Author: Srinivas_Murthy

ಶ್ರೀನಿವಾಸಪುರ:ಕೆಸಿ ವ್ಯಾಲಿ ನೀರನ್ನು ಕೋಲಾರ ಜಿಲ್ಲೆಗೆ ಕೊಡಲೆ ಬೇಕು ಎಂದು ಇದ್ದರೆ ಪರಿಣಾಮಕಾರಿಯಾಗಿ ಮೂರನೆ ಹಂತದ ಶುದ್ಧೀಕರಣ ಮಾಡಿ ಹರಿಸುವ ಮೂಲಕ ಈ ಭಾಗದ ಜನರಿಗೆ ಅಗಿರುವಂತ ಅನ್ಯಾಯವನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸರಿಪಡಿಲಾಗುವುದು ಸಾದ್ಯವಾಗದಿದ್ದರೆ ಕೆಸಿ ವ್ಯಾಲಿ ಯೋಜನೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು ಅವರು ತಾಲೂಕಿನ ನಕ್ಕಲಗಡ್ದ ಗ್ರಾಮದಲ್ಲಿ ಗ್ರಾಮವಾಸ್ತವ್ಯ ಮಾಡಿದ್ದು ಗ್ರಾಮಕ್ಕೆ ಹೋದಾಗ ತಡರಾತ್ರಿ 2 ಗಂಟೆಯಾಗಿದ್ದು ಮತ್ತು ಮಳೆ ಹಿನ್ನಲೆಯಲ್ಲಿ ಮರುದಿನ ಬುಧವಾರ ಮುಂಜಾನೆ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೆಸಿ ವ್ಯಾಸಿ ಯೋಜನೆಯ ಎರಡನೆ ಹಂತದ ನೀರು ಶುದ್ಧೀಕರಣದ ಯಂತ್ರಗಳು ಕೆಟ್ಟು ನಿಂತಿದ್ದು ಬೆಂಗಳೂರಿನಿಂದ ನೀರು ನೇರವಾಗಿ ಹರಿದು ಬರುತ್ತಿದೆ ಬಿಜೆಪಿ ವಿರುದ್ದ 40 ಪರ್ಸಂಟೆಜ್ ಆರೋಪ ಮಾಡುವವರು ಈ ಯೋಜನೆಯಲ್ಲಿ ಎನೆಲ್ಲಾ ಅಕ್ರಮಗಳು ಮಾಡಿದ್ದಾರೆ ಎಂಬುದು ಗೊತ್ತಿದೆ ಎಂದು ಮಾರ್ಮಿಕವಾಗಿ ಹೇಳಿದರು.ಬಿಜೆಪಿ ಸರ್ಕಾರಗಳ ವಿರುದ್ದ ತೀವ್ರವಾಗಿ ವಾಗ್ದಾಳಿನೆಲ ಜಲ ಸಂರಕ್ಷಣೆಯಲ್ಲಿ ಡಬಲ್ ಇಂಜಿನ್ ಸರ್ಕಾರ…

