ಸ್ವಾತ್ಯಂತ್ರ ಪೂರ್ವದಲ್ಲಿ ಬ್ರಿಟಿಷರ ಆಳಿಕೆಯಲ್ಲಿ ನಿರ್ಮಾಣವಾದ ಕಟ್ಟಡ
ಆಡಳಿತ ವ್ಯವಸ್ಥೆಯ ಸಂಪೂರ್ಣ ನಿರ್ಲಕ್ಷ್ಯ ಪಾಳು ಬಿಳುತ್ತಿದೆ
ಸ್ವಚ್ಚತೆ ಸಂರಕ್ಷಣೆ ಇಲ್ಲದೆ ಕುಸಿಯುತ್ತಿರುವ ಐತಿಹಾಸಿಕ ಕಟ್ಟಡ
ಕಟ್ಟಡ ದುರಸ್ಥಿಯಾದರೆ ಇಲಾಖೆಗಳಿಗೆ ಆಶ್ರಯ ಸಿಗುತ್ತದೆ
ಕಟ್ಟಡ ಉಳಿದರೆ ಮುಂದಿನ ಪೀಳಿಗೆಗೆ ಸ್ಮಾರಕವಾಗಿ ಉಳಿಯುತ್ತದೆ.
ಶ್ರೀನಿವಾಸಪುರ:-ಪ್ರಪಂಚ ಪ್ರಸಿದ್ದ ಮಾವಿನ ನಗರಿ ಶ್ರೀನಿವಾಸಪುರದ ಐತಿಹಾಸಿಕ ಹಳೇ ತಾಲೂಕು ಕಚೇರಿಯಲ್ಲಿದ್ದ ಟ್ರಜರಿ ಆಫಿಸ್ ಕೊಠಡಿ ಇವತ್ತು ಪಬ್ಲಿಕ್ ಟಾಯಿಲೆಟ್(ಸಾರ್ವಜನಿಕರ ಮೂತ್ರಾಲಯ) ಆಗಿದೆ ಸ್ವಾತಂತ್ರ್ಯ ಪೂರ್ವದಲ್ಲಿ ಅಂದಾಜು 1920 ಬ್ರಿಟಿಶ್ ಆಳ್ವಿಕೆಯಲ್ಲಿ ನಿರ್ಮಾಣವಾಗಿದ್ದ ವಿಶೇಷ ವಿನ್ಯಾಸದ ವಿಶಾಲವಾದ ಹೆಂಚಿನ ಕಟ್ಟಡದಲ್ಲಿ ಎರಡು ಹಾಲ್ ಗಳು ಎತೇಚ್ಚವಾಗಿ ಕಟ್ಟಡದ ಒಳಗೆ ಬೆಳಕು ಬರುವಂತೆ ವಿನ್ಯಾಸಮಾಡಲಾದ ಕಿಟಕಿಗಳು ಇವೆ,ಈ ಕಟ್ಟಡದ ಈಶಾನ್ಯ ದಿಕ್ಕಿನಲ್ಲಿ ಟ್ರಜರಿ ಆಫಿಸ್ ಇತ್ತು ಹಾಗು ತಹಶೀಲ್ದಾರ್ ಕಚೇರಿ ಸೇರಿದಂತೆ ಹಲವಾರು ಇಲಾಖೆಗಳು ಈ ಕಟ್ಟಡದಲ್ಲಿತ್ತು, ಮಿನಿವಿಧಾನ ಸೌದ ನಿರ್ಮಾಣವಾದ ನಂತರ ಬಹುತೇಕ ಇಲಾಖೆಗಳು ಅಲ್ಲಿಗೆ ಶಿಫ್ಟ್ ಆದ ಹಿನ್ನಲೆಯಲ್ಲಿ ಹಳೇ ತಾಲೂಕು ಕಚೇರಿ ಬಹುತೇಕ ಕಾಲಿಯಾಗಿದೆ ಈಗ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ ಅನ್ಯತಿಕ ಚಟುವಟಿಕೆಗಳ ಮದ್ಯ ವ್ಯಸನಿಗಳ ತಾಣವಾಗಿದೆ ಉಳಿದಂತೆ ಟ್ರಜರಿ ಆಫಿಸ್ ಇದ್ದ ಕೊಠಡಿ ಸಾರ್ವಜನಿಕ ಮೂತ್ರಾಲಾಯವಾಗಿದೆ.
