ನ್ಯೂಜ್ ಡೆಸ್ಕ್:ಎರಡು ಬಾರಿ ಮೂಂದುಡಿದ್ದ ಬಿಜೆಪಿ ಜನೋತ್ಸವ ಸಮಾರಂಭ ಮೂರನೆ ಬಾರಿಗೆ ಜನಸ್ಪಂದನಯಾಗಿ ಯಶಸ್ವಿಯಾಗಿದೆ ಜೊತೆಗೆ ಯಶ್ಶಸ್ಸಿನ ಪೂರ್ತಿ ಕ್ರೆಡಿಟ್ ಆರೋಗ್ಯ ಸಚಿವ ಡಾ.ಸುಧಾಕರ್ ದಕ್ಕಿದೆ!
ಮೊದಲು ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯಿಂದಾಗಿ ಮೂಂದೂಡಲಾಯಿತು ಇದಾದ ನಂತರ ಎರಡನೇ ಬಾರಿಗೆ ಸಚಿವ ಉಮೇಶ್ ಕತ್ತಿ ನಿಧನದ ಹಿನ್ನಲೆಯಲ್ಲಿ ಮುಂದೂಡಲ್ಪಟ್ಟಿದ್ದ ಜನೋತ್ಸವ ಕಾರ್ಯಕ್ರಮಕ್ಕೆ ಹೆಸರು ಬದಲಿಸಿ ಜನಸ್ಪಂದನ ಎಂದು ನಾಮಕರಣ ಮಾಡಿ ಅಂತು ಇಂತು ಮೂರನೆ ಬಾರಿಗೆ ಕಾರ್ಯಕ್ರಮವನ್ನು ಸೆ 10 ರಂದು ಶನಿವಾರ ದೊಡ್ಡಬಳ್ಳಾಪುರದಲ್ಲಿ ಯಶಸ್ವಿಯಾಗಿ ಮುಗಿದಿದೆ.
ಇಡೀ ಕಾರ್ಯಕ್ರಮವನ್ನು ಹೆಗಲ ಮೇಲೆ ಹೊತ್ತು ಸಾಗಿದ್ದ ಸಚಿವ ಡಾ.ಸುಧಾಕರ್ ಅವರ ಸಂಘಟನಾ ಶಕ್ತಿಯನ್ನು ಕಣ್ಣಾರೆ ಕಂಡ ರಾಜ್ಯ ಬಿಜೆಪಿಯೇ ಅಲ್ಲ ಕೇಂದ್ರ ಮುಖಂಡರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮ ಸಾಂಗವಾಗಿ ನೆರವೇರಲು ಸಚಿವರು ಗಣಪತಿ ಹೋಮವನ್ನೂ ಸಹ ಮಾಡಿದ್ದರು.
ಎಲ್ಲಾ ಜವಾಬ್ದಾರಿ ಹೊತ್ತ ಬಾಹುಬಲಿ ಡಾ.ಸುಧಾಕರ್
ಹಳೇಯ ಮೈಸೂರು ಪ್ರಾಂತ್ಯವಾದ ಕೋಲಾರ ಚಿಕ್ಕಬಳ್ಳಾಪುರ ಭಾಗಗಳಲ್ಲಿ ಬಿಜೆಪಿಗೆ ಅಂತಹ ನೆಲಗಟ್ಟು ಇಲ್ಲ ಇಂತಹ ನೆಲದಲ್ಲಿ ಬಿಜೆಪಿಗೆ ಜನ ಸೇರಿಸುವುದು ದೊಡ್ಡ ಸವಲಾಗಿತ್ತು ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಡಾ.ಸುಧಾಕರ್ ಬಾಹುಬಲಿಯಂತೆ ಕಾರ್ಯಕ್ರಮದಲ್ಲಿ ಎಲ್ಲಿ ಯಡವಟ್ಟು ಆಗದಂತೆ ಎಚ್ಚರ ವಹಿಸಿ ಸುಮಾರು ಎಂಟು ಸಾವಿರ ಕಾರ್ಯಕರ್ತರನ್ನು ಜನ ಸಂಘಟನೆಗೆ ನಿಯೋಜಿಸಿ ಜನರನ್ನು ಕಾರ್ಯಕ್ರಮಕ್ಕೆ ಸೇರಿಸುವ ಮೂಲಕ ತಮ್ಮ ತಾಖತ್ತು ಏನು ಎಂಬುದನ್ನು ತಮ್ಮ ಪಕ್ಷದ ವರಿಷ್ಠರಿಗೆ ಮತ್ತು ವಿರೋಧ ಪಕ್ಷದವರಿಗೆ ತೋರಿಸಿದ್ದಾರೆ.
