ನ್ಯೂಜ್ ಡೆಸ್ಕ್: ತೆಲಗುಚಿತ್ರರಂಗದ ಸ್ಟಾರ್ ನಟ ನಟಸಿಂಹ ನಂದಮೂರಿ ಬಾಲಕೃಷ್ಣ ಮತ್ತು ನಿರ್ದೇಶಕ ಗೋಪಚಂದ್ ಮಲ್ಲಿನೇನಿ ಕಾಂಬಿನೇಷನ್ ನಲ್ಲಿ ಮಾಸ್ ಆಕ್ಷನ್ ಎಂಟರ್‌ಟೈನರ್ ವೀರಸಿಂಹ ರೆಡ್ಡಿ.ಸಂಪೂರ್ಣ ಕಮರ್ಷಿಯಲ್ ಎಂಟರ್‌ಟೈನರ್ ಶೂಟಿಂಗ್ ಶುರುವಾಗಿರುದ್ದು ಬಾಲಕೃಷ್ಣ ಅಭಿಮಾನಿಗಳು ಬಿಡುಗಡೆಗೆ ಕಾಯುತ್ತಿದ್ದಾರೆ.ವೀರಸಿಂಹ ರೆಡ್ಡಿ ಚಿತ್ರಕ್ಕೆ ಗಾಡ್ ಆಫ್ ಮಾಸ್ ಎಂದು ಉಪ ಶೀರ್ಷಿಕೆ ನೀಡಲಾಗಿದೆ. ಈ ಶೀರ್ಷಿಕೆಯಂತೆ ಬಾಲಯ್ಯ ಊರು ಮಾಸ್ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.ಕೆಲವು ನೈಜ ಘಟನೆಗಳನ್ನು ಆಧರಿಸಿ ನಿರ್ದೇಶಕ ಗೋಪಿಚಂದ್ ಮಲಿನೇನಿ ಈ ಕಥೆಯನ್ನು ಸಿದ್ಧಪಡಿಸಿದ್ದಾರೆ.ಅಖಂಡ ಬ್ಲಾಕ್‌ಬಸ್ಟರ್ ಹಿಟ್ ನಂತರ ಬಾಲಕೃಷ್ಣ ಅಭಿಮಾನಿಗಳು ಮತ್ತೊಂದು ಯಶಸ್ಸಿಗೆ ಕಾಯುತ್ತಿದ್ದರೆ ನಿರ್ದೇಶಕ ಗೋಪಚಂದ್ ಮಲ್ಲಿನೇನಿ “ಕ್ರಾಕ್” ಸಿನಿಮಾದ ಯಶಸ್ವಿಯ ಫಾರ್ಮ್ ನಲ್ಲಿದ್ದಾರೆ. ಸಿನಿ ಪ್ರೇಕ್ಷಕರು ಈ ಜೋಡಿಯಿಂದ ಮತ್ತೊಂದು ಬ್ಲಾಕ್ ಬಸ್ಟರ್ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಇಲ್ಲಿ ಮತ್ತೊಂದು ರೋಚಕ ಅಂಶವೆಂದರೆ ವೀರಸಿಂಹರೆಡ್ಡಿ ಕರ್ನೂಲ್ ಫ್ಯಾಕ್ಷನ್ ಹಿನ್ನೆಲೆಯಲ್ಲಿ ಮೂಡಿಬರಲಿದೆ ಎನ್ನಲಾಗುತ್ತಿದೆ.ಚಿತ್ರಕ್ಕೆ ಸಂಬಂಧಿಸಿದ ಕೆಲಸಗಳು ಶರವೇಗದಲ್ಲಿ ಸಾಗುತ್ತಿದ್ದು ಈ ತಿಂಗಳ 9 ರಿಂದ 13 ರವರೆಗೆ ಐದು…
Author: Srinivas_Murthy