Read More

ಶ್ರೀನಿವಾಸಪುರ:ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ರೀನಿವಾಸಪುರದ ಶಾಸಕ ರಮೇಶ್ ಕುಮಾರ್ ತಂಡ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಿಸಿದರು ಅವರು ಶ್ರೀನಿವಾಸಪುರ ಪಟ್ಟಣದ ರಾಜಾಜಿ ರಸ್ತೆಯ ಚಿಂತಾಮಣಿ ವೃತ್ತದಲ್ಲಿ ಏರ್ಪಡಿಸಿದ್ದ ಪಂಚರತ್ನ ಯೋಜನೆ ರಥಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕೋಲಾರದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ದಲಿತ ಮುಖಂಡ ಮುನಿಯಪ್ಪನವರನ್ನು ಸೋಲಿಸಲು ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಧಿಕ್ಕರಿಸಿ ಇಲ್ಲೂ ಬಿಜೆಪಿಯನ್ನು ಗೆಲ್ಲಿಸಿದರು.ಸಿದ್ದರಾಮಯ್ಯ ರಮೇಶ್ ಕುಮಾರ್ ಚಿತಾವಣೆಯಿಂದ ನಾನು ಆಡಳಿತ ಕಳೆದುಕೊಂಡು ಬಿಜೆಪಿ ಅಧಿಕಾರಕ್ಕೆ ಬಂದಿತು ಇದರ ಪರಿಣಾಮ ಅಲ್ಲೆಲ್ಲೋ ಕರಾವಳಿಯಲ್ಲಿದ್ದಂತ ಹಿಜಾಬ್ ಹೆಸರಿನ ವಸ್ತ್ರ ಸಂವಿತೆ ಕೋಮು ಅಶಾಂತಿ ವಾತವರಣ ಇಡಿ ಕಾರ್ನಾಟಕಕ್ಕೆ ಹಬ್ಬಿತು ಧರ್ಮ ಸಂಘರ್ಷಕ್ಕೆ ಕಾರಣವಾಯಿತು ಸರ್ವ ಧರ್ಮಗಳ ಜನರ ನಡುವೆ ಇದ್ದ ಸೌಹಾರ್ದತೆ ಹಲಾಲ್ ಕಟ್ ಜಟ್ಕಾ ಕಟ್ ಎಂದು ಅಹಾರದ ಹೆಸರಿನಲ್ಲಿ ಧರ್ಮಸಂಘರ್ಷಕ್ಕೆ ಕಾರಣವಾಯಿತು ಇದಕ್ಕೆಲ್ಲ ನಿಮ್ಮೂರಿನ ಮಹಾನುಭಾವನ ಕುತಂತ್ರವೂ ಕಾರಣವಾಗಿದೆ ಎಂದು ದೂರಿದರು.ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದವರು ನಮ್ಮ…

Read More

ನ್ಯೂಜ್ ಡೆಸ್ಕ್: ಕರ್ನಾಟಕ ಸರ್ಕಾರ 2023ನೇ ಸಾಲಿನ ರಜಾದಿನಗಳ ಪಟ್ಟಿ ಬಿಡುಗಡೆ ಮಾಡಿದ್ದು 19 ಸಾರ್ವತ್ರಿಕ ರಜೆ ಒಳಗೊಂಡಂತೆ ಸರ್ಕಾರಿ ನೌಕರರಿಗೆ 17 ಪರಿಮಿತ ರಜಾದಿನಗಳು ಸೇರಿ ಒಟ್ಟು 36 ರಜೆಗಳನ್ನು ಘೋಷಿಸಲಾಗಿದೆ. ಸಾರ್ವತ್ರಿಕ ರಜಾದಿನಗಳ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಅದರ ವಿವರ ಹೀಗಿರುತ್ತದೆ.15.01.2023 ಮಕರ ಸಂಕ್ರಾಂತಿ26.01.2023- ಗಣರಾಜ್ಯೋತ್ಸವ18.02.2023- ಮಹಾ ಶಿವರಾತ್ರಿ22.03.2023- ಯುಗಾದಿ ಹಬ್ಬ3.04.2023- ಮಹಾವೀರ ಜಯಂತಿ7.04.2023- ಗುಡ್ ಫ್ರೈಡೆ14.04.2023-ಡಾ.ಬಿಆರ್.ಅಂಬೇಡ್ಕರ್ ಜಯಂತಿ1.05.2023- ಕಾರ್ಮಿಕ ದಿನಾಚರಣೆ29.06.2023- ಬಕ್ರೀದ್29.07.2023- ಮೊಹರಂ ಕಡೆ ದಿನ15.08.2023- ಸ್ವಾತಂತ್ರ್ಯ ದಿನಾಚರಣೆ18.09.2023- ಗಣೇಶ ಚತುರ್ಥಿ28.09.2023- ಈದ್ ಮಿಲಾದ್2.10.2023- ಗಾಂಧಿಜಯಂತಿ23.10.2023- ಮಹಾನವಮಿ, ಆಯುಧಪೂಜೆ24.10.2023- ವಿಜಯದಶಮಿ1.11.2023- ಕನ್ನಡ ರಾಜ್ಯೋತ್ಸವ14.11.2023- ಬಲಿಪಾಡ್ಯಮಿ, ದೀಪಾವಳಿ30.11.2023- ಕನಕದಾಸ ಜಯಂತಿ25.12.2023- ಕ್ರಿಸ್ಮಸ್ ಪರಿಮಿತ ರಜಾದಿನಗಳ ಪಟ್ಟಿ30.01.2023- ಮಧ್ಯ ನವಮಿ7.03.2023- ಷಬ್- ಎ- ಬರಾತ್8.03.2023- ಹೋಳಿ ಹಬ್ಬ.30.03.2023- ಶ್ರೀ ರಾಮನವಮಿ18.04.2023- ಷಬ್-ಎ-ಖದರ್21.04.2023- ಜಮಾತ್- ಉಲ್-ವಿದಾ25.04.2023- ಶ್ರೀ ಶಂಕರಾಚಾರ್ಯ ಜಯಂತಿ, ಶ್ರೀ ರಾಮಾನುಜಾಚಾರ್ಯ ಜಯಂತಿ5.2023-ಬುದ್ಧ ಪೂರ್ಣಿಮಾ25.08.2023- ವರಮಹಾಲಕ್ಷ್ಮಿ ವ್ರತ29.08.2023- ಋಗ್ ಉಪಕರ್ಮ, ತಿರು ಓಣಂ30.08.2023- ಯಜುರ್ ಉಪಕರ್ಮ31.08.2023- ಬ್ರಹ್ಮಶ್ರೀ ನಾರಾಯಣಗುರು…

