Author: Srinivas_Murthy

ಶ್ರೀನಿವಾಸಪುರ:ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾಗುವ ಬಯಕೆ ನನಗೂ ಇದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗು ಪರಿಷತ್ ಮುಖ್ಯ ಸಚೇತಕ ವೈ ಎ ನಾರಾಯಣಸ್ವಾಮಿ YANಹೊಸದಾಗಿ ಬಾಂಬ್ ಸಿಡಿಸಿದ್ದಾರೆ. ಅವರು ತಾಲೂಕಿನಲ್ಲಿ ನಡೆದಂತ ಬಿಜೆಪಿ ಪಕ್ಷದ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೋಂಡ ನಂತರ ತಮ್ಮ ಸ್ವಗ್ರಾಮ ಯಚ್ಚನಹಳ್ಳಿಯ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಯಾರು ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ನಾನು ಅಭ್ಯರ್ಥಿಯಾಗುವ ಬಯಕೆ ವ್ಯಕ್ತಪಡಿಸಿದರು, ನಾನೇನು ರಾಜಕೀಯ ಸನ್ಯಾಸಿಯಲ್ಲಾ ಎಂದ ಅವರು ಭಾರತೀಯ ಜನತಾ ಪಕ್ಷ, ಪ್ರಾದೇಶಿಕ ಪಕ್ಷ ಅಲ್ಲ ರಾಷ್ಟ್ರೀಯ ಪಕ್ಷ, ಪಕ್ಷದ ಸಿದ್ದಾಂತ ಇರುವಂತವರನ್ನು ಗುರುತಿಸಿ ಟಿಕೆಟ್ ಕೋಡಲಾಗುತ್ತದೆ, ಕುಟುಂಬ ರಾಜಕಾರಣದ ಪ್ರಾದೇಶಿಕ ಪಕ್ಷಗಳಾದರೆ ಅಪ್ಪ ಮಕ್ಕಳು ಕೂತು ಸೇರಿ ಟಿಕೆಟ್ ಯಾರಿಗೆ ಕೊಡಬೇಕು ಅಂತ ನಿರ್ಧಾರ ಮಾಡುತ್ತಾರೆ ಇಲ್ಲಿ ಅದೇಲ್ಲ ನಡೆಯಲ್ಲ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿ ಹಣದ ಚೀಲ ಹೊತ್ತು ಕ್ಷೇತ್ರದಲ್ಲಿ ತಿರುಗುತ್ತಿರುವರಿಗೆ ಟಾಂಗ್ ನೀಡಿದರು.ಕಾಂಗ್ರೇಸ್…

