ಶ್ರೀನಿವಾಸಪುರ: ಮಾಂಡೋಸ್ ಚಂಡಮಾರುತದ ಪರಿಣಾಮ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಉತ್ತರ ಭಾಗದ ಬಹುತೇಕ ಕೆರೆಗಳು ಹಾಗು ನೀರಾವರಿ ಪ್ರಾಜೆಕ್ಟ್ ಗಳು ಬರ್ತಿಯಾಗಿ ತುಂಬಿ ಭೋರ್ಗೆರುಯುತ್ತ ಆಂಧ್ರದ ಕಡೆ ಹರಿಯುತ್ತಿವೆ.ನೆಲವಂಕಿ ಹೋಬಳಿಯ ಗೋರವಿಮಾಕಲಹಳ್ಳಿ,ಜೋಡಿಕೊತ್ತಪಲ್ಲಿ,ಕುರುಪಲ್ಲಿ,ಚಿಕ್ಕಒಬಳನಾಯಕನ ಕೆರೆ,ದೊಡ್ದಒಬಳನಾಯಕನಕೆರೆ,ಇಲ್ದೋಣಿ ಕೆರೆ ಕೋಡಿಬಿದ್ದಿವೆ,ಇವುಗಳಿಂದ ಹರಿಯುವ ನೀರು ಗುಂದೇಡು ಕೆರೆಗೆ ಹರಿದು ಅಲ್ಲಿಂದ ಬೆಂಗಳೂರು-ಕಡಪಾ ಹೆದ್ದಾರಿಯಲ್ಲಿ ಹಾದು ಹೋಗಿರುವ ಗುಂದೇಡು ದೊಡ್ದ ಹಳ್ಳದ ಮೂಲಕ ನಿಮ್ಮನಪಲ್ಲಿ ನಾಲೆ ಮೂಲಕ ಜಾಲಗೊಂಡ್ಲಹಳ್ಳಿ ಪ್ರಾಜೇಕ್ಟ್ ಸೇರುತ್ತದೆ.ಪುಲಗೂರಕೋಟೆಯ ನಾಯಿನಚರವುಕೆರೆ ಅಭಿವೃದ್ದಿ!ತಾಲೂಕು ಪುಲಗೋರಕೋಟೆ ಭಾಗದ ಕೊತ್ತಗಡ್ದ-ಗಂಗಾಪುರ ಅರಣ್ಯ ಪ್ರದೇಶದಲ್ಲಿ ಬೆಟ್ಟಗಳ ಸಾಲಿನ ಕಣಿವೆ ಪ್ರದೇಶದಲ್ಲಿ ಬರುವಂತ ನಾಯಿನಚರವು ಕೆರೆಗೆ ಬೆಟ್ಟಗಳಿಂದ ದೊಡ್ದಮಟ್ಟದಲ್ಲಿ ನೀರು ಹರಿದು ಬರುತ್ತದೆ ಇಲ್ಲಿ ನೀರು ನಿಲ್ಲಲು ಸಾಧ್ಯವಾಗದೆ ನೇರವಾಗಿ ಕೆರೆ ನೀರು ನೇರವಾಗಿ ಆಂಧ್ರದ ಚಂಬಕೂರು-ರಾಮಸಮುದ್ರಂ ಭಾಗದ ಕೆರೆಗಳ ಪಾಲಾಗುತ್ತಿದ್ದು ಅದನ್ನು ತಡೆಯುವ ಉದ್ದೇಶದಿಂದ ಕೋಡಿಬಿದ್ದ ನಾಯಿನಚರವು ಕೆರೆಯ ನೀರನ್ನು ಹಿಮ್ಮುಖವಾಗಿ ಹರಿಸಲು ಸಣ್ಣ ನೀರಾವರಿ ಇಲಾಖೆ ವತಿಯಿಂದ ಯೋಜನೆ ರೂಪಿಸಿದ್ದು ಕೆರೆಕಟ್ಟೆ ಅಭಿವೃದ್ದಿ ಪಡಿಸಿ ಕೋಡಿ ಎತ್ತರಿಸಿ ನಾಲೆ ನಿರ್ಮಿಸಿ…
Author: Srinivas_Murthy
ಶ್ರೀನಿವಾಸಪುರ:ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಮಾಂಡೂಸ್ ಚಂಡಮಾರುತದ ಚಳಿ-ಮಳೆಯಲ್ಲಿ ನೆಂದು ಪರೆದಾಡಿದ ವಿದ್ಯಾರ್ಥಿಗಳು!