ಕೋಲಾರ: ಅಯೋಧ್ಯೆಯಲ್ಲಿ ಜ.22ರಂದು ಭಗವಾನ್ ಶ್ರೀರಾಮಚಂದ್ರ ಮೂರ್ತಿ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ನಡೆಯಲಿದ್ದು ಇಲ್ಲಿನ ಪೂಜಾ ಹವನ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಜಿಲ್ಲೆಯ ಇಬ್ಬರು ಅಯೋಧ್ಯೆಗೆ ತೆರಳಿಲಿದ್ದಾರೆ
ಕೋಲಾರದ ರಮೇಶ್ ಭಟ್ ವೈದಿಕ ಪರಿಚಾರಕರಾಗಿ ತೆರಳಿದ್ದು, ತಾಲೂಕಿನ ನಾಗಲಪುರ ಸಂಸ್ಥಾನ ಮಠಧ್ಯಕ್ಷರಾದ ತೇಜೇಶಲಿಂಗ ಸ್ವಾಮೀಜಿ ಪ್ರಯಾಣ ಬೆಳೆಸಿದ್ದಾರೆ.
ರಮೇಶ್ ಭಟ್ ಅವರು ಸುಮಾರು ಕಳೆದ ಎರಡು ದಶಕಗಳಿಂದ ಕೋಲಾರದಲ್ಲಿ ವೈಧಿಕರಾಗಿ ತೊಡಗಿಸಿಕೊಂಡಿದ್ದ ಅವರು 2019ರಿಂದ ಅಮೆರಿಕಾದ ಕ್ಯಾಲಿಫೋರ್ನಿಯಾದ ಸ್ಟಾಕ್ಟನ್ನ ಶಿವ ವಿಷ್ಣು ದೇವಾಲಯದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೋಲಾರದಲ್ಲಿ ಪ್ರತಿವರ್ಷ ತಿರುಪ್ಪಾವಡೈ ಉತ್ಸವ ನಡೆಸುತ್ತಿದ್ದ ರಮೇಶ್ಭಟ್ ಪ್ರಪಂಚದಾದ್ಯಂತ ಆಧ್ಯಾತ್ಮಿಕ ಪ್ರವಚನ ನೀಡುವ ಮೂಲಕ ಪ್ರಸಿದ್ಧರಾಗಿದ್ದಾರೆ.
ನಾಗಲಾಪುರ ಮಠದ ತೇಜೇಶಲಿಂಗ ಸ್ವಾಮೀಜಿ ಮಠಾಧೀಶರಾಗಿ ಧಾರ್ಮಿಕ ಗುರುವಾಗಿ ಆಧ್ಯಾತ್ಮಿಕತೆಯನ್ನು ಜನರಿಗೆ ಬೋಧಿಸುತ್ತ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ. ಹಲವು ದಶಗಳ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಆಹ್ವಾನ ಬಂದಿರುವುದಕ್ಕೆ ಇಡೀ ಜಿಲ್ಲೆಗೆ ಬಂದ ಆಹ್ವಾನ ಎಂದು ಭಾವಿಸಿದ್ದೇನೆ.
ಸಂತಸ ಸಂಭ್ರಮ ತಂದಿದೆ
ಭಗವಂತನ ಹಾಗೂ ಹಿರಿಯರ ಆಶೀರ್ವಾದದಿಂದ ಶ್ರೀರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿದೆ. ಜ.22ರ ತನಕ 12 ದಿನ ನಡೆಯುವ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಲಿದ್ದೇನೆ. 1008 ಹೋಮ ಕುಂಡದಲ್ಲಿ ಪೂಜೆ ನೆರವೇರಿಸಲಾಗುವುದು, ಪ್ರತಿ ಕುಂಡಕ್ಕೆ ತಲಾ ಒಬ್ಬರು ಅರ್ಚಕರು ಹಾಗೂ ಇಬ್ಬರು ಸಹ ಅರ್ಚಕರು ಪೂಜಾ ಕೈಂಕರ್ಯ ನೆರವೇರಿಸಲಿದ್ದಾರೆ ಎಂದು ಕಲ್ಲೂರು ರಮೇಶ್ ಭಟ್ ಹೇಳುತ್ತಾರೆ.
ಐನೂರು ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಿದೆ ಪ್ರಾಣ ತ್ಯಾಗಗಳಿಂದ ನ್ಯಾಯಾಲಯದಲ್ಲೇ ರಾಮಮಂದಿರದ ಜಾಗ ಎಂದು ದೃಢೀಕರಣವಾಗಿದೆ. ಶ್ರೀರಾಮಜನ್ಮ ಭೂಮಿ ತೀರ್ಥ ಕ್ಷೇತ್ರದಿಂದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಿಂದಲೇ ತಾಲೂಕಿನ ತೇಜೇಶಲಿಂಗ ಸ್ವಾಮೀಜಿ ಅವರಿಗೆ ಆಹ್ವಾನ ಬಂದಿದ್ದು, ನಾಗಲಾಪುರ ಸಂಸ್ಥಾನಕ್ಕೆ ಆಹ್ವಾನ ಬಂದಿರುವುದು ಜಿಲ್ಲೆಯ ಜನತೆಗೆ ಬಂದ ಆಹ್ವಾನವೆಂದೇ ಭಾವಿಸಿ ಆಸ್ತಿಕ ಬಂಧುಗಳ ಪ್ರತಿನಿಧಿಯಾಗಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯದಲ್ಲಿ ಭಾಗವಹಿಸುವುದಾಗಿ ಸ್ವಾಮೀಜಿ ಸಂತಸದಿಂದ ಹೇಳುತ್ತಾರೆ.