Read More

ಶ್ರೀನಿವಾಸಪುರ: ಗಣರಾಜ್ಯೋತ್ಸವ ಆಚರಿಸಲು ಶಾಲೆಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಶಿಕ್ಷಕನಿಗೆ ಅಪಘಾತವಾಗಿ ತೀವ್ರವಾಗಿ ಗಾಯಗೊಂಡಿರುತ್ತಾರೆ.ಬೆಂಗಳೂರು-ಕಡಪಾ ರಸ್ತೆಯ ಲಕ್ಷ್ಮಿಪುರ ಕ್ರಾಸ್ ಬಳಿ ಅಪಘಾತ ನಡೆದಿದ್ದು ಗಾಯಗೊಂಡಿರುವ ಶಿಕ್ಷಕನನ್ನು ದೇವಲಪಲ್ಲಿ ಅಶೋಕ್ ಎಂದು ಗುರುತಿಸಲಾಗಿದೆ ಇವರು ತಾಲೂಕಿನ ರಾಯಲ್ಪಾಡು ಪ್ರೌಡಶಾಲೆಯಲ್ಲಿ ಸಹ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದುತಮ್ಮ ಶಾಲೆಯಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲು ತಮ್ಮ ಗ್ರಾಮದಿಂದ ರೋಣೂರು,ಲಕ್ಷ್ಮೀಪುರ ಮಾರ್ಗವಾಗಿ ಹೋಗಿ ಲಕ್ಷ್ಮಿಪುರ ಕ್ರಾಸ್ ಬಳಿ ಬೆಂಗಳೂರು-ಕಡಪ ಹೆದ್ದಾರಿಗೆ ಹೋಗುವಾಗ ವೇಗವಾಗಿ ಬಂದ ಸಿಮೆಂಟ್ ಟ್ಯಾಂಕರ್ ಬಡಿದು ಶಿಕ್ಷಕ ಗಂಭೀರವಾಗಿ ಗಾಯಗೊಂಡಿರುತ್ತಾರೆ. ಅಪಘಾತ ವಾಗುತ್ತಿದ್ದಂತೆ ಸ್ಥಳಿಯರು ಅಂಬುಲೆನ್ಸ್ ಮೂಲಕ ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದ ಕಾರಣ ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿರುತ್ತಾರೆ.ಗಂಬೀರವಾಗಿ ಗಾಯಗೊಂಡಿರುವ ಶಿಕ್ಷಕನ ಎರಡು ಕಾಲುಗಳು ಮುರಿದಿದ್ದು ತಲೆಗೆ ತೀವ್ರವಾಗಿ ಪೆಟ್ಟಾಗಿದೆ ಆದರೆ ಪ್ರಾಣಪಾಯ ಇಲ್ಲ ಎನ್ನಲಾಗಿದೆ,ತಾಲೂಕಿನ ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ನ್ಯೂಜ್ ಡೆಸ್ಕ್: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಿಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ರಾಜ್ಯದ ಪ್ರಖ್ಯಾತ ತಮಟೆ ಕಲಾವಿದ ಶಿಡ್ಲಘಟ್ಟ ತಾಲೂಕಿನ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಅವರಿಗೆ ನೀಡಿ ಗೌರವಿಸಿದೆ.ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ತಮಟೆ ವಾದಕಾರದ ಕಥೆವಿಭಜಿತ ಕೋಲಾರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಪಿಂಡಿಪಾಪನಹಳ್ಳಿ ಗ್ರಾಮದ ನಿವಾಸಿಯಾಗಿರುವ 77 ವರ್ಷದ ಮುನಿವೆಂಕಟಪ್ಪ ಗ್ರಾಮದ ದಿವಂಗತ ಪಾಪಣ್ಣ, ಹಾಗು ದಿವಂಗತ ಮುನಿಗಂಗಮ್ಮ ನವರ ಪುತ್ರ ಮುನಿವೆಂಕಟಪ್ಪ ಅವರಿಗೆ 17 ವರ್ಷವಿದ್ದಾಗ ತಂದೆ ಪಾಪಣ್ಣ ಅಪಘಾತದಲ್ಲಿ ನಿಧನ ಹೊಂದುತ್ತಾರೆ ತಾಯಿ ಮುನಿಗಂಗಮ್ಮ ವಯೋಸಹಜ ಕಾಯಿಲೆಯಿಂದಾಗಿ 7 ವರ್ಷಗಳ ಹಿಂದೆ ಮೃತಪಟ್ಟಿರುತ್ತಾರೆ.ಮುನಿವೆಂಕಟಪ್ಪ 4ನೇ ತರಗತಿವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದ್ದು ಕನ್ನಡ ಓದಲು ಬರೆಯಲು ಬರುತ್ತೆ.ಮುನಿವೆಂಕಟಪ್ಪನವರಿಗೆ 17 ವರ್ಷದ ಪ್ರಾಯ ಇದ್ದಾಗ ಅವರ ತಂದೆ ಪಾಪಣ್ಣ ಮೃತಪಟ್ಟ ಹಿನ್ನಲೆಯಲ್ಲಿ ಗ್ರಾಮದಲ್ಲಿ ತಮಟೆ ಬಾರಿಸಬೇಕಾದ ಅನಿವಾರ್ಯತೆ ಉಂಟಾಗುತ್ತದೆ ಗ್ರಾಮಸ್ಥರ ಮನವಿಯಂತೆ ಮುನಿವೆಂಕಟಪ್ಪ ತಮಟೆ ಬಾರಿಸಲು ಆರಂಭಿಸುತ್ತಾರೆನಂತರ ದಿನಗಳಲ್ಲಿ ಅದು ವೃತ್ತಿಯಾಗುತ್ತದೆ ತಮಟೆ ಭಾರಿಸುವುದು ಗಂಡು ಕಲೆ ನಾದದ ಗತ್ತು ಹಿಡಿದು…

