ಶ್ರೀನಿವಾಸಪುರ:ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಮಹಾನ್ ಗ್ರಂಥ ಭಾರತದ ಸಂವಿಧಾನದ ಶಕ್ತಿಯ ಫಲ ದೇಶವನ್ನು ಬಲಿಷ್ಠವಾಗಿ ಮುನ್ನಡೆಸಲು ಕಾರಣವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ ಹೇಳಿದರು ಅವರು ತಾಲೂಕಿನ ಆಂಧ್ರದ ಗಡಿಯಂಚಿನ ಕೊನೆಯ ಗ್ರಾಮ ಪುಲಗೂರಕೋಟೆ ಗ್ರಾಮದಲ್ಲಿ ದಲಿತ ಸೇನೆ ಮತ್ತು ವಿವಿಧ ದಲಿತ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಪುತ್ತ್ತಳಿ ಅನಾವರಣ ಕಾರ್ಯಕ್ರದಲ್ಲಿ ಭಾಗವಹಿಸಿ ಮಾತನಾಡಿದರು. ಭಾರತದಲ್ಲಿ ಎಲ್ಲಾ ಸಮಾಜಗಳು ಸಮಾನತೆಯ ಬಾಳ್ವೆ ನಡೆಸಲು ಸಂವಿಧಾನ ಮುಖ್ಯ ಕಾರಣವಾಗಿದೆ ಅಂತಹ ಮಹನೀಯನ ಪುತ್ತಳಿಯ ಅನಾವರಣ ಕಾರ್ಯಕ್ಕೆ ನೆರವು ನೀಡಿರುವ ಈ ಭಾಗದ ಬುಲೆಟ್ ಗಂಗುಲಪ್ಪ ಕುಟುಂಬದ ಸದಸ್ಯರು,ಬೆಂಗಳೂರು ಆದಿತ್ಯಬಾಬು ಇತರೆ ಮುಖಂಡರ ಕಾರ್ಯ ಶ್ಲಾಘನೀಯ ಎಂದ ಅವರು ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಹೋಬಳಿಗೊಂದು ಡಾ.ಬಿ.ಆರ್.ಅಂಬೇಡ್ಕರ್ ಪುತ್ತಳಿ ಸ್ಥಾಪಿಸಲು ಯುವ ಸಮುದಾಯ ಮುಂದಾಗುವಂತೆ ಹೇಳಿದರು.ಕೋಲಾರ ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ನೀಲಟೂರುಚಿನ್ನಪ್ಪರೆಡ್ಡಿ ಮಾತನಾಡಿ, ಬಿ.ಆರ್. ಅಂಬೇಡ್ಕರ್ ಅವರು ಒಂದು ಸಮಾಜಕ್ಕೆ ಸೀಮಿತವಾದ ವ್ಯಕ್ತಿಯಲ್ಲ ದೇಶದ ಎಲ್ಲ…
Author: Srinivas_Murthy
ನ್ಯೂಜ್ ಡೆಸ್ಕ್: ದುಷ್ಕರ್ಮಿಗಳ ಅಟ್ಟಹಾಸ ದಿನದಿಂದ ದಿನಕ್ಕೆ ಎಲ್ಲೆ ಮೀರುತ್ತ ಅರಾಜಕತೆ ಸೃಷ್ಟಿಸುತ್ತ ಸಮಾಜದ ಸ್ವಾಸ್ಥ್ಯ ಕದಡುತ್ತಿದ್ದಾರೆ ಹಾದಿ ತಪ್ಪಿದ ಯುವಕರು ಹಿಂಸಾತ್ಮಕವಾಗಿ ವರ್ತಿಸುತ್ತ ಸಣ್ಣ ಪುಟ್ಟ ಕಾರಣಗಳಿಗೆ ರೌಡಿಸಂ ಮಾಡುವಷ್ಟು ಮುಂದಾಗಿದ್ದು ಅಮಾಯಕರ ಮೇಲೆ ಹಲ್ಲೆ ನಡೆಸುತ್ತ ಸಮಾಜಕ್ಕೆ ಕಂಟಕರಾಗುತ್ತಿದ್ದಾರೆ, ಅಸಹಾಯಕರನ್ನು ಹೊಡೆಯುವುದೇ ಹೀರೋಯಿಸಂ ಅಂತ ಕೆಲವರು ಭಾವಿಸಿಕೊಂಡಿದ್ದಾರೆ.