ಶ್ರೀನಿವಾಸಪುರ:ಬೆಂಗಳೂರಿನ ಜಿಕೆವಿಕೆಯಲ್ಲಿ ಇಂದಿನಿಂದ ಆರಂಭವಾದ ಕೃಷಿ ಮೇಳಕ್ಕೆ ಶ್ರೀನಿವಾಸಪುರದ ರೈತರು ತೆರಳಲು ದಿಗವಪಲ್ಲಿ ರಾಜಾರೆಡ್ದಿ,ನಿಲಟೂರುಚಂದ್ರಶೇಖರೆಡ್ದಿ ಹಾಗು ಪ್ರಶಾಂತರೆಡ್ದಿ ನೇತೃತ್ವದಲ್ಲಿ RCS ಮಂಡಿ ವತಿಯಿಂದ ಬಸ್ ವ್ಯವಸ್ಥೆ ಮಾಡಲಾಗಿತ್ತು.ನೂರಕ್ಕೂ ಹೆಚ್ಚು ಜನ ರೈತರನ್ನು ಶ್ರೀನಿವಾಸಪುರದಿಂದ ಎರಡು KSRTC ಬಸ್ಸುಗಳಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆರಂಬವಾದ ಕೃಷಿ ಮೇಳ-2024 ಕ್ಕೆ ಕರೆದುಕೊಂಡು ಹೋಗಿದ್ದರು.ಕೃಷಿ ಮೇಳಕ್ಕೆ ಹೋಗಿದ್ದ ರೈತಾಪಿ ಜನರಿಗೆ ಬೆಳಗಿನ ಉಪಹಾರ ಊಟದ ವ್ಯವಸ್ಥೆ ಮಾಡಿದ್ದ ವ್ಯವಸ್ಥಾಪಕರು ಸಂಜೆ ಚಿಕ್ಕಬಳ್ಳಾಪುರದ ಇಶಾ ಫೌಂಡೇಶ್ ಕರೆದುಕೊಂಡು ಹೋಗಿದ್ದರು.ಕೃಷಿ ಮೇಳ-2024 ಹವಾಮಾನ ಚತುರ ಡಿಜಿಟಲ್ ಕೃಷಿ ಎಂಬ ಘೋಷವಾಕ್ಯದಡಿ ಕೃಷಿ ಮೇಳ ಉದ್ಘಾಟನೆ ಮಾಡಲಾಗಿದ್ದು ಇಂದಿನಿಂದ (ನವೆಂಬರ್ 14) ನವೆಂಬರ್ 17 ರ ತನಕ ನಾಲ್ಕು ದಿನಗಳ ಕಾಲ ನಡೆಯುವಕೃಷಿ ಮೇಳದಲ್ಲಿ 2024ರ ವರ್ಷದಲ್ಲಿ ಕೃಷಿಯಲ್ಲಿ ಸಾಧನೆಗೈದ ಯುವ ರೈತ ಹಾಗೂ ಯುವ ರೈತ ಮಹಿಳೆಯರಿಗೆ ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ.ತಂತ್ರಜ್ಞಾನಗಳ ಪ್ರದರ್ಶನಕೃಷಿ ಡ್ರೋನ್,ರೊಬೊಟ್ ಕೃಷಿ ಯಂತ್ರ,ಮಲ್ಟಿಸ್ಪೆಕ್ಟ್ರಲ್ ಡ್ರೋನ್,ಸ್ವಯಂಚಾಲಿತ ಬೂಮ್…
Author: Srinivas_Murthy
