ನ್ಯೂಜ್ ಡೆಸ್ಕ್: ತಿರುಮಲ ಶ್ರೀವಾರಿ ದರ್ಶನದ ಟಿಕೆಟ್ ಗಳನ್ನು ಚಿಂತಾಮಣಿಯ ಭಕ್ತರಿಗೆ ಸಾವಿರಾರು ರೂಪಾಯಿಗಳಿಗೆ ಮಾರಟಮಾಡಿದ್ದ ಆಂಧ್ರದ ದಲ್ಲಾಳಿಯೊಬ್ಬ ತಿರುಮಲ ಪೋಲಿಸರಿಗೆ ಸಿಕ್ಕಿಬಿದ್ದಿರುತ್ತಾನೆ. ಈ ಸಂಬಂದ ತಿರುಮಲ ಟೂಟೌನ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಶೇಷ ದರ್ಶನದ 3600 ಬೆಲೆಯ 12 ಟಿಕೆಟ್ ಗಳನ್ನು ಚಿಂತಾಮಣಿ ಮೂಲದ ಬೆಂಗಳೂರಿನಲ್ಲಿ ವಾಸ ಇರುವಂತ ಭಕ್ತರಿಗೆ ರೂ.38 ಸಾವಿರಕ್ಕೆ ಮಾರಾಟ ಮಾಡಿದ್ದು ಟಿಕೆಟ್ಗಳು ಸಮಯಕ್ಕೆ ಸ್ಕಾನ್ ಆಗದ ಹಿನ್ನಲೆಯಲ್ಲಿ ಭಕ್ತರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಪೋಲಿಸರು ಈ ಬಗ್ಗೆ ವಿಚಾರಿಸಲಾಗಿ ಟಿಕೆಟ್ ಮಾರಿದ್ದ ದಲ್ಲಾಳಿ, ಚಿಂತಾಮಣಿ ಮೂಲದ ಭಕ್ತರು ಶ್ರೀವಾರಿ ದರ್ಶನಕ್ಕಾಗಿ ಟಿಕೆಟ್ ಗಳನ್ನು ಪಡೆಯಲು ಸ್ನೇಹಿತರೊಬ್ಬರ ಮೂಲಕ ದಲ್ಲಾಳಿಯನ್ನು ಸಂಪರ್ಕಿಸಿದ್ದಾರೆ ಆತನಿಗೆ ಆನ್ ಲೈನ್ ಮೂಲಕ 38 ಸಾವಿರ ಹಣವನ್ನು ವರ್ಗಾಯಿಸಿರುತ್ತರೆ ನಂತರ ಅವನು ಆನ್ ಲೈನ್ ವಿಶೇಷ ದರ್ಶನದ ಸುಪಥಂ ಟಿಕೆಟ್ ಗಳನ್ನು ವ್ಯಾಟ್ಸಾಪ್ ಮೂಲಕ ಕಳಿಸಿದ್ದಾನೆ ಅದರಂತೆ ಭಕ್ತರು ತಿರುಮಲಕ್ಕೆ ಹೋಗಿ ಟಿಕೆಟ್ ನೀಡಿದ್ದು ವೈಕುಂಠಂ 1 ಕ್ಯೂ ಕಾಂಪ್ಲೆಕ್ಸ್ ನಲ್ಲಿ ಟಿಕೆಟ್ ನೀಡಿ ದರ್ಶನಕ್ಕೆ ಹೋದಾಗ ಟಿಕೆಟ್ ಗಳು ಸ್ಕಾನ್ ಆಗಲಿಲ್ಲ ನಂತರ ಅಲ್ಲಿದ್ದ ಸಿಬ್ಬಂದಿ ಹಾಗು ಪೋಲಿಸರು ಅನುಮಾನಗೊಂಡು ಟಿಕೆಟ್ ಪಡೆದುಕೊಂಡಿದ್ದ ಭಕ್ತರನ್ನು ವಿಚಾರಿಸಲಾಗಿ ಬ್ಲಾಕ್ನಲ್ಲಿ ಟಿಕೆಟ್ ಕೊಂಡ ದಂದೆ ಬಯಲಾಗಿದೆ ಕಾರ್ಯಪ್ರವೃತ್ತರಾದ ಪೋಲಿಸರು ದಲ್ಲಾಳಿ ಯಾರೆಂದು ವಿಚಾರಿಸಲಾಗಿ ಆರೋಪಿಯನ್ನು ಕಾಣಿಪಾಕಂ ನಿವಾಸಿ ಕರುಣಾಕರ್@ ಗ್ಯಾಸ್ ಕರುಣಾ ಎಂದು ಗುರುತಿಸಲಾಗಿದೆ ಕರುಣಾಕರ್ ಕಾಣಿಪಾಕಂ ದೇವಸ್ಥಾನದಲ್ಲಿ ಗ್ಯಾಸ್ ಆಪರೇಟರ್ ಆಗಿ ಔಟ್ ಸೊರ್ಸಿಂಗ್ ಉದ್ಯೋಗಿಯಾಗಿದ್ದು ಇತ ಕಾಣಿಪಾಕಂ ದೇವಾಲಯ ಪಿ.