Read More

ಶ್ರೀನಿವಾಸಪುರ:ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದಲ್ಲಿ AAP ಆಮ್ ಆದ್ಮಿ ಪಕ್ಷ ಗಟ್ಟಿಯಾಗಿ ನೆಲೆ ನಿಲ್ಲಲು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಪ್ರತಿ ಗ್ರಾಮದಲ್ಲೂ ಮತದಾರರನ್ನು ಜಾಗೃತ ಗೊಳಿಸುವಂತ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು AAP ಆಮ್ ಆದ್ಮಿ ಪಕ್ಷದ ಚುನಾವಣಾ ಆಕಾಂಕ್ಷಿ ಡಾ.ವೆಂಕಟಾಚಲ ಹೇಳಿದರು ಅವರು ಪಟ್ಟಣದ ಶ್ರೀ ಮಾರುತಿ ಸಭಾ ಭವನದಲ್ಲಿ ಆಯೋಜಿಸಿದ್ದ ಚುನಾವಣೆ ಸಿದ್ದತಾ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ದೇಶದ ಜನತೆ ಬದಲಾವಣೆ ಬಯಸುತ್ತಿದ್ದಾರೆ ಬದಲಾವಣೆಗೆ ಜನತೆ ಆಮ್ ಆದ್ಮಿ ಪಕ್ಷ ಬೆಂಬಲಿಸುವಂತೆ ಕೋರಿದ ಅವರುಅರವಿಂದ್ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿಗಳಾಗಿ ಬದಲಾವಣೆ ತಂದಿರುತ್ತಾರೆ ದೆಹಲಿಯ ಸರ್ಕಾರಿ ಆಸ್ಪತ್ರೆಗಳು ಹಾಗೂ ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ವ್ಯವಸ್ಥೆಯನ್ನು ಮೀರಿಸಿ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.ಈಗಾಗಲೆ ತಾಲೂಕಿನಾದ್ಯಂತ ಸಾರ್ವಜನಿಕ ಸಂಪರ್ಕ ಅಭಿಯಾನ ಶುರುಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಪಕ್ಷದ ಸೂಚನೆಯಂತೆ ತಾಲೂಕಿನ ಐವತ್ತು ಸಾವಿರ ಜನ ಸಂಖ್ಯೆಗೆ ಒಂದು ಘಟಕ ಎಂದು ಹತ್ತು ಸಾವಿರ ಜನ ಸಂಖ್ಯೆಗೆ ಒಂದು ವೃತ್ತ ಎಂದು ವಿಂಗಡನೆ ಮಾಡುವ ಮೂಲಕ ದೆಹಲಿ…