ನ್ಯೂಜ್ ಡೆಸ್ಕ್:ತುಳಸಿ ಗಬ್ಬಾರ್ಡ್ ಸದ್ಯ ವಿಶ್ವಾದ್ಯಂತ ಸೋಷಿಯಲ್ ಮೀಡಿಯಾಗಳಲ್ಲಿ ಹಾಗು ಸರ್ಚ್ ಇಂಜಿನಲ್ಲಿ ಹುಡುಕಲಾಗುತ್ತಿರುವ ಹೆಸರು ಈಕೆ ಅಮೆರಿಕದ ರಾಷ್ಟ್ರೀಯ ಗುಪ್ತಚರ (National Intelligence) ವಿಭಾಗದ ನಿರ್ದೇಶಕಿ ಈಕೆ ಮೂಲ ಭಾರತ ಅಲ್ಲ ಭಾರತದಲ್ಲಿ ಯಾವುದೆ ಸಂಪರ್ಕವೂ ಇಲ್ಲ ಸಂಬಂಧವೂ ಇಲ್ಲ ಆದರೆ ಈಕೆ ಹಿಂದು.ಅಮೆರಿಕದ ಮೊದಲ ಹಿಂದೂ ಸಂಸದೆ ಈ ಮೊದಲು ಡೆಮಾಕ್ರಟಿಕ್ ಪಕ್ಷದಲ್ಲಿದ್ದು 2022 ರಲ್ಲಿ ರಿಪಬ್ಲಿಕನ್ ಪಕ್ಷ ಸೇರಿದ ಇವರು ಡೊನಾಲ್ಡ್ ಟ್ರಂಪ್ ಅವರನ್ನು ಅಧ್ಯಕ್ಷ ಸ್ಪರ್ಧೆಗೆ ಅನುಮೋದಿಸಿದ್ದರು.ಹೇಗೆ ಈಕೆ ಹಿಂದುತುಲಸಿ ಗಬ್ಬಾರ್ಡ್ ಗೂ ಹಿಂದೂ ಧರ್ಮಕ್ಕೂ ಏನು ಸಂಬಂಧ ಎನ್ನುವುದಾದರೆ,43 ವರ್ಷದ ತುಳಸಿ ಅಮೆರಿಕಾದ ಸಮೋವಾ ಎನ್ನುವ ದ್ವೀಪದಲ್ಲಿ ಗಬ್ಬಾರ್ಡ್ ದಂಪತಿಗಳಿಗೆ ನಾಲ್ಕನೇ ಮಗಳಾಗಿ ಜನಿಸಿದರು ಅವರಿಗೆ ಎರಡು ವರ್ಷ ವಯಸ್ಸು ಇದ್ದಾಗ ತುಳಸಿ ಕುಟುಂಬ ಸಮೋವಾದಿಂದ ಹವಾಯಿ ದ್ವೀಪ ಸಮೂಹಕ್ಕೆ ವಲಸೆ ಹೋಗುತ್ತಾರೆ. ಇವರ ತಂದೆ ಕ್ರಿಶ್ಚಿಯನ್ ಆದರೂ,ಹಿಂದೂವಾಗಿ ಮತಾಂತರಗೊಂಡರು. ಅಷ್ಟೇ ಅಲ್ಲದೇ, ತಮ್ಮ ಎಲ್ಲಾ ಮಕ್ಕಳಿಗೂ ಹಿಂದೂ ಹೆಸರುಗಳನ್ನೇ ನಾಮಕರಣ ಮಾಡುತ್ತಾರೆ ಮನೆಯಲ್ಲಿ…
ನ್ಯೂಜ್ ಡೆಸ್ಕ್:ಕಾಶಿ ಸೇರಿದಂತೆ ವಿವಿಧ ಯಾತ್ರೆ ಹೋಗುವ ರಾಜ್ಯದ ಭಕ್ತರಿಗೆ ನೀಡುತ್ತಿರುವ ಸಹಾಯಧನವನ್ನು ಭಾರತದ ಪ್ರಸಿದ್ಧ ಯಾತ್ರ ಸ್ಥಳವಾದ ಜಮ್ಮು ಕಾಶ್ಮೀರದಲ್ಲಿನ ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ನೀಡುವ ರಾಜ್ಯದ ಭಕ್ತರಿಗೆ ತಲಾ 5,000 ರೂನಂತೆ ನೀಡುವುದಾಗಿ ಮುಜರಾಯಿ ಇಲಾಖೆ ಘೋಷಿಸಿದೆ.ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದಂತ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ಈ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.