Author: Srinivas_Murthy

ಶ್ರೀನಿವಾಸಪುರ:ತಾಲೂಕಿನಲ್ಲಿ ಆಮ್ ಆದ್ಮಿ ಪಕ್ಷ ಸಂಘಟನೆಯಲ್ಲಿ ಖ್ಯಾತ ವೈದ್ಯ ಡಾ.ವೆಂಕಟಾಚಲ ಪೂರ್ತಿಯಾಗಿ ತೊಡಗಿಸಿಕೊಂಡು ತಾಲೂಕಿನಾದ್ಯಂತ ಗ್ರಾಮೀಣ ಭಾಗದಲ್ಲಿ ಆರೋಗ್ಯ ಶಿಭಿರಗಳನ್ನು ಆಯೋಜಿಸುತ್ತ ಜನರ ನಾಡಿ ಮೀಡಿತ ಹಿಡಿದು ಸಾಗುತ್ತಿದ್ದಾರೆ.ಈ ಬಗ್ಗೆ ಮಾತನಾಡಿರುವ ಅವರು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಆರೋಗ್ಯ ಶಿಭಿರಗಳನ್ನು ಆಯೋಜಿಸಿ ಜನರ ಆರೋಗ್ಯ ಆಂದೋಲನ ಮೂಲಕ ಚಿಕಿತ್ಸೆ ಕೊಡುವುದು ಸೇರಿದಂತೆ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳ ಕುರಿತಾದ ಮಾಹಿತಿ ಸಂಗ್ರಹಣೆ ಹಾಗು ಆರೋಗ್ಯ ಜಾಗ್ರತೆ ಮೂಡಿಸುತ್ತಿದ್ದೇವೆ ಎನ್ನುತ್ತಾರೆ ಇಲ್ಲಿನ ರಾಜಕೀಯ ವ್ಯವಸ್ಥೆಯಲ್ಲಿ ಮಾನವೀಯತೆ ಇಲ್ಲದಂತಾಗಿದೆ ಹಿರಿಯರ ನಿರ್ಲಕ್ಷತ್ಯೆ ಗ್ರಾಮೀಣರ ಆರೋಗ್ಯದ ಬಗ್ಗೆ ಉದಾಸೀನ ಇಲ್ಲಿ ಎದ್ದು ಕಾಣುತ್ತಿದೆ ಎಂದ ಅವರು ಕ್ಷೇತ್ರದಲ್ಲಿ ಸರ್ಕಾರದವತಿಯಿಂದ ನೀಡುವ ಮೂಲಭೂತ ಸೌಕರ್ಯಗಳನ್ನು ಓಟು ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು. ಪ್ರತಿ ಸಂತೇಯಲ್ಲೂ ಆರೋಗ್ಯ ಕೇಂದ್ರತಾಲೂಕಿನಲ್ಲಿ ನಡೆಯುವಂತ ಪ್ರತಿ ಸಂತೆಯಲ್ಲೂ ಡಾ.ವೆಂಕಟಾಚಲ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿ ಅಲ್ಲಿಗೆ ಬರುವಂತ ಜನರ ಮಧುಮೇಹ,ರಕ್ತದೊತ್ತಡದಂತ ಖಾಯಿಲೆಗಳನ್ನು ಪರಿಕ್ಷಿಸಿ ಅಂತಹ ವ್ಯಕ್ತಿಗಳಿಗೆ ಸಮತೋಲನಾ ಆಹಾರಪದ್ದತಿ ಮತ್ತು ಜೀವನ ಶೈಲಿ ಕುರಿತಾಗಿ…

