- ಎಂದಿನಂತೆ ಒಡಾಡಿದ ಕೆ.ಎಸ್.ಅರ್.ಟಿ.ಸಿ
- ಅಂಗಡಿ ಮುಂಗಟ್ಟುಗಳಿಗೆ ಮಾತ್ರ ಬಂದ್ ಬಿಸಿ
- ಪ್ಯಾಪೂಲರ್ ಫ್ರಂಟ್ ಪ್ರತಿಭಟನೆಗೆ ಸಾತ್
ಶ್ರೀನಿವಾಸಪುರ: ಭಾರತ್ ಬಂದ್ ಬೆಂಬಲಿಸಿ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದರೆ,ಕೆ.ಎಸ್.ಅರ್.ಟಿ.ಸಿ ವಾಹನಗಳು ಎಂದಿನಂತೆ ಒಡಾಡುತ್ತಿದ್ದವು,ಸರ್ಕಾರಿ ಕಚೇರಿಗಳಲ್ಲಿ ಬಹುತೇಕ ಹಾಜರಾತಿ ಕಡಿಮೆ ಇತ್ತು, ಬಂದ್ ಬೆಂಬಲಿಸಿ ಕಾರ್ಮಿಕ ಸಂಘಟನೆ ಕಾರ್ಯಕರ್ತರು,ಯುವ ಕಾಂಗ್ರೆಸ್ ಕಾರ್ಯಕರ್ತರು,ರೈತ ಸಂಘಟನೆ ಮುಖಂಡರು,ಅಂಗನವಾಡಿ ಕಾರ್ಯಕರ್ತರು,ಪ್ಯಾಪೂಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ದೊಡ್ಡ ಸಖ್ಯೆಯಲ್ಲಿ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ವಿರುದ್ದ ಹಾಗು ಪ್ರಧಾನಿ ವಿರುದ್ದ ಘೋಷಣೆಗಳನ್ನು ಕೂಗುತ್ತ ಪ್ರತಿಭಟನೆ ಮಾಡಿದರು.
ಆಜಾದ್ ರಸ್ತೆಯಲ್ಲಿನ ಮಾಂಸದ ಅಂಗಡಿಗಳು ಬಾಗಿಲು ಮುಚ್ಚಿ ವ್ಯಾಪಾರ ನಡೆಸುತ್ತಿದ್ದರು.ರಸ್ತೆಗಿಳಿದ ಕೆ.ಎಸ್.ಆರ್.ಟಿ.ಸಿ ಬಸ್ಸುಗಳನ್ನು ಪ್ರತಿಭಟನೆಕಾರರು ತಡೆದರಾದರೂ ಪೋಲಿಸರು ಮದ್ಯಪ್ರವೇಶಿಸಿ ಬಸ್ ಒಡಾಟಕ್ಕೆ ಅನವು ಮಾಡಿಕೊಟ್ಟರು.
ಬಸ್ ನಿಲ್ದಾಣದ ಬಳಿ ವಾಹನ ತಡೆದ ಪ್ರತಿಭಟನೆ ಕಾರರು ರಸ್ತೆ ತಡೆ ಮಾಡಲು ಮುಂದಾದಾಗ ಪ್ರತಿಭಟನೆ ಕಾರರ ಮತ್ತು ಪೋಲಿಸರ ನಡುವೆ ಮಾತಿನ ಚಕಮುಖಿ ನಡೆಯಿತು.