ಸಭೆಯಲ್ಲಿ ಇತರೆ ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು ಸರ್ಕಾರದ ಬಹುಮಹಡಿಗಳ ಕಟ್ಟಡ(ಎಂಎಸ್ ಬಿಲ್ಡಿಂಗ್) ಎದುರು ಇರುವ ಮುಜರಾಯಿ ಇಲಾಖೆಗೆ ಸೇರಿದ 3/4 ಎಕರೆ ಜಾಗದಲ್ಲಿ 10 ಕೋಟಿ ರೂ ವೆಚ್ಚದಲ್ಲಿ ‘ಧಾರ್ಮಿಕ ಸೌಧ’ ನಿರ್ಮಿಸಲು ಇಲಾಖೆ ತೀರ್ಮಾನ,120 ವರ್ಷಗಳಷ್ಟು ಹಳೆಯದಾದ ಮೈಸೂರಿನ ಸಂಸ್ಕೃತ ಮಹಾರಾಜ ಕಾಲೇಜಿನ ಸಂಸ್ಥೆಯ ಸಂಪೂರ್ಣ ಜೀರ್ಣೋದ್ಧಾರಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡುವ ಕೂರಿತು ತೀರ್ಮಾನ ಸೇರಿದಂತೆರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯದ ಆಸ್ತಿಯ ಸರ್ವೇ. ಒತ್ತುವರಿ ತೆರವುಗೊಳಿಸಿ ದಾಖಲೆ ನೀಡುವುದು.ಅವಧಿ ಮುಗಿಯುವ 14 ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ…
ಶ್ರೀನಿವಾಸಪುರ:ಶ್ರೀನಿವಾಸಪುರ-ಮುಳಬಾಗಿಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಮೀಸಗಾನಹಳ್ಳಿ-ಅರಕೇರಿ ಗೇಟ್ ನಡುವೆ ಮ್ಯಾಂಗೋವ್ಯಾಲಿ ಹೋಟೆಲ್ ಬಳಿ ರಸ್ತೆಯಲ್ಲಿ ಕೆಟ್ಟುನಿಂತ ಟಿಪ್ಪರ್ ಲಾರಿಗೆ ಹಿಂದಿನಿಂದ ಕಂಟೈನರ್ ಲಾರಿ ಬಡಿದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಇಂದು ನಡೆದಿದೆ.ಮುಂಜಾನೆ 5 ಗಂಟೆ ಸಮಯದಲ್ಲಿ ನಡೆದಿರುವ ಅಪಘಾತದಲ್ಲಿ ಮೃತ ಪಟ್ಟಿರುವ ವ್ಯಕ್ತಿಯನ್ನು ಶ್ರೀನಿವಾಸಪುರ ತಾಲೂಕಿನ ಶಿವಪುರದ ಬಾಬು(40)ಎಂದು ಗುರುತಿಸಲಾಗಿದೆ.