ಇಂದು ವಾರಾಂತ್ಯ ಶನಿವಾರ ಮಾರ್ನಿಂಗ್ ಸ್ಕೂಲ್ ವಿದ್ಯಾರ್ಥಿಗಳ ಕಥೆ ಇದು,ಸುರಿಯುವ ಮಳೆಯಲ್ಲೆ ಶಾಲೆಗೆ ಬಂದ ಮಕ್ಕಳು ಮಳೆಯಲ್ಲಿ ನೆನೆದು ಮುದ್ದೆಯಾದರೂ,ಇದು ಪಟ್ಟಣ ಶಾಲೆಗಳ ಪರಿಸ್ಥಿತಿಯಾದರೆ ಗ್ರಾಮೀಣ ಭಾಗದ ಕೆಲ ಶಾಲೆಯ ಶಿಕ್ಷಕರು ಮನೆಯಲ್ಲೆ ಕುಳಿತು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗು ಸದಸ್ಯರನ್ನು ಫೊನ್ ಮೂಲಕ ಸಂಪರ್ಕಿಸಿ ಅವರ ಒಪ್ಪಿಗೆ ಪಡೆದು ಶಾಲೆಗಳಿಗೆ ರಜೆ ಘೋಷಿಸಿದರೆ, ಇನ್ನೂಳಿದಂತೆ ಶಿಕ್ಷಕರು ಮಳೆ-ಗಾಳಿ ಲೆಕ್ಕಿಸದೆ ಶಾಲೆಗೆ ಹೋಗಿ ಮಕ್ಕಳು ಬಾರದ ಹಿನ್ನಲೆಯಲ್ಲಿ ಊರಿನ ಮುಖಂಡರ,ಶಾಲಾಭಿವೃದ್ಧಿ ಸಮಿತಿಯವರ ಅಭಿಪ್ರಾಯ ಪಡೆದು ಶಾಲೆಗೆ ರಜೆ ಘೋಷಿಸಿ ಬಂದಿರುತ್ತಾರೆ.ಭಾರತೀಯ ಹವಾಮಾನ ಇಲಾಖೆ (IMD) ಸೂಚಿಸಿರುವಂತೆ ಮಾಂಡೂಸ್ ಚಂಡಮಾರುತ ಎಫೆಕ್ಟ್ ಡಿಸೆಂಬರ್ 14 ರವರೆಗೆ ಭಾರೀ ಮಳೆಯಾಗಲಿದ್ದು ಕೋಲಾರ ಸೇರಿ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಶನಿವಾರ-ಭಾನುವಾರ ಯಲ್ಲೋ ಅಲರ್ಟ್ ಘೋಷಣೆಯಾಗಿದೆ ಇಷ್ಟೆಲ್ಲ ಮುನ್ಸೂಚನೆ ಇದ್ದರು ಕೋಲಾರ ಜಿಲ್ಲಾಡಳಿತ ಹಾಗು ಶಿಕ್ಷಣ ಇಲಾಖೆ ಅಧಿಕಾರಿಗಳು ಯಾವುದೆ ಮುಂಜಾಗ್ರತೆ ವಹಿಸಿ ಕೋಲಾರ…
ನ್ಯೂಜ್ ಡೆಸ್ಕ್:ಮಂಡೂಸ್ ಚಂಡಮಾರುತ ಆಂಧ್ರದ ಕರಾವಳಿಯನ್ನು ದಾಟಿದೆ.ಪುದುಚೇರಿ-ಶ್ರೀಹರಿಕೋಟಾ ನಡುವೆ ಮಹಾಬಲಿಪುರಂ ಬಳಿ ಮಧ್ಯಾರಾತ್ರಿ 1:30 ರಲ್ಲಿ ಕರಾವಳಿಯನ್ನು ದಾಟಿದ್ದು ಸಂಜೆ ವೇಳೆಗೆ ದುರ್ಬಲವಾಗುವ ಸಾಧ್ಯತೆ ಇದೆ ಎಂದು ತಙ್ಞರ ಅಭಿಪ್ರಾಯ.ಇದರ ಎಫೆಕ್ಟ್ ನಿಂದಾಗಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ,ರಾಮನಗರ, ಕೊಡಗು, ಹಾಸನ, ಶಿವಮೊಗ್ಗ, ಮೈಸೂರು, ತುಮಕೂರು, ದಾವಣಗೆರೆ ಮತ್ತು ಚಿತ್ರದುರ್ಗ ಮತ್ತು ಆಂಧ್ರದ ಚಿತ್ತೂರು,ಅನ್ನಮಯ್ಯ ಮತ್ತು ವೈಎಸ್‌ಆರ್ ಜಿಲ್ಲೆಗಳಲ್ಲಿ ಡಿಸೆಂಬರ್ 14 ರವರೆಗೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಎಂದು ಐಎಂಡಿ ತಿಳಿಸಿದೆ. ಉಳಿದಂತೆ ಉತ್ತರ ಕರ್ನಾಟಕ ಭಾಗದಲ್ಲೂ ಹಲವೆಡೆ ಸಾಧಾರಣ ಮಳೆಯಾಗಬಹುದು ಎಂದು ಐಎಂಡಿ ತಿಳಿಸಿದೆ.