ಯುವಕರ ತ್ರಿಬಲ್ ರೈಡಿಂಗ್ ಹಿಡಿಯಲು ಪೋಲಿಸರು ಹಿಂದೇಟು
ಯುವಕರ ರಾಜಕೀಯ ನಂಟು ಪೋಲಿಸರಿಗೆ ಭಯ!
ಶ್ರೀನಿವಾಸಪುರ:- ರಾಷ್ಟ್ರೀಯ ಹೆದ್ದಾರಿ ಚಿಂತಾಮಣಿ ರಸ್ತೆಯ ಹೆದ್ದಾರಿಯಲ್ಲಿ ಪುಂಡರ ಬೈಕ್ ವ್ಹೀಲಿಂಗ್ ಸಾಮಾನ್ಯವಾಗಿದ್ದು ಈ ರಸ್ತೆಯ ನಂಬಿಹಳ್ಳಿ ಹಾಗು ವರ್ತುಲ ರಸ್ತೆಯಲ್ಲಿ ಸಂಜೆ ಮಬ್ಬು ಗತ್ತಲಿನಲ್ಲಿ ಪುಂಡರ ಅಪಾಯಕಾರಿ ಬೈಕ್ ಸ್ಟಂಟ್ಗಳಿಗೆ ರಸ್ತೆ ಸವಾರರು ಹೈರಾಣಾಗಿದ್ದಾರೆ. ಯುವಕರ ಬೈಕ್ ವ್ಹೀಲಿಂಗ್ ಹುಚ್ಚಾಟ ಹೆಚ್ಚಾಗಿದ್ದು, ವ್ಹೀಲಿಂಗ್ ಎಗ್ಗಿಲ್ಲದೆ ನಡೆಯುತ್ತಿದ್ದು. ಪೋಲೀಸರು ಇವರ ಪುಂಡಾಟಕ್ಕೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಪುಂಡರ ವ್ಹೀಲಿಂಗ್ ಹುಚ್ಚಾಟದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ.
ಪಟ್ಟಣದಲ್ಲೂ ಪುಂಡರ ಕಾಟ
ರಾತ್ರಿ ವೇಳೆ ಪುಂಡರು ಮೂರನಾಲ್ಕು ದ್ವಿಚಕ್ರ ವಾಹನಗಳನ್ನು ಪಟ್ಟಣದ ಮುಖ್ಯರಸ್ತೆಗಳಲ್ಲಿ ಕರ್ಕಶ ಶಬ್ದಮಾಡುತ್ತ ಕೇಕೆ ಹಾಕುತ್ತ ಅಡ್ಡಾದಿಡ್ದಿಯಾಗಿ ಒಡಿಸುವುದು ಇಲ್ಲಿ ಸಾಮಾನ್ಯವಾಗಿಬಿಟ್ಟಿದೆ ಇದಕ್ಕೆಲ್ಲ ಇಲ್ಲಿನ ಪೋಲಿಸರ ದಿವ್ಯ ಮೌನ ಸಾರ್ವಜನಿಕರಿಗೆ ಅರ್ಥವೇ ಆಗುತ್ತಿಲ್ಲ ಎನ್ನಲಾಗುತ್ತಿದೆ.
ಇನ್ಸಪೇಕ್ಟರ್ ರವಿಕುಮಾರ್ ಸ್ಪಷ್ಟನೆ.
ವ್ಹೀಲಿಂಗ್ ಮಾಡುವ ಬಗ್ಗೆ ನಿಗಾ ಇಡಲು ಪ್ರದೇಶಗಳನ್ನು ಗುರುತಿಸಿ ಪೋಲಿಸರನ್ನು ನಿಯೋಜಿಸಿ ಬೈಕ್ ವ್ಹೀಲಿಂಗ್ ಮಾಡುವಂತ ಪುಂಡರನ್ನು ಸಾರ್ವಜನಿಕರ ಸಹಕಾರದೊಂದಿಗೆ ಹಿಡಿದು ಮಟ್ಟ ಹಾಕುವ ಪ್ರಯತ್ನ ಮಾಡುವುದಾಗಿ ಪೋಲಿಸ್ ಇನ್ಸಪೇಕ್ಟರ್ ರವಿಕುಮಾರ್ ತಿಳಿಸಿರುತ್ತಾರೆ.