ಶ್ರೀನಿವಾಸಪುರ:ಚುನಾವಣಾ ಫಲಿತಾಂಶಕ್ಕೂ ಮುನ್ನವೆ ಕಾಂಗ್ರೇಸ್ – ಜೆಡಿಎಸ್ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡುವ ಸಂದರ್ಬದಲ್ಲಿ ಮಾತಿನ ಚಕಮಕಿ ನಡೆದು ಕೈ ಕೈ ಮೀಲಾಯಿಸಿಕೊಂಡು ಘರ್ಷಣೆಗೆ ಮುಂದಾದ ಹಿನ್ನಲೆಯಲ್ಲಿ ಪೋಲಿಸರು ಲಾಠಿಚಾರ್ಜ್ ಮಾಡಿ ರಾಜಕೀಯ ಕಾರ್ಯಕರ್ತರನ್ನು ಚದುರಿಸಿರುವ ಘಟನೆ ಇಂದು ಪಟ್ಟಣದಲ್ಲಿ ಎರಡು ಬಾರಿ ನಡೆದಿದೆ.
ಶ್ರೀನಿವಾಸಪುರ ಪಟ್ಟಣದ ಹೈದರಾಲಿ ಮೊಹಲ್ಲಾ ಉರ್ದು ಶಾಲೆಯ ಮತಗಟ್ಟೆ ಸಂಖ್ಯೆ 147 ಬಳಿ ಸಂಜೆ ಮತದಾನ ಸಮಯ ಮುಗಿಯುವುದಕ್ಕೂ ಮುಂಚಿತವಾಗಿ ಎರಡು ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಗಲಾಟೆ ನಡೆಯಿತು ಪೋಲಿಸರು ಲಾಠಿ ಬೀಸಿ ಕಾರ್ಯಕರ್ತರನ್ನು ಚದುರಿದ್ದರು ಈ ಸಂದರ್ಭದಲ್ಲಿ ಪುರಸಭೆ ಸದಸ್ಯರೊಬ್ಬರ ಮೇಲೆ ವಿರೋಧಿ ಕಾರ್ಯಕರ್ತರು ತೀವ್ರವಾಗಿ ಹಲ್ಲೆ ನಡೆಸಿದ್ದು ಇದರ ಬೀಸಿ ಆರುವ ಮುನ್ನವೆ ಮತದಾನ ಸಮಯ ಮುಗಿಯುತ್ತಿದ್ದಂತೆ ಮತಗಟ್ಟೆ ಸಮೀಪವೆ ಯಾರಿಗೆ ಯಾರು ಕಡಿಮೆ ಇಲ್ಲದಂತೆ ಜೆಡಿಎಸ್ ಮತ್ತು ಕಾಂಗ್ರೇಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ತಮ್ಮ ರಾಜಕೀಯ ನಾಯಕರ ಪರವಾಗಿ ಪೈಪೊಟಿಗೆ ಬಿದ್ದು ನಿನಾದಗಳನ್ನು ಕೂಗುತ್ತ ರಸ್ತೆಯಲ್ಲಿ ಸಂಭ್ರಮಾಚರಣೆ ಮಾಡುತ್ತ ಕುಣಿದು ಕುಪ್ಪಳಿಸುತ್ತಿದ್ದ ರಾಜಕೀಯ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಹೊಡೆದಾಟದ ಮಟ್ಟಕ್ಕೇರಿ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದಂತೆ ಪೋಲಿಸರು ಬಿ.ಎಸ್.ಎಫ್ ಯೋಧರ ಸಹಕಾರದೊಂದಿಗೆ ಲಾಠಿ ಚಾರ್ಜ್ ಮಾಡಿ ಪರಿಸ್ಥಿತಿ ಹತೋಟಿಗೆ ತಂದಿರುತ್ತಾರೆ.
ಲಾಠಿ ರುಚಿ ಸಿಗುತ್ತಿದ್ದಂತೆ ಗುಂಪು ಗೂಡಿದ್ದ ಜೆಡಿಎಸ್ – ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಎದ್ದನೋ ಬಿದ್ದನೋ ಎನ್ನುವಂತೆ ಓಡಿ ಹೋಗಿದ್ದಾರೆ.
ಮೊದಲನೆ ಬಾರಿ ಲಾಠಿ ಚಾರ್ಜ್ ಆಗುತ್ತಿದ್ದಂತೆ ಪೋಲಿಸರು ಎಚ್ಚೆತ್ತುಕೊಂಡು ಅಗತ್ಯ ಕ್ರಮ ಕೈಗೊಂಡಿದ್ದರೆ ರಾಜಕೀಯ ಕಾರ್ಯಕರ್ತರು ಸಂಭ್ರಮಾಚಾರಣೆಯಂತ ಅವಿವೇಕಿತನದ ಕೆಲಸ ಮಾಡಲು ಹಿಂಜೆರೆಯುತ್ತಿದ್ದರು ಎಂದು ಸ್ಥಳಿಯರ ಮಾತು.
ಅಲಂಬಗಿರಿಯಲ್ಲೂ ಗಲಾಟೆ
ತಾಲೂಕಿನ ಜೆ.ತಿಮ್ಮಸಂದ್ರ ಪಂಚಾಯಿತಿಯ ಅಲಂಬಗಿರಿಯಲ್ಲಿ ಪಕ್ಷೇತರ ಅಭ್ಯರ್ಥಿ ರಮೇಶ್ ಕುಮಾರ್ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಕೆಲ ಹೊತ್ತು ಗ್ರಾಮದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಗಿತ್ತು ನಂತರ ಪೋಲಿಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.ಗೌವನಪಲ್ಲಿ ಬಳಿಯ ನಕ್ಕಲಗಡ್ಡ ಗ್ರಾಮದಲ್ಲಿ ಮತದಾನ ದಿನಕ್ಕೂ ಮುಂಚಿನ ದಿನ ಮಂಗಳವಾರ ರಾತ್ರಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಸಣ್ಣ ಮಟ್ಟದ ಗಲಾಟೆಗಳು ನಡೆದಿದೆ ಎನ್ನಲಾಗುತ್ತಿದೆ.
ವರದಿ. ಸುರೇಶ್ ನಂಬಿಹಳ್ಳಿ