Read More

ಶ್ರೀನಿವಾಸಪುರ: ತಾಲೂಕಿನ ಪಾತ ನೆಲವಂಕಿ ಗ್ರಾಮದಲ್ಲಿ ಜಿಲ್ಲಾಡಿತದ ನಡೆ ಹಳ್ಳಿಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಬಹುತೇಕ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ಗ್ರಾಮ ವಾಸ್ತವ್ಯದಿಂದ ಅಂತರ ಕಾಪಾಡಿಕೊಂಡಂತೆ ಇತ್ತೆ ಇತ್ತು .ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಳಿತ ಸಾರ್ವಜನಿಕರ ಮನೆ ಬಾಗಿಲಿಗೆ ಎನ್ನುತ್ತಾರೆ ಇಲ್ಲಿನೋಡಿದರೆ ಸರ್ಕಾರಿ ಕಾರ್ಯಕ್ರಮದಲ್ಲಿ ಇಲಾಖೆ ಅಧಿಕಾರಿಗಳೆ ಬಾಗವಹಿಸದೆ ಹೋದರೆ ಕಾರ್ಯಕ್ರಮ ನಡೆಯುವುದಾದರೂ ಯಾರಿಗಾಗಿ ಎನ್ನುತ್ತಾರೆ ಜನತೆ.ತಾಲ್ಲೂಕಿನ ನೆಲವಂಕಿ ಹೋಬಳಿಯ ಪಾತ ನೆಲವಂಕಿ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ತಹಶೀಲ್ದಾರ್ ಶೀರಿನ್ ತಾಜ್ ಉದ್ಘಾಟಿಸಿದರಾದರೂ ಕಾರ್ಯಕ್ರಮದಲ್ಲಿ ಅಧಿಕಾರಿಗಳೆ ಇರಲಿಲ್ಲ,ದೂರು ದುಮ್ಮಾನಗಳೊಂದಿಗೆ ಬಂದಿದ್ದ ಸಾರ್ವಜನಿಕರು ಯಾರಿಗೆ ಹೇಳಿಕೊಳ್ಳಬೇಕುಸಮಾಜಕಲ್ಯಾಣ ಇಲಾಖೆ, ಪೋಲಿಸ್ ಇಲಾಖೆ, ಬಿ.ಇ.ಒ. ಎ.ಪಿ.ಎಂ.ಸಿ. ಸಾಮಾಜಿಕ ಅರಣ್ಯ ಮತ್ತು ವಲಯ ಅರಣ್ಯ ಇಲಾಖೆ, ಕೆ.ಎಸ್.ಆರ್.ಟಿ.ಸಿ, ಬಿ.ಸಿ.ಎಂ. ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್, ಸ್ಥಳಿಯ ಸಹಕಾರ ಸಂಘ ,ತಾಲ್ಲೂಕು ಆರೋಗ್ಯಾಧಿಕಾರಿ,ಮೀನಿಗಾರಿಕೆಇಲಾಖೆ, ಭೂ ದಾಖಲೆಗಳ ಇಲಾಖೆ ಅಧಿಕಾರಿಗಳ ಸುಳಿವು ಇಲ್ಲದಾಗಿತ್ತು ರಾಜ್ಯ ಬಿಜೆಪಿ ಸರ್ಕಾರದ ಮಹತ್ತರ ಎನ್ನುವಂತ ಜಿಲ್ಲಾಧಿಕಾರಿಗಳ ಗ್ರಾಮ…

