ನ್ಯೂಜ್ ಡೆಸ್ಕ್: ಮೇ 25 ರಿಂದ ಸೂರ್ಯನು ತನ್ನ ನಕ್ಷತ್ರವನ್ನು ಬದಲಾಯಿಸಿದ್ದು ಕೃತಿಕಾ ನಕ್ಷತ್ರದಿಂದ ರೋಹಿಣಿ ನಕ್ಷತ್ರದತ್ತ ಪ್ರಯಾಣ ಆರಂಭಿಸಿದ್ದು ಅಂದಿನಿಂದ ರೋಹಿಣಿ ಕಾರ್ತೆ ಆರಂಭವಾಗುತ್ತದೆ. ಸೂರ್ಯನು ರೋಹಿಣಿ ನಕ್ಷತ್ರದಲ್ಲಿರುವ ಸಮಯವನ್ನು ರೋಹಿಣಿ ಕಾರ್ತೆ ಎಂದು ಪರಿಗಣಿಸಲಾಗುತ್ತದೆ.ಇದರಿಂದ ಸೂರ್ಯನ ಶಾಖದ ಪ್ರಭಾವ ಅತಿ ಹೆಚ್ಚಾಗಿರುವ ಹಿನ್ನಲೆಯಲ್ಲಿ ಬೇಸಿಗೆಯ ಬಿಸಿ ಇನ್ನಷ್ಟು ಏರಿಕೆಯಾಗುತ್ತದೆ ಎನ್ನಲಾಗುತ್ತಿದ್ದು ತೀವ್ರವಾದ ಶಾಖವನ್ನು ಅನುಭವಿಸುವ ಅನಿವಾರ್ಯತೆ ಇದಿಯಂತೆ ತಾಪಮಾನವು ಏರುತ್ತಲೇ ಇರುತ್ತದೆ.
ಉತ್ತರ ಭಾರತದಲ್ಲಿ ಬಹುತೇಕ ರಾಜ್ಯಗಳಲ್ಲಿ ಸುಮಾರು 50 ಡಿಗ್ರಿ ಸೆಲ್ಸಿಯಸ್ ತಾಪಮಾನಕ್ಕೆ ಏರಿಕೆಯಾಗಿದೆ ಏರುತ್ತಿರುವ ಬಿಸಿಲಿನ ತಾಪಕ್ಕೆ ಜನ ತತ್ತರಗೊಂಡಿದ್ದಾರೆ ಸಾವು ನೋವುಗಳಿಗೆ ಕಾರಣವಾಗುತ್ತಿದೆ ಬಿಸಿಲ ಧಗೆ.ಭಾರತೀಯ ಹವಾಮಾನ ಇಲಾಖೆ ಹಲವು ಭಾಗಗಳಿಗೆ ರೆಡ್ ಅಲರ್ಟ್ ಘೋಷಿಸಿದೆ.
ಜೋತ್ಯಿಷ್ಯ ವಿಜ್ಞಾನದಲ್ಲೂ ಹಲವು ಬದಲಾವಣೆ
ಸೂರ್ಯ ನಕ್ಷತ್ರವನ್ನು ಬದಲಾವಣೆಯಿಂದ ಜೋತ್ಯಿಷ್ಯ ವಿಜ್ಞಾನದ ಪ್ರಕಾರ ಕೆಲವು ರಾಶಿಯವರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ ಎಂದು ಶಾಸ್ತ್ರತಜ್ಞರು ಹೇಳುತ್ತಾರೆ.ಮೇಷ,ಮಿಥುನ,ಸಿಂಹ,ಕನ್ಯಾ ಹಾಗು ಧನುಷ್ಯ ರಾಶಿಗಳವರಿಗೆ ಉತ್ತಮ ಫಲಿತಾಂಶ ಸಿಗಲಿದಿಯಂತೆ.
ಸುಟ್ಟುಕರಕಲಾದ ಬೈಕುಗಳು
ಈ ನಡುವೆ ತೆಲಂಗಾಣ ರಾಜ್ಯದ ಜಗಿತ್ಯಾಲ ಪಟ್ಟಣದಲ್ಲಿ ಬೈಕ್ ಮೆಕಾನಿಕ್ ಶೇಡ್ ನಲ್ಲಿದ್ದ ಇಪ್ಪತ್ತಕ್ಕೂ ಹೆಚ್ಚು ಬೈಕುಗಳು ಬಿಸಿಲ ತಾಪಕ್ಕೆ ಬೆಂಕಿಹೊತ್ತುಕೊಂಡು ಸುಟ್ಟುಕರಕಲಾಗಿವೆ.ಇಷ್ಟೆ ಅಲ್ಲದೆ ಬೆಂಕಿಯ ಜ್ವಾಲೆ ಪಕ್ಕದಲ್ಲೆ ಇದ್ದ ಮೆನೆಗೂ ವ್ಯಾಪಿಸಿ ಮನೆಯಲ್ಲಿದ್ದ ಸಾಮಾಗ್ರಿ ಪಿಠೋಪಕರಣಗಳು ಬೆಂಕಿಗೆ ಆಹುತಿಯಾಗಿದೆ.