Read More

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಮಹಾನಗರದ ಅಷ್ಟ ದಿಕ್ಕುಗಳಿಗೂ ಸಂಪರ್ಕ ಕಲ್ಪಿಸುವುದೆ ಅಲ್ಲ ಭಾರತದಾದ್ಯಂತ ಇರುವ ಪ್ರಖ್ಯಾತ ನಗರಗಳಿಗೆ ತೆರೆಳಲು ಖಾಸಗಿ ಬಸ್ ಗಳ ಪ್ರದೇಶ ಎಂದಿರುವ ಕಲಾಸಿಪಾಳ್ಯ ಬಸ್‌ ನಿಲ್ದಾಣದ ಬಸ್ ಟರ್ಮಿನಲ್‌ ನವನವೀನವಾಗಿ ನಿರ್ಮಾಣ ಗೊಂಡಿದ್ದರು ಇದುವರಿಗೂ ಸಾರ್ವಜನಿಕರ ಸೇವೆಗೆ ಸಿಕ್ಕಿಲ್ಲ.ಕಳೆದ ಆರು ವರ್ಷಗಳ ಹಿಂದೆ ಕಲಾಸಿಪಾಳ್ಯದ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು 2016ರ ಆ. 18ರಂದು ಶಂಕುಸ್ಥಾಪನೆ ನೆರವೇರಿಸಿದ್ದರು. 4.13 ಎಕರೆ ವಿಸ್ತೀರ್ಣದಲ್ಲಿ 60 ಕೋಟಿ ರೂ. ವೆಚ್ಚದಲ್ಲಿ ನಿಲ್ದಾಣ ನಿರ್ಮಾಣ ಪೂರ್ಣವಾಗಿದೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ -ಬಿಎಂಟಿಸಿ (Bangalore Metropolitan Transport Corporation -BMTC) ನಿರ್ಮಿಸಿರುವ ಬಹುಕಾಲದಿಂದ ಬಾಕಿ ಉಳಿದಿದ್ದ ಕಲಾಸಿಪಾಳ್ಯ ಬಸ್ ಟರ್ಮಿನಲ್ (Kalasipalya bus terminal) ನಿರ್ಮಾಣ ಯೋಜನೆಯು 2018ರ ಡಿಸೆಂಬರ್‌ನಲ್ಲಿಯೇ ಪೂರ್ಣಗೊಳ್ಳಬೇಕಿತ್ತು. ತಡವಾಗಿ ಕೊನೆಗೂ 4 ವರ್ಷದ ಬಳಿಕ ಸಿದ್ಧವಾಗಿದೆ. ಆದರೆ ಕಳೆದ ಮೂರು ತಿಂಗಳಿಂದ ಅದಕ್ಕೆ ಬೀಗ ಹಾಕಲಾಗಿದೆ. ಇದರಿಂದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಅಂತಾರಾಜ್ಯ…

Read More

ಶ್ರೀನಿವಾಸಪುರ:ಶ್ರೀನಿವಾಸಪುರದ ವಿದ್ಯಾರ್ಥಿಗಳು ಕಂಪನಿ ಸೆಕೆರೆಟರಿ ಕೊರ್ಸ್ Company Secretary ಒದಲು ಬೆಂಗಳೂರು ತಿರುಪತಿ ಹೈದರಾಬಾದ್ ನಂತಹ ನಗರಗಳಿಗೆ ಹೋಗಾಬೇಕಾದ ಅನಿವಾರ್ಯತೆ ಇತ್ತು ಅಂತ ಕಂಪನಿ ಸೆಕೆರೆಟರಿ ವಿದ್ಯಾಭ್ಯಾಸ ಮಾಡಲು ಶ್ರೀನಿವಾಸಪುರದಲ್ಲಿಯೇ ಕೇಂದ್ರ ಪ್ರಾರಂಭವಾಗಿದೆ.ಭಾರತದ ಪ್ರಖ್ಯಾತ ಐ.ಸಿ.ಎಸ್.ಸಿThe Institute of Company Secretaries of India (ICSI) ಸಂಸ್ಥೆ ಶ್ರೀನಿವಾಸಪುರದ ಗಂಗೋತ್ರಿ ಕಾಲೇಜ್ ಸಹಯೋಗದೊಂದಿಗೆ ಪ್ರಾರಂಭಿಸಿದೆ.ಪಟ್ಟಣದಲ್ಲಿರುವ ಗಂಗೋತ್ರಿ ಪದವಿ ಪೂರ್ವ ಮತ್ತು ಪದವಿ ಕಾಲೇಜಿನಲ್ಲಿ ಐ.ಸಿ.ಎಸ್.ಸಿThe Institute of Company Secretaries of India (ICSI) ಕೋರ್ಸ್ ತರಬೇತಿ ಕೇಂದ್ರ ನಡೆಯಲಿದೆ ಎಂದು ಗಂಗೋತ್ರಿ ಕಾಲೇಜು ಸಂಸ್ಥಾಪಕ ಅಧ್ಯಕ್ಷ ಅಮರನಾಥ್ ಹೇಳಿದರು. ಅವರು ಮಾತನಾಡಿ ಕಂಪನಿ ಸೆಕೆರೆಟರಿ ತರಬೇತಿ ಪಡೆದವರು ದೇಶ ವಿದೇಶಗಳಲ್ಲಿ ಕಾರ್ಪೋರೇಟರ್ ಸಂಸ್ಥೆಗಳಲ್ಲಿ ಅತ್ಯುನತ್ತ ಉದ್ಯೋಗಾವಕಾಶಗಳನ್ನು ಪಡೆಯಬಹುದಾಗಿದೆ ಇದೊಂದು ಉತ್ತಮ ಅವಕಾಶ ಬಳಸಿಕೊಳ್ಳುವಂತೆ ಹೇಳಿದರು. ICSI ಸಂಸ್ಥೆಯ ಬೆಂಗಳೂರು ಕಚೇರಿ ಮುಖ್ಯಸ್ಥ ನಮನ್ ಜೋಷಿ ಮಾತನಾಡಿ ಭಾರತ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ವ್ಯಾಪ್ತಿಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ICSI ಸಂಸ್ಥೆ…