Read More

ಶ್ರೀನಿವಾಸಪುರ: ಗ್ರಾಮೀಣ ಜನರ ಹಾಗೂ ರೈತರ ಅನುಕೂಲಕ್ಕಾಗಿ ಈ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಸರ್ಕಾರ ಜಾರಿಗೆ ತಂದಿದ್ದು ಇದರ ಉಪಯೋಗವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕೋಲಾರ ಜಿಲ್ಲಾಧಿಕಾರಿ ವೆಂಕಟರಾಜು ಹೇಳಿದರು ಅವರು ತಾಲೂಕು ಕಸಬಾ ಹೋಬಳಿ ಜೆ.ತಿಮ್ಮಸಂದ್ರ ಪಂಚಾಯಿತಿ ಅಲವಾಟ ಗ್ರಾಮದಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಗ್ರಾಮೀಣ ಜನರ ಸಣ್ಣಪುಟ್ಟ ಸಮಸ್ಯೆಗಳಿಗೆ ಜಿಲ್ಲಾಧಿಕಾರಿ ಕಚೇರಿ, ತಹಸೀಲ್ದಾರ್‌ ಕಚೇರಿಗೆ ಅಲೆಯುವ ಪರಿಸ್ಥಿತಿಯನ್ನು ನಿವಾರಿಸಲು ರಾಜ್ಯ ಸರ್ಕಾರ ಮಹತ್ವಾಕಾಂಕ್ಷಿಯಾಗಿ ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ ಎಂಬ ಕಾರ್ಯಕ್ರಮವನ್ನು ರೂಪಿಸಿದ್ದು ಪ್ರತಿ ತಿಂಗಳ ಮೂರನೇ ಶನಿವಾರ ಒಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮಕ್ಕೆ ಭೇಟಿ ನೀಡಿಕಾರ್ಯಕ್ರಮ ರೂಪಿಸಿ ಸ್ಥಳದಲ್ಲಿಯೆ ಪರಿಹಾರ ಸೂಚಿಸಲಾಗುತ್ತಿದೆ ಎಂದರು.ಸಾರ್ವಜನಿಕರು ಯಾವುದೇ ಇಲಾಖೆಗೆ ಸಂಬಂಧಿಸಿದಂತೆ ಸಮಸ್ಯೆಗಳು ಇದ್ದಲ್ಲಿ ಈ ಕಾರ್ಯಕ್ರಮದಲ್ಲಿ ಅರ್ಜಿಗಳನ್ನು ಕೊಡಬಹುದು ಸಾದ್ಯವಾದರೆ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಇತ್ಯರ್ಥ ಮಾಡಲಾಗುವುದು ಸಾದ್ಯವಾಗದಿದ್ದರೆ ಆದ್ಯತೆ ಮೇರೆಗೆ ಸಮಸ್ಯೆಗಳನ್ನು ಬಗೆ ಹರಿಸುವುದಾಗಿ ಭರವಸೆ ನೀಡಿದರು.ತಹಶೀಲ್ದಾರ್ ಶರೀನ್ ತಾಜ್ ಮಾತನಾಡಿ, ಗ್ರಾಮ ವಾಸ್ತವ್ಯಕ್ಕೆ ಆಯ್ಕೆ ಮಾಡಿಕೊಂಡ…

