಲಕುಪ್ಪ,ಹೊಗಳಗೆರೆ ಭಾಗಗಳಿಂದ ಆಗಮಿಸಿದ್ದ ಭಕ್ತಾದಿಗಳು ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೋಂಡು ಪುನಿತರಾದರು.ಕೇಂದ್ರ ಸರ್ಕಾರದ ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪ ದಂಪತಿ, ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಪುರಸಭೆ ಮಾಜಿ ಅಧ್ಯಕ್ಷ ಮುನಿಯಪ್ಪ,ಡಾ.ಮಂಜುನಾಥ್,ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿ ನಾರಯಣಸ್ವಾಮಿ,ಹೊದಲಿರಾಮಮೂರ್ತಿ ಮುಳಬಾಗಿಲು ಹಿರಿಯ ಕಾಂಗ್ರೆಸ್ ಮುಖಂಡ ರಾಮಪ್ರಸಾದ್,ಮುಂತಾದವರು ಇದ್ದರು.

Read More

ಕೋಲಾರ:ನಾನು ಹುಟ್ಟಿ ಆಟ ಆಡಿ ಬೆಳೆದ ನನ್ನೂರಲ್ಲಿ ನಾನು ಕಲಿತ ವಿದ್ಯೆಗೆ ಗೌರವ ಸಿಗಲಿಲ್ಲ ಎಂಬ ನೋವು ನನ್ನ ಕಾಡುತ್ತಿದೆ ಎಂದು ಖ್ಯಾತ ತಮಟೆ ಕಲಾವಿದ ಪದ್ಮಶ್ರಿ ಪ್ರಶಸ್ತಿ ಪುರಸೃತ ನಾಡೋಜ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ನೋವು ಹಂಚಿಕೊಂಡರು ಪದ್ಮಶ್ರೀ ಪ್ರಶಸ್ತಿ ವಿಜೇತರಾದ ಅವರನ್ನು ಕೋಲಾರದ ಪತ್ರಕರ್ತರ ಭವನದಲ್ಲಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಅಭಿನಂದನೆ ಸಲ್ಲಿಸಿದಾಗ ಅದನ್ನು ಸ್ವೀಕರಿಸಿ ಮಾತನಾಡಿದರು.ತಮಟೆ ವಾದನಕ್ಕೆ ಪ್ರಶಸ್ತಿ,ಸೇರಿದಂತೆ ಅನೇಕ ಪ್ರಶಸ್ತಿಗಳು ನನಗೆ ಲಭಿಸಿದ್ದರೂ ನನ್ನ ಸ್ವಂತ ಗ್ರಾಮದಲ್ಲಿ ನನ್ನ ಕಲಾರಾಧನೆಗೆ ಗೌರವ ಇಲ್ಲದಂತೆ ಕಾಣುತ್ತಾರೆ,ನಾನು ದೇಶ ವಿದೇಶಗಳಲ್ಲಿ ನನ್ನ ತಮಟೆ ವಾದ್ಯದ ಕಲೆಯನ್ನು ಪ್ರದರ್ಶನ ನೀಡಿರುತ್ತೇನೆ ಜನತೆ ಅಪಾರವಾಗಿ ಮೆಚ್ಚಿರುತ್ತಾರೆ ಚ್ಚುಗೆ ಆದರೂ ನನ್ನ ಸ್ವಂತ ಗ್ರಾಮದಲ್ಲಿ ನನ್ನ ವಿದ್ಯಗೆ ಗೌರವ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು ನನ್ನ ತಂದೆ ಪಾಪಣ್ಣ ಮೃತರಾದಾಗ ನನಗೆ 15 ವರ್ಷ ವಯಸ್ಸು, ಆಗ ತಂದೆಯ ವೃತ್ತಿಯನ್ನು ಮುಂದುವರೆಸುವಂತೆ ಗ್ರಾಮಸ್ಥರು ತಿಳಿಸಿದರು. ನಾನು ಅವಿದ್ಯಾವಂತ, ಶಾಲೆಗೆ ಹೋಗಿಲ್ಲ,…

