- ತಿರುಮಲ ನಡಿಗೆದಾರಿಯಲ್ಲಿ ಅನಿರೀಕ್ಷಿತ ಘಟನೆ
- ಚಿರತೆ ದಾಳಿ ಮಾಡಿ ಬಾಲಕನನ್ನು ಹೊತ್ತೊಯ್ದಿದ ಘಟನೆ
- ಯಾವುದೆ ಪ್ರಾಣಪಾಯ ಇಲ್ಲದೆ ಪಾರಾದ ಬಾಲಕ .
ನ್ಯೂಜ್ ಡೆಸ್ಕ್:ಚಿರತೆ ದಾಳಿಗೆ ಮಗು ಸಿಲುಕಿ ಪವಾಡಸದೃಶ ರೀತಿಯಲ್ಲಿ ಪಾರಾಗಿರುವ ಘಟನೆ ತಿರುಮಲ ಮೆಟ್ಟಿಲು ದಾರಿಯಲ್ಲಿ ನಡದಿದೆ. ಮೂರ್ನಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿದ್ದು ಐದು ವರ್ಷದ ಬಾಲಕನ ಮೇಲೆ ಚಿರತೆ ದಾಳಿ ಮಾಡಿ ಮಗುವಿನ ಪೋಷಕರ ಮುಂದೆ ನೊಡು ನೊಡುತ್ತಿದ್ದಂತೆ ಮಗುವನ್ನು ಬಾಯಲ್ಲಿ ಕಚ್ಚಿಕೊಂಡು ಹೋಗಿದೆ ಈ ಸಂದರ್ಭದಲ್ಲಿ ಮಗವಿನ ಪೋಷಕರು ನೆರದಿದ್ದ ಭಕ್ತರ ಕಿರುಚಾಟ ಕಂಡ ಬಂದೋಬಸ್ತು ಡ್ಯೂಟಿಯಲ್ಲಿದ್ದ ಪೊಲೀಸರು ಚಿರತೆ ಹೋದ ದಿಕ್ಕಿನಲ್ಲಿ ಧೈರ್ಯವಾಗಿ ದೊಡ್ಡದಾಗಿ ಅರಚುತ್ತ ಚಿರತೆಯನ್ನು ಬೆನ್ನಟ್ಟಿದ್ದಾರೆ ಇದರಿಂದ ಗಲಿಬಿಲಿ ಗೊಂಡ ಚಿರತೆ ಬಾಲಕನನ್ನು ಬಿಟ್ಟು ಕಾಡಿನೊಳಗೆ ಓಡಿ ಹೋಗಿದೆ ರಕ್ತದ ಮಡುವಿನಲ್ಲಿದ್ದ ಬಾಲಕನನ್ನು ತಿರುಮಲ-ತಿರುಪತಿ ದೇವಸ್ಥಾನದ ಪದ್ಮಾವತಿ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಬಾಲಕ ಕೌಶಿಕ್ ಗೆ ಯಾವುದೇ ಪ್ರಾಣಾಪಯ ಆಗಿಲ್ಲ ಎಂದು ಟಿಟಿಡಿ ಇಒ ಧರ್ಮ ರೆಡ್ಡಿ ತಿಳಿಸಿದ್ದಾರೆ.
ಸುಮಾರು ರಾತ್ರಿ 9 ಗಂಟೆ ಸಮಯದಲ್ಲಿ ನಡೆದಿರುವ ಘಟನೆಯಾಗಿದ್ದು ಆದೋನಿಯ ಕುಟುಂಬವೊಂದು ಪಾದಯಾತ್ರೆ ಮೂಲಕ ತಿರುಮಲ ಬೆಟ್ಟಕ್ಕೆ ಆಗಮಿಸಿದ್ದು ಏಳನೇ ಮೈಲಿನ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ತಾವು ತಂದಿದ್ದ ಊಟದ ಬುತ್ತಿ ಬಿಚ್ಚಿ ಊಟ ಮಾಡುತ್ತಿರುವಾಗ ಅವರೊಂದಿಗಿದ್ದ ಐದು ವರ್ಷದ ಬಾಲಕ ಕೌಶಿಕ್ ಕುರ್ಕುರೆ ತಿನ್ನುತ್ತ ಆಟವಾಡುತ್ತಾ ರಸ್ತೆಗೆ ಹೋಗಿದ್ದಾನೆ.ಅಷ್ಟರಲ್ಲಿ ಏಕಾಏಕಿ ಚಿರತೆ ಬಂದು ಬಾಲಕನ ಮೇಲೆ ದಾಳಿ ಮಾಡಿದೆ. ಜನತೆ ನೋಡು ನೋಡುತ್ತಿದ್ದಂತೆ ಬಾಲಕನನ್ನು ಕಚ್ಚಿಕೊಂಡು ಹೋಗಿದೆ ಕುಟುಂಬಸ್ಥರು ಇತರರು ಅಳುತ್ತಿದ್ದರು ಜನರ ಅರಚಾಟ ಕಿರುಚಾಟ ಕೇಳಿದಾಗ ಅಲ್ಲೆ ಡ್ಯೂಟಿಯಲ್ಲಿದ್ದ ಟೂಟೌನ್ ಸಬ್ ಇನ್ಸಪೇಕ್ಟರ್ ರಮೇಶ್ ಮತ್ತು ಟಿಟಿಡಿ ಭದ್ರತಾ ಎಸ್ಎಸ್ಐ ಚಿರತೆ ಹೋಗಿದ್ದನ್ನು ನೋಡಿದ್ದಾರೆ. ಅವರು ಜೋರಾಗಿ ಅರಚುತ್ತಾ ಚಿರತೆ ಹೋದ ಕಡೆಗೆ ಓಡಿದ್ದಾರೆ ಅಲ್ಲಿದ್ದ ಇತರ ಕೆಲವು ಸಿಬ್ಬಂದಿಯೂ ಅವರನ್ನು ಹಿಂಬಾಲಿಸಿದ್ದಾರೆ ಭಕ್ತರೂ ಸಹ ಜೋತೆಗೂಡಿದ್ದಾರೆ ಜನರ ಆಬ್ಬರ ಕೇಳಿಸಿಕೊಂಡ ಚಿರತೆ ಬಾಲಕನನ್ನು ಹೊತ್ತಯಿದ ಜಾಗದಿಂದ 150 ಮೀಟರ್ ದೂರದಲ್ಲಿ ಬಾಲಕನನ್ನು ಬಿಟ್ಟು ಕಾಡಿನೊಳಗೆ ಓಡಿ ಹೋಗಿದೆ.
ಈ ಘಟನೆ ನಡೆಯುತ್ತಿದ್ದಂತೆ ಟಿಟಿಡಿ ಸಿಬ್ಬಂದಿ ಹಾಗು ಇಒ ಧರ್ಮಾ ರೆಡ್ಡಿ ಕೂಡಲೇ ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ ಕೂಡಲೆ ತಿರುಪತಿ ಬರ್ಡ್ಸ್ ಆಸ್ಪತ್ರೆಗೆ ದಾಖಲಿಸಿ ತತಕ್ಷಣ ಚಿಕಿತ್ಸೆ ಕೊಡಿಸಿದ್ದಾರೆ ಬಾಲಕನ ಬೆನ್ನುಮೂಳೆ ಹಾಗೂ ಇತರ ಯಾವುದೇ ಭಾಗಗಳಿಗೆ ಅಪಾಯವಿಲ್ಲ ಎಂದು ನರರೋಗ ತಜ್ಞರು ಹಾಗೂ ಇತರೆ ವೈದ್ಯರು ಬಾಲಕನನ್ನು ತಪಾಸಣೆ ಮಾಡಿ ದೃಡಕರಿಸಿರುವುದಾಗಿ ಮತ್ತು ಬಾಲಕ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಟಿಟಿಡಿ ಇಒ ಧರ್ಮ ರೆಡ್ಡಿ ತಿಳಿಸಿದ್ದಾರೆ.
ಪವಾಡ ಸದೃಶ ಭಗವಂತನ ಅನುಗ್ರಹ ಮಗು ಬದುಕುಳಿದಿದೆ!