Read More

ನ್ಯೂಜ್ ಡೆಸ್ಕ್: ಕೋಲಾರದಲ್ಲಿರುವ ವಿಸ್ಟ್ರಾನ್‌ನ ಆಪಲ್‌ ಐಫೋನ್‌ ಉತ್ಪಾದನಾ ಘಟಕವನ್ನು ಕೊಳ್ಳುವ ಬಗ್ಗೆ ಟಾಟಾ ಗ್ರೂಪ್‌ ಜೊತೆಗೆ ಮಾತುಕತೆ ನಡೆಯುತ್ತಿದೆ ಎಂಬ ವರದಿ ಹೊರಬಂದಿದೆ.ತೈವಾನ್‌ ಮೂಲದ ಆಪಲ್‌ ಫೋನ್‌ಗಳ ಪ್ರಮುಖ ಉತ್ಪಾದಕ ಸಂಸ್ಥೆ ವಿಸ್ಟ್ರಾನ್‌ ಕಾರ್ಪ್‌ ಕರ್ನಾಟಕದ ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಘಟಕವನ್ನು ಕೊಳ್ಳುವ ಕುರಿತಾಗಿ ಟಾಟಾ ಗ್ರೂಪ್‌ ಮಾತುಕತೆ ನಡೆಸುತ್ತಿದೆ ಎಂದು ಭಾರತದ ಪ್ರಖ್ಯಾತ ವಾಣಿಜ್ಯ ಅಂಗ್ಲ ದಿನಪತ್ರಿಕೆಯಲ್ಲಿ ವರದಿ ಬಂದಿರುವುದಾಗಿ ಹೇಳಲಾಗಿದೆ.ಈ ಘಟಕವನ್ನು ಸುಮಾರು 5,000 ಕೋಟಿ ರೂ.ಗೆ (612.6 ಮಿಲಿಯನ್ ಡಾಲರ್‌) ಖರೀದಿಸಲು ಮಾತುಕತೆ ನಡೆಯುತ್ತಿದೆ.2017ರಲ್ಲಿ ಭಾರತದಲ್ಲಿ ಐಫೋನ್‌ಗಳನ್ನು ತಯಾರಿಸಲು ಪ್ರಾರಂಭಿಸಿತು. ಆಪಲ್, ದೇಶದಲ್ಲಿ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸಲು ವರ್ಷಗಳ ಕಾಲ ಹೆಣಗಾಟ ನಡೆಸಿದ ನಂತರ ಇದು ಸಾಧ್ಯವಾಗಿತ್ತು.ತೈವಾನ್‌ನ ಆಪಲ್‌ ಫೋನ್‌ಗಳ ಪೂರೈಕೆದಾರ ಸಂಸ್ಥೆಯೊಂದಿಗೆ ಸೇರಿ ಜಂಟಿಯಾಗಿ ಭಾರತದಲ್ಲಿ ಆಪಲ್‌ ಫೋನ್‌ಗಳ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸಲು ಟಾಟಾ ಗ್ರೂಪ್ ಮಾತುಕತೆ ನಡೆಸುತ್ತಿದೆ ಎಂದು ಸೆಪ್ಟೆಂಬರ್‌ನಲ್ಲಿಲೇ ಬ್ಲೂಂಬರ್ಗ್‌ ಎಂಬ ಹಣಕಾಸು ಅಂತರ್ಜಾಲ ಪತ್ರಿಕೆ ವರದಿ ಮಾಡಿತ್ತು. ಈ…