Read More

ಶ್ರೀನಿವಾಸಪುರ:ಕೆಸಿ ವ್ಯಾಲಿ ಯೋಜನೆಯನ್ನು ಮೂರನೆ ಹಂತದಲ್ಲಿ ಶುದ್ಧಿಕರಿಸಿ ಹರಿಸಲಾಗುವುದು ಈ ಬಗ್ಗೆ ಪ್ರಯತ್ನಗಳು ನಡೆಯುತ್ತಿದೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು ಅವರು ತಾಲೂಕಿನ ಯಲ್ದೂರಿನಲ್ಲಿ ನಡೆದ ಶ್ರೀನಿವಾಸಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಇದರ ಜೊತೆಗೆ ಎತ್ತಿನ ಹೊಳೆ ನೀರನ್ನು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆಗೆ ನೀಡಲಾಗುವುದು ಎಂದ ಅವರು ಕೆ.ಸಿ ವ್ಯಾಲಿ ನೀರು ಮೂರನೇ ಹಂತದಲ್ಲಿ ಶುದ್ದೀಕರಿಸಲು ಈಗಾಗಲೇ ಪೂರ್ವ ತಯಾರಿಯಾಗಿದ್ದು ಮುಂದಿನ ದಿನಗಳಲ್ಲಿ ಇದನ್ನು ಮಾಡೇ ಮಾಡುತ್ತೇವೆ 400 ಎಂ.ಎಲ್.ಡಿ ಯಿಂದ 600 ಎಂ.ಎಲ್.ಡಿ ಗೆ ಹೆಚ್ಚಿಸುತ್ತೇವೆ ಎಂದರು.ಬದಲಾದ ಕಾಲಘಟ್ಟದಲ್ಲಿ ಮೌಲ್ಯಗಳು ಇಲ್ಲದ ಜೀವನ ಸಾಗುತ್ತಿದೆ ಅಧುನಿಕತೆ ಹೆಚ್ಚಾದಷ್ಟು ಮಾನವೀಯತೆ ಸತ್ತುಹೊಗುತ್ತಿದೆ ಮಾನವೀಯ ಸಂಬಂಧಗಳನ್ನು ಹಾಳುಮಾಡುತ್ತಿದೆ ಅವಮಾನವೀಯತೆ ಅವಸ್ತಾವಿಕತೆ ಮೆರೆಯುತ್ತಿದೆ ಮಕ್ಕಳಿಗೆ ಗೋವಿನ ಮಾತು,ನೀತಿ, ಅರಣ್ಯದಲ್ಲಿನ ಹುಲಿಯ ಗೋವಿನ ಔದಾರ್ಯತೆ ಇಂತಹ ನೀತಿಕಥೆಗಳನ್ನು ತಿಳಿಸುವರು ಯಾರು ಮೊಬೈಲ್ ಟಿವಿಗಳು ವಿದ್ಯಾರ್ಥಿಗಳಿಗೆ ಸ್ವಲ್ಪ ಉಪಕಾರಿಯಾದರೆ ದೊಡ್ಡಮಟ್ಟದಲ್ಲಿ ಅಪಾಯಕಾರಿಯಾಗಿ ಕಾಡುತ್ತಿದೆ ಪ್ರಸ್ತುತ ದಿನಗಳಲ್ಲಿ ನೀತಿ ನ್ಯಾಯ…

Read More

ಶ್ರೀನಿವಾಸಪುರ:ಶ್ರೀನಿವಾಸಪುರದ ಶಾಸಕ ರಮೇಶಕುಮಾರ್ ಮಾತನಾಡುವುದಕ್ಕೂ ಅವರ ನಡವಳಿಕೆಗೂ ಬಾರಿ ವ್ಯತ್ಯಾಸ ಇರುತ್ತದೆ ಎಂದು ಜೆಡಿಎಸ್ ಯುವ ಮುಖಂಡ ಹಾಗು ಹಾಸನದ ಸಂಸದ ಪ್ರಜ್ವಲ್ ರೇವಣ್ಣ ವ್ಯಂಗ್ಯವಾಡಿದರು ಅವರು ಶ್ರೀನಿವಾಸಪುರ ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಯುವ ಜನತಾದಳದ ಕಾರ್ಯಕರ್ತರ ಯುವಘರ್ಜನೆ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ರಮೇಶ್ ಕುಮಾರ್ ನಡವಳಿಕೆಯಂತೆ ಶುದ್ಧ ಕುಡಿಯುವ ನೀರು ಹರಿಸುವುದಾಗಿ ಪ್ರಮಾಣ ಮಾಡಿದ್ದರು ಆದರೆ ಅವರು ಹರಸಿದ್ದು ಕೊಳಚೆ ನೀರು ಹೇಳುವುದು ಮಾತ್ರ ಶುದ್ಧವಾದ ಮಾತಾಗಿರುತ್ತದೆ ಎಂದರು.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರಕ್ಕೆ ಬಂದರೆ ಜಿಲ್ಲೆ ಅಭಿವೃದ್ಧಿಯಾಗುತ್ತದೆ ಎನ್ನುತ್ತಾರೆ ಆದರೆ ಅವರನ್ನು ಕರೆತರುವಲ್ಲಿ ಮುಂಚೂಣಿಯಲ್ಲಿರುವ ರಮೇಶ್ ಕುಮಾರ್ ಸತತವಾಗಿ ಎರಡು ಬಾರಿ ಶಾಸಕರಾಗಿದ್ದರು ಮಂತ್ರಿಯಾಗಿದ್ದವರು ಇನ್ನೂ ಕೆಲ ಕಾಂಗ್ರೆಸ್‌ನ ಶಾಸಕರಿದ್ದರು, ಸಿದ್ದರಾಮಯ್ಯ ಬಂದು ಅಭಿವೃದ್ಧಿ ಮಾಡುವ ಹಾಗಿದ್ದರೆ ಇದುವರಿಗೂ ಇವರೇನು ಮಾಡ್ತಾ ಇದ್ದರು ಯಾಕೆ ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.ನುಡಿದಂತೆ ನಡೆದ ಏಕೈಕ ಮುಖ್ಯಮಂತ್ರಿ ಕುಮಾರಸ್ವಾಮಿಶ್ರೀನಿವಾಸಪುರದ ಮಾವಿನ ಬೆಳೆಗಾರರು ಸಮಸ್ಯಯಲ್ಲಿದ್ದಾಗ…

Read More

ನ್ಯೂಜ್ ಡೆಸ್ಕ್:ನಟಸಿಂಹ ಬಾಲಕೃಷ್ಣ ನಟಿಸಿದ ವೀರಸಿಂಹರೆಡ್ಡಿ ಸಿನಿಮಾ ಬಿಡುಗಡೆಯಾದ ನಾಲ್ಕೇ ದಿನದಲ್ಲಿ 100 ಕೋಟಿಗೂ ಹೆಚ್ಚು ಹಣ ಬಾಚಿದಿಯಂತೆ.ಬಾಲಯ್ಯ ವಿಶ್ವರೂಪ ನಟನೆಯ ವೀರಸಿಂಹ ರೆಡ್ಡಿ ಸಿನಿಮಾ 4 ದಿನಗಳ ಕಲೆಕ್ಷನ್ ಸಿನಿ ಪಂಡಿತರಿಗೆ ಅಚ್ಚರಿ ಮೂಡಿಸಿದೆ. ಬಾಲಯ್ಯನ ಅಭಿಮಾನಿಗಳಿಗೆ ಸಂಕ್ರಾಂತಿ ಉಡುಗೊರೆಯಾಗಿ ಬಿಡುಗಡೆಯಾದ ವೀರಸಿಂಹ ರೆಡ್ಡಿ ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿದೆ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿದ್ದ ಸಿನಿಮಾ ನಾಲ್ಕೇ ದಿನದಲ್ಲಿ 100 ಕೋಟಿ ಗಡಿಯನ್ನು ದಾಟಿದಿಯಂತೆ.ನಟ ಬಾಲಕೃಷ್ಣ ಅಭಿನಯದ ವೀರಸಿಂಹ ರೆಡ್ಡಿ ಚಿತ್ರ ಜನವರಿ 12ರಂದು ರಿಲೀಸ್ ಆಗಿದ್ದು ಚಿತ್ರ ಬಿಡುಗಡೆಗೆ ಕಾಯುತ್ತಿದ್ದ ಅಭಿಮಾನಿಗಳು ಬಾಲಯ್ಯ ವಿಶ್ವರೂಪವನ್ನು ಬೆಳ್ಳಿತೆರೆಯಲ್ಲಿ ನೋಡಿ ಹುಬ್ಬೇರಿಸುತ್ತಿದ್ದಾರೆ.ಬಾಲಕೃಷ್ಣ ಅವರ 107ನೇ ಚಿತ್ರವಾಗಿದ್ದು ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್‌ನಲ್ಲಿ ಬಹಳ ಪ್ರತಿಷ್ಠೆಯಿಂದ ತಯಾರಾದ ಸಿನಿಮಾದಲ್ಲಿ ಬಾಲಯ್ಯ ಜೊತೆ ನಾಯಕಿಯಾಗಿ ಶ್ರುತಿ ಹಾಸನ್ ನಟಿಸಿದ್ದಾರೆ.ಕನ್ನಡ ಸ್ಟಾರ್ ದುನಿಯಾ ವಿಜಯ್, ಹನಿ ರೋಸ್,ವರಲಕ್ಷ್ಮಿ ಶರತ್ ಕುಮಾರ್,ಮಲಯಾಳಂ ನಟ ಲಾಲ್,ನವೀನ್ ಚಂದ್ರ,ಮುರಳಿ ಶರ್ಮಾ,ಈಶ್ವರಿ ರಾವ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.ವೀರಸಿಂಹ ರೆಡ್ಡಿ ಚಿತ್ರ…

