ಯಲ್ದರೂ ಹೋಳೂರು ಕಸಬಾ ಹೋಬಳಿಗಳಲ್ಲಿ
ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಪರ ಬಹಿರಂಗ ಸಭೆ
ಅಬ್ಯರ್ಥಿ ಮಲ್ಲೇಶ್ ಬಾಬು ದಾಖಲೆ ಅಂತರದಲ್ಲಿ ಗೆಲವು
ಶ್ರೀನಿವಾಸಪುರ:ಸ್ವಾತಂತ್ರ್ಯ ಪೂರ್ವದಲ್ಲಿನ ಕಾಂಗ್ರೆಸ್ ಈಗ ಬದುಕಿಲ್ಲ ಈಗಿನ ಕಾಂಗ್ರೆಸ್ ಪಕ್ಷಕ್ಕೆ ಪ್ರಧಾನಿ ಮೋದಿ ಹೇಸರು ಹೇಳುವ ಅರ್ಹತೆ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು ಅವರು ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದ ಮುದುವಾಡಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಹೇಳಿದರು, ದೇಶದಲ್ಲಿ ಎದ್ದಿರುವ ಮೋದಿ ಅಲೆ ನೋಡಿ ಕಾಂಗ್ರೆಸ್ ಗೆ ನಡುಕ ಉಂಟಾಗಿದೆ ಕಳೆದ ಭಾರಿ ಕಾಂಗ್ರೆಸ್ ಗೆ ಮತ ಹಾಕಿದವರೆಲ್ಲಾ ಈ ಭಾರಿ ಬಿಜೆಪಿಗೆ ಮತ ಹಾಕಲು ಮುಂದಾಗಿದ್ದಾರೆ. ಕಾಂಗ್ರೆಸ್ ಅನ್ನು ಬೆಂಬಲಿಸುತ್ತಿದ್ದವರು ಇಂದು ಮೋದಿ ಪ್ರಧಾನಿ ಆಗಲಿ ಎಂದು ವೈಯುಕ್ತಿಕವಾಗಿ ಭರವಸೆ ನೀಡುತ್ತಿದ್ದು ರಾಜ್ಯದಲ್ಲಿನ ಎಲ್ಲಾ 28 ಕ್ಷೇತ್ರಗಳಲ್ಲಿ ಎನ್ ಡಿ ಎ ಮೈತ್ರಿ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದರು.
ರಾಹುಲ್ ಹೆಸರು ಹೇಳಿದರೆ ಮತ ಬರಲ್ಲ
ಕಾಂಗ್ರೆಸ್ ರಾಹುಲ್ ಗಾಂಧಿಯನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋದರೆ ಬರುವ ಮತಗಳೂ ಕಾಂಗ್ರೆಸ್ ಗೆ ಬರಲ್ಲ ಎಂಬ ಭಯ ಕಾಡುತ್ತಿದೆ.ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಲೋಕಸಭಾ ಚುನಾವಣೆಯಂಬುದನ್ನು ಪಕ್ಕಕ್ಕಿಟ್ಟು ವಿಧಾನಸಭಾ ಚುನಾವಣೆಯಂದು ಬಿಂಬಿಸಿ ಅದೇ ಗುಂಗಿನಲ್ಲಿ ಜನರ ಬಳಿ ಮತ ಕೇಳುತ್ತಿದ್ದಾರೆ,ಇಂಡಿಯಾ ಮೈತ್ರಿ ಕೂಟ ಎನ್ನುತ್ತಾರೆ ಕೇರಳದ ವೈನಾಡಿನಲ್ಲಿ ಸ್ಪರ್ದಿಸಿರುವ ರಾಹುಲ್ ಗಾಂಧಿ ವಿರುದ್ದ ಅಲ್ಲಿನ ಕಮ್ಯುನಿಸ್ಟ್ ಪಾರ್ಟಿ ಸ್ಪರ್ಧೆ ಮಾಡುತಿದ್ದು ಇಂಡಿಯಾ ಮೈತ್ರಿ ಧರ್ಮ ಏನಾಯಿತು ಮಾಧ್ಯಮಗಳ ಮುಂದೆ ಕೈ ಕೈ ಹಿಡಿದು ನಿಂತು ರಾಷ್ಟ್ರ ಮಟ್ಟದ ಸಮಾವೇಶಗಳು ಮಾಡಿವರೆಲ್ಲಾ ಎಲ್ಲಿ ಹೋದರು ಎಂದು ಲೇವಡಿ ಮಾಡಿದರು.
ನೀತಿ,ನಿಯತ್ತು,ನೇತೃತ್ವದ ಅಡಿಯಲ್ಲಿ ಚುನಾವಣೆ.
ನೀತಿ,ನಿಯತ್ತು,ನೇತೃತ್ವ ಎಂಬ ಮೂರು ವಿಷಯಗಳನ್ನು ಮುಂದಿಟ್ಟು ಬಿಜೆಪಿ ಜನರ ಬಳಿ ಮತ ಕೇಳುತ್ತಿದೆ ಕಾಂಗ್ರೆಸ್ ಗೆ ನೀತಿ, ನಿಯತ್ತು,ನೇತೃತ್ವ, ಎನ್ನುವುದು ಕಾಂಗ್ರೆಸ್ ನವರಿಗೆ ಗೊತ್ತಿಲ್ಲ ಎಂದರು.
ಮಲ್ಲೇಶ್ ಬಾಬು ದಾಖಲೆಗಳ ಅಂತರದಲ್ಲಿ ಗೆಲವು
ಕೋಲಾರ ಕ್ಷೇತ್ರದ ಮೈತ್ರಿ ಅಭ್ಯರ್ಥಿಗೆ ಎಂಟು ವಿಧಾನಸಭೆ ಕ್ಷೇತ್ರಗಳಲ್ಲೂ ಹೆಚ್ಚಿನ ಮತಗಳು ಸಿಗಲಿದೆ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ದಾಖಲೆ ಮತಗಳ ಅಂತರದಲ್ಲಿ ಗೆಲವು ಸಾಧಿಸುತ್ತಾರೆ.
ಖುರ್ಚಿಗೆ ಶಿವಕುಮಾರ್ ಟವಲ್ ಹಾಕುತ್ತಿದ್ದಾರೆ
ರಾಜ್ಯ ಸರ್ಕಾರದಲ್ಲಿ ಸಿದ್ದರಾಮಯ್ಯನವರ ಖುರ್ಚಿ ಇನ್ನೂ ಬಿದ್ದಿಲ್ಲ ಆಗಲೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನಾನೇ ಮುಖ್ಯಮಂತ್ರಿ ಎಂದು ಟವಲ್ ಹಾಕಲು ಹೋರಟಿದ್ದಾರೆ,ಇದನೆಲ್ಲಾ ನೋಡಿದರೆ ಸರ್ಕಾರದಲ್ಲಿ ವಿಶ್ವಾಸರ್ಹತೆ ಕೊರತೆ ಇದೆ ಸರ್ಕಾರದಲ್ಲಿ ಎಲ್ಲವು ಸರಿ ಇಲ್ಲ ಎಂಬುದನ್ನು ಅವರೆ ಬಹಿರಂಗ ಪಡಿಸುತ್ತಿದ್ದಾರೆ,ಹನಿಮೂನ್ ಅವದಿಯಲ್ಲೆ ಗಲಾಟೆ ಶುರುವಾದರೆ ಮಗು ಹುಟ್ಟುವುದು ಯಾವಾಗ ಸಂಸಾರ ನಡೆಸುವುದಾದರು ಹೇಗೆ ಸರ್ಕಾರದಲ್ಲಿ ಇಷ್ಟೆಲ್ಲಾ ಗೊಂದಲಗಳು ಇದ್ದಾಗ ರಾಜ್ಯ ಅಭಿವೃದ್ಧಿ ಆಗುವುದು ಯಾವಾಗ
ಸನಾತನ ಧರ್ಮ ಉಳಿಸಲು ಸ್ವಾಮಿಜಿನ ಬೇಡದ್ವಿ
ನಿರ್ಮಾಲಾನಂದ ಸ್ವಾಮೀಜಿಗಳ ಬಳಿ ನಾವು ಸನಾತನ ಧರ್ಮ ಉಳಿಸಲು ಮತ್ತು ರಾಷ್ಟ್ರ ಧರ್ಮ ಉಳಿಸಲು ಆಶೀರ್ವಾದಿಸಲು ಕೈ ಮುಗಿದು ಕೇಳಿದ್ದೇವೆ, ಅದಕ್ಕೆ ಕಾಂಗ್ರೆಸ್ ನವರಿಗೆ ಭಯ ಕಾಡುತ್ತಿರಬೇಕು ಎಂದು ಮಾರ್ಮಿಕವಾಗಿ ನುಡಿದರು.
ಸುದ್ಧಿಗೋಷ್ಠಿಯಲ್ಲಿ ಕೋಲಾರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹಾಗು ಶಾಸಕ ವೆಂಕಟಶಿವಾರೆಡ್ಡಿ,ವಿಧಾನಪರಿಷತ್ ಸದಸ್ಯ ವೈ.ಎ.ನಾರಯಣಸ್ವಾಮಿ,ಸಂಸದ ಮುನಿಸ್ವಾಮಿ,ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಇಂದಿರಾಭವನ್ ರಾಜಣ್ಣ,ಡಾ.ವೇಣುಗೋಪಾಲ್ ಮುಂತಾದವರು ಇದ್ದರು.
ಸುದ್ಧಿ ಗೋಷ್ಟಿಗೂ ಮುಂಚಿತವಾಗಿ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಯಲ್ದರೂ ಹೋಬಳಿ, ಹೋಳೂರು ಹೋಬಳಿ ಹಾಗು ಕಸಬಾ ಹೋಬಳಿ ಕೇಂದ್ರಗಳಲ್ಲಿ ಪ್ರಚಾರ ಸಭೆಗಳನ್ನು ನಿರ್ವಹಿಸಲಾಯಿತು.