ಸಾವು ಯಾವಾಗ ಯಾವ ರೂಪದಲ್ಲಿ ಹೇಗೆ ಬರುತ್ತದೆ ಎಂಬುದು ಯಾರು ಊಹಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ಸಾವಿಗೆ ಹತ್ತಿರ ಹೋದವರು ಪವಾಡಸದೃಶವಾಗಿ ಬದುಕುಳಿಯುತ್ತಾರೆ. ತಿರುಮಲದಲ್ಲಿ ನಡೆದ ಚಿರತೆ ದಾಳಿಯಲ್ಲಿ ಮೂರು ವರ್ಷದ ಬಾಲಕ ಕೌಶಿಕ್ ಮೇಲೆ ಚಿರತೆ ದಾಳಿ ಮಾಡಿ ಕಚ್ಚಿಕೊಂಡು ಹೋದರು ಜೀವಂತವಾಗಿ ಮರಳಿದ್ದಾನೆ, ಆರಂಭದಲ್ಲಿ ಎಸ್ಎಸ್ಐ ಮತ್ತು ಟಿಟಿಡಿ ಸಿಬ್ಬಂದಿಯ ಕಿರುಚಾಟದಿಂದ ಚಿರತೆ ಬಾಲಕನನ್ನು ಬಿಟ್ಟು ಹೋಗಿದೆ ಎನ್ನಲಾಗಿತ್ತಾದರೂ ಹುಡುಗನ ಸಂಬಂಧಿಕರ ಹೇಳುವಂತೆ ಸ್ವತಃ ಶ್ರೀ ಶ್ರೀನಿವಾಸನೆ ಬಂದು ಬಾಲಕನನ್ನು ಕಾಪಾಡಿದನಂತೆ ಇದನ್ನೆ ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಹೇಳುತ್ತಾರೆ.
ಆಂದ್ರಪ್ರದೇಶದ ಆದೋನಿಯ ಕುಟುಂಬ ಕಾಲ್ನಡಿಗೆಯಲ್ಲಿ ತಿರುಮಲಕ್ಕೆ ಹೊರಟಿದೆ,ಆರು ಮಂದಿಯ ಸದಸ್ಯರ ಗುಂಪು ರಾತ್ರಿ 9 ಗಂಟೆ ಸುಮಾರಿಗೆ ಎಳನೆ ಮೈಲಿ ಬಳಿಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸ್ವಲ್ಪ ಹೊತ್ತು ಕುಳಿತು ಊಟ ಮಾಡಿ ವಿಶ್ರಮಿಸಿಕೊಂಡಿದ್ದಾರೆ ಬಾಲಕ ಕೌಶಿಕ್ ಗೆ ಅವರ ತಾತಾ ಕುರುಕುರೆ ಕೊಡಿಸಿದ್ದಾರೆ ಇತ್ತ ಕುಟುಂಬದ ಸದಸ್ಯರು ವಿಶ್ರಾಂತಿ ಪಡೆಯುತ್ತಿದ್ದಾಗ ಬಾಲಕ ಕೌಶಿಕ್ ರಸ್ತೆ ಬದಿಯಲ್ಲಿ ನಿಂತು ಚಿಪ್ಸ್ ತಿನ್ನುತ್ತಿದ್ದ. ಅಷ್ಟರಲ್ಲಿ ಚಿರತೆಯೊಂದು ಏಕಾಏಕಿ ಬಂದು ಬಾಲಕನನ್ನು ಬಾಯಿಗೆ ಕಚ್ಚಿಕೊಂಡು ಹೊಗಿದೆ ಇದನ್ನು ಕಂಡಾರೆ ಕಂಡ ಬಾಲಕನ ಕುಟುಂಬಸ್ಥರು ಕೂಗಾಡುತ್ತಿದ್ದಾಗ ಭದ್ರತಾ ಸಿಬ್ಬಂದಿ ಮುಖ್ಯಸ್ಥ ಎಸ್.ಎಸ್.ರಮೇಶ್ ಜಾಗೃತರಾಗಿದ್ದಾರೆ ಜನರ ಕೂಗು ಅಲಿಸಿ ಜನರಿದ್ದ ಜಾಗಕ್ಕೆ ಬರುವಾಗ ಚಿರತೆ ಓಡಿ ಹೋಗುತ್ತಿರುವುದನ್ನು ನೋಡಿದ್ದಾರೆ ಅವರು ಸಹ ಕಿರುಚುತ್ತಾ ಚಿರತೆಯನ್ನು ಹಿಂಬಾಲಿದ್ದಾರೆ ಚಿರತೆ ಅದಾಗಲೇ ಬದ್ರತಾ ಗೋಡೆ ಹಾರಿ ಬಾಲಕನನ್ನು ಕಾಡಿಗೆ ಎಳೆದೊಯ್ದಿತ್ತು. ಕತ್ತಲಲ್ಲಿ ಕಣ್ಮರೆಯಾಗಿದೆ ಇದರಿಂದ ಅಧಿಕಾರಿಗಳು ಹಾಗೂ ಭಕ್ತರು ಕತ್ತಲಲ್ಲಿ ಅರಣ್ಯದೊಳಗೆ ಹೋಗಲು ಸಾಧ್ಯವಾಗದೆ ಅಲ್ಲೇ ತಡವರಿಸಿದ್ದಾರೆ ಬಾಲಕನ ಸಂಬಂಧಿಕರು ಅಕ್ರಂದನ ಮುಗಿಲು ಮುಟ್ಟಿದೆ ಅಸಯಕರಾಗಿ ಕುಸಿದು ಬಿದಿದ್ದಾರೆ ಭಯದಿಂದ ನಲುಗಿಹೋಗಿದ್ದಾರೆ.
ಅಷ್ಟರಲ್ಲಿ ಅನಿರೀಕ್ಷಿತ. ಎಂಬಂತೆ ದೂರದಲ್ಲಿ ಮಗು ಅಳುವ ಸದ್ದು ಕೇಳಿಸಿದೆ ಅಳು ಕೇಳಿ ಬಂದ ಜಾಗ ಹುಡುಕಿ ಭದ್ರತಾ ಸಿಬ್ಬಂದಿ ಇತರೆ ಜನರು ಹೋದಾಗ ಕಾರ್ಗತ್ತಲಿನಲ್ಲಿ ಸಣ್ಣ ಹಳ್ಳದಲ್ಲಿ ಬಿದಿದ್ದ ಮಗು ವಿನಮ್ರತೆಯಿಂದ ತಲೆಯೆತ್ತಿ ಸಹಾಯ ಕೇಳುವುದನ್ನು ಕಂಡಿದ್ದಾರೆ ಅಲ್ಲಿದ್ದ ಕೆಲವರು ತಕ್ಷಣ ಹಳ್ಳಕ್ಕೆ ಧುಮಿಕಿ ಬಾಲಕನನ್ನು ಎತ್ತಿಕೊಂಡು ಕರೆತಂದಿರುತ್ತಾರೆ.
ಮಗು ಪವಾಡ ಸದೃಶ್ಯ ವಾಪಸ್ಸು ಬಂದ ಪ್ರಶ್ನೆಗೆ ಯಾರ ಬಳಿ ಉತ್ತರ ಇಲ್ಲ ಇರುವ ಉತ್ತರ ಭಗವಂತನ ಅನುಗ್ರಹದಿಂದ ಮಾತ್ರ ಇದು ಸಾಧ್ಯವಾಗಿದೆ ಎಂಬುದಷ್ಟೆ ಹೇಳುತ್ತಾರೆ!
ಬಾಲಕನನ್ನು ಕಚ್ಚಿಕೊಂಡು ಹೋದ ಚಿರತೆ ಬಳಿಕ ಬಾಲಕನ್ನು ಬಿಟ್ಟಿದ್ದು ಹೇಗೆ? ಚಿರತೆ ಕತ್ತಲೆಯಲ್ಲಿ ಅರಣ್ಯ ಪ್ರದೇಶದ ಭದ್ರತಾ ಗೋಡೆ ಹಾರುವಾಗ ಮಗುವನ್ನು ಬಿಟ್ಟಿತಾ! ಕಾಡುಪ್ರಾಣಿ ದಾಳಿ ಮಾಡಿದರು ಸಣ್ಣಪುಟ್ಟ ಗಾಯಗಳಾಗಿದೆ ಹೊರತು ದೊಡ್ಡ ಶಸ್ತ್ರಚಿಕಿತ್ಸೆಗಳಿಲ್ಲದೆ ಬಾಲಕ ಬದುಕಿದ್ದಾರು ಹೇಗೆ? ಈ ಬಗ್ಗೆ ಭಕ್ತರು ಕೇಳುತ್ತಿರುವ ಪ್ರಶ್ನೆಗಳಿವು. ಇವುಗಳಿಗೆ ಉತ್ತರ ಸಿಕ್ಕರೆ ಒಳ್ಳೆಯದಲ್ಲವೆ! ಮಗು ಮರಳಿ ಸಿಕ್ಕಿದ್ದಕ್ಕೆ ಬಾಲಕನ ಪೋಷಕರು ಇದು ವೆಂಕಟೇಶನ ಮಹಿಮೆಯೆ ಎಂದು ಆನಂದ ಭಾಷ್ಪ ಸುರಿಸುತ್ತಾರೆ.