Read More

ಶ್ರೀನಿವಾಸಪುರ:ಗದ್ದಲ ಕೂಗಾಟ ಅರಚಾಟಗಳ ನಡುವೆಯೂ ಪುರಸಭೆಯ ವಿಶೇಷ ಸಭೆಯಲ್ಲಿ ಮೂರು ವಿಷಯಗಳಿಗೆ ಒಪ್ಪಿಗೆ ಪಡೆಯಲಾಯಿತು,ಮತ್ತು ಶಾಸಕರು ಶಿಫಾರಸ್ಸು ಮಾಡಿದ್ದ ಯೋಗಿನಾರಯಣ ಪ್ರತಿಮೆ ಸ್ಥಾಪಿಸಲು ಸಭೆ ನಿರ್ಣಯಿಸಿತು.ಸಾಮಾನ್ಯ ಸಭೆ ನಡಸದೆ ನಿಮ್ಮ ಅಗತ್ಯಗಳಿಗೆ ವಿಶೇಷಸಭೆ ಕರೆದು ನಿಮ್ಮ ಅನಕೂಲಗಳನ್ನು ನೋಡಿಕೊಳ್ಲುತ್ತಿದ್ದಿರಿ ಎಂದು ಸದಸ್ಯ ರಾಜು ಪುರಸಭೆ ಮುಖ್ಯಾಧಿಕಾರಿ ಜಯರಾಂ ವಿರುದ್ದ ಆಕ್ರೋಶ ವ್ಯಕ್ತಪಡಿಸಿದಾಗ ಸದಸ್ಯ ಅನಂದಗೌಡ ರಸೂಲು ಮುಂತಾದವರು ಸಾಥ್ ನೀಡಿದರು ಈ ಸಂದರ್ಭದಲ್ಲಿ ಸಭೆಯಲ್ಲಿ ಗದ್ದಲ ಶುರುವಾಯಿತು ಸದಸ್ಯರ ಕೂಗಾಟ ಎಲ್ಲೆ ಮೀರಿತು ಇದರ ನಡುವೆ ಅಡಳಿತ ಪಕ್ಷದ ಭಾಸ್ಕರ್ ಪುರಸಭೆಯಲ್ಲಿ ಜೆಸಿಬಿ ಇದ್ದರು ಹೊರಗಡೆಯಿಂದ ಜೆಸಿಬಿ ಕರೆಸಿ ಕೆಲಸ ಮಾಡಿಸಿ ಅಕ್ರಮವಾಗಿ ಬಿಲ್ಲುಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದಾಗ ತೊತ್ಲಾಶಬ್ಬಿರ್ ಮುಂತಾದವರು ಹೌದು ಅಕ್ರಮಗಳು ನಡೆಯುತ್ತಿದೆ ಎಂದು ಕೂಗಾಡಿದರು.ನಾಮಿನಿ ಸದಸ್ಯ ನಲ್ಲಪಲ್ಲಿರೆಡ್ದೆಪ್ಪ ಮಾತನಾಡಿ ಪುರಸಬೆಗೆ ನೂತನವಾಗಿ ಸೇರಿಸಿಕೊಂಡಿರುವಂತ ಹಳ್ಳಿಗಳ ನಿವೇಶನ ಮನೆಗಳನ್ನು ಪುರಸಬೆಗೆ ಸೇರಿಸುವ ಕುರಿತಾಗಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು ಇದಕ್ಕೆ ಪಕ್ಷ ಬೇದ ಮರೆತು ಸದಸ್ಯರು ಬೆಂಬಲಿಸಿದಾಗ ಮುಖ್ಯಾಧಿಕಾರಿ ಈ…