Read More

ಬೆಂಗಳೂರು: ಬೆಂಗಳೂರು ಮಹಾನಗರದಲ್ಲಿ ಸದಾ ಗಿಜಗೂಡುವ ರಸ್ತೆಯೆಂದೆ ಗುರಿತಿಸಿ ಜೊತೆಗೆ ಅತಿಹೆಚ್ಚು ತೆರಿಗೆ ಕಟ್ಟುವ ಪ್ರದೇಶ ಎಂದು ಬಿಂಬಿತವಾಗಿ ಎಲೆಕ್ಟ್ರಾನಿಕ್ಸ್,ಎಲೆಕ್ಟ್ರಿಕಲ್,ಹಾರ್ಡ್‍ವೇರ್‌,ವಾಹನಗಳ ಬಿಡಿಭಾಗಗಳು ಸೇರಿದಂತೆ ಹಲವಾರು ವಸ್ತುಗಳ ಬೃಹತ್ ಅಂಗಡಿಗಳ ವ್ಯಾಪಾರ ಕೇಂದ್ರವಾಗಿರುವ ಎಸ್‍ಪಿ ರೋಡ್ (SP Road)ಅನ್ನು ಅಲ್ಲಿನ ಅಂಗಡಿ ಮಾಲಿಕರು ಡಿಸೆಂಬರ್ 13ಕ್ಕೆ ಬಂದ್ ಮಾಡಲಿದ್ದಾರಂತೆ!ಬೆಂಗಳೂರಿನ ಮಹಾನಗರದಲ್ಲಿ ವ್ಯಾಪಾರಿ ಕೇಂದ್ರವಾಗಿ ಹಾಟ್‍ಸ್ಪಾಟ್ ರಸ್ತೆಯಂದು ಗುರುತಿಸಿಕೊಂಡಿರುವ ಎಸ್‍ಪಿ ರೋಡ್ ಬಂದ್ ಆಗಲಿದಿಯಂತೆ ಡಿಸೆಂಬರ್ 13ಕ್ಕೆ ಎಸ್‍ಪಿ ರೋಡ್ ಸಂಪೂರ್ಣ ಸ್ತಬ್ಧವಾಗಲಿದೆ. ಅಂದು ಹಾರ್ಡ್‍ವೇರ್‌,ಎಲೆಕ್ಟ್ರಿಕಲ್ ಸೇರಿ ಪ್ರತಿ ವಹಿವಾಟನ್ನು ತಮ್ಮ ಆರ್ಥಿಕ ಚಟುವಟಿಕೆಗಳನ್ನು ಅಲ್ಲಿನ ವ್ಯಾಪಾರಸ್ಥರು ಬಂದ್ ಮಾಡಿ,ಸಾವಿರಾರು ವರ್ತಕರು ವಿಧಾನಸೌಧದತ್ತ ಮೆರವಣಿಗೆ ಹೋಗಲಿದ್ದಾರಂತೆ.ಕೆ.ಆರ್ ಮಾರ್ಕೆಟ್‍ನಿಂದ (K.R Market) ಎಸ್‍ಪಿ ರಸ್ತೆ ಮೂಲಕ ಟೌನ್‍ಹಾಲ್ ಕಡೆಗೆ ಬಂದಿರುವ ಜಲಮಂಡಳಿಯ ಒಳಚರಂಡಿ ಒಡೆದಿದೆ,ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಧರ್ಮರಾಯ ವಾರ್ಡ್‍ನ ರಸ್ತೆ, ಚರಂಡಿಯ ಕಲುಷಿತ ನೀರು,ಎಸ್‍ಪಿ ರಸ್ತೆಯ ಅಂಗಡಿಗಳಿಗೆ ನುಗ್ಗುತ್ತೆ. ಇದರಿಂದ ಇಲ್ಲಿ ವ್ಯಾಪಾರ ಮಾಡಲು ಸಾಧ್ಯವಾಗುತ್ತಿಲ್ಲ ಗಬ್ಬುವಾಸನೆ ಬರುತ್ತದೆ ವ್ಯಾಪಾರಸ್ಥರು ಅಂಗಡಿಗಳಿಗೆ ಬರೋಕೆ ಆಗುತ್ತಿಲ್ಲ.…