ಚಂಡಮಾರುತವು ಆಂಧ್ರ ಕರಾವಳಿಯನ್ನು ದಾಟಿದ್ದರೂ,ನಾಳೆಯವರೆಗೂ ಜನರು ಎಚ್ಚರಿಕೆಯಿಂದ ಇರುವಂತೆ ಐಎಂಡಿ ಅಧಿಕಾರಿಗಳು ಸೂಚಿಸಿದ್ದಾರೆ.ಮಂಡೂಸ್ ಚಂಡಮಾರುತ ಪರಿಣಾಮ ಶುಕ್ರವಾರ ರಾತ್ರಿ ಬೆಂಗಳೂರು ಸೇರಿದಂತೆ ಕೆಲವಡೆ 4.3 ಮಿಮೀ ಮಳೆಯಾಗಿದ್ದು, ಶನಿವಾರ ಬೆಳಗ್ಗೆ ಕನಿಷ್ಠ ತಾಪಮಾನ 16.8 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ.
ನ್ಯೂಜ್ ಡೆಸ್ಕ್:ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಉಂಟಾಗಿರುವ ಮಾಂಡಸ್ ಚಂಡಮಾರುತದಿಂದ ಕೋಲಾರ,ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಭಾಗದ ಕೆಲವು ಜಿಲ್ಲೆಗಳಲ್ಲಿ ತುಂತುರು ಮಳೆಯ ಜೊತೆಗೆ ಸಾಧಾರಣ ಮಳೆ ಅಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ಹೇಳಿದೆ.ಇಂದು ಸಂಜೆಯ ಹೊತ್ತಿಗೆ ಶೀತಗಾಳಿಯಿಂದ ಚಳಿಯ ಪ್ರಮಾಣ ಹೆಚ್ಚಾಗುವ ಸಾದ್ಯತೆ ಇರುವುದಾಗಿ ಹೇಳಲಾಗುತ್ತಿದೆ. ಮೋಡ ಕವಿದ ವಾತಾವರಣ ಮುಂದುವರೆಯಲಿದೆ.ತಮಿಳುನಾಡಿನಲ್ಲಿ ಮಾಂಡೋಸ್ ಚಂಡಮಾರುತ ಅಬ್ಬರ ಜೋರಾಗಿದ್ದು ಸೈಕ್ಲೋನ್ ಎಫೆಕ್ಟ್ ಕರ್ನಾಟಕಕ್ಕೂ ತಟ್ಟಿದೆ ಕರಾವಳಿಯ ಉತ್ತರ ಒಳನಾಡು, ದಕ್ಷಿಣ ಒಳನಾಡಿನಲ್ಲಿ ಅಂದಾಜು 6ಮಿ.ಮೀ ಮಳೆ ಸಾಧ್ಯತೆ ಇದೆ. ಕೋಲಾರ,ಚಿಕ್ಕಬಳ್ಳಾಪುರ, ಬೆಂಗಳೂರು,ಮಂಡ್ಯ,ಚಾಮರಾಜನಗರ,ತುಮಕೂರು,ಚಿಕ್ಕಮಂಗಳೂರು,ರಾಮನಗರದಲ್ಲಿ ಡಿಸೆಂಬರ್ 13 ರವರಿಗೂ ಯಲ್ಲೊ ಅಲರ್ಟ್ ಗೋಷಿಸಲಾಗಿದೆ ಆಂಧ್ರದ ರಾಯಲಸೀಮಾ ಜಿಲ್ಲೆ ಸೇರಿದಂತೆ ತಮಿಳುನಾಡಿನ ಕೆಲ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜಾ ನೀಡಿ ರೆಡ್ ಅಲರ್ಟ್ ಘೋಷಿಸಲಾಗಿದೆ.