Read More

ಶ್ರೀನಿವಾಸಪುರ : KSRTC ಬಸ್ಸುಗಳನ್ನು ಮದುವೆ ರಾಜಕೀಯ ಸಮಾವವೇಶಗಳಿಗೆ ಒಪ್ಪಂದದ ಮೇರೆಗೆದೊಡ್ದ ಸಂಖ್ಯೆಯಲ್ಲಿ ಬಸ್ಸುಗಳನ್ನು ಕಳೆಸುತ್ತಿರುವುದರಿಂದ, ಮಾರ್ಗದಲ್ಲಿ ರೆಗ್ಯೂಲರ್ ಆಗಿ ಒಡಾಡುತ್ತಿದ್ದ ಬಸ್ಸುಗಳಿಲ್ಲದೆ ಹಳ್ಳಿಗಾಡಿನ ವಿದ್ಯಾರ್ಥಿಗಳು ಕಾಲೇಜುಗಳಿಗೆ ತೆರಳಲು ಹಾಗು ಸಾರ್ವಜನಿಕರು ಪಟ್ಟಣ ಪ್ರದೇಶಗಳಿಗೆ ಒಡಾಡಲು ಪ್ರಯಾಸ ಪಡುವಂತಾಗಿದೆ ಎಂದು ಆರೋಪಿಸಿ ಕೂರಿಗೇಪಲ್ಲಿ ಮುದಿಮಡಗು ಭಾಗದ ವಿದ್ಯಾರ್ಥಿಗಳು ಹಾಗು ಸಾರ್ವಜನಿಕರು ತಮ್ಮ ಗ್ರಾಮಕ್ಕೆ ಬಂದಂತ ಬಸ್ ಅನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.ಶ್ರೀನಿವಾಸಪುರ ತಾಲೂಕಿನ ಬಹುತೇಕ ಗಡಿಯಂಚಿನ ಗ್ರಾಮಗಳಿಗೆ ಶ್ರೀನಿವಾಸಪುರ ಹಾಗು ಚಿಂತಾಮಣಿಯಿಂದ ಶಾಲಾ ಕಾಲೇಜು ಸಮಯಕ್ಕೆ ಬಸ್ ಗಳನ್ನು ಕೆ ಎಸ್ ಆರ್ ಟಿ ಸಿ ಒದಗಿಸಿದೆ. ಇತ್ತಿಚಿಗೆ ರಾಜಕೀಯ ಸಮಾವೇಶಗಳು ಇತರೆ ಖಾಸಗಿ ಕಾರ್ಯಕ್ರಮಗಳು ಸಬೆ ಸಮಾರಂಬಗಳಿಗೆ ತೆರಳಲು KSRTC ಸಂಸ್ಥೆ ಬಸ್ಸುಗಳನ್ನು ಒಪ್ಪಂದದ ಮೇರೆಗೆ ಕಳಿಸುತ್ತಿರುವ ಹಿನ್ನಲೆಯಲ್ಲಿ ರೆಗ್ಯೂಲರ್ ಆಗಿ ಒಡಾಡುವ ಮಾರ್ಗದಲ್ಲಿ ಬಸ್ ಇಲ್ಲದಂತಾಗುತ್ತದೆ ಇದರಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗುತ್ತದೆ ಜೊತೆಗೆ ಬಡ ವಿದ್ಯಾರ್ಥಿಗಳು ಪಾಸ್ ಇದ್ದರು ಇಂತಹ ಸಂದರ್ಬದಲ್ಲಿ ದುಬಾರಿ ಹಣ ತೆತ್ತು…