ಮುಂಜಾನೆ ನಸುಕಿನಲ್ಲಿ ಮುಳಬಾಗಿಲು ಕಡೆಯಿಂದ ಬಂದಂತ ಟಿಪ್ಪರ್ ಲಾರಿ ರಸ್ತೆಯಲ್ಲಿ ಕೆಟ್ಟುನಿಂತಿದ್ದು ಅದನ್ನು ರೀಪೇರಿ ಮಾಡಲು ಶಿವಪುರದ ಬಾಬು ಹಾಗು ಸಹಾಯಕ ಮುನೀಂದ್ರಬಾಬು ಲಾರಿ ಇಳಿದು ರಿಪೇರಿ ಮಾಡುತ್ತಿದ್ದರು ಈ ಸಂದರ್ಭದಲ್ಲಿ ಮುಳಬಾಗಿಲು ಕಡೆಯಿಂದ ಅತಿ ವೇಗವಾಗಿ ಬಂದಂತ ಕಂಟೈನರ್ ಲಾರಿ ನಿಂತಿದ್ದ ಟಿಪ್ಪರ್ ಲಾರಿಗೆ ಹಿಂದಿನಿಂದ ಡಿಕ್ಕಿ ಹೋಡದಿದೆ ಹೋಡೆದ ರಭಸಕ್ಕೆ ನಿಂತಿದ್ದ ಟಿಪ್ಪರ್ ಮುಂದೆ ಚಲಿಸಿ ಪಕ್ಕಕ್ಕೆ ಉರಳಿ ಬಿದಿದೆ ರಸ್ತೆಯಲ್ಲಿ ರಿಪೇರಿ ಮಾಡುತ್ತಿದ್ದ ಶಿವಪುರದ ಬಾಬು ತಲೆ ಮೇಲೆ ಲಾರಿ ಹರಿದಿದ್ದು ಸ್ಥಳದಲ್ಲೆ ಬಾಬು ಮೃತ ಪಟ್ಟಿರುತ್ತಾನೆ.ಸಹಾಯಕನಾಗಿದ್ದ ಮುನೀಂದ್ರಬಾಬು ಕಾಲುಗಳ ಮೇಲೆ ಟಿಪ್ಪರ್ ಹರಿದ ಪರಿಣಾಮ ಎರಡು ಕಾಲುಗಳು…
ನ್ಯೂಜ್ ಡೆಸ್ಕ್:ಪ್ರಿಯತಮೆಯೊಂದಿಗೆ ವಿವಾಹಕ್ಕೆ ಅಡ್ಡಿಪಡಿಸಿದ ಎಂದು ಪ್ರಿಯತಮೆಯ ತಂದೆಯ ಮೇಲೆ ಪಾಗಲ್ ಪ್ರೇಮಿ ಗುಂಡು ಹಾರಿಸಿರುವ ಘಟನೆ ನಡೆದಿದೆ.ಇದರಿಂದ ಪ್ರಿಯತಮೆಯ ತಂದೆ ರೇವಂತ್ ಆನಂದ್ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೈದರಾಬಾದ್ ನಗರದಲ್ಲಿ ನಡೆದಿದೆ.ಘಟನೆಯ ವಿವರಕ್ಕೆ ಹೋದರೆ ಹೈದರಾಬಾದ್ ನಗರದ ಅಂಬರ್ ಪೇಟೆಯ ಭಾಗದ ಬಲ್ವಿಂದರ್ ಸಿಂಗ್ (25) ಹಾಗೂ ಸರೂರ್ನಗರ ವ್ಯಾಪ್ತಿಯ ವೆಂಕಟೇಶ್ವರ ಕಾಲೋನಿಯ ಯುವತಿ (23) ಕೆಲ ದಿನಗಳಿಂದ ಪ್ರಿತಿಸುತ್ತಿದ್ದರು.ವಿಷಯ ತಿಳಿದುಕೊಂಡ ಯುವತಿ ತಂದೆ ಇದನ್ನು ವಿರೋಧಿಸಿ ಯುವತಿಯನ್ನು ಅಮೆರಿಕಕ್ಕೆ ಕಳುಹಿಸಿದ್ದಾರೆ ಇದನ್ನು ತಿಳಿದುಕೊಂಡ ಪ್ರೇಮಿ ಬಲ್ವಿಂದರ್ ಸಿಂಗ್ ಬಾಲಕಿಯ ತಂದೆ ರೇವಂತ್ ಆನಂದ್ ಜತೆ ವಾಗ್ವಾದಕ್ಕೆ ಇಳಿದಿದ್ದಾನೆ. ಮಾತಿಗೆ ಮಾತು ಬೆಳದಿದೆ ತನ್ನೊಂದಿಗೆ ತಂದಿದ್ದ ಏರ್ ಗನ್ ನಿಂದ ಯುವತಿ ತಂದೆ ರೇವಂತ್ ಆನಂದ್ ಮೇಲೆ ಗುಂಡು ಹಾರಿಸಿದ್ದಾನೆ.