ಮೊನ್ನೆ ಬೆಂಗಳೂರಿನ ಕುಂದಲಹಳ್ಳಿ ಘಟನೆಯಲ್ಲಿ ಯುವಕರು ನಡೆಸುತ್ತಿದ್ದ ಬೇಕರಿ ಮೇಲಿನ ದಾಳಿ ನಡೆಸಿದ ಪುಂಡರು ಬೇಕರಿಯಲ್ಲಿನ ಯುವಕರನ್ನು ಹೊಡೆದು ಅಂದರ್ ಆಗಿದ್ದಾರೆ ಅಂತಹುದೆ ಘಟನೆಯೊಂದು ಡಿಸೆಂಬರ್ 30 ರಂದು ಗುರುವಾರ ತೆಲಂಗಾಣದ ಹನ್ಮಕೊಂಡದ ನಯೀಮ್ ನಗರದಲ್ಲಿ ನಡೆದಿದೆ.ತಡಸಂಜೆ ಬಾಗಿಲು ಹಾಕುವ ಸಮಯದಲ್ಲಿ ಇಬ್ಬರು ಯುವಕರು ರಿಯಾನ್ಸ್ ಪುರುಷರ ಬ್ಯೂಟಿ ಪಾರ್ಲರ್ ಗೆ ಬಂದಿದ್ದಾರೆ ಅಲ್ಲಿದ್ದ ಯುವಕನಿಗೆ ಕಟಿಂಗ್ ಮಾಡಲು ಹೇಳಿದ್ದಾರೆ ಅದಕ್ಕೆ ಬ್ಯೂಟಿ ಪಾರ್ಲರ್ ಯುವಕ ರಾತ್ರಿಯಾಗಿದೆ ಈಗ ಸಾಧ್ಯವಿಲ್ಲ ಬೆಳಗ್ಗೆ ಬನ್ನಿ ಎಂದು ವಿನಯದಿಂದ ಹೇಳಿದ್ದಾನೆ, ಅದಕ್ಕೆ ಬಂದಿದ್ದ ಇಬ್ಬರು ಯುವಕರು ಅದೆಲ್ಲ ಆಗುವುದಿಲ್ಲ ಈಗಲೆ ಕಟಿಂಗ್ ಮಾಡುವಂತೆ ಒತ್ತಾಯಿಸಿದ್ದಾರೆ…
ನ್ಯೂಜ್ ಡೆಸ್ಕ್: ತಿರುಮಲ ಶ್ರೀ ವೆಂಕಟೇಶ್ವರ ದೇವಾಲಯದ ವೈಕುಂಠ ಏಕಾದಶಿ ದರ್ಶನದ ಟಿಕೆಟ್ ತಿರುಮಲ-ತಿರುಪತಿ ದೇವಾಲಯದ ವೆಬ್ ಪುಟದಲ್ಲಿ ಬಿಡುಗಡೆಯಾದ 40 ನಿಮಿಷದಲ್ಲಿ ಸಂಪೂರ್ಣವಾಗಿ ಕಾಲಿಯಾಗಿದೆ. ತಿರುಮಲ ಶ್ರೀವಾರಿ ವೈಕುಂಠ ದ್ವಾರಕ್ಕೆ ಭೇಟಿ ನೀಡಲು ಭಕ್ತರಿಂದ ನಿರೀಕ್ಷೆಗೂ ಮೀರಿದ ಬೇಡಿಕೆ ಬರುತ್ತಿದ್ದ ಹಿನ್ನಲೆಯಲ್ಲಿ 10 ದಿನಗಳ ವೈಕುಂಠ ದ್ವಾರ 300 ರೂಗಳ 2 ಲಕ್ಷ ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳನ್ನು TTD ‘Tirupathibalaji.ap.govv.in’ ವೆಬ್ ಸೈಟ್ ಮೂಲಕ ಇಂದು ಶನಿವಾರ ಬೆಳಗ್ಗೆ ಒಂಬತ್ತು ಗಂಟೆಗೆ ಬಿಡುಗಡೆ ಮಾಡಿದ್ದು ಕೆವಲ 40 ನಿಮಿಷಗಳಲ್ಲಿ ಟಿಕೆಟ್‌ಗಳು ಮಾರಾಟವಾಗಿದೆ. ಟಿಕೆಟ್‌ಗಳು ಮಾರಟವಾಗಿರುವುದು ತಿಳಿಯದ ಭಕ್ತರು ಇನ್ನೂ ವೆಬ್ ಸೈಟ್‌ನಲ್ಲಿ ಟಿಕೆಟ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರಂತೆ. ಮತ್ತೊಂದೆಡೆ, ಸರ್ವ ದರ್ಶನಂ ಜನವರಿ 1 ರಂದು ತಿರುಪತಿಯಲ್ಲಿ ಭಕ್ತರಿಗೆ ಆಫ್‌ಲೈನ್ ಮೋಡ್ ಮೂಲಕ ಟಿಟಿಡಿ ಟೋಕನ್‌ಗಳನ್ನು ಹಂಚಿಕೆ ಮಾಡುತ್ತಿದೆ. ತಿರುಪತಿಯ 9 ಕೇಂದ್ರಗಳ ಮೂಲಕ ದಿನಕ್ಕೆ 50 ಸಾವಿರದಂತೆ 5 ಲಕ್ಷ ಟಿಕೆಟ್‌ಗಳನ್ನು ಟಿಟಿಡಿ ಬಿಡುಗಡೆ ಮಾಡಲಿದೆ. TTD ಅಧ್ಯಕ್ಷ…
ಶ್ರೀನಿವಾಸಪುರ:ಸಾರ್ವಜನಿಕ ಜೀವನದಲ್ಲಿ ಇರುವಂತ ವ್ಯಕ್ತಿಗಳ ಹುಟ್ಟುಹಬ್ಬದ ಕಾರ್ಯಕ್ರಮಗಳು ಸಾರ್ವಜನಿಕವಾಗಿ ಆಚರಿಸಿಕೊಂಡಾಗ ಅವರ ಬದುಕಿನಲ್ಲಿ ಸಾಮಾಜಿಕ ಕಳಕಳಿ ಮತ್ತು ಜವಾಬ್ದಾರಿ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿನಾರಯಣಸ್ವಾಮಿ ಹೇಳಿದರು ಅವರು ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಇಂದಿರಾಭವನ್ ರಾಜಣ್ಣರವರ ಹುಟ್ಟುಹಬ್ಬದ ಅಂಗವಾಗಿ ಜೆಡಿಎಸ್ ಕಾರ್ಯಕರ್ತರು ಮತ್ತು ರಾಜಣ್ಣ ಅಭಿಮಾನಿಗಳು ತಾಲೂಕಿನ ಅರಿಕುಂಟೆ ವೃದ್ಧಾಶ್ರಮದ ಹಿರಿಯ ನಾಗರಿಕರಿಗೆ ಸ್ವೇಟರ್ ಹಾಗು ಇತರೆ ಪರಿಕರಗಳನ್ನು ವಿತರಿಸಿ ಮಾತನಾಡಿ ಹುಟ್ಟುಹಬ್ಬದ ಆಚರಣೆ ಅರ್ಥ ಪೂರ್ಣವಾಗಿದ್ದಾಗ ಅದಕ್ಕೆ ಗೌರವ ಹೆಚ್ಚಾಗುತ್ತದೆ ಎಂದರು.ಇಂದಿರಾಭವನ್ ರಾಜಣ್ಣ ಮಾತನಾಡಿ ಅಭಿಮಾನಿಗಳು ಮತ್ತು ಕಾರ್ಯಕರ್ತರು ಅಭಿಮಾನದಿಂದ ಆಯೋಜಿಸುವ ಕಾರ್ಯಕ್ರಮಗಳಿಗೆ ಬೆಲೆ ಕಟ್ಟಲಾಗದ್ದು ಅವರಿಗೆ ಚಿರಋಣಿ ಎಂದರು ಇದೇ ಸಂದರ್ಭದಲ್ಲಿ ಇಂದಿರಾಭವನ್ ವೃತ್ತದಲ್ಲಿ ಕೆಕ್ ಕತ್ತರಿಸಿದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ವಿತರಿಸಿದರು.ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಸದಸ್ಯ ಮಂಜುನಾಥಗೌಡ,ಜಗದೀಶ್,ಕಾರ್ ಬಾಬು,ಉದ್ಯಮಿ ಅಂಬೇಡ್ಕರ್ ಪಾಳ್ಯ ರವಿ, ಗೋರವಿಮಾಕಲಹಳ್ಳಿಶ್ರೀನಿವಾಸ್,ಗುರುಮೂರ್ತಿ,ಅವಲಕುಪ್ಪರಾಮಚಂದ್ರ,ಜಗನ್,ಬಿ.ಎಲ್.ದುರ್ಗ,ಪ್ರೇಮ್,ಪೂಲುಶಿವಾರೆಡ್ಡಿ ಮುಂತಾದವರು ಇದ್ದರು.
