- ನಂಬಿಹಳ್ಳಿ ಗ್ರಾಮದಲ್ಲಿ ಹತ್ಯೆ ಘಟನೆ ನಡೆದಿದ್ದು
- ಮೃತ ರಾಧ ಆರೋಪಿ ನಾಗೇಶನ ಮೊದಲ ಪತ್ನಿ
- ಅಡ್ಡ ಬಂದ ಪತ್ನಿ ಅಕ್ಕ ಹಾಗೂ ಭಾವನಿಗೂ ಗಾಯ
- ಆರೋಪಿ ಮೇಲೆ ಹಲ್ಲೆಗೆ ಉದ್ರಿಕ್ತ ಗ್ರಾಮಸ್ಥರ ಯತ್ನ
ಶ್ರೀನಿವಾಸಪುರ:ವ್ಯಕ್ತಿಯೊಬ್ಬ ತನ್ನ ಮೊದಲ ಪತ್ನಿಯ ತಲೆಗೆ ಮಚ್ಚಿನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುತ್ತಾನೆ ಅಡ್ಡ ಬಂದ ಪತ್ನಿಯ ತಂದೆಯನ್ನು ಮಾರಾಣಾಂತಿಕವಾಗಿ ಗಾಯಗೊಳಿಸಿದ್ದು ಆತ ಸಾವು ಬದುಕಿನ ನಡುವೆ ಸೇಣಸಾಡುತ್ತಿದ್ದಾರೆ.
ದಾರುಣ ಘಟನೆ ತಾಲೂಕಿನ ನಂಬಿಹಳ್ಳಿ ಗ್ರಾಮದಲ್ಲಿ ಹಾಡು ಹಗಲೆ ನಡೆದಿದ್ದು ಮೃತ ಮಹಿಳೆಯನ್ನು ನಂಬಿಹಳ್ಳಿ ಗ್ರಾಮದ ರಾಧ(45) ಎಂದು ಮತ್ತು ತೀವ್ರವಾಗಿ ಗಾಯಗೊಂಡಂತ ಮೃತಳ ತಂದೆಯನ್ನು ಮುನಿಯಪ್ಪ ಎಂದು ಗುರುತಿಸಲಾಗಿದೆ.ಹತ್ಯೆ ಆರೋಪಿ ಮೃತಳ ಮಾಜಿ ಗಂಡನಾಗಿದ್ದು ಶ್ರೀನಿವಾಸಪುರ ಪಟ್ಟಣದ ಕಟ್ಟೆ ಕೆಳಗಿನಪಾಳ್ಯದಲ್ಲಿ ಮಾಂಸದಂಗಡಿ ಇಟ್ಟುಕೊಂಡು ಎರಡನೇ ಪತ್ನಿಯೊಂದಿಗೆ ವಾಸವಾಗಿದ್ದಾನೆ.
ಕಟುಕ ನಾಗೇಶ್ ಹಾಗು ಮೃತಳಾದ ರಾಧರ ನಡುವೆ ವೈಮನಸ್ಯ ಉಂಟಾಗಿ ಹಲವಾರು ವರ್ಷಗಳಿಂದ ಪ್ರತ್ಯಕವಾಗಿ ಇರುತ್ತಾರೆ ರಾಧ ತನ್ನ ತಂದೆ ಮುನಿಯಪ್ಪ ಹಾಗು ಎಸ್.ಎಸ್.ಎಲ್.ಸಿ ಒದುತ್ತಿರುವ ಮಗನೊಂದಿಗೆ ನಂಬಿಹಳ್ಳಿ ಗ್ರಾಮದಲ್ಲಿ ಸಣ್ಣದೊಂದು ಅಂಗಡಿ ಇಟ್ಟುಕೊಂಡು ಜೀವನ ಮಾಡುತ್ತಿದ್ದಳು,ಗಂಡನಿಂದ ದೂರವಾದ ಹಿನ್ನಲೆಯಲ್ಲಿ ಜೀವನಾಂಶ ಕೋರಿ ನ್ಯಾಯಲಯದ ಮೊರೆ ಹೊಗಿದ್ದು ಅಲ್ಲಿ ಪ್ರತಿ ತಿಂಗಳಿಗೆ 8 ಸಾವಿರ ಜೀವನಾಂಶ ನೀಡುವ ಬಗ್ಗೆ ನಿಗದಿಯಾಗಿದ್ದು ಅದರಂತೆ ಜೀವನಾಂಶ ಪಡೆಯುತ್ತಿದ್ದ ರಾಧ ಇತ್ತಿಚಿಗೆ ಕೋರ್ಟ್ ಆವರಣದಲ್ಲಿ ಆರೋಪಿ ನಾಗೇಶ ಮತ್ತು ರಾಧ ಮುಖಾಮುಕಿಯಾಗಿ ಜೀವನಾಂಶದ ವಿಚಾರದಲ್ಲಿ ಮಾತಿನ ಚಕಮುಖಿ ನಡೆದಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ,ರಾಧಳನ್ನು ತೊರೆದ ನಾಗೇಶ ಮತ್ತೊಂದು ಮದುವೆಯಾಗಿದ್ದ.
ಇಂದು ಮಂಗಳವಾರ ಮಧ್ಯಾಹ್ನ ಮೂರು ಗಂಟೆ ಸಮಯದಲ್ಲಿ ಆರೋಪಿ ನಾಗೇಶ್ ನಂಬಿಹಳ್ಳಿಗೆ ಬಂದವನೆ ಅಂಗಡಿಯಲ್ಲಿದ್ದ ರಾಧ ಮೇಲೆ ಏಕಾಏಕಿ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ ಮಚ್ಚಿನ ಏಟು ರಾಧ ತಲೆಗೆ ಬೀಳುತ್ತಿದ್ದಂತೆ, ಅಂಗಡಿ ಮುಂದೆ ಕುಸಿದು ಬಿದ್ದು ಸ್ಥಳದಲ್ಲೆ ಮೃತಪಟ್ಟಿದ್ದಾಳೆ.
ಆರೋಪಿ ಮೇಲೆ ಪೋಲಿಸ್ ಫೈರಿಂಗ್
ಹಾಡು ಹಗಲೆ ಸಾರ್ವಜನಿಕವಾಗಿ ಹತ್ಯೆ ಮಾಡಿ ಪರಾರಿಯಾಗುತ್ತಿದ್ದ ಆರೋಪಿ ನಾಗೇಶನನ್ನು ನಂಬಿಹಳ್ಳಿ ಗ್ರಾಮಸ್ಥರು ಅಟ್ಟಾಡಿಸಿ ಹಿಡಿಯಲು ಪ್ರಯತ್ನಿಸಿದಾಗ ಆರೋಪಿ ಮನೆಯೊಂದರಲ್ಲಿ ಅಡುಗಿ ಕುಳಿತಿದ್ದಾನೆ ಈ ಸಂದರ್ಭದಲ್ಲಿ ಗ್ರಾಮಸ್ಥರು ಮನೆಯ ಮೇಲೆ ದಾಳಿ ಇಟ್ಟು ನಾಗೇಶನ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದಾಗ, ಮನೆಯಲ್ಲಿದ್ದ ಗ್ಯಾಸ್ ಸಿಲೆಂಡರ್ ಸಿಡಿಸಿ ಅತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿರುತ್ತಾನೆ ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಪೋಲಿಸರು ಗ್ರಾಮಸ್ಥರನ್ನು ಹರಸಾಹಸ ಪಟ್ಟು ಸಮಾಧಾನ ಮಾಡಿ ಆರೋಪಿ ನಾಗೇಶನನ್ನು ಹಿಡಿಯಲು ಪ್ರಯತ್ನಿಸಿದಾಗ ಪೋಲಿಸರ ಮೇಲೂ ಮಚ್ಚು ಬೀಸಿ ಹಲ್ಲೆ ಮಾಡಿದ್ದು ಪೋಲಿಸರು ಗಾಯಗೊಂಡಿರುತ್ತಾರೆ ಇದರಿಂದಾಗಿ ಪೋಲಿಸರು ಕಟುಕ ನಾಗೇಶನ ಕೈ ಮತ್ತು ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿರುತ್ತಾರೆ.
ಘಟನಾ ಸ್ಥಳಕ್ಕೆ ಎಸ್.ಪಿ ನಾರಯಣ,ಮುಳಬಾಗಿಲು ಡಿ.ವೈ.ಎಸ್.ಪಿ ನಂದಕುಮಾರ್,ಇನ್ಸಪೇಕ್ಟರ್ ದಯಾನಂದ್ ಈಶ್ವರಪ್ಪ ಸೇರಿ ಹಿರಿಯ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿದ್ದರು.