ಶ್ರೀನಿವಾಸಪುರ: ಬಿಜೆಪಿ ಮುಖಂಡ ಕ್ಷೇತ್ರದ ಟಿಕೆಟ್ ಅಕಾಂಕ್ಷಿಯಾಗಿರುವ SLN ಮಂಜುನಾಥ್ ನಿಧಾನವಾಗಿ ಕ್ಷೇತ್ರದಲ್ಲಿ ನೆಲೆ ಉರುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ ಕಾರ್ಯಕರ್ತರ ಸಮಾರಂಭಗಳಲ್ಲಿ ಪಾಲ್ಗೋಳ್ಳುವ ಮೂಲಕ ಭಾನುವಾರ ವಿಕೇಂಡ್ ಟ್ರಿಪ್ ಎನ್ನುವಂತೆ ಕ್ಷೇತ್ರಾದ್ಯಂತ ಆಕ್ಟಿವ್ ಆಗಿ ಒಡಾಡಿದ್ದಾರೆ. ತಾಲೂಕಿನಲ್ಲಿ ಇಂದು ನಡೆದ ಬಿಜೆಪಿ ಪಕ್ಷದ ಕಾರ್ಯಕ್ರಮಗಳಲ್ಲಿ ಮತ್ತು ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ ಬೆಳ್ಳಂಬೆಳಿಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ಹಾಗು ತಾಲೂಕು ಅಧ್ಯಕ್ಷ ಅಶೋಕ್ ರೆಡ್ದಿ ಅವರೊಂದಿಗೆ ಪಕ್ಷದ ಸಂಘಟನೆ ಕುರಿತಂತೆ ನಡೆದ ಸಭೆಯಲ್ಲಿ ಪಾಲ್ಗೋಂಡಿದ್ದ ಮಂಜು ಅಲ್ಲಿಂದ ರೋಣೂರಿನ ಆಪ್ತರ ಮನೆ ಗೃಹಪ್ರವೇಶದಲ್ಲಿ ಪಾಲ್ಗೋಂಡಿದ್ದರು ನಂತರ ಲಕ್ಷ್ಮೀಪುರದಲ್ಲಿ ಪ್ರಭಾವಿ ಮುಖಂಡರೊಬ್ಬರನ್ನು ಭೇಟಿಯಾಗಿ ಬಿಜೆಪಿ ಸೇರುವಂತೆ ಅಹ್ವಾನ ನೀಡಿರುತ್ತಾರೆ, ಅಲ್ಲಿಂದ ನೇರವಾಗಿ ಚಿಂತಾಮಣಿಯ VPಪ್ಯಾಲೆಸ್ ನಲ್ಲಿ ನಡೆದ ಪುರಸಭೆ ಸದಸ್ಯ ಭಾಸ್ಕರ್ ಮಗನ ನಾಮಕರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀನಿವಾಸಪುರಕ್ಕೆ ಆಗಮಿಸಿ ಪಟ್ಟಣದ ಮೋತಿಲಾಲ್ ರಸ್ತೆಯಲ್ಲಿ ತಮ್ಮ ಆಪ್ತ ಕಾರ್ಯಕರ್ತನ ಹುಟ್ಟಿದಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಚಲ್ದಾಗನಹಳ್ಳಿ ಬಳಿ ಯುವ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ…
ಕೋಲಾರದಲ್ಲಿ ವಿಪಕ್ಷ ನಾಯಕನಿಗೆ ಅದ್ಧೂರಿ ಸ್ವಾಗತ ಸಿದ್ದರಾಮಯ್ಯಗೆ ಹೂಮಳೆ, ಪಟಾಕಿ ಸಿಡಿಸಿ ಸ್ವಾಗತಿಸಿದ ಕಾರ್ಯಕರ್ತರು ಕೋಲಾರಮ್ಮ ದೇವಸ್ಥಾನದಲ್ಲಿ ಪ್ರಥಮ ಪೂಜೆ ಸಲ್ಲಿಸಿದ ಸಿದ್ದರಾಮಯ್ಯ ಕೋಲಾರ:ಮುಂಬರುವ 2023 ಚುನಾವಣೆಯಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಪದೇ ಪದೇ ಒತ್ತಡ ಹೇರುತ್ತಿರುವುರುವ ಹಿನ್ನಲೆಯಲ್ಲಿ ಸ್ಪರ್ದಿಸುವ ಬಗ್ಗೆ ಚಿಂತನೆ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಹಾಗು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಭಾನುವಾರ ಕೋಲಾರದಲ್ಲಿ ಹೇಳಿದರು. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ತರಬೇಕು ಎಂಬ ಉದ್ದೇಶದಿಂದ ಎಲ್ಲಾ ಜನರು ಪಕ್ಷವನ್ನು ಬೆಂಬಲಿಸುವ ಅವಶ್ಯಕತೆ ಇದೆ ರಾಜ್ಯ ವಿಧಾನಸಭಾ ಚುನಾವಣೆಯ ಸಿದ್ಧತೆಯ ಭಾಗವಾಗಿ ಜಿಲ್ಲೆಗೆ ಭೇಟಿ ನೀಡಿರುವುದಾಗಿ ಸಿದ್ದರಾಮಯ್ಯ ಹೇಳಿದರು. ಸಿದ್ದರಾಮಯ್ಯ ಇಂದು ಬೆಂಗಳೂರಿನಿಂದ ವಿಶೇಷ ಬಸ್(Caravan) ನಲ್ಲಿ ಕೋಲಾರಕ್ಕೆ ಆಗಮಿಸಿದ ಅವರನ್ನು ಕಾಂಗ್ರೆಸ್ ಮುಖಂಡರು ಅದ್ಧೂರಿಯಾಗಿ ಸ್ವಾಗತ ಮಾಡಿದರು.ಕೋಲಾರಕ್ಕೆ ಆಗಮಿಸಿದ ಕೂಡಲೇ ಸಿದ್ದರಾಮಯ್ಯ ನೇರವಾಗಿ ಕೋಲಾರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು ನಂತರ ಚರ್ಚ್ ಗೆ ಹೋಗಿ ಪ್ರಾರ್ಥನೆ ಸಲ್ಲಿಸಿದರು ಅಲ್ಲಿ ಕ್ರೈಸ್ತ…
ಶ್ರೀನಿವಾಸಪುರ:ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಿಂದ ಬಂದಿರುವ ನಾನು ಕಳೆದ ನಲವತ್ತು ವರ್ಷಗಳಿಂದ ಈ ಕ್ಷೇತ್ರದಲ್ಲಿ ಪ್ರಮಾಣಿಕವಾಗಿ ಕಾಂಗ್ರೆಸ್ ಪಕ್ಷದ ಸಿದ್ದಾಂತದಲ್ಲಿ ಪಕ್ಷಕ್ಕೆ ನಿಷ್ಠಾವಂತನಾಗಿ ಕೆಲಸ ಮಾಡುತ್ತ ಬಂದಿರುವೆ ನಾನು ಈ ಬಾರಿಗೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಥಾನದ ಆಕಾಂಕ್ಷಿಯಾಗಿ ಟಿಕೆಟ್ ಬಯಸಿ ಅರ್ಜಿಸಲ್ಲಿಸುತ್ತಿದ್ದು ಇದಕ್ಕೆ ಪಕ್ಷದ ಕಾರ್ಯಕರ್ತರ ಬೆಂಬಲ ಕೇಳುತ್ತಿರುವೆ ಎಂದು ತಾಲೂಕಿನ ಪ್ರಭಾವಿ ಕಾಂಗ್ರೆಸ್ ಮುಖಂಡ ದಳಸನೂರು ಗೋಪಾಲಕೃಷ್ಣ ಹೇಳಿದರು ಅವರು ಇಂದು ಪಟ್ಟಣದ ಶ್ರೀ ವೆಂಕಟೇಶಗೌಡ ಕಲ್ಯಾಣಮಂಟಪದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದರು.ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿರುವೆ ಈಗ ಟಿಕೆಟ್ ಕೇಳುವುದರಲ್ಲಿ ತಪ್ಪೇನು ಎಂದ ಅವರು ಹಿಂದೆ ನರಸಿಂಹರಾಯರು ಪ್ರಧಾನಮಂತ್ರಿಗಳಾಗಿದ್ದಾಗ ನನಗೆ ಟಿಕೆಟ್ ನೀಡುವ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ಸ್ರ್ಕೀನಿಂಗ್ ಕಮಿಟಿಯವರಿಗೂ ಹೋಗಿತ್ತು ಅವತ್ತು ಟಿಕೆಟ್ ಕೈ ತಪ್ಪಿತು ನಂತರ ತೀವ್ರವಾಗಿ ಪ್ರಯತ್ನ ನಡೆಸಿರಲಿಲ್ಲ ಟಿಕೆಟ್ ಸಿಗಲಿಲ್ಲ ಎಂದು ನಾನು ಯಾವುದೆ ಕಾರಣಕ್ಕೂ ಪಕ್ಷ ನಿಷ್ಠೆ ಬದಲಿಸಲಿಲ್ಲ ಪಕ್ಷಕ್ಕೆ ದ್ರೋಹ ಬಗೆಯುವಂತ ಕೆಲಸ ಮಾಡಲಿಲ್ಲ ಇತರೆ ಪಕ್ಷಗಳೊಂದಿಗೆ ಒಳ…
ನ್ಯೂಜ್ ಡೆಸ್ಕ್: ಕಣಿವೆ ರಾಜ್ಯ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದ್ದು ಈ ತಿಂಗಳ 12 ರಂದು ಶನಿವಾರ ಮತದಾನ ನಡೆಯಲಿದೆ ಹಿಮಾಚಲ ಪ್ರದೇಶದಲ್ಲಿ ಯಾರೇ ಅಧಿಕಾರಕ್ಕೆ ಬಂದರೂ,ರಾಜ್ಯವನ್ನು ರೂ.64,904 ಕೋಟಿ ಸಾಲದಿಂದ ಪಾರು ಮಾಡುವುದು ಅಷ್ಟಕಷ್ಟ ಎನ್ನಲಾಗಿದೆ ಇಂತಹ ರಾಜ್ಯದಲ್ಲಿ ಇಲ್ಲಿನ ಸರ್ಕಾರಕ್ಕೆ ಪ್ರಮುಖ ಸವಾಲಾಗಿದೆ. ಆದಾಗ್ಯೂ ಇಲ್ಲಿನ ಚುನಾವಣೆಯಲ್ಲಿ ಪ್ರಮುಖ ಪಕ್ಷಗಳ ಪರವಾಗಿ ಸ್ಪರ್ಧಿಸುವವರಲ್ಲಿ ಬಹುತೇಕ ಅಭ್ಯರ್ಥಿಗಳು ಕುಬೇರರು ಎಂಬುದು ಗಮನಾರ್ಹ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್) ವರದಿಯ ಪ್ರಕಾರ, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿಗಳಲ್ಲಿ ಶೇಕಡಾ 90 ರಷ್ಟು ಕೋಟ್ಯಾಧಿಪತಿಗಳು. ಬಿಜೆಪಿಯಿಂದ ಸ್ಪರ್ಧಿಸುತ್ತಿರುವವರಲ್ಲಿ ಶೇ 82ರಷ್ಟು ಮಂದಿ ಕೋಟ್ಯಾಧಿಪತಿಗಳು. ಒಟ್ಟು 61 ಕಾಂಗ್ರೆಸ್ ಅಭ್ಯರ್ಥಿಗಳು ಮತ್ತು 56 ಬಿಜೆಪಿ ಅಭ್ಯರ್ಥಿಗಳು ಕೋಟಿ ಕೋಟಿ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿಯಿಂದ ಶಿಮ್ಲಾದ ಚೋಪಾಲ್ ಕ್ಷೇತ್ರದಿಂದ ಸ್ಪರ್ಧಿಸಿರುವ ಬಲ್ವೀರ್ ಸಿಂಗ್ ವರ್ಮಾ 128 ಕೋಟಿ ಆಸ್ತಿಯೊಂದಿಗೆ ಕುಬೇರನ ಸ್ಥಾನದಲ್ಲಿ ಅಗ್ರಸ್ಥಾನದಲ್ಲಿದ್ದರೆ. ಶಿಮ್ಲಾ…
ಶ್ರೀನಿವಾಸಪುರ:ಮುಂದಿನ ವರ್ಷ ನಡೆಯುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ MLA ಟಿಕೆಟ್ ಆಕಾಂಕ್ಷಿಯಾಗಿರುವ ತಾಲೂಕಿನ ಪ್ರಭಾವಿ ಕಾಂಗ್ರೆಸ್ ಮುಖಂಡ ಹಾಗು ಮಾಜಿ ಸಂಸದ ಮುನಿಯಪ್ಪನವರ ಆಪ್ತವಲಯದಲ್ಲಿ ಗುರ್ತಿಸಿಕೊಂಡಿರುವ ದಳಸನೂರು ಗೋಪಾಲಕೃಷ್ಣ ಈಗಿನಿಂದಲೆ ಫುಲ್ ಆಕ್ಟಿವ್ ಆಗಿದ್ದಾರೆ ಈಗಾಗಲೆ ಕ್ಷೇತ್ರಾದ್ಯಂತ ಟೂರ್ ಕಾರ್ಯಕ್ರಮ ಹಮ್ಮಿಕೊಂಡು ಕಾರ್ಯಕರ್ತರ ಅಭಿಪ್ರಾಯ ಪಡೆಯುತ್ತಿದ್ದು 12 ರಂದು ಶನಿವಾರ ಪಟ್ಟಣದ ವೆಂಕಟೇಗೌಡ ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತರ ಸಭೆ ನಡೆಸಲು ಮುಂದಾಗಿದ್ದಾರೆ.ದಳಸನೂರು ಗೋಪಾಲಕೃಷ್ಣ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಭಾವಿ ಕಾಂಗ್ರೆಸ್ ಮುಖಂಡ ಪಕ್ಷದ ನಾಯಕತ್ವ ಬದಲಾದರು ಪಕ್ಷದಲ್ಲಿ ನಿಷ್ಠಾವಂತ ಮುಖಂಡನಾಗಿ ಕಳೆದ 4 ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿಯೇ ಗುರ್ತಿಸಿಕೊಂಡಿದ್ದಾರೆ.