ನೈಋತ್ಯ ಬಂಗಾಳ ಕೊಲ್ಲಿಯ ಮೇಲೆ “ಮಾಂಡೋಸ್” ಚಂಡಮಾರುತವು ಸುಮಾರು 12 ಕಿಮೀ ವೇಗದಲ್ಲಿ ಪಶ್ಚಿಮ-ವಾಯುವ್ಯಕ್ಕೆ ಚಲಿಸುತ್ತ ನೈಋತ್ಯಕ್ಕೆ ಪ್ರಯಾಣಿಸುತ್ತದೆ ಟ್ರಿಂಕೋಮಲಿಯಿಂದ 240 ಕಿಮೀ ಉತ್ತರ-ಈಶಾನ್ಯಕ್ಕೆ (ಶ್ರೀಲಂಕಾ), ಜಾಫ್ನಾದಿಂದ 270…
ಶ್ರೀನಿವಾಸಪುರ:ಮಾವು ಬೆಳೆಗಾರರಿಗೆ ಬೆಳೆ ವಿಮಾ ಕಂಪನಿ ವಂಚನೆಮಾಡಿರುವುದು ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಕೋಲಾರ ಜಿಲ್ಲಾ ಮಾವು ಬೆಳೆಗಾರರ ಸಂಯುಕ್ತ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಶ್ರೀನಿವಾಸಪುರ ಬಂದ್ ಸಂಪೂರ್ಣವಾಗಿ ಯಶಸ್ವಿಯಾಗಿದ್ದು ಮಾವು ಬೆಳೆಗಾರರ ಬೆಡಿಕೆ ಮನವಿ ಪತ್ರ ಸ್ವೀಕರಿಸಲು ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿಬೇಕು ಎಂದು ಪಟ್ಟು ಹಿಡಿದು ಮಾವುಬೆಳೆಗಾರರು ಇಂದಿರಾಭವನ್ ವೃತ್ತದಲ್ಲಿ ಧರಣಿ ನಿರತರಾಗಿದ್ದಾರೆ.ತಹಶಿಲ್ದಾರ್,ಇನ್ಸಪೇಕ್ಟರ್ ಮಾತಿಗೂ ಜಗ್ಗದ ಬೆಳೆಗಾರು!ಬಂದ್ ವಾಪಸ್ಸು ಪಡೆಯದೆ ಮಾವುಬೆಳೆಗಾರರು ಬಿಗಿ ಪಟ್ಟು ಹಿಡಿದಿದ್ದ ಹಿನ್ನಲೆಯಲ್ಲಿ ಮಧ್ಹಾನದ ಹೊತ್ತಿಗೆ ತಾಲೂಕು ಆಡಳಿತದ ಪರವಾಗಿ ತಹಶೀಲ್ದಾರ್ ಶೀರಿನ್ ತಾಜ್,ಪೋಲಿಸ್ ಇನ್ಸಪೇಕ್ಟರ್ ನಾರಯಣಸ್ವಾಮಿ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸನ್ ಖುದ್ದಾಗಿ ಧರಣಿ ನಿರತ ಮಾವು ಬೆಳೆಗಾರರ ಬಳಿ ಬಂದು ಅವರೊಂದಿಗೆ ಡಾಂಬರು ನೆಲದಲ್ಲಿ ಕುಳಿತು ಬಂದ್ ಹಿಂಪಡೆಯುವಂತೆ ಮನವರಿಕೆ ಮಾಡಿದರಾದರೂ ಮಾವು ಬೆಳೆಗಾರರ ನೋವು ಭಾವನೆಗಳನ್ನು ಅರ್ಥಮಾಡಿಕೊಳ್ಳದ ಜಿಲ್ಲಾಧಿಕಾರಿ ಅಥಾವ ಜಿಲ್ಲಾ ಉಸ್ತುವಾರಿ ಸಚಿವ ಸ್ಥಳಕ್ಕೆ ಬಂದು ಖುದ್ದು ಮನವಿ ಸ್ವೀಕರಿಸಿ ಬೆಳೆಹಾನಿ ಪರಿಹಾರ ಪೂರ್ಣಪಾವತಿ, ಬೆಳೆ ವಿಮೆ ಪರಿಹಾರ…