ಆದರೆ ಕೆಲವರು ವಾದಿಸುವಂತೆ ಇದೇನೂ ಪವಾಡವಲ್ಲ ಮಗುವನ್ನು ಹೊತ್ತೋಯಿದ ಚಿರತೆ ಕೇವಲ ಒಂದೂವರೆ ವರ್ಷದ್ದಾಗಿದ್ದು ಗೋಡೆ ಹಾರುವಾಗ ಹುಡುಗನ ಭಾರವನ್ನು ತಾಳಲಾರದೆ ಬಾಯಿ ತೆರೆದಾಗ ಮಗುವನ್ನು ನೆಲಕ್ಕೆ ಬಿಟ್ಟಿರಬಹುದು ಎಂದು ಹೇಳುತ್ತಾರೆ.
ಚಿಕಿತ್ಸೆ ಪಡೆಯುತ್ತಿರುವ ಬಾಲಕನನ್ನು ಡಿಸ್ಚಾರ್ಜ್ ಮಾಡಿದ ನಂತರ ಅವರ ಕುಟುಂಬವನ್ನು ಟಿಟಿಡಿ ವಾಹನದಲ್ಲಿ ತಿರುಮಲಕ್ಕೆ ಕರೆದೊಯ್ದು ದೇವರ ದರ್ಶನ ಮಾಡಿಸಿ ಅವರ ಸ್ವಂತ ಊರು ಆದೋನಿಯಲ್ಲಿರುವ ಅವರ ಮನೆಗೆ ಬಿಡಲಾಗುವುದು ಎಂದು ಟಿಟಿಡಿ ಅಧ್ಯಕ್ಷರು ಭರವಸೆ ನೀಡಿದ್ದಾರೆ.
ಈ ಹಿಂದೆಯೂ ತಿರುಮಲದಲ್ಲಿ ಮಗುವಿನ ಮೇಲೆ ಚಿರತೆ ದಾಳಿ ನಡೆಸಿತ್ತಂತೆ
ತಿರುಮಲದಲ್ಲಿ ಚಿರತೆಗಳು ಓಡಾಡುತ್ತಿರುವ ಘಟನೆಗಳು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತವೆ. ಈ ಘಟನೆಗಳು ಹೆಚ್ಚಾಗಿ ರಾತ್ರಿಯಲ್ಲಿ ನಡೆಯುತ್ತವೆ. 2008ರಲ್ಲಿ ತಿರುಮಲ ಪಾದಚಾರಿ ಮಾರ್ಗದಲ್ಲಿ ಚಿರತೆಯೊಂದು ಮಗುವಿನ ಮೇಲೆ ದಾಳಿ ನಡೆಸಿತ್ತು. ಆ ಬಳಿಕ ಟಿಟಿಡಿ ನಡಿಗೆ ಮಾರ್ಗದಲ್ಲಿ ವಿಶೇಷ ಕ್ರಮ ಕೈಗೊಂಡು ಭದ್ರತೆ ವ್ಯವಸ್ಥೆ ಬಿಗಿಗೊಳಿಸಿದ್ದರು ಕಾಡು ಪ್ರಾಣಿಗಳು ಓಡಾಡುವ ಸ್ಥಳಗಳಲ್ಲಿ ರಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು ಕತ್ತಲಾದ ನಂತರ ಭಕ್ತರು ಇಂತಹ ನಿರ್ಜನ ಸ್ಥಳಗಳಲ್ಲಿ ಜಾಗರೂಕರಾಗಿರಬೇಕು ಎಂದು ಟಿಟಿಡಿ ಅಧಿಕಾರಿಗಳು ಸೂಚಿಸುತ್ತಾರೆ.
ಘಟನೆ ನಡೆದ ನಂತರ ಭದ್ರತಾ ವ್ಯವಸ್ಥೆ ಮತ್ತಷ್ಟು ಬಿಗಿ ಗೋಳಿಸಿರುವ ಟಿಟಿಡಿ ಅಧಿಕಾರಿಗಳು ಎಂದಿನಂತೆ ಪಾದಯಾತ್ರೆಯಲ್ಲಿ ತೆರಳುವ ಭಕ್ತರಿಗೆ ಅವಕಾಶ ಕಲ್ಪಿಸಿದ್ದಾರೆ ಆದರೂ ಭಕ್ತರನ್ನು ಗುಂಪುಗಳನ್ನಾಗಿ ಮಾಡಿ ಕಳುಹಿಸಲಾಗುತ್ತಿದೆ ಎಂದು ಹೇಳಲಾಗಿದೆ.