ಕೋಲಾರ:ಲಂಚ ಪಡೆಯುತ್ತಿದ್ದ ಬಂಗಾರಪೇಟೆ CDPO ಎಸಿಬಿ ಬಲೆಗೆ ಬಿದ್ದಿದ್ದಾರೆ. ಬಂಗಾರಪೇಟೆ ಅಂಗನವಾಡಿ ಇಲಾಖೆಯ ಶಿಷು ಅಭಿವೃದ್ಧಿ ಯೋಜನಾಧಿಕಾರಿ ಹಾಗು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತಾಲೂಕು ಅಧಿಕಾರಿ ಸಿಡಿಪಿಒ ರೂಪಾ ತಮ್ಮ ಕಚೇರಿಯಲ್ಲಿ ಟೆಂಡರ್ ಗುತ್ತಿಗೆ ನೀಡುವ ಸಂಬಂದ ಕಾವೇರಿ ಎಂಟರ್ಪ್ರೈಸ್ ಎನ್ನುವರಿಗೆ 10 ಸಾವಿರಕ್ಕೆ ಲಂಚಕ್ಕೆ ಬೇಡಿಕೆ ಇಟ್ಟಿದ್ದು ಮೊದಲ ಕಂತಿನಲ್ಲಿ 7 ಸಾವಿರ ಪಡೆದು, ಬಾಕಿ ಇದ್ದ 3 ಸಾವಿರವನ್ನು ಇಂದು ಪಡೆಯುತ್ತಿರುವಾಗ ಎಸಿಬಿ ಬಲೆಗೆ ಬಿದ್ದಿರುತ್ತಾರೆ.
ಎಸಿಬಿ ಡಿವೈಎಸ್ಪಿ ಸುಧೀಂದ್ರ ನೇತೃತ್ವದಲ್ಲಿ ನಡೆದ ದಾಳಿ ಮಾಡಿದ್ದು ಸಿಡಿಪಿಒ ಮಹಿಳಾ ಅಧಿಕಾರಿ ರೂಪಾ ರನ್ನು ವಶಕ್ಕೆ ಪಡೆದಿರುವ ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸ್ತಿದ್ದಾರೆ.
ವರದಿ:ಹರ್ಷವರ್ಧನ್