ಶ್ರೀನಿವಾಸಪುರ: ತಾಲೂಕಿನ ಯರ್ರಂವಾರಿಪಲ್ಲಿ PDO ಏಜಾಜ್ ಪಾಷ ಪಂಚಾಯಿತಿಯ ಲಕ್ಷಾಂತರ ಹಣವನ್ನು ಅಕ್ರಮ ಎಸಗಿದ್ದಾರೆ ಎಂದು ಪಂಚಾಯಿತಿ ಸದಸ್ಯರು ತಾಲೂಕು ಪಂಚಾಯಿತಿ ಇವೊ ಗೆ ದೂರು ನೀಡಿದ್ದಾರೆ.ರಾಯಲ್ಪಾಡು ಹೋಬಳಿಯ ಯರ್ರಂವಾರಿಪಲ್ಲಿ ಪಂಚಾಯಿತಿ ಪಿಡಿಒ ಏಜಾಜ್ ಪಾಷ ಕಚೇರಿಗೆ ಬಾರದೆ ತಮ್ಮ ಮನೆಯನ್ನು ಕಚೇರಿಯನ್ನಾಗಿಸಿಕೊಂಡು ಲಕ್ಷಾಂತರ ಹಣದ ಅವ್ಯವಹಾರ ನಡೆಸಿದ್ದಾರೆ ಈ ಬಗ್ಗೆ ಸರ್ಕಾರ ತನಿಖೆ ಮಾಡುವಂತೆ ಗ್ರಾ.ಪಂ. ಉಪಾಧ್ಯಕ್ಷ ವೈ.ಆರ್.ಶ್ರೀನಿವಾಸರೆಡ್ಡಿ ಅಗ್ರಹಿಸಿರುತ್ತಾರೆ.ಯರ‍್ರಂವಾರಿಪಲ್ಲಿ ಗ್ರಾಮಪಂಚಾಯಿತಿ ಉಪಾಧ್ಯಕ್ಷ ಹಾಗೂ ಸದಸ್ಯರಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕಾರ್ಯಪ್ರವೃತ್ತಿ ವಿರುದ್ಧ ಗ್ರಾ.ಪಂ ಕಚೇರಿ ಮುಂದೆ ಪ್ರತಿಭಟಿಸಿ ನಡೆಸಿ ಮಾತನಾಡಿದರು.ಸರ್ಕಾರಗಳು ಗ್ರಾಮೀಣ ಭಾಗದ ಅಭಿವೃದ್ಧಿಗೆ ಕೋಟ್ಯಾಂತರ ರೂಪಾಯಿಗಳನ್ನು ಬಿಡುಗಡೆ ಮಾಡುತ್ತಿದೆ ಆದರೆ ಯರ‍್ರಂವಾರಿಪಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಣವನ್ನು ಚುನಾಯಿತ ಮಂಡಳಿ ಗಮನಕ್ಕೆ ತಾರದೇ ಡ್ರಾ ಮಾಡಿ ಸರ್ಕಾರ ಹಾಗೂ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾರೆ ಎಂದು ದೂರಿದರು.ಕಳೆದ 4 ತಿಂಗಳಿನಿಂದ ತಂಬ್ ಕೊಟ್ಟಿಲ್ಲ ,ಈ ಬಗ್ಗೆ ಇಒ ಗಮನಕ್ಕೆ ತರಲಾಗಿದೆ. ಪಿಡಿಒ ಅಧಿಕಾರಿಯ ಕಾರ್ಯವೈಖರಿ ಕುರಿತಾಗಿ ಹಾಗು ಲಕ್ಷಾಂತರ…
ಶ್ರೀನಿವಾಸಪುರ: ತಾಲೂಕಿನ ನೆಲವಂಕಿ ಹೊಬಳಿಯ ಪಚರಾಮಕಲಹಳ್ಳಿ ಮಾಜಿ ಶಾಸಕ ವೆಂಕಟಶಿವಾರೆಡ್ದಿ ಬದ್ರಕೋಟೆ ಇದು ಇಂದು ನೆನ್ನೆಯದಲ್ಲ ನೆಗಿಲುಹೊತ್ತ ರೈತನ ಚಿನ್ಹೆಯ ಜನತಾಪಕ್ಷದ ಕಾಲದಿಂದಲೂ ಇಲ್ಲಿನ ಜನತೆ ವೆಂಕಟಶಿವಾರೆಡ್ದಿಗೆ ಬೆಂಬಲ ನೀಡುತ್ತಿರುವುದು ಜಗಜಾಹಿರ.70 ರ ದಶಕದಲ್ಲಿ ವೆಂಕಟಶಿವಾರೆಡ್ಡಿ ಜನತಾಪಕ್ಷದ ಯುವನಾಯಕರಾಗಿ ದೇವೇಗೌಡರನ್ನು ಕರೆಸಿ ಶ್ರೀನಿವಾಸಪುರದಲ್ಲಿ ಸಭೆ ಮಾಡಿದಾಗ ಪಚರಾಮಕಲಹಳ್ಳಿ ವೆಂಕಟಸ್ವಾಮಿರೆಡ್ಡಿ ಜನತಾಪಕ್ಷದ ತಾಲೂಕು ಅಧ್ಯಕ್ಷರಾಗಿದ್ದರು.