Read More

ಶ್ರೀನಿವಾಸಪುರ: ಜಿಂಕೆಯನ್ನು ನುಂಗಿದ್ದ ಹೆಬ್ಬಾವಿನ ಮೇಲೆ ದಾಳಿ ಮಾಡಿದ ಗ್ರಾಮದ ಕೆಲವರು ಹೆಬ್ಬಾವನ್ನು ಕೊಂದಿರುವ ಘಟನೆ ಶ್ರೀನಿವಾಸಪುರ ತಾಲ್ಲೂಕಿನ ಗೌನಪಲ್ಲಿ ಬಳಿಯ ಕೊರಕೋನಪಲ್ಲಿಯಲ್ಲಿ ನಡೆದಿದೆ.ಕೊರಕೋನಪಲ್ಲಿ ಗ್ರಾಮದ ಕೆರೆಯಂಗಳದ ಬಳಿ ಜಿಂಕೆಯನ್ನು ನುಂಗಿದ್ದ ಹೆಬ್ಬಾವು ವಿಶ್ರಮಿಸಿಕೊಳ್ಳುತ್ತಿದ್ದು ಈ ಸಂದರ್ಬದಲ್ಲಿ ಗ್ರಾಮದ ಕೆಲವರು ಹಾವಿನ ಮೇಲೆ ದಾಳಿ ಮಾಡಿದ್ದಾರೆ ಇದರಿಂದ ಬೆದರಿದ ಹಾವು ಪ್ರತಿ ದಾಳಿಮಾಡಿದಾಗ ಮಾರಕಾಸ್ತ್ರಗಳಿಂದ ಹಾವನ್ನು ಕೊಚ್ಚಿ ಕೊಲೆ ಮಾಡಿ ಹಾವಿನ ಹೊಟ್ಟೆಯಲ್ಲಿದ್ದ ಜಿಂಕೆಯನ್ನು ಹೋರತಗೆದಿರುತ್ತಾರೆ.ಅಂದಾಜು 5 ವರ್ಷ ವಯಸ್ಸಿನ 20 ಅಡಿ ಉದ್ದದ ಹೆಬ್ಬಾವು ಕೆರೆಯಂಗಳದಲ್ಲಿ 3 ವರ್ಷ ವಯಸ್ಸಿನ ಜಿಂಕೆಯನ್ನು ನುಂಗಿದೆ ಎಂದುಸ್ಥಳಕ್ಕೆ ಭೇಟಿ ನೀಡಿ ಪರಶಿಲಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ದೃಡಪಡಿಸಿದ್ದು ಈ ಬಗ್ಗೆ ಹೆಬ್ಬಾವು ಕೊಂದ ಆರೋಪದಲ್ಲಿ ಮೂವರ ವಿರುದ್ದ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರಂತೆ ಪ್ರಕರಣ ದಾಖಲಿಸಿರುವುದಾಗಿ ಗೌವನಪಲ್ಲಿ ಉಪ ವಲಯ ಅರಣಾಧಿಕಾರಿ ಶ್ರೀನಾಥಗೌಡ ತಿಳಿಸಿದ್ದಾರೆ. ಹೆಬ್ಬಾವನ್ನು ಎಳೆದಾಡುತ್ತಿರುವ ದೃಶ್ಯಗಳ ವಿಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತ ವೈರಲ್ ಆಗಿದೆ. ಸುದ್ದಿ ಸಹಕಾರ: ನಂಬಳ್ಳಿಸುರೇಶ

