ನ್ಯೂಜ್ ಡೆಸ್ಕ್:- ಕೊರೋನಾ ಸೋಂಕಿತರನ್ನು ಬೆಂಬಿಡದೆ ಕಾಡುತ್ತಿರುವ ಅಪಾಯಕಾರಿ ಬ್ಲಾಕ್ ಫಂಗಸ್ ಅಥವಾ ಮ್ಯೂಕರ್ ಮೈಕೋಸಿಸ್ ರೋಗ ಕೋಲಾರ ಜಿಲ್ಲೆಗೂ ವಕ್ಕರಿಸಿದೆ ಇಂದು ಒಂದೇ ದಿನ 12 ಮಂದಿಗೆ ರೋಗ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ.
ಬ್ಲಾಕ್ ಫಂಗಸ್ ಸೋಂಕು ಪತ್ತೆಯಾದ,12 ಜನರ ಪೈಕಿ ಏಳು ಜನರಿಗೆ ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಕೊರೋನಾ ಸೋಂಕಿತರಾಗಿ ಚಿಕಿತ್ಸೆ ಮಡೆದು ಗುಣಮುಖರಾದ 12 ಮಂದಿಗೆ ಬ್ಲಾಕ್ ಫಂಗಸ್ ರೋಗದ ಲಕ್ಷಣ ಗೋಚರವಾಗಿದೆ ಇವರಲ್ಲಿ ಮೂರು ರೋಗಿಗಳಿಗೆ ಮಾತ್ರ ಆಪರೇಷನ್ ಮಾಡಿ ಚಿಕಿತ್ಸೆ ನೀಡಲಾಗಿದೆ.
ಉಳಿದವರಿಗೆ ಚಿಕಿತ್ಸೆ ನೀಡಲು ಆಂಪೋರಿಯೋಸಿಸ್ ಬಿ ಇಂಜೆಕ್ಷನ್ ಸಿಗದ ಹಿನ್ನೆಲೆ ತುರ್ತು ಚಿಕಿತ್ಸೆಗೆ ಸಮಸ್ಯೆಯಾಗಿದೆ. ಆಂಪೋರಿಯೋಸಿಸ್ ಬಿ ಇಂಜೆಕ್ಷನ್ ಹೈದರಾಬಾದ್ ನಿಂದ ತರಿಸಬೇಕಿದೆ ಎನ್ನಲಾಗಿದೆ.
ಬ್ಲಾಕ್ ಫಂಗಸ್ ಚಿಕಿತ್ಸೆಗೆ ಮೂರು ನಾಲ್ಕು ಶಸ್ತ್ರಚಿಕಿತ್ಸೆ ಮಾಡಬೇಕಾದ ಅಗತ್ಯ ಇದ್ಧು ಜಿಲ್ಲೆಯ ವೈದ್ಯರು ಲಭ್ಯವಿರುವ ಸೌಲಭ್ಯಗಳಲ್ಲೇ ಚಿಕಿತ್ಸೆಯನ್ನು ನೀಡುತ್ತಿದ್ದಾರೆ ಎಂದು ಜಿಲ್ಲಾ ಕೊರೊನಾ ನೋಡಲ್ ಅಧಿಕಾರಿ ಡಾ.ಚಾರಿಣಿ ಹೇಳಿದ್ದಾರೆ.
ಕೋವಿಡ್ ಸೋಂಕಿನಿಂದ ಗುಣಮುಖರಾದ ಮೇಲೂ ಈ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.
- ಮುಖದ ಒಂದೇ ಭಾಗದಲ್ಲಿ ನೋವು
- ಕಣ್ಣುಗಳಲ್ಲಿ ಊತ/ನೋವು
- ಮೂಗಿನಲ್ಲಿ ಗಾಳಿಯಾಡದಿರುವಿಕೆ
- ಮೂಗಿನಲ್ಲಿ ರಕ್ತ ಸೋರಿಕೆ
- ಹಲ್ಲುಗಳು ಸಡಿಲಗೊಳ್ಳುವುದು
- ಬಾಯಿಯ ಮೇಲ್ಭಾಗದಲ್ಲಿ ಕಪ್ಪು ಅಥವಾ ಕಂದುಬಣ್ಣದ ಕಂಡುಬಂದರೆ
- ಕಣ್ಣಿನ ದೃಷ್ಟಿಯಲ್ಲಿ ಬದಲಾವಣೆ
ಆದಾಗ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಬ್ಯಾಕ್ ಫಂಗಸ್ ಅಥವಾ ಮ್ಯುಕೋರ್ಮಯೋಸಿಸ್ ಸೋಂಕಿನ ಬಗ್ಗೆ ಖಾತರಿಪಡಿಸಿಕೊಳ್ಳಬೇಕು ಎಂದು ಖ್ಯಾತ ವೈದ್ಯರಾದ ದೀಪಕ್ ಹಲ್ದೀಪುರ್ ತಿಳಿಸಿದ್ದಾರೆ.
ಯಾರಲ್ಲಿ ನಿಯಂತ್ರಣಕ್ಕೆ ಬಾರದ ಮಧುಮೇಹ ಸಮಸ್ಯೆ ಇದೆಯೋ, ಯಾರು ತುಂಬಾ ಸಮಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೋ ಅಂಥ ಕೊರೊನಾ ಸೋಂಕಿತರಲ್ಲಿ ಬ್ಲ್ಯಾಕ್ ಫಂಗಸ್ ಅಥವಾ ಮ್ಯೂಕೋರ್ಮೈಕೋಸಿಸ್ ಕಂಡು ಬರುತ್ತಿದ್ದು ಇದಕ್ಕೆ ಸೂಕ್ತ ಚಿಕಿತ್ಸೆ ಸಿಗದಿದ್ದರೆ ಮಾರಣಾಂತಿಕವಾಗಬಹುದು ಎಂದು ಕೇಂದ್ರ ಆರೋಗ್ಯ ಇಲಾಖೆ ಸೂಚಿಸಿದೆ. ಈ ರೀತಿಯ ಸಮಸ್ಯೆ ಯಾರು ಗಂಭೀರ ಕಾಯಿಲೆ ಉಂಟಾಗಿ ವಾಯುವಲ್ಲಿನ ರೋಗಕಾರಕ ವಿರುದ್ಧ ಹೋರಾಡುವ ಸಾಮರ್ಥ್ಯ ಕಳೆದುಕೊಂಡಿರುತ್ತಾರೋ ಅವರಲ್ಲಿ ಕಂಡು ಬರುತ್ತಿದೆ.
“ಸಕ್ಕರೆ ಕಾಯಿಲೆ ಇರುವವರಲ್ಲಿ ಮಾತ್ರ ಕಂಡುಬರುತ್ತಿದ್ದ ಅಪರೂಪದ ಸೋಂಕು ‘ಬ್ಲ್ಯಾಕ್ ಫಂಗಸ್’ (ಮುಕರ್ಮೈಕೊಸಿಸ್) , ಕೊರೊನಾ ಎರಡನೇ ಅಲೆಯ ಆರ್ಭಟದ ಜತೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಸೋಂಕಿತರಲ್ಲಿ ಫಂಗಸ್ ಸೋಂಕು ಹರಡುವ ಮೂಲಕ ದೃಷ್ಟಿದೋಷದ ಅಪಾಯ ಎದುರಾಗಿದೆ. ಇದಕ್ಕೆಲ್ಲ ಸೋಂಕಿತರಿಗೆ ಚಿಕಿತ್ಸೆ ವೇಳೆ ಸ್ಟಿರಾಯ್ಡ್ಗಳನ್ನು ತಪ್ಪಾದ ರೀತಿಯಲ್ಲಿ ಬಳಸಲಾಗಿರುವುದು ಪ್ರಮುಖ ಕಾರಣ,” ಎಂದು ದಿಲ್ಲಿಯ ಏಮ್ಸ್ ಮುಖ್ಯಸ್ಥ ಡಾ. ರಣದೀಪ್ ಗುಲೇರಿಯಾ ಹೇಳಿದ್ದಾರೆ.