ಇಂತಹ ಗ್ರಾಮದಲ್ಲಿ 2023 ರ ಸಾರ್ವತ್ರಿಕ ಚುನಾವಣೆಯ ಪ್ರಭಲ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಲು ಸಜ್ಜಾಗಿರುವ ಗುಂಜೂರುಶ್ರೀನಿವಾಸರೆಡ್ಡಿ ಸಭೆ ನಡೆಸಿದ್ದಾರೆ ಸುಮಾರು 70 ಹೆಚ್ಚು ಕಾರ್ಯಕರ್ತರನ್ನು ತಮ್ಮ ಬಣಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿರುವ ಅವರು ಕ್ಷೇತ್ರದ ಜನತೆ ಯಾವುದೇ ಉಹಾಪೋಹಗಳನ್ನು ನಂಬಬೇಡಿ ಮುಂದಿನ ಚುನಾವಣೆಯಲ್ಲಿ ಇಲ್ಲಿಂದಲೇ ಸ್ಪರ್ದಿಸುತ್ತೇನೆ ಯುವ ಜನರಿಗೆ ಉದ್ಯೋಗ ಬದ್ರತೆ ಒದಗಿಸಲು ಇಲ್ಲಿಗೆ ಬಂದಿರುವೆ,ಎಲ್ಲೋ ದೂರದ ಮಹಾನಗರದಲ್ಲಿ ಕೊಡುವ ಹತ್ತಾರು ಸಾವಿರ ಅವರ ಜೀವನಕ್ಕೆ ಸಾಲದಾಗಿದ್ದು ಅವರಿಗೆ ಸ್ಥಳೀಯವಾಗಿ ಉದ್ಯೋಗವಾಕಾಶಗಳ ಸೃಷ್ಠಿಸುವ ದೃಡ ಸಂಕಲ್ಪದ ಮಾಡಿರುವುದಾಗಿ ಹೇಳಿದರು.ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಪೆದ್ದರೆಡ್ಡಿರಾಜೇಂದ್ರಪ್ರಸಾದ್ ಮಾತನಾಡಿ ತಾಲೂಕಿನ ಹಳೇಯ ರಾಜಕೀಯ…
ಶ್ರೀನಿವಾಸಪುರ: ಆಂಧ್ರದ ಗಡಿಬಾಗದಲ್ಲಿದ್ದು ಜನರ ಬದುಕಿನಲ್ಲಿ ಆಂಧ್ರದ ಸಂಸೃತಿ ಅನಾವರಣವಾಗಿದ್ದರು ತಾಲೂಕಿನ ಜನತೆ ಕನ್ನಡ ಭಾಷೆ ಮೇಲಿನ ಪ್ರಿತಿ ಅಭಿಮಾನ ಕಡಿಮೆಯಾಗಿಲ್ಲ ಕನ್ನಡವನ್ನು ಆಡಳಿತಾತ್ಮಕವಾಗಿ ಇನ್ನೂ ಹೆಚ್ಚು ಬಳಸುವ ಮೂಲಕ ಕನ್ನಡ ಭಾಷೆಗೆ ಹೆಚ್ಚು ಮಹತ್ವನೀಡಬೇಕೆಂದು ತಹಶೀಲ್ದಾರ್ ಶೀರಿನ್‌ತಾಜ್ ಮನವಿ ಮಾಡಿದರು.ಅವರು ತಮ್ಮ ಕಚೇರಿ ಸಂಬಾಂಗಣದಲ್ಲಿ ತಾಲೂಕಿನ ಯಲ್ದೂರಿನಲ್ಲಿ ನಡೆಯಲಿರುವ ಶ್ರೀನಿವಾಸಪುರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆಮಾಡಿ ಮಾತನಾಡಿದರು ಈ ತಿಂಗಳ 9 ರಂದು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾಲೂಕಿನ 12 ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಡೆಯಲಿದೆ ಎಂದರು.