Read More

ಶ್ರೀನಿವಾಸಪುರ:ಫಸಲ್ ಭೀಮಾ ಯೋಜನೆಯಲ್ಲಿ ಎಚ್ ಡಿ ಎಫ್ ಸಿ ಇರುಗೊ ಬೆಳೆ ವಿಮಾ ಸಂಸ್ಥೆ ಬೆಳೆ ನಷ್ಟದ ಪರಿಹಾರ ವಿತರಿಸದೆ ಮಾವು ಬೆಳೆಗಾರರಿಗೆ ವಂಚನೆ ಮಾಡಿದೆ ಎಂದು ಆರೋಪಿಸಿ ಕೋಲಾರ ಜಿಲ್ಲಾ ಮಾವು ಬೆಳೆಗಾರರ ಸಂಯುಕ್ತ ಹೋರಾಟ ಸಮಿತಿ ನೇತೃತ್ವದಲ್ಲಿ ಡಿಸೆಂಬರ್8 ರಂದು ಗುರುವಾರ ಶ್ರೀನಿವಾಸಪುರ ತಾಲೂಕು ಬಂದ್ ಮಾಡಲಾಗುವುದು ಎಂದು ಕೋಲಾರ ಜಿಲ್ಲಾ ಮಾವು ಬೆಳೆಗಾರ ಸಂಘದ ಅಧ್ಯಕ್ಷ ನಿಲಟೂರುಚಿನ್ನಪ್ಪರೆಡ್ಡಿ ಹೇಳಿದರು ಅವರು ಕೋಲಾರ ಜಿಲ್ಲಾ ಮಾವು ಬೆಳೆಗಾರರ ಸಂಯುಕ್ತ ಹೋರಾಟ ಸಮಿತಿಯ ಜಿಲ್ಲಾಮಟ್ಟದ ವಿಸ್ತೃತ ಸಭೆಯಲ್ಲಿ ಪಾಲ್ಗೋಂಡು ಮಾತನಾಡಿ ಶ್ರೀನಿವಾಸಪುರ ಬಂದ್ ಬೆಂಬಲಿಸಲು ಡಿಸೆಂಬರ್8 ರಂದು ಕೋಲಾರ ಜಿಲ್ಲೆಯ 5 ತಾಲೂಕು ಕೇಂದ್ರಗಳಲ್ಲಿ ಮಾವು ಬೆಳೆಗಾರರು ಮತ್ತು ರೈತರು ತಾಲೂಕು ಕಚೇರಿಗಳ ಮುಂದೆ ಪ್ರತಿಭಟನೆ ಮಾಡಿ ಬಂದಗೆ ಬೆಂಬಲ ವ್ಯಕ್ತಪಡಿಸುವ ಮನವಿ ಮಾಡಿದರು.ಮಾವು ಬೆಳೆಗಾರರಿಗೆ ಮೋಸವಾಗಿರುವುದು ಮತ್ತು ಬೆಲೆ ನಷ್ಟ ಪರಿಹಾರದಲ್ಲಿ ರಾಜ್ಯ ಸರ್ಕಾರದಿಂದ ಸಮರ್ಪಕವಾಗಿ ವಿತರಣೆ ಮಾಡದೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದರು.ಮಾವು ಬೆಳೆಗಾರರು ರೈತರು ಹಾಗು…