Read More

ನ್ಯೂಜ್ ಡೆಸ್ಕ್:ವೇಗದ ಜೀವನದ ಬೆನ್ನುಹತ್ತಿದಂತವರು ಅನಿವಾರ್ಯ ಸಂದರ್ಬಗಳಲ್ಲಿ ಅವಶ್ಯಕತೆಗಳಿಗೆ ತಕ್ಕಂತೆ ಜೀವನ ಮಾಡಲು ಕೆಲವೊಮ್ಮೆ ಕ್ರೆಡಿಟ್ ಕಾರ್ಡ್ ಪಡೆಯುವುದು ಇಂದಿನ ದಿನಗಳಲ್ಲಿ ಸಾಮಾನ್ಯ ಆದರೆ ಅದನ್ನು ಬಳಸಿಕೊಂಡಾಗ ಅದರ ಪಾವತಿಗಳನ್ನು ಸಮಯಕ್ಕೆ ಸರಿಯಾಗಿ ಮಾಡಲು ಕೆಲವೊಮ್ಮೆ ಸಾಧ್ಯವಾಗುವುದಿಲ್ಲ ಅದರಲ್ಲೂ ಸಂಬಳಗಾರರು ಮನೆಬಾಡಿಗೆ,ಇಎಂಐ,ಕರೆಂಟ್ ಬಿಲ್,ಗ್ಯಾಸ್ ಬಿಲ್,ವಾಟರ್ ಬಿಲ್, ಪೇಪರ್ ಬಿಲ್, ಡಿಟಿಎಚ್ ಬಿಲ್ ಹೀಗೆ ಹತ್ತಾರು ಪಾವತಿಗಳ ನಡುವೆ ಕ್ರೆಡಿಟ್ ಕಾರ್ಡ್ ಪಾವತಿಗಳನ್ನು ಮರೆತುಹೊಗಿರುತ್ತಾರೆ ಅದೇ ರೀತಿ, ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಹೊಂದಿದ್ದರೆ, ಕ್ರೆಡಿಟ್ ಕಾರ್ಡ್ ಪಾವತಿಯ ದಿನಾಂಕವನ್ನು ನೆನಪಿಟ್ಟುಕೊಳ್ಳುವುದು ಕಷ್ಟವಾಗುತ್ತದೆ. ನಿಮ್ಮ ಕ್ರೆಡಿಟ್ ಕಾರ್ಡ್ ಪಾವತಿಯನ್ನು ಅಂತಿಮ ದಿನಾಂಕದೊಳಗೆ ಮಾಡಲು ಸಾಧ್ಯವಾಗದಿದ್ದರೆ, ಚಿಂತಿಸುವ ಅವಶ್ಯಕತೆ ಇಲ್ಲ.ಇತ್ತೀಚೆಗಷ್ಟೇ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅವರಿಗೆ ಪರಿಹಾರ ನೀಡಲು ಮಹತ್ವದ ನಿರ್ಧಾರ ಕೈಗೊಂಡಿದೆ.ಬ್ಯಾಂಕ್‌ಗಳು ಮತ್ತು ಕ್ರೆಡಿಟ್ ಕಾರ್ಡ್ ವಿತರಕರು 3 ದಿನಗಳವರೆಗೆ ಕ್ರೆಡಿಟ್ ಕಾರ್ಡ್ ಪಾವತಿಯ ಅಂತಿಮ ದಿನಾಂಕ ತಪ್ಪಿದ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸಬಾರದು ಎಂದು ಸ್ಪಷ್ಟಪಡಿಸಿದೆ 3 ದಿನಗಳ…

