ಶ್ರೀನಿವಾಸಪುರ: ಶ್ರೀ ಭೈರವೇಶ್ವರ ಶಾಲೆ ವಿಧಾರ್ಥಿನಿ ಧರಣಿಕ.ಜಿ 622,ಎಸ್.ಎಫ್.ಎಸ್.ಶಾಲೆಯ ಎಸ್.ಚೈತನ್ಯ622, ಹಾಗು ಎಸ್.ಎಫ್.ಎಸ್.ಶಾಲೆಯ ಮತ್ತೊಬ್ಬ ವಿಧಾರ್ಥಿನಿ ಎಂ.ಮಿನುವರ್ಷ್ ಸಹ 622 ಅಂಕ ಗಳಿಸಿ ತಾಲೂಕಿನ ಪ್ರಥಮ ಸ್ಥಾನವನ್ನು ಮೂವರು ವಿಧ್ಯಾರ್ಥಿಗಳು ಹಂಚಿಕೊಂಡಿದ್ದಾರೆ.
ಕೋಲಾರ ಜಿಲ್ಲೆ ಎಸ್.ಎಸ್.ಎಲ್.ಸಿ ಫಲಾತಾಂಶದಲ್ಲಿ ಕೋಲಾರ ಜಿಲ್ಲೆ 6 ಸ್ಥಾನ ಪಡೆದಿದ್ದರೆ ಜಿಲ್ಲಾ ಪಟ್ಟದಲ್ಲಿ ಶ್ರೀನಿವಾಸಪುರ ಪ್ರಥಮ ಸ್ಥಾನ ಪಡೆದಿದೆ.ತಾಲೂಕಿನಲ್ಲಿರುವ ಒಟ್ಟು 66 ಶಾಲೆಗಳಿದ್ದು ಇವುಗಳಲ್ಲಿ 26 ಸರ್ಕಾರಿ ಶಾಲೆಗಳು, 5 ವಸತಿ ಶಾಲೆಗಳು,7 ಅನುಧಾನಿತ ಶಾಲೆಗಳು, 28 ಖಾಸಗಿ ಶಾಲೆಗಳು ಇವುಗಳಲ್ಲಿ ಒಟ್ಟು 2583 ವಿಧ್ಯಾರ್ಥಿಗಳು ಪರಿಕ್ಷೆಗೆ ಹಾಜರಾಗಿದ್ದು 2495 ಉತ್ತೀರ್ಣರಾಗಿ ಶೇ96.5 ಫಲಿತಾಂಶ ಸಾಧಿಸಿದ್ದಾರೆ. ತಾಲೂಕು ಪಟ್ಟದ ಫಲಿತಾಂಶದಲ್ಲಿ 38 ಸರ್ಕಾರಿ ಶಾಲೆಗಳ ಪೈಕಿ 11 ಶಾಲೆಗಳ ವಿಧಾರ್ಥಿಗಳು ಹಾಗು 28 ಖಾಸಗಿ ಶಾಲೆಗಳ ಪೈಕಿ 17 ಶಾಲೆಗಳ ವಿಧ್ಯಾರ್ಥಿಗಳು ಶೇ%100 ಫಲಿತಾಂಶ ಸಾಧಿಸಿದ್ದಾರೆ.
ಶೇ%೧೦೦ ಫಲಿತಾಂಶ ಸಾಧಿಸಿರುವಂತ 14 ಸರ್ಕಾರಿ ಶಾಲೆಗಳು ಕೂರಿಗೆಪಲ್ಲಿ, ಲಕ್ಷ್ಮೀಪುರ, ಮುತ್ತಕಪಲ್ಲಿ, ರೋಣುರು, ಭ್ಯರಗಾನಹಳ್ಳಿ, ಪಾತಪಲ್ಲಿ,ಆದರ್ಶ ವಿದ್ಯಾಲಯ ಕಲ್ಲೂರು,ಇಮರಕುಂಟೆ,ಮೌಲಾನ ಆಜಾದ್ ಶಾಲೆ, ಹಾಗು ವಸತಿ ಶಾಲೆಗಳಾದ ಸೋಮಯಾಜಲಹಳ್ಳಿ ಮುರಾರ್ಜಿ ವಸತಿ ಶಾಲೆ,ಗೌವನಪಲ್ಲಿ ಮುರಾರ್ಜಿ ವಸತಿ ಶಾಲೆ,ಪುಲಗೂರಕೋಟೆಯ ಎಕಲವ್ಯ ವಸತಿ ಶಾಲೆ, ಶ್ರೀನಿವಾಸಪುರದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ.
ಶೇ%100 ಫಲಿತಾಂಶ ಸಾಧಿಸಿರುವ 17 ಖಾಸಗಿ ಶಾಲೆಗಳಲ್ಲಿ ಶ್ರೀನಿವಾಸಪುರದ ರಾಚೇಲ್ ಇಂಗ್ಲೀಶ್ ಮಿಡಿಯಂ ಶಾಲೆ,ಸಪ್ತಗಿರಿ ಶಾಲೆ ಗೌವನಪಲ್ಲಿಯಲ್ಲಿರುವಂತ ಪ್ರಸಾದ್ ಶಾಲೆ,ಸತ್ಯಸಾಯಿ ಇಂಗ್ಲಿಷ್ ಮೀಡಿಯಂ ಶಾಲೆ, ಹಾಗು ಶ್ರೀ ವೆಂಕಟೇಶ್ವರ ಶಾಲೆ, ಯಲ್ದೂರಿನಲ್ಲಿ ಇರುವಂತ ಪ್ರಿತಿ ವಿದ್ಯಾಮಂದಿರ,ವಿದ್ಯಾ ದೀಪ್ತಿ ಶಾಲೆ,ಶ್ರೀನಿವಾಸ ಶಾಲೆ ಹಾಗು ಪರಂಜ್ಯೋತಿ ಶಾಲೆ,ಆಶ್ರಯ ನಿಲಭಾಗ್ ಶಾಲೆ ರಾಯಲ್ಪಾಡು,ವೈ.ಅಗ್ರಹಾರದ ಕುವೆಂಪು ವಿದ್ಯಾಪಿಠ, ಕಾವೇರಿ ಪಬ್ಲಿಕ್ ಶಾಲೆ,ದೊಡಮಲದೊಡ್ಡಿ ನಿಸರ್ಗ ವಿದ್ಯಾಮಂದಿರ,ಪವನ್ ವಿದ್ಯಾಮಂದಿರ ನಿಲಟೂರು,ವೆಂಕಟಾದ್ರಿ ಶಾಲೆ ಪನಸಮಾಕಲಹಳ್ಳಿ.
ಅನುಧಾನಿತ ಶಾಲೆಗಳಾದ ತಾಡಿಗೊಳ್ ಕ್ರಾಸನಲ್ಲಿರುವಂತ ಭಗವಾನ್ ಬುದ್ದ ಶಾಲೆ,ಗೌವನಪಲ್ಲಿಯ ಸತ್ಯಸಾಯಿ ಶಾಲೆ,ವೆಂಕಟೇಶ್ವರ ಶಾಲೆಗಳು ಶೇ%100 ಫಲಿತಾಂಶ ಸಾಧಿಸಿವೆ. ಉತ್ತಮ ಸಾಧನೆ ಮಾಡಿರುವಂತ ಶಾಲೆಗಳ ಭೋದಕರ ಮತ್ತು ವಿಧ್ಯಾರ್ಥಿಗಳ ಶ್ರಮಕ್ಕೆ ತಾಲೂಕು ಬಿ.ಇ.ಒ ಉಮಾದೇವಿ ಅಭಿನಂಧನೆ ತಿಳಿಸಿರುತ್ತಾರೆ.
ಕೇಂದ್ರ ಸರ್ಕಾರದ ಸಂಯೋಜನೆಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಏಕಲವ್ಯ ವಸತಿ ಶಾಲೆಯಲ್ಲಿ ಕೇವಲ 59 ವಿಧ್ಯಾರ್ಥಿಗಳು ಮಾತ್ರ ಪರಿಕ್ಷೇ ಬರೆದಿರುತ್ತಾರೆ