ನ್ಯೂಜ್ ಡೆಸ್ಕ್: ಭಾರತದ ರಾಜಕೀಯದ ಲೋಹದ ಪುರುಷ ಬಿಜೆಪಿ ಭೀಷ್ಮ ಎಂದೇ ಜನಪ್ರಿಯರಾದ ಮಾಜಿ ಉಪ ಪ್ರಧಾನಿ, ಅಪ್ರತಿಮ ಹೋರಾಟಗಾರ, ಹಿರಿಯ ಮುತ್ಸದ್ದಿ ರಾಜಕಾರಣಿ, ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕಟ್ಟಾಳು,ಸಂಘಟನೆಗಾರ, ಲಾಲ್ ಕೃಷ್ಣ ಅಡ್ವಾಣಿ (ಎಲ್ ಕೆ ಅಡ್ವಾಣಿ 96) ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಅನ್ನು ಭಾರತ ಸರ್ಕಾರ ಘೋಷಣೆ ಮಾಡಿದೆ.
ಭಾರತದ ರಾಜಕೀಯ ಇತಿಹಾಸದಲ್ಲಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಪ್ರತ್ಯಕ ಹೆಸರು ಇದೆ ಕೇವಲ ಎರಡು ಸ್ಥಾನಗಳಿದ್ದ ಬಿಜೆಪಿ ಇಂದು ಪೂರ್ಣಪ್ರಮಾಣದ ಅಧಿಕಾರದಲ್ಲಿ ಇದೆ ಎನ್ನುವುದಾದರೆ ಅದಕ್ಕೆ ಎಲ್ ಕೆ ಅಡ್ವಾಣಿ ರಾಜಕೀಯ ಕೃಷಿ ಸಾಕಷ್ಟು ಇದೆ 1980 ಮತ್ತು 1990 ರ ದಶಕದಲ್ಲಿ, ಅಡ್ವಾಣಿ ಅವರು ಬಿಜೆಪಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ರಾಜಕೀಯ ಶಕ್ತಿಯನ್ನಾಗಿಸಿದ ಅಡ್ವಾನಿ ಸ್ವಾತಂತ್ರ್ಯ ನಂತರದಲ್ಲಿ ಕಾಂಗ್ರೆಸ್ ನಂತಹ ಪ್ರಬಲ ರಾಷ್ಟ್ರೀಯ ಪಕ್ಷದ ಎದರು ಮತ್ತೊಂದು ರಾಷ್ಟ್ರೀಯ ಪಕ್ಷವನ್ನಾಗಿಸಿ ಲೋಕಸಭೆಯಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವನ್ನಾಗಿಸಲು ಕಾರಣಿಭೂತರಾಗಿದ್ದಾರೆ. ಇಂದು ಬಿಜೆಪಿ ದೇಶದಲ್ಲಿ ಆಡಳಿತ ನಡೆಸಬೇಕಾದರೆ ಅಥವಾ ಬಿಜೆಪಿ ಈ ಮಟ್ಟಿಗೆ ಪ್ರಬಲವಾಗಿ ನೆಲೆಯೂರಬೇಕಾದರೆ ಅದಕ್ಕೆ ಅಡಿಪಾಯ ಹಾಕಿದವರಲ್ಲಿ ಅಟಲ್ ಬಿಹಾರಿ ವಾಜಪೇಯಿ ಜೊತೆಗೆ ಅಡ್ವಾಣಿಯವರ ಪಾತ್ರ ಮಹತ್ವದ್ದು ಎಂದು ಯಾರು ಮರೆಯಲಾರರು.
