- ತಮಿಳುನಾಡಿನಲ್ಲಿ ಬಿಜೆಪಿ ಗೆದ್ದಿರುವುದು ನಾಲ್ಕು ಸ್ಥಾನ
- ವೈ.ಎ.ಎನ್ ಉಸ್ತುವಾರಿಯಲ್ಲಿ ಮುಡಕುರುಚಿಯಲ್ಲಿ ಬಿಜೆಪಿ ಗೆಲವು
- ತಮಿಳುನಾಡು ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ಸಿ.ಟಿ.ರವಿ.
ನ್ಯೂಜ್ ಡೆಸ್ಕ್:-ತಮಿಳುನಾಡಿನ ಈರೋಡ್ ಜಿಲ್ಲೆಯ ಮುಡಕುರುಚಿ ವಿಧಾನ ಸಭಾ ಕ್ಷೇತ್ರದಲ್ಲಿ ಮೊನ್ನೆ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಬಿ.ಜೆ.ಪಿ ಗೆಲವು ಸಾಧಿಸಿದೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸಿ.ಕೆ.ಸರಸ್ವತಿ ಡಿಎಂಕೆ ಪಕ್ಷದ ಅಭ್ಯರ್ಥಿ ಮಾಚಿ ಸಚಿವೆ ಸುಬ್ಬುಲಕ್ಷ್ಮಿ ಜಗದಿಶನ್ ಅವರನ್ನು 281 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಈ ಕ್ಷೇತ್ರದಲ್ಲಿ ಕಳೆದ ಎರಡು ಬಾರಿಯೂ ಬಿಜೆಪಿ ಮಿತ್ರ ಪಕ್ಷವಾದ ಜಯಲಲಿತ ಪಕ್ಷ AIADIMK ಪಕ್ಷದ ಅಭ್ಯರ್ಥಿಗಳು ಗೆಲವು ಸಾಧಿಸಿಕೊಂಡು ಬರುತ್ತಿದ್ದು ಈ ಬಾರಿ ಇಲ್ಲಿನ ಹಾಲಿ ಶಾಸಕರಾಗಿದ್ದ ಶಿವ ಸುಭ್ರಮಣಿ BJPಗೆ ಕ್ಷೇತ್ರ ತ್ಯಾಗ ಮಾಡಿ ಬಿಜೆಪಿ ಅಭ್ಯರ್ಥಿ ಡಾ.ಸಿ.ಕೆ.ಸರಸ್ವತಿ ಅವರ ಗೆಲುವಿಗೆ ಸಹಕಾರ ನೀಡಿದ್ದಾರೆ.
ಬಿಜೆಪಿ ಅಭ್ಯರ್ಥಿಯಾಗಿ ಗೆಲವು ಸಾಧಿಸಿರುವ ಡಾ.ಸಿ.ಕೆ.ಸರಸ್ವತಿ ಈರೋಡ್ ನ ಸಿ.ಕೆ ಆಸ್ಪತ್ರೆ ಮುಖ್ಯಸ್ಥೆ ಅವರ ಪತಿ ಚಿನ್ನಸ್ವಾಮಿ ಸಹ ವೈದ್ಯರು.
ತಮಿಳುನಾಡಿನ ಚುನಾವಣೆಯಲ್ಲಿ ಬಿಜೆಪಿ ವತಿಯಿಂದ ಸ್ಪರ್ದಿಸಿದ್ದ ಘಟಾನು ಗಟಿಗಳೆ ಸೋತಿರುತ್ತಾರೆ ಅವರಲ್ಲಿ ಪ್ರಮುಖರು ತಮಿಳುನಾಡು ರಾಜ್ಯಾಧ್ಯಕ್ಷ ಮುರುಗನ್,ನಟಿ ಖುಷ್ಬುಸುಂದರ್, ಮಾಜಿ ಐ.ಪಿ.ಎಸ್.ಅಧಿಕಾರಿ ಅಣ್ಣಾಮಲೈ,ಹಲವರು ಸೋತಿರುತ್ತಾರೆ.
ವೈ.ಎ.ಎನ್ ಉಸ್ತುವಾರಿಯಲ್ಲಿ ಮುಡಕುರುಚಿಯಲ್ಲಿ ಬಿಜೆಪಿ ಗೆಲವು
ಈ ಕ್ಷೇತ್ರದ ಚುನಾವಣೆ ಉಸ್ತುವಾರಿಯಾಗಿ ವಿಧಾನಪರಿಷತ್ ಸದಸ್ಯ ವೈ.ಎ.ನಾರಯಣಸ್ವಾಮಿ ವಹಿಸಲಾಗಿತ್ತು ಅವರು ಚುನಾವಣೆ ಮುಗಿಯುವ ವರಿಗೂ ಬೆಂಗಳೂರಿನ ಹೆಬ್ಬಾಳದ BJPಪದಾಧಿಕಾರಿಗಳು ಕಾರ್ಯಕರ್ತರು ಹಾಗೇ ಶ್ರೀನಿವಾಸಪುರದ ಕಾರ್ಯಕರ್ತರ ತಂಡ ಕಟ್ಟಿಕೊಂಡು ಹೋಗಿ ಮುಡಕುರುಚಿ ವಿಧಾನ ಸಭಾ ಕ್ಷೇತ್ರದಲ್ಲಿ ಮೊಕ್ಕಾಂ ಹೂಡಿ ಬಿಜೆಪಿ ಅಭ್ಯರ್ಥಿ ಡಾ.ಸಿ.ಕೆ.ಸರಸ್ವತಿ ಅವರ ಗೆಲುವಿಗೆ ಶ್ರಮವಹಿಸಿರುತ್ತಾರೆ. ವೈ.ಎ.ನಾರಯಣಸ್ವಾಮಿ ಅವರೊಂದಿಗೆ ಹೆಬ್ಬಾಳದ ಬಿಜೆಪಿ ಮುಖಂಡ ಭೂಮಿ ಕನ್ಸಟ್ರಕ್ಷನ್ ಮುಖ್ಯಸ್ಥ ಮಧುಸೂದನ್ ರೆಡ್ಡಿ ಸಹ ಚುನಾವಣೆ ಕ್ಯಾಂಪಿನಿನಲ್ಲಿ ಪಾಲ್ಗೋಂಡಿದ್ದರು.
ಯೈ.ಎ.ಎನ್ ರಾಜಕೀಯ ಜೀವನದಲ್ಲಿ ಈ ಕ್ಷೇತ್ರದ ಗೆಲವು ಮೈಲಿಗಲ್ಲಾಗುತ್ತದೆ ಜೊತೆಗೆ ಅವರ ರಾಜಕೀಯ ಏಳ್ಗೆಗೆ ಮತ್ತಷ್ಟು ಸಹಕಾರಿ ಅಗುತ್ತದೆ ಎನ್ನುತ್ತಾರೆ ರಾಜಕೀಯ ಪಂಡಿತರು