ರಾಜ್ಯದಲ್ಲಿ ಆರೋಗ್ಯ ಇಲಾಖೆ ನೂತನ ಮಾರ್ಗಸೂಚಿ ಬಿಡುಗಡೆ. ವಿಮಾನ ನಿಲ್ದಾಣದಲ್ಲಿ ಹೊರಗಿನಿಂದ ಬರುವವರ ಸಂಪೂರ್ಣ ತಪಾಸಣೆ. ಬೂಸ್ಟರ್ ಡೋಸ್ ತೆಗೆದುಕೊಳ್ಳದವರು ಈ ಕೂಡಲೆ ಪಡೆದುಕೊಳ್ಳುಲು ಮನವಿ. ಪ್ರತಿ ತಾಲ್ಲೂಕಲ್ಲೂ ಕೋವಿಡ್ ಆಸ್ಪತ್ರೆ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ. ನ್ಯೂಜ್ ಡೆಸ್ಕ್: ಕರ್ನಾಟಕದಲ್ಲೂ ಮುನ್ನಚ್ಚೆರಿಕೆಯಾಗಿ ಮುಖ್ಯಮಂತ್ರಿ ಅರೋಗ್ಯಸಚಿವರು ಅಧಿಕಾರಿಗಳ ಸಭೆ ನಡೆಸಿ ಕಟ್ಟೆಚ್ಚರ ವಹಿಸಲು ಸೂಚಿಸಿದ್ದು ಅದರಂತೆ ಆರೋಗ್ಯ ಇಲಾಖೆ ನೂತನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ, ಮಾಸ್ಕ್ ಕಡ್ಡಾಯ ಸೇರಿದಂತೆ, ಸಾರ್ವಜನಿಕ ಸಭೆ,ಮದುವೆ ಸಮಾರಂಭಗಳಿಗೆ ಜಾಗ್ರತೆ ವಹಿಸುವಂತೆ ಸೂಚಿಸಿದೆ.ಪ್ರತಿ ತಾಲ್ಲೂಕಿನಲ್ಲಿ ಕೋವಿಡ್ ಆಸ್ಪತ್ರೆ ಇರುತ್ತದೆ ಮತ್ತು ಖಾಸಗಿ ಆಸ್ಪತ್ರೆಗಳು ಕೂಡಾ ಕೋವಿಡ್ -19 ರೋಗಿಗಳಿಗೆ ಕೆಲವು ಹಾಸಿಗೆಗಳನ್ನು ಕಾಯ್ದಿರಿಸುತ್ತವೆ. ಶೇ. 80 ರಷ್ಟು ಜನರು ಇನ್ನೂ ಬೂಸ್ಟರ್ ಡೋಸ್ ತೆಗೆದುಕೊಂಡಿಲ್ಲ. ಅಂತಹವರು ಕೂಡಲೇ ಡೋಸ್ ಪಡೆದುಕೊಳ್ಳಬೇಕು ಎಂದು ರಾಜ್ಯ ಆರೋಗ್ಯ ಸಚಿವ ಡಾ.ಸುಧಾಕರ್ ಸಲಹೆ ನೀಡಿದ್ದಾರೆ.ಸಾಕಷ್ಟು ಲಸಿಕೆ ದಾಸ್ತಾನು ಇದೆಯೇ ಎಂದು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರ ಕೇಂದ್ರದೊಂದಿಗೆ ಸಂಪರ್ಕದಲ್ಲಿದೆ.ವಿಮಾನ ನಿಲ್ದಾಣದಲ್ಲಿ ಹೊರಗಿನಿಂದ ಬರುವವರನ್ನು ಸಂಪೂರ್ಣ…