ವಕೀಲ ಶೀವಣ್ಣ ಬಂದ್ ಬೆಂಬಲಿಸಿ ಪ್ರಗತಿಪರ ಚಿಂತಕ ಹಾಗು ದಲಿತ ಸಂಘಟನೆ ಕಾರ್ಯಕರ್ತರ ಜೊತೆಗೂಡಿ ಪ್ರತಿಭಟನಾಕಾರರೊಂದಿಗೆ ಪಾಲ್ಗೋಂಡಿದ್ದು ವಿಶೇಷವಾಗಿತ್ತು,ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ಧೋರಣೆಗಳ ವಿರುದ್ದ ತಮ್ಮ ಆಕ್ರೋಶ ಹೋರಹಾಕಿದರು, ಅಡಳಿತ ಪಕ್ಷದ ಕಾರ್ಯ ವೈಖರಿಯನ್ನು ಪ್ರತಿಭಟಿಸಲು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ವಿಫಲವಾಗಿದೆ ಸಾರ್ವಜನಿಕರೆ ನೇರವಾಗಿ ಮೋದಿ ಆಡಳಿತವನ್ನು ವಿರೋಧಿಸಿ ಎದುರಿಸುವಂತಾಗಬೇಕು ಇಲ್ಲವಾದಲ್ಲಿ ಬಡವರು.ರೈತರು,ದಲಿತರು ಹಾಗು ಮಹಿಳೆಯರಿಗೆ ರಕ್ಷಣೆ ಇರುವುದಿಲ್ಲ ಬದಕು ಕಟ್ಟಿಕೊಳ್ಳಲಾಗದೆ ಜೀವ ಕಳೆದುಕೊಳ್ಳಬೇಕಾದ ಅನಿವಾರ್ಯತೆ ಏರ್ಪಡುತ್ತದೆ ಎಂದರು.
ವಕೀಲ ಶಿವಣ್ಣ ಮಾತನಾಡುವಾಗ ಸ್ಥಳದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಮೋದಿಯನ್ನು ಕಾಂಗ್ರೆಸ್ ಪಕ್ಷ ಪ್ರಭಲವಾಗಿ ಪರಿಣಾಮಕಾರಿಯಾಗಿ ಎದುರಿಸುತ್ತಿದೆ ಎಂದು ಕಾಂಗ್ರೆಸ್ ಗೆ ಜೈಕಾರ ಕೂಗಿ ಮೋದಿಗೆ ಧಿಕ್ಕಾರ ಕೂಗಿದ ಪ್ರಸಂಗ ನಡೆಯಿತು.
ಪ್ರತಿಭಟನೆಯಲ್ಲಿ ಪಾತಕೋಟೆ ನವೀನ್, ರೈತ ಸಂಘದ ಮುಖಂಡರಾದ ನಂಬಿಹಳ್ಳಿ ಶ್ರೀರಾಮರೆಡ್ದಿ,ಬೈಚೇಗೌಡ, ದಲಿತ ಸಂಘಟನೆಗಳ ಮುಖಂದರಾದ ಎನ್.ಮುನಿಶಾಮಿ,ಚಲ್ದಿಗಾನಹಳ್ಳಿ ಮುನಿವೆಂಕಟಪ್ಪ,ಬಂಡಾರ್ಲಹಳ್ಳಿ ಮುನಿಯಪ್ಪ,ನಾಗದೇನಹಳ್ಳಿ ಶ್ರೀನಿವಾಸ್,ಕಾಂಗ್ರೆಸ್ ಯುವ ಮುಖಂಡರಾದ ಶಿವರಾಜ್,ವೇಣು,ಹರಿಶ್ ಯಾದವ್ ಮುಂತಾದವರು ಇದ್ದರು.
ಮುದುವಾಡಿ ಬಳಿ ಇರುವಂತ ಗಾರ್ಮೆಂಟ್ಸ್ ಫ್ಯಾಕ್ಟಿಗೆ ಹೋಗುವಂತ ಮಹಿಳೆಯರು ಬಸ್ ಗಾಗಿ ಗಂಟಗಟ್ಟಲೆ ಕಾದು ಕುಳಿತಿದ್ದರು.
ಬಿಗಿಯಾದ ಪೋಲಿಸ್ ಬಂದೋ ಬಸ್ತ್ ಸ್ವತಃ ಡಿ.ಯೈ.ಎಸ್.ಪಿ ಗಿರಿ ಅವರು ಇಲ್ಲಿನ ವೃತ್ತ ನೀರಿಕ್ಷಕ ರವಿಕುಮಾರ್ ಜೊತೆ ಬಂದೋ ಬಸ್ತು ಉಸ್ತುವಾರಿ ವಹಿಸಿಕೊಂಡಿದ್ದರು.