ಶ್ರೀನಿವಾಸಪುರ: ರೈತರು ಬೆಳೆದಂತ ಫಸಲು ಕೊಯ್ಲು ಮಾಡಲು ಅವಕಾಶ ನೀಡದೆ ರೈತರನ್ನು ವಿಶ್ವಾಸಕ್ಕೂ ತಗೆದುಕೊಳ್ಳದೆ ಜೆಸಿಬಿಗಳ ಮೂಲಕ ರಾತ್ರೋರಾತ್ರಿ ಬೆಳೆ ನಾಶ ಪಡಿಸುವ ಅವಶ್ಯಕತೆ ಏನಿತ್ತು ಹೀಗೆ ನಡೆದುಕೊಳ್ಳಲು ಅರಣ್ಯ ಇಲಾಖೆಗೆ ಆದೇಶ ಕೊಟ್ಟವರು ಯಾರು?ಅರಣ್ಯ ಇಲಾಖೆ ವರ್ತನೆ ಖಂಡನೀಯ ಎಂದು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.
ಅವರು ಶನಿವಾರ ಸಂಜೆ ತಾಲೂಕಿನ ಕೇತಗಾನಹಳ್ಳಿ ಗ್ರಾಮದ ಬಳಿ ಇತ್ತಿಚಿಗೆ ಅರಣ್ಯ ಇಲಾಖೆ ತೆರವು ಮಾಡಲಾದ ಪ್ರದೇಶಗಳಲ್ಲಿ ಸಂಚರಿಸಿ ರೈತರ ಅಹವಾಲು ಸ್ವೀಕರಿಸಿ ಮಾತನಾಡಿದರು. ಅಧಿಕಾರದಲ್ಲಿ ಯಾರೆ ಇರಲಿ ರೈತರ ಹಿತ ಕಾಪಾಡುವುದು ಮೊದಲ ಕರ್ತವ್ಯ ಸಮಸ್ಯೆಗಳು ಬಂದಾಗ ರೈತರೊಂದಿಗೆ ಮಾತುಕತೆ ನಡೆಸಬೇಕಿತ್ತು ಇದನ್ನು ಬಿಟ್ಟು ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದು ಸರಿಯಲ್ಲ, ಈ ನಿಟ್ಟಿನಲ್ಲಿ ಸರ್ಕಾರವು ಬೆಳೆ ನಷ್ಟ ಪರಿಹಾರವನ್ನು ಕೊಡಬೇಕು. ರೈತರ ಹಾಗು ಸಂಸದರ ಮೇಲೆ ಕೇಸು ದಾಖಲಿಸಿರುವುದನ್ನ ಹಿಂಪಡೆಯಬೇಕು. ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ರಾಜ್ಯ ಕಾಂಗ್ರೇಸ್ ಸರ್ಕಾರದ ವಿರುದ್ಧ ಉಗ್ರವಾದ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ದರಖಾಸ್ತು ಕಮೀಟಿ ನೀಡಿರುವ ಸಾಗುವಳಿ ಚೀಟಿ ಇದೆ ಸಂಸದ ಮುನಿಸ್ವಾಮಿ
ಸಂಸದ ಮುನಿಸ್ವಾಮಿ ಮಾತನಾಡಿ ಕಂದಾಯ ಇಲಾಖೆಯ ದರಖಾಸ್ತು ಕಮೀಟಿ ನೀಡಿರುವ ಸಾಗುವಳಿ ಚೀಟಿ ಅಧಾರದ ಮೇಲೆ ರೈತರು ಪಹಣಿ ಮುಂತಾದ ದಾಖಲೆಗಳನ್ನು ಹೊಂದಿರುತ್ತಾರೆ ಅದರಂತೆ ಅವರ ತಾತ,ಮುತ್ತಾನ ಕಾಲದಿಂದಲೂ ಉಳಿಮೆ ಮಾಡಿ ವ್ಯವಸಾಯ ಮಾಡುತ್ತ ದೇಶದ ಜನಕ್ಕೆ ತರಕಾರಿ ಸೇರಿದಂತೆ ಹಲವಾರು ಬೆಳೆಗಳನ್ನು ಬೆಳೆಯುವಂತ ಕೆಲಸ ಮಾಡುತ್ತಿದ್ದಾರೆ ಇಂತವರ ಮೇಲೆ ದಬ್ಬಾಳಿಕೆ ದೌರ್ಜನ್ಯ ನಡೆಸುತ್ತಿರುವುದು ಖಂಡನೀಯ. ಈ ರೀತಿಯಾಗಿ ಅನ್ನದಾತರ ಮೇಲೆ ದಬ್ಬಾಳಿಕೆ ನಡೆಸಿದರೆ ಸಿದ್ದರಾಮಯ್ಯ ಸರ್ಕಾರಕ್ಕೆ ಉಳಿಗಾಲವಿಲ್ಲ ಅನ್ನದಾತರ ಮೇಲೆ ದೌರ್ಜನ್ಯ ಮಾಡುವುದು ಸರಿಯಲ್ಲ.ರೈತರಿಗೆ ನ್ಯಾಯ ದೊರಕಿಸುವ ನಿಟ್ಟನಲ್ಲಿ ರೈತರ ಪರವಾಗಿ ಜೈಲು ವಾಸ ಅನುಭವಿಸಲು ಹಾಗು ಪ್ರಾಣ ತ್ಯಾಗಕ್ಕೂ ಸಿದ್ದನಿದ್ದೇನೆ,ಮುಂದಿನ ದಿನಗಳಲ್ಲಿ ರೈತರ ಪರವಾಗಿ ಬಿಜೆಪಿ ಪಕ್ಷದವತಿಯಿಂದ ಕಾನೂನು ರೀತ್ಯ ಹೋರಾಟಕ್ಕೆ ರೂಪರೇಷಗಳನ್ನು ಹಮ್ಮಿಕೊಂಡು ಹೋರಾಟ ಮಾಡಲಾಗುವುದು ರೈತರಿಗೆ ನ್ಯಾಯ ಸಿಗುವವರೆಗೂ ಸುಮ್ಮನೆ ಕೂರುವುದಿಲ್ಲ ಒಗ್ಗಟ್ಟಿನಿಂದ ಹೋರಾಟ ಮಾಡೋಣ ಎಂದು ರೈತರಿಗೆ ಕರೆ ಇತ್ತರು.
ಈ ಸಂದರ್ಭದಲ್ಲಿ ಎಂಎಲ್ಸಿ ಗಳಾದ ರವಿಕುಮಾರ್ ಹಾಗು ಕೇಶವಮೂರ್ತಿ, ಬಿಜೆಪಿ ಜಿಲ್ಲಾದ್ಯಕ್ಷ ಡಾ|| ಕೆ.ಎನ್ ವೇಣುಗೋಪಾಲ್, ಬಂಗಾರಪೇಟೆ ಚಂದ್ರಾರೆಡ್ಡಿ,ಮುಖಂಡರಾದ ರೋಣೂರು ಚಂದ್ರಶೇಖರ್, ತೇತಗಾನಹಳ್ಳಿ ರಾಧಕೃಷ್ಣಾ, ಹಲವಾರು ಮುಖಂಡರು ಇದ್ದರು.
ವರದಿ:ಕೇತಗಾನಹಳ್ಳಿ ಸೋಮು