ಶ್ರೀನಿವಾಸಪುರ: ತಾಲೂಕಿನ ರಾಯಲ್ಪಾಡು ಹೋಬಳಿಯ ಯಂಡ್ರಕಾಯಿಲಗುಂಟ ಗ್ರಾಮದ ದೇವಾಲಯಕ್ಕೆ ಸಮಾಜಸೇವಕ ಗೂಂಜೂರುಶ್ರೀನಿವಾಸರೆಡ್ದಿ ಧ್ವನಿವರ್ಧಕ ಹಾಗು ಇತರೆ ಪರಿಕರಗಳು ಕೊಡುಗೆಯಾಗಿ ನೀಡಿದರು.ಈ ಸಂದರ್ಬದಲ್ಲಿ ಮಾತನಾಡಿದ ಶ್ರೀನಿವಾಸರೆಡ್ದಿ ಗ್ರಾಮದ ಯುವಸಮುದಾಯ ನಮ್ಮ ಬಣಕ್ಕೆ ಸೇರ್ಪಡೆಯಾಗಿದ್ದು ಅವರು ಹಣ ಸೇರಿದಂತೆ ಇನ್ನಿತರೆ ಯಾವುದೆ ವೈಯುಕ್ತಿಕ ಆಮೀಷಕ್ಕೆ ಒಳಗಾಗದೆ ದೇವಾಲಯದ ಅಭಿವೃದ್ಧಿಗೆ ಸಹಕಾರ ನೀಡುವಂತೆ ಮನವಿ ಮಾಡಿದ್ದರು ಅದರಂತೆ ಆರಂಭಿಕವಾಗಿ ಧ್ವನಿವರ್ಧಕ ಸೇರಿದಂತೆ ಇನ್ನಿತರೆ ಪರಿಕರಗಳನ್ನು ಕೊಡುಗೆಯಾಗಿ ಕೊಡುತ್ತಿದ್ದೇವೆ ಮುಂದಿನ ದಿನಗಳಲ್ಲಿ ಗ್ರಾಮದ ಅಭಿವೃದ್ಧಿಗೆ ಸಂಪೂರ್ಣವಾದ ಸಹಕಾರ ನೀಡುವುದಾಗಿ ಹೇಳಿದರು.ಇದೇ ಸಂದರ್ಬದಲ್ಲಿ ಹೋಳೂರು ಹೋಬಳಿಯ ಮಾರೇನಹಳ್ಳಿ ಗ್ರಾಮದ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯಕ್ಕೆ ಪೈಂಟ್ ಬಳಿಯಲು ಧನಸಹಾಯ ಮಾಡಿರುತ್ತಾರೆ.ಈ ಕಾರ್ಯಕ್ರಮದಲ್ಲಿ ಜಿ.ಎಸ್.ಆರ್ ಬಣದ ಮುಖಂಡರಾದ ಎಪಿಎಂಸಿ ಮಾಜಿ ಅಧ್ಯಕ್ಷ ಪೆದ್ದರೆಡ್ಡಿರಾಜೇಂದ್ರಪ್ರಸಾದ್,ಪಠಾಣ್ ಷಫಿ,ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅತ್ತಿಕುಂಟೆರಾಜಶೇಖರೆಡ್ದಿ,ಯಂಡ್ರಕಾಯಿಲಗುಂಟ ಗ್ರಾಮದ ವೆಂಕಟರಮಣ,ನರಸಿಂಹಯ್ಯ,ರವಣಪ್ಪ,ಮುಂತಾದವರು ಇದ್ದರು.
ಶ್ರೀನಿವಾಸಪುರ:ರಾಜ್ಯದಲ್ಲಿರುವ ಆಡಳಿತ ರೂಡ ಬಿಜೆಪಿ ಸರ್ಕಾರ ದಲಿತ ಸಮುದಾಯಗಳಿಗೆ ನ್ಯಾಯೋಚಿತವಾದ ಮೀಸಲಾತಿ ಜಾರಿಮಾಡಲು ಉಪ ಸಮಿತಿ ರಚಿಸಿ ಚುನಾವಣೆ ಗಿಮಿಕ್ ಮಾಡುತ್ತಿದೆ ಎಂದು ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವರಾಜ್ ಆರೋಪಿಸಿದರು.ಅವರು ಮಾದಿಗ ದಂಡೋರ ಮೀಸಲಾತಿ ಹೊರಾಟ ಸಮಿತಿ ಶ್ರೀನಿವಾಸಪುರ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸಂದರ್ಭದಲ್ಲಿ ಪಾಲ್ಗೋಂಡಿದ್ದ ಅವರು ದಲಿತ ಸಮುದಾಯಗಳ ಮೀಸಲಾತಿ ವಿಚಾರದಲ್ಲಿ ಸರ್ಕಾರದ ನಡವಳಿಕೆಗಳ ವಿರುದ್ದ ಕಿಡಿ ಕಾರಿದರು,ಸರ್ಕಾರ ಸದಾಶಿವ ಆಯೋಗದ ವರದಿ ಜಾರಿ ಮಾಡಲು ಉಪ ಸಮಿತಿ ರಚನೆ ಮಾಡಿ ಅದಕ್ಕೆ ಕಾನೂನು ಮಂತ್ರಿ ಮಾಧುಸ್ವಾಮಿಯವರನ್ನು ಅಧ್ಯಕ್ಷರನ್ನಾಗಿ ಮಾಡಿರುವ ಬಿಜೆಪಿ ಸರ್ಕಾರ ಚುನಾವಣೆ ಹತ್ತಿರ ಬರುತ್ತಿದ್ದಂತೆ ದಲಿತ ಸಮುದಾಯಗಳನ್ನು ದಾರಿ ತಪ್ಪಿಸುವಂತ ಕೆಲಸವನ್ನು ವ್ಯವಸ್ಥಿತವಾಗಿ ಮಾಡುವಲ್ಲಿ ಮುಂದಾಗಿದೆ ಎಂದು ದೂರಿದರು ಸಮುದಾಯಕ್ಕೆ ಅನ್ಯಾಯ ಮಾಡದೆ ಚಳಿಗಾಲ ಅಧಿವೇಶನದಲ್ಲಿ ಮೊದಲ ದಿನವೆ ಸದಾಶಿವ ಆಯೋಗ ವರದಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿದರು.ಸರ್ಕಾರ ಈ ಬಗ್ಗೆ ಮುಂದಾಗದಿದ್ದರೆ ಮಾದಿಗ ಸಮುದಾಯದ…
ಶ್ರೀನಿವಾಸಪುರ: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ ಗ್ರಾಮವಾಸ್ತವ್ಯ ಕಾರ್ಯಕ್ರಮ ಇತ್ತಿಚಿಗೆ ಅಧಿಕಾರಿಗಳ ಅಸಡ್ಡೆಗೆ ತುತ್ತಾಗಿದೆ ಕಾಟಾಚಾರಕ್ಕೆ ನಡೆಯುತ್ತಿದೆಯೋನೋ ಎಂಬಂತೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ರೂಪಿತವಾಗುತ್ತಿದೆ.ಶ್ರೀನಿವಾಸಪುರ ತಾಲ್ಲೂಕಿನ ಆಂಧ್ರದ ಗಡಿಯಂಚಿನ ಮಟ್ಟಕನ್ನಸಂದ್ರ ಗ್ರಾಮದಲ್ಲಿ ಆಯೋಜಿಸಿದ್ದಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಬೆರಳೆಣಿಕೆ ಸಾರ್ವಜನಿಕರು ಮಾತ್ರ ಹಾಜರಿದ್ದು ಬಹುತೇಕ ಶಾಲ ವಿದ್ಯಾರ್ಥಿಗಳು ದೊಡ್ಡಸಂಖ್ಯೆಯಲ್ಲಿ ಹಾಜರಾಗಿ ಶಾಮಿಯಾನದಲ್ಲಿ ಹಾಕಲಾಗಿದ್ದ ಚೇರುಗಳನ್ನು ಕಾಲಿ ಇಡದೆ ಕುಳತಿದ್ದರು.