ಶ್ರೀನಿವಾಸಪುರ:ಎಲ್ಲ ಧರ್ಮ,ಮತಗಳಲ್ಲಿ ಸಾಮರಸ್ಯ ತರಲು ಭಗವದ್ಗೀತೆಯಿಂದ ಮಾತ್ರ ಸಾಧ್ಯ ಎಲ್ಲ ರೀತಿಯ ಸಮಸ್ಯೆಗಳಿಗೆ ಭಗವದ್ಗೀತೆಯಲ್ಲಿ ಪರಿಹಾರ ಸಿಗುತ್ತದೆ ಎಂದು ಸತ್ಸಂಗ ಬಳಗದ ಸಂಚಾಲಕ ಸತ್ಯಮೂರ್ತಿ ಹೇಳಿದರು.
ಅವರು ಪಟ್ಟಣದ ಶಂಕರಮಠದಲ್ಲಿ ದಿನಾಂಕ 5-12-24 – ಗುರುವಾರ ದಿಂದ 11 – 12 – 24 – ಬುಧವಾರದವರೆಗೆ ಏಳು ದಿನಗಳ ಕಾಲ ನಡೆದಂತ ಭಗವದ್ಗೀತಾ ಸಪ್ತಾಹದ ಕಾರ್ಯಕ್ರಮದಲ್ಲಿ ಮಾತನಾಡಿದರು
ಪ್ರಾಚೀನ ಸಾಹಿತ್ಯಗಳು ಜ್ಞಾನಭಂಡಾರಗಳಾಗಿವೆ. ಅದರಲ್ಲೂ ಭಗವದ್ಗೀತೆ ಪ್ರತಿಯೊಬ್ಬರ ಮನಸ್ಸಿಗೆ ಮುದವನ್ನೂ ಹಾಗು ಬುದ್ಧಿಗೆ ಸಂಸ್ಕಾರವನ್ನೂ ನೀಡಲಿದೆ ಮಾನವನ ಮತ್ತು ಸಮಾಜದ ಉನ್ನತಿಗೆ ಸಹಕಾರಿಯಾಗಲಿದೆ. ಯುವ ಸಮುದಾಯಕ್ಕೆ ಭಗವದ್ಗೀತೆಯ ಅರ್ಥ ತಿಳಿಯುವ ಆಸಕ್ತಿ ಇದೆ. ಹಾಗಾಗಿ ಭಗವದ್ಗೀತಾ ಅಭಿಯಾನದಲ್ಲಿ ಉಪನ್ಯಾಸಕ್ಕೆ ಮಹತ್ವ ನೀಡಬೇಕು ಯುವ ಜತೆಗೆ ಒತ್ತಡದ ಬದುಕಿನಿಂದ ಹೊರಬರಲು ಭಗವದ್ಗೀತೆಯನ್ನು ಸಾರಂಶ ಸಮೇತ ತಿಳಿಸುವಂತ ಕೆಲಸ ಆಗಬೇಕು ಇದರಿಂದ ಭವಿಷ್ಯದಲ್ಲಿ ಸದೃಢ ಭಾರತ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದರು.
ಸತ್ಸಂಗ ಬಳಗದ ಸಂಚಾಲಕರಾದ ಮಂಗಳಾ ಸತ್ಯಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ಸತ್ಸಂಗ ಬಳಗದ ಸದಸ್ಯರು ಸಾಮೂಹಿಕವಾಗಿ ಭಗವದ್ಗೀತಾಪಾರಾಯಣವನ್ನು ಮಾಡಿದರು.