ಹಳೆ ತಾಲೂಕು ಕಚೇರಿಯಲ್ಲಿ ಇಂದಿನ ಸ್ಥಿತಿ ವೃತ್ತ ನೀರಿಕ್ಷಕರ ಹಾಗು ಠಾಣಾಧಿಕಾರಿ ಇದ್ದ ಕಚೇರಿಗಳು ಶಿಕ್ಷಣ ಇಲಾಖೆ ಪಠ್ಯ ಪುಸ್ತಕಗಳ ಗೋದಾಮು ಆಗಿದೆ, ಪೋಲಿಸ್ ಇಲಾಖೆಯ ಸುಪರ್ದಿಯಲ್ಲಿದ್ದ ಜೈಲು ಕೊಠಡಿಗಳು ಪಾಳು ಬಿದ್ದಿವೆ, ಒಂದೇರಡು ಕೊಠಡಿಗಳನ್ನು ಗೃಹರಕ್ಷಕ ದಳದ ಇಲಾಖೆ ಕಚೇರಿಯಾಗಿದೆ,ತಹಶೀಲ್ದಾರ್ ಕೊಠಡಿ ಇದ್ದ ಕೊಠಡಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಕಚೇರಿ ಇತ್ತು ಆದರೇ ಸೊರುತಿದೆ ಸೊಳ್ಳೆ ಕಾಟ ಎಂದು ನೆಪವೊಡ್ಡಿ ಖಾಸಗಿ ಕಟ್ಟಡಕ್ಕೆ ಶಿಫ್ಟ ಆಗಿರುತ್ತಾರೆ ಕಂದಾಯ ಇಲಾಖೆ ರೆಕಾರ್ಡ್ ರೂಮು ಪಾಳು ಬಿದ್ದಿದೆ, ತಾಲೂಕು ಕಚೇರಿ ಇದ್ದ ದೊಡ್ದ ಹಾಲ್ ಗ್ರಂಥಾಲಯ ಇಲಾಕೆಯವರು ಬಳಸುತ್ತಿದ್ದಾರೆ, ಅದರ ಮುಂದಿನ ಹಾಲ್ ಮೊನ್ನೆಯವರಿಗೂ ಸರ್ವೆ ಕಚೇರಿಯಾಗಿತ್ತು ಅವರಿಗೆ ಮಿನಿವಿಧಾನ ಸೌದದ ಮಹಡಿಯಲ್ಲಿ ಕೊಠಡಿ ನೀಡಿದ್ದು ಅಲ್ಲಿಗೆ ಶಿಫ್ಟ್ ಆಗಿದೆ ಆದರ ಹಿಂದಿನ ಪೂರ್ವ ಪಶ್ಚಿಮದ ಮೂಲೆಯಲ್ಲಿದ್ದ ಕೊಠಡಿಯಲ್ಲಿ ಖಜಾನೆ ಇಲಾಖೆ ಇತ್ತು ಈಗ ಆ ಕೊಠಡಿ ಅಧಿಕಾರ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಒಳಗಾಗಿ ಸಾರ್ವಜನಿಕರ ಮೂತ್ರಾಲಯವಾಗಿದೆ ಇಡಿ ತಾಲೂಕಿನ ಜನ ಕೆಲಸ ಕಾರ್ಯಗಳಿಗೆ ತಾಲೂಕು ಕಚೇರಿ ಅವರಣಕ್ಕೆ ಬರುವಂತವರು ಮೂತ್ರ ಬಾಧೆ ತೀರಿಸಿಕೊಳ್ಳಲು ಹಳೇ ತಾಲೂಕು ಕಚೇರಿಯಲ್ಲಿನ ಟ್ರಜರಿ ಆಫಿಸ್ ಗೆ ಹೋಗುತ್ತಾರೆ ಇದು ಇಷ್ಟೆ ಅಲ್ಲ ಮದ್ಯ ವ್ಯಸನಿಗಳು ಸಹ ಆವರಣ ಕಲುಷಿತ ಗೊಳಿಸಿರುತ್ತಾರೆ.