1984 ರಲ್ಲಿ ಎರಡು ಸಂಸತ್ ಸದಸ್ಯ ಸ್ಥಾನ ಗೆದ್ದ ಬಿಜೆಪಿ ಎಲ್ ಕೆ ಅಡ್ವಾಣಿ ಅವರ ರಾಜಕೀಯ ಹೋರಾಟದ ಫಲ 86 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು.1992 ರಲ್ಲಿ 121 ಸ್ಥಾನಗಳಿಗೆ ಮತ್ತು 1996 ರಲ್ಲಿ 161 ಸ್ಥಾನಗಳಿಗೆ ಏರಿತು, ಇದು 1996 ರ ಚುನಾವಣೆಯಲ್ಲಿ ಭಾರತೀಯ ಪ್ರಜಾಪ್ರಭುತ್ವದಲ್ಲಿ ಬಿಜೆಪಿಯನ್ನು ಪ್ರಭಲ ರಾಜಕೀಯ ಪಕ್ಷವಾಗಿ ಹೊರಹೊಮ್ಮುವಂತೆ ಮಾಡಿದ್ದು ಅಡ್ವಾಣಿಯವರ ಸಾಧನೆಯ ಹೋರಾಟ ಅತ್ಯಂತ ಪ್ರಮುಖವಾದದ್ದು.
ಬಿಜೆಪಿಯ ಹಿರಿಯ ನಾಯಕ ಅಡ್ವಾಣಿ ಅವರು ನವೆಂಬರ್ 8, 1927 ರಂದು ಅವಿಭಜಿತ ಭಾರತದ-ಪಾಕಿಸ್ಥಾನದ ಪೂರ್ವ ಸಿಂಧ್ ಪ್ರಾಂತ್ಯದಲ್ಲಿ ಜನಿಸಿದ್ದು ಕರಾಚಿಯ ಸೇಂಟ್ ಪ್ಯಾಟ್ರಿಕ್ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದಾಗ, ದೇಶಭಕ್ತಿ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದರು.ತಮ್ಮ 14 ವಯಸ್ಸಿನಲ್ಲಿ ಅರ್.ಎಸ್.ಎಸ್ ಸಂಪರ್ಕಕ್ಕೆ ಸೇರಿದ ಅವರು ಮಹಾನ್ ಬೌದ್ಧಿಕ ಸಾಮರ್ಥ್ಯ ಹೊಂದಿದ್ದರು ಬಲವಾದ ತತ್ವಾದರ್ಷಗಳು, ಬಲಿಷ್ಠ ಮತ್ತು ಸಮೃದ್ಧ ಭಾರತದ ಕಲ್ಪನೆಗೆ ಅಚಲವಾದ ನಂಬಿಕೆ ಉಳ್ಳವರಾಗಿ, 1986-90, 1993-98 ಮತ್ತು 2004-05ರಲ್ಲಿ ಸುದೀರ್ಘ ಅವಧಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಡ್ವಾನಿ ಸುಮಾರು ಅರವತ್ತು ವರ್ಷಗಳ ರಾಜಕಾರಣಿಯಾಗಿದ್ದವರು 1989 ರಿಂದ 2014 ರ ವರಿಗೆ ಏಳು ಬಾರಿ ಸಂಸದ ಸದಸ್ಯರಾಗಿ ,1970 ರಿಂದ 1988 ವರೆಗೆ ನಾಲ್ಕು ಬಾರಿ ರಾಜ್ಯಸಭಾ ಸದಸ್ಯರಾಗಿ 1999 ರಿಂದ 2004 ರವರೆಗೆ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಗೃಹ ಸಚಿವರಾಗಿ ನಂತರ 7 ನೇ ಉಪಪ್ರಧಾನಿಯಾಗಿದ್ದರು. ಬಿಜೆಪಿಯ ಸುದೀರ್ಘ ಕಾಲದ ಅಧ್ಯಕ್ಷರಾಗಿದ್ದ ಅಡ್ವಾಣಿ 1980 ರಲ್ಲಿ ಭಾರತೀಯ ಜನತಾ ಪಕ್ಷದ ಆರಂಭದಿಂದಲೂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸಮ್ಮಿಶ್ರ ಸರ್ಕಾರಗಳ ಮುಖ್ಯಸ್ಥರಾಗಿ 90 ರ ದಶಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಅದರ ಬೆಳವಣಿಗೆಯನ್ನು ರೂಪಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ.