Read More

ಕೋಲಾರ: ಕೋಲಾರ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ(SP)ನಾರಾಯಣ ಅವರನ್ನು ವರ್ಗಾವಣೆ ಮಾಡಲಾಗಿದೆ, ಇಲ್ಲಿ ಸೇವೆ ಸಲ್ಲಿಸಿದ್ದ ಡಿ.ದೇವರಾಜ್ ಅವರನ್ನು ಇಲ್ಲಿಂದ ವರ್ಗಾಯಿಸಲಾಗಿದ್ದು ಅವರಿಗೆ ಯಾವುದೇ ಹುದ್ದೆ ತೋರಿಸಿಲ್ಲ ಎಂದು ಹೇಳಲಾಗಿದೆ.ನಾರಯಣ ಅವರು ಗುಪ್ತಚರ ಇಲಾಖೆ ಎಸ್ಪಿಯಾಗಿದ್ದವರು. ಕೋಲಾರ ಜಿಲ್ಲಾ ಪೊಲೀಸ್ ನೂತನ ವರಿಷ್ಠಾಧಿಕಾರಿ ಎಂ.ನಾರಾಯಣ ಶುಕ್ರವಾರ ಸಂಜೆ ನಿರ್ಗಮಿತ ಎಸ್ಪಿ ಡಿ.ದೇವರಾಜ್‌ರಿಂದ ಅಧಿಕಾರ ಸ್ವೀಕರಿಸಿದರು.ಒಟ್ಟು 6 ಐಪಿಎಸ್​ ಅಧಿಕಾರಿಗಳ ವರ್ಗಾವಣೆರಾಜ್ಯ ಸರ್ಕಾರ ಇತ್ತೀಚೆಗೆ 53 ಐಪಿಎಸ್​ ಅಧಿಕಾರಿಗಳಿಗೆ ವೇತನ ಶ್ರೇಣಿ ಹೆಚ್ಚಿಸುವುದರ ಜೊತೆಗೆ ಬಡ್ತಿ ನೀಡಿತ್ತು. ಇದೀಗ 6 ಐಪಿಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ವರ್ಗಾವಣೆಕೊಂಡ ಅಧಿಕಾರಿಗಳ ಪಟ್ಟಿ ಹೀಗಿದೆ.ಎಂ.ನಾರಾಯಣ, ಪೊಲೀಸ್ ವರಿಷ್ಠಾಧಿಕಾರಿ, ಕೋಲಾರವೈ.ಎಸ್.ರವಿಕುಮಾರ್, ಡಿಐಜಿಪಿ, ನಿರ್ದೇಶಕ, ಮಾನವ ಹಕ್ಕುಗಳ ಜಾರಿ ನಿರ್ದೇಶನಾಲಯದಿವ್ಯಾ ವಿ.ಗೋಪಿನಾಥ್, ನಿರ್ದೇಶಕರು, ಕರ್ನಾಟಕ ಪೊಲೀಸ್​ ಅಕಾಡೆಮಿ, ಮೈಸೂರುಆರ್.ಚೇತನ್, ಕಲಬುರಗಿ ನಗರ ಪೊಲೀಸ್​ ಕಮಿಷನರ್ಹನುಮಂತರಾಯ, ಪೊಲೀಸ್ ವರಿಷ್ಠಾಧಿಕಾರಿ, ಗುಪ್ತದಳ ಹಾವೇರಿಡಾ. ಶಿವಕುಮಾರ್, ಪೊಲೀಸ್ ವರಿಷ್ಠಾಧಿಕಾರಿ, ಹಾವೇರಿವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ವರ್ಗಾವಣೆಈ ಹಿಂದೆ 4 ಹಿರಿಯ ಐಪಿಎಸ್…

Read More