ನ್ಯೂಜ್ ಡೆಸ್ಕ್:ರಾಜಕೀಯ ಅಧಿಕಾರವೆ ಹಾಗೆ “ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ” ಎಂಬಂತೆ ಕುಟುಂಬದ ಸದಸ್ಯರನ್ನು ಬಿಡದೆ ಹಪಾ ಹಪಿ ರಾಜಕೀಯ ಅಧಿಕಾರ ದಾಹ ಕಾಡುತ್ತದೆ ಅದು ತಂದೆ-ಮಕ್ಕಳು, ಅಣ್ಣ-ತಮ್ಮಂದಿರು, ಮಾವ-ಅಳಿಯ ಕೊನೆಗೆ ದಂಪತಿಯನ್ನು ಬಿಡದೆ ರಾಜಕೀಯ ಕಿಚ್ಚು ಕಾಡುತ್ತದೆ ಅದಕ್ಕೆ ಹೇಳೊದು ರಾಜಕೀಯ ಎಲ್ಲವನ್ನೂ ಮೀರಿದ್ದು ಅಂತ.
ಮೊನ್ನೆ ನಡೆದ ಕೆಲ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ರಾಜಸ್ಥಾನದ ರಾಜಕೀಯ ಫಲಿತಾಂಶದಲ್ಲಿ ಕೆಲವು ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬಂದಿವೆ.ಬೆಂಗಳೂರಿನ ಬಟ್ಟೆ ಉದ್ಯಮ ನಡೆಸುತ್ತಿರುವ ಲಾಡು ಲಾಲ್ ಪಿತಾಲಿಯ ರಾಜಾಸ್ಥಾನದ ಸಹರಾ ಕ್ಷೇತ್ರದಲ್ಲಿ ಭರ್ಜರಿ ಗೆಲವು ಸಾಧಿಸಿದ್ದರೆ, ಇನ್ನು ಕೆಲ ಕ್ಷೇತ್ರಗಳಲ್ಲಿ ಕುಟುಂಬ ಸದಸ್ಯರ ನಡುವಿನ ರಾಜಕೀಯ ಕದನವೆ ನಡೆದಿದೆ ಬಂಧುತ್ವದ ನಡುವೆ ಅಧಿಕಾರಕ್ಕಾಗಿ ಮೇಲಾಟದ ಚುನಾವಣೆ ಎನ್ನಬಹುದಾಗಿದೆ,
ರಾಜಸ್ಥಾನದ ಧೋಲ್ಪುರದಲ್ಲಿ ಕಾಂಗ್ರೆಸ್ನ ಶೋಭಾರಾಣಿ ಕುಶ್ವಾಹಾ ಕಾಂಗ್ರೆಸ್ನ ಪರವಾಗಿ ಸ್ಪರ್ಧಿಸಿದ್ದರೆ, ಅವರ ಸಹೋದರ ಶಿವಚರಣ್ ಕುಶ್ವಾಹ ಬಿಜೆಪಿಯಿಂದ ಸ್ಪರ್ಧಿಸಿದ್ದರು.ಶೋಭಾರಾಣಿ ಗೆದ್ದು ಬೀಗಿದರೆ ಸಹೋದರ ಶಿವಚರಣ್ ಸೋತಿದ್ದಾರೆ.ಜೈಪುರದ ಫುಲೇರಾ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪರವಾಗಿ ವಿದ್ಯಾಧರ ಚೌಧರಿ ಸ್ಪರ್ಧಿಸಿದ್ದರೆ, ಅವರ ಅಳಿಯ ಶೈಲೇಶ್ ಸಿಂಗ್ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಈ ಸ್ಪರ್ಧೆಯಲ್ಲಿ ಮಾವ ಅಳಿಯನನ್ನು ಸೋಲಿಸಿ ಶಾಸಕರಾಗಿದ್ದಾರೆ.ರಾಜಸ್ಥಾನದ ಸಿಕರ್ ಜಿಲ್ಲೆಯ ದಂತರಂಗಡ್ನಿಂದ ವೀರೇಂದ್ರ ಸಿಂಗ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರೆ, ಅವರ ಪತ್ನಿ ರೀಟಾ ಸಿಂಗ್ ಬಿಜೆಪಿಯಿಂದ ಸ್ಪರ್ಧಿಸಿದ್ದರು ಸ್ಪರ್ಧೆಯಲ್ಲಿ ಪತಿ ವೀರೇಂದ್ರ ಸಿಂಗ್ ಗೆದ್ದಿದ್ದಾರೆ.