ಗುಂಡು ರೇವಂತ್ ಆನಂದ್ ಕಣ್ಣಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿದ್ದಾರೆ. ರೇವಂತ್ ಆನಂದ್ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.…
ನ್ಯೂಜ್ ಡೆಸ್ಕ್:NVIDIA ವಿಶ್ವದ ಅತ್ಯಂತ ದುಬಾರಿ ಬಹುರಾಷ್ಟ್ರೀಯ ಸಾಫ್ಟ್ ವೇರ್ ಕಂಪನಿಯ CEO ಜೆನ್ಸನ್ ಹುವಾಂಗ್ ವಾಚ್ ಧರಿಸುವುದಿಲ್ಲ. ಅದಕ್ಕೆ ಕಾರಣವನ್ನು ಅವರು ಸಹ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ನಮ್ಮ ಕಂಪನಿಯ ಉದ್ಯೋಗಿಗಳನ್ನು ಕೇಳಿ ನಮ್ಮಲ್ಲಿ ದೀರ್ಘಾವಧಿ ಯೋಜನೆಗಳು ಯಾವುದು ಇರುವುದಿಲ್ಲ. ನಾವೇನಿದ್ದರು ವರ್ತಮಾನದತ್ತ(ongoing process) ದೃಷ್ಟಿ ಹರಿಸುವುದು ನಮ್ಮ ಮುಖ್ಯ ಕಾರ್ಯಸೂಚಿಯಾಗಿದೆ. ಈ ರೀತಿಯಾದ ಆಲೋಚನೆಯೊಂದಿಗೆ ನಾನು ಗಡಿಯಾರವನ್ನು ಧರಿಸುವುದಿಲ್ಲ ಎಂದಿರುತ್ತಾರೆ. ಇದೊಂದು ಸಾಫ್ಟ್‌ವೇರ್ ಮತ್ತು ಫ್ಯಾಬ್ಲೆಸ್ ಕಂಪನಿಯಾಗಿದ್ದು, ಗ್ರಾಫಿಕ್ಸ್ ಪ್ರೊಸೆಸಿಂಗ್ ಯೂನಿಟ್‌ಗಳು (ಜಿಪಿಯುಗಳು), ಡೇಟಾ ಸೈನ್ಸ್ ಮತ್ತು ಹೈ-ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್‌ಗಾಗಿ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್‌ಫೇಸ್‌ಗಳು (ಎಪಿಐಗಳು), ಹಾಗೆಯೇ ಮೊಬೈಲ್ ಕಂಪ್ಯೂಟಿಂಗ್ ಮತ್ತು ಆಟೋಮೋಟಿವ್‌ಗಾಗಿ ಚಿಪ್ ಯೂನಿಟ್‌ಗಳಲ್ಲಿ (ಎಸ್‌ಒಸಿಗಳು) ಸಿಸ್ಟಮ್ ಅನ್ನು ವಿನ್ಯಾಸಗೊಳಿಸುತ್ತದೆ ಮತ್ತು ಪೂರೈಸುತ್ತದೆ.ಎಂದಿರುತ್ತಾರೆ.