ರಾಮ ಮಂದಿರಕ್ಕಾಗಿ ರಥಯಾತ್ರೆ
ರಾಮ ಮಂದಿರ ವಹಿ ಬನಾವುಂಗಾ(ಮಂದಿರ ಅಲ್ಲೆ ಕಟ್ಟುತ್ತೇವೆ) ಎನ್ನುವ ನಿನಾದದೊಂದಿಗೆ ರಾಮಮಂದಿರ ನಿರ್ಮಾಣದ ರೂವಾರಿಯಾಗಿ ಜನಜಾಗೃತಿ ಮೂಡಿಸಲು ಸೆಪ್ಟೆಂಬರ್ 25, 1990 ರಂದು ಗುಜರಾತ್ನ ಸೋಮನಾಥದಲ್ಲಿ ರಾಮ ರಥಯಾತ್ರೆ’ಯನ್ನು ಆರಂಭಿಸಿದ ಅಡ್ವಾಣಿ ರಥಯಾತ್ರೆ ‘ಸಾರಥಿಯಾಗಿ ದೇಶಾದ್ಯಂತ ಸಂಚರಿಸುವ ಮೂಲಕ ಅಪಾರ ಜನ ಬೆಂಬಲ ಗಳಿಸಿದ್ದರು ರಥಯಾತ್ರೆಯನ್ನು ಡಿಸೆಂಬರ್ 6, 1992 ರಂದು ಬಾಬರಿ ಮಸೀದಿ ಧ್ವಂಸದೊಂದಿಗೆ ಅಂತ್ಯಗೊಳಿಸಿದರು.ರಾಮಮಂದಿರದ ಆಂದೋಲನದ ಮೂಲಕ ಲಾಲ್ ಕೃಷ್ಣ ಅಡ್ವಾನಿ ದೇಶದ ರಾಜಕೀಯ ಚಿತ್ರಣವೆ ಬದಲಾಯಿತು ಎನ್ನಬಹುದು.
ಪ್ರಧಾನಿ ಮೋದಿ ಸಂತಸ
ಅಡ್ವಾಣಿಯವರಿಗೆ ಭಾರತ ರತ್ನ ನೀಡುತ್ತಿರುವ ವಿಚಾರವನ್ನು ವಿಚಾರವನ್ನು ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಟ್ವೀಟ್X ನಲ್ಲಿ ಹಂಚಿಕೊಂಡಿದ್ದಾರೆ. ಎಲ್ ಕೆ ಅಡ್ವಾಣಿಯವರಿಗೆ ಭಾರತ ರತ್ನ ಪ್ರಶಸ್ತಿ ಗೌರವ ನೀಡುತ್ತಿರುವ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಹಳ ಸಂತಸವಾಗುತ್ತಿದೆ. ನಮ್ಮ ಕಾಲದ ಅತ್ಯಂತ ಗೌರವಾನ್ವಿತ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ಅವರು ಭಾರತದ ಅಭಿವೃದ್ಧಿಗೆ ಅವಿಸ್ಮರಣೀಯ ಕೊಡುಗೆ ನೀಡಿದ್ದಾರೆ ಎಂದು ಕೊಂಡಿದ್ದಾರೆ.ಈ ಕುರಿತು ಅವರೊಂದಿಗೆ ದೂರವಾಣಿ ಮೂಲಕ ನಾನೇ ಖುದ್ದಾಗಿ ತಿಳಿಸಿದ್ದು ಅದನ್ನು ಕೇಳಿ ಅವರು ಬಹಳ ಖುಷಿಪಟ್ಟರು ಎಂದು ಪ್ರಧಾನಿ ಮೋದಿ ಹಂಚಿಕೊಂಡಿದ್ದಾರೆ.
ಕಳೆದ ತಿಂಗಳು ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗಿದ್ದು ರಾಮ ಮಂದಿರ ಹೋರಾಟದ ರೂವಾರಿ ಅಡ್ವಾಣಿಯವರಿಗೆ ಅಯೋಧ್ಯೆ ರಾಮಮಂದಿರ ಉದ್ಘಾಟನೆಗೊಂಡ ಬೆನ್ನಲ್ಲೇ ಅವರಿಗೆ ಭಾರತ ರತ್ನ ಗೌರವ ಘೋಷಣೆಯಾಗಿದೆ.ಬಿಹಾರದ ಮಾಜಿ ಮುಖ್ಯಮಂತ್ರಿ ದಿವಂಗತ ಕರ್ಪೂರಿ ಠಾಕೂರ್ ಅವರಿಗೂ ಭಾರತ ರತ್ನ ಘೋಷಣೆ ಮಾಡಲಾಗಿದೆ.