ಭಾಷೆಯ ಉಳಿವಿಗಾಗಿ ಸಾಹಿತ್ಯ ಪರಿಷತ್ ಕನ್ನಡಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಮಾನಸದಲ್ಲಿ ಸಾಗುತ್ತಿರುವುದು ಹೆಮ್ಮೆಯ ವಿಷಯವಾಗಿದ್ದು 12 ನೇ ಸಮ್ಮೇಳನವೂ ವೈಭವೂರಿತವಾಗಿ ಆಚರಿಸಲು ಮುಂದಾಗಿದ್ದು ಎಲ್ಲರ ಸಹಕಾರ ಅಗತ್ಯವಾಗಿ ಬೇಕು ಎಂದರು.ಕಸಾಪ ಜಿಲ್ಲಾಧ್ಯಕ್ಷ ಗೋಪಾಲಗೌಡ ಮಾತನಾಡಿ ಡಿಸಂಬರ್ 9ರಂದು ತಾಲೂಕಿನ ಯಲ್ದೂರಿನ ನ್ಯಾಷನಲ್ ಪ್ರೌಡಶಾಲೆ ಆವರಣದಲ್ಲಿ 12 ನೇ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ.…
ಶ್ರೀನಿವಾಸಪುರ:ತಾಲೂಕಿನಲ್ಲಿ ಆಮ್ ಆದ್ಮಿ ಪಕ್ಷ ಸಂಘಟನೆಯಲ್ಲಿ ಖ್ಯಾತ ವೈದ್ಯ ಡಾ.ವೆಂಕಟಾಚಲ ಪೂರ್ತಿಯಾಗಿ ತೊಡಗಿಸಿಕೊಂಡು ತಾಲೂಕಿನಾದ್ಯಂತ ಗ್ರಾಮೀಣ ಭಾಗದಲ್ಲಿ ಆರೋಗ್ಯ ಶಿಭಿರಗಳನ್ನು ಆಯೋಜಿಸುತ್ತ ಜನರ ನಾಡಿ ಮೀಡಿತ ಹಿಡಿದು ಸಾಗುತ್ತಿದ್ದಾರೆ.ಈ ಬಗ್ಗೆ ಮಾತನಾಡಿರುವ ಅವರು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಆರೋಗ್ಯ ಶಿಭಿರಗಳನ್ನು ಆಯೋಜಿಸಿ ಜನರ ಆರೋಗ್ಯ ಆಂದೋಲನ ಮೂಲಕ ಚಿಕಿತ್ಸೆ ಕೊಡುವುದು ಸೇರಿದಂತೆ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳ ಕುರಿತಾದ ಮಾಹಿತಿ ಸಂಗ್ರಹಣೆ ಹಾಗು ಆರೋಗ್ಯ ಜಾಗ್ರತೆ ಮೂಡಿಸುತ್ತಿದ್ದೇವೆ ಎನ್ನುತ್ತಾರೆ ಇಲ್ಲಿನ ರಾಜಕೀಯ ವ್ಯವಸ್ಥೆಯಲ್ಲಿ ಮಾನವೀಯತೆ ಇಲ್ಲದಂತಾಗಿದೆ ಹಿರಿಯರ ನಿರ್ಲಕ್ಷತ್ಯೆ ಗ್ರಾಮೀಣರ ಆರೋಗ್ಯದ ಬಗ್ಗೆ ಉದಾಸೀನ ಇಲ್ಲಿ ಎದ್ದು ಕಾಣುತ್ತಿದೆ ಎಂದ ಅವರು ಕ್ಷೇತ್ರದಲ್ಲಿ ಸರ್ಕಾರದವತಿಯಿಂದ ನೀಡುವ ಮೂಲಭೂತ ಸೌಕರ್ಯಗಳನ್ನು ಓಟು ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು. ಪ್ರತಿ ಸಂತೇಯಲ್ಲೂ ಆರೋಗ್ಯ ಕೇಂದ್ರತಾಲೂಕಿನಲ್ಲಿ ನಡೆಯುವಂತ ಪ್ರತಿ ಸಂತೆಯಲ್ಲೂ ಡಾ.