ಹಳೇ ತಾಲೂಕು ಕಚೇರಿ ಕಟ್ಟಡವನ್ನು ಪಾಳು ಬಿಟ್ಟು, ಕೆಲವೊಂದು ಇಲಾಖೆಯವರು ಖಾಸಗಿ ಕಟ್ಟದಲ್ಲಿ ಬಾಡಿಗೆ ಕಟ್ಟಿಕೊಂಡು ಇದ್ದಾರೆ ಈ ಐತಿಹಾಸಿಕ ಸರ್ಕಾರಿ ಕಟ್ಟಡಕ್ಕೆ ಒಂದು ವರ್ಷದ ಬಾಡಿಗೆಗೆ ಖರ್ಚುಮಾಡಿದಷ್ಟು ಹಣ ಖರ್ಚು ಮಾಡಿದರೆ ಕಟ್ಟಡ ಸಂರಕ್ಷಣೆ ಮಾಡಿದ ಫಲ ಅಧಿಕಾರಿಗಳಿಗೆ ಸಿಗುತ್ತದೆ ಮತ್ತು ಐತಿಹಾಸಿಕ ಕಟ್ಟಡ ಉಳಿಯುತ್ತದೆ ಹಾಗು ಸರ್ಕಾರದ ಹಣ ಪೊಲಾಗುವುದು ತಪ್ಪುತ್ತದೆ. ಇದನ್ನು ಅಧಿಕಾರಸ್ಥರು,ಆಳುವರು ಆಲೋಚಿಸಬೇಕು ಇಲ್ಲದನ್ನು ಹುಡುಕೊಕೊಂಡು ಹೋಗುವ ಬದಲು ಇರುವುದನ್ನು ಕಾಪಾಡಿಕೊಂಡರೆ ಸಾಕಯ್ಯ ಎನ್ನುತ್ತಾರೆ ಇಲ್ಲಿನ ಜನ.
ಮಾವಿನ ನಗರದಲ್ಲಿ ಸ್ಮಾರಕ ವಾಗಬೇಕಿರುವ ಕಟ್ಟಡ
ಹಳೇ ತಾಲೂಕು ಕಚೇರಿ ಕಟ್ಟಡ ಅಪರೂಪದ ತಾಂತ್ರಿಕ ವಿನ್ಯಾಸದ ಕಟ್ಟಡವಾಗಿದ್ದು ಕೋಲಾರ ಜಿಲ್ಲೆಯಲ್ಲಿ ಒಂದೇರಡು ತಾಲೂಕುಗಳಲ್ಲಿ ಹೊರತು ಪಡಿಸಿದರೆ ಬಹುಶಃ ಮತ್ತೆಲ್ಲೂ ಕಾಣಸಿಗದು ಇಂತಹ ಐತಿಹಾಸಿಕ ಕಟ್ಟಡ,ಮುಂದಿನ ಪೀಳಿಗೆಗೆ ಙ್ಞಾಪಕರ್ಥವಾಗಿ ಬಿಟ್ಟುಹೋಗಬೇಕಾದ ಕಟ್ಟಡಗಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವುದು ವಿಷಾದನೀಯ.. ಕಟ್ಟಡ ಉಳಿಸಿಕೊಂಡರೆ ಮಾವಿನ ನಗರ ಶ್ರೀನಿವಾಸಪುರಕ್ಕೆ ಹೆಗ್ಗುರುತಾಗಿ(ಐಕಾನ್) ಆಗಿ ಉಳಿಯುತ್ತದೆ.
ಇಂತಹ ಕಟ್ಟಡ ಇದೊಂದೆ ಅಲ್ಲ ಮಿಡ್ಲ್ ಸ್ಕೂಲ್ ಕಟ್ಟಡವೂ ಇದ್ದು ಅದು ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ವರದಿ:ಚ.ಶ್ರೀನಿವಾಸಮೂರ್ತಿ