ಸಾರ್ವಜನಿಕರ ಬಳಿಗೆ ಸರ್ಕಾರದ ಆಡಳಿತ ತಲುಪಲು ರಾಜ್ಯ ಸರ್ಕಾರ ಮಹತ್ವಕಾಂಕ್ಷಿಯಾಗಿ ರೂಪಿಸಿರುವ ಗ್ರಾಮವಾಸ್ತವ್ಯ ಕಾರ್ಯಕ್ರಮ ರಾಜ್ಯ ಸರ್ಕಾರದ ಪ್ರಭಾವಿ ಸಚಿವರೆ ಗ್ರಾಮಗಳಲ್ಲಿ ವಾಸ್ತವ್ಯ ಹೂಡುತ್ತ ಸರ್ಕಾರವನ್ನು ಜನರತ್ತ ತಗೆದುಕೊಂಡು ಹೋದರೆ ಇತ್ತ ಶ್ರೀನಿವಾಸಪುರದಂತ ಹಿಂದುಳಿದ ತಾಲೂಕಿನಲ್ಲಿ ಗ್ರಾಮವಾಸ್ತವ್ಯ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳೆ ಗೈರಾಗಿದ್ದರು ಇನ್ನು ತಾಲೂಕು ದಂಡಾಧಾರಿಗಳು ಬಾರದೆ ಸ್ಥಳಿಯ ಮಟ್ಟದ ಬೆರಳಣಿಕೆ ಅಧಿಕಾರಿಗಳು ಕಾಟಾಚಾರಕ್ಕೆ ಬಂದಿದ್ದರು. ಗ್ರಾಮವಾಸ್ತವ್ಯದ ಕುರಿತಾಗಿ ಜನಸ್ನೇಹಿ ಕಾರ್ಯಕ್ರಮ ರೂಪಿಸಬೇಕಿದ್ದ ಕಂದಾಯ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ನೃತ್ಯ ನೋಡಿಕೊಂಡು ಸಮಯ ಕಳೆದಿದ್ದು ತಾಲೂಕು ಆಡಳಿತದ…
ಶ್ರೀನಿವಾಸಪುರ:ಕರ್ನಾಟಕದ ರೈತರ,ಗ್ರಾಮೀಣ ಜನರ ಹಾಗು ಸಾಮಾನ್ಯ ಜನರ ಬವಣೆ ನೀಗಿಸಿ ಅವರು ಅಭಿವೃದ್ಧಿಯಾಗಲು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕಿದೆ ಎಂದು ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿನಾರಯಣಸ್ವಾಮಿ ಹೇಳಿದರು ಅವರು ತಾಲೂಕಿನಲ್ಲಿ ಜೆಡಿಎಸ್ ಕಾರ್ಯಕರ್ತರು ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹುಟ್ಟುಹಬ್ಬದ ಪ್ರಯುಕ್ತ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣುಹಂಪಲು ವಿತರಿಸಿ ಮಾತನಾಡಿ ರಾಷ್ಟ್ರೀಯ ಪಕ್ಷಗಳ ನಿರ್ಲಕ್ಷ್ಯ ಅಡಳಿತದಿಂದ ರಾಜ್ಯ ವಿವಿಧ ಸಮಸ್ಯೆಗಳಿಂದ ಅಭಿವೃದ್ಧಿ ವಿಚಾರದಲ್ಲಿ ಹಿಂದೆ ಬಿದ್ದಿದೆ ಎಂದರು.ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಇಂದಿರಾಭವನ್ ರಾಜಣ್ಣ ಮಾತನಾಡಿ ಜನಸಾಮಾನ್ಯರ ಬದುಕಿನಲ್ಲಿ ಆಶಾಕಿರಣವಾಗಿರುವ ಕುಮಾರಸ್ವಾಮಿ ಈ ರಾಜ್ಯದ ಮುಖ್ಯಮಂತ್ರಿಯಾದರೆ ರಾಜ್ಯ ಅಭಿವೃದ್ಧಿ ಪಥದತ್ತ ಸಾಗುತ್ತದೆ ಎಂದರು.ಜೆಡಿಎಸ್ ಕಾರ್ಯಕರ್ತರು ಪಟ್ಟಣದ ಇಂದಿರಾಭವನ್ ವೃತ್ತದಲ್ಲಿ ಪಟಾಕಿ ಸಿಡಿಸಿ ಕೆಕ್ ಕತ್ತರಿಸಿ ಸಂಭ್ರಮಿಸಿದರು.ಈ ಸಂದರ್ಬದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಶ್ರೀನಿವಾಸಪ್ಪ,ಅಂಬೇಡ್ಕರ್ ಪಾಳ್ಯ ರವಿ,ಕಾರ್ ಬಾಬು, ಮಂಜುನಾಥಗೌಡ,ನಾಗದೇನಹಳ್ಳಿ ಚೌಡರೆಡ್ಡಿ,ಜಗದೀಶ್,ನಿವೃತ್ತ ಶಿಕ್ಷಕ ವೆಂಕಟರೆಡ್ಡಿ ಮುಂತಾದವರು ಇದ್ದರು.
