ಶ್ರೀನಿವಾಸಪುರ:ಶ್ರೀನಿವಾಸಪುರ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದ ಶಿವಾಲಯಗಳಲ್ಲಿ ಶಿವರಾತ್ರಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು.ಮಹಾಶಿವರಾತ್ರಿ ಅಂಗವಾಗಿ ತಾಲೂಕಿನ ಶಿವನ ದೇವಾಲಯಗಳಲ್ಲಿ ಇಂದು ವಿಶೇಷ ಪೂಜೆ ಹೋಮಗಳು ರುದ್ರಪಾರಾಯಣ,ಶಿವನಾಮಸ್ತುತಿ ಸೇರಿದಂತೆ ವಿವಿಧ ರೀತಿಯ ಪೂಜಾ ಕೈಂಕರ್ಯಗಳು ನೆರವೇರಿತು.ಭಕ್ತರು ಸರದಿ ಸಾಲಿನಲ್ಲಿ ನಿಂತು ಶಿವನ ದರ್ಶನ ಪಡೆದರು. ಪಟ್ಟಣದ ಶ್ರೀ ಚಂದ್ರಮೌಳೇಶ್ವರ ದೇವಾಲಯದಲ್ಲಿ ಶಿವನಿಗೆ ರುದ್ರಾಭಿಷೇಕ ಆಯೋಜಿಸಲಾಗಿತ್ತು. ಕಲ್ಲೂರಿನ ಶ್ರೀ ಸಹಮಾನೇಶ್ವರ ದೇವಾಲಯದಲ್ಲಿನ ವಿಶೇಷ ಶಿವಲಿಂಗಕ್ಕೆ ಅಭಿಷೇಕ ಪೂಜೆ ಮಾಡಿದ್ದರು.ಪಟ್ಟಣದ ಶ್ರೀನಗರೇಶ್ವರ ದೇವಾಲದಲ್ಲಿ ರುದ್ರಾಭಿಷೇಕ ಯಾಮದ ಪೂಜೆ ಆಯೋಜಿಸಿದ್ದರು.ಯಲ್ದೂರಿನ ಶ್ರೀ ಶಂಕರನಾರಯಣ ದೇವಾಲಯದಲ್ಲಿ ಹಾಗು ರಾಯಲ್ಪಾಡು ಶ್ರೀ ಕಾಶಿವಿಶ್ವನಾಥ ದೇವಾಲಯಗಳಲ್ಲಿ ಶಿವರಾತ್ರಿ ಸಹಸ್ರ ನಾಮಾವಳಿಗಳೊಂದಿಗೆ ಜಲಾಭಿಷೇಕ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕಗಳನ್ನು ನೆರವೇರಿಸಿ ವಿಶೇಷ ಪೂಜೆ ನಡೆಸಲಾಯಿತು.ಶಿವನಿಗೆ ಇಷ್ಟವಾದ ಬಿಲ್ವಪತ್ರೆ, ತುಂಬೆ ಹೂವು ಸಂಗ್ರಹಿಸಿ ಶಿವನ ಆರಾಧನೆಯಲ್ಲಿ ತೊಡಗಿದ್ದರು.ನಂದಗೋಕುಲ ಅಶ್ರಮದಲ್ಲಿ ರುದ್ರ ಹೋಮಪುಂಗನೂರು ರಸ್ತೆಯ ಆರ್.ತಿಮ್ಮಸಂದ್ರದ ಬಳಿ ಇರುವಂತ ನಂದಗೋಕುಲ ಅಶ್ರಮದಲ್ಲಿ ಶ್ರೀ ಸುಧೀರಾನಂದಗಿರಿ ಸ್ವಾಮಿ ನೇತೃತ್ವದಲ್ಲಿ ಶ್ರೀಜಗದಾಂಬ ಸಮೇತ ಶ್ರೀಜಗನಾಥ ಮಹಾದೇವನಿಗೆ ರುದ್ರಾಭಿಷೇಕ ಹಾಗು ರುದ್ರ…
Author: user_author
ಶ್ರೀನಿವಾಸಪುರದಲ್ಲಿ ಕೈಗಾರಿಕೆ ಸ್ಥಾಪನೆಗೆಅನುಮತಿ ನೀಡಿದ್ದು ಕಾಂಗ್ರೆಸ್ ಸರ್ಕಾರಅಡ್ಡಿಪಡಿಸುತ್ತಿರುವುದು ಕಾಂಗ್ರೆಸ್ ಮುಖಂಡರೆ ಶ್ರೀನಿವಾಸಪುರ:ಅಂದು ರೈಲ್ವೆ ಕೋಚ್ ಫ್ಯಾಕ್ಟರಿ ಬೇಕು ಎಂದು ಮುಂದೆ ನಿಂತು ಓಡಾಡಿದವರು ಇಂದು ಯಾಕೆ ಶ್ರೀನಿವಾಸಪುರದಲ್ಲಿ ಸ್ಥಾಪನೆಯಾಗುವ ಕೈಗಾರಿಕ ವಲಯಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಬೇಡ ಎನ್ನಲು ಇವರು ಯಾರು ಎಂದು ಸೌಹಾರ್ದ ಸ್ವಾಭಿಮಾನಿ ವೇದಿಕೆ ಸಂಘಟನೆ ಹಾಗು ಕಸ್ತೂರಿ ಜನಪರ ವೇದಿಕೆ ಮುಖಂಡರು ಸುದ್ಧಿಗೊಷ್ಟಿ ನಡೆಸಿ ಯದರೂರಿನಲ್ಲಿ ಕೈಗಾರಿಕ ವಲಯ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವವರ ವಿರುದ್ದ ಹರಿಹಾಯ್ದರು.