ಕಾರ್ಯಕ್ರಮಕ್ಕೆ ಒಂದಲ್ಲಾ ಒಂದು ವಿಘ್ನ ಎದುರಾಗುತ್ತ ಎರಡು ಬಾರಿ ಸಮಾವೇಶ ಮುಂದೂಡಿಕೆ ಆದರೂ ಎದೆ ಗುಂದದ ಸಚಿವ ಡಾ.ಸುಧಾಕರ್ ಛಲದಂಕ ಮಲ್ಲನಂತೆ ಎಲ್ಲಾ ಜವಾಬ್ದಾರಿಯ ಮುಂದಾಳತ್ವವನ್ನು ತಾವೆ ವಹಿಸಿಕೊಂಡು ಅಂದು ಕೊಂಡಿದ್ದಕ್ಕಿಂತ ಒಂದು ಪಟ್ಟು ಹೆಚ್ಚೇ ಎನ್ನುವಂತೆ ಕಾರ್ಯಕ್ರಮವನ್ನು ಆಯೋಜಿಸಿ ಅಂದುಕೊಂಡಿದ್ದನ್ನು ಸಾಧಿಸಿದ ಡಾ.ಸುಧಾಕರ್ ಎಲ್ಲರ ಮನಗೆಲ್ಲುವಲ್ಲಿ ಯಶಸ್ವಿಯಾದರು ಎಂದು ಬಿಜೆಪಿ ಪಡಸಾಲೆಯಲ್ಲೆ ಅಲ್ಲ ಸಂಘ ಪರಿವಾರದವರು ಭೇಷ್ ಎನ್ನುವಂತಾಗಿದೆ.
ಮುಂದಿನ ಚುನಾವಣೆಗೆ ಈ ಭಾಗದಲ್ಲಿ ಬಿಜೆಪಿಗೂ ಮತ ಬ್ಯಾಂಕ್ ಇದೆ ಎಂಬುದನ್ನು ಕಾರ್ಯಕ್ರಮದ ಮೂಲಕ ಈ ಭಾಗದ ಕಾಂಗ್ರೆಸ್ ಮುಖಂಡರಿಗೆ ತಮ್ಮ ಸಂಘಟನಾ ಶಕ್ತಿಯ ಝಲಕ್ ಅನ್ನು ಭರ್ಜರಿಯಾಗಿಯೇ ತೋರಿಸಿದ್ದಾರೆ.
ಸಿಎಂ ಬೊಮ್ಮಾಯಿ ಸೇರಿ ಎಲ್ಲರ ಶ್ಲಾಘನೆ
ಕಾರ್ಯಕ್ರವನ್ನು ಅಚ್ಚುಕಟ್ಟಾಗಿ ಆಯೋಜಿಸಿದ ಯಶಸ್ವಿಮಾಡಿದ ಡಾ.ಸುಧಾಕರ್ ಅವರ ಸಾಧನೆಯನ್ನು ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮನಸಾರೆ ಹೊಗಳಿದ್ದಾರೆ ಲಕ್ಷಾಂತರ ಜನರು ಸೇರಿದ್ದರಿಂದ ಊಟದ ವ್ಯವಸ್ಥೆ ಪಾರ್ಕಿಂಗ್ ವ್ಯವಸ್ಥೆ ಎಲ್ಲವನ್ನು ಪರಫೇಕ್ಟ್ ಆಗಿ ಎಲ್ಲೂ ಲೋಪವಾಗದಂತೆ ಎಲ್ಲಾ ರಿತಿಯಲ್ಲೂ ಸೈ ಎನಿಸಿಕೊಂಡಿರುವುದು ವಿಶೇಷ
ಬಿಜೆಪಿ ನಾಯಕರೇ ಬೇಸ್ತು
ಸಚಿವ ಡಾ.ಸುಧಾಕರ್ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾದ ಜನಸ್ಪಂದನಾ ಸಮಾವೇಶದ ಅಭೂತಪೂರ್ವ ಸಂಘಟನೆಗೆ ಬಿಜೆಪಿ ನಾಯಕರೇ ಬೇಸ್ತುಬಿದಿದ್ದಾರೆ ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಭಾಗದಲ್ಲಿ ಬಿಜೆಪಿಯ ವರ್ಚಸ್ಸನ್ನು ತಕ್ಕಮಟ್ಟಿಗೆ ಹೆಚ್ಚಿಸುವಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿದೆ. ಇದರ ಜೊತೆಗೆ ಈ ಭಾಗದಲ್ಲಿ ಡಾ.ಸುಧಾಕರ್ ಕೂಡಾ ತಮ್ಮ ವೈಯಕ್ತಿಕ ವರ್ಚಸ್ಸನ್ನು ಹೆಚ್ಚಿಸಿಕೊಂಡಿದ್ದಾರೆ. ಅವರಿಗೆ ಈ ಕಾರ್ಯಕ್ರಮ ಬೂಸ್ಟರ್ ಡೋಸ್ ನಿಡಿದಂತಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
ಜನೊತ್ಸವ ಕಾರ್ಯಕ್ರಮ ಆಯೋಜಿಸಿದ ಸಚಿವ ಡಾ.ಸುಧಾಕರ್ ಶತಾಯಗತಾಯ ಕಾರ್ಯಕ್ರಮ ನಡೆಸಿಯೇ ತೀರಬೇಕು ಎಂದು ವಿಧಾನ ಸಭಾ ಕ್ಷೇತ್ರಗಳಲ್ಲಿ ಪೂರ್ವಭಾವಿ ಸಭೆಗಳನ್ನು ನಡೆಸುವ ಸಲುವಾಗಿ ತಾವೇ ಮುಂದೆ ನಿಂತು ಮೂರು ಜಿಲ್ಲೆಗಳನ್ನು ಸುತ್ತಾಡಿ ಸ್ಥಳೀಯ ಮುಖಂಡರನ್ನು ಹುರಿದುಂಬಿಸಿ ಸಭೆಗಳನ್ನು ನಡೆಸಿದ್ದು ಗ್ರೇಟ್ ಎನ್ನುತ್ತಾರೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು.
ವಿಶೇಷ ವರದಿ:ಚ.ಶ್ರೀನಿವಾಸಮೂರ್ತಿ