Read More

ನ್ಯೂಜ್ ಡೆಸ್ಕ್:ಆರ್ಥಿಕವಾಗಿ ಸಾಮಾಜಿಕವಾಗಿ ಅನಕೂಲವಂತರಾಗಿದ್ದರು ಉತ್ತಮ ಕುಟುಂಬದ ಹಿನ್ನಲೆ ಇದ್ದು ಯುಕ್ತವಯಸ್ಸು ಎಲ್ಲವೂ ಸರಿಯಿದ್ದರೂ ಯುವಕರಿಗಾಗಲಿ ಯುವತಿಯರಿಗಾಗಲಿ ಮದುವೆ ವಿನಾ ಕಾರಣ ವಿಳಂಬವಾಗುತ್ತಿರುತ್ತದೆ ಇನ್ನೇನೂ ಮದುವೆ ಮಾತುಕತೆ ಎಲ್ಲ ಮುಗಿಯಿತು ಅನ್ನುವ ಸಮಯದಲ್ಲಿ ಎಷ್ಟೋ ಸಂಬಂಧಗಳು ಕ್ಯಾನ್ಸಲ್ ಆಗಿರುವ ಉದಾಹರಣೆಗಳು ಇವೆ ಇದರಿಂದ ಅಂತಹ ಕುಟುಂಬಗಳಲ್ಲಿ ಯುವಕ ಅಥಾವ ಯುವತಿಯೇ ಅಲ್ಲ ಅವರ ಪೋಷಕರು ಮಾನಸಿಕವಾಗಿ ಕ್ಷೋಭೆಗೆ ಒಳಗಾಗುವುದು ಸಾಮನ್ಯ ವಿಚಾರ ಇದಕ್ಕೆ ಒಂದಲ್ಲ ಎರಡಲ್ಲ ಹಲವಾರು ಕಾರಣಗಳು ದೋಷಗಳು ಕಾರಣ ಎನ್ನುತ್ತಾರೆ ಜ್ಯೋತಿಷ್ಯರು ಗ್ರಹ ದೋಷ,ತಾರಬಲ ಕೂಡಿಬಾರದ ದೋಷ, ಜನ್ಮನಕ್ಷತ್ರ ದೋಷ ಒಂದಲ್ಲ ಎರಡಲ್ಲ ಹಲವಾರು ದೋಷಗಳಿಗೂ ವರಾಹರೂಪದ”ನಿತ್ಯ ಕಲ್ಯಾಣ ಪೆರುಮಾಳ್ ದರ್ಶಿಸಿದರೆ ಪರಿಹಾರ ಸಿಗುತ್ತದೆ ಎಂಬುದು ಇಲ್ಲಿ ದರ್ಶನ ಪಡೆದವರ ಅನುಭವದ ಮಾತು.ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿರುವ ನಿತ್ಯ ಕಲ್ಯಾಣ ಪೆರುಮಾಳ್ ದೇವಸ್ಥಾನದಲ್ಲಿ ಪೆರುಮಾಳ್ ಅಂದರೆ ಶ್ರೀ ಮಹಾ ವಿಷ್ಣು. ಜತೆಗೆ ಲಕ್ಷ್ಮಿ ಇರುವಂತ ವರಾಹ ದೇವರ ಸನ್ನಿಧಿ. ಮದುವೆ ತಡವಾಗುತ್ತಿರುವ ಯುವಕ ಯುವತಿಯರು ಜೀವನ ಸಂಗಾತಿಯನ್ನು ಹುಡುಕುತ್ತಿರುವ ಜನರು…

Read More

ಶ್ರೀನಿವಾಸಪುರ:ತಾಲೂಕಿನ ಸೋಮಯಾಜಲಹಳ್ಳಿ ಪಂಚಾಯಿತಿ ವ್ಯಾಪ್ತಿಯ ಪೆಗಳಪಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಾಮಿಕ ಶಾಲೆಯಲ್ಲಿ ಹುಳ ಬಿದ್ದ ಅಕ್ಕಿಯಲ್ಲಿ ಅಡುಗೆ ಮಾಡಿದ್ದು ಅದನ್ನೇ ವಿದ್ಯಾರ್ಥಿಗಳು ತಿನ್ನುತ್ತಿದ್ದಾರೆಂಬ ಆರೋಪಕ್ಕೆ ಸಂಬಂದಿಸಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾರೆಡ್ಡಿ ಸ್ಪಂದಿಸಿದ್ದು ಅಕ್ಕಿಯಲ್ಲಿ ಉಳ ಬಿದ್ದಿಲ್ಲ ಸಾರಿಗೆ ಬಳಸುವ ಬೆಳೆಯಲ್ಲಿ ಮಾತ್ರ ಮೂಕುಳಗಳು ಬಂದಿದೆ ಅದು ಸಹ ಹೊಸದಾಗಿ ಬಂದಿರುವ ಸ್ಟಾಕ್ ನಲ್ಲಿ ಇಲ್ಲ ಹಳೆಯ ಸ್ಟಾಕ್ ನ ಬೆಳೆಯಲ್ಲಿ ಹುಳ ಇದ್ದು ಅದನ್ನು ಹಳೆಯ ಬೇಳೆಯ ಪೊಟ್ಟಣದ ಜೊತೆಯಲ್ಲಿ ಇಟ್ಟ ಪರಿಣಾಮ ಬೆಳೆ ಹಾಗು ಅಕ್ಕಿ ಮೂಟೆ ಮೇಲೂ ಹರಿದಾಡಿದೆ ಎಂದು ಶಾಲಾ ಸಿಬ್ಬಂದಿ ತಿಳಿಸಿದ್ದಾರೆ ಇದಕ್ಕೆ ಸಂಬಂದಿಸಿದಂತೆ ವರದಿ ನೀಡುವಂತೆ ಅಕ್ಷರದಾಸೋಹದ ಸಹಾಯಕ ನಿರ್ದೇಶಕರಾದ ಸೊಲೋಚನ ಅವರಿಗೆ ಸೂಚಿಸಲಾಗಿದೆ ಅವರು ಇಂದು ಶನಿವಾರ ಮುಂಜಾನೆಯೇ ಪೆಗಳಪಲ್ಲಿ ಶಾಲೆಗೆ ತೆರಳಿದ್ದಾರೆ ಅವರು ನೀಡುವ ವರದಿಯಂತೆ ಶಾಲಾ ಸಿಬ್ಬಂದಿಯ ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

Read More

ಶ್ರೀನಿವಾಸಪುರ:ಯಾರು ಏನೆ ಅಪಪ್ರಚಾರ ಮಾಡಿದರು ಯಾವುದೇ ಕಾರಣಕ್ಕೂ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರವನ್ನು ಬಿಟ್ಟುಹೋಗುವ ಪ್ರಶ್ನೆ ಇಲ್ಲ ನನ್ನನ್ನು ಬೆಂಬಲಿಸುವ ಮುಖಂಡರ ಅಭಿಪ್ರಾಯದಂತೆ 2023 ಚುನಾವಣೆಯಲ್ಲಿ ಸ್ಪರ್ದಿಸುವುದು ಗ್ಯಾರಂಟಿ ಎಂದು ಗುಂಜೂರುಶ್ರೀನಿವಾಸರೆಡ್ಡಿ ಹೇಳಿದರು ಅವರು ಇಂದು ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರನ್ನು ತಮ್ಮ ಬಣಕ್ಕೆ ಸೇರ್ಪಡೆಮಾಡಿಕೊಂಡು ಮಾತನಾಡಿದರು ಕ್ಷೇತ್ರವನ್ನು ಕಳೆದ ನಲವತ್ತು ವರ್ಷಗಳಿಂದ ನಿರ್ಲಕ್ಷ್ಯಸಿದ ಪರಿಣಾಮ ಅಭಿವೃದ್ದಿಯಲ್ಲಿ ಹಿಂದುಳಿದಿದೆ ಇಲ್ಲಿನ ಜೀವನಾಡಿ ಬೆಳೆಯಾದ ಮಾವಿಗೆ ಶಾಶ್ವತ ಮಾರುಕಟ್ಟೆ ಒದಗಿಸಲು ಸಾದ್ಯವಾಗಿಲ್ಲ ರೈತಾಪಿ ಜನರ ಬವಣೆ ತಿರಿಸಲು ಪ್ರಯತ್ನವೆ ನಡೆಸದ ಇಲ್ಲಿ ಆಡಳಿತ ನಡೆಸುವಂತವರು ನೀರು ತಂದಿದ್ದೇವೆ ಎಂದು ಕ್ಷೇತ್ರದ ಜನರನ್ನು ಯಾಮಾರಿಸಲು ಹೋರಟಿದ್ದಾರೆ ಇವರ ನಿಜಸ್ವರೂಪ ಏನೆಂಬುದು ಮತ್ತು ನೀರಿನ ಗುಣಮಟ್ಟದ ಎಂತಹದು ಎಂದು ಅರಿತಿರುವ ಜನತೆ ತೀವ್ರವಾಗಿ ಬೇಸರ ಗೊಂಡಿದ್ದಾರೆ ನಾಲ್ಕುದಶಕಗಳ ರಾಜಕಾರಣದ ವಿರುದ್ದ ಮತದಾರರು ಹೊಸಬದಲಾವಣೆ ತರಬೇಕು ಎಂದು ಮುಂದಾಗಿದ್ದಾರೆ ಚುನಾವಣೆ ಹೊತ್ತಿಗೆ ಮತ್ತಷ್ಟು ಬದಲಾವಣೆ ಕ್ಷೇತ್ರದಲ್ಲಿ ಕಾಣಬಹುದಾಗಿದೆ ಎಂದು ಹೇಳಿದರು.ಕ್ಷೇತ್ರದಲ್ಲಿ ನನ್ನ ಪರವಾಗಿ ದೊರೆಯುತ್ತಿರುವ ಜನಬೆಂಬಲ ಕಂಡು ಕೆಲ…

Read More