Read More

ಶ್ರೀನಿವಾಸಪುರ: ತೆಲುಗು ಚಿತ್ರ ರಂಗದ ರೆಬಲ್ ಸ್ಟಾರ್ ಕೃಷ್ಣಂರಾಜು ಹಾಗು ಪದ್ಮಶ್ರೀ,ನಟಶೇಖರ ಕೃಷ್ಣ ಅವರುಗಳಿಗೆ ಶ್ರೀನಿವಾಸಪುರದಲ್ಲಿ ಪ್ರಗತಿಪರ ಸಂಘಟನೆಗಳ ವತಿಯಿಂದ ಶ್ರದ್ದಾಂಜಲಿ ಅರ್ಪಿಸಲಾಯಿತು.ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಹಾಗು ದಲಿತ ಸಮುದಾಯದ ಹಿರಿಯ ಮುಖಂಡ ಉಪ್ಪರಪಲ್ಲಿ ತಿಮ್ಮಯ್ಯ ಮಾತನಾಡಿ ತೆಲುಗು ಚಿತ್ರ ನಟರಾದ ಹಾಗು ಕೃಷ್ಣಂರಾಜು ಒಂದೇ ಸಮಕಾಲಿನ ನಟರು ಇಬ್ಬರು ಸಹ ನಿರ್ದೇಶಕರಾಗಿ ನಿರ್ಮಾಪಕರು ಆಗಿದ್ದರು.ಬ್ರಿಟಿಷರ್ ವಿರುದ್ದ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಸಿದ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸಿತಾರಾಮರಾಜು ಪಾತ್ರ ಮಾಡುವ ಮೂಲಕ ತೆಲಗು ಸಿನಿಮಾ ಮೂಲಕ ದೊಡ್ಡಸ್ಟಾರ್ ಪಟ್ಟ ಗಳಿಸಿದ ಸೂಪರ್ ಸ್ಟಾರ್ ಕೃಷ್ಣ ಅದ್ಭುತವಾದ ಕಲಾವಿದ ಮಹಾನ್ ಸಾಹಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತ ಕೌಟುಂಬಿಕ ಸಾಮರಸ್ಯದ ಅನೇಕ ಚಿತ್ರಗಳಲ್ಲಿ ನಟಿಸಿ ತೆಲಗು ಚಿತ್ರರಂಗದಲ್ಲಿ ದಾಖಲೆ ಸೃಷ್ಟಿಸಿದ ಮೇರು ನಟರಾಗಿದ್ದ ಕೃಷ್ಣ ರಾಜಕೀಯವಾಗಿ ದೂರ ಉಳಿದಿದ್ದರು ಎಂದು ಅವರ ಜೀವನ ಚರಿತ್ರೆಯ ಕುರಿತಾಗಿ ಹೇಳಿದರು.ತೆಲಗು ಚಿತ್ರ ರಂಗದ ರೆಬೆಲ್ ಸ್ಟಾರ್ ಕೃಷ್ಣಂರಾಜು ಸಹ…

