- ಪ್ರಧಾನಿಗೆ ಬದ್ರತೆ ಒದಗಿಸಲು ಪಂಜಾಬ್ ಸರ್ಕಾರ ವಿಫಲ
- ಪಂಜಾಬ್ ಸರ್ಕಾರ ವಜಾ ಗೊಳಿಸಿ ಪ್ರತಿಭಟಿಸಿದ ಬಿಜೆಪಿ
- ಪ್ರತಿಭಟನೆ ವೇಳೆ ಕೋವಿಡ್ ನಿಯಮ ಉಲ್ಲಂಘಿಸಿದ ಬಿಜೆಪಿ!
- ಘಟನೆ ನಡೆದ ಹಲವು ದಿನಗಳ ನಂತರ ಪ್ರತಿಭಟಿಸಿದ ಬಿಜೆಪಿ
ಶ್ರೀನಿವಾಸಪುರ: ದೇಶದ ಪ್ರಧಾನಿ ಮೋದಿಯವರಿಗೆ ಬದ್ರತೆ ಕಲ್ಪಿಸುವಲ್ಲಿ ವಿಫಲರಾಗಿರುವ ಪಂಜಾಬ್ ನಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಕೂಡಲೆ ವಜಾ ಮಾಡಬೇಕು ಎಂದು ಬಿಜೆಪಿ ಅಗ್ರಹಿಸಿತು. ಪಂಜಾಬ್ ಕಾಂಗ್ರೆಸ್ ಸರ್ಕಾರದ ವಿರುದ್ದ ತಾಲೂಕು ಭಾರತೀಯ ಜನತಾ ಪಕ್ಷದ ಮುಖಂಡರು ಘೋಷಣೆಗಳನ್ನು ಕೂಗುತ್ತ ಪ್ರತಿಭಟನೆ ನಡೆಸಿದರು.
ತಾಲೂಕು ಅಧ್ಯಕ್ಷ ಅಶೋಕ್ ರೆಡ್ಡಿ ನೇತೃತ್ವದಲ್ಲಿ ತಹಶೀಲ್ದಾರ್ ಮೂಲಕ ರಾಷ್ಟಪತಿಗಳಿಗೆ ಮನವಿ ಪತ್ರ ನೀಡಿ ಮಾತನಾಡಿ ಅವರು ದೇಶದ ಪ್ರಧಾನಿಗೆ ಬದ್ರತೆ ಕಲ್ಪಿಸಲಾಗದ ಪಂಜಾಬ್ ನಲ್ಲಿರುವ ಆಡಳಿತಾರೂಡ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಮುಂದುವರಿಯಬಾರದು ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಡಿಜಿಪಿ ಸೇರಿ ಪೋಲಿಸ್ ಅಧಿಕಾರಿಗಳನ್ನು ಸೇವೆಯಿಂದ ವಜಾ ಗೋಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಜಯರಾಮರೆಡ್ಡಿ, ಕೊಟ್ರಗೂಳಿನಾರಯಣಸ್ವಾಮಿ, ರಮೇಶ್ ರೆಡ್ಡಿ, ಶಿವಶಂಕರಗೌಡ ಯಲ್ದೂರು ಪದ್ಮನಾಭ್,ಷಫಿ,ಬೈರೆಡ್ಡಿ ಮುಂತಾದವರು ಇದ್ದರು.
ಕೋವಿಡ್ ನಿಯಮ ಉಲ್ಲಂಘನೆ
ಆಡಳಿರೂಡ ಬಿಜೆಪಿ ಪಕ್ಷದ ಮುಖಂಡರು ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಹುತೇಕ ಬಿಜೆಪಿ ಮುಖಂಡರು ಮಾಸ್ಕ್ ಧರಿಸದೆ, ಅಂತರ ಕಾಪಾಡದೆ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದರು.