Author: Srinivas_Murthy

ಶ್ರೀನಿವಾಸಪುರ:ಕೌಟುಂಬಿಕ ಕಲಹದಿಂದ ಬೆಸೆತ್ತ ಗೃಹಣಿಯುಬ್ಬಳು ಕೃಷಿಹೊಂಡದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟಣೆ ತಾಲೂಕಿನ ಕಸಬಾ ಹೋಬಳಿ ಕೊಡಿಚೆರುವು ಗ್ರಾಮದಲ್ಲಿ ಇಂದು ನಡೆದಿದೆ.ಮೃತ ಮಹಿಳೆ ಕೊಡಿಚೆರುವು ಗ್ರಾಮದ ವರಲಕ್ಷ್ಮಿ (35) ಎಂದು ಗುರತಿಸಲಾಗಿದೆ.ಮೃತ ಮಹಿಳೆ ತನ್ನ ಸಹೋದರ ಸಂಬಂದಿಯ ಗೃಹ ಉದ್ಯಮದಮಕ್ಕೆ ಬೆನ್ನುಲುಬಾಗಿ ಇದ್ದಳು.ವರಲಕ್ಷ್ಮಿ ಗ್ರಾಮದಲ್ಲಿ ಅಂಗಡಿ ಇಟ್ಟುಕೊಂಡಿರುವ ತನ್ನ ಪತಿ ರವಿ ಹಾಗು ಮಕ್ಕಳೊಂದಿಗೆ ವಾಸವಾಗಿದ್ದಳು ಪತಿ-ಪತ್ನಿ ನಡಿವೆ ಆಗಾಗ ಸಣ್ಣ ಪುಟ್ಟ ವಿಚಾರಕ್ಕೆ ಜಗಳ ಆಗುತಿತ್ತು ಮಂಗಳವಾರ ತಡ ರಾತ್ರಿ ಪತಿ-ಪತ್ನಿ ನಡುವೆ ಸಣ್ಣ ಮಟ್ಟದಲ್ಲಿ ಜಗಳ ಆಗಿದೆ ತಡರಾತ್ರಿ ಕುಟುಂಬದ ಸದಸ್ಯರು ಕೂಡಿ ಇಬ್ಬರನ್ನು ಸಮಾಧಾನ ಪಡಿಸಿ ಬುದ್ದಿ ಹೇಳಿ ಹೋಗಿದ್ದಾರೆ ಇದಾದ ನಂತರ ಅಂದಾಜು ಮದ್ಯರಾತ್ರಿ ಸಮಯದಲ್ಲಿ ಇದ್ದಕ್ಕಿದ್ದಂತೆ ಸಹೋದರ ಸಂಬಂದಿ ಹಾಗು ಕುಟುಂಬದ ಸದಸ್ಯರಿಗೆ ವರಲಕ್ಷ್ಮಿ ಫೋನ್ ಮಾಡಿ ಅಪ್ಪಯ್ಯ ಮಕ್ಕಳನ್ನು ಚನ್ನಾಗಿ ನೋಡಿಕೊಳ್ರೋ ಎಂದು ಹೇಳಿ ಮೊಬೈಲ್ ಸ್ವೀಚ್ ಆಫ್ ಮಾಡಿದ್ದಾಳೆ ಕೊರೆವ ಚಳಿಯಲ್ಲಿ ಬೆಚ್ಚಗೆ ಮಲಗಿದ್ದ ಕುಟುಂಬದ ಸದಸ್ಯರು ಏಕಾಏಕಿ ಬೆವತು ಹೋಗಿದ್ದಾರೆ…

Read More

ನ್ಯೂಜ್ ಡೆಸ್ಕ್:ಮಹಾತ್ಮ ಗಾಂಧಿ ಗ್ರಾಮಿಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೊಸ ಕಾಮಗಾರಿಗಳನ್ನು ಸೇರಿಸುವಂತೆ ಒತ್ತಾಯಿಸಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಆಂಧ್ರದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಮನವಿ ಸಲ್ಲಿಸಿದ್ದಾರೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಮನೆ ನಿರ್ಮಾಣಕ್ಕೆ ಕೆಲಸದ ದಿನಗಳನ್ನು 90 ದಿನಗಳಿಂದ 100 ದಿನಗಳಿಗೆ ಹೆಚ್ಚಿಸಬೇಕು, ನರೇಗಾ ಯೋಜನೆಯಲ್ಲಿ ಸ್ಮಶಾನ ನಿರ್ಮಾಣ, ಪಂಚಾಯಿತಿ ಕಟ್ಟಡ ನಿರ್ಮಾಣ,ಧೋಬಿಘಾಟ್, ಆರೋಗ್ಯ ಕೇಂದ್ರಗಳ ನಿರ್ಮಾಣ, ಕುಡಿಯುವ ನೀರಿನ ಕಾಮಗಾರಿಗಳ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದರೆ ಗ್ರಾಮೀನ ಜನರಿಗೆ ಉಪಯೋಗವಾಗುತ್ತದೆ ಎಂದು ಪವನ್ ವಿವರಿಸಿದ್ದಾರೆ.

Read More

ನ್ಯೂಜ್ ಡೆಸ್ಕ್: ಹೆತ್ತ ತಾಯಿಯನ್ನು ಮಗನೇ ಕೊಂದಿದ್ದಾನೆ, ಆಂಧ್ರದ ಅನ್ನಮಯ್ಯ ಜಿಲ್ಲೆ ರಾಯಚೂಟಿ ಮಂಡಲ ಪೆದ್ದಮಂಡೆಂ ಎಸ್‌ಐ ಪಿ.ವಿ.ರಮಣ ಮಂಗಳವಾರ ತಿಳಿಸಿರುವ ಮಾಹಿತಿಯಂತೆ, ಸಿ.ಗೊಲ್ಲಪಲ್ಲಿಯಲ್ಲಿ ವಾಸವಿರುವ ಓಬುಳಮ್ಮ (72) ಅವರು ಮಗ ಓಬುಲೇಸುಗೆ ಪೆನ್ಷನ್ ಹಣ ನೀಡದ ವಿಚಾರವಾಗಿ ಈ ತಿಂಗಳ 24 ರಂದು ತಾಯಿ ಮಗನ ನಡುವೆ ಜಗಳ ಆಗಿದೆ ಈ ಸಂದರ್ಭದಲ್ಲಿ ಮಗ ಓಬುಲೇಸು ತನ್ನ ತಾಯಿಯ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ ಇದರಿಂದ ತೀವ್ರವಾಗಿ ಗಾಯಗೊಂಡು ನಿತ್ರಾಣವಾಗಿ ಬಿದ್ದ ಅಕೆಯನ್ನು ರಾಯಚೋಟಿಯಲ್ಲಿನ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರಾದರೂ ಆಕೆಯ ಸ್ಥಿತಿ ಹದಗೆಟ್ಟು ಸೋಮವಾರ ಮಧ್ಯರಾತ್ರಿ ಓಬುಳಮ್ಮ ಮೃತಪಟ್ಟಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಮಗ ಓಬುಲೀಸನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Read More

ನ್ಯೂಜ್ ಡೆಸ್ಕ್:ಚಳಿಗಾಲ ಶುರುವಾಗಿದೆ ಮಂಜು ಬಿಳಲು ಆರಂಭವಾಗಿದೆ. ರೈತಾಪಿ ಜನ ಕೃಷಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಇಂತಹ ವಾತವರಣದಲ್ಲಿ ಮತ್ತೆ ಮಳೆಯ ಮುನ್ಸೂಚನೆ ನೀಡಲಾಗಿದೆ. ಮುಂದಿನ 48 ಗಂಟೆಗಳ ಕಾಲ ಮಳೆಯಾಗುವ ಬಗ್ಗೆ ಹೇಳಲಾಗಿದೆ. ನೈರುತ್ಯ ಬಂಗಾಳ ಕೊಲ್ಲಿಯಲ್ಲಿ ಹವಾಮಾನ ವೈಪರೀತ್ಯ ಉಂಟಾಗುವ ಪರಿಣಾಮ ಚಂಡಮಾರುತ ಸೃಷ್ಟಿಯಾಗಿ ಮಳೆಯ ಸಂಭವ ಇದೆ ಎನ್ನುವ ಮಾತು ತಜ್ನರಿಂದ ಹೇಳಲಾಗಿದೆ..ಈ ಬಾರಿ ಹೆಚ್ಚೇ ಎನ್ನಬಹುದಾದಷ್ಟು ಮಳೆ ಸುರುದಿದೆ ಬಿಡುವು ಕೊಡದೇ ಸತತ ಮಳೆಯಿಂದ ಬೆಳೆಗಳು ನೆಲೆ ಕಚ್ಚಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ರೈತರು ಸಾಕಷ್ಟು ಕಷ್ಟ-ನಷ್ಟ ಅನುಭವಿಸಿದ್ದಾರೆ. ಇನ್ನೇನು ಮಳೆಗಾಲ ಮುಗಿದು ಚಳಿಗಾಲ ಆರಂಭವಾಗಿದೆ ಎನ್ನುವ ಹೊತ್ತಿನಲ್ಲಿ ಮತ್ತೆ ಮಳೆರಾಯ ಅಬ್ಬರಿಸಲು ಸಜ್ಜಾಗಿದ್ದಾನೆ. ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆಯಾಗಲಿದೆಯಂತೆ.ನೈರುತ್ಯ ಬಂಗಾಳ ಕೊಲ್ಲಿಯಲ್ಲಿ ಹವಾಮಾನ ವೈಪರೀತ್ಯ ಶುರುವಾಗಿದೆ.ಇತ್ತ ಹಿಂದೂ ಮಹಾಸಾಗರದಲ್ಲಿ ಚಂಡಮಾರುತ ಉಂಟಾಗಿ ಕರ್ನಾಟಕ ಕೇರಳ ತಮಿಳುನಾಡು ಹಾಗೂ ಶ್ರೀಲಂಕಾ ಕರಾವಳಿ ಮಾರ್ಗವಾಗಿ ಸಂಚಾರ ಮಾಡಲಿದೆ. ಹೀಗಾಗಿ ದಕ್ಷಿಣ ಭಾರತದಲ್ಲಿ ಇಂದು…

Read More

ಶ್ರೀನಿವಾಸಪುರ :ಶ್ರೀನಿವಾಸಪುರ ಕಸಬಾ ಸೊಸೈಟಿಯ ಅಧ್ಯಕ್ಷ ಗಾದಿಗೆ ಇಬ್ಬರು ಕಾಂಗ್ರೆಸ್  ನಿರ್ದೇಶಕರ ನಡುವೆ ಚುನಾವಣೆ ನಡೆದಂತ ಸ್ವಾರಸ್ಯಕರ ಘಟನೆ ನಡೆದಿದೆ.  ತಾಲ್ಲೂಕಿನ ಸಹಕಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರ ನಡುವೆ ಒಮ್ಮತ ಇಲ್ಲವಾ ಎಂಬ ಅನುಮಾನ ಸಾರ್ವಜನಿಕರಲ್ಲಿ ಹುಟ್ಟುಹಾಕಿದೆ . ತಾಲ್ಲೂಕು ಸಹಕಾರ ಕ್ಷೇತ್ರದಲ್ಲಿ ಮೊದಲಿನಿಂದಲೂ ಇಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಅನುಯಾಯಿಗಳದೆ ಪಾರುಪತ್ಯ ಯಾವುದೇ ಸಹಕಾರ ಸಂಘ ಇರಲಿ ಒಮ್ಮೆ ಹೈಕಮಾಂಡ್ ಸಮ್ಮುಖದಲ್ಲಿ ನಿರ್ಧರವಾದರೆ ಮುಗಿಯಿತು ಒಮ್ಮತದ ಅಭ್ಯರ್ಥಿ ಕಣದಲ್ಲಿ ಸ್ಪರ್ಧಿಸಿ ಅವಿರೋಧವಾಗಿ ಆಯ್ಕೆಯಾಗುವುದು ಇಲ್ಲಿ ಬಹುವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ.ಆದರೆ  ಕಸಬಾ ಸೊಸೈಟಿ ಅಧ್ಯಕ್ಷ ಚುನಾವಣೆಯಲ್ಲಿ ಹಳೆಯ ಸಂಪ್ರದಾಯ ಮೂಲೆಗುಂಪಾಗಿದೆ!  ಕಸಬಾ ಸೊಸೈಟಿ ಅಧ್ಯಕ್ಷರಾಗಿದ್ದ ಅಲಂಬಗಿರಿಅಯ್ಯಪ್ಪ ನಿಧನರಾದ  ಹಿನ್ನೆಲೆಯಲ್ಲಿ  ಅವರ ಸ್ಥಾನಕ್ಕೆ ನಡೆದ ಅಧ್ಯಕ್ಷಗಾದಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಇಬ್ಬರು ನಿರ್ದೇಶಕರು ಉಮೇದುವಾರಿಕೆ ಸಲ್ಲಿಸಿ ಚುನಾವಣೆ ಎದುರಿಸಿದ್ದಾರೆ ಇದರ ಪರಿಣಾಮ ಹಿರಿಯ ಸಹಕಾರಿ ಧುರೀಣರಾದ ಶೆಟ್ಟಿಹಳ್ಳಿರಾಮಚಂದ್ರಪ್ಪ ತಮ್ಮ ಪ್ರತಿಸ್ಪರ್ಧಿ ಯಾಗಿದ್ದ ಯಲವಕುಂಟೆ ಬೈರಾರೆಡ್ಡಿ ವಿರುದ್ಧ 5 ಮತಗಳ…

Read More

ಶ್ರೀನಿವಾಸಪುರ:ಶ್ರೀನಿವಾಸಪುರ ತಾಲ್ಲೂಕು ಜೆ ತಿಮ್ಮಸಂದ್ರ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿದ್ದ  ನಾಗೇಶ್ ರೆಡ್ಡಿ ರಾಜಿನಾಮೆ ನೀಡಿ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಡೆದು ಕಲ್ಲೂರು ಗ್ರಾಮಪಂಚಾಯಿತಿ  ಸದಸ್ಯ ಶಂಕರರೆಡ್ಡಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.  ಜೆ ತಿಮ್ಮಸಂದ್ರ ಗ್ರಾಮ ಪಂಚಾಯತಿಯಲ್ಲಿ ಒಟ್ಟು 17 ಸದಸ್ಯರಿದ್ದು ಜೆಡಿಎಸ್ 13 ಹಾಗು ಕಾಂಗ್ರೇಸ್ 4 ಸದಸ್ಯರಿದ್ದು ಜೆಡಿಎಸ್  ಅಭ್ಯರ್ಥಿಯಾಗಿ ಬೆಂಗಳೂರಿನ ಉದ್ಯಮಿ ಶಂಕರರೆಡ್ಡಿ ಜೆಡಿಎಸ್ ಹಾಗು ಕಟಾರಮುದ್ದಲಪಲ್ಲಿ ಸದಸ್ಯೆ ಬಂಡಾಯ ಜೆಡಿಎಸ್ ಅಭ್ಯರ್ಥಿಯಾಗಿ ರತ್ನಮ್ಮ ನಾಮಪತ್ರ ಸಲ್ಲಿಸಿದ್ದರು.ಕೊನೆಯ ಹಂತದವರಿಗೂ ಇಬ್ಬರಲ್ಲಿ ಯಾರಬ್ಬರೂ ನಾಮಪತ್ರ  ಹಿಂಪಡೆಯದ ಹಿನ್ನೆಲೆಯಲ್ಲಿ ಅಧಿಕಾರಿ ರಾಜೇಶ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಿಸಿದರು ನಂತರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ  ಗೌಪ್ಯ ಮತದಾನ ನಡೆಸಲಾಗಿ ಜೆಡಿಎಸ್ ಬಂಡಾಯ ಅಭ್ಯರ್ಥಿ ರತ್ನಮ್ಮ 6 ಮತಗಳನ್ನು ಜೆಡಿಎಸ್  ಶಂಕರ್ ರೆಡ್ಡಿ  10 ಮತಗಳನ್ನು ಪಡೆದು ಜಯಶೀಲರಾಗಿರುತ್ತಾರೆ.ಅಭಿವೃದ್ಧಿಗೆ ಆದ್ಯತೆ  ನೂತನವಾಗಿ ಅಧ್ಯಕ್ಷರಾದ ಶಂಕರ್ ರೆಡ್ಡಿ ಮಾತನಾಡಿ ಪಂಚಾಯಿತಿ ಅಭಿವೃದ್ಧಿಗೆ  ಪಕ್ಷಾತೀತವಾಗಿ ಕಾರ್ಯನಿರ್ವಹಿಸುತ್ತೆನೆ.ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳಿಗೆ ಪ್ರಥಮ ಆದ್ಯತೆ ನೀಡುವ ಮೂಲಕ…

Read More

ಚಿಂತಾಮಣಿ:ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಸ್ಕೂಟರ್ ಸವಾರನೊಬ್ಬ ಸಾವನಪ್ಪಿರುವ ಘಟನೆ ನಡೆದಿದೆ ಎಂದು ಆಂಧ್ರದ ಪಿಟಿಎಂ, ಎಸ್ ಐ ನರಸಿಂಹ ತಿಳಿಸಿದ್ದಾರೆ. ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಪಿಟಿಎಂ ಮಂಡಲ ವ್ಯಾಪ್ತಿಯ ಮಲ್ಲೇಲ ಗ್ರಾಮದ ಚೆನ್ನರಾಯುನಿಪಲ್ಲಿ ಎಂಬಲ್ಲಿ ಟ್ರ್ಯಾಕ್ಟರ್ ಅತಿವೇಗ ಹಾಗು ಅಜಾಗ್ರತೆಯ ಚಾಲನೆ ಮಾಡಿದ ಪರಿಣಾಮ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಕರ್ನಾಟಕ ರಾಜ್ಯದ ಚಿಂತಾಮಣಿ ತಾಲೂಕು ಚಿಲಕಲನೇರ್ಪು ಗ್ರಾಮದ ರೈತ ರಾಮಾಂಜಿ (48) ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

Read More

ಶ್ರೀನಿವಾಸಪುರ:ಸರ್ಕಾರಿ ಕಾರ್ಯಕ್ರಮಗಳಿಗೆ ಬಾರದೆ ನಿರ್ಲಕ್ಷ್ಯ ಧೋರಣೆ ತೊರುವಂತ ಸರ್ಕಾರದ ಅಧಿಕಾರಿಗಳು ಯಾರೆ ಇರಲಿ ಅಂತಹವರು ತಾಲೂಕು ಬಿಟ್ಟು ತೊಲಗಿ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ತೀವ್ರಧಾಟಿಯಲ್ಲಿ ಎಚ್ಚರಿಕೆ ನೀಡಿದರು ಅವರು ಕನಕ ಸಮುಧಾಯ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಮತ್ತು ತಾಲೂಕು ಕುರುಬ ಸಂಘದಿಂದ ಆಯೋಜಿಸಿದ್ದ ಕನಕದಾಸರ 537 ನೇ ಜಯಂತೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕನಕದಾಸರು ಮನುಕುಲದ ಹಿತಕ್ಕಾಗಿ ಜೀವನವನ್ನೆ ಮುಡುಪಾಗಿಟ್ಟವರು ಸಂತ ಶ್ರೇಷ್ಠರಲ್ಲಿ ಒಬ್ಬರಾದ ಕನಕದಾಸರ ಬದುಕು ಇಂದಿನ ಸಮಾಜಕ್ಕೆ ಆದರ್ಷ ಇಂತಹ ಸಂತನ ಕಾರ್ಯಕ್ರಮ ಆಯೋಜಿದ್ದರೆ ಕಾರ್ಯಕ್ರಮದಿಂದ ದೂರ ಉಳಿಯುವಂತ ಸರ್ಕಾರಿ ಅಧಿಕಾರಿಗಳ ಧೋರಣೆಯಿಂದ ಕಾರ್ಯಕ್ರಮದಲ್ಲಿ ಜನರೆ ಇಲ್ಲದಂತ ಪರಿಸ್ಥಿತಿ ಎರ್ಪಟ್ಟಿದೆ ಎಂದ ಅವರು ಅಧಿಕಾರಿಗಳದು ಅತಿಯಾಯಿತು ನಿಮಗೆ ತಾಲೂಕಿನ ಜನರು ಬೇಕಿಲ್ಲ ಅನ್ನುವುದಾದರೆ ನೀವು ತಾಲೂಕಿನಲ್ಲಿ ಇರುವುದು ಬೇಡ ಎಂದು ಏರು ಧ್ವನಿಯಲ್ಲಿ ಹೇಳಿದರು.ಕನಕದಾಸರ ಜಯಂತಿ ಕಾರ್ಯಕ್ರಮ ಖಾಸಗಿ ಕಾರ್ಯಕ್ರಮ ಅಲ್ಲ ಸರ್ಕಾರದ ಕಾರ್ಯಕ್ರಮ ಇಲ್ಲಿ ಸರ್ಕಾರಿ ಶೀಷ್ಟಾಚಾರದಂತೆ ಎಲ್ಲಾ ಇಲಾಖೆ ಅಧಿಕಾರಿಗಳು…

Read More

ಶ್ರೀನಿವಾಸಪುರ: ತಾಲೂಕು ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮತ್ತು ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶಿಕ್ಷಕ ಭೈರೇಗೌಡ ಚುನಾಯಿತರಾಗಿದ್ದಾರೆ.ತಮ್ಮ ಸಮೀಪದ ಪ್ರತಿಸ್ಪರ್ಧಿಗಿಂತ 13 ಮತಗಳ ಅಂತರದಿಂದ ಚುನಾಯಿತರಾಗಿದ್ದು, ಖಜಾಂಚಿಯಾಗಿ ಕೈಗಾರಿಕಾ ತರಬೇತಿ ಇಲಾಖೆಯಎಂ.ಎಂ.ವೆಂಕಟೇಶ್ ಹಾಗು ರಾಜ್ಯ ಪರಿಷತ್ ಸ್ಥಾನಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೆಂಕಟರೆಡ್ಡಿ ಅವಿರೋಧವಾಗಿ ಅಯ್ಕೆಯಾಗಿದ್ದಾರೆ.ಸರಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಜರುಗಿದ ಚುನಾವಣೆಯಲ್ಲಿ ಶಿಕ್ಷಕ ಭೈರೇಗೌಡ ಚುನಾಯಿತರಾದ ಬಗ್ಗೆ ಚುನಾವಣಾಧಿಕಾರಿ ತಿಪ್ಪಣ್ಣ ಘೋಷಣೆ ಮಾಡುತ್ತಿದ್ದಂತೆ ಭೈರೇಗೌಡರ ಆಪ್ತರು ಸಹದ್ಯೋಗಿಗಳು ನೌಕರರ ಭವನದ ಮುಂಭಾಗದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಭೈರೇಗೌಡ ಮಾತನಾಡಿ ನಾನು ಚುನಾವಣೆ ಕಣದಲ್ಲೆ ಉಳಿಯಬಾರದು ಎಂದು ಷಡ್ಯಂತರ ರೂಪಿಸಿದ್ದರು ಅದನೆಲ್ಲ ಬೇಧಿಸಿ ಭರ್ಜರಿ ಜಯಬೇರಿ ಬಾರಿಸಿದೆ ನಂತರ ಈಗ ಅಧ್ಯಕ್ಷ ಸ್ಥಾನವನ್ನು ಸ್ನೇಹಿತರು ಹಿತೈಶಿಗಳು ಸಹದ್ಯೋಗಿ ಮಿತ್ರರ ಸಹಕಾರದಿಂದ ಗೆದ್ದಿರುವುದಾಗಿ ಹೇಳಿದ ಅವರು ಅಧ್ಯಕ್ಷ ಸ್ಥಾನಕ್ಕೆ ಗೌರವ ಬರುವ ನಿಟ್ಟಿನಲ್ಲಿ…

Read More

ಶ್ರೀನಿವಾಸಪುರ:ಸಾಂಪ್ರದಾಯಿಕ ಹಿಂದೂ ಪಂಚಾಂಗದ ಪ್ರಕಾರ ಕಾರ್ತಿಕ ಪೂರ್ಣಿಮೆಯು ಅತ್ಯಂತ ಶ್ರೇಷ್ಠವಾದ ದಿನವಾಗಿ ಪರಿಗಣಿಸಿ ಮಾಹಾ ಕಾರ್ತಿಕ ಎಂದು ಕರೆಯಲಾಗುವುದು.ಧಾರ್ಮಿಕವಾಗಿ ಅತ್ಯಂತ ಪವಿತ್ರ ಹಾಗೂ ಶ್ರೇಷ್ಠತೆಯನ್ನು ಪಡೆದುಕೊಂಡಿದ್ದು ವಿಶೇಷವಾಗಿ ಶಿವನಿಗೆ ಮೀಸಲಾದ ದಿನ ಎಂದು ಹೇಳಲಾಗುತ್ತದೆ ಈ ಹಿನ್ನಲೆಯಲ್ಲಿ ಶ್ರೀನಿವಾಸಪುರ ಪಟ್ಟಣದ ಶ್ರೀ ಲಕ್ಷ್ಮೀನೃಸಿಂಹ ಸ್ವಾಮಿ ಆವರಣದಲ್ಲಿ ಭಕ್ತಸಮೂಹ ಗಿರಿಜಾ ಕಲ್ಯಾಣ ಮಹೋತ್ಸವವನ್ನು ಆಯೋಜಿಸಿದ್ದರು. ದೇವಾಲಯದ ಆವರಣದಲ್ಲಿ ಅಲಂಕರಿಸಿ ಸ್ಥಾಪಿಸಿದ್ದ ವೇದಿಕೆಯಲ್ಲಿ ಶ್ರೀನಿಲಕಂಟೇಶ್ವರ ಹಾಗೂ ಪಾರ್ವತಿದೇವಿ ಉತ್ಸವಮೂರ್ತಿಗಳನ್ನು ವಿಧಿವಿಧಾನಗಳಂತೆ ಅರ್ಚಕರು ಪ್ರತಿಷ್ಟಾಪಿಸಿದ್ದು ದೇವಾಲಯದಲ್ಲಿ ಕಲ್ಯಾಣ ಸಡಗರ ಕಳೆಗಟ್ಟಿತ್ತು ,ಮಂಗಳ ವಾದ್ಯಗೋಷ್ಠಿ, ಸಪ್ತ ನಾದಸ್ವರದೊಂದಿಗೆ ಮೆರುಗು ಹೆಚ್ಚಿಸಿತು.ಕಲ್ಯಾಣೋತ್ಸವದ ವೈಭೋಗವನ್ನು ಕಣ್ತುಂಬಿಕೊಳ್ಳಲು ದೊಡ್ಡ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು, ದೇವಾಲಯ ವಿದ್ಯುತ್‌ ದೀಪಾಲಂಕೃತಗೊಂಡು ಕಂಗೊಳಿಸುತಿತ್ತು. ಕಲ್ಯಾಣೋತ್ಸವ ನಿರ್ವಿಘ್ನವಾಗಿ ಸಾಗಲು ಪ್ರಾತಃಕಾಲ ಮಹಾಗಣಪತಿ ಪೂಜೆ ಸಲ್ಲಿಸಲಯಿತು.ಬೆಳಗ್ಗೆ ಮೂಲದೇವರ ಪ್ರಾರ್ಥನೆ ನೆರವೇರಿಸಲಾಯಿತು ನಂತರ ದೇವಾಲಯದ ಆವರಣದಲ್ಲಿ ಶ್ರೀಗಣಪತಿ,ನವಗ್ರಹ ಶ್ರೀಲಕ್ಷ್ಮೀನೃಸಿಂಹ ಹೋಮ ಹವನ ನೇರವೇರಿಸಲಾಯಿತು ನಂತರ ಶ್ರೀ ಸತ್ಯನಾರಯಣಸ್ವಾಮಿ ವ್ರತ ನಡೆದ ನಂತರ ಸಂಜೆ ಶುಭ ಮುಹೂರ್ತದಲ್ಲಿ ಜೊವಲರಿ ಮುರಳಿಕೃಷ್ಣ ಅವರ…

Read More