Read More

ಶ್ರೀನಿವಾಸಪುರ:ಬೆಸ್ಕಾಂ ಸಿಬ್ಬಂದಿ ವಿದ್ಯತ್ ಕಂಬದ ಮೇಲೆ ಹರಡಿದ್ದ ಮರದ ಕೊಂಬೆ ತಗೆಯುವಾಗ ಮುರಿದ ವಿದ್ಯತ್ ಕಂಬಗಳು ಶಾಲ ಆವರಣದಲ್ಲಿ ಉರಳಿ ಬಿದ್ದು ಆವರಣದಲ್ಲಿ ಊಟ ಮಾಡುತ್ತಿದ್ದ ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿಯಲ್ಲಿರುವ ಶ್ರೀ ಸತ್ಯಸಾಯಿ ವಿದ್ಯಾ ಸಂಸ್ಥೆಯಲ್ಲಿ ಇಂದು ಮಧ್ಯಾನಃ ನಡೆದಿರುತ್ತದೆ ಘಟನೆಯಲ್ಲಿ ಮೂವರು ವಿದ್ಯಾರ್ಥಿಗಳು ಮಾರಣಾಂತಿಕವಾಗಿ ಗಾಯಗೊಂಡಿರುತ್ತಾರೆ. ಕಂಬ ಬಿಳುತ್ತಿದ್ದಂತೆ ವಿದ್ಯಾರ್ಥಿಗಳು ಒಡಿ ಹೋಗಲು ಪ್ರಯತ್ನಿಸಿರುತ್ತಾರೆ ಆದರೂ ಸಾಧ್ಯವಾಗದೆ ಗಾಯಗೊಂಡಿರುತ್ತಾರೆ ಅವರು ಊಟ ತಟ್ಟೆ ನೀರಿನ ಬಾಟಲಗಳು ಚಪ್ಪಲಿಗಳು ಕಂಬದ ಅಡಿಯಲ್ಲಿ ಸಿಲುಕಿ ನುಜ್ಜುಗುಜ್ಜಾಗಿವೆ.ಶ್ರೀ ಸತ್ಯಸಾಯಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ಹಾದು ಹೋಗಿರುವ ವಿದ್ಯತ್ ತಂತಿಗಳ ಮೇಲೆ ಶಾಲ ಅವರಣದಲ್ಲಿನ ಮರದ ಕೊಂಬೆಗಳು ಹರಡಿಕೊಂಡಿದ್ದು ಇದನ್ನು ತೆರವುಗೊಳಿಸುವ ಸಲುವಾಗಿ ಬೆಸ್ಕಾಂ ಸಿಬ್ಬಂದಿ ಕೊಂಬೆಗಳನ್ನು ಕಡದಿರುತ್ತಾರೆ ಕಡಿದ ಕೊಂಬೆಗಳು ವಿದ್ಯತ್ ತಂತಿಗಳ ಮೇಲೆ ಬಿದ್ದಾಗ ಅದನ್ನು ತಗೆಯಲು ಬೆಸ್ಕಾಂ ಸಿಬ್ಬಂದಿ ಇಲ್ಲದೆ ಹಗ್ಗ ಹಾಕಿ ಎಳೆದಾಗ ಎರಡು ವಿದ್ಯತ್ ಕಂಬಗಳು ನೆಲಕ್ಕೆ ಉರಳಿ ಬಿದ್ದಿವೆ ಈ ಸಂದರ್ಭದಲ್ಲಿ ಶಾಲಾ…