ಕಳೆದ ಲೊಕಸಭೆ ಚುನಾವಣೆಯಲ್ಲಿ ತಮ್ಮ ನಿಷ್ಠೆಯನ್ನು ಕೆ ಎಚ್ ಮುನಿಯಪ್ಪನವರಿಗೆ ವ್ಯಕ್ತಪಡಿಸಿಕೊಂಡು ಹಾಲಿ ಶಾಸಕ ರಮೇಶ್ ಕುಮಾರ್ ಅವರಿಂದ ಅಂತರ ಕಾಪಾಡಿಕೊಳ್ಳುವ ಮೂಲಕ ತಾಲೂಕಿನ ಕಾಂಗ್ರೆಸ್ ಪಕ್ಷದಲ್ಲಿ ರೆಬಲ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಶನಿವಾರ ಕಾರ್ಯಕರ್ತರ ಸಭೆ:ಕಾಂಗ್ರೆಸ್ ಟಿಕೆಟ್ ಅಕಾಂಕ್ಷಿಯಾಗಿ ಕಾರ್ಯಕರ್ತರ ಸಭೆ ನಡೆಸುತ್ತಿರುವುದಾಗಿ ಮಾಧ್ಯಮದವರೊಂದಿಗೆ ಮಾತನಾಡಿ ತಿಳಿಸಿದ ಅವರು 1994…
ಶ್ರೀನಿವಾಸಪುರ: ಕೌಟಂಬಿಕ ಕಲಹದ ನ್ಯಾಯ ಪಂಚಾಯಿತಿಯಲ್ಲಿ ಮಾತನಾಡಿದ್ದ ವ್ಯಕ್ತಿ ಅನುಮಾನ್ಪದವಾಗಿ ಮೃತಪಟ್ಟಿರುತ್ತಾನೆ ಮೃತನ ಕಡೆಯವರು ಎದುರಾಳಿ ಮಾಡಿದ ಹಿನ್ನಲೆಯಲ್ಲಿ ಮನೆಗೆ ಬೆಂಕಿ ಹಚ್ಚಿರುವ ಘಟನೆ ತಾಲೂಕಿನ ಗೌವವಿಪಲ್ಲಿ ಪೋಲಿಸ್ ಠಾಣೆ ವ್ಯಾಪ್ತಿಯ ಕೋಡಿಪಲ್ಲಿ ಪಂಚಾಯಿತಿಯ ಕರಿಪಲ್ಲಿ ಗ್ರಾಮದಲ್ಲಿ ನಡೆದಿರುತ್ತದೆ.ಮೃತ ವ್ಯಕ್ತಿಯನ್ನು ವೆಂಕಟರವಣಪ್ಪ (55) ಎಂದು ಗುರುತಿಸಲಾಗಿದೆ ಮೃತ ವ್ಯಕ್ತಿಯ ಮೊಮ್ಮಗಳ ಗಂಡ ಗಣೇಶನೆ ವೆಂಕಟರಮಣಪ್ಪನನ್ನು ಕೊಲೆಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ.ಕೊಲೆ ವಿಷಯ ಹೊರಬಿಳುತ್ತಿದ್ದಂತೆ ಮೃತನ ಮನೆಯವರು ಮೊಮ್ಮಗಳ ಗಂಡ ಗಣೇಶನ ಸೋದರ ಮಾವ ಲಚ್ಚನ್ನನ ಮನೆಗೆ ಬೆಂಕಿ ಹಾಕಿದ್ದು ಮನೆ ಹಾಗು ಪೀಠೋಪಕರಣಗಳು ಹಾಗೂ ಬಟ್ಟೆಗಳು ಭಸ್ಮವಾಗಿದೆಮೃತನ ಮೊಮ್ಮಗಳಾದ ಶೋಬಾಳನ್ನು ಚಿಂತಾಮಣಿ ತಾಲೂಕಿನ ಬಟ್ಟಲಪಲ್ಲಿ ಮಾವುಕೆರೆ ಗ್ರಾಮದ ಗಣೇಶನಿಗೆ ಕೊಟ್ಟು ವಿವಾಹ ಮಾಡಲಾಗಿತ್ತು ದಾಂಪತ್ಯ ಜೀವನದ ಕುರಿತಾಗಿ ದಂಪತಿ ನಡುವಿನ ಜಗಳಕ್ಕೆ ಎರಡು ದಿನಗಳ ಹಿಂದಿನ ರಾತ್ರಿ ಗ್ರಾಮದಲ್ಲಿನ್ಯಾಯ ಪಂಚಾಯತಿ ಮಾಡಲಾಗಿದೆ ಈ ಸಂದರ್ಭದಲ್ಲಿ ಎರಡು ಕುಟುಂಬದವರ ನಡುವೆ ಮಾತಿಗೆ ಚಕಮಕಿ ನಡೆದಿರುತ್ತದೆ ಇದು ಗಲಾಟೆಗೆ ತಿರುಗಿದೆ ಇದರಿಂದ ಮೊಮ್ಮಗಳ ಗಂಡ ಗಣೇಶ್…