ನ್ಯೂಜ್ ಡೆಸ್ಕ್:ಕೆಎಸ್ಆರ್ ಬೆಂಗಳೂರು-ಕೋಲಾರ ನಡುವೆ ಓಡಾಡುವ ಮೆಮೊ ರೈಲು ಚಿಕ್ಕಬಳ್ಳಾಪುರದಲ್ಲಿ ಕೆಟ್ಟು ನಿಂತ ಘಟನೆ ನಡೆದಿದ್ದು ರೈಲಿನಲಿದ್ದ ಪ್ರಯಾಣಿಕರಿಗೆ ಬದಲಿ ಸಾರಿಗೆ ವ್ಯವಸ್ಥೆ ಇಲ್ಲದೆ ರಾತ್ರಿ ವೇಳೆ ಪ್ರಯಾಣಿಕರ ಇನ್ನಿಲ್ಲದಂತೆ ಪರದಾಡಿರುವ ಘಟನೆ ಇಂದು ಗುರುವಾರ ರಾತ್ರಿ 9 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರದ ರೈಲು ನಿಲ್ದಾಣದಲ್ಲಿ ನಡೆದಿರುತ್ತದೆ.
ಕೆಎಸ್ಆರ್ ಬೆಂಗಳೂರು-ಕೋಲಾರ ನಡುವೆ ಓಡಾಡುವ ಮೆಮೊ ರೈಲು ಎಂದಿನಂತೆ ಸಂಜೆ ಸುಮಾರು 6.20 ಗಂಟೆ ಸಮಯದಲ್ಲಿ ಕೆಎಸ್ಆರ್ ಬೆಂಗಳೂರುನಿಂದ ಅರಂಭವಾಯಿತು ಯಲಹಂಕ ರೈಲು ನಿಲ್ದಾಣದಲ್ಲಿ ನಿಲ್ಲಿಸಿದ್ದರು ಯಾಕೆ ಮತ್ತೆ ದೇವನಹಳ್ಳಿ ರೈಲು ನಿಲ್ದಾಣದಲ್ಲಿ ರೈಲು ಅರ್ದಗಂಟೆಗೂ ಹೆಚ್ಚು ಕಾಲ ನಿಲ್ಲಿಸಿದ್ದು ತಜ್ಞರು ಬಂದಿದ್ದಾರೆ ರೈಲು ರೀಪೆರಿ ಆಗುತ್ತಿದೆ ಎಂಬ ಮಾತುಗಳನ್ನು ಸಹ ಪ್ರಯಾಣಿಕರು ಹೇಳುತ್ತಿದ್ದರು ಎಂದು ಶ್ರೀನಿವಾಸಪುರದ ಪ್ರಯಾಣಿಕ ಸಿದ್ದೇಶ್ ಹಾಗು ಚಿಂತಾಮಣಿಯ ಮಂಜುನಾಥ್ ಹೇಳುತ್ತಾರೆ.
ಬದಲಿ ವ್ಯವಸ್ಥೆ ಮಾಡದ ರೈಲ್ವೆ ಇಲಾಖೆ
ರೈಲು ಕೆಟ್ಟು ನಿಂತಿದೆ ರೈಲಿನಲ್ಲಿ ಶಿಡ್ಲಘಟ್ಟ ಚಿಂತಾಮಣಿ ಹಾಗು ಶ್ರೀನಿವಾಸಪುರಕ್ಕೆ ಸೇರಿದ ಸುಮಾರು ಇನ್ನೂರಕ್ಕೂ ಹೆಚ್ಚು ಪ್ರಯಾಣಿಕರು ಇದ್ದು ಅವರಿಗೆ ಬದಲಿ ಸಾರಿಗೆ ವ್ಯವಸ್ಥೆ ಇಲ್ಲದೆ ರಾತ್ರಿ ಸಂದರ್ಬದಲ್ಲಿ ಪರೆದಾಡಿದ್ದಾರೆ ಊರು ಸೇರುವ ತವಕದಲ್ಲಿ ಸಿಕ್ಕ ಸಿಕ್ಕ ಕಾರು ಆಟೋಗಳಿಗೆ ದುಬಾರಿ ದರ ತೆತ್ತು ಊರು ಸೇರಿಕೊಂಡಿದ್ದಾರೆ ಹಣ ಇಲ್ಲದವರು ಆಟೋ ಕಾರುಗಳಿಗೆ ಹಣ ನೀಡಲು ಸಾಧ್ಯವಾಗದೆ ಸಹ ಪ್ರಯಾಣಿಕರ ಸಹಾಯ ಯಾಚಿಸಿದ್ದಾರೆ.

ಆಪ್ ಮೂಲಕ ರೈಲು ರದ್ದಾದ ಬಗ್ಗೆ ಮಾಹಿತಿ
ರೈಲು ರದ್ದಾದ ಬಗ್ಗೆ ಪ್ರಯಾಣಿಕರಿಗೆ ಅಧಿಕೃತವಾಗಿ ಯಾರು ತಿಳಿಸಲಿಲ್ಲ ಪ್ರಯಾಣಿಕರು “ವೇರ್ ಇಸ್ ಮೈ ಟ್ರೈನ್” ತೆರೆದು ನೋಡಿದಾಗ ರೈಲು ರದ್ದಾಗಿರುವ ಬಗ್ಗೆ ತಿಳಿದುಕೊಂಡಿದ್ದಾಗಿ ಪ್ರಯಾಣಿಕ ಸೋಮು ಹೇಳುತ್ತಾರೆ.