Read More

ಶ್ರೀನಿವಾಸಪುರ:ಕನಾ೯ಟಕ ರಾಜ್ಯ ದೇವಗಾಣಿಗ,ಓಂಟೆತ್ತು ಗಾಣಿಗರ ಸಂಘದ ರಾಜ್ಯ ಮಟ್ಟದ ಸಮಾವೇಶ ಡಿಸೆಂಬರ್ 18 ರಂದು ಬೆಂಗಳೂರಿನಲ್ಲಿ ನಡೆಯಲಿರುವುದಾಗಿ ಈ ಸಮಾವೇಶಕ್ಕೆ ತಾಲೂಕಿನಲ್ಲಿರುವ ದೇವಗಾಣಿಗ ಮತ್ತು ಓಂಟೆತ್ತು ಗಾಣಿಗರ ಕುಲಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಕನಾ೯ಟಕ ರಾಜ್ಯ ದೇವಗಾಣಿಗರ ಸಂಘದ ಅಧ್ಯಕ್ಷ ಕುರುಬೂರು ರಮೇಶ್ ಹೇಳಿದರು ಅವರು ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಗಾಣಿಗರ ಸಂಘದ ರಾಜ್ಯ ಮಟ್ಟದ ಸಮಾವೇಶ ಸಂಬಂಧ ಆಯೋಜಿಸಿದ್ದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಗಾಣಿಗ ಸಮುದಾಯಗಳ ಜನತೆ ಸಂಘಟಿತರಾಗಬೇಕಿದೆ ಸರ್ಕಾರದ ಮೀಸಲಾತಿ ಪಟ್ಟಿಯಲ್ಲಿ ನಮ್ಮ ಸಮಾಜದ ಹೆಸರು ಗಾಂಡ್ಲ ಎಂದು ನಮೂದಾಗಿದೆ ಇದನ್ನು ಸರ್ಕಾರ ತೀವ್ರವಾಗಿ ಪರಿಗಣಿಸಿ ದೇವಗಾಣಿಗ ಹಾಗು ಒಂಟೆತ್ತು ಗಾಣಿಗ ಎಂದು ನಮೂದಿಸಿ ಮೀಸಲಾತಿ 2 ಉಪಜಾತಿಯಾಗಿ ನಮೂದಿಸಬೇಕೆದೆ ಗಾಣಿಗ ಅಭಿವೃದ್ದಿ ನಿಗಮ ಸ್ಥಾಪಿಸುವ ಮೂಲಕ ಸಮಾಜದ ಅಭಿವೃದ್ದಿಗೆ ಸರ್ಕಾರ ಮುಂದಾಗಬೇಕು ಈ ಸಮಾವೇಶದಲ್ಲಿ ದೇವ ಜ್ಯೋತಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಪ್ರಾರಂಭ ಮಾಡಲಾಗುತ್ತದೆ ಹಾಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ…

Read More

ಕೋಲಾರ: ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ವರಿಷ್ಠರು ಯಾರಿಗೆ ಟಿಕೆಟ್ ನೀಡಿದರು ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡುವುದಾಗಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿರುತ್ತಾರೆ.ಶ್ರೀನಿವಾಸಪುರದಲ್ಲಿ ಶನಿವಾರ ಶ್ರೀ ವೆಂಕಟೇಶ್ ಗೌಡ ಕಲ್ಯಾಣ ಮಂಟಪದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಕುರಿತಾಗಿ ಕೋಲಾರದಲ್ಲಿ ಮಾಧ್ಯಮದವರಲ್ಲಿ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು. ವ್ಯಕ್ತಿಗಿಂತ ಪಕ್ಷ ದೊಡ್ದದು ಪಕ್ಷ ಯಾರನ್ನು ಗುರುತಿಸಿ ಟಿಕೆಟ್ ನೀಡಿದರೆ ಅವರೆ ಅಧಿಕೃತ ಅಭ್ಯರ್ಥಿ ಯಾರಿಗೂ ನಾನು ಅಡ್ಡಿ ಪಡಿಸಲು ಹೋಗುವುದಿಲ್ಲ ಎಂದ ಅವರು ನನ್ನ ಅವಶ್ಯಕತೆ ಇದ್ದರೆ ನನಗೆ ಪಕ್ಷ ಟಿಕೆಟ್ ನೀಡುತ್ತದೆ ಎಂದು ಮಾರ್ಮಿಕವಾಗಿ ನುಡಿದಿರುತ್ತಾರೆ.

Read More