ನ್ಯೂಜ್ ಡೆಸ್ಕ್: ಶ್ರೀ ವೇದನಾರಾಯಣ ಸ್ವಾಮಿ ದೇವಾಲಯದಲ್ಲಿ ಭಗವಾನ್ ಶ್ರೀ ಮಹಾವಿಷ್ಣುವಿನ ದಶಾವಾತರಗಳಲ್ಲಿ ಒಂದಾದ ಮತ್ಸ್ಯಾವತಾರ (ಮೀನಿನ) ರೂಪದಲ್ಲಿ ದರ್ಶನ ನೀಡುವ ಶ್ರೀ ವೇದನಾರಾಯಣಸ್ವಾಮಿ ದೇವಾಲಯ ಕ್ಷೇತ್ರದ ಇತಿಹಾಸದಲ್ಲಿರುವಂತೆ ಸೋಮಕಾಸುರ ಎಂಬ ರಾಕ್ಷಸನು ಬ್ರಹ್ಮ ದೇವರಿಂದ ವೇದಗಳನ್ನು ಕದ್ದು ಸಮುದ್ರ ಗರ್ಭದಲ್ಲಿ ಬಚ್ಚಿಟ್ಟಿದ್ದಾಗ ಶ್ರೀ ಮಹಾ ವಿಷ್ಣುವು ಮತ್ಸ್ಯಾವತಾರ (ಮೀನಿನ) ರೂಪದಲ್ಲಿ ಹೋಗಿ ಸಮುದ್ರದ ಗರ್ಭದಲ್ಲಿದ್ದ ಸೋಮಕಾಸುರನನ್ನು ಕೊಂದು ಬ್ರಹ್ಮದೇವನಿಗೆ ವೇದಗಳನ್ನು ಪುನಃ ವಾಪಸ್ಸು ತಂದುಕೊಟ್ಟ ಸ್ಥಳ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ ಇದನ್ನು ವೇದಪುರಿ,ವೇದಾರಣ್ಯ ಕ್ಷೇತ್ರ, ಹರಿಕಂಠಪುರವೆಂದೂ ಕರೆಯಲಾಗುತ್ತಿತ್ತು. ಈ ಸ್ಥಳದಲ್ಲಿ ಪಲ್ಲವರ ಯುಗದ ಆಡಳಿತದಲ್ಲಿ ಭೂದೇವಿ ಶ್ರೀದೇವಿ ಸಮೇತರಾಗಿ ಶ್ರೀ ಕರಿಯ ಮಾಣಿಕ್ಯ ಪೆರುಮಾಳ್ ಎಂಬ ಈ ಸಣ್ಣ ದೇವಾಲಯ ನಿರ್ಮಿಸಲಾಗಿತ್ತು.ನಂತರದಲ್ಲಿ ವಿಜಯನಗರ ಸಾಮ್ರಾಜ್ಯಾಧಿಶ ಶ್ರೀಕೃಷ್ಣದೇವರಾಯ 1517 ರಲ್ಲಿ ಕುಂಭಕೋಣಂನತ್ತ ಹೋಗುವಾಗ ದಾರಿಯಲ್ಲಿ ತಿರುಮಲ ಶ್ರೀ ವೆಂಕಟೇಶ್ವರನ ದರ್ಶನ ಪಡೆದು ಹರಿಕಂಠಪುರದಲ್ಲಿ ಬಿಡಾರ ಹೂಡಿದನು.ಆಗ ಇಲ್ಲಿನ ದೇವಾಲಯದ ಮಹತ್ವ ಅರಿತು ದೇವಾಲವನ್ನು ಅಭಿವೃದ್ಧಿ ಮಾಡಿ ನಿರ್ಮಾಣಕ್ಕೆ ಸಹಕಾರ ನೀಡಿದ…