ವೆಂಕಟಾಚಲ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿ ಅಲ್ಲಿಗೆ ಬರುವಂತ ಜನರ ಮಧುಮೇಹ,ರಕ್ತದೊತ್ತಡದಂತ ಖಾಯಿಲೆಗಳನ್ನು ಪರಿಕ್ಷಿಸಿ ಅಂತಹ ವ್ಯಕ್ತಿಗಳಿಗೆ ಸಮತೋಲನಾ ಆಹಾರಪದ್ದತಿ ಮತ್ತು ಜೀವನ ಶೈಲಿ ಕುರಿತಾಗಿ…
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಮಹಾನಗರದ ಅಷ್ಟ ದಿಕ್ಕುಗಳಿಗೂ ಸಂಪರ್ಕ ಕಲ್ಪಿಸುವುದೆ ಅಲ್ಲ ಭಾರತದಾದ್ಯಂತ ಇರುವ ಪ್ರಖ್ಯಾತ ನಗರಗಳಿಗೆ ತೆರೆಳಲು ಖಾಸಗಿ ಬಸ್ ಗಳ ಪ್ರದೇಶ ಎಂದಿರುವ ಕಲಾಸಿಪಾಳ್ಯ ಬಸ್ ನಿಲ್ದಾಣದ ಬಸ್ ಟರ್ಮಿನಲ್ ನವನವೀನವಾಗಿ ನಿರ್ಮಾಣ ಗೊಂಡಿದ್ದರು ಇದುವರಿಗೂ ಸಾರ್ವಜನಿಕರ ಸೇವೆಗೆ ಸಿಕ್ಕಿಲ್ಲ.ಕಳೆದ ಆರು ವರ್ಷಗಳ ಹಿಂದೆ ಕಲಾಸಿಪಾಳ್ಯದ ಬಸ್ ನಿಲ್ದಾಣ ನಿರ್ಮಾಣಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು 2016ರ ಆ. 18ರಂದು ಶಂಕುಸ್ಥಾಪನೆ ನೆರವೇರಿಸಿದ್ದರು. 4.13 ಎಕರೆ ವಿಸ್ತೀರ್ಣದಲ್ಲಿ 60 ಕೋಟಿ ರೂ. ವೆಚ್ಚದಲ್ಲಿ ನಿಲ್ದಾಣ ನಿರ್ಮಾಣ ಪೂರ್ಣವಾಗಿದೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ -ಬಿಎಂಟಿಸಿ (Bangalore Metropolitan Transport Corporation -BMTC) ನಿರ್ಮಿಸಿರುವ ಬಹುಕಾಲದಿಂದ ಬಾಕಿ ಉಳಿದಿದ್ದ ಕಲಾಸಿಪಾಳ್ಯ ಬಸ್ ಟರ್ಮಿನಲ್ (Kalasipalya bus terminal) ನಿರ್ಮಾಣ ಯೋಜನೆಯು 2018ರ ಡಿಸೆಂಬರ್‌ನಲ್ಲಿಯೇ ಪೂರ್ಣಗೊಳ್ಳಬೇಕಿತ್ತು. ತಡವಾಗಿ ಕೊನೆಗೂ 4 ವರ್ಷದ ಬಳಿಕ ಸಿದ್ಧವಾಗಿದೆ. ಆದರೆ ಕಳೆದ ಮೂರು ತಿಂಗಳಿಂದ ಅದಕ್ಕೆ ಬೀಗ ಹಾಕಲಾಗಿದೆ. ಇದರಿಂದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಅಂತಾರಾಜ್ಯ…