ಚಿಂತಾಮಣಿ:ಚಿಂತಾಮಣಿ ನಗರದ ಅಭಿವೃದ್ಧಿ ದೃಷ್ಟಿಯಿಂದ ನಗರದ ಹೊರವಲಯದಲ್ಲಿ ಮಾಡಿಕೆರೆ ಕ್ರಾಸ್ ನಿಂದ ಚಿನ್ನಸಂದ್ರದವರಿಗೂ ನಾಲ್ಕುಪಥದ ಬೈಪಾಸ್ ರಸ್ತೆ ನಿರ್ಮಾಣ ಆಗಲಿದೆ ಚಿನ್ನಸಂದ್ರ ಕೇಂದ್ರಿಕೃತವಾಗಿ ಜಂಕ್ಷನ್ ನಿರ್ಮಾಣ ಆಗಲಿದ್ದು ಶಿಡ್ಲಘಟ್ಟ ರಸ್ತೆಯಲ್ಲಿ ಬಹುಷಃ ತಿನಕಲ್ಲು ಬಳಿವರಿಗೂ ಬೈ ಪಾಸ್ ರಸ್ತೆ ಆಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಹೇಳಿದರು ಅವರು ಚಿಂತಾಮಣಿ ನಗರದ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿ ಬೈಪಾಸ್ ರಸ್ತೆ ನಿರ್ಮಾಣ ಸಂಬಂದ ಎಲ್ಲಾ ಹಂತಗಳ ಕಾರ್ಯಗಳು ಪೂರ್ಣಗೊಂಡಿದೆ ಚಿಂತಾಮಣಿ ನಗರದಲ್ಲಿ ಹಾದುಹೋಗಿರುವ 234 ರಾಷ್ಟ್ರೀಯ ಹೆದ್ದಾರಿ ಸದ್ಯದಲ್ಲಿ ನಾಲ್ಕುಪಥ ರಸ್ತೆಯಾಗಲಿದೆ, ಗೌರಿಬಿದನೂರು ನಿಂದ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ವರಿಗೂ ನಾಲ್ಕು ಪಥ ರಸ್ತೆ ಕಾಮಗಾರಿ ಪ್ರಾರಂಭ ಆಗಲಿದೆ, ಮಾಡಿಕೆರಿ ಕ್ರಾಸ್ ನಿಂದ ಮುಳಬಾಗಿಲು ವರಿಗೂ ನಾಲ್ಕುಪಥದ ರಸ್ತೆ ನಿರ್ಮಾಣ ಆಗುತ್ತದೆ,ಹೊಸಕೊಟೆಯವರಗೆ ಹೆದ್ದಾರಿಯಲ್ಲಿನ ಈಗಿನ ವಾಹನ ದಟ್ಟಣೆಯಿಂದ ಆರುಪಥ ರಸ್ತೆಯ ಅಗತ್ಯ ಇದೆ ಎಂದರು.
ಚಿಂತಾಮಣಿ ನಗರದ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಕ್ರೀಡಾಂಗಣದಲ್ಲಿ ಸ್ವಚ್ಛತೆಯನ್ನು ಕಾಪಾಡುವಂತೆ ಹಾಗೂ ಉತ್ತಮವಾಗಿ ನಿರ್ವಹಣೆ ಮಾಡಿ ಸಾರ್ವಜನಿಕರ ಅನುಕೂಲಕ್ಕೆ ಕ್ರೀಡಾಂಗಣ ಬಳಕೆಯಾಗುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಾನು ಅಧಿಕಾರಾದಲ್ಲಿದ್ದಾಗ ಸ್ಟೇಡಿಯಂ ಅನ್ನು ಕ್ರೀಡಾ ಪಟುಗಳಿಗೆ ಬಳಸಿಕೊಳ್ಳಲು ಮತ್ತು ವಾಯುವಿಹಾರ ಮಾಡುವ ಸಾರ್ವಜನಿಕರಿಗೆ ಅನಕೂಲ ಆಗುವ ರೀತಿಯಲ್ಲಿ ಬಹಳಷ್ಟು ಶ್ರಮ ವಹಿಸಿ ಅಭಿವೃದ್ಧಿ ಮಾಡಲಾಗಿತ್ತು ಆದರೇ 10 ವರ್ಷಗಳ ಕಾಲದ ಅಂತರದಲ್ಲಿ ಸ್ಟೇಡಿಯಂ ಅಭಿವೃದ್ಧಿ ಬಹಳಷ್ಟು ಕುಂಠಿತಗೊಂಡಿದೆ ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿತ್ತು ಇದು ಬಹಳ ನೋವಿನ ಸಂಗತಿ ಎಂದ ಅವರು ರಾಜ್ಯದಲ್ಲಿಯೇ ಮಾದರಿ ಎನ್ನುವಂತೆ ಸ್ಟೇಡಿಯಂ ಅಭಿವೃದ್ಧಿ ಮಾಡಲಾಗುವುದು ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಇದೆ ಸ್ಟೇಡಿಯಂ ಮಳಿಗೆಯಲ್ಲಿನ ಬಾಡಿಗೆದಾರರು ಸುಮಾರು 1.5 ಕೋಟಿಯಷ್ಟು ಬಾಡಿಗೆ ಹಣವನ್ನು ಪಾವತಿಸಿಲ್ಲ ಈ ಕೂಡಲೆ ಬಾಡಿಗೆ ಹಣ ಪಾವತಿಸಿ ಸ್ಟೇಡಿಯಂನ ಅಭಿವೃದ್ಧಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.ಕ್ರೀಡಾ ಇಲಾಖೆಯ ವತಿಯಿಂದ ಸಿಗವ ಸವಲತುಗಳನ್ನು ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಯುವಕರಿಗೆ ಭರವಸೆ ಇತ್ತರು. ಈ ಸ೦ದರ್ಭದಲ್ಲಿ ಮುಖಂಡರಾದ ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಬುಕ್ಕನಹಳ್ಳಿ ಶಿವಣ್ಣ, ಬಾಬುರೆಡ್ಡಿ, ಕೆ.ಪಿ.ಸಿ.ಸಿ ಸದಸ್ಯ ಕುರಟಹಳ್ಳಿ ಕೃಷ್ಣಮೂರ್ತಿ,ಯುವ ಮುಖಂಡ ರಘುನಾಥಗೌಡ,ದೇವರಾಜ್, ನಗರ ಸಭೆ ಸದಸ್ಯ ಜಗದೀಶ್ ರೆಡ್ಡಿ, ಎ.ಟಿ.ಎಸ್.ಶ್ರೀನಿವಾಸ್, ಅಮರ್, ರಮೇಶ್, ಕರಾಟೆ ಗೋವಿಂದ, ಅಶೋಕ್ ಕುಮಾರ್, ರವಣಪ್ಪ, ಉಮೇಶ್, ಡಾ.ಪ್ರಸನ್ ಕುಮಾರ್ ಮುಂತಾದವರು ಇದ್ದರು.