ಆರ್.ಒ ಎಂದು ಚಲಾವಣೆಯಾಗಿ ತಿರುಮಲ ಟಿಕೆಟ್ ದಂದೆಯಲ್ಲಿ ತೊಡಗಿಸಿಕೊಂಡಿರುತ್ತಾನೆ.ಈ ಹಿಂದೆಯೂ ಇತನ ಮೇಲೆ ಟಿಕೆಟ್ ದಂದೆ ಆರೋಪ ಇದೆ ಎನ್ನಲಾಗಿದ್ದು ಆರೋಪಿಯನ್ನು ತಿರುಮಲ ಟೂಟೌನ್ ಪೋಲಿಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿರುವುದಾಗಿ ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ತಿರುಮಲ ಟೂಟೌನ್ ಪೋಲಿಸ್ ಠಾಣೆಯ ವಿಜಿಲೆನ್ಸ್ ಇನ್ಸಪೇಕ್ಟರ್ ಚಂದ್ರಶೇಖರ್ vcsnewz ಗೆ ತಿಳಿಸಿರುತ್ತಾರೆ.
ತಿರುಮಲದಲ್ಲಿ ದಲ್ಲಾಳಿಗಳಿಗಳು ದರ್ಶನ ಸೇರಿದಂತೆ ಇತರೆ ಸೇವೆಗಳ ಟಿಕೆಟ್ ಗಳನ್ನು ಅಕ್ರಮವಾಗಿ ಮಾರಾಟಮಾಡುವ ದಂದೆ ಇಂದು ನೆನ್ನೆಯದಲ್ಲ ಇದು ನಿರಂತರವಾಗಿ ನಡೆಯುತ್ತಿದೆ. ಆದರೂ ದಲ್ಲಾಲರನ್ನು ನಂಬಿ ಮೋಸ ಹೋಗುವ ಭಕ್ತರ ಸಂಖ್ಯೆಯೇನು ಕಡಿಮೆಯಾಗುತ್ತಿಲ್ಲ. ತಿರುಮಲ ತಿರುಪತಿ ದೇವಾಲಯದ ಆಡಳಿತ ಮಂಡಳಿ ಭಕ್ತರ ಅನಕೂಲಕ್ಕಾಗಿ ಆನ್ ಲೈನ್ ನಲ್ಲಿ ಟಿಕೆಟ್ ನೀಡುತ್ತಾರೆ ಆದರೂ ಕೆಲವರು ದಲ್ಲಾಳಿಗಳನ್ನು ನಂಬಿ ಮೋಸ ಹೋಗುತ್ತಲೆ ಇದ್ದಾರೆ.
ಕರ್ನಾಟಕದ ಬಹುತೇಕ ವೆಂಕಟೇಶ್ವರನ ಭಕ್ತರು ತಿರುಮಲ ದರ್ಶನದ ಟಿಕೆಟ್ ಗಳನ್ನು ಪಡೆಯಲು ದಲ್ಲಾಳಿಗಳ ಆಶ್ರಯ ಪಡೆಯುವುದು ಸಾಮನ್ಯವಾಗಿಬಿಟ್ಟಿದೆ. ಬೆಂಗಳೂರಿನಲ್ಲಿ ಕುಳಿತು ದರ್ಶನಕ್ಕೆ ದಲ್ಲಾಳರನ್ನು ನಂಬಿ ಟೋಪಿ ಹಾಕಿಸಿಕೊಳ್ಳುತ್ತಾರೆ ಇದರಿಂದ ಬ್ಲಾಕ್ ಟಿಕೆಟ್ ದಂಧೆ ಮಾಡುವ ದಲ್ಲಾಳಿಗಳಿಗೆ ಹಣ ಮಾಡಲು ದಾರಿಯಾಗಿದೆ ಎನ್ನುತ್ತಾರೆ.