Read More

ತುಮಕೂರು:ತುಮಕೂರು ಜಿಲ್ಲೆಯ ಪ್ರಭಾವಿ ಮುಖಂಡ ಸಂಘ ಪರಿವಾರ ಮೂಲದ ಕಳ್ಳಂ ಬೆಳ್ಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಕೆ.ಎಸ್.ಕಿರಣ್‍ಕುಮಾರ್ ಬಿಜೆಪಿ ಪಕ್ಷಕ್ಕೆ ವಿದಾಯ ಹೇಳಿದ್ದಾರೆ.ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‍ ಅಭ್ಯರ್ಥಿಯಾಗುವ ಲೆಕ್ಕಾಚಾರದಲ್ಲಿ ಬಿಜೆಪಿ ತೊರೆದಿದ್ದಾರೆ.ಆರ್ ಎಸ್ ಎಸ್ ಕಟ್ಟಾಳು ಕಳೆದ 30 ವರ್ಷಗಳಿಂದ ಭಾರತೀಯ ಜನತಾ ಪಕ್ಷದ ಜೊತೆ ಗುರುತಿಸಿಕೊಂಡು ಕಳ್ಳಂಬೆಳ್ಳ ಕ್ಷೇತ್ರದಲ್ಲಿ ಪಕ್ಷ ಸಂಘಟಿಸಿ ಪ್ರಭಾವಿ ಕಾಂಗ್ರೆಸ್ ಮುಖಂಡ ಮಾಜಿ ಮಂತ್ರಿ ಟಿ.ಬಿ.ಜಯಚಂದ್ರ ಅವರ ಸೋಲಿಸಿ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಿದ್ದ ಕೆ.ಎಸ್.ಕಿರಣ್‍ಕುಮಾರ್ ತುಮಕೂರು ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅವರು ಬಿಜೆಪಿ ಸಖ್ಯ ತೊರೆಯುತ್ತಿರುವುದು ತುಮಕೂರು ಜಿಲ್ಲೆಯ ಬಿಜೆಪಿಗೆ ಮರ್ಮಾಘಾತದ ಸುದ್ದಿಯಾಗಿದೆ.ಸಂಘಪರಿವಾರ ಮೂಲದ ಮಾಜಿ ಶಾಸಕ ಕೆ.ಎಸ್.ಕಿರಣ್‍ಕುಮಾರ್ ಅವರು 2004 ರಲ್ಲಿ ಕಳ್ಳಂಬೆಳ್ಳ ವಿಧಾನ ಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ದಿಸಿ ತಮ್ಮ ಪ್ರತಿ ಸ್ಪರ್ದಿ ನಾಲ್ಕು ಬಾರಿ ಶಾಸಕರಾಗಿ ಪ್ರಭಾವಿ ಮಂತ್ರಿಯಾಗಿದ್ದ ಟಿ.ಬಿ.ಜಯಚಂದ್ರ ಅವರನ್ನು 17 ಸಾವಿರ ಮತಗಳ ಅಂತರದಿಂದ ಸೋಲಿಸಿ ಶಾಸಕರಾಗಿದ್ದರು.ಕ್ಷೇತ್ರ…

Read More

ಶ್ರೀನಿವಾಸಪುರ:ತಾಲೂಕಿನ ಅರಕೇರಿಯ ಐತಿಹಾಸಿಕ ಪುಣ್ಯಕ್ಷೇತ್ರ ಶ್ರೀ ನಾಗನಾಥೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿವರ್ಷದಂತೆ ರಥೋತ್ಸವ ಸಾಂಪ್ರದಾಯಕವಾಗಿ ನಡೆಯಿತು.ತಾಲೂಕಿನ ಅರಕೇರಿ ಶ್ರೀ ನಾಗನಾಥೇಶ್ವರ ದೇವಾಲಯದಲ್ಲಿ ಎರಡು ದಿನಗಳ ಜಾತ್ರಾ ಮಹೋತ್ಸವ ಇಂದು ಶನಿವಾರ ಆರಂಭವಾಯಿತು ಇಂದು ಬೆಳೆಗ್ಗೆ ವಿಶೇಷ ಹೋಮ ಹವನ ಹಾಗು ಗಿರಿಜಾ ಕಲ್ಯಾಣ ನಡೆಯಿತು,ಮಧ್ಯಾಹ್ನ ಶ್ರೀ ನಾಗನಾಥೇಶ್ವರ ಬ್ರಹ್ಮರಥೋತ್ಸವ ಸಂಪ್ರದಾಯದಂತೆ ದೇವಾಲಯದ ಧರ್ಮಾಧಿಕಾರಿ ರಮೇಶಬಾಬು ನೇತೃತ್ವದಲ್ಲಿ ಸಾವಿರಾರು ಭಕ್ತರು ರಥ ಎಳೆದು ಪುನಿತರಾದರು, ವಿಶೇಷ ಪೂಜಾ ಕಾರ್ಯಗಳು ಹಾಗು ಉತ್ಸವಗಳಲ್ಲಿ ಸಾವಿರಾರು ಭಕ್ತರು ಪಾಲ್ಗೋಂಡು ಭಕ್ತಿಭಾವ ಮೆರೆದರು.ರಥೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಿ.ರಾಜಣ್ಣ, ಮುಖಂಡ ಗುಂಜೂರುಶ್ರೀನಿವಾಸರೆಡ್ಡಿ,ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ,ಪುರಸಭೆ ಸದಸ್ಯ ಭಾಸ್ಕರ್,ಮಾಜಿ ಸದಸ್ಯ ಸಿಮೆಂಟ್ ರಮೇಶ್,ಆದ್ಯಾತ್ಮಿಕ ಚಿಂತಕ ಬಾಬಾಅಂಕಲ್ ನಾಗರಾಜ್,ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕಲ್ಲೂರುಮಂಜು,ಅತ್ತಿಕುಂಟೆ ರಾಜಶೇಖರೆಡ್ದಿ, ಮುಖಂಡರಾದ,ಲಕ್ಷ್ಮೀಸಾಗರ ಆಶೋಕ್,ಡೈರಿ ಶ್ರೀನಿವಾಸ ಶೆಟ್ಟಿ,ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಗೌಡ,ಜಗದೀಶ್,ಮಾಜಿ ಸದಸ್ಯ ವೆಂಕಟರಮಣಪ್ಪ,ಪುಟ್ಟರಾಜು,ಜೈಕುಮಾರ್ ಸೇರಿದಂತೆ ಮುಂತಾದವರು ಇದ್ದರು. ವೇದ ಬ್ರಹ್ಮ ಉಮಾಶಂಕರ ಶರ್ಮಾ ಅವರ…

Read More

ಶ್ರೀನಿವಾಸಪುರ:ಶ್ರೀನಿವಾಸಪುರದಲ್ಲಿ ಇತ್ತಿಚಿಗೆ ಬೈಕ್ ವೀಲಿಂಗ್ ಪುಂಡರ ಹಾವಳಿ ದಿನೆ ದಿನೆ ಹೆಚ್ಚುತ್ತಿದ್ದು ಇದಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಶ್ರೀನಿವಾಸಪುರ ಪೋಲಿಸರು ಬೈಕ್ ವೀಲಿಂಗ್ ಮಾಡುತ್ತಿದ್ದ ಪುಂಡನೊರ್ವನನ್ನು ಬಂಧಿಸಿ ವೀಲಿಂಗ್ ಮಾಡುತ್ತಿದ್ದ ಬೈಕ್ ಅನ್ನು ವಶಕ್ಕೆ ಪಡೆದಿರುತ್ತಾರೆ.ಶ್ರೀನಿವಾಸಪುರ ಪಟ್ಟಣದ ಪುಂಗನೂರು ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಬೈಕ್ ವೀಲಿಂಗ್ ಮಾಡುತಿದ್ದ ಶ್ರೀನಿವಾಸಪುರ ಪಟ್ಟಣದ ಅಜಾದ್ ರಸ್ತೆ ನಿವಾಸಿ ಎಜಾಜ್ ಖಾನ್ ಅವರ ಮಗ ಜಾಕಿರ್ ಖಾನ್ ಎಂಬ ಪುಂಡನನ್ನು ವಾಹನ ಸಮೇತ ಕರೆತಂದು ಪ್ರಕರಣ ದಾಖಲಿಸಿ ಪುಂಡನನ್ನು ಪೊಲೀಸ್ ಠಾಣೆಯ ಜಾಮೀನಿನ ಮೇಲೆ ಬಿಡುಗಡೆ ಮಾಡಿ ವಾಹನವನ್ನು ನ್ಯಾಯಾಲಯದ ವಶಕ್ಕೆ ನೀಡಿರುತ್ತಾರೆ.ಪಟ್ಟಣದಲ್ಲಿ ಇತ್ತಿಚಿಗೆ ಪುಂಡರ ಬೈಕ್ ವೀಲಿಂಗ್ ಮಾಡುವರು ಕರ್ಕಶವಾವಗಿ ಸದ್ದುಮಾಡುತ್ತ ಅತಿಯಾದ ವೇಗದಿಂದ ರಸ್ತೆಯಲ್ಲಿ ಅಡ್ಡಾದಿಡ್ದಿ ಬೈಕ್ ಒಡಿಸುವುದು ಹೆಚ್ಚುತ್ತಿದೆ ಇದರಿಂದ ಸಂಜೆ ಸಮಯದಲ್ಲಿ ಊರುಗಳಿಗೆ ದ್ವಿಚಕ್ರವಾಹನ ಅಥಾವ ಬೈಕ್ ನಲ್ಲಿ ಹೋಗುವಂತ ಹಳ್ಳಿಜನಕ್ಕೆ ತೊಂದರೆಯಾಗುತ್ತಿದ್ದು ಗ್ರಾಮೀಣ ಭಾಗದ ಜನತೆ ಭಯದಿಂದ ತಮ್ಮ ಜೀವಭಯದಿಂದ ದ್ವಿಚಕ್ರವಾಹನ ಒಡಿಸುತ್ತಿದ್ದರು ಎನ್ನಲಾಗಿದೆ. ಬೈಕ್ ವೀಲಿಂಗ್ ಮಾಡುತ್ತಿದ್ದ…

Read More