ಸೌಹಾರ್ದ ಸ್ವಾಭಿಮಾನಿ ವೇದಿಕೆ ಮುಖಂಡ ಸಾಧಿಕ್ ಅಹ್ಮದ್ ಮಾತನಾಡಿ 2018 ರಲ್ಲಿ ಚುನಾವಣೆ ನಿತಿ ಸಂಹಿತಿ ಜಾರಿಯಾಗುತ್ತದೆ ಎಂಬ ಅರಿವು ಇದ್ದರು ಸಿದ್ದರಾಮಯ್ಯನವರನ್ನು ಕರೆಸಿ ತರಾತುರಿಯಲ್ಲಿ ಗುದ್ದಲಿ ಪೂಜೆಯನ್ನು ಮಾಡಿಸಿದ್ದ ಕಾಂಗ್ರೆಸ್ ಮುಖಂಡರು ನಂತರ ಚುನಾವಣೆ ನಡೆದು ಅಧಿಕಾರ ಹಿಡಿದರು,ರೈಲ್ವೆ ಕೋಚ್ ಫ್ಯಾಕ್ಟರಿ ಪ್ರಸ್ತಾವನೆ ಇಲ್ಲದೆ ಹೋಯಿತು,ಈಗ ಖಾಸಗಿನೋ ಸರ್ಕಾರದ್ದೋ ಒಟ್ಟಿನಲ್ಲಿ ಇಲ್ಲಿನ ಯುವಕರಿಗೆ ಸ್ಥಳೀಯವಾಗಿ ಉದ್ಯೋಗ ಸೃಷ್ಠಿಸಲು ಕೈಗಾರಿಕೆಗಳು ಬರುವಂತ ಸಂದರ್ಭದಲ್ಲಿ ರೈತರ ಮುಸಕಿನಲ್ಲಿ ಕೆಲ ರಾಜಕೀಯ ಮುಖಂಡರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ…
ಚಿಂತಾಮಣಿ:ಜಲ್ಲಿ ಕಲ್ಲು ತುಂಬಿದ್ದ ಟಿಪ್ಪರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿನ ಹೋಟೆಲ್‌ಗೆ ನುಗ್ಗಿದ ಪರಿಣಾಮ ಹೋಟೆಲ್ ನಲ್ಲಿದ್ದ ಇಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಚಿಂತಾಮಣಿ ನಗರದ ಕೋಲಾರ ವೃತ್ತದಲ್ಲಿ ಗುರುವಾರ ನಡೆದಿರುತ್ತದೆ.ಮೃತರನ್ನು ಹೋಟೆಲ್ ಮಾಲಿಕ ಶಿವಾನಂದ(60) ಹಾಗು ಅಡುಗೆ ಭಟ್ಟ ಕುಮಾರ್(50) ಎಂದು ಗುರುತಿಸಲಾಗಿದ್ದುಘಟನೆ ಸಂದರ್ಭದಲ್ಲಿ ಹೋಟೆಲ್‌ನಲ್ಲಿದ್ದ ಗ್ರಾಹಕರು ಸೇರಿದಂತೆ ಇತರೆ ಕೆಲಸಗಾರರು ಅಪಾಯದಿಂದ ಪಾರಾಗಿದ್ದಾರೆಚಿಂತಾಮಣಿ ಕಡೆಯಿಂದ ಬಂದು ಕೋಲಾರ ಕಡೆಗೆ ತೆರಳಲು ಜಲ್ಲಿ ತುಂಬಿದ್ದ ಟಿಪ್ಪರ್ ಲಾರಿ ವೇಗವಾಗಿ ಬಂದಿದ್ದು ಕೋಲಾರ ವೃತ್ತದಲ್ಲಿ ತಿರವು ತಗೆದುಕೊಳ್ಳಬೇಕಾಗಿದ್ದು ಚಾಲಕ ಅತಿವೇಗ ಮತ್ತು ಅಜಾಗ ರೂಕತೆಯಿಂದ ಚಾಲನೆಯಿಂದಾಗಿ ಲಾರಿ ಚಾಲಕನ ನಿಯಂತ್ರಣ ತಪ್ಪಿ ಕೋಲಾರ ವೃತ್ತದಲ್ಲಿರುವ ಸೆಲ್ವಂ ಸರ್ವೀಸ್ ಸ್ಟೇಷನ್ ಪಕ್ಕದಲ್ಲಿರುವ ಶ್ರೀ ದರ್ಶಿನಿ ಫಾಸ್ಟ್ ಫುಡ್ ಹೋಟೆಲ್‌ಗೆ ನುಗ್ಗಿದೆ, ನುಗ್ಗಿದ ರಭಸಕ್ಕೆ ಹೋಟೆಲ್‌ನ ಕ್ಯಾಷ್ ಮೇಲೆ ಕುಳಿತ್ತಿದ್ದ ಮಾಲೀಕ ಮತ್ತು ಅಲ್ಲಿಯೇ ತರಕಾರಿ ಹಚ್ಚುತ್ತಿದ್ದ ಭಟ್ಟರಿಗೆ ಡಿಕ್ಕಿ ಹೊಡೆದ ಲಾರಿ ಜಲ್ಲಿ ಲೋಡ್ ಸಮೇತ ಪಕ್ಕಕ್ಕೆ ಉರಳಿ ಬಿದ್ದಿರುತ್ತದೆ…