ರಾಜಾಸ್ಥಾನ ಹಿರಿಯ ಕಾಂಗ್ರೆಸ್ ನಾಯಕ ರಿಚ್ ಪಾಲ್ ಮಿರ್ತಾ ಅವರ ಇಬ್ಬರು ಪುತ್ರರು ಮಾರ್ವಾರ್ ಪ್ರದೇಶದಲ್ಲಿ ಕಾಂಗ್ರೆಸ್ ಪರವಾಗಿ ಸ್ಪರ್ಧಿಸಿದ್ದರೂ ಇಬ್ಬರೂ ಸೋಲನುಭವಿಸಿದ್ದರು ಎಂಬುದು ಗಮನಾರ್ಹ. ವಿಧಾನಸಭಾ ಚುನಾವಣೆ ಸೋಲಿನ ನಂತರ ಸಿಎಂ ಅಶೋಕ್ ಗೆಹ್ಲೋಟ್ ರಾಜೀನಾಮೆ ನೀಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಸಿದ್ಧತೆ ನಡೆದಿದೆ. ರಾಜಸ್ಥಾನದಲ್ಲಿ 199 ಸ್ಥಾನಗಳಲ್ಲಿ ವಿಧಾನಸಭೆ ಚುನಾವಣೆ ನಡೆದಿದ್ದು, ಈ ಪೈಕಿ 70 ಸ್ಥಾನಗಳನ್ನು ಕಾಂಗ್ರೆಸ್, 14 ಸ್ಥಾನಗಳನ್ನು ಸ್ವತಂತ್ರ ಅಭ್ಯರ್ಥಿಗಳು ಮತ್ತು 115 ಸ್ಥಾನಗಳನ್ನು ಬಿಜೆಪಿ ಗೆದ್ದಿವೆ.
Breaking News
- ಶ್ರೀನಿವಾಸಪುರ ಕಸಬಾ ಸೊಸೈಟಿ ಅಧ್ಯಕ್ಷ ಗಾದಿ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಚುನಾವಣೆ!
- ಶ್ರೀನಿವಾಸಪುರ ಜೆ.ತಿಮ್ಮಸಂದ್ರ ಪಂಚಾಯಿತಿ ಅಧ್ಯಕ್ಷರಾಗಿ ಕಲ್ಲೂರು ಶಂಕರರೆಡ್ಡಿ
- ಚಿಂತಾಮಣಿ ವ್ಯಕ್ತಿ ಆಂಧ್ರದ ರಸ್ತೆ ಅಪಘಾತದಲ್ಲಿ ಸಾವು
- ಶ್ರೀನಿವಾಸಪುರ ಕನಕದಾಸರ ಜಯಂತಿಗೆ ಗೈರಾದ ಅಧಿಕಾರಿಗಳ ವಿರುದ್ದ ಶಾಸಕ ಗರಂ!
- ಶ್ರೀನಿವಾಸಪುರ ಸರ್ಕಾರಿ ನೌಕರರ ಸಂಘದ ಹೊಸ BOSS ಭೈರೇಗೌಡ
- ಶ್ರೀನಿವಾಸಪುರದಲ್ಲಿ ಕಾರ್ತಿಕ ಹುಣ್ಣಿಮೆ ವಿಶೇಷ ಗಿರಿಜಾ ಕಲ್ಯಾಣ
- RCS ಮಂಡಿ ವತಿಯಿಂದ ಬೆಂಗಳೂರು ಕೃಷಿ ಮೇಳಕ್ಕೆ ಬಸ್ಸುಗಳ ವ್ಯವಸ್ಥೆ.
- ಅಮೇರಿಕಾದ ರಾಷ್ಟ್ರೀಯ ಗುಪ್ತಚರ ಮುಖ್ಯಸ್ಥೆ ಹಿಂದು ತುಳಸಿ ಗಬ್ಬಾರ್ಡ್!
- ವೈಷ್ಣೋದೇವಿ ಯಾತ್ರೆಗೂ ಸಹಾಯಧನ ಮಂತ್ರಿ ರಾಮಲಿಂಗಾರೆಡ್ಡಿ ಘೋಷಣೆ
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ಎರಡು ಪ್ರತ್ಯೇಕ ಅಪಘಾತ ಒರ್ವ ಸಾವು!
Friday, November 22