ನ್ಯೂಜ್ ಡೆಸ್ಕ್: ಬಂಗಾಳ ಕೊಲ್ಲಿಯಲ್ಲಿ ಹವಾಮಾನ ವೈಪರೀತ್ಯದಿಂದ ವಾಯುಭಾರ ಕುಸಿತವಾಗಿ ಏರ್ಪಡುವ ವಾತವರಣದ ಹಿನ್ನಲೆಯಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಪುದುಚೇರಿಯಲ್ಲಿ ನವೆಂಬರ್ 14ರ ವರೆಗೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ ಕೆಲವೊಂದು ಕಡೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.ಕರ್ನಾಟಕದ ಕೋಲಾರ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹೇಳಿದೆ.ಕರ್ನಾಟಕದ ಕೋಲಾರ ಜಿಲ್ಲೆ ಸೇರಿದಂತೆ ಚಿಕ್ಕಬಳ್ಳಾಪುರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯನಗರ, ಯಾದಗಿರಿಜಿಲ್ಲೆಗಳಲ್ಲಿ ಮಳೆಯಾಗಲಿದೆ.ಆಂಧ್ರದ ಅನ್ನಮಯ್ಯ,ಚಿತ್ತೂರು ಮತ್ತು ತಿರುಪತಿ,ಸೀಮಾ,ನೆಲ್ಲೂರು ಹಾಗು ಕಾಕಿನಾಡ ಜಿಲ್ಲೆಗಳಲ್ಲಿ ನಾಳೆಯಿಂದಲೆ ಮಳೆಯಾಗಲಿದೆ ಎಂದು ತಿಳಿಸಿದೆ. ಮಳೆಯ ಹಿನ್ನೆಲೆಯಲ್ಲಿ ಜನರು ಜಾಗೃತರಾಗಿರಲು ಅಲ್ಲಿನ ಸರ್ಕಾರ ಸೂಚಿಸಿದೆ.ಕರ್ನಾಟಕದಲ್ಲಿ ತಾಪಮಾನ ಕಡಿಮೆಯಾದಂತೆ ಬೆಳಗ್ಗೆ ಮತ್ತು ಸಂಜೆ…
ಚಿಂತಾಮಣಿ: ಚಿಂತಾಮಣಿ-ಶಿಡ್ಲಘಟ್ಟ ರಸ್ತೆಯಲ್ಲಿ ಚಿಂತಾಮಣಿ ನಗರ ವ್ಯಾಪ್ತಿಯ ತಿಮ್ಮಸಂದ್ರದ ವಾರ್ಡ್ ನಂ31 ಮೋರಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.ಸುಮಾರು 45 ರಿಂದ 50 ವರ್ಷ ವಯಸ್ಸುಳ್ಳ ವ್ಯಕ್ತಿಯ ಶವವಾಗಿದ್ದು ಮೊರಿಯಲ್ಲಿ ಕಂಡು ಸ್ಥಳೀಯರು ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ಮುಟ್ಟಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಶವವನ್ನು ಚಿಂತಾಮಣಿ ನಗರದ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಿದ್ದು.ಮೃತ ವ್ಯಕ್ತಿ ವಿಷ ಕುಡಿದು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದ್ದು ಪೊಲೀಸರ ತನಿಖೆಯಿಂದ ಸತ್ಯಾಸತ್ಯೆ ಹೊರಬರಬೇಕಿದೆ.
ಚಿಂತಾಮಣಿ: ಕನ್ನಡ ಭಾಷೆ ಜೀವನದ ಭಾಷೆಯಾಗಬೇಕು ಇದಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಸದಾ ನೆರವಾಗುತ್ತದೆ ಗಡಿಭಾಗದ ಶಾಲೆಗಳಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸಿ ಮಕ್ಕಳಲ್ಲಿ ಮತ್ತು ಜನರಲ್ಲಿ ಕನ್ನಡ ಭಾಷೆಯ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಕಸಾಪ ಮಾಡುತ್ತಿದೆ ಎಂದು ಚಿಂತಾಮಣಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ವಿ. ಶ್ರೀನಿವಾಸನ್ ಹೇಳಿದರು.ಅವರು ಗಂಜಿಗುಂಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಚಿಂತಾಮಣಿ ಗೆಳೆಯರ ಬಳಗದ ವತಿಯಿಂದ ಪ್ರತಿ ವರ್ಷದಂತೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಭವಿಷ್ಯಕ್ಕೆ ನೆರವು ನೀಡುವ ನಿಟ್ಟಿನಲ್ಲಿ ನೋಟ್ ಪುಸ್ತಕ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿದರು.ಎಲ್ಲಾ ಭಾಷೆಗಳ ಬಗ್ಗೆ ಗೌರವ ಇರಲಿ ಆದರೆ ಬದುಕಿನ ಭಾಷೆ ಕನ್ನಡವನ್ನು ಪ್ರೀತಿಸಿ ಗೌರವಿಸಿ ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಭಾರಿ ಮುಖ್ಯಶಿಕ್ಷಕಿ ವಿ.ವೆಂಕಟರತ್ನಮ್ಮ ಮಾತನಾಡಿ ಮಕ್ಕಳಲ್ಲಿನ ಪ್ರತಿಭೆಯನ್ನು ಹೊರತೆಗೆಯಲು ಇದು ಉತ್ತಮವಾದ ಕಾರ್ಯಕ್ರಮವಾಗಿದೆ. ಇಂತಹ ಕಾರ್ಯಕ್ರಮಗಳನ್ನು ಗಡಿಭಾಗದಲ್ಲಿ ಆಯೋಜನೆ ಮಾಡುತ್ತಿರುವ ಚಿಂತಾಮಣಿ ಗೆಳೆಯರ ಬಳಗದ ಎಲ್ಲರಿಗೂ ಅಭಿನಂದನೆಗಳನ್ನು ಹೇಳಿದರು.ಮಾಧ್ಯಮ ಪ್ರತಿನಿಧಿ…
ನ್ಯೂಜ್ ಡೆಸ್ಕ್:ಕ್ಷಮಿಸಿ ಅಪ್ಪ ಅಮ್ಮನನ್ನು ಕೊಂದು ಬಿಟ್ಟೆ ! ಅಪ್ಪನೊಂದಿಗೆ ಒರ್ವ ಮಗ ಹೀಗೆಂದು ಹೇಳಿದಾಗ ಯಾವ ತಂದೆ ಏನು ಮಾಡಲು ಸಾಧ್ಯ ವಿದೇಶಕ್ಕೆ ಹೋಗುವುನಿದ್ದ ಮಗನಿಗೆ ಬುದ್ಧಿ ಹೇಳಿದ ತಾಯಿಗೆ ಚಾಕು ಹಾಕಿದ ದುರುಳನ ಕಥೆಯಿದು.ದೆಹಲಿಯ ಆಗ್ನೇಯ ಭಾಗಾದ ಬದರ್‌ಪುರದಲ್ಲಿ 50 ವರ್ಷದ ಮಹಿಳೆಯನ್ನು ಆಕೆಯ ಮಗ ಚಾಕುವಿನಿಂದ ಇರಿದು ಕೊಂದಿದ್ದಾನೆ ಈ ದುಷ್ಕೃತ್ಯ ಆತಂಕಕಾರಿಯಾಗಿದ್ದು ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಅಕೆಯ ಗಂಡ ಆಸ್ಪತ್ರೆ ಸೇರಿಸಿದರು ಆಕೆ ಉಳಿಯಲಿಲ್ಲ.ಆಸ್ಪತ್ರೆ ಸಿಬ್ಬಂದಿ ಪರಿಸ್ಥಿತಿಯನ್ನು ಗಮನಿಸಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಅಲ್ಲಿಗೆ ಬಂದ ಪೊಲೀಸ್ ತಂಡ ಪ್ರಾಥಮಿಕ ಮಾಹಿತಿ ಪಡೆದು ಘಟನೆ ನಡೆದ ಜೈತ್ ಪುರಕ್ಕೆ ತೆರಳಿದ್ದಾರೆ ಅಲ್ಲಿ ಪರಿಸ್ಥಿತಿ ನೋಡಿದ ಪೊಲೀಸರಿಗೆ ಅಚ್ಚರಿಯ ವಿಷಯಗಳು ಬೆಳಕಿಗೆ ಬಂದಿವೆ. 31 ವರ್ಷದ ಕೃಷ್ಣಕಾಂತ್ ತನ್ನ ತಾಯಿಯನ್ನು ಚಾಕುವಿನಿಂದ ಹಲವಾರು ಬಾರಿ ಇರಿದು ಕೊಂದಿದ್ದಾನೆ ನಂತರ ತಂದೆ ಸುರ್ಜಿತ್ ಗೆ ಫೋನ್ ಮಾಡಿ ಮನೆಗೆ ಬರುವಂತೆ ಹೇಳಿದ್ದಾನೆ, ತಂದೆ ಬಂದಾಗ ಕೃಷ್ಣಕಾಂತ್